Tag: ಧಾರವಾಡ

  • ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ಬೆಳಗಾವಿ: ಧಾರವಾಡ-ಬೆಳಗಾವಿ (Dharwada -Belagavi) ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ (Santosh Lad) ಕಾರಣ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ದೂರಿದ್ದಾರೆ.

    ವಿವಿಧ ರೈಲ್ವೇ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ಬೆಳಗಾವಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಕಾರಣ ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

    ಹುಬ್ಬಳ್ಳಿಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಈಗಾಗಲೇ ಎರಡು, ಮೂರು ಬಾರಿ ನಾನು ಮಾತಾಡಿದ್ದೇನೆ. ನಾನು ಎಷ್ಟು ಸಲ ಸಂಪರ್ಕ ಮಾಡಿದರೂ ಸಂತೋಷ್‌ ಲಾಡ್ ಸ್ಪಂದನೆ ಮಾಡುತ್ತಿಲ್ಲ. ನಾನು ಮಾತ್ರವಲ್ಲ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅವರು ಕೂಡ ಮಾತಾಡಿದ್ದಾರೆ. ಇನ್ನೊಂದು ಬಾರಿ ನಾನೇ ಅವರ ಜೊತೆ ಮಾತನಾಡುತ್ತೇನೆ. ಬೆಳಗಾವಿಯಲ್ಲಿ ಈಗಾಗಲೇ ನೂರರಷ್ಟು ಭೂಸ್ವಾಧೀನವಾಗಿದೆ. ಸಂತೋಷ್‌ ಲಾಡ್‌ ಯಾಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸ್ಪಂದನೆ ಮಾಡದೇ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಯೋಜನೆಗೆ ಈಗಾಗಲೇ 937ಕೋಟಿ ರೂ. ಹಣ ಮೀಸಲಿಡಲಾಗಿದೆ. ಸಂತೋಷ್ ಲಾಡ್‌ ಇನ್ನು ಬೆಳೆಯುತ್ತಿರುವ ವ್ಯಕ್ತಿ. ನಾನೇ ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯನವರ ಜೊತೆಗೆ ಮಾತಾಡಿದ್ದೇನೆ. ಧಾರವಾಡ ಜಿಲ್ಲಾಧಿಕಾರಿ ಜೊತೆ ಜೊತೆಗೆ ಹತ್ತಾರು ಬಾರಿ ಮಾತಾಡಿದ್ದೇನೆ. ಇಂದು ಧಾರವಾಡ ಡಿಸಿ ಸಿಕ್ಕಾಗ ನನ್ನದೇ ಭಾಷೆಯಲ್ಲಿ ಮಾತಾಡಿದ್ದೇನೆ ಎಂದರು.

    ಯಾವುದೇ ಕಾರಣಕ್ಕೂ ಯೋಜನೆಯನ್ನ ನಿಲ್ಲಿಸುವುದಿಲ್ಲ. ಬೇರೆ ರಾಜ್ಯದಲ್ಲಿ ರೈಲ್ವೇ ಯೋಜನೆಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದರೆ ನಮ್ಮಲ್ಲಿ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎನ್ನುವುದನ್ನು ರಾಜ್ಯ ಸರ್ಕಾರ ತಿಳಿಸಬೇಕು. ಕರ್ನಾಟಕದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸದ ಕಡೆ ನೋಡುತ್ತಿಲ್ಲ. ಬೇರೆ ಕೆಲಸದಲ್ಲಿ ತಲ್ಲಿನರಾಗಿದ್ದಾರೆ ಎಂದು ಸಿಟ್ಟು ಹೊರಹಾಕಿದರು.

    ಇಂದು ಬೆಳಗಾವಿ, ಖಾನಾಪುರ ಸೇರಿ ಹಲವು ಕಡೆ ಮೇಲ್ಸೆತುವೆ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದೇವೆ. ದೇಶದಲ್ಲಿ ರೇಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಕನಸಿನಂತೆ 2047 ವಿಕಸಿತ ಭಾರತದ ಕಡೆ ಹೆಜ್ಜೆ ಇಡುತ್ತಿದ್ದೇವೆ ಎಂದರು.

    ಸವದತ್ತಿ ರಾಮದುರ್ಗ ನಡುವಿನ ಹೊಸ ರೈಲಿಗೆ ಬೇಡಿಕೆಯಿದ್ದು ಪರಿಶೀಲನೆ ಮಾಡುತ್ತೇವೆ. ರೈಲು ಸಂಪರ್ಕ ಇಲ್ಲದ ರಾಜ್ಯಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಇಡೀ ದೇಶ ಬದಲಾವಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಕೆಲಸ ಮಾಡ್ತಿದ್ದಾರೆ ಎಂದು ಸೋಮಣ್ಣ ಹೇಳಿದರು.

  • ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು (Interim bail) ಮಂಜೂರು ಮಾಡಿದೆ.

    ಈ ಹಿಂದೆ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ವಿನಯ್ ಕುಲಕರ್ಣಿ, ಜಾಮೀನಿನ ಮೇಲೆ ಹೊರ ಬಂದು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯ ಇವರ ಜಾಮೀನು ರದ್ದು ಮಾಡಿದ್ದರಿಂದ ಮರಳಿ ಅವರು ಪರಪ್ಪನ ಅಗ್ರಹಾರ ಸೇರಬೇಕಾಯಿತು. ಈಗ ತಮ್ಮ ಮಗ ಹೇಮಂತ್ ಅವರಿಗೆ ಅಪಘಾತವಾಗಿದ್ದರಿಂದ ಆತನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುವುದರಿಂದ ತಮಗೆ ಜಾಮೀನು ನೀಡಬೇಕು ಎಂದು ಕೋರಿ ಶಾಸಕ ವಿನಯ್ ಅವರು ಮರಳಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೇವಲ ಎರಡು ದಿನಗಳವರೆಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಮರಳಿ ವಿನಯ್ ಕುಲಕರ್ಣಿ ಅವರು ಸೆ.11ರ ಸಂಜೆ 5ಕ್ಕೆ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಮರಳಿ ಜೈಲು ಸೇರಬೇಕಿದೆ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ

    ಸದ್ಯ ಎರಡು ದಿನಗಳ ಕಾಲ ಜಾಮೀನು ಸಿಕ್ಕಿರುವ ವಿನಯ್ ಕುಲಕರ್ಣಿ ಅವರನ್ನು ಮಂಗಳವಾರ ಸಂಜೆಯೇ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುವುದರಿಂದ ವಿನಯ್ ಅವರು ಬೆಂಗಳೂರಿನಲ್ಲೇ ಉಳಿಯಬೇಕಾಗಿದೆ. ಜಾಮೀನು ಸಿಕ್ಕಿರುವ ಈ ಎರಡು ದಿನಗಳ ಅವಧಿಯಲ್ಲಿ ಯಾವುದೇ ಸಭೆ ಮಾಡುವಂತಿಲ್ಲ ಎಂದು ಶಾಸಕ ವಿನಯ್‌ಗೆ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನೂ ಓದಿ: ಸರ್ಕಾರ ಬುಡಮೇಲು ಮಾಡಲು ಅಮಿತ್ ಶಾ ಸಲಹೆ – ಬಿಜೆಪಿ ನಾಯಕರ ದೆಹಲಿ ಭೇಟಿಗೆ ಹರಿಪ್ರಸಾದ್ ಲೇವಡಿ

  • ಗಣೇಶ ಮೆರವಣಿಗೆ ವೇಳೆ ಹುಚ್ಚಾಟ; ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಲಘು ಲಾಠಿಚಾರ್ಜ್

    ಗಣೇಶ ಮೆರವಣಿಗೆ ವೇಳೆ ಹುಚ್ಚಾಟ; ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಲಘು ಲಾಠಿಚಾರ್ಜ್

    ಧಾರವಾಡ: ಗಣೇಶ ಮೆರವಣಿಗೆ ವೇಳೆ ಜನರ ಹುಚ್ಚಾಟವನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಪರಿಣಾಮ ಪೊಲೀಸರು ಲಘು ಲಾಠಿಚಾರ್ಜ್ ಮಾಡಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಸಂಜೆ ಗ್ರಾಮದ ಎರಡು ಓಣಿಯವರು ಗಣೇಶ ವಿಸರ್ಜನೆಯನ್ನು ಏಕಕಾಲಕ್ಕೆ ಆರಂಭ ಮಾಡಿದ್ದರು. ಈ ಮೆರವಣಿಗೆ ವೇಳೆ ಎರಡೂ ಓಣಿಯವರು ಎದುರು ಬದುರು ಡಿಜೆ ಹಾಕಿ ಹುಚ್ಚೆದು ಕುಣಿಯಲು ಆರಂಭಿಸಿದ್ದರು. ಆಗ ಪೊಲೀಸರು ಎರಡು ಡಿಜೆಯನ್ನು ಬೇರೆ ಬೇರೆ ಕಡೆ ತಿರುಗಿಸಲು ಯತ್ನಿಸಿದ್ದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

     ಆದರೆ ಅಲ್ಲಿದ್ದ ಜನರು ಎರಡು ಡಿಜೆಯನ್ನು ಬೇರೆ ಕಡೆ ತಿರುಗಿಸದಂತೆ ಒತ್ತಾಯಿಸಿದ್ದರು. ಜನರ ನಿಯಂತ್ರಣ ಮಾಡಲು ಪ್ರಯತ್ನಿಸಿದಾಗ ಪೊಲೀಸರಿಗೆ ಅವಾಜ್ ಹಾಕಿ, ಜನರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು.

    ಇದರಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿ, ಶಾಂತಿಯುತವಾಗಿ ಗಣೇಶನ ವಿಸರ್ಜನೆ ಮಾಡಿಸಿದರು.

  • ಕಲಘಟಗಿಯ 107 ಕೆರೆಗಳಿಗೆ ಬೇಡ್ತಿ ನದಿ ನೀರು – 179.50 ಕೋಟಿ ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು

    ಕಲಘಟಗಿಯ 107 ಕೆರೆಗಳಿಗೆ ಬೇಡ್ತಿ ನದಿ ನೀರು – 179.50 ಕೋಟಿ ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು

    ಹುಬ್ಬಳ್ಳಿ: ಧಾರವಾಡ (Dharwad) ಜಿಲ್ಲೆಯ ಕಲಘಟಗಿ (Kalaghtagi) ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ (Bedti River) ನೀರು ತುಂಬಿಸುವ 179.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಪುಟದ ಈ ನಿರ್ಣಯಕ್ಕೆ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲಘಟಗಿ ವಿಧಾಸಭಾ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಭಾಗದ ಅನ್ನದಾತರ ಬಹುದಿನಗಳ ಬೇಡಿಕೆಯಾಗಿದ್ದ ಹಾಗೂ ಸಂತೋಷ್ ಲಾಡ್ (Santosh lad) ಅವರ ಕನಸಾದ ಈ ಏತ ನೀರಾವರಿ ಯೋಜನೆ ಈಗ ಸಾಕಾರಗೊಳ್ಳುತ್ತಿದ್ದು, ಲಾಡ್ ಅವರ ನಿರಂತರ ಶ್ರಮ ಹಾಗೂ ಪ್ರಯತ್ನ ಫಲ ಕೊಟ್ಟಂತಾಗಿದೆ. ಈ ನೀರೆತ್ತುವ ಯೋಜನೆಗೆ ಇದೀಗ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆದು ವೇಗ ಸಿಕ್ಕಂತಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಶಾಶ್ವತ ನೀರಾವರಿ ಯೋಜನೆ ಇದಾಗಿದ್ದು, ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಈ ಕೆರೆ ತುಂಬಿಸುವ ಯೋಜನೆಯಿಂದ ಅನುಕೂಲವಾಗಲಿದೆ.ಇದನ್ನೂ ಓದಿ: ಗಣೇಶ ವಿಸರ್ಜನೆ ಭದ್ರತೆಗೆ ತೆರಳಿದ್ದ ಪೇದೆ ಹೃದಯಾಘಾತಕ್ಕೆ ಬಲಿ

    ಕೇವಲ ಕಲಘಟಗಿ ತಾಲೂಕು ಮಾತ್ರವಲ್ಲದೆ ಧಾರವಾಡ ಜಿಲ್ಲೆಯ ಇತರ ತಾಲೂಕಿನಲ್ಲಿನ ಕೆರೆಗಳಿಗೂ ಬೇಡ್ತಿ ನದಿ ನೀರು ಹರಿಸುವ ಮಹದಾಸೆ ಸಚಿವ ಸಂತೋಷ್ ಲಾಡ್ ಅವರದ್ದಾಗಿತ್ತು. ಇದೀಗ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ 179.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು ಎಂದಿದೆ.

  • ಧಾರವಾಡ | ಇಂದಿನಿಂದ ಮೂರು ದಿನ ಮದ್ಯ ಮಾರಾಟ ಬಂದ್

    ಧಾರವಾಡ | ಇಂದಿನಿಂದ ಮೂರು ದಿನ ಮದ್ಯ ಮಾರಾಟ ಬಂದ್

    ಧಾರವಾಡ: ಇಂದಿನಿಂದ (ಸೆ.4) ಮೂರು ದಿನ ಧಾರವಾಡ (Dharwad) ಜಿಲ್ಲೆಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

    ಗುರುವಾರದಿಂದ (ಸೆ.4) ಶನಿವಾರದವರೆಗೆ (ಸೆ.6) ಮೂರು ದಿನಗಳ ಕಾಲ ಧಾರವಾಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಗುರುವಾರ (ಸೆ.4) 9ನೇ ದಿನದ ಗಣೇಶನ ಮೂರ್ತಿಗಳ ವಿಸರ್ಜನೆ, ಶುಕ್ರವಾರ (ಸೆ.5) ಈದ್ ಮಿಲಾದ್ ಹಬ್ಬ ಹಾಗೂ ಶನಿವಾರ (ಸೆ.6) 11ನೇ ದಿನದ ಗಣೇಶನ ಮೂರ್ತಿಗಳು ವಿಸರ್ಜನೆಯಾಗಲಿವೆ. ಈ ಹಿನ್ನೆಲೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಪೂರ್ಣ ಮದ್ಯ ಮಾರಾಟ ಬಂದ್ ಆಗಲಿದೆ.ಇದನ್ನೂ ಓದಿ: ಸೆ.7ಕ್ಕೆ ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರ-2025 – ರಾಜಧಾನಿಯಲ್ಲಿ ತುಳುವರ ಅತಿದೊಡ್ಡ ಹಬ್ಬ

    ಒಟ್ಟು ಮೂರು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದ್ದು, ಮದ್ಯಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ.

  • ಧಾರಾಕಾರ ಮಳೆ – ಆ.20ರಂದು ಯಾವ್ಯಾವ ಜಿಲ್ಲೆಯ ಶಾಲೆಗೆ ರಜೆ?

    ಧಾರಾಕಾರ ಮಳೆ – ಆ.20ರಂದು ಯಾವ್ಯಾವ ಜಿಲ್ಲೆಯ ಶಾಲೆಗೆ ರಜೆ?

    ಉತ್ತರ ಕನ್ನಡ/ಬೆಳಗಾವಿ/ಧಾರವಾಡ: ರಾಜ್ಯದ ಕೆಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಉತ್ತರ ಕನ್ನಡ:
    ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರೆದ ಹಿನ್ನೆಲೆ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೋಯಿಡಾ ಹಾಗೂ ಶಿರಸಿ ತಾಲೂಕಿಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ: ಡಿಕೆಶಿ

    ಧಾರವಾಡ:
    ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಆ.20ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಹಾಗೂ ಶಾಲಾ-ಕಾಲೇಜು ಜೊತೆಗೆ ಪದವಿ ಮಹಾವಿದ್ಯಾಲಯಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.

    ಬೆಳಗಾವಿ:
    ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಎಲ್ಲಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲೆಗೆ ಆ.20ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

  • ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

    ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

    ಧಾರವಾಡ: ಥಿನ್ನರ್ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ.

    ಚಂದ್ರಕಾಂತ್ ಮಾಶ್ಯಾಳ ಮೃತ ದುರ್ದೈವಿ. ಧಾರವಾಡದ (Dharwad) ಸಂತೋಷ್ ನಗರದಲ್ಲಿ ಮನೆಯಲ್ಲಿ ಕಳೆದ ಶುಕ್ರವಾರ (ಆ.15) ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿ ಇಡಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಥಿನ್ನರ್ ಬಾಟಲಿಯನ್ನು ಕೆಡವಿದ್ದ. ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಾಲಕನ ದೇಹ ಸುಟ್ಟು ಹೋಗಿತ್ತು. ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್‌ಗೆ ಸಹ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಸವದತ್ತಿ ಕಾಡಿನಲ್ಲೊಬ್ಬ ಆಧುನಿಕ ಟಾರ್ಜನ್ – ಸೊಪ್ಪುಸೆದೆಯೇ ಈತನಿಗೆ ಆಹಾರ!

    ಸವದತ್ತಿ ಕಾಡಿನಲ್ಲೊಬ್ಬ ಆಧುನಿಕ ಟಾರ್ಜನ್ – ಸೊಪ್ಪುಸೆದೆಯೇ ಈತನಿಗೆ ಆಹಾರ!

    – ಕಳೆದ 10 ವರ್ಷದಿಂದ ಕಾಡಿನಲ್ಲೇ ಬದುಕು

    ಧಾರವಾಡ: ನಿಮಗೆಲ್ಲಾ ಟಾರ್ಜನ್ ಕಥೆ ಗೊತ್ತಿರಬೇಕು. ಆತ ಅರಣ್ಯದಲ್ಲೇ ತನ್ನ ಜೀವನ ಕಳೆದಿದ್ದ. ಪ್ರಾಣಿಗಳಂತೆಯೇ ಜೀವನ ಸಾಗಿಸ್ತಿದ್ದ. ಅರಣ್ಯ ಸಿಕ್ಕ ಹಣ್ಣುಹಂಪಲನ್ನೇ ತಿಂದು ಜೀವನ ನಡೆಸ್ತಿದ್ದ. ಇಂತದ್ದೇ ಒಬ್ಬ ಆಧುನಿಕ ಯುಗದ ಟಾರ್ಜನ್ (Tarzan) ಸವದತ್ತಿಯಲ್ಲಿದ್ದಾನೆ. ಈತ ಕಳೆದ 10 ವರ್ಷಗಳಿಂದ ಊಟನೇ ಮಾಡಿಲ್ಲ. ಬದಲಾಗಿ ಕಾಡಿನಲ್ಲಿ ಸಿಗುವ ಸೊಪ್ಪುಸೆದೆಯನ್ನೇ ತಿನ್ನುತ್ತಾ ಬದುಕುತ್ತಿದ್ದಾನೆ.

    ಬೆಳಗಾವಿ (Belagavi) ಜಿಲ್ಲೆಯ ಸವದತ್ತಿಯ (Savadatti) ಗುಡ್ಡಗಾಡು ಪ್ರದೇಶದಲ್ಲಿ ಬುಡನ್‌ಖಾನ್ (34) ಎಂಬ ವ್ಯಕ್ತಿ ಕಳೆದ 10 ವರ್ಷಗಳಿಂದ ಕಾಡಿನಲ್ಲೇ ವಾಸವಿದ್ದಾನೆ. ಮೊದಲು ಸಾಮಾನ್ಯ ಜನರಂತೆ ಇದ್ದ ಈತ, 10 ವರ್ಷದ ಹಿಂದೆ ತನ್ನ ಊರುಗೋಳ ಗ್ರಾಮ ಬಿಟ್ಟು ಅರಣ್ಯ ಸೇರಿದ್ದಾನೆ.

    ಈ ಬುಡನ್‌ಖಾನ್‌ನನ್ನು (BudanKhan) ಆಧುನಿಕ ಯುಗದ ಟಾರ್ಜನ್ ಅಂತಾನೂ ಕರೆಯಬಹುದು. ಯಾಕಂದ್ರೆ ಈತ ಊಟ ಮಾಡೊದನ್ನ ಬಿಟ್ಟು 10 ವರ್ಷ ಆಯ್ತು. ಮಂಗನಿಂದ ಮಾನವ ಅಂತಾರಲ್ಲ ಸದ್ಯ ಹಾಗೆಯೇ ಈತ ವಾಸವಿದ್ದಾನೆ. ಬೆಳಗ್ಗೆ ಎದ್ದರೆ ಸೊಪ್ಪು ತಿಂತಾನೆ. ಈತನಿಗೆ ಮಧ್ಯಾಹ್ನ, ರಾತ್ರಿಯ ಊಟವೂ ಇದೆ. ಮಜಾ ಅಂದರೆ ಈತ ಮಂಗಗಳನ್ನ ನೋಡಿ ಸೊಪ್ಪನ್ನು ತಿನ್ನೊದನ್ನ ಕಲಿತಿದ್ದಾನಂತೆ. ಇನ್ನು ಜನರ ನಡುವೆ ಇದ್ದರೆ ನಿದ್ದೆನೇ ಬರಲ್ಲ ಅಂತೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲೇ ಮನೆ ಮಾಡಿಕೊಂಡು ಒಬ್ಬಂಟಿ ಜೀವನ ನಡೆಸುತಿದ್ದಾನೆ.

    ಇನ್ನು, 80 ನಮೂನೆಯ ಸೊಪ್ಪನ್ನು ತಿನ್ನುವ ಈತನಿಗೆ ರೋಗವೇ ಇಲ್ಲ. ಜನರಿಗೆ ಜ್ವರಾನೋ ಅಥವಾ ಏನಾದರು ನೋವು ಇದ್ದೇ ಇರುತ್ತವೆ. ಆದರೆ ಈ ಟಾರ್ಜನ್ ಮ್ಯಾನ್‌ಗೆ ಅದೇನೂ ಇಲ್ಲ. ಈತ ಪ್ಯಾಂಟ್ ಬಿಟ್ಟರೇ ಬೇರೆ ಏನೂ ಹಾಕಲ್ಲ. ಗುಡ್ಡದ ಬಂಡೆಗಳ ಮೇಲೆ ಓಡಾಡುತ್ತ ಜೀವನ ನಡೆಸುತ್ತಿರುವ ಈ ಬುಡನ್‌ಖಾನ್‌ಗೆ ಮದುವೆ ವಿಷಯ ತೆಗೆದರೆ ಸಾಕು, ಅವರ ಜೊತೆ ಮಾತಾಡೊದನ್ನೇ ಬಿಡ್ತಾನಂತೆ. ಇವರ ಸಹೋದರರು ಸಾಕಷ್ಟು ಬಾರಿ ಇವನನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಯಾವುದೇ ಫಲ ಕೊಟ್ಟಿಲ್ಲ.

    ಒಟ್ಟಾರೆ ಹೇಳುವುದಾದರೆ ಹೊಟ್ಟೆ ಇದ್ದರೆ, ಅದಕ್ಕಾಗಿ ಬಡದಾಡಬೇಕು. ಆದರೆ ಪ್ರಾಣಿಯಂತೆ ಸೊಪ್ಪು ತಿಂದು ಬದುಕುವವನಿಗೆ ಯಾವ ಚಿಂತೆ ಎನ್ನುವಂತೆ ಇದೆ ಈತನ ಕಥೆ. ಏನೇ ಇರಲಿ, ಈ ಆಧುನಿಕ ಯುಗದ ಟಾರ್ಜನ್‌ನನ್ನು ನೋಡೋದೇ ಒಂದು ಮಜಾ.

  • ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಧಾರವಾಡ: ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ ಹತ್ತಿಕೊಂಡು ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಧಾರವಾಡದ (Dharwad) ಕೆಲಗೇರಿಯ (Kelageri) ಸಂತೋಷ ನಗರದಲ್ಲಿ ನಡೆದಿದೆ.

    ಅಗಸ್ತ್ಯ ಮಾಶಾಳ್ (4) ಮೃತ ಬಾಲಕನೆಂದು ಗುರುತಿಸಲಾಗಿದೆ. ಮನೆಯಲ್ಲಿ ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿಗೆ ಇಡಲಾಗಿತ್ತು. ಅದರ ಪಕ್ಕದಲ್ಲೇ ಥಿನ್ನರ್ ಬಾಟಲಿ (Tinner Bottle) ಕೂಡ ಇತ್ತು. ಬಾಲಕ ಅಗಸ್ತ್ಯ ಆಟವಾಡುತ್ತ ಆ ಥಿನ್ನರ್ ಬಾಟಲಿಯ ಹತ್ತಿರ ಹೋಗಿ ಅದನ್ನು ಕೆಡವಿದ್ದಾನೆ. ತಕ್ಷಣವೇ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಸುಟ್ಟು ಹೋಗಿತ್ತು. ಇದನ್ನೂ ಓದಿ: ಬಲವಂತದ ಮತಾಂತರ, ಮೋಸದ ಮದ್ವೆ – ಪಾಕಿಸ್ತಾನದ ವ್ಯಕ್ತಿ ಹೈದರಾಬಾದ್‌ನಲ್ಲಿ ಅರೆಸ್ಟ್

    ಈ ಘಟನೆಯಲ್ಲಿ ಬಾಲಕನನ್ನು ಉಳಿಸಲು ಹೋದ ತಂದೆಗೂ ಗಾಯವಾಗಿದೆ. ಕೂಡಲೇ ಇಬ್ಬರನ್ನೂ ಕಿಮ್ಸ್ಗೆ ರವಾನಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಬೆಂಕಿ ಹತ್ತಿದ್ದ ವೇಳೆ ಮನೆಯಲ್ಲಿದ್ದವರು ಚೀರಾಡುತ್ತಿದ್ದ ಹಾಗೂ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡಿರುವ ಬಾಲಕ ತಂದೆಗೆ ಚಿಕಿತ್ಸೆ ಮುಂದುವರೆದಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬಿಜೆಪಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ: ಸಂತೋಷ್ ಲಾಡ್

    ಬಿಜೆಪಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ: ಸಂತೋಷ್ ಲಾಡ್

    ಧಾರವಾಡ: 2004 ರಿಂದ 2025 ರವರೆಗೆ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.

    ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಪ್ರಕರಣ ಸುಪ್ರೀಂಕೋರ್ಟ್ಗೆ ಹೋಗಿದೆ. 65 ಲಕ್ಷ ಮತಗಳು ಬಿಹಾರನಲ್ಲಿ (Bihar) ಎಸ್‌ಐಆರ್ ಮುಖಾಂತರ ಡಿಲಿಟ್ ಆಗಿವೆ. ಬಿಹಾರದಲ್ಲಿ 8 ಕೋಟಿ ಜನಸಂಖ್ಯೆ ಇದೆ. ಅಲ್ಲಿ 65 ಲಕ್ಷ ಮತ ಡಿಲೀಟ್ ಮಾಡಿದ್ದಾರೆ. ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇವೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಭಾರತೀಯರ ಹಕ್ಕಿಗಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಅವರು ಬಂದು ಮಾತನಾಡೋದು ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

    ನಮ್ಮ ಕಾಲದಲ್ಲಿ 25 ದಿನಗಳಲ್ಲಿ ಚುನಾವಣೆ ಮುಗಿಸುತ್ತಿದ್ದೆವು. ಇವರ ಕಾಲದಲ್ಲಿ 90 ದಿನಗಳವರೆಗೆ ಚುನಾವಣೆ ನಡೆಯುತ್ತಿವೆ. 2004 ರಿಂದ 2025 ರಲ್ಲಿ ಎಷ್ಟು ಟೆಕ್ನಾಲಾಜಿ ಚೇಂಜ್ ಆಗಿದೆ. ಆದರೆ ಇವತ್ತಿಗೂ ಬಿಜೆಪಿಯವರಿಗೆ ಡಿಜಿಟಲ್ ವೋಟರ್ ಲಿಸ್ಟ್ ಮಾಡಲು ಆಗುತ್ತಿಲ್ಲ. ಏನೋ ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ದಿನ ಬೆಳಗಾದರೆ ಬಿಜೆಪಿಯವರು ಇದನ್ನೇ ಹೇಳುತ್ತಾರೆ. ಒಂದು ಡಿಜಿಟಲ್ ಫಾರ್ಮೆಟ್‌ನಲ್ಲಿ ಮತದಾರರ ಪಟ್ಟಿ ಸಿದ್ಧ ಮಾಡಲು ಆಗುತ್ತಿಲ್ಲ. ಪ್ರಚಾರ ಗಿಟ್ಟಿಸಿಕೊಳ್ಳೋದು, ತಪ್ಪುಗಳನ್ಮು ಮುಚ್ಚಿ ಹಾಕಿಕೊಳ್ಳೋದು ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ದೇಶದಲ್ಲಿ 85% ರಷ್ಟು ಬಿಎ ಪದವೀಧರ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಯಾವುದೋ ಒಂದು ಮಹಿಳೆಗೆ 35 ವಯಸ್ಸಿಗೆ, ಇವರು ಮತದಾರ ಪಟ್ಟಿಯಲ್ಲಿ 124 ವಯಸ್ಸು ತೋರಿಸಿದ್ದಾರೆ. ನಾವು ಚುಣಾವಣೆ ಆಯೋಗದ ಕಡೆ ಬೆರಳು ಮಾಡಿ ತೋರಿಸಿದ್ರೆ ಬಿಜೆಪಿಯವರು ಯಾಕೆ ಮಧ್ಯೆ ಬರುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ
    ಚುನಾವಣಾ ಆಯೋಗ (Election Commission) ತಪ್ಪು ಮಾಡಿದೆ ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ದಾಖಲಾತಿಗಳನ್ನು ನೀಡಬೇಕು. ರಾಹುಲ್ ಗಾಂಧಿ ಅವರು ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಟೀಕೆ ಮಾಡಿದ್ರೆ, ಅದನ್ನೇ ಇವರು ಟೀಕೆ ಮಾಡುತ್ತಾರೆ. ಸುಪ್ರೀಂಕೋರ್ಟ್ಗೆ ಹೋಗಿ ಚುನಾವಣಾ ಆಯೋಗದವರು 65 ಲಕ್ಷ ವೋಟ್ ಡಿಲೀಟ್ ಆಗಿರುವ ಮಾಹಿತಿಯನ್ನು ನಿಮಗೂ ಕೊಡೋದಿಲ್ಲ ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

    ಇವತ್ತು ಸುಪ್ರೀಂಕೋರ್ಟ್ 65 ಲಕ್ಷ ಮತ ಡಿಲೀಟ್ ಆದ ಮಾಹಿತಿ 15 ದಿನಗಳೊಳಗಾಗಿ ಕೊಡಿ ಎಂದು ಕೇಳಿದೆ. ಇದು ಭಾರತ ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಗೆದ್ದಿರುವ ಮಾರ್ಜಿನ್ ನೋಡಿದ್ರೆ ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ಚುನಾವಣಾ ಆಯೋಗಕ್ಕೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಬಿಜೆಪಿ ಅವರೇ ಉತ್ತರ ಕೊಡಬೇಕು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್

    ಮಹಾರಾಷ್ಟ್ರದಲ್ಲಿ (Maharashtra) ಲೋಕಸಭಾ ಚುನಾವಣೆ ವೇಳೆ 32 ಲಕ್ಷ ಮತ ಸೇರ್ಪಡೆ ಆದವು, ವಿಧಾನಸಭೆಯಲ್ಲಿ 42 ಲಕ್ಷ ಮತ ಸೇರ್ಪಡೆ ಆದವು. 6 ತಿಂಗಳಲ್ಲಿ 42 ಲಕ್ಷ ಮತ ಹೆಚ್ಚಾದವು. ಇವರ ಲೆಕ್ಕದ ಪ್ರಕಾರ 5 ವರ್ಷದಲ್ಲಿ 2 ಕೋಟಿ ಮತ ಹೆಚ್ಚಾಗಬೇಕು. ಬಿಹಾರದಲ್ಲಿ ಇದನ್ನೇ ಡಿಲೀಟ್ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಮತ ಹೆಚ್ಚಳ ಮಾಡಿಲ್ಲ ಎಂದು ಹೇಳಿದ್ದಾರೆ.

    ಮೋದಿ ಅವರು ನಾವು ಅದನ್ನ ಮಾಡುತ್ತೇವೆ ಇದನ್ನ ಮಾಡುತ್ತೇವೆ ಎಂದು ಹೇಳುತ್ತಾರೆ. ನಾವು ಹೋಗೋಕಿಂತ ಮುಂಚೆ ಡ್ರೋಣ್ ಹೋಗುತ್ತೆ ಅಂತಾರೆ. ಮೆ ಕಬಿ ನಹಿ ಜಾವೂಂಗಾ, ಮೆ ಜಾನೆಸೆ ಪೆಹಲೆ ಡ್ರೋಣ್ ಜಾಕೆ ಆಯೇಗಾ ಅಂತಾರೆ. ಸ್ಯಾಟ್‌ಲೈಟ್ ಟೆಕ್ನಾಲಾಜಿ ಬಳಸಿ ರಸ್ತೆ ಮಾಡುತ್ತೇವೆ ಎಂದಿದ್ದರು. ಮೊದಲು ಡಿಜಿಟಲ್ ಆಗಿ ಒಂದು ವೋಟರ್ ಲಿಸ್ಟ್ ಕೊಡಿ ಸಾಕು. ನಮಗೂ ನಿಮ್ಮ ಆಟ ನೋಡಿ ಸಾಕಾಗಿದೆ ಎಂದಿದ್ದಾರೆ.