Tag: ಧಾರವಾಡ

  • ಬೀದಿ ಬದಿ ಹೋಟೆಲ್‌ಗೆ ದಿಢೀರ್ ಭೇಟಿ – ಚಹಾ ಸವಿದ ಪ್ರಿಯಾಂಕಾ ಗಾಂಧಿ

    ಬೀದಿ ಬದಿ ಹೋಟೆಲ್‌ಗೆ ದಿಢೀರ್ ಭೇಟಿ – ಚಹಾ ಸವಿದ ಪ್ರಿಯಾಂಕಾ ಗಾಂಧಿ

    ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಕಾರ್ಯಕ್ರಮದ ವೇದಿಕೆಗೆ ತೆರಳುವ ಮುನ್ನ ನವಲಗುಂದ ಹಳೆ ತಹಶೀಲ್ದಾರ ಕಚೇರಿಯ ಬಳಿಯಿರುವ ರಸ್ತೆ ಮೇಲಿನ ತಗಡಿನ ಶೆಡ್ಡಿನಲ್ಲಿರುವ ಹೋಟೆಲ್‌ಗೆ ದಿಢೀರ್‌ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದರು.

    ಹೊಟೇಲ್ ಒಳಗೆ ಪ್ರವೇಶಿಸುತ್ತಿದ್ದಂತೆ ಆಶ್ಚರ್ಯಚಕಿತರಾದ ಹೋಟೆಲ್‌ ಒಡತಿ ಬಾಲನಾಗಮ್ಮ ರಂಗಸ್ವಾಮಿ, ಪ್ರಿಯಾಂಕಾ ಗಾಂಧಿ ಅವರನ್ನು ಸಂತೋಷದಿಂದ ಬರ ಮಾಡಿಕೊಂಡರು. ಹೋಟೆಲ್‌ (Hotel) ಪ್ರವೇಶಿಸಿದ ಭದ್ರತಾ ಸಿಬ್ಬಂದಿ ಹೋಟೆಲ್‌ ಮಾಲೀಕರು ಹಾಗೂ ಅವರ ಮಕ್ಕಳ ಮೊಬೈಲ್ ತೆಗೆದಿಡುವಂತೆ ಸೂಚಿಸಿ ಯಾರೂ ಒಳ ಹೋಗದಂತೆ ಸುತ್ತುವರೆದರು. 30 ನಿಮಿಷದವರೆಗೆ ಬಾಲನಾಗಮ್ಮ ಅವರ ಜತೆ ಚರ್ಚಿಸಿದ ಪ್ರಿಯಾಂಕಾ ಕೊನೆಗೆ ಹಾಲು ರಹಿತ ಚಹಾ ಸೇವಿಸಿ ಹೊರಬಂದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಯೋಗಿ ಭರ್ಜರಿ ಪ್ರಚಾರ – ರಾಮಮಂದಿರ ಉದ್ಘಾಟನೆಗೆ ಆಹ್ವಾನ

    ನಂತರ ಮಾತನಾಡಿದ ಬಾಲನಾಗಮ್ಮ, ಪ್ರಿಯಾಂಕಾ ಅವರು ನಮ್ಮ ಹೋಟೆಲ್‌ಗೆ ಭೇಟಿ ನೀಡುತ್ತಾರೆಂಬ ವಿಷಯ ಗೊತ್ತೇ ಇರಲಿಲ್ಲ. ದಿಢೀರಾಗಿ ಭೇಟಿ ನೀಡಿದ್ದು ಅಚ್ಚರಿ ಮುಡಿಸಿದೆ. ನಮ್ಮ ದಿನದ ದುಡಿಮೆ ಹಾಗೂ ಈ ಸಣ್ಣ ಹೋಟೆಲ್‌ನಿಂದ ಬರುವ ಕಡಿಮೆ ಆದಾಯದಿಂದ ಹೇಗೆ ಕುಟುಂಬ ನಿರ್ವಹಣೆ ಮಾಡುತ್ತೀರಿ ಎಂಬೆಲ್ಲ ವಿಚಾರಗಳನ್ನು ಕೇಳಿದರು. 7 ಮಕ್ಕಳೊಂದಿಗೆ ಹೋಟೆಲ್‌ ನಿರ್ವಹಣೆಯಿಂದ ಕುಟುಂಬವನ್ನು ಮುನ್ನಡೆಸುತ್ತಿರುವುದಾಗಿ ಹೇಳಿದೆ. ಆಗ ಅವರು ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು ಎಂದು ತಿಳಿಸಿದ್ದಾರೆ‌. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ವೇತನ ಹೆಚ್ಚಳ: ಪ್ರಿಯಾಂಕಾ ಗಾಂಧಿ ಹೊಸ ಗ್ಯಾರಂಟಿ ಘೋಷಣೆ

  • ಸುಪ್ರೀಂ ಆದೇಶ ಗೊತ್ತಿದ್ದರೂ ಹೈಕಮಾಂಡ್ ನಿಮಗೆ ಅಲ್ಲಿ ಟಿಕೆಟ್ ನೀಡಿದ್ಯಾ – ವಿನಯ್ ಕುಲಕರ್ಣಿ ಪರ ವಕೀಲರಿಗೆ ಹೈಕೋರ್ಟ್ ಚಾಟಿ

    ಸುಪ್ರೀಂ ಆದೇಶ ಗೊತ್ತಿದ್ದರೂ ಹೈಕಮಾಂಡ್ ನಿಮಗೆ ಅಲ್ಲಿ ಟಿಕೆಟ್ ನೀಡಿದ್ಯಾ – ವಿನಯ್ ಕುಲಕರ್ಣಿ ಪರ ವಕೀಲರಿಗೆ ಹೈಕೋರ್ಟ್ ಚಾಟಿ

    ಬೆಂಗಳೂರು: ಧಾರವಾಡಕ್ಕೆ (Dharwad) ಪ್ರವೇಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್ (Supreme Court) ಆದೇಶ ಗೊತ್ತಿದ್ದರೂ ಹೈಕಮಾಂಡ್ ಅಲ್ಲಿಂದ ಚುನಾವಣೆಗೆ (Election) ಸ್ಪರ್ಧಿಸುವಂತೆ ನಿಮ್ಮ ಕಕ್ಷಿದಾರರಿಗೆ ಟಿಕೆಟ್ ಕೊಟ್ಟಿದ್ಯಾ ಎಂದು ವಿನಯ್ ಕುಲಕರ್ಣಿ (Vinay Kulkarni) ಪರ ವಕೀಲರಿಗೆ ಹೈಕೋರ್ಟ್ (High Court) ಪ್ರಶ್ನಿಸಿ ಚಾಟಿ ಬೀಸಿದೆ.

    ಧಾರವಾಡ ಪ್ರವೇಶಕ್ಕೆ ನಿರಾಕರಿಸಿದ ಜನಪ್ರತಿನಿಧಿಗಳ ಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಧಾರವಾಡ ಪ್ರವೇಶಿಸದಂತೆ ಸೂಚಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ: ಕರಂದ್ಲಾಜೆ ದೂರು

    ವಿನಯ್ ಕುಲಕರ್ಣಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದು ಧಾರವಾಡದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಧಾರವಾಡ ಪ್ರವೇಶಿಸದಂತೆ ಈ ಹಿಂದೆ ಆದೇಶ ನೀಡಿತ್ತು. ಈಗ ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ಧಾರವಾಡಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸುವ ವೇಳೆ ಕೋರ್ಟ್ ಕುಲಕರ್ಣಿ ಪರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.

    karnataka highcourt

    ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಏ.15 ರಂದು ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್ ಏಪ್ರಿಲ್ 18 ರಂದು ಧಾರವಾಡ ಪ್ರವೇಶಿಸದಂತೆ ಆದೇಶ ನೀಡಿತ್ತು.

    ಯೋಗೇಶ್ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾದ ವಾದ ಮಂಡಿಸಿದ್ದರು.

    ಸುಪ್ರೀಂ ಷರತ್ತು
    ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ಜಾಮೀನು ಮಂಜೂರು ಮಾಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ಅನಿವಾರ್ಯ ಇದ್ದಾಗ ಮಾತ್ರ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಕಾರಣ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ: ಹಿರಿಯೂರಲ್ಲಿ ಡಿಕೆಶಿ ಆಪ್ತ ಸುಧಾಕರ್, ಬಿಎಸ್‌ವೈ ದತ್ತು ಪುತ್ರಿ ಪೂರ್ಣಿಮಾ ಮಧ್ಯೆ ಜಟಾಪಟಿ

  • ಬರೋಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ

    ಬರೋಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ

    ಧಾರವಾಡ: ಸೂಕ್ತ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ 7 ಕೆಜಿ 700 ಗ್ರಾಂ ತೂಕದ ಚಿನ್ನಾಭರಣಗಳನ್ನು (Gold Jewellery) ಧಾರವಾಡ (Dharwad) ಹೊರವಲಯದ ತೇಗೂರು ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಇತ್ಯಾದಿ ಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿ ಚೆಕ್ ಪೋಸ್ಟ್ ತೆರೆದಿದ್ದಾರೆ. ಧಾರವಾಡ-ಬೆಳಗಾವಿ ರಸ್ತೆಯ ತೇಗೂರು ಚೆಕ್ ಪೋಸ್ಟ್‌ನಲ್ಲಿ ಇದೀಗ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ

    ಬೆಳಗಾವಿ ಕಡೆಯಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಬಿವಿಸಿ ಎಂಬ ಲಾಜಿಸ್ಟಿಕ್ ವಾಹನದಲ್ಲಿ ಈ ಚಿನ್ನಾಭಾರಣ ಸಾಗಿಸಲಾಗುತ್ತಿತ್ತು. ಮಲಬಾರ್, ಜೋಯಾಲುಕಾಸ್, ಕಲ್ಯಾಣ್ ಜ್ಯುವೆಲರ್ಸ್ ಸೇರಿದಂತೆ ಇತರ ಚಿನ್ನಾಭರಣಗಳನ್ನು ಗರಗ ಠಾಣೆ ಪೊಲೀಸರು ವಶಪಡಿಸಿಕೊಂಡು ಆದಾಯ ಮತ್ತು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ: ಜನರಲ್ಲಿ ಸುದೀಪ್‌ ಮನವಿ

  • ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ

    ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ

    ಧಾರವಾಡ: ಬಿಜೆಪಿ (BJP) ಧಾರವಾಡ ಜಿಲ್ಲಾ ಯುವ ಮೋರ್ಚಾ (Yuva Morcha) ಉಪಾಧ್ಯಕ್ಷನನ್ನು ಬರ್ಬರ ಹತ್ಯೆ ಮಾಡಲಾಗಿದೆ.

    ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಪ್ರವೀಣ ಕಮ್ಮಾರ (Pravena Kammara) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತಡ ರಾತ್ರಿ ಪ್ರವೀಣ ಕಮ್ಮಾರನ ಹೊಟ್ಟೆಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಎನ್‌ಸಿಪಿ ಲೋಗೋ ತೆಗೆದ ಅಜಿತ್‌ ಪವಾರ್‌ – ಮಹಾ ಬಿಜೆಪಿ ಜತೆ ಮೈತ್ರಿಗೆ 40 ಶಾಸಕರ ಸಮ್ಮತಿ?


    ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಕಾಂಗ್ರೆಸ್‌ಗೆ ಬಿಗ್‌ ಶಾಕ್‌ – ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ

    ಕಾಂಗ್ರೆಸ್‌ಗೆ ಬಿಗ್‌ ಶಾಕ್‌ – ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ

    – ಜನಪ್ರತಿನಿಧಿಗಳ ಕೋರ್ಟ್‌ನಿಂದ ಮಹತ್ವದ ಆದೇಶ
    – ವಿನಯ್‌ ಕುಲಕರ್ಣಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ

    ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election) ಸಮಯದಲ್ಲಿ ಧಾರವಾಡಕ್ಕೆ ತೆರಳಲು ಅನುಮತಿ ಕೋರಿ ಮಾಜಿ ಸಚಿವ ವಿನಯ್‌ ಕುಲಕರ್ಣಿ (Vinay Kulkarni) ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗಿದೆ.

    ಧಾರವಾಡ  ಬಿಜೆಪಿ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ (Yogesh Gowda Murder Case) ಸಂಬಂಧ ಧಾರವಾಡ ಪ್ರವೇಶಕ್ಕೆ (Dharwad Entry) ಅನುಮತಿ ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್‌ 15 ರಂದು ವಿನಯ್‌ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್‌ ಏಪ್ರಿಲ್‌ 18ಕ್ಕೆ ತೀರ್ಪು ಕಾಯ್ದಿರಿಸಿತ್ತು.

    ಸಿಬಿಐ ವಾದ ಏನಿತ್ತು?
    ಯೋಗೇಶ್‌ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್‌ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ಬಲವಾದ ವಾದ ಮಂಡಿಸಿದ್ದರು.

    ಅರ್ಜಿ ಹಾಕಿದ್ದು ಯಾಕೆ?
    ಯೋಗೇಶ್‌ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್‌ ಕುಲಕರ್ಣಿಯನ್ನು ಸಿಬಿಐ (CBI) ಬಂಧಿಸಿತ್ತು. ಜಾಮೀನು ಮಂಜೂರು ಮಾಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿತ್ತು. ಆದರೆ ಅನಿವಾರ್ಯ ಇದ್ದಾಗ ಮಾತ್ರ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಕಾರಣ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಮನವಿ ಮಾಡಿದ್ದರು.

    ಕಾಂಗ್ರೆಸ್‌ಗೆ ಶಾಕ್‌ ಯಾಕೆ?
    ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಿದೆ. ವಿನಯ್‌ ಕುಲಕರ್ಣಿ ಈಗ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡದ ಕಾರಣ ಕಾಂಗ್ರೆಸ್‌ ಮುಂದೆ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

    ಧಾರವಾಡ ಪ್ರವೇಶ ಸಿಗದಿದ್ದರೆ ವಿನಯ್‌ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತು ಈ ಹಿಂದೆಯೇ ಕೇಳಿ ಬಂದಿತ್ತು. ಒಂದು ವೇಳೆ ಕಾಂಗ್ರೆಸ್‌ ವಿನಯ್‌ ಕುಲಕರ್ಣಿ ಹೆಸರನ್ನು ಅಂತಿಮಗೊಳಿಸಿದರೆ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಬೇಕಾಗುತ್ತದೆ.

  • ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಡ್ಯಾಮೇಜ್ ಆಗಲ್ಲ: ಅರವಿಂದ ಬೆಲ್ಲದ್

    ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಡ್ಯಾಮೇಜ್ ಆಗಲ್ಲ: ಅರವಿಂದ ಬೆಲ್ಲದ್

    ಧಾರವಾಡ: ರಾಜಕೀಯದ ನಂತರ ಜಗದೀಶ್ ಶೆಟ್ಟರ್ (Jagadish Shettar) ಕಾರ್ಯಕರ್ತರ ಜೊತೆ ಸೇರಿ ಬಿಜೆಪಿ (BJP) ಪಕ್ಷ ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರ ರಾಜೀನಾಮೆ (Resignation) ಪಕ್ಷಕ್ಕೆ ಬಹಳ ದುಃಖದ ಸಂಗತಿ. ಹಾಗೆಂದು ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಹೇಳಿದ್ದಾರೆ.

    ಧಾರವಾಡದಲ್ಲಿ (Dharwad) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಯ ಹಿರಿಯ ನಾಯಕರಾಗಿದ್ದರು. ವಕೀಲರಾಗಿದ್ದ ಅವರಿಗೆ ಬಿಜೆಪಿ ಪಕ್ಷ ಕರೆದು ಟಿಕೆಟ್ ನೀಡಿ, ಶಾಸಕರನ್ನಾಗಿ ಮಾಡಿತ್ತು. ಜೊತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಿತ್ತು. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ (Congress) ಪಕ್ಷ ಸೇರುತ್ತಿರುವುದರಿಂದ ನಮಗೆ ಬಹಳ ನೋವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ 

    ನರೇಂದ್ರ ಮೋದಿಯವರ (Narendra Modi) ಸರ್ಕಾರ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುವ ರೀತಿಯಲ್ಲಿ ಹೊರಟಿದೆ. ಜಗದೀಶ ಶೆಟ್ಟರ್ ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಆರಂಭ ಮಾಡಿದರು. ಅಂತಹ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು ಬಿಜೆಪಿ. ಎಲ್ಲಾ ಸ್ಥಾನಮಾನಗಳನ್ನು ಅಲಂಕರಿಸಿ ಈಗ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇದು ನಮ್ಮೆಲ್ಲಾ ಕಾರ್ಯಕರ್ತರಿಗೆ ಬಹಳ ನೋವು ತಂದಿದೆ ಎಂದರು. ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ: ಬೊಮ್ಮಾಯಿ

    ಬಿಜೆಪಿ ಪಕ್ಷ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹಿರಿಯರೊಬ್ಬರು ಮನೆ ತೊರೆದಿದ್ದಕ್ಕೆ ಬೇಜಾರಾಗಿದೆ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತೇವೆ ಎಂದರೂ ಶೆಟ್ಟರ್ ಕೇಳಲಿಲ್ಲ. ಲಿಂಗಾಯತರನ್ನು ಸಿಎಂ ಮಾಡಿದ್ದೇ ಬಿಜೆಪಿ ಪಕ್ಷ. ಬಿಜೆಪಿ 67 ಸೀಟುಗಳನ್ನು ಲಿಂಗಾಯತರಿಗೆ ಕೊಟ್ಟಿದೆ. ಲಿಂಗಾಯತರಿಗೆ ಮಾನ್ಯತೆ ಕೊಟ್ಟಿದ್ದು ಯಾವ ಪಕ್ಷ ಎಂಬುದು ಜನರಿಗೆ ಗೊತ್ತಿದೆ. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇ ಆದಲ್ಲಿ ಅವರನ್ನು ಮೂಲೆಗುಂಪು ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ 

    ನಮ್ಮ ಪಕ್ಷದ ವರಿಷ್ಠರು ಶೆಟ್ಟರ್ ಅವರೊಂದಿಗೆ ಚರ್ಚೆ ಮಾಡಿದ್ದರು. ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಕಿರಿಯ ವಯಸ್ಸಿನವರು ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಸಚಿವ ಸಂಪುಟದಲ್ಲಿ ನೀವು ಸಚಿವರಾಗಿರುವುದು ಅಷ್ಟೊಂದು ಸರಿಯಲ್ಲ ಎಂದು ಹೇಳಿದ್ದರು. ಆದರೂ ಶೆಟ್ಟರ್ ಸಮ್ಮತಿ ಸೂಚಿಸಲಿಲ್ಲ ಎಂದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ 

    ಈ ಬಾರಿ ಚಿಕ್ಕ ವಯಸ್ಸಿನವರು ಬಿಜೆಪಿಯಲ್ಲಿ ಸಿಎಂ ಆಗಬಹುದು. ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿರುವ ಅವರು, ಈ ಬಾರಿ ಬೊಮ್ಮಾಯಿ ಸಿಎಂ ಆಗಿ ಮುಂದುವರೆಯುವುದಿಲ್ಲ. ಬದಲಿಗೆ ಲಿಂಗಾಯತ ಸಮುದಾಯದ ಚಿಕ್ಕ ವಯಸ್ಸಿನವರೇ ಸಿಎಂ ಆಗಲಿದ್ದಾರೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!

  • ನನ್ನ ವಿರುದ್ಧ ಷಡ್ಯಂತ್ರ – ಬಿಜೆಪಿಗೆ ಗುಡ್‌ಬೈ ಹೇಳಿದ ಶೆಟ್ಟರ್‌

    ನನ್ನ ವಿರುದ್ಧ ಷಡ್ಯಂತ್ರ – ಬಿಜೆಪಿಗೆ ಗುಡ್‌ಬೈ ಹೇಳಿದ ಶೆಟ್ಟರ್‌

    ಧಾರವಾಡ: ಹೈಕಮಾಂಡ್‌ ನಾಯಕರ ಸಂಧಾನಕ್ಕೆ ಜಗ್ಗದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಬಿಜೆಪಿಗೆ (BJP) ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ರಾತ್ರಿ ಶೆಟ್ಟರ್ ಮನೆಗೆ ಧರ್ಮೇಂದ್ರ ಪ್ರಧಾನ್, ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿ ಸಂಧಾನ ಮಾತುಕತೆ ನಡೆಸಿದ್ದರು. ಆದರೆ ಈ ಮಾತುಕತೆ ವಿಫಲವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.

    15 ದಿನಗಳ ಹಿಂದೆ ರಾಜಕೀಯ ನಿವೃತ್ತಿಯಾಗಬೇಕು ಎಂದು ಹೇಳಿದ್ದರೆ ನಾನು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳುತ್ತಿದ್ದೆ. ಆದರೆ ಯಾವುದೇ ಮಾಹಿತಿ ನೀಡದೇ ಕೊನೆಯವರೆಗೆ ಸತಾಯಿಸಿದ್ದಾರೆ. ಈ ಕಾರಣಕ್ಕೆ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.  ಇದನ್ನೂ ಓದಿ: ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ರೌಡಿ ಅತಿಕ್‌ ಅಹ್ಮದ್‌, ಸಹೋದರ ಗ್ಯಾಂಗ್‌ವಾರ್‌ಗೆ ಬಲಿ

    ಭಾನುವಾರ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ  ಪತ್ರ ನೀಡುತ್ತೇನೆ. ನಂತರ ನನ್ನ ಹಿತೈಷಿಗಳ ಜೊತೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶೆಟ್ಟರ್‌ ತಿಳಿಸಿದರು.

     

    ನರೇಂದ್ರ ಮೋದಿ, ಅಮಿತ್‌ ಶಾ ಅವರಿಗೆ ತಿಳಿಯದಂತೆ ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ನನಗೆ ಟಿಕೆಟ್‌ ಬಿಟ್ಟು ದೊಡ್ಡ ಹುದ್ದೆ, ಕುಟುಂಬದವರಿಗೆ ಟಿಕೆಟ್‌ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ನಾನು ಮೊದಲೇ ನಿರ್ಧಾರ ಮಾಡಿದಂತೆ ಈ ಚುನಾವಣೆಯಲ್ಲಿ ನಿಲ್ಲುತ್ತೇನೆ. ಭಾರೀ ಮತಗಳ ಅಂತರದಿಂದ ಈ ಬಾರಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ

    ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಸದ್ಯ ಹುಬ್ಬಳ್ಳಿ- ಸೆಂಟ್ರಲ್ (Hubli-Dharwad Central Assembly constituency) ಕ್ಷೇತ್ರ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಅತ್ಯಂತ ಮಹತ್ವವಾದ ವಿಧಾನಸಭಾ ಕ್ಷೇತ್ರ. ಮೊದಲು ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರವಾಗಿದ್ದ ಈ ಕ್ಷೇತ್ರ ಪುನರ್‌ ವಿಂಗಡನೆಯಾದ ಬಳಿಕ ಹು-ಧಾ ಸೆಂಟ್ರಲ್ ಕ್ಷೇತ್ರ ಎಂದೇ ಮರು ನಾಮಕರಣಗೊಂಡಿದೆ. ಇಂತಹ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ಬರೆದು ಸೋಲಿಲ್ಲದ ಸರದಾರಾಗಿ, ಬಿಜೆಪಿ (BJP) ಪಕ್ಷದಲ್ಲಿ ಮುಖ್ಯಮಂತ್ರಿ, ವಿಪಕ್ಷ ನಾಯಕ, ಸಚಿವರಾಗಿ ಅಧಿಕಾರ ಅನುಭವಿಸಿದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಈ ಬಾರಿ ಟಿಕೆಟ್‌ ಸಿಗುವುದು ಅನುಮಾನ.

    ಸತತ ಆರು ಬಾರಿ ಗೆದ್ದು ದಾಖಲೆ ಬರೆದಿರುವ ಶೆಟ್ಟರ್, ಏಳನೇ ಬಾರಿಯೂ ಗೆಲುವು ಕನಸು ಕಾಣುತ್ತಿರುವ ಹೊತ್ತಿನಲ್ಲಿ ಈ ಬಾರಿ ಬಿಜೆಪಿ ಹೈಕಮಾಂಡ್ (BJP High Command) ದೊಡ್ಡ ಶಾಕ್ ನೀಡುವ ಸಾಧ್ಯತೆಯಿದೆ. ಕುಗ್ಗುತ್ತಿರುವ ಶೆಟ್ಟರ್ ಜನಪ್ರಿಯತೆ, ವಯಸ್ಸಿನ ಕಾರಣದಿಂದ ಈ ಬಾರಿ ಟಿಕೆಟ್‌ ಸಿಗುವುದು ಅನುಮಾನವಾಗಿದೆ. ಹೀಗಾಗಿ ಶೆಟ್ಟರ್ ರಾಜಕೀಯ ಜೀವನ ಬಹುತೇಕ ಅಂತ್ಯ ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿದೆ.  ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಹೋಗಲು ಯತ್ನಿಸಿ ಸೋತರು; ರಾಜ್ಯ ರಾಜಕಾರಣದಲ್ಲೇ ಗೆಲುವು ಕಂಡರು!

    1994 ರಲ್ಲಿ ಅಂದಿನ ಹುಬ್ಬಳ್ಳಿ ಗ್ರಾಮೀಣ ಅಂದರೆ ಇಂದಿನ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿಯಿಂದ ರಾಜಕೀಯ ಆರಂಭಿಸಿದ ಶೆಟ್ಟರ್ ಅಂದಿನಿಂದ ಇಂದಿನವರೆಗೆ ಸತತವಾಗಿ ಆರು ಬಾರಿ ಜಯಭೇರಿ ಬಾರಿಸಿದ್ದಾರೆ. ಅಲ್ಲದೆ 2012ರ ಜುಲೈ 7 ರಿಂದ 2013ರ ಮೇ 8 ರವರೆಗೆ ರಾಜ್ಯ 27ನೇ ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದಾರೆ.

    ರಾಜಕೀಯ ಅಪಾರ ಅನುಭವ, ಉತ್ತರ ಕರ್ನಾಟಕ ಮತ್ತು ಲಿಂಗಾಯತರ ಮುಖಂಡರಾಗಿ ಗುರುತಿಸಿಕೊಂಡಿದ್ದ ಶೆಟ್ಟರ್‌ ಅವರ ಹಿರಿತನಕ್ಕೆ ಕೊಕ್‌ ನೀಡಿ ಬಿಜೆಪಿ ಹೊಸ ಮುಖವನ್ನು ಹುಡುಕುತ್ತಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಶೆಟ್ಟರ್‌ ಅವರು ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಬಿಜೆಪಿ ಗೌರವಯುತವಾಗಿ ಬೀಳ್ಕೋಡುವ ಚಿಂತನೆ ನಡೆಸಿದೆ.

    ಶೆಟ್ಟರ್ ಇಷ್ಟು ದಿನ ಬಿಜೆಪಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿರುವ ಬಿಜೆಪಿ ನಾಯಕರು ಶೆಟ್ಟರ್ ಅವರನ್ನು ಗೌರವಯುತವಾಗಿ ಬೀಳ್ಕೊಡುವ ಚಿಂತನೆಯಲ್ಲಿದ್ದಾರೆ. ಈಗಾಗಲೇ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಶೆಟ್ಟರ್ ಜೊತೆಗೆ ಮಾತನಾಡಿ ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜ್ಯಪಾಲರನ್ನಾಗಿಸುವ ಭರವಸೆಯನ್ನು ಸಹ ನೀಡಿದ್ದಾರೆ ಎಂಬ ವಿಚಾರ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.

  • ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು

    ನಕಲಿ ಅಂಕಪಟ್ಟಿ ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲ- ಪ್ರಕರಣ ದಾಖಲು

    ಧಾರವಾಡ: ನಕಲಿ ಅಂಕಪಟ್ಟಿ (Fake Marks Card) ನೀಡಿ ಪ್ರಾಚಾರ್ಯ ಹುದ್ದೆಗೇರಿದ್ದ ಪ್ರಾಂಶುಪಾಲನ (Principal) ಮೇಲೆ ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬವರು ನಕಲಿ ಬಿ.ಎಡ್ (B.Ed) ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಾರ್ಡನ್ (Warden) ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ ಉತ್ತರ ಪ್ರದೇಶದಲ್ಲಿ ನಕಲಿ ಬಿ.ಎಡ್ ಅಂಕಪಟ್ಟಿಯನ್ನು ಮಾಡಿಸಿದ್ದರು. 2001ರಲ್ಲೇ ಉತ್ತರ ಪ್ರದೇಶದ (Uttar Pradesh) ಡಿಪಾರ್ಟ್ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ ಕೇಂದ್ರದ ಅಂಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಸಂಜಯ್ ರಾವತ್‍ಗೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‍ನಿಂದ ಕೊಲೆ ಬೆದರಿಕೆ 

     2006ರ ವರೆಗೂ ವಾರ್ಡನ್ ಆಗಿದ್ದ ಕಲ್ಲನಗೌಡರ ನಕಲಿ ಅಂಕಪಟ್ಟಿಯನ್ನು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಿ, ಅಲ್ಲಿಂದ ಪ್ರಾಂಶುಪಾಲ ಹುದ್ದೆಗೇರಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಅಂಕಪಟ್ಟಿಗೆ ಮಾನ್ಯತೆ ಇಲ್ಲದಿದ್ದರೂ ಅದನ್ನು ಕೊಟ್ಟು ಇಲಾಖೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. 2007-08ರ ಸಾಲಿನಲ್ಲಿ ಕರ್ತವ್ಯದಲ್ಲಿದ್ದರೂ ಮತ್ತೊಮ್ಮೆ ರೆಗ್ಯುಲರ್ ಬಿ.ಎಡ್ ಪದವಿ ಪಡೆದ ಕಲ್ಲನಗೌಡರ, ಇದನ್ನೂ ಸಹ ಕಾನೂನು ಬಾಹಿರವಾಗಿಯೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿನಿಮಾದಲ್ಲಿ ಚಾನ್ಸ್ ಕೊಡೋದಾಗಿ ಹೇಳಿ ವಂಚಿಸಿದ್ದ ಆರೋಪಿ ಬಂಧನ

    ಹುಬ್ಬಳ್ಳಿಯ ಆಲ್ ಮಿಜಾನ್ ಎಜ್ಯುಕೇಶನ್ ಅಸೋಸಿಯೇಶನ್ ಕಾಲೇಜಿನಲ್ಲಿ ಕಲ್ಲನಗೌಡರ ಕಾನೂನು ಬಾಹಿರವಾಗಿ ಬಿ.ಎಡ್ ಪದವಿ ಪಡೆದಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡೇ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿದ ಆರೋಪದಡಿ ಇದೀಗ ಕಲ್ಲನಗೌಡರ ಮೇಲೆ ಸಿದಪ್ಪ ಅಕ್ಕಿ ಎನ್ನುವವರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ- ಚೆನೈ ಕಲಾಕ್ಷೇತ್ರದ ಪ್ರೊಫೆಸರ್ ವಿರುದ್ಧ ದೂರು ದಾಖಲು

    ಈ ಕುರಿತು ದೂರು ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ

  • ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

    ಬಿಎಸ್‍ವೈ ಮನೆ ಮೇಲೆ ದಾಳಿ ರಾಜಕೀಯ ಪ್ರೇರಿತವೂ ಇರಬಹುದು: ಸಚಿವ ಜೋಶಿ

    ಧಾರವಾಡ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S. Yediyurappa) ಅವರ ಮನೆ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವೂ ಇರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಧಾರವಾಡದಲ್ಲಿ (Dharwad) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ಹಾಗೂ ಹಿರಿಯ ರಾಜಕಾರಣಿ. ಅವರ ಮನೆಗೆ ಕಲ್ಲು ಹೊಡೆದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಸದಾಶಿವ ಆಯೋಗದ (Sadashiva ayoga) ವರದಿಯನ್ನು ಯಾರು ವಿರೋಧ ಮಾಡುತ್ತಾರೋ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಕರೆದು ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ತಿಳಿ ಹೇಳಿದ್ದಾರೆ. ಎಲ್ಲರಿಗೂ ಒಪ್ಪುವಂತ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮತ್ತೊಮ್ಮೆ ಮನವರಿಕೆ ಮಾಡಲಿದ್ದಾರೆ. ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

    ಈಗಾಗಲೇ ಅಧಿಕಾರಿಗಳು ಮತ್ತು ಪ್ರಮುಖರನ್ನು ಕರೆದು ಸದಾಶಿವ ಆಯೋಗದ ವರದಿ ಬಗ್ಗೆ ಸಿಎಂ ಮಾತನಾಡಿದ್ದಾರೆ. ಎಲ್ಲರೊಂದಿಗೂ ಚರ್ಚೆ ಮಾಡದ ಹೊರತು ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಯಡಿಯೂರಪ್ಪನವರ ಮನೆ ಮೇಲೆ ನಡೆದ ದಾಳಿ ಬಗ್ಗೆ ನಾನು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹಿಂದಿನ ಸರ್ಕಾರಗಳು ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಿಲ್ಲ ಯಾಕೆ – ಹಾಲಪ್ಪ ಆಚಾರ್ ಪ್ರಶ್ನೆ