Tag: ಧಾರವಾಡ

  • ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿ ದುರ್ಮರಣ- ಕಳಪೆ ಕಾಮಗಾರಿ ಆರೋಪ

    ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿ ದುರ್ಮರಣ- ಕಳಪೆ ಕಾಮಗಾರಿ ಆರೋಪ

    ಹುಬ್ಬಳ್ಳಿ: ನಿರ್ಮಾಣ ಹಂತದ ಶಾಲಾ (School) ಕಟ್ಟಡ ಕುಸಿದು ವಿದ್ಯಾರ್ಥಿಯೊಬ್ಬ (Student) ಮೃತಪಟ್ಟ ದುರ್ಘಟನೆ ಹುಬ್ಬಳ್ಳಿಯ (Hubballi) ಕಿರೇಸೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    ಮೃತ ಬಾಲಕನನ್ನು ವಿಶೃತ್ (9) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರಭು ನಾಗಾವಿ ಎಂಬ ಮತ್ತೋರ್ವ ವಿದ್ಯಾರ್ಥಿ ಮೃತನನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಬಾಲಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಬಾಲಕರು ಮುಂಜಾನೆ ಬೇಗ ಶಾಲೆಗೆ ತೆರಳಿದ್ದರು. ಘಟನೆ ವೇಳೆ ಶಾಲೆಯಲ್ಲಿ ಇಬ್ಬರೇ ಇದ್ದರೂ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ

    ನಿರ್ಮಾಣ ಹಂತದಲ್ಲಿದ್ದ ನೂತನ ಕಟ್ಟಡದ ಬಳಿ ಬಾಲಕರು ಹೋಗಿದ್ದಾರೆ. ಅಲ್ಲಿ ಮೂತ್ರ ವಿರ್ಸಜನೆಗೆ ತೆರಳಿದ್ದಾಗ ಏಕಾಏಕಿ ಗೋಡೆ ಕುಸಿದು ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

    ವಿದ್ಯಾರ್ಥಿಯ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಕಟ್ಟಡ ಕಳಪೆ ಕಾಮಗಾರಿಯಾಗಿದೆ. ಅಲ್ಲದೇ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಶಾಲಾ ಆಡಳಿತ ಮಂಡಳಿ ಹೇಳಿದ್ದರೂ, ಯಾವುದೇ ಕಾವಲುಗಾರರನ್ನು ನೇಮಿಸದೇ ಇರುವುದು ಈ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.

    ಮೃತ ವಿಶೃತ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ, ಇಂತಹ ವಿದ್ಯಾರ್ಥಿಗೆ ದೇವರು ಈ ರೀತಿ ಮೋಸ ಮಾಡತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಶಿಕ್ಷಕರು ಕಣ್ಣೀರು ಹಾಕಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು

  • ದೇವರು ಅಡುಗೆ ಮಾಡುತ್ತಾ, ಫ್ರಿಡ್ಜ್ ಬಳಸುತ್ತಾ? ದೇವಸ್ಥಾನದ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಅಜ್ಜಿ ಗರಂ

    ದೇವರು ಅಡುಗೆ ಮಾಡುತ್ತಾ, ಫ್ರಿಡ್ಜ್ ಬಳಸುತ್ತಾ? ದೇವಸ್ಥಾನದ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಅಜ್ಜಿ ಗರಂ

    ಧಾರವಾಡ: ದೇವಸ್ಥಾನದ ವಿದ್ಯುತ್ ಬಿಲ್ (Electricity Bill) ಈ ಬಾರಿ ಹೆಚ್ಚಿಗೆ ಬಂದಿರುವುದಕ್ಕೆ ಅಜ್ಜಿಯೊಬ್ಬರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. “ದೇವರು ಅಡುಗೆ ಮಾಡುತ್ತಾ? ಫ್ರಿಡ್ಜ್ ಬಳಸುತ್ತಾ ಎಂದು ಆಕ್ರೋಶ ಹೊರಹಾಕಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಶಕ್ತಿ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ (Temple) ವಿದ್ಯುತ್ ಬಿಲ್ ಹಿಂದೆದಿಗಿಂತ ಈ ತಿಂಗಳು ಜಾಸ್ತಿ ಬಂದಿದೆ. ಇದರಿಂದಾಗಿ ದೇವಸ್ಥಾನದಲ್ಲಿ ಅರ್ಚಕಿಯಾಗಿರುವ ಅನಸೂಯಾ ಮಠಪತಿ ಸಿಡಿಮಿಡಿಗೊಂಡಿದ್ದಾರೆ. ಪ್ರತಿ ತಿಂಗಳು 400 ರೂಪಾಯಿ ಬರುತ್ತಿತ್ತು. ಈ ತಿಂಗಳು 940 ರೂ. ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

    ಸರ್ಕಾರ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿ ಮಾಡದಂತೆ ಆದೇಶ ಮಾಡಲಿ. ಈ ತಿಂಗಳು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು

  • `ಶಕ್ತಿ’ಗೆ ನಮನ – ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ ಏರಿದ ಅಜ್ಜಿ

    `ಶಕ್ತಿ’ಗೆ ನಮನ – ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ ಏರಿದ ಅಜ್ಜಿ

    ಧಾರವಾಡ: ಮಹಿಳೆಯರ ಉಚಿತ ಬಸ್ ಪ್ರಯಾಣದ ನಾರಿ `ಶಕ್ತಿ’ ಯೋಜನೆಯನ್ನ (Shakti Scheme) ರಾಜ್ಯ ಸರ್ಕಾರ ಭಾನುವಾರ (ಜೂನ್ 11) ದಿಂದ ಜಾರಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆಶಿವಕುಮಾರ್ (DK Shivakumar) ಮೊದಲಾದ ಗಣ್ಯರು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಶಕ್ತಿ ಯೋಜನೆಗೆ ಚಾಲನೆ ನೀಡಿದ ವೇಳೆ ವೃದ್ಧೆಯೊಬ್ಬರು ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ ವಿಶೇಷ ಸನ್ನಿವೇಶವೊಂದು ಕಂಡುಬಂದಿದೆ. ಬಸ್ ಹತ್ತುವ ಮುನ್ನ ಅಜ್ಜಿ ತನ್ನ ತಲೆಯನ್ನು ಬಸ್ ಮೆಟ್ಟಿಲ ಮೇಲಿಟ್ಟು ನಮಸ್ಕರಿಸಿದ್ದು, ಅಜ್ಜಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಉಚಿತ ಬಸ್‌ ಪ್ರಯಾಣದ ಮೊದಲ ಟಿಕೆಟ್‌ ಪಡೆದ ಅದೃಷ್ಟಶಾಲಿ ಮಹಿಳೆ ಇವರೇ..!

    ಶಕ್ತಿಯೋಜನೆ ಜಾರಿಯಾದ ಮೊದಲ ದಿನವೇ ಮಹಿಳಾಮಣಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಂಚಾರದ ಕೊಡುಗೆ ಲಭ್ಯ ಆಗಿರೋದಕ್ಕೆ ನಾರಿಮಣಿಯರು ಫುಲ್ ಖುಷಿಯಾಗಿದ್ದಾರೆ. ಕೆಲ ಮಹಿಳೆಯರು ಕುಣಿದು ಕುಪ್ಪಳಿಸಿ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. ಪ್ರವಾಸಿ ತಾಣಗಳಿಗೆ ತೆರಳುವ ಬಸ್‌ಗಳಲ್ಲಿ ಮಹಿಳೆಯಯರೇ ಹೆಚ್ಚು ಸಂಖ್ಯೆಯಲ್ಲಿದ್ದದ್ದು ಕಂಡುಬಂದಿದೆ. ಕೆಲವರು ಕುಟುಂಬದ ಜೊತೆ.. ಇನ್ನೂ ಕೆಲವರು ಬಂಧುಗಳ ಜೊತೆ.. ಇನ್ನೂ ಕೆಲವರು ಗೆಳೆತಿಯರ ಜೊತೆ ಟ್ರಿಪ್ ಹೊರಟಿದ್ದ ದೃಶ್ಯ ಕಂಡುಬಂದಿದೆ. ಇದನ್ನೂ ಓದಿ: ಶಕ್ತಿ ಯೋಜನೆ- ಮಂಜುನಾಥನ ಸನ್ನಿಧಿಗೆ ಮೊದಲ ಬಸ್ ಪ್ರಯಾಣ

    ಉಚಿತ ಪ್ರಯಾಣದ ಟಿಕೆಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮಹಿಳೆಯರು ಸಂಭ್ರಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಲ ಮಹಿಳೆಯರು, ʻʻಪತಿ ಜೊತೆಗೆ ಜಗಳ ಆದ್ರೆ ತವರಿಗೆ ಹೋಗಬಹುದು, ತವರಲ್ಲಿ ಜಗಳ ಆದ್ರೆ ಪತಿ ಮನೆಗೆ ಬರಬಹುದುʼʼ ಎಂದು ತಮಾಷೆ ಮಾಡಿದ್ದಾರೆ.  ಇದನ್ನೂ ಓದಿ: ‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ!

  • ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಬಳ್ಳಾರಿ: ಹೆಂಡತಿಯ ಶೀಲ ಶಂಕಿಸಿ ಐವರನ್ನು ಕೊಚ್ಚಿ ಕೊಲೆ ಮಾಡಿದ್ದ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಧಾರವಾಡ ಹೈಕೋರ್ಟ್‌ (Dharwad High Court) ಆದೇಶ ಹೊರಡಿಸಿದೆ.

    ಗಣಿ ನಾಡು ಬಳ್ಳಾರಿ (Bellari) ಜಿಲ್ಲೆ ಕಂಪ್ಲಿ ತಾಲ್ಲೂಕಿನ ಚಪ್ಪರದಳ್ಳಿ ನಿವಾಸಿ ವಡ್ಡರ ತಿಪ್ಪಯ್ಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಬಳ್ಳಾರಿ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಮರಣದಂಡನೆ ಶಿಕ್ಷೆ ಆದೇಶವನ್ನು ಧಾರವಾಡ ಹೈಕೋರ್ಟ್‌ ಈಗ ಎತ್ತಿ ಹಿಡಿದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

    ಪ್ರಕರಣ ಏನು?
    2017ರ ಫೆಬ್ರವರಿ 25 ರಂದು ಕೊಲೆ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತ್ನಿ, ಆಕೆಯ ತಂಗಿ, ಹೆತ್ತ ಮೂರು ಮಕ್ಕಳು ಸೇರಿ ಒಟ್ಟು ಐವರನ್ನ ತಿಪ್ಪಯ್ಯ‌ ಕೊಲೆ ಮಾಡಿದ್ದ. ಪತ್ನಿ ಪಕ್ಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ (8), ಪವಿತ್ರ (6) ಹತ್ಯೆಯಾಗಿದ್ದ ದುರ್ದೈವಿಗಳು. ಈ ಸಂಬಂಧ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ, ನ್ಯಾಯಾಲಯವು ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿದ್ದ ತಿಪ್ಪಯ್ಯ, ಧಾರವಾಡ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ. ಕೆಳ ನ್ಯಾಯಾಲಯ ನೀಡಿದ ಆದೇಶದಂತೆ ಮರಣದಂಡನೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

  • ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    – ಅಧಿಕಾರಿಗಳು ಸರ್ಕಾರದ ಅನುಮತಿ ಕೇಳಿದರೂ ಬಾರದ ಪ್ರತಿಕ್ರಿಯೆ

    ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರವಾಗಿ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ಐಷಾರಾಮಿ ಎಸಿ ಬಸ್ ಸಂಚಾರಕ್ಕೆ ಚಿಗರಿ (Chigari) ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ನಿತ್ಯ ನೂರಾರು ಚಿಗರಿ ಬಸ್‌ಗಳು ಅವಳಿ ನಗರಗಳ ಮಧ್ಯೆ ಓಡಾಡುತ್ತವೆ. ಈ ಚಿಗರಿ ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಮಹಿಳೆಯರ ಉಚಿತ ಬಸ್ (Bus) ಪ್ರಯಾಣ ಯೋಜನೆಗೆ ಈಗ ಇದೆ ಮುಳುವಾಗಿ ಪರಿಣಿಮಿಸಿದೆ. ಒಂದು ಕಡೆ ಜನರ ಒತ್ತಾಯ ಮತ್ತೊಂದು ಕಡೆ ಸರ್ಕಾರದ ಜಾಣ ನಡೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

    ಕಾಂಗ್ರೆಸ್ (Congress) ಸರ್ಕಾರ 5 ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಈಗ 5 ಯೋಜನೆ ಜಾರಿಗೆ ದಿನಕ್ಕೆ ಒಂದೊಂದು ಷರತ್ತು ಹಾಕುತ್ತಿರುವುದು ಜನರ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಈ ತಿಂಗಳ 11 ರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದಾಗಿದ್ದು, ಇದು ರಾಜ್ಯದ ಮಹಿಳೆಯರಿಗೆ ಕೊಂಚ ಸಮಾಧಾನಕರ ವಿಷಯ. ಆದರೆ ಈ ಖುಷಿ ಹುಬ್ಬಳ್ಳಿ ಧಾರವಾಡದ ಮಹಿಳೆಯರಿಗೆ ಕೊಟ್ಟು ಕಸಿದಂತಾಗಿದೆ. ಬಹು ಕೋಟಿ ವೆಚ್ಚದ ಮತ್ತು ಜನ ಬಹಳಷ್ಟು ನೆಚ್ಚಿಕೊಂಡಿರುವ ಬಿಆರ್‌ಟಿಎಸ್ (BRTS) ಸಾರಿಗೆಯಲ್ಲಿ ಉಚಿತ ಪ್ರಯಾಣ ಇನ್ನೂ ಕಗ್ಗಂಟಾಗಿದೆ.

    ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಆದರೆ ಚಿಗರಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ವಿಭಿನ್ನ ಸಿಟಿ ಬಸ್ ಸಂಚಾರವಾಗಿದೆ. ನಿತ್ಯ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಸಂಪರ್ಕ ಯೋಜನೆ ಉಚಿತ ಬಸ್ ಪ್ರಯಾಣ ಯೋಜನೆ ವ್ಯಾಪ್ತಿಗೆ ಬಾರದೆ ಇರುವುದು ಜಿಲ್ಲೆಯ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ. ನಿತ್ಯ ಸುಮಾರು 96 ಚಿಗರಿ ಬಸ್‌ಗಳಲ್ಲಿ 80 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹೀಗಾಗಿ ಚಿಗರಿ ಬಸ್‌ಗಳಲ್ಲಿ ಮಹಿಳೆಯರು ಫ್ರೀ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವುದು ಮಹಿಳೆಯರ ವಾದ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಇನ್ನೂ ಬಿಆರ್‌ಟಿಎಸ್ ವ್ಯಾಪ್ತಿಯ ಚಿಗರಿ ಬಸ್ ಸೇವೆಗೆ ಮೊದಲಿಂದಲೂ ಒಂದಲ್ಲಾ ಒಂದು ಸಮಸ್ಯೆಗಳಿದ್ದು, ವ್ಯವಸ್ಥೆ ಈಗ ನಷ್ಟದಲ್ಲಿ ನಡೆಯುತ್ತಿದೆ. ಮಾಹಿತಿ ಪ್ರಕಾರ ತಿಂಗಳಿಗೆ 2 ಕೋಟಿ ರೂ. ಯಷ್ಟು ನಷ್ಟದ ಹೊರೆ ಬಿಆಆರ್‌ಟಿಎಸ್ ಇಲಾಖೆ ಮೇಲೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆಯ ವ್ಯಾಪ್ತಿಗೆ ಚಿಗರಿ ಬಸ್ ಒಳಪಡಿಸಿದರೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬುವುದು ಅಧಿಕಾರಿಗಳ ವಾದವಾಗಿದೆ. ಹೀಗಿದ್ದರೂ ಸಹ ಜನರ ಒತ್ತಾಯದ ಮೇರೆಗೆ ಬಿಆರ್‌ಟಿಎಸ್ ಎಂಡಿ ಭರತ್ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೋರಿಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅಧಿಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಕೊಟ್ಟ ಭರವಸೆಗಳನ್ನು ಈಡೇರಿಸುವುದೇ ನಮ್ಮ ಗುರಿ: ಸಂತೋಷ್ ಲಾಡ್

    ಕೊಟ್ಟ ಭರವಸೆಗಳನ್ನು ಈಡೇರಿಸುವುದೇ ನಮ್ಮ ಗುರಿ: ಸಂತೋಷ್ ಲಾಡ್

    ಧಾರವಾಡ: ಚುನಾವಣಾ ಸಮಯದಲ್ಲಿ ನಾವು ಏನು ಭರವಸೆಗಳನ್ನು ಕೊಟ್ಟಿದ್ದೆವೋ ಅವುಗಳನ್ನು ಈಡೇರಿಸುವುದೇ ನಮ್ಮ ಗುರಿ. ಕೊಟ್ಟ ಮಾತುಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಚಿವ ಸಂತೋಷ ಲಾಡ್ (Santhosh Lad) ಹೇಳಿಕೆ ನೀಡಿದ್ದಾರೆ.

    ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ (Congress) ಅಧಿಕಾರದ ಅಮಲು ಏರಿದೆ ಎಂಬ ಬಿಜೆಪಿ (BJP) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೊನ್ನೆಯಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತದೆ ಎಂದರು. ಇದನ್ನೂ ಓದಿ: ಕಂಡೀಷನ್‌ಗಳ ಮೂಲಕ ಗ್ಯಾರಂಟಿಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ: ಪ್ರಹ್ಲಾದ್ ಜೋಶಿ

    ಕರ್ನಾಟಕದಲ್ಲಿ ಅತೀ ಶೀಘ್ರದಲ್ಲೇ ತುರ್ತು ಪರಿಸ್ಥಿತಿ ಬರುತ್ತದೆ ಬರುತ್ತದೆ ಎಂಬ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ದೃಷ್ಟಿಯಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತದೆ. ಸುಮ್ಮನೆ ಅವರೊಂದು ಹೇಳುವುದು ನಾವೊಂದು ಹೇಳುವುದು ಬೇಡ. ಬೊಮ್ಮಾಯಿ ಅವರು ಬಡತನ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಹೇಳಿದರು. ಇದನ್ನೂ ಓದಿ: ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ರಾಜ್ಯದಲ್ಲಿ ನಕಲಿ ಜಾಬ್ ಕಾರ್ಡ್‌ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಕಲಿ ಜಾಬ್ ಕಾರ್ಡ್ ಇರುವ ಬಗ್ಗೆ ಮಾಹಿತಿ ಬೇಕು. ನಕಲಿ ಜಾಬ್ ಕಾರ್ಡ್‌ಗೆ ಕೆಲವು ಮಾನದಂಡ ಹಾಕಿದ್ದೇವೆ. ನಕಲಿ ಎಂದು ಗೊತ್ತಾದರೆ ಅದನ್ನು ತೆಗೆಯುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: IAS ವರ್ಸಸ್‌ IPS: ರೂಪಾ ಮೌದ್ಗಿಲ್‌ಗೆ ಜಾಮೀನು

    ಒಡಿಶಾ ರೈಲು ದುರಂತ (Odisha Train Tragedy) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದುರಂತದಲ್ಲಿ 150ರಿಂದ 160 ಜನ ಕರ್ನಾಟಕದವರು ಇದ್ದರು. ಪುರಿ ಜಗನ್ನಾಥದಲ್ಲಿ ಇದ್ದವರು 17 ಜನ ವಾಪಸ್ ಬಂದಿದ್ದಾರೆ. 30ಕ್ಕೂ ಹೆಚ್ಚು ವಾಲಿಬಾಲ್ ಆಟಗಾರರನ್ನು ವಾಪಸ್ ಕರೆತರಲಾಗಿದೆ. ಯಾರಿಗೂ ತೊಂದರೆ ಆಗದಂತೆ 150-160 ಜನರನ್ನು ರಕ್ಷಣೆ ಮಾಡಲಾಗಿದೆ. ನನ್ನ ಮಾಹಿತಿ ಪ್ರಕಾರ ಯಾರಿಗೂ ತೊಂದರೆಯಾಗಿಲ್ಲ ಎಂದರು. ಇದನ್ನೂ ಓದಿ: ಪಶು ಸಂಗೋಪನಾ ಸಚಿವರನ್ನು ಮೆಂಟಲ್ ಆಸ್ಪತ್ರೆ ದಾಖಲಿಸಿ ಚೆಕ್ ಮಾಡಿಸ್ಬೇಕು: ಪ್ರಭು ಚವ್ಹಾಣ್ ಕಿಡಿ

  • ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡ: ಹುಬ್ಬಳ್ಳಿ (Hubballi) ಹಾಗೂ ಧಾರವಾಡದ (Dharwad) ಜನತೆಯನ್ನು ಬೆಚ್ಚಿ ಬೀಳಿಸಿದ್ದ ಕಮಲಾಪುರದ (Kamalapur) ಜೋಡಿ ಕೊಲೆಗೆ (Murder) ಪಿಸ್ತೂಲ್ ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರೌಡಿಶೀಟರ್ ಮಂಜು ಸಾವಂತ ಎಂದು ಗುರುತಿಸಲಾಗಿದೆ. ಇದುವರೆಗೂ ಪ್ರಕರಣದಲ್ಲಿ ಒಟ್ಟು 7 ಅರೋಪಿಗಳನ್ನು ಬಂಧಿಸಲಾಗಿತ್ತು. ಈತನ ಬಂಧನದಿಂದಾಗಿ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಕಳೆದ ಮೇ 25 ರಂದು ಹಣದ ವಿಚಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ (Real Estate) ಮಹ್ಮದ್ ಕುಡಚಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ವೇಳೆ ಇನ್ನೋರ್ವ ಗಣೇಶ ಎಂಬಾತ ಕೂಡ ಸಾವಿಗೀಡಾಗಿದ್ದ. ನಂತರ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಂಜು ಸಾವಂತ ಬಳಿ ಪಿಸ್ತೂಲ್ ಪಡೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಉರುಳಿಸಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ

  • ಗಾಳಿಯ ಹೊಡೆತಕ್ಕೆ ಕಿತ್ತೇ ಹೋಯ್ತು ಟೋಲ್ ಗೇಟ್‌ನ ಮೇಲ್ಛಾವಣಿ

    ಗಾಳಿಯ ಹೊಡೆತಕ್ಕೆ ಕಿತ್ತೇ ಹೋಯ್ತು ಟೋಲ್ ಗೇಟ್‌ನ ಮೇಲ್ಛಾವಣಿ

    ಧಾರವಾಡ: ತಾಲೂಕಿನ ಕೆಲವು ಕಡೆಗಳಲ್ಲಿ ಭಾರೀ ಗಾಳಿಯ (Wind) ಕಾರಣ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್‌ನ (Toll Gate) ಮೇಲ್ಛಾವಣಿ (Rooftop) ಕಿತ್ತು ಹೋಗಿರುವ ಘಟನೆ ಮರೇವಾಡ ರಸ್ತೆಯಲ್ಲಿ ಸಂಭವಿಸಿದೆ.

    ಸಂಜೆ ಹೊತ್ತಿಗೆ ಧಾರವಾಡ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾರೀ ಗಾಳಿ ಎದ್ದಿದೆ. ಈ ವೇಳೆ ಟೋಲ್ ಗೆಟ್‌ನ ತಗಡಿನ ಮೇಲ್ಛಾವಣಿ ಕಿತ್ತು ಹೋಗಿದೆ. ಕಬ್ಬಿಣದ ರಾಡ್ ಸಮೇತ ತಗಡುಗಳು ಹೊಲದಲ್ಲಿ ಹಾರಿ ಬಿದ್ದಿವೆ. ಗಾಳಿಯ ರಭಸಕ್ಕೆ ಟೋಲ್ ಗೇಟ್ ಹತ್ತಿರವೇ ಇದ್ದ ಕೆಲ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ

    ತಗಡಿನ ಮೇಲ್ಛಾವಣಿ ಹಾರಿ ಹೋಗುವ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಕೂಡ ಒಳಗಡೆಯೇ ಇದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ ಜಿಂಕೆ ಕೊಂಬು ಸಮೇತ 4.75 ಕೋಟಿ ರೂ. ಆಸ್ತಿ ಪತ್ತೆ

  • ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಶುಭ ಸಂಕೇತ: ಕಾಶೀ ಜಗದ್ಗುರು

    ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಶುಭ ಸಂಕೇತ: ಕಾಶೀ ಜಗದ್ಗುರು

    ಧಾರವಾಡ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹೊಸ ಸಂಸತ್ ಭವನ (New Parliament) ಉದ್ಘಾಟನೆಯಾಗಿದ್ದು, ಇದು ಇಡೀ ದೇಶವೇ ಹೆಮ್ಮೆ ಪಡುವಂತಹ ವಿಷಯ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಹೇಳಿದರು.

    ಧಾರವಾಡ (Dharwad) ದಲ್ಲಿ ಮಾತನಾಡಿದ ಅವರು, ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಹೋದರು. ಆಗ ಅಧಿಕಾರ ಹಸ್ತಾಂತರ ಮಾಡಿದ್ದರು. ಆ ಸಂದರ್ಭದಲ್ಲಿ ನಂದಿ ಲಾಂಛಿತ ಸುವರ್ಣ ದಂಡ ಕೊಟ್ಟಿದ್ದರಂತೆ. ಅದು ಈಗ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಅದು ಯಾರಿಗೂ ಗೊತ್ತಿರಲಿಲ್ಲ ಎಂದರು.

    ಇದೇ ವೇಳೆ ಧರ್ಮ ಪ್ರತಿಯೊಬ್ಬ ರಾಜನಿಗೂ ಅವಶ್ಯವಾಗಿರಬೇಕು ಎಂದ ಅವರು, ಹಿಂದಿನ ಕಾಲದಲ್ಲಿ ಪ್ರತಿ ರಾಜರಿಗೂ ಧರ್ಮ ಗುರು ಇರುತ್ತಿದ್ದರು. ರಾಜ ಸಿಂಹಾಸನವೇರಿ “ಅಹಂ ಅದಂಡಹ್ಯ” ಎನ್ನುತ್ತಿದ್ದನು. ನನ್ನ ಮೇಲೆ ಯಾವ ದಂಡನೆ ಇರುವುದಿಲ್ಲ ಎನ್ನುತ್ತಿದ್ದರು. ನಾನು ಎಲ್ಲರನ್ನೂ ದಂಡಿಸುವವನು ಎನ್ನುತ್ತಿದ್ದನು ಎಂದು ತಿಳಿಸಿದರು.

    ಆಗ ಗುರುಗಳು ಎದ್ದು ನಿಂತು ತಮ್ಮ ಕೈಯಲ್ಲಿರುವ ಧರ್ಮ ದಂಡ ತೋರಿಸುತ್ತಿದ್ದರು. ನಿನ್ನ ಮೇಲೆಯೂ ಧರ್ಮದ ದಂಡ ಇರುತ್ತದೆ ಎಂದು ಹೇಳುತ್ತಿದ್ದರು. ಅದನ್ನು ಮೀರಿ ಧರ್ಮ ಮಾರ್ಗ ಬಿಟ್ಟರೆ ಧರ್ಮ ಶಿಕ್ಷೆ ಕೊಡುತ್ತದೆ ಎನ್ನುತ್ತಿದ್ದರು. ಅಂತಹ ಒಂದು ಧರ್ಮ ದಂಡ (Sengol) ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಆಗಿದೆ ಇದು ಶುಭ ಸಂಕೇತ ಎಂದು ಅವರು ಹೇಳಿದರು. ಇದನ್ನೂ ಓದಿ: ದೇಶವೇ ಮೊದಲು ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿ: ನರೇಂದ್ರ ಮೋದಿ ಕರೆ

    ಕಾಶೀ ಪೀಠ ಮಾತ್ರವಲ್ಲ, ಇಡೀ ವಿಶ್ವವೇ ಹೆಮ್ಮೆ ಪಡುವ ನಾಯಕ ಮೋದಿ (Narendra Modi), ಈಗಾಗಲೇ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಕಾಶೀ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಆಗಿದೆ ಎಂದ ಅವರು, ಮಹಾಕಾಳೇಶ್ವರ ಮಂದಿರ ಜೀರ್ಣೋದ್ಧಾರ ಆಗಿದೆ. ಅಯೋಧ್ಯೆ ರಾಮಮಂದಿರ ಜೀರ್ಣೋದ್ಧಾರ ಆಗುತ್ತಿದೆ. ಇದೆಲ್ಲವೂ ದೇಶದ ಹಿತದೃಷ್ಟಿಯಿಂದ ಆಗುತ್ತಿವೆ ಎಂದರು.

    ನಮ್ಮ ಸಂಸದೀಯ ಕ್ಷೇತ್ರದಿಂದ ಚುನಾಯಿತ ಆದವರು ಪ್ರಧಾನಿ ನರೇಂದ್ರ ಮೋದಿಯವರು, ಮೋದಿಯವರು ನಮ್ಮ ಗುರುಕುಲದ ಶತಾಬ್ದಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಸಿದ್ಧಾಂತ ಶಿಖಾಮಣಿ ಬಿಡುಗಡೆ ಮಾಡಿದ್ದರು ಎಂದ ಶ್ರೀಗಳು, ಸನಾತನ ವೀರಶೈವ ಧರ್ಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಶ್ರೀಗಳು ತಿಳಿಸಿದರು.

  • ಕಳ್ಳತನವಾಗಿದ್ದ 70 ಮೊಬೈಲ್‍ಗಳನ್ನ ಪತ್ತೆಹಚ್ಚಿ ಕಳೆದುಕೊಂಡವರಿಗೆ ವಾಪಸ್ – ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

    ಕಳ್ಳತನವಾಗಿದ್ದ 70 ಮೊಬೈಲ್‍ಗಳನ್ನ ಪತ್ತೆಹಚ್ಚಿ ಕಳೆದುಕೊಂಡವರಿಗೆ ವಾಪಸ್ – ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

    ಧಾರವಾಡ: ಹುಬ್ಬಳ್ಳಿ (Hubballi) ಹಾಗೂ ಧಾರವಾಡ (Dharwad) ಪೊಲೀಸರು 20 ಲಕ್ಷ ರೂ. ಮೌಲ್ಯದ 70 ಮೊಬೈಲ್‍ಗಳನ್ನು (Mobile) ಪತ್ತೆ ಮಾಡಿ ಅವುಗಳನ್ನು ಕಳೆದುಕೊಂಡವರಿಗೆ ಶನಿವಾರ ಹಸ್ತಾಂತರಿಸಿದ್ದಾರೆ.

    ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ವಿವಿಧ ಕಡೆಗಳಿಂದ ಮೊಬೈಲ್ ಕಳೆದುಕೊಂಡಿರುವ ದೂರುಗಳು ಬಂದಿದ್ದವು. ತಕ್ಷಣ ಕಾರ್ಯ ಪ್ರವೃತ್ತರಾಗಿದ್ದ ಪೊಲೀಸರು ಸುಮಾರು 20 ಲಕ್ಷ ರೂ. ಮೌಲ್ಯದ 70 ಮೊಬೈಲ್‍ಗಳನ್ನು ಪತ್ತೆ ಮಾಡಿದ್ದರು. ಅವುಗಳನ್ನು ಧಾರವಾಡದ ರಂಗಾಯಣದಲ್ಲಿ (Rangayana) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಜನರಿಗೆ ತಲುಪಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನಕ್ಕೆ ತಂದರೆ ಬಿಜೆಪಿಯ ಅಸ್ತಿತ್ವವೇ ಕಳೆದುಹೋಗುತ್ತದೆ: ಈಶ್ವರ ಖಂಡ್ರೆ

    ಅವಳಿನಗರದ ಪೊಲೀಸರು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಬಾರಿ ಮೊಬೈಲ್ ಕಳೆದುಕೊಂಡವರಿಗೆ ಮರಳಿ ತಲುಪಿಸಿದ್ದಾರೆ. ಈ ಮೂಲಕ ಜನಸ್ನೇಹಿ ಪೊಲೀಸರು ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ