Tag: ಧಾರವಾಡ

  • ಕ್ಲಿನಿಕ್‍ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ

    ಕ್ಲಿನಿಕ್‍ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ

    ಧಾರವಾಡ: ಕ್ಲಿನಿಕ್‍ನಲ್ಲಿ (Clinic) ಕೆಲಸ ಮಾಡುತ್ತಿದ್ದ ವೈದ್ಯ (Doctor) ಹಾಗೂ ನರ್ಸ್ (Nurse) ನಡುವೆ ಪ್ರೀತಿಯಾಗಿ, ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಿ ಒಂದು ಮುದ್ದಾದ ಮಗುವಾದ ನಂತರ ಜಾತಿ ನಿಂದನೆ ಹಾಗೂ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇದೀಗ ನರ್ಸ್ ಪೊಲೀಸ್ (Police) ಠಾಣೆ ಮೆಟ್ಟಿಲೇರಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ.

    ಹಲವಾಗಲು ಗ್ರಾಮದವರಾದ ಗಿರೀಶ್ ವೈದ್ಯರಾಗಿದ್ದು, ನರ್ಸ್ ತ್ರಿವೇಣಿ, ಗಿರೀಶ್ ನಡೆಸುತ್ತಿದ್ದ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಆ ಬಳಿಕ ಮನೆಯವರನ್ನು ಒಪ್ಪಿಸಿ ಇಬ್ಬರು ಮದುವೆಯಾಗಿದ್ದರು. ಇಬ್ಬರು ಕೂಡ ಕೆಲ ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದಾರೆ. ಇವರ ಸಂಸಾರ ಮಗು ಆಗೋವರೆಗೋ ಬಹಳ ಚೆನ್ನಾಗಿಯೇ ಇತ್ತು ಆದರೆ ಈಗ ಅವರ ಬಾಳಲ್ಲಿ ಜಾತಿ ಮತ್ತು ವರದಕ್ಷಿಣೆ ಎಂಬ ಭೂತ ಎಂಟ್ರಿಯಾಗಿದೆ. ಗಂಡ ಹಾಗೂ ಅವರ ಮನೆಯವರು ಕಿರುಕುಳ ನೀಡಿ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ರಾಜಾಹುಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌ – ಟೆಂಪಲ್‍ಗೆ ಬನ್ನಿ ಸರ್ ಎನ್ನುತ್ತಿರುವ ಬಿಜೆಪಿ ಶಾಸಕರು

    ಗಿರೀಶ್ ಹಾಗೂ ತ್ರಿವೇಣಿ ಅಂತರ್ಜಾತಿ ಮದುವೆಯಾಗಿದ್ರು, ಆದ್ರೆ ಈಗ ಯಾಕೋ ಇಬ್ಬರ ಜೀವನ ಸರಿಹೊಂದುತ್ತಿಲ್ಲವಂತೆ, ಹೀಗಾಗಿ ಜಾತಿ ಭೂತ ಮತ್ತು ವರದಕ್ಷಿಣೆ ಎರಡು ಎಂಟ್ರಿಯಾಗಿ ಇವರ ಬಾಳಲ್ಲಿ ಬಿರುಗಾಳಿಯೇ ಎದ್ದಿದೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿ ತ್ರಿವೇಣಿ, ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ, ಎರಡ್ಮೂರು ಬಾರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದ್ರೆ ಅಲ್ಲಿ ಕೇಸ್ ದಾಖಲಾಗದ ಕಾರಣ, ವಿಜಯನಗರ ಎಸ್‍ಪಿ ಹರಿಬಾಬು ಅವರಿಗೆ ಬಂದು ದೂರು ನೀಡಿದ್ದಾರೆ. ಕೂಡಲೇ ಹಲವಾಗಲು ಪಿಎಸ್‍ಐಗೆ ಸೂಚನೆ ನೀಡಿದ ಎಸ್‍ಪಿ ಹರಿಬಾಬು FIR ದಾಖಲಿಸಿದ್ದಾರೆ. ಇದನ್ನೂ ಓದಿ: ಒಳ್ಳೆಯ ಮೇಕಪ್ ಮಾಡಿಕೊಂಡು ಬಂದ ಪಕ್ಷಕ್ಕೆ ಜೆಡಿಎಸ್ ಬೆಂಬಲ: ಸಿಎಂ ಇಬ್ರಾಹಿಂ

    ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಗಿರೀಶ್ ಸೇರಿದಂತೆ ಕುಟುಂಬಸ್ಥರು ಸದ್ಯ ನಾಪತ್ತೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಗೆ ಶಕ್ತಿ ತುಂಬಲು ಬೆಳಗಾವಿಗೆ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಆಗಮಿಸುತ್ತಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಬಂದಿದ್ದಾಯ್ತು, ಈಗ ಅಮಿತ್ ಶಾ ಸರದಿ ಬಂದಿದ್ದು ಜ.27 ಹಾಗೂ 28ರಂದು ಎರಡು ದಿನ ಅಮಿತ್ ಶಾ ಧಾರವಾಡ, ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

    ಜ.27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ.28ರ ಬೆಳಗ್ಗೆ 10 ಗಂಟೆಗೆ ಕುಂದಗೋಳಗೆ ತೆರಳಲಿದ್ದು, ಕುಂದಗೋಳದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಬಳಿಕ ಕೆಎಲ್‍ಇ (KLE) ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರವಾಡಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ಕೇಂದ್ರದ ಉದ್ಘಾಟನೆ ಮಾಡ್ತಾರೆ. ನಂತರ ಮಧ್ಯಾಹ್ನ 3.45ಕ್ಕೆ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಗೆ ಆಗಮಿಸಲಿದ್ದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

    ಜನವರಿ 28ರಂದು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೃಹತ್ ಸಮಾವೇಶ ನಡೆಸಲಿದ್ದು ಕಿತ್ತೂರು ವಿಧಾನಸಭಾ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳ ಟಾರ್ಗೆಟ್ ಮಾಡಿ ಬಿಜೆಪಿ ಶಾಸಕ ಇರುವ ಕ್ಷೇತ್ರ ಕೇಂದ್ರವಾಗಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಬೆಳಗಾವಿ ಗ್ರಾಮೀಣದಲ್ಲಿ- ಲಕ್ಷ್ಮಿ ಹೆಬ್ಬಾಳ್ಕರ್, ಬೈಲಹೊಂಗಲದಲ್ಲಿ – ಮಹಾಂತೇಶ ಕೌಜಲಗಿ, ಖಾನಾಪುರದಲ್ಲಿ – ಅಂಜಲಿ ನಿಂಬಾಳ್ಕರ್ ಹಾಲಿ ಕೈ ಶಾಸಕರಿದ್ದಾರೆ. ಮೂರು ಕ್ಷೇತ್ರಗಳ ಸಮೀಪದಲ್ಲಿರುವ ಎಂ.ಕೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಬೃಹತ್ ಸಮಾವೇಶ ಹಮ್ಮಿಕೊಂಡು ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ.

    ಜ.28 ರಂದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದು, ಜ.28ರ ಸಂಜೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಸರಣಿ ಸಭೆಗಳನ್ನು ಆಯೋಜನೆ ಮಾಡಿದ್ದಾರೆ. ಜ.28ರ ಸಂಜೆ 6.30ರಿಂದ 7.30ರವರೆಗೆ ಸಂಘ ಪರಿವಾರದ ಹಿರಿಯರ ಜೊತೆ ಸಭೆ, ಬಳಿಕ ಸಂಜೆ 7.30 ರಿಂದ 8.30ರವರೆಗೆ ಪಕ್ಷದ ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಸಭೆ,ರಾತ್ರಿ 8.30ರಿಂದ 10ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರ ಜೊತೆ ಸಭೆ, ಜ.28ರ ರಾತ್ರಿ 10.30ಕ್ಕೆ ಬೆಳಗಾವಿಯಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

    ಧಾರವಾಡ: ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ (Kabaddi) ಆಟ ಆಡಿದ್ದೇನೆ. ಎರಡು ಬಾರಿ ಯೂನಿವರ್ಸಿಟಿ ಬ್ಲೂ ಆಗಿದ್ದೆ. ಅದರಲ್ಲಿ ಒಂದು ಬಾರಿ ಕಬಡ್ಡಿ ಆಟದಲ್ಲಿ‌ ನಾನು ಜೈಪುರಕ್ಕೆ ಹೋಗಿದ್ದಾಗ ಕೈಮುರಿದುಕೊಂಡು ಬಂದಿದ್ದೆ ಎಂದು ಪರಿಷತ್ ಸಭಾಪತಿ (Vidhan Parishad Chairman) ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

    ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕಬಡ್ಡಿ ಆಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಡಿದ್ದೇನೆ. 25 ವರ್ಷದ ನಂತರ ಇವತ್ತು ಆಡಿದ್ದು ಬಹಳ ಖುಷಿಯಾಗಿದೆ ಎಂದರು.

    ಪ್ರತಿವರ್ಷ ಶಾಸಕರ ದಿನಾಚರಣೆಯಲ್ಲಿ ನಾವು ಕಬಡ್ಡಿ ಅಡುತ್ತಿದ್ದೆವು. ಆದರೆ ಈಗ ಅದು ಬಂದ್ ಆಗಿದೆ. ಕಬಡ್ಡಿಯಲ್ಲಿ ಸಂಪೂರ್ಣವಾದ ವ್ಯಾಯಾಮ ಸಿಗುತ್ತದೆ. ಎಷ್ಟೋ ವರ್ಷದ ನೆನಪು ಇಂದು ಆಗಿದೆ. ನಾನು ಜೈಪುರಕ್ಕೆ ಹೋಗಿ ಕಬಡ್ಡಿ ಆಡಿ ಕೈ ಮುರಿದುಕೊಂಡು ಬಂದಿದ್ದೆ ಎಂದು ಹಳೆಯ ನೆನಪನ್ನು ಹಂಚಿಕೊಂಡರು. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    ನಾವು ಚಿಕ್ಕವರಿದ್ದಾಗ ಮಣ್ಣಿನಲ್ಲೇ ಅಡುತ್ತಿದ್ದೆವು. ಆದರೆ ಈಗ ಸುಧಾರಣೆಯಾಗಿದ್ದು, ಶಾಸಕರ ದಿನಾಚರಣೆ ಮಾಡುವಾಗ ರಾಮಕೃಷ್ಣ ಹೆಗಡೆ ಹಾಗೂ ಜೆ ಹೆಚ್ ಪಟೇಲ್ ಇದ್ದಾಗ ಕ್ರೀಡೆ ಇತ್ತು. ಅವಾಗ ಸಿಎಂ ತಂಡ ಹಾಗೂ ಎದುರಾಳಿ ಪ್ರತಿಪಕ್ಷದ ತಂಡದ ನಡುವೆ ಪಂದ್ಯ ಇರುತ್ತಿದ್ದವು. ಕಬಡ್ಡಿ, ರನ್ನಿಂಗ್ ಎಲ್ಲವೂ ಆಗ ಇರುತ್ತಿತ್ತು.‌ ಆದರೆ ಈಗ ರಾಜಕೀಯ ಹೊಲಸು ಆಗಿದ್ದಕ್ಕೆ ಎಲ್ಲವೂ ನಿಂತಿದೆ ಎಂದು ಹೊರಟ್ಟಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಕ್ಷಿಣ ಭಾರತದಲ್ಲಿ ಫಸ್ಟ್ – ವಿದ್ಯಾಕಾಶಿಯಲ್ಲಿ ಫಾರೆನ್ಸಿಕ್ ವಿವಿ, ಜ.28ಕ್ಕೆ ಶಂಕುಸ್ಥಾನೆ

    ದಕ್ಷಿಣ ಭಾರತದಲ್ಲಿ ಫಸ್ಟ್ – ವಿದ್ಯಾಕಾಶಿಯಲ್ಲಿ ಫಾರೆನ್ಸಿಕ್ ವಿವಿ, ಜ.28ಕ್ಕೆ ಶಂಕುಸ್ಥಾನೆ

    ಧಾರವಾಡ: ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್‍ಗೆ ಇದೇ ತಿಂಗಳ 28ರಂದು ಶಂಕು ಸ್ಥಾಪನೆ ನಡೆಯಲಿದೆ.

    ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ (Dharwad) ಮತ್ತೊಂದು ಹೆಮ್ಮೆಯ ಗರಿ ಬರಲಿದೆ. ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ. ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಈಗ ಫಾರೆನ್ಸಿಕ್ ಯುನಿವರ್ಸಿಟಿ (Forensic University) ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ.

    ಗುಜರಾತಿನಲ್ಲಿ (Gujarat) ಫಾರೆನ್ಸಿಕ್ ವಿಶ್ವವಿದ್ಯಾಲಯ ಇದೆ. ಇದರ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದ್ದು, ಅದು ಧಾರವಾಡದಲ್ಲಿ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಫಾರೆನ್ಸಿಕ್ ಕ್ಯಾಂಪಸ್‍ಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

    ಕರ್ನಾಟಕ ವಿವಿ ಕ್ಯಾಂಪಸ್‍ನಲ್ಲಿ 800 ಎಕರೆ ವಿಸ್ತಾರವಾದ ಪ್ರದೇಶದಲ್ಲಿದೆ. ಹೀಗಾಗಿ ಇದೇ ಕವಿವಿ ಕ್ಯಾಂಪಸ್ ಮಾಡಬೇಕೋ ಅಥವಾ ಕೃಷಿ ವಿವಿಯಲ್ಲಿ ಮಾಡಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆದಿವೆ. ಅಲ್ಲದೇ ಇದೇ ಜನವರಿ 28ಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ (Amit Shah) ಧಾರವಾಡಕ್ಕೆ ಆಗಮಿಸಲಿದ್ದು, ನೂತನವಾಗಿ ಆರಂಭವಾಗುತ್ತಿರುವ ಫಾರೆನ್ಸಿಕ್ ವಿವಿ ಕ್ಯಾಂಪಸ್ ಕಟ್ಟಡದ ಶಂಕುಸ್ಥಾಪನೆಯನ್ನು ಅವರಿಂದಲೇ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಈಗಾಗಲೇ ಕವಿವಿ ಕ್ಯಾಂಪಸ್‍ನಲ್ಲೇ ಹೊಸದಾಗಿ ನಿರ್ಮಾಣ ಆಗುತ್ತಿರುವ ಫಾರೆನ್ಸಿಕ್ ವಿವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನದಿಂದ ಧಾರವಾಡಕ್ಕೆ ಬಂದಿದೆ. ಸದ್ಯ ಇಡೀ ದೇಶದಲ್ಲಿ ಕೇವಲ 7 ವಿವಿಗಳಿದ್ದು, ಅದರ ಸಾಲಿಗೆ ಧಾರವಾಡ ಕೂಡ ಸೇರ್ಪಡೆ ಆಗಲಿದ್ದು, 8ನೇ ಕ್ಯಾಂಪಸ್ ಆಗಿ ಹೊರಹೊಮ್ಮಲಿದೆ.

    ಈ ಫಾರೆನ್ಸಿಕ್ ವಿವಿ ಇಲ್ಲಿ ಬರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಲಾಭ ಆಗಲಿದೆ. ಅಪರಾಧ ಜಗತ್ತಿನ ಬಗ್ಗೆ ಮಾಹಿತಿ ಕಲೆ ಹಾಕಲು ಇದು ಸಹಾಯ ಆಗಲಿದೆ. ಪುಣೆ, ತ್ರಿಪುರಾ, ಸೇರಿ 7 ಕಡೆ ಈ ಕ್ಯಾಂಪಸ್‍ಗಳಿದ್ದು, ಫಾರೆನ್ಸಿಕ್ ವಿವಿ ಧಾರವಾಡಕ್ಕೆ ಬಂದರೆ ಕ್ರೈಂ ಬೇಗ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ನಮ್ಮ ರಾಜ್ಯದ ಯುವಕರಿಗೆ ಅಪರಾಧ ಪ್ರಕರಣಗಳನ್ನು ಹೇಗೆ ಬೆನ್ನತ್ತಬೇಕು ಎಂಬ ಬಗ್ಗೆ ಅಧ್ಯಯನ ಮಾಡಲು ಸಹಾಯ ಆಗುತ್ತದೆ. ಪೊಲೀಸ್ ಇಲಾಖೆ, ಕಾನೂನು ತಜ್ಞರಿಗೆ ಕ್ಯಾಂಪಸ್ ಹೆಚ್ಚು ಸಹಕಾರಿ ಆಗಲಿದ್ದು, ನಮ್ಮ ರಾಜ್ಯದ ಮನೋವಿಜ್ಞಾನ ಶಾಸ್ತ್ರ, ಅಪರಾಧ ಶಾಸ್ತ್ರ, ಬಯೋ ಟೆಕ್ನಾಲಜಿ, ಸೈಕಾಲಜಿ ಹಾಗೂ ಭೌತಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಗೆ ಇದು ಅನಕೂಲವಾಗಲಿದೆ. ಇದನ್ನೂ ಓದಿ: ಕೋಲಾರದಲ್ಲಿ ಸ್ಪರ್ಧೆ- ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?

    ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಕ್ರೈಂಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಆಗಲಿದೆ. ಡಿಎನ್‍ಎ ಪತ್ತೆ ಹಚ್ಚಲು ವಿವಿ ಸಹಾಯ ಮಾಡಲಿದೆ ಎಂದು ಹಿರಿಯ ಡಿಎನ್‍ಎ ತಜ್ಞ ಹಾಗೂ ಕವಿವಿ ವಿಶ್ರಾಂತ ಕುಲಪತಿ ಪ್ರಮೋದ್ ಘಾಯಿ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್‌ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಹುಬ್ಬಳ್ಳಿ: ಬಡವರು, ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ʼಪಬ್ಲಿಕ್ ಟಿವಿ‌‌ʼ (Public TV) ಬೆಳಕು (Belaku) ಕಾರ್ಯಕ್ರಮ ಸಾರ್ಥಕತೆಯತ್ತ ಸಾಗುತ್ತಿದೆ. ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಬಡ ಮೆಕಾನಿಕ್ ಮರಿಗೌಡ ಮತ್ತು ಚೆನ್ನವ್ವ ದಂಪತಿಗೆ ಬೆಳಕು ಕಾರ್ಯಕ್ರಮ ಆಸರೆಯಾಗಿದೆ.

    ಹುಟ್ಟು ಅಂಗವಿಕಲರಾಗಿರುವ ಮರಿಗೌಡ ತಮ್ಮ ಗ್ರಾಮದಲ್ಲಿ ಪಂಚರ್ ಮತ್ತು ಮೆಕಾನಿಕ್ ಶಾಪ್ ನಡೆಸುತ್ತಿದ್ದರು. ಮರಿಗೌಡ ಪತ್ನಿ ಚೆನ್ನವ್ವ ಆರಂಭದಲ್ಲಿ ಆರೋಗ್ಯವಾಗಿದ್ದರು. ಆದರೆ ವಿಧಿ ನರ್ತನದಿಂದ ಚೆನ್ನವ್ವ ಸಹ ತಮ್ಮ ಕಾಲು ಕಳೆದುಕೊಂಡಿದ್ದರು. ಇದು ಈ ಕುಟುಂಬಕ್ಕೆ ಸಿಡಿಲು ಬಡಿದಂತಾಗಿ, ಆರ್ಥಿಕ ಸಂಕಷ್ಟಕ್ಕೀಡು ಮಾಡಿತ್ತು. ಇದನ್ನೂ ಓದಿ: ರಾಜ್ಯದ ನಾಲ್ಕು ದಿಕ್ಕುಗಳಿಂದ ಭಾಜಪ ರಥಯಾತ್ರೆಗೆ ತಯಾರಿ: ಬೊಮ್ಮಾಯಿ

    ಈ ಕುಟುಂಬ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡು, ತಮ್ಮ ಮೆಕಾನಿಕ್ ಶಾಪ್‌ಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಇವರ ಸಮಸ್ಯೆಗೆ ಸ್ಪಂದಿಸಿರುವ ಪಬ್ಲಿಕ್ ಟಿವಿ ಮರಿಗೌಡರ ಕುಟುಂಬಕ್ಕೆ ಸಾವಿರಾರು ರೂಪಾಯಿ ಮೌಲ್ಯ ಅತ್ಯಾಧುನಿಕ ಮೆಕಾನಿಕ್ ಸಾಮಗ್ರಿಗಳನ್ನು ನೀಡಿದೆ.

    ಪಬ್ಲಿಕ್ ಟಿವಿ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಕಾರ್ಮಿಕ ಇಲಾಖೆ ಸ್ವಪ್ರೇರಣೆಯಿಂದ ಮರಿಗೌಡ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯಕ್ಕೆ ಸಿಗುವ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ. ಇನ್ನೂ ಪಬ್ಲಿಕ್ ಟಿವಿ ಸಹಾಯದಿಂದ ಸಂತಸಗೊಂಡಿರುವ ಮರಿಗೌಡ ದಂಪತಿ ಪಬ್ಲಿಕ್ ಟಿವಿಗೆ ಮತ್ತು ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವ 2023ರ ಲೋಗೋ, ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉದ್ಘಾಟನೆಗೆ ಸಜ್ಜಾಗಿರುವ ಧಾರವಾಡದ ಐಐಟಿಯಲ್ಲಿ ಕಳ್ಳತನ – ಐವರ ಬಂಧನ

    ಉದ್ಘಾಟನೆಗೆ ಸಜ್ಜಾಗಿರುವ ಧಾರವಾಡದ ಐಐಟಿಯಲ್ಲಿ ಕಳ್ಳತನ – ಐವರ ಬಂಧನ

    ಧಾರವಾಡ: ಉದ್ಘಾಟನೆಗೆ ಸಜ್ಜಾಗಿರುವ ಧಾರವಾಡ ಐಐಟಿ (Dharwad IIT) ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನವೊಂದು ನಡೆದಿದೆ.

    ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಸಮೀಪ ಇರುವ ಐಐಟಿ ಕಟ್ಟಡದ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹುಬ್ಬಳ್ಳಿಗೆ ಬಂದಾಗಲೇ ಇದರ ಉದ್ಘಾಟನೆಯಾಗಬೇಕಿತ್ತು. ಆದರೆ, ಕೆಲ ಕಾಮಗಾರಿ ಬಾಕಿ ಇದ್ದಿದ್ದರಿಂದ ಇದರ ಉದ್ಘಾಟನೆ ಇದೀಗ ಫೆಬ್ರವರಿ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಈ ಕಟ್ಟಡದ ವಿವಿಧ ಸಾಮಗ್ರಿಗಳನ್ನು ಜ.15 ರಂದು ಕಳ್ಳರು ಕಳ್ಳತನ ಮಾಡಿದ್ದರು. ಇದನ್ನೂ ಓದಿ: ಹಿಂದಿನ ಸರ್ಕಾರದಿಂದ ನಿರ್ಲಕ್ಷ್ಯ, ನಾವು ಬಂಜಾರ ಸಮುದಾಯದವರಿಗೆ ಹಕ್ಕು ಕೊಟ್ಟಿದ್ದೇವೆ: ಮೋದಿ

    ಕಟ್ಟಡದ ಆವರಣದಲ್ಲಿಡಲಾಗಿದ್ದ ಪೈಪ್‍ಗಳು, ಕೇಬಲ್‍ಗಳು ಸೇರಿದಂತೆ ಒಟ್ಟು 2,10,405 ರೂ. ಮೌಲ್ಯದ ಕಟ್ಟಡ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಸಂಬಂಧ ಅದೇ ದಿನ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿ, ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 3 ಪತ್ನಿಯರ ಬಗ್ಗೆ ತಿಳಿದುಕೊಂಡ್ಲು ಅಂತಾ 4ನೇ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ

    ಬಂಧಿತರನ್ನು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಲ್ತಾಫ್ ಶೇಖಸನದಿ, ಮಹ್ಮದ್‍ಯಾಸೀನ್ ಖತೀಬ್, ಇಸ್ಮಾಯಿಲ್ ಗಿಡ್ನವರ ಹಾಗೂ ಹಾಶಂಪೀರ್ ಶೇಖಸನದಿ, ಇನಾಂಹೊಂಗಲದ ಇಮ್ರಾನ್ ರಸೂಲನವರ ಎಂದು ಗುರುತಿಸಲಾಗಿದೆ. ಸದ್ಯ ಈ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟವರ್ ಏರಿ ಕುಳಿತು ಬಿರಿಯಾನಿ, ಸಿಗರೇಟ್‌ಗೆ ಡಿಮ್ಯಾಂಡ್ ಮಾಡಿದ ಭೂಪ

    ಟವರ್ ಏರಿ ಕುಳಿತು ಬಿರಿಯಾನಿ, ಸಿಗರೇಟ್‌ಗೆ ಡಿಮ್ಯಾಂಡ್ ಮಾಡಿದ ಭೂಪ

    ಧಾರವಾಡ: ಬಿರಿಯಾನಿ (Biriyani), ಸಿಗರೇಟ್‌ಗೆ (Cigarette) ಬೇಡಿಕೆಯಿಟ್ಟು ಮೊಬೈಲ್ ಟವರ್ ಏರಿ ಕುಳಿತಿದ್ದ ವ್ಯಕ್ತಿಯನ್ನು ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡದವರು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

    ಈ ರೀತಿ ಟವರ್ ಏರಿ ಕುಳಿತ ವ್ಯಕ್ತಿ ಧಾರವಾಡ (Dharwad) ಮೂಲದ ಜಾವೇದ್ ಎಂದು ಗೊತ್ತಾಗಿದೆ. ಧಾರವಾಡದ ಜ್ಯುಬಿಲಿ ಸರ್ಕಲ್ ಬಳಿ ಇರುವ ಮೊಬೈಲ್ ಟವರ್‌ನ್ನು ಈತ ಏರಿ ಕುಳಿತಿದ್ದ. ಇದನ್ನೂ ಓದಿ: ದುರಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ: ಗಾಯಾಳು

    ಈತ ಪಿಕ್ ಪಾಕೆಟರ್ ಎಂದು ಗೊತ್ತಾಗಿದ್ದು, ಹಲವು ಕಡೆ ಪಿಕ್ ಪಾಕೆಟ್ ಮಾಡಿದ್ದ. ಅಲ್ಲದೇ ಈತನ ಮೇಲೆ ಅರೆಸ್ಟ್ ವಾರೆಂಟ್ ಸಹ ಇದೆ. ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ನಾನು ಟವರ್ ಬಿಟ್ಟು ಇಳಿದು ಬರುವುದಿಲ್ಲ ಎಂದು ಪಟ್ಟು ಹಿಡಿದು ಅಲ್ಲೇ ಕುಳಿತಿದ್ದ.

    ಆತನ ರಕ್ಷಣೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರೂ ಮುಂದಾಗಿದ್ದರು. ರಕ್ಷಣಾ ತಂಡದ ಇಬ್ಬರು ಸಿಬ್ಬಂದಿ ಟವರ್ ಏರಿ ಆತನಿಗೆ ನೀರು ಹಾಗೂ ಬಿರಿಯಾನಿ ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದ್ದರು. ಆದರೆ ಆ ವ್ಯಕ್ತಿ ಊಟ ಕೆಳಗೆ ಎಸೆದು ಕೇವಲ ನೀರು ಮಾತ್ರ ಕುಡಿದು ಕೆಳಗೆ ಇಳಿದು ಬರುವುದಿಲ್ಲ ಎಂದು ಹುಚ್ಚಾಟ ನಡೆಸಿದ್ದ. ಅಲ್ಲದೇ ತನಗೆ ಸಿಗರೇಟ್ ಕೊಡುವಂತೆ ಬೇಡಿಕೆಯನ್ನೂ ಇಟ್ಟಿದ್ದ. ಇದನ್ನೂ ಓದಿ: ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಸತತ ಮೂರು ಗಂಟೆಗಳ ಬಳಿಕ ರಕ್ಷಣಾ ತಂಡದ ಸಿಬ್ಬಂದಿ ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿ, ಆತನನ್ನು ಉಪನಗರ ಠಾಣೆ ಪೊಲೀಸ್ ವಶಕ್ಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತವನ್ನು ವಿಶ್ವ ನಾಯಕ ಸ್ಥಾನಕ್ಕೆ ಕೊಂಡೊಯ್ಯಲು ಕೈಜೋಡಿಸಿ: ಗೆಹ್ಲೋಟ್‌

    ಭಾರತವನ್ನು ವಿಶ್ವ ನಾಯಕ ಸ್ಥಾನಕ್ಕೆ ಕೊಂಡೊಯ್ಯಲು ಕೈಜೋಡಿಸಿ: ಗೆಹ್ಲೋಟ್‌

    ಧಾರವಾಡ: ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು (India) ನಿರ್ಮಿಸುವುದರೊಂದಿಗೆ ನಮ್ಮ ದೇಶವನ್ನು ವಿಶ್ವದ ನಾಯಕನನ್ನಾಗಿ ಮಾಡುವ ಕರ್ತವ್ಯದ ಸಮಯವಾಗಿದೆ. ಸಾರ್ವಜನಿಕರು ಈ ಕರ್ತವ್ಯದಲ್ಲಿ ಪಾಲ್ಗೊಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಕರೆ ನೀಡಿದರು.

    ಕರ್ನಾಟಕ ಶಿಕ್ಷಣ ಮಂಡಳಿಯ ಕೆ ಇ ಬೋರ್ಡ್ ಕಾಂಪೋಸಿಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಪ್ರಾಚೀನ ಕಾಲದಲ್ಲಿ, ನಮ್ಮ ದೇಶವು ವಿಶ್ವ ಗುರು ಸ್ಥಾನವನ್ನು ಹೊಂದಿತ್ತು. ಅದನ್ನು ಮರಳಿ ಪಡೆಯಲು, ನಾವು ನಮ್ಮ ಯುವ ಕೌಶಲ್ಯ, ಪ್ರತಿಭೆ ಮತ್ತು ಶಕ್ತಿಯನ್ನು ಸಂಯೋಜಿಸುವ ಮೂಲಕ ಪೂರ್ವಭಾವಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ಇದಕ್ಕಾಗಿ ಯುವಕರ ಪಾತ್ರ ಮುಖ್ಯವಾಗಿದೆ. ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಸುದೈವ ಕುಟುಂಬಕಂ” ತತ್ವಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿದೆ ಮತ್ತು “ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ತಿರುಪತಿಗೆ ಹುಂಡಿಯಿಂದಲೇ 1,450 ಕೋಟಿ ರೂ. ಸಂಗ್ರಹ

    ಪ್ರಸ್ತುತ ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಉಂಟುಮಾಡುವ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಆಧುನಿಕ ಜ್ಞಾನವನ್ನು ಸಂಯೋಜಿಸುವ ಮೂಲಕ, ಧರ್ಮ-ಸಂಸ್ಕೃತಿ, ರಾಷ್ಟ್ರದ ಏಕತೆ-ಸಮಗ್ರತೆಯನ್ನು ಕಾಪಾಡುವ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಕಾಪಾಡುವ ಇಂತಹ ಶಿಕ್ಷಣದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

    ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಅತ್ಯುತ್ತಮ ಭಾರತ, ಸ್ವಾವಲಂಬಿ ಭಾರತವನ್ನು ಮಾಡಲು ದೇಶದ ಪ್ರಧಾನ ಮಂತ್ರಿ ಬದ್ಧರಾಗಿದ್ದಾರೆ ಮತ್ತು ಈ ಬದ್ಧತೆಯನ್ನು ಪೂರೈಸಲು ಪ್ರತಿಯೊಬ್ಬರ ಕೊಡುಗೆಯನ್ನು ನಿರೀಕ್ಷಿಸಲಾಗಿದೆ. ಮಹಾನ್ ಭಾರತೀಯ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಯುವಕರ ಕೊಡುಗೆ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನ ಮಂತ್ರಿಗಳು ಗುರುವಾರ ಚಾಲನೆ ನೀಡಿದರು ಎಂದರು.

    ರಾಷ್ಟ್ರೀಯ ಯುವಜನೋತ್ಸವವು ಅಭಿವೃದ್ಧಿ ಹೊಂದಿದ ಯುವಕ, ಅಭಿವೃದ್ಧಿ ಹೊಂದಿದ ಭಾರತ ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಆಧರಿಸಿದೆ. ಈ ಹಬ್ಬದ ಉದ್ದೇಶವು ರಾಷ್ಟ್ರದ ಚೈತನ್ಯವನ್ನು ಬಲಪಡಿಸುವುದು, ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆ, ಸಹೋದರತ್ವ, ಯುವಕರಲ್ಲಿ ಶೌರ್ಯ ಮತ್ತು ಧೈರ್ಯವನ್ನು ಉತ್ತೇಜಿಸುವುದು. ಭಾರತ ಯುವಕರ ದೇಶ. ಯುವಕರು ದೇಶದ ಭವಿಷ್ಯ ಮತ್ತು ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ. ಯುವಕರು ದೇಶದ ಅಭಿವೃದ್ಧಿಗೆ ತಮ್ಮ ಸಕ್ರಿಯ ಕೊಡುಗೆಯನ್ನು ನೀಡಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

    ಕರ್ನಾಟಕ ಶಿಕ್ಷಣ ಮಂಡಳಿಯ ಸಂಸ್ಥೆಗಳು ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ “ಎಲ್ಲರನ್ನು ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ” ಎಂಬ ದೃಷ್ಟಿಕೋನದ ಕಡೆಗೆ ಕೆಲಸ ಮಾಡುತ್ತಿವೆ. ಈ ಸಂಸ್ಥೆಯು ಸ್ಥಾಪನೆಯಾದಾಗಿನಿಂದ ಮಾನವ ಸೇವೆಯನ್ನು ಅತ್ಯುನ್ನತವಾಗಿ ಪರಿಗಣಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ, ಅವರ ನಾಯಕತ್ವದ ಸಾಮರ್ಥ್ಯವನ್ನು ಜಾಗೃತಗೊಳಿಸುವ ಮತ್ತು ಪ್ರಾಯೋಗಿಕ, ಪರಿಸರ, ಸಮುದಾಯ ಸೇವೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಬ್ಬಳ್ಳಿಯಲ್ಲಿ ಮೋದಿ 9 ಕಿ.ಮೀ ರೋಡ್‌ ಶೋ – ದಾರಿಯುದ್ದಕ್ಕೂ ಹೂ ಮಳೆ

    ಹುಬ್ಬಳ್ಳಿಯಲ್ಲಿ ಮೋದಿ 9 ಕಿ.ಮೀ ರೋಡ್‌ ಶೋ – ದಾರಿಯುದ್ದಕ್ಕೂ ಹೂ ಮಳೆ

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ (Yuvajanotsava) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ್ದು ಜನರು ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (Hubballi Airport) ರೈಲ್ವೇ ಮೈದಾನಕ್ಕೆ 9 ಕಿ.ಮೀ ರೋಡ್‌ ಶೋ ನಡೆಸಿ ಆಗಮಿಸಿದರು. ಮೋದಿ ಕಾರು ಬರುತ್ತಿದ್ದಂತೆ ಬಿಸಿನನ್ನು ಲೆಕ್ಕಿಸದೇ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸಿ “ಜೈ ಮೋದಿ, ಮೋದಿ ಮೋದಿ” ಎಂದು ಘೋಷಣೆ ಕೂಗಿದರು.


    ಮೋದಿ ಅಭಿಮಾನಿಗಳು ಮೋದಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದಿದ್ದರೆ ಇನ್ನು ಕೆಲವರು ಸ್ವಾಮಿ ವಿವೇಕಾನಂದ, ರಾಮ, ಸೀತೆಯ ಭಾವ ಚಿತ್ರವನ್ನು ಹಿಡಿದು ನಿಂತಿದ್ದರು. ಇನ್ನು ಕೆಲವರು ಕೇಸರಿ ಬಟ್ಟೆಯನ್ನು ಧರಿಸಿದ್ದರು.

    ದಾರಿ ಮಧ್ಯೆ ಕಾರು ನಿಲ್ಲಿಸಿದ ಮೋದಿ ಅಭಿಮಾನಿಗಳಿಗೆ ಕೈ ಬೀಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅತ್ತೆ ಹೆಬ್ಬಾಳ್ಕರ್ ಮಾದರಿಯಲ್ಲಿ ರಾಜಕೀಯ ಶುರು ಮಾಡಿದ ಅಳಿಯ ರಜತ್ ಉಳ್ಳಾಗಡ್ಡಿಮಠ್

    ಅತ್ತೆ ಹೆಬ್ಬಾಳ್ಕರ್ ಮಾದರಿಯಲ್ಲಿ ರಾಜಕೀಯ ಶುರು ಮಾಡಿದ ಅಳಿಯ ರಜತ್ ಉಳ್ಳಾಗಡ್ಡಿಮಠ್

    ಹುಬ್ಬಳ್ಳಿ: ಅತ್ತೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾದರಿಯಲ್ಲಿ ಅಳಿಯ ರಜತ್ ಉಳ್ಳಾಗಡ್ಡಿಮಠ್ (Rajat Ullagaddimath) ಸಹ ರಾಜಕೀಯ ಶುರು ಮಾಡಿದ್ದಾರೆ. ಅತ್ತೆ ಕುಕ್ಕರ್ ಕೊಟ್ಟು ಸುದ್ದಿಯಾಗಿದ್ದರೆ ಈಗ ಅಳಿಯ ಕುಕ್ಕರ್ ಜೊತೆಗೆ ದೋಸೆ ಹಂಚು, ಅಡುಗೆ ಪಾತ್ರೆ ಜೊತೆಗೆ ಶರ್ಟ್ ಕೊಟ್ಟು ಸುದ್ದಿಯಾಗುತ್ತಿದ್ದಾರೆ.

    ಚುನಾವಣಾ ಘೋಷಣೆಗೂ ಮುನ್ನವೇ ಹುಬ್ಬಳ್ಳಿ-ಧಾರವಾಡ (Hubballi – Dharwad) ಕೇಂದ್ರ ಕ್ಷೇತ್ರದಲ್ಲಿ ಈಗ ಕುಕ್ಕರ್ ಜೊತೆಗೆ ಅಡುಗೆ ಪಾತ್ರೆ ರಾಜಕೀಯ ಜೋರಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಪ್ರಬಲ ಪೈಪೋಟಿ ನೀಡಲು ಸತತ ಪ್ರಯತ್ನ ನಡೆಸುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಪ್ತರು ಸಹ ಆಗಿರುವ ಇವರು ಈ ಬಾರಿ ಶೆಟ್ಟರ್ ಎದುರು ಚುನಾವಣೆಗೆ ನಿಲ್ಲಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಕೊಡುಗೆಗಳನ್ನು ನೀಡಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸೆಂಟ್ರಲ್ ಕ್ಷೇತ್ರದ ಎಲ್ಲಾ ಮನೆಗಳಿಗೂ ಕುಕ್ಕರ್, ದೋಸೆ ಹಂಚು, ಅಡುಗೆ ಪಾತ್ರೆಗಳು, ಶರ್ಟ್, ಕ್ಯಾಲೆಂಡರ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯ

    ಅಷ್ಟೇ ಅಲ್ಲದೆ ಕ್ಷೇತ್ರದ ಎಲ್ಲಾ ಆಟೋಗಳಿಗೆ ಟಾಪ್ ಕವರ್ ಸಹ ಕೊಡುಗೆ ನೀಡುತ್ತಿದ್ದಾರೆ. ರಜತ್ ಬೆಂಬಲಿಗರು ಈಗ ಕುಕ್ಕರ್ ಹಂಚುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಪುರಭವನದಲ್ಲಿ ಭಾರೀ ಹೈಡ್ರಾಮಾ – ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k