Tag: ಧಾರವಾಡ

  • ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಧಾರವಾಡ: ಬಿಜೆಪಿಯದ್ದು (BJP) ತ್ರಿಬಲ್‌ ಎಂಜಿನ್‌ ಸರ್ಕಾರ. ಇವರು ಕರ್ನಾಟಕ ಉಳಿಸುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಪ್ರಶ್ನಿಸಿದರು.

    ಧಾರವಾಡದಲ್ಲಿ (Dharawda) ಮಾತನಾಡಿದ ಅವರು, ಸಂವಿಧಾನದ ವ್ಯವಸ್ಥೆ ಅಮಿತ್ ಶಾ (Amit Shah) ತಿಳಿದುಕೊಂಡಿದ್ದಾರಾ ಎಂದು ನಾನು ಅವರಿಗೆ ಕೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಬಂದಾಗ ನಮ್ಮ ಸಂವಿಧಾನ ಆಗಿದೆ. ನಮ್ಮ ಸಂವಿಧಾನ‌ ವಿಶ್ವಕ್ಕೆ ಮಾದರಿ. ಸಂವಿಧಾನದಲ್ಲಿ ಯಾರು ಯಾವ‌ ವೃತ್ತಿಯನ್ನಾದರೂ ಆರಿಸಿಕೊಳ್ಳಬಹುದು. ಚುನಾವಣೆಯಲ್ಲಿ ಯಾರು ಬೇಕಾದರೂ ನಿಲ್ಲಬಹುದು. ಜನರ ಆಶೀರ್ವಾದಿಂದ ಜನಪ್ರತಿನಿಧಿ ಆಗ್ತಾರೆ‌ ಎಂದು ಬಿಜೆಪಿಯ ಕುಟುಂಬ ರಾಜಕಾರಣ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪ್ರಯೋಗಿಸಿರೋ ಅಸ್ತ್ರಕ್ಕೆ ಹೈಕಮಾಂಡ್ ಒಪ್ಪುತ್ತಾ?

    ನಾವ್ಯಾರೂ ಹಿಂಬಾಗಿಲಿನಿಂದ ಪ್ರವೇಶ ಮಾಡಿಲ್ಲ. ಹೋರಾಟದ ಮೂಲಕ ನಾವು ಬಂದಿದ್ದೇವೆ. ಜನ ಸ್ವೀಕಾರ ಮಾಡಿದಾಗಲೇ ನಾವು ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಇವರಿಂದ ಅನುಮತಿ ತಗೊಬೇಕಾ ಎಂದು ಕೇಳಿದರು.

    ಬಿಜೆಪಿಯಲ್ಲಿ ಎಷ್ಟು ಕುಟುಂಬ ರಾಜಕಾರಣ ಇಲ್ಲ ಹೇಳಿ? ಬಿಸಿಸಿಐಯಲ್ಲಿ ಅವರ ಮಗನೇ (ಅಮಿತ್‌ ಶಾ ಪುತ್ರ) ಇದ್ದಾನೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅವನಿಗೆ ಅಧಿಕಾರ ಕೊಟ್ಟಿದ್ದಾರೆ. ಅವನ ಸಾಧನೆ ಏನು? ಬಿಜೆಪಿಯಲ್ಲಿ ಎಷ್ಟು ಜನ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲ? ಹುಬ್ಬಳ್ಳಿ, ಧಾರವಾಡದಲ್ಲೇ ಎಷ್ಟು ಜನ ಇದ್ದಾರೆ ಎಂದು ಹರಿಹಾಯ್ದರು‌. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು

    ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣನಾ? ಇದು ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಸಂವಿಧಾನದ ಚೌಕಟ್ಟಿನಲ್ಲಿ ಯಾರು ಬೇಕಾದರು ಚುನಾವಣೆಗೆ ನಿಲ್ಲಬಹುದು. ತಮಗೆ ಬೇಕಾದ ವೃತ್ತಿ ಆಯ್ಕೆ ಮಾಡಿಕೊಳ್ಳಬಹುದು. ಈ ವಿಚಾರವಾಗಿ ಅಮಿತ್‌ ಶಾ ಸರ್ಟಿಫಿಕೇಟ್ ನನಗೆ ಬೇಡ. ನಾವು ಜನರ ನೋವಿಗೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಅವರಂತೆ ಅಮಾಯಕರ ಬಲಿ‌ ಕೊಟ್ಟು ರಾಜಕಾರಣ‌ ಮಾಡಲ್ಲ. ಅವರ ದುರಹಂಕಾರ ಏನಾಗಲಿದೆ‌ ನೋಡಿ ಟಾಂಗ್‌ ಕೊಟ್ಟರು. ಇದನ್ನೂ ಓದಿ:

    ಇದು ಯುಪಿ, ಬಿಹಾರ ಅಲ್ಲ. ನಮ್ಮ ರಾಜ್ಯದಲ್ಲಿ ಅವರ ಕೊಡುಗೆ ಏನು ಅಂತಾ ಹೇಳಲಿ. ಮಹದಾಯಿ ಸರಿ‌ ಮಾಡಿದ್ದಾರಾ? ಅಲ್ಲಿ ಗೋವಾದಿಂದ ತಕರಾರು ತೆಗೆಸುತ್ತಾರೆ. ಇದು ತ್ರಿಬಲ್ ಎಂಜಿನ್ ಸರ್ಕಾರ. ಇವರು ಕರ್ನಾಟಕ ಉಳಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಟ್ಟೆಯಲ್ಲಿದ್ದ ಮಗು ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ – 11.10 ಲಕ್ಷ ದಂಡ

    ಹೊಟ್ಟೆಯಲ್ಲಿದ್ದ ಮಗು ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ – 11.10 ಲಕ್ಷ ದಂಡ

    ಧಾರವಾಡ: ವೈದ್ಯೋ ನಾರಾಯಣ ಹರಿ ಎನ್ನುವ ಮಾತಿದೆ. ವೈದ್ಯರು ಎಂದರೆ ದೇವರು ಎಂದು ನಂಬಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾತಿಗೆ ಅನೇಕ ವೈದ್ಯರು (Doctor) ಅಪಚಾರವೆಸಗುವಂತಹ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬರುತ್ತಿವೆ. ಇದೀಗ ಧಾರವಾಡದ (Dharwad) ವೈದ್ಯೆಯೊಬ್ಬರು ಇಂತಹುದೇ ಕೆಲಸ ಮಾಡಿದ್ದು, ಅವರಿಗೆ ನ್ಯಾಯಾಲಯ 11.10 ಲಕ್ಷ ರೂ. ದಂಡ ವಿಧಿಸಿದೆ.

    ಧಾರವಾಡದ ಬಾವಿಕಟ್ಟಿ ಪ್ಲಾಟ್ ಬಡಾವಣೆ ನಿವಾಸಿಯಾಗಿರುವ ಪರಶುರಾಮ ಘಾಟಗೆ ಅವರು ತಮ್ಮ ಪತ್ನಿ ಪ್ರೀತಿ ಗರ್ಭವತಿಯಾದಾಗ (Pregnant), 3 ರಿಂದ 9 ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್‌ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ತೋರಿಸಿದ್ದರು. ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದರೂ ಗರ್ಭದಲ್ಲಿನ ಮಗುವಿನ (Baby) ಬೆಳವಣಿಗೆ ಚೆನ್ನಾಗಿದೆ ಎಂದು ವೈದ್ಯೆ ಹೇಳಿದ್ದರು. ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಪರಶುರಾಮ ತಮ್ಮ ಪತ್ನಿಯನ್ನು ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ಕರೆದೊಯ್ದಿದ್ದರು.

    husband forced a woman to eat human bones to get pregnant

    2019ರ ಜನವರಿ 31 ರಂದು ಪ್ರೀತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವನ್ನು ನೋಡಿದ ತಂದೆ-ತಾಯಿಗೆ ಆಘಾತ ಆಗಿತ್ತು. ಏಕೆಂದರೆ ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ (Disability) ಕೂಡಿದ್ದವು. ಇದನ್ನು ನೋಡಿದ ಪೋಷಕರಿಗೆ ದಿಕ್ಕು ಕಾಣದಂತೆ ಆಗಿತ್ತು. ಬಳಿಕ ದಂಪತಿ ವೈದ್ಯೆ ಸೌಭಾಗ್ಯ ಕುಲಕರ್ಣಿ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆದರೆ ವೈದ್ಯೆ ತಮ್ಮ ತಪ್ಪೇ ಇಲ್ಲ ಎಂದಿದ್ದರು.

    ಬಳಿಕ ಮಗುವಿನ ಪೋಷಕರು ಧಾರವಾಡ ಜಿಲ್ಲಾ ವ್ಯಾಜ್ಯಗಳ ಗ್ರಾಹಕರ ನ್ಯಾಯಾಲದ ಮೊರೆ ಹೋಗಿದ್ದರು. ಇದರಲ್ಲಿ ವೈದ್ಯರ ತಪ್ಪಾಗಿದೆ ಎಂದು ಮನಗಂಡು ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ 11.10 ಲಕ್ಷ ರೂ. ದಂಡ ವಿಧಿಸಿದೆ.

    ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್‌ನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದಾಗ ವೈದ್ಯರಿಗೆ ಎಲ್ಲಾ ವಿವರಗಳು ಗೊತ್ತಾಗುತ್ತದೆ. ಆದರೆ ಡಾ. ಸೌಭಾಗ್ಯ ಈ ಎಲ್ಲಾ ವಿಚಾರ ತಿಳಿದಿದ್ದರೂ ದಂಪತಿಗೆ ತಿಳಿಸಿರಲಿಲ್ಲ. ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಇದರಲ್ಲಿ ಕಂಡು ಬಂದಿದೆ. ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ವೈದ್ಯೆಗೆ 11.10 ಲಕ್ಷ ರೂ. ಪರಿಹಾರವನ್ನು ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ. ಈ ಪರಿಹಾರ ನೀಡದಿದ್ದಲ್ಲಿ ಮೊತ್ತದ ಮೇಲೆ ಶೇ.8 ರಷ್ಟು ಬಡ್ಡಿ ಕೊಡುವಂತೆ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ. ಇದನ್ನೂ ಓದಿ: ಆದಿಯೋಗಿ ಪ್ರತಿಮೆ ವಿವಾದ – ಪಿಐಎಲ್‌ ವಜಾ, ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

    ಈ ಬಗ್ಗೆ ವೈದ್ಯೆ ಡಾ. ಸೌಭಾಗ್ಯ ಕುಲಕರ್ಣಿ ಅವರನ್ನು ಕೇಳಿದರೆ, ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಅಪರೂಪದಲ್ಲಿ ಅಪರೂಪದ ಪ್ರಕರಣವಿದು ಎಂದು ಹೇಳಿದ್ದಾರೆ. ದಂಡದ ಮೊತ್ತದಲ್ಲಿ 8 ಲಕ್ಷ ರೂ. ಯನ್ನು ಮಗುವಿನ ಹೆಸರಿನಲ್ಲಿ, ಆಕೆ ವಯಸ್ಕಳಾಗುವವರೆಗೆ ತಂದೆ-ತಾಯಿ ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ. ಇಂತಹದ್ದೊಂದು ತೀರ್ಪು ನೀಡುವ ಮೂಲಕ ಆಯೋಗ ನಿರ್ಲಕ್ಷ್ಯ ತೋರುವ ವೈದ್ಯರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗರಗ ಜಾತ್ರೆಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವು

    ಗರಗ ಜಾತ್ರೆಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಸಾವು

    ಧಾರವಾಡ: ಜಿಲ್ಲೆಯ ಗರಗ ಜಾತ್ರೆಗೆ ಹೋಗಿದ್ದ ಯೋಧನೊಬ್ಬ (Soldier) ಟ್ರ್ಯಾಕ್ಟರ್ (Tractor) ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಧಾರವಾಡ (Dharwad) ತಾಲೂಕಿನ ಹಾರೋಬೆಳವಡಿ ಗ್ರಾಮದ ನಾಗಪ್ಪ ಉದ್ದುಮೀಶಿ (27) ಮೃತಪಟ್ಟ ಸೈನಿಕ. ರಜೆ ಮೇಲೆ ಧಾರವಾಡದ ಹಾರೋಬೆಳವಡಿಗೆ ತನ್ನ ಮನೆಗೆ ಬಂದಿದ್ದ ನಾಗಪ್ಪ ನಿನ್ನೆ (ಬುಧವಾರ) ಸ್ನೇಹಿತರೊಂದಿಗೆ ಗರಗ ಮಡಿವಾಳೇಶ್ವರ ರಥೋತ್ಸವಕ್ಕೆ ಹೋಗಿದ್ದರು. ಗರಗ ಜಾತ್ರೆ (Garaga Fair) ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಗರಗ-ಲೋಕೂರು ಗ್ರಾಮಗಳ ಮಧ್ಯೆ ಟ್ರ್ಯಾಕ್ಟರ್ ಮೇಲಿಂದ ಆಯತಪ್ಪಿ ಬಿದ್ದ ಸೈನಿಕ ನಾಗಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ: ಬಿಎಸ್‌ವೈ

    ನಾಗಪ್ಪ ಅವರದ್ದು ಇನ್ನೂ 9 ವರ್ಷ ಸೇವಾವಧಿ ಇತ್ತು. ದೇಶದ ವಿವಿಧ ಭಾಗಗಳಲ್ಲಿ ನಾಗಪ್ಪ ಅವರು ಸೇವೆ ಸಲ್ಲಿಸಿದ್ದರು. ಅಲ್ಲದೇ ಇತ್ತೀಗಷ್ಟೇ ನಾಗಪ್ಪ ಒಂದು ಮಗುವಿನ ತಂದೆ ಕೂಡ ಆಗಿದ್ದರು. ಈ ಸೈನಿಕನ ಸಾವಿನಿಂದಾಗಿ ಹಾರೋಬೆಳವಡಿ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ. ಇದನ್ನೂ ಓದಿ: ಹೆಚ್‌ಡಿಕೆ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನ ಒಡೆಯುತ್ತಿದ್ದಾರೆ : ಸಿಪಿವೈ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರು, ಟ್ಯಾಂಕರ್ ನಡುವೆ ಭೀಕರ ಅಪಘಾತ – ಪ್ರವಾಸಕ್ಕೆ ತೆರಳುತ್ತಿದ್ದ ಮೂವರು ಮಸಣಕ್ಕೆ

    ಕಾರು, ಟ್ಯಾಂಕರ್ ನಡುವೆ ಭೀಕರ ಅಪಘಾತ – ಪ್ರವಾಸಕ್ಕೆ ತೆರಳುತ್ತಿದ್ದ ಮೂವರು ಮಸಣಕ್ಕೆ

    ಹುಬ್ಬಳ್ಳಿ: ಕಾರು (Car) ಮತ್ತು ಟ್ಯಾಂಕರ್ (Tanker) ನಡುವೆ ಭೀಕರ ಅಪಘಾತ (Accident) ಸಂಭವಿಸಿದ ಪರಿಣಾಮ ಪ್ರವಾಸಕ್ಕೆ ತೆರಳುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಕಲಘಟಗಿ (Kalaghatgi) ತಾಲೂಕಿನ ಸಂಗಟಿಕೊಪ್ಪ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಪ್ರವಾಸಕ್ಕೆ ಹೊರಟಿದ್ದ ಮೊಹಮ್ಮದ್ ಇಶಾನ್, ಮೊಹಮ್ಮದ್ ಸೈಫ್ ಹಾಗೂ ಇಸ್ಮಾಯಿಲ್ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ಹುಬ್ಬಳ್ಳಿ ನಿವಾಸಿಗಳೆಂದು ಗುರುತಿಸಲಾಗಿದೆ.

    ಒಟ್ಟು 6 ಯುವಕರು ಹುಬ್ಬಳ್ಳಿಯಿಂದ ತಮ್ಮ ಕಾರಿನಲ್ಲಿ ಕಾರವಾರದ ಕಡೆ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಸಂಗಟಿಕೊಪ್ಪದಲ್ಲಿ ಟ್ಯಾಂಕರ್ ಹಾಗೂ ಕಾರಿನ ನಡುವೆ ಅಪಘಾತ ಉಂಟಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್‌ನಲ್ಲಿ ಕೊನೆಯುಸಿರೆಳೆದ್ದಾನೆ. ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಘಟನೆ – ಮೃತದೇಹವನ್ನು ಹಲವು ಕಿ.ಮೀ ಎಳೆದೊಯ್ದ ಕಾರು

    ಯುವಕರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಕೂಡಾ ಅಪ್ಲೋಡ್ ಮಾಡಿದ್ದರು. ಘಟನೆ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 13ರ ಬಾಲಕಿಗೆ 114 ಬಾರಿ ಇರಿದು ಕೊಂದ ಸಹಪಾಠಿ ತಪ್ಪೊಪ್ಪಿಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಗ್ನವಾಗಿ ವಿದ್ಯಾರ್ಥಿ ನೇಣಿಗೆ ಶರಣು

    ನಗ್ನವಾಗಿ ವಿದ್ಯಾರ್ಥಿ ನೇಣಿಗೆ ಶರಣು

    ಧಾರವಾಡ: ಧಾರವಾಡ (Dharwad) ಕೃಷಿ‌ ವಿವಿ ವಿದ್ಯಾರ್ಥಿಯೋರ್ವ ನಗ್ನವಾಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.‌

    ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿ (Student) ರೋಹಿತ್ ಸಿ.ಪಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ (ಭಾನುವಾರ) ಮಧ್ಯಾಹ್ನ ಹಾಸ್ಟೆಲ್ ಮೆಸ್‌ನಲ್ಲಿ ಊಟ‌ ಮಾಡಿದ ಈ‌ತ, ನಂತರ ಹಾಸ್ಟೆಲ್ (Hostel) ರೂಂಗೆ ಹೋಗಿದ್ದಾನೆ.‌ ಅದರ ನಂತರ ಆತನ ಗೆಳೆಯರು ಹಾಗೂ ಕುಟುಂಬದವರಯ ಎಷ್ಟೇ ಮೊಬೈಲ್ ಕರೆ‌ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ.‌ ಈ ಹಿನ್ನೆಲೆಯಲ್ಲಿ ಕಿಟಕಿಯಿಂದ ಓರ್ವ‌ ವಿದ್ಯಾರ್ಥಿ ನೋಡಿದಾಗ ರೋಹಿತ್ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡ‌ ವಿಷಯ ಗೊತ್ತಾಗಿದೆ.

    ‌ತಕ್ಷಣ ಹಾಸ್ಟೆಲ್ ವಾರ್ಡನ್ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಪೊಲೀಸರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ವಿದ್ಯಾರ್ಥಿ ಪೋಷಕರು ತಡ ರಾತ್ರಿ ವಿಜಯನಗರ (Vijayanagar) ಜಿಲ್ಲೆಯ ಕೊಟ್ಟೂರಿನಿಂದ ಧಾರವಾಡಕ್ಕೆ ಆಗಮಿಸಿದ ನಂತರ ಶವ ಕೆಳಗೆ‌ ಇಳಿಸಿ ಆಸ್ಪತ್ರೆಗೆ ಕಳಿಸಲಾಯಿತು. ಆದರೆ ನಗ್ನವಾಗಿ ಈ‌ ವಿದ್ಯಾರ್ಥಿ ಏಕೆ ನೇಣು ಹಾಕಿಕೊಂಡ‌ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಯ ಮೊಬೈಲ್ ಕೂಡ ವಶಕ್ಕೆ ಪಡದಿದ್ದಾರೆ. ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಮಾಡೋದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ: ನಿಖಿಲ್

    ಸದ್ಯ ಉಪನಗರ ಠಾಣೆಯಲ್ಲಿ ರೋಹಿತ್‌ ಪೋಷಕರು ಕೂಡಾ ದೂರು‌ ನೀಡಿದ ಮೇಲೆ ಪ್ರಕರಣ ದಾಖಲಾಗಲಿದ್ದು,‌ ವಿದ್ಯಾರ್ಥಿ ಶವ ಪೋಷಕರು ತಮ್ಮ ಊರಿಗೆ ತೆಗೆದುಕೊಂಡು‌‌ ಹೋಗಲಿದ್ದಾರೆ. ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಮಾಡೋದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ: ನಿಖಿಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧಾರವಾಡದ ಕಸೂತಿ ಕಲೆಯಿರುವ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

    ಧಾರವಾಡದ ಕಸೂತಿ ಕಲೆಯಿರುವ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

    ಧಾರವಾಡ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಬುಧವಾರ) ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಧಾರವಾಡದ ಕಸೂತಿ ಕಲೆಯಿರುವ ಸೀರೆಯನ್ನುಟ್ಟು (Budget) ಅವರು ಬಜೆಟ್ (Union Budget 2023) ಮಂಡನೆ ಮಾಡಿದ್ದು ವಿಶೇಷವಾಗಿತ್ತು.

    ಧಾರವಾಡ (Dharwad) ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್ ದೇಶದ ಗಮನ ಸೆಳೆದಿದ್ದಾರೆ. ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು. ಧಾರವಾಡ ನಗರದ ನಾರಾಯಣಪುರದಲ್ಲಿರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್‌ನ ಮಹಿಳಾಮಣಿಗಳು ಎನ್ನುವುದು ಇನ್ನೂ ವಿಶೇಷವಾಗಿದೆ. ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ್ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯಾರಿಗೆ ಸೂಚಿಸಿದ್ದರು.

    ಆರತಿ ಕ್ರಾಪ್ಟ್ ಮಾಲೀಕರಾದ ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಆರತಿ ಅವರು, ಸುಮಾರು 210 ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ. ಇದನ್ನೂ ಓದಿ: ಎಲ್ಲವನ್ನೂ ಕೊಟ್ಟಿರುವ ಬಿಜೆಪಿ ಬಿಡುವ ಮಾತೇ ಇಲ್ಲ – ಸಚಿವ ನಾರಾಯಣಗೌಡ ಸ್ಪಷ್ಟನೆ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬೇಡಿಕೆಯಂತೆ ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಇಂದು (ಬುಧವಾರ) ಅವರು ತೊಟ್ಟಿರುವ ಕೆಂಪು ಬಣ್ಣದ ಸೀರೆಯೂ ಸೇರಿದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್‌ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದೂವರೆ ಮೀ. ಉದ್ದದ ಇಳಕಲ್‌ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.

    ಇತ್ತೀಚೆಗೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆದ ಯುವಜನೋತ್ಸವದ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದೇ ಕಸೂತಿ ಕೇಂದ್ರದಿಂದ ರೇಷ್ಮೆ ಶಲ್ಯ ಹೊದಿಸಲಾಗಿತ್ತು.

    ಈ ಬಗ್ಗೆ ಮಾತನಾಡಿದ ಆರತಿ ಹಿರೇಮಠ ಅವರು, ತಾವೂ ಕಸೂತಿ ಸೀರೆಯುಟ್ಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಎಂದಿದ್ದಾರೆ. ಈ ಸೀರೆಯ ಬೆಲೆ 26 ಸಾವಿರ ರೂ. ಇದ್ದು, ಇದನ್ನು ಕಸೂತಿ ಮಾಡಲು ಒಂದು ತಿಂಗಳು ಬೇಕು. ಆದರೆ ನಿರ್ಮಲಾ ಸೀತಾರಾಮನ್‌ ಅವರು ಇದನ್ನು ಆರ್ಡರ್ ಮಾಡಿದ್ದಕ್ಕೆ 10 ದಿನಗಳಲ್ಲಿ ತಯಾರಿ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಈ ಬಜೆಟ್‌ ಬಡವರು, ರೈತರು, ಮಧ್ಯಮ ವರ್ಗದ ಕನಸು ಮಾಡಲಿದೆ: ಮೋದಿ ಮೆಚ್ಚುಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುತ್ತೈದೆಯರೂ 5 ಸಾವಿರ ಕೊಟ್ರೆ ಮತ ಹಾಕ್ತೀವಿ ಅಂತಾರೆ – ಹೆಚ್. ವಿಶ್ವನಾಥ್ ಬೇಸರ

    ಮುತ್ತೈದೆಯರೂ 5 ಸಾವಿರ ಕೊಟ್ರೆ ಮತ ಹಾಕ್ತೀವಿ ಅಂತಾರೆ – ಹೆಚ್. ವಿಶ್ವನಾಥ್ ಬೇಸರ

    ಧಾರವಾಡ: ಹಿಂದೆ ಚುನಾವಣೆಯಲ್ಲಿ (Election) ಮುತ್ತೈದೆಯರು ಬೆಳಿಗ್ಗೆ ಬಂದು ಮೊದಲು ಮತ ಹಾಕುತ್ತಿದ್ದರು. ಆದರೀಗ ಆ ಸಂಸ್ಕೃತಿಯನ್ನು ಕಳೆದುಕೊಂಡಿದ್ದೇವೆ. 5 ಸಾವಿರ ಕೊಟ್ಟರೆ ಮತ (Vote) ಹಾಕ್ತೇವೆ ಅನ್ನುವಂತ ಕೆಟ್ಟ ಸ್ಥಿತಿ ಸೃಷ್ಟಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಬೇಸರ ವ್ಯಕ್ತಪಡಿಸಿದ್ದಾರೆ.

    ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದ್ವಿ, ಆದ್ರೆ ಇವರೆಲ್ಲಾ ಎಡವಟ್ಟು ಗಿರಾಕಿಗಳು: ವಿಶ್ವನಾಥ್

    ಧಾರವಾಡದ (Dharwad) ಬೇಂದ್ರೆ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅವನು ಯಾವನೋ 6 ಸಾವಿರ ಕೊಟ್ಟು ಮತ ಹಾಕಿಸಿಕೊಳ್ತೇವೆ ಅಂದಿದ್ದಾನೆ. ಇನ್ನೊಬ್ಬ ಟಿಕೆಟ್‌ಗೆ (Election Ticket) 20 ಕೋಟಿ ಕೊಡ್ತೀನಿ ಅಂತಾನೆ. ನಾವೇ ಜನರನ್ನ ಭ್ರಷ್ಟರನ್ನಾಗಿ ಮಾಡ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ – ಮೋದಿ ಸಂತಾಪ

    ಚುನಾವಣೆಗೆ (Election) ಬೆಲೆ ಇಲ್ಲದಂತಾಗಿದೆ. ಈಗ ರಾಜಕೀಯಕ್ಕೆ (Politics) ರಿಯಲ್ ಎಸ್ಟೇಟ್‌ನವರೂ ಬಂದಿದ್ದಾರೆ. ಇವತ್ತಿನ ವ್ಯವಸ್ಥೆ ನೋಡಿದ್ರೆ ಎಲ್ಲಿ ನಿಂತಿದ್ದೇವೆ ಅಂತಾ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು

    ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದ್ವಿ, ಆದ್ರೆ ಇವರೆಲ್ಲಾ ಎಡವಟ್ಟು ಗಿರಾಕಿಗಳು: ವಿಶ್ವನಾಥ್

    ದಿ. ಡಿ.ಕೆ ನಾಯ್ಕರ್ ನಮ್ಮನ್ನು ಬಹಳ ಪ್ರೀತಿಯಿಂದ ಬೆಳಸಿದವರು. ಆಗ ಜಾತಿ, ದುಡ್ಡು ಏನೂ ಗೊತ್ತಿರಲಿಲ್ಲ. ಈಗ ನಾವು ಯಾರ ಹತ್ತಿರ ಹೇಳಿಕೊಳ್ಳೋಣ? ರಾಜಕಾರಣಿ ಹಾಗೂ ಮತದಾರ ಇಬ್ಬರೂ ಭ್ರಷ್ಟರಾಗಿದ್ದಾರೆ. ನಾನು ಈ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲಲ್ಲ ಎಂದು ಭಾವುಕರಾದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದಂತೆಯೇ ದೇಶದ ಎಲ್ಲ ಕಡೆ ಫಾರೆನ್ಸಿಕ್ ಕ್ಯಾಂಪಸ್ ಆಗಲಿವೆ: ಅಮಿತ್ ಶಾ

    ಕರ್ನಾಟಕದಂತೆಯೇ ದೇಶದ ಎಲ್ಲ ಕಡೆ ಫಾರೆನ್ಸಿಕ್ ಕ್ಯಾಂಪಸ್ ಆಗಲಿವೆ: ಅಮಿತ್ ಶಾ

    ಧಾರವಾಡ: ಅಪರಾಧಿಗಳು ಈಗ ಎಲ್ಲರಿಗಿಂತ ಮುಂದೆ ಇದ್ದಾರೆ. ಅಪರಾಧಿಗಳ ತನಿಖೆ ಹಾಗೂ ಪತ್ತೆಗೆ ಫಾರೆನ್ಸಿಕ್ ಕ್ಯಾಂಪಸ್‌ಗಳು ಸದ್ಯದ ಅವಶ್ಯಕತೆಯಾಗಿವೆ. ದೇಶದಲ್ಲಿ ಕ್ರೈಂಗಳಿಗೆ ಕಡಿವಾಣ ಹಾಕಲು ಕರ್ನಾಟಕದಂತೆಯೇ ದೇಶದ ಎಲ್ಲ ಕಡೆ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.

    ಧಾರವಾಡದಲ್ಲಿ (Dharwad) ಫಾರೆನ್ಸಿಕ್ ಕ್ಯಾಂಪಸ್ (Forensic University Centre) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಇದೊಂದು ಯುನಿಕ್ ವಿಶ್ವವಿದ್ಯಾಲಯ. ಇದರ ಲಾಭ ಎಲ್ಲರಿಗೂ ಆಗಲಿದೆ. ದೇಶದಲ್ಲಿ ನಕಲಿ ನೋಟು, ಹವಾಲಾ ಹಣ ದಂಧೆ ಹಾಗೂ ಮಹಿಳಾ ದೌರ್ಜನ್ಯಗಳು ನಡೆಯುತ್ತಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣ ಆಗಲೇಬೇಕಿವೆ ಎಂದರು.

    ಈಗ ಹೊಡೆದು ಬಾಯಿ ಬಿಡಿಸುವ ಕಾಲ ಹೋಗಿದೆ. ಫಾರೆನ್ಸಿಕ್ ವಿಭಾಗದಲ್ಲಿ ಅಮೆರಿಕ ಶೇ. 90ರಷ್ಟು ಹಾಗೂ ಇಸ್ರೇಲ್ ಶೇ. 60ರಷ್ಟು ಮುಂದೆ ಇವೆ. ನಾವು ಶೇ.50 ರಷ್ಟು ಪ್ರಗತಿ ಸಾಧಿಸಿದ್ದೇವೆ. ನಮ್ಮಲ್ಲೂ ಫಾರೆನ್ಸಿಕ್ ಅನಿವಾರ್ಯ ಮಾಡಬೇಕಿದೆ. ಇದರಿಂದಾಗಿ ದೇಶದ ಎಲ್ಲ ಕಡೆ 10 ಸಾವಿರ ಪರಿಣಿತರು ಸಿಗುತ್ತಾರೆ ಎಂದ ಶಾ, ಆರೋಪಿಗಳನ್ನು ಅಪರಾಧಿಗಳನ್ನಾಗಿ ಪತ್ತೆ ಮಾಡುವುದಕ್ಕಾಗಿ ಐಪಿಸಿ ಹಾಗೂ ಸಿಆರ್‌ಪಿಸಿ ಆ್ಯಕ್ಟ್‌ನಲ್ಲಿ ನಾವು ಬದಲಾವಣೆ ಮಾಡಲು ಹೊರಟಿದ್ದೇವೆ. ಇದರ ಜೊತೆಗೆ ಪುಣೆ, ಭೋಪಾಲ್ ಹಾಗೂ ಕೋಲ್ಕತ್ತಾದಲ್ಲಿರುವ ಫಾರೆನ್ಸಿಕ್ ಕ್ಯಾಂಪಸ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆದಿದೆ. ಧಾರವಾಡದಲ್ಲಿ ಈ ಕ್ಯಾಂಪಸ್ ತರಲು ಜೋಶಿ (Pralhad Joshi) ನನಗೆ ಬೆನ್ನು ಬಿದ್ದಿದ್ದರು. ಒಂದೇ ದಿನದಲ್ಲಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಈ ಕ್ಯಾಂಪಸ್‌ಗೆ 50 ಎಕರೆ ಜಾಗ ಕೊಟ್ಟರು. ಹೀಗಾಗಿ 9ನೇ ಕ್ಯಾಂಪಸ್ ಆಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿಗೆ ಭಯ ಹುಟ್ಟಿದೆ, ಹೀಗಾಗಿ ರಾಜ್ಯಕ್ಕೆ ಮೋದಿ-ಶಾರನ್ನು ಕರೆಸುತ್ತಿದ್ದಾರೆ : ಸಿದ್ದರಾಮಯ್ಯ

    ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಕೊಡಲು ಸಿಎಂ ಅವರಿಗೆ ಹೇಳಿದ್ದೇನೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲ ಆಗಲಿದೆ. ಇದರಲ್ಲಿ ಡಿಎನ್‌ಎ, ಕೃಷಿ ಸೇರಿ ಹಲವು ವಿಷಯಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ರೆ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ, 5 ಸೀಟು ಗೆದ್ದು ತೋರಿಸಲಿ: HDK ಸವಾಲ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮಿತ್ ಶಾ ಆಧುನಿಕ ವಲ್ಲಭಭಾಯಿ ಪಟೇಲ್: ಬೊಮ್ಮಾಯಿ

    ಅಮಿತ್ ಶಾ ಆಧುನಿಕ ವಲ್ಲಭಭಾಯಿ ಪಟೇಲ್: ಬೊಮ್ಮಾಯಿ

    ಧಾರವಾಡ: ದೇಶದ ಗೃಹ ಸಚಿವ ಅಮಿತ್ ಶಾ (Amit Shah) ಅವರು ಆಧುನಿಕ ಭಾರತದ ವಲ್ಲಭಭಾಯಿ ಪಟೇಲ್ (Vallabhbhai Patel) ಇದ್ದಂತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಡಿ ಹೊಗಳಿದ್ದಾರೆ.

    ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ ಫಾರೆನ್ಸಿಕ್ ಕ್ಯಾಂಪಸ್ (Forensic University) ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕತೆ ಬೆಳೆದಂತೆಲ್ಲ ಅಪರಾಧ ಜಗತ್ತು ಕೂಡ ಬೆಳೆಯುತ್ತಿದೆ. ಹೀಗಾಗಿ ಫಾರೆನ್ಸಿಕ್ ಕ್ಯಾಂಪಸ್ ಬಹಳ ಅವಶ್ಯಕತೆ ಇದೆ. ಈ ಹಿಂದೆ ಸೈಬರ್ ಕ್ರೈಂ (Cyber Crime) ಇರಲಿಲ್ಲ. ಈಗ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಅದಕ್ಕೆ ಕಾನೂನು ಕೂಡ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ನಾವು ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದಿಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ಸದ್ಯ ನಾವು ಕಾನೂನು ಮತ್ತು ಟೆಕ್ನಾಲಜಿಯಲ್ಲಿ ಮುಂದಿದ್ದೇವೆ. ಎಫ್‍ಎಸ್‍ಎಲ್ ವರದಿ ಬರುವುದು ತಡವಾಗುತ್ತದೆ. ಹೀಗಾಗಿ ನಾನು ರಾಜ್ಯದ ಗೃಹ ಸಚಿವನಿದ್ದಾಗ 2 ರಿಜಿನಲ್ ಸೆಂಟರ್‌ಗಳನ್ನು ತೆರೆದಿದ್ದೆ. ಕ್ರೈಂ ಆದಾಗ ವಿಶೇಷ ಅಧಿಕಾರಿಗಳು ಹೋಗಬೇಕು. ಇದು ವಿದೇಶದಲ್ಲಿ ಮಾತ್ರ ಜಾರಿಯಲ್ಲಿದೆ. ಈಗ ನಮ್ಮ ರಾಜ್ಯದಲ್ಲೂ ಈ ಪದ್ಧತಿ ಬಂದಿದೆ. ಫಾರೆನ್ಸಿಕ್ ಕ್ಯಾಂಪಸ್ ಧಾರವಾಡಕ್ಕೆ ಬಂದಿದ್ದು ಬಹಳ ಸಂತಸದ ಸಂಗತಿ. ಇದು ಧಾರವಾಡಕ್ಕೆ ಬರಲು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ (Pralhad Joshi) ಪಾತ್ರ ಬಹಳ ಮುಖ್ಯವಾದದ್ದು. ಇದರ ಸೇವೆ ಕೇವಲ ಧಾರವಾಡ ಅಷ್ಟೇ ಅಲ್ಲ ರಾಜ್ಯದ ಉದ್ದಗಲಕ್ಕೂ ಹರಡಲಿದೆ ಎಂದರು. ಕ್ರೈಂ ಪತ್ತೆ ಮಾಡುವಲ್ಲಿ ನಮ್ಮ ರಾಜ್ಯದ ಪೊಲೀಸರು ಮುಂದೆ ಇದ್ದಾರೆ. ಧಾರವಾಡ ವಿದ್ಯಾಕಾಶಿ. ಇಲ್ಲಿ ಕೃಷಿ ವಿವಿ, ಕವಿವಿ (KVV), ಐಐಟಿ (IIT), ಐಐಐಟಿ (IIIT) ಇದೆ. ಇದೀಗ ಫಾರೆನ್ಸಿಕ್ ಕ್ಯಾಂಪಸ್ ಬಂದು ಧಾರವಾಡದ ಹಿರಿಮೆ ಹೆಚ್ಚಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ವಿದ್ಯಾರ್ಥಿಗಳಿಗೆ ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್‌ ಜೋಶಿ

    ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿದ್ಯಾರ್ಥಿಗಳ ನಡುವೆ ಕುಳಿತು ವೀಕ್ಷಿಸಿದರು. ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ (Narendra Modi) ಅವರ ಚರ್ಚೆ ಬಳಿಕ ಹುಬ್ಬಳ್ಳಿಯಲ್ಲಿ ಜೋಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.‌

    ಮೋದಿಯವರ ಆಶಯದಂತೆ, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡದೇ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉತ್ತಮ ತಯಾರಿ ಹಾಗೂ ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಎದುರಿಸಬಹುದು ಎಂಬ ಸ್ಪೂರ್ತಿದಾಯಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಿದರು.

    ಕಾರ್ಯಕ್ರಮದ ನಂತರ ಸವಾಯೀ ಗಂಧರ್ವ ಸಭಾಭವನದಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ, ಮೋದಿ ಅವರು ಬರೆದ ಎಕ್ಸಾಮ್ ವಾರಿಯರ್ಸ್ (Exam Warriors) ಪುಸ್ತಕವನ್ನು ಜೋಶಿ ವಿತರಿಸಿದರು. ಭಾರತದ ಭವಿಷ್ಯವಾದ ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅನುಭವ ತುಂಬಾ ಆನಂದ ನೀಡಿತು. ಈ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.  ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ

    ಸುಮಾರು ಐದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆ ಮಾಡಿದರು. ಜೋಶಿಯವರು ವಿದ್ಯಾರ್ಥಿಗಳ ಜೊತೆ ಕುಳಿತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸುವಾಗ ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k