Tag: ಧಾರವಾಡ

  • ಕ್ಯಾಸಿನೋಗಾಗಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್

    ಕ್ಯಾಸಿನೋಗಾಗಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್

    ಬೆಂಗಳೂರು: ಕ್ಯಾಸಿನೋಗಾಗಿ ಕಳ್ಳತನ ಎಸಗುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮಾಗಡಿ ರಸ್ತೆ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರಿಂದ 5.45 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿ ಆಸೀಫ್ ಹಾಗೂ ಆತನ ಇಬ್ಬರೂ ಸಹಚರರನ್ನು ಬಂಧಿಸಲಾಗಿದೆ. ಆರೋಪಿಗಳು ಹಣಕ್ಕಾಗಿ ಮಾಗಡಿರಸ್ತೆಯ ಕಾರ್ಖಾನೆಯೊಂದರ ಕಚೇರಿಗೆ ನುಗ್ಗಿ ದೋಚಿದ್ದರು. ಕಳ್ಳತನ ಮಾಡಿದ್ದ ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಪೋಲಿ ಹುಡುಗರ ಹಾವಳಿ- ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಅಶ್ಲೀಲ ಬರಹ

    2017ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ವಿದ್ಯಾರಣ್ಯಪುರ ಪೊಲೀಸರಿಂದ ಅರೆಸ್ಟ್ ಆಗಿದ್ದ ಆಸೀಫ್ ಬಿಡುಗಡೆ ಬಳಿಕ ಊರು ಬಿಟ್ಟು ಹುಬ್ಬಳ್ಳಿ – ಧಾರವಾಡ ಸೇರಿದ್ದ. ಧಾರವಾಡದಲ್ಲಿ (Dharwad) ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಕ್ಯಾಸಿನೋ ಬಲೆಗೆ ಬಿದ್ದು ಹಣಕ್ಕಾಗಿ ಕಳ್ಳತನ ಎಸಗುತ್ತಿದ್ದರು. ಬಳಿಕ ಹುಬ್ಬಳ್ಳಿ ಪೊಲೀಸರಿಗೆ ಸಿಕ್ಕಿ ಜೈಲು ಸೇರಿದ್ದ ಆಸೀಫ್ ಆರು ವರ್ಷದ ನಂತರ ಬೆಂಗಳೂರಿಗೆ ಮರಳಿ ಬಂದಿದ್ದ.

    ತನ್ನ ಜೊತೆಗಾರರಾದ ಶಬೀರ್ ಹಾಗೂ ನೌಸದ್ ಜೊತೆಗೂಡಿ ಕಳ್ಳತನ ಎಸಗುತ್ತಿದ್ದ. ಈಗ ಮತ್ತೆ ಹಳೆಯ ಚಾಳಿ ಮುಂದುವರಿಸಿ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಒಗ್ಗಟ್ಟಿನ ರಣಕಹಳೆ- ಇಂದಿನಿಂದ 2 ದಿನ ವಿಪಕ್ಷಗಳ ಒಕ್ಕೂಟ ಸಭೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅನುಮತಿ ಕೊಟ್ರೆ ಕರ್ನಾಟಕವೇ ಹೊತ್ತಿ ಉರಿಯುತ್ತೆ – ಮುತಾಲಿಕ್‌ ಎಚ್ಚರಿಕೆ

    ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅನುಮತಿ ಕೊಟ್ರೆ ಕರ್ನಾಟಕವೇ ಹೊತ್ತಿ ಉರಿಯುತ್ತೆ – ಮುತಾಲಿಕ್‌ ಎಚ್ಚರಿಕೆ

    – ಹಿಂದೂ ವಿರೋಧಿ ಅನ್ನೋದು ಕಾಂಗ್ರೆಸ್‌ ರಕ್ತದ ಕಣಕಣದಲ್ಲೂ ಇದೆ
    – ನಮಾಜ್‌ಗೆ ಅನುಮತಿ ಕೊಟ್ರೆ, ವಿಧಾನಸೌಧದಲ್ಲಿ ದಿನಾ ಹನುಮಾನ್‌ ಚಾಲಿಸಾ ಪಠಿಸ್ತೇವೆ
    – ಶ್ರೀರಾಮಸೇನೆ ಮುಖ್ತಸ್ಥ ಪ್ರಮೋದ್‌ ಮುತಾಲಿಕ್‌ ಟೀಕೆ

    ಧಾರವಾಡ: ಕಾಂಗ್ರೆಸ್‌ ಸರ್ಕಾರ ವಿಧಾನಸೌಧದಲ್ಲಿ (Vidhana Soudha) ನಮಾಜ್‌ ಮಾಡಲು ಅನುಮತಿ ಕೊಟ್ರೆ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡ್ತೀವಿ, ಕರ್ನಾಟಕವೇ ಹೊತ್ತಿ ಉರಿಯುತ್ತೆ. ನಾವೂ ವಿಧಾನಸೌಧದಲ್ಲಿ ಪ್ರತಿದಿನ ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

    ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಅನ್ನೋದು ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ. ಕುರುಬರಹಳ್ಳಿಯ ಗೋ ಶಾಲೆ ಮಾಡಲು ಜಾಗ ನೀಡಲಾಗಿತ್ತು, ಕಾಂಗ್ರೆಸ್‌ ಸರ್ಕಾರ ಅದನ್ನೂ ತಡೆ ಹಿಡಿದಿದೆ ಎಂದು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಇದನ್ನೂ ಓದಿ: ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಗೋ ರಕ್ಷಣೆಗಾಗಿ ಬಿಜೆಪಿ (BJP) ಸರ್ಕಾರದಿಂದ ಜಮೀನು ಪಡೆದಿದ್ದು, ಯಾವುದೇ ಲಾಭಕ್ಕಾಗಿ ಅಲ್ಲ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಅದನ್ನ ಪಡೆದಿಲ್ಲ. ಈಗಿನ ಸರ್ಕಾರದಲ್ಲಿ ಪೂಜೆ ಮಾಡಲು ಸಹ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಟಿ. ನರಸೀಪುರದಲ್ಲಿ ದಲಿತ ಹಿಂದೂ ಯುವಕ ಬೆಳೆಯುತ್ತಾನೆ ಎಂಬ ಕಾರಣಕ್ಕೆ ಅವನನ್ನ ಹತ್ಯೆ ಮಾಡಲಾಗಿದೆ. ಹಿಂದೂ ವಿರೋಧಿ ಅನ್ನೂದು ಕಾಂಗ್ರೆಸ್‌ನ ರಕ್ತದ ಕಣಕಣದಲ್ಲೂ ಇದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ- ನಾಲ್ಕು ವಾಹನಗಳು ಜಖಂ

    ವಿಧಾನಸೌಧದಲ್ಲಿ ನಮಾಜ್‌ಗೆ ಅವಕಾಶ ನೀಡುವಂತೆ ಕೋರಿಕ್ಕೆ ಪ್ರತಿಕ್ರಿಯಿಸಿ, ಇಲ್ಲಿಯವರೆಗೂ ಹೇಗೆಲ್ಲಾ ದೇಶವನ್ನ ನುಂಗಿ ಹಾಕಿದ್ದಾರೆ ಅನ್ನೋದು ಗೊತ್ತಿದೆ. ವಿಧಾನಸೌಧ ಮಕ್ಕಾ ಮದೀನಾದಲ್ಲಿರುವ ಮಸೀದಿ ಅಲ್ಲ. ಅಲ್ಲಿ ಒಬ್ಬೊಬ್ಬರೋ ಒಂದೊಂದು ಕೇಳ್ತಾರೆ. ಸರ್ಕಾರ ಏನಾದರೂ ವಿಧಾನಸೌಧದಲ್ಲಿ ನಮಾಜ್‌ ಮಾಡೋಕೆ ಅವಕಾಶ ಕಲ್ಪಿಸಿಕೊಟ್ಟರೆ, ಪ್ರತಿದಿನ ನಾ ವು ಹನುಮಾನ್‌ ಚಾಲಿಸಾ ಪಠಣ ಮಾಡ್ತೇವೆ. ಜೊತೆಗೆ ದೊಡ್ಡ ಪ್ರಮಾಣದ ಹೋರಾಟ ಮಾಡ್ತೀವಿ, ಇಡೀ ಕರ್ನಾಟವೇ ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ: ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ

    ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ: ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ

    ಧಾರವಾಡ: ನಾವು ಹಿಂದೂ (Hindu) ವಿರೋಧಿಗಳಲ್ಲ, ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದು ಗದಗ (Gadag) ತೋಂಟದಾರ್ಯ ಮಠದ (Tontadarya Matt) ಡಾ. ಸಿದ್ದರಾಮ ಸ್ವಾಮೀಜಿ (Siddarama Swamiji) ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹಿಂದೂ ಜೀವನ ಪದ್ಧತಿಯಷ್ಟೇ. ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಎನಿಸಿಕೊಳ್ಳುತ್ತದೆ. ಧರ್ಮ ಎಂದರೆ ಅದರದ್ದೆಯಾದ ಸಂವಿಧಾನ ಇರಬೇಕು. ಒಂದೇ ದೇವರನ್ನು ಪೂಜಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಬಸವಣ್ಣನವರು ಇದರ ಸ್ಥಾಪಕರು ಎಂದಿದ್ದಾರೆ. ಇದನ್ನೂ ಓದಿ: ಜೈನಮುನಿಗಳ ಹಂತಕರ ವಿರುದ್ಧ ಕಠಿಣ ಕ್ರಮ: ಡಿ.ಕೆ ಶಿವಕುಮಾರ್

    ಲಿಂಗಾಯತ (Lingayat) ಧರ್ಮಕ್ಕೆ ವಚನ ಸಾಹಿತ್ಯವೇ ಸಂವಿಧಾನವಾಗಿದೆ. ನಾವೆಲ್ಲ ಇಷ್ಟಲಿಂಗವನ್ನು ಅರ್ಚಿಸುವಂತವರಾಗಿದ್ದೇವೆ. ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ, ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ನಿರ್ದಿಷ್ಟವಾದ ದೇವರಿಲ್ಲ. ಅಲ್ಲಿ 33 ಕೋಟಿ ದೇವರನ್ನು ಪೂಜಿಸುತ್ತಾರೆ. ಅದು ವೈದಿಕ ಧರ್ಮವಾಗಿದೆ. ಅದನ್ನೇ ಹಿಂದೂ ಧರ್ಮ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

    ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಇಲ್ಲ. ವೇದ, ಉಪನಿಷತ್‍ಗಳಲ್ಲಿ ಆ ಪದದ ಪ್ರಯೋಗ ಆಗಿಲ್ಲ. ಹೀಗಾಗಿ ನಾವು ಸ್ವತಂತ್ರ ಧರ್ಮ ಪಡೆದಲ್ಲಿ ಹಿಂದೂ ವಿರೋಧಿ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ: ಎಂಬಿ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮರನಾಥದಲ್ಲಿ ಭಾರೀ ಮಳೆ – ಸಂಕಷ್ಟದಲ್ಲಿ ಧಾರವಾಡದ ಐವರು ಯಾತ್ರಿಗಳು

    ಅಮರನಾಥದಲ್ಲಿ ಭಾರೀ ಮಳೆ – ಸಂಕಷ್ಟದಲ್ಲಿ ಧಾರವಾಡದ ಐವರು ಯಾತ್ರಿಗಳು

    ಧಾರವಾಡ: ಅಮರನಾಥದಲ್ಲಿ (Amarnath) ಭಾರೀ ಮಳೆಯಾಗುತ್ತಿದ್ದು (Heavy Rain) ಧಾರವಾಡದಿಂದ (Dharwada) ಹೋಗಿದ್ದ ಐವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಜುಲೈ 3 ರಂದು ಧಾರವಾಡದಿಂದ ಹೋಗಿದ್ದ ಐವರು ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

     

    ಸೇನಾ ಪಡೆಯುವರು (Indian Army) ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ (Panchtarni) ಎಂಬಲ್ಲಿ ಖಾಸಗಿಯವರ ಟೆಂಟ್‌ನಲ್ಲಿ ಇರಿಸಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನ ಕೂಡ ಇದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

     

    ವಿಪರೀತ ಮಳೆ ಸುರಿಯುತ್ತಿದ್ದು, ಟೆಂಟ್ ಬಿಟ್ಟು ಹೊರಗಡೆ ಬರಲಾರದ ಸ್ಥಿತಿ ಇದೆ. ಇಲ್ಲಿ ಆಹಾರಕ್ಕೆ ಸಮಸ್ಯೆ ಆಗುತ್ತಿದ್ದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರವಾಸಿಗರನ್ನು ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಕನ್ನಡಿಗರು ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ದಾವಣಗೆರೆ: ವಂದೇ ಭಾರತ್ (Vande Bharat) ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ದಾವಣಗೆರೆಯಲ್ಲಿ (Davanagere) ವಶಕ್ಕೆ ಪಡೆದಿದ್ದಾರೆ.

    ವಂದೇ ಭಾರತ್ ರೈಲು ಧಾರವಾಡದಿಂದ (Dharwad) ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭ ಇಬ್ಬರು ಮಕ್ಕಳು ರೈಲಿಗೆ ಕಲ್ಲು ಹೊಡೆದಿದ್ದು, ಕಲ್ಲಿನ ಹೊಡೆತಕ್ಕೆ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಆರ್‌ಪಿಎಫ್ (RPF) ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಎದುರೇ ಎಸ್‌ಎಸ್‌ಎಲ್‌ಸಿ ಹುಡುಗರ ಫೈಟ್ – ಎಸ್‌ಐ ಮೂಗಿಗೆ ಗಾಯ

    ಇವರಿಬ್ಬರು ದಾವಣಗೆರೆಯ ಎಸ್‌ಎಸ್ ನಗರ ಹಾಗೂ ಭಾಷಾ ನಗರದವರಾಗಿದ್ದು, ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್‌ಪಿಎಫ್ ಪೊಲೀಸರ ನೇತೃತ್ವದಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆದು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ನ್ಯಾಯಬೆಲೆ ಅಂಗಡಿ ಬಂದ್

    ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಈ ವಂದೇ ಭಾರತ್ ರೈಲನ್ನು ಲೋಕಾರ್ಪಣೆಗೊಳಿಸಿದ್ದರು. ಜುಲೈ 1ರ ಶನಿವಾರ 3:30ಕ್ಕೆ ಇಬ್ಬರು ಮಕ್ಕಳು ಈ ಕೃತ್ಯವೆಸಗಿದ್ದಾರೆ. ಘಟನೆಯ ಹಿನ್ನೆಲೆ ಆರ್‌ಪಿಎಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರವಿಸರ್ಜಿಸಿ ವಿಕೃತಿ- ದುಷ್ಕರ್ಮಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ

    ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ

    ಧಾರವಾಡ: ಮೊದಲು ಯಾರು ಬೇಕಾದರೂ ಎಲ್ಲಿ ಬೇಕಾದಲ್ಲಿ ಬಾಂಬ್ ಹಾಕಿ ಓಡಿ ಹೋಗುತ್ತಿದ್ದರು. ಬಾಂಬ್ ಹಾಕಿದ ಮೇಲೆ ನಾವು ಅಳುತ್ತಾ ಕುಳಿತು ಬಿಡುತ್ತಿದ್ದೆವು. ಆದರೆ ಈಗ ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ನಮ್ಮಲ್ಲಿ ಬೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

    ಧಾರವಾಡ (Dharwad) ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಮೇಲೆ ಯಾರೂ ಈಗ ಕಣ್ಣು ಕೆಕ್ಕರಿಸಿ ನೋಡುವುದಿಲ್ಲ. ಹಾಗೆ ನಾವು ನಮ್ಮ ಸೈನ್ಯವನ್ನು ಬಲಪಡಿಸಿದ್ದೇವೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ

    ಸದ್ಯದಲ್ಲೇ ರಾಮ ಮಂದಿರ ನಿರ್ಮಾಣ ಆಗಲಿದೆ, ನೀವೆಲ್ಲ ಅಯೋಧ್ಯೆಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕು ಎಂದು ಕಾರ್ಯಕ್ರಮದಲ್ಲಿ ಜೋಶಿ ಕರೆ ನೀಡಿದರು. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ, ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ: ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂ ಒಳಗೆ ಅವಿತು ಕುಳಿತಿತ್ತು ಬುಸ್‌ ಬುಸ್‌ ನಾಗ!

    ಶೂ ಒಳಗೆ ಅವಿತು ಕುಳಿತಿತ್ತು ಬುಸ್‌ ಬುಸ್‌ ನಾಗ!

    – ಶೂ ಧರಿಸುವ ಮುನ್ನ ಎಚ್ಚರ ವಹಿಸುವಂತೆ ಉರಗ ತಜ್ಞ ಮನವಿ

    ಧಾರವಾಡ: ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಮನೆಯೊಳಗೆ ಬರುವ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಮಿತಿಮೀರಿದ ಶೀತ ವಾತಾವರಣ ಇರೋದ್ರಿಂದ ಹಾವುಗಳು ಮನೆಯೊಳಗೇ ಬಂದುಬಿಡುತ್ತವೆ ಎಂದು ಉರಗ ತಜ್ಞರು ಹೇಳುತ್ತಾರೆ.

    ಅದೇ ರೀತಿ ಶೂ (Shoes) ಒಳಗಡೆ ಬೆಚ್ಚಗೆ ಅವಿತು ಕುಳಿತ್ತಿದ್ದ ನಾಗರ ಹಾವಿನ (Cobra) ಮರಿಯನ್ನು ರಕ್ಷಣೆ ಮಾಡಿದ ಘಟನೆ ಧಾರಾವಾಡ (Dharwad) ನಗರದ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ. ಇದನ್ನೂ ಓದಿ: ಬಿಜೆಪಿ ಅವಧಿಯ ಅಕ್ರಮಗಳನ್ನು ವಿವಿಧ ತನಿಖಾ ಸಂಸ್ಥೆಗಳ ಮೂಲಕ ತನಿಖೆ: ಪ್ರಿಯಾಂಕ್ ಖರ್ಗೆ

    ನಂದಿತಾ ಶಿವನಗೌಡರ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿದೆ. ಕಸ ಗುಡಿಸುವ ವೇಳೆ ಹಾವು ನೋಡಿದ ನಂದಿತಾ ಬೆಚ್ಚಿಬಿದ್ದಿದ್ದಾರೆ. ನಂತರ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಲಪ್ಪ ಜೋಡಳ್ಳಿ ನಾಗರಹಾವಿನ ಮರಿಯನ್ನ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ರಸ್ತೆಗಳಿಗೆ ಸಾವರ್ಕರ್‌, ವಾಜಪೇಯಿ ಹೆಸರು ಮರು ನಾಮಕರಣ

    ಶೂ ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಉರಗ ತಜ್ಞ ಎಲ್ಲಪ್ಪ ಮನವಿ ಮಾಡಿಕೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಹೀಗಾಗಿ ಶೂ ಧರಿಸುವಾಗ ಸ್ವಲ್ಪ ಜಾಗ್ರತೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

    ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

    ಧಾರವಾಡ: ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು (Vande Bharat Express Train) ಬರುತ್ತಿದೆ. ಮಂಗಳವಾರದಿಂದ ಧಾರವಾಡ-ಬೆಂಗಳೂರು (Dharwad – Bengaluru) ನಡುವೆ ವಂದೇ ಭಾರತ್ ರೈಲು ಸಂಚಾರ ಶುರು ಮಾಡಲಿದೆ. ಬೆಳಗ್ಗೆ 9 ಗಂಟೆಗೆ ವರ್ಚುವಲ್ ಆಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

    ವಂದೇ ಭಾರತ್ ರೈಲಿಗೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ಧಾರವಾಡ ರೈಲ್ವೆ ನಿಲ್ದಾಣದಿಂದ ಜೋಶಿ ಚಾಲನೆ ನೀಡಿದರೆ ವರ್ಚುವಲ್ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ.

    ಇಂದು ದೇಶಾದ್ಯಂತ ಒಟ್ಟು 5 ವಂದೇ ಭಾರತ್ ರೈಲುಗಳು ಹಳಿಯೇರಲಿವೆ. ಮಧ್ಯಪ್ರದೇಶದಲ್ಲಿ 2 ರೈಲುಗಳು, ಕರ್ನಾಟಕ, ಬಿಹಾರ, ಹಾಗೂ ಗೋವಾದಲ್ಲಿ ಒಂದೊಂದು ರೈಲಿಗೆ ಚಾಲನೆ ಸಿಗಲಿದೆ. ಈ ಮೂಲಕ ರೈಲುಗಳ ಸಂಖ್ಯೆ 24ಕ್ಕೆ ಏರಲಿದೆ. ಕರ್ನಾಟಕಕ್ಕೆ ಇದು 2ನೇ ರೈಲಾಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಸುಮಾರು 490 ಕಿ.ಮೀ ದೂರವನ್ನು 6 ಗಂಟೆ 13 ನಿಮಿಷಗಳಲ್ಲಿ ಈ ರೈಲು ಕ್ರಮಿಸಲಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಇನ್ನೆರಡು ದಿನದಲ್ಲಿ ಆದೇಶ

    ಪ್ರತಿ ದಿನ ಬೆಂಗಳೂರು-ಧಾರವಾಡ ನಡುವೆ ಓಡಾಡಲಿರುವ ವಂದೇ ಭಾರತ್ ರೈಲು ಬೆಳಗ್ಗೆ 5:45ಕ್ಕೆ ಬೆಂಗಳೂರು ಬಿಡುತ್ತದೆ. ಧಾರವಾಡಕ್ಕೆ 12:10ಕ್ಕೆ ಆಗಮಿಸಿ ಬಳಿಕ ಧಾರವಾಡದಿಂದ 1:15ಕ್ಕೆ ರವಾನೆಯಾಗುತ್ತದೆ. ಇಂದು ಎಲ್ಲಾ ಜಿಲ್ಲೆಗಳ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತು ಸಂಚರಿಸಲಿದೆ. ಬುಧವಾರದಿಂದ ಕೇವಲ 4 ನಿಲ್ದಾಣಗಳಲ್ಲಿ ಮಾತ್ರವೇ ನಿಲ್ಲಲಿದೆ. ಇದನ್ನೂ ಓದಿ: ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ ಆಯ್ಕೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹುಬ್ಬಳ್ಳಿ-ಧಾರವಾಡ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ

    ಹುಬ್ಬಳ್ಳಿ-ಧಾರವಾಡ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ

    ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (Hubli-Dharwad Municipal Corporation) 22ನೇ ಅವಧಿಗೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಜೂನ್ 20ರಂದು ಚುನಾವಣೆ ನಡೆಯಲಿದೆ.

    ಧಾರವಾಡ (Dharwad) ಪಾಲಿಕೆಯ ಸ್ವಾತಂತ್ರ‍್ಯ ಅಮೃತಮಹೋತ್ಸವ ಸಭಾಭವನದಲ್ಲಿ ಚುನಾವಣೆ ನಡೆಯಲಿದ್ದು, ಬೆಳಗ್ಗೆ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರಲಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಮಹತ್ವದ ಸಭೆ ನಡೆಯಲಿದೆ.

    22ನೇ ಅವಧಿಯ ಹು-ಧಾ ಪಾಲಿಕೆ ಚುನಾವಣೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ. ಇದನ್ನೂ ಓದಿ: ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    82 ಸದಸ್ಯರ ಬಲಾಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಮಂದಿ ಬಿಜೆಪಿ (BJP) ಸದಸ್ಯರು, 33 ಮಂದಿ ಕಾಂಗ್ರೆಸ್ (Congress) ಸದಸ್ಯರು, AIMIM 3, ಜೆಡಿಎಸ್ 1 ಹಾಗೂ 6 ಪಕ್ಷೇತರ ಸದಸ್ಯರು ಇದ್ದಾರೆ. ಸಂಸದ, ಶಾಸಕರು, ಪರಿಷತ್ ಸದಸ್ಯರು ಸೇರಿ ಒಟ್ಟು ಸದಸ್ಯರ ಬಲ 91 ಇದೆ. ಅಡ್ಡಮತದಾನ ಮಾಡಬಹುದೆಂಬ ಕಾರಣಕ್ಕೆ ಉಭಯ ಪಕ್ಷದ ಅಧ್ಯಕ್ಷರಿಂದ ವಿಪ್ ಜಾರಿ ಮಾಡಲಾಗಿದೆ.

    ಬಿಜೆಪಿ ಅಧ್ಯಕ್ಷರಿಂದ ಕಳೆದ 10 ದಿನಗಳ ಹಿಂದೆಯೇ ವಿಪ್ ಜಾರಿ ಮಾಡಿದರೆ, ಕಾಂಗ್ರೆಸ್ ತಮ್ಮ ಪಕ್ಷದ ಸದದ್ಯರಿಗೆ ಸೋಮವಾರ ವಿಪ್ ಜಾರಿಗೊಳಿಸಿದೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು

  • ಹಣ ಪಾವತಿಸದ ವಿಮಾ ಕಂಪನಿಗೆ ಗ್ರಾಹಕರ ಆಯೋಗದಿಂದ 35 ಸಾವಿರ ರೂ. ದಂಡ

    ಹಣ ಪಾವತಿಸದ ವಿಮಾ ಕಂಪನಿಗೆ ಗ್ರಾಹಕರ ಆಯೋಗದಿಂದ 35 ಸಾವಿರ ರೂ. ದಂಡ

    ಧಾರವಾಡ: ವಿಮಾ ಪಾಲಿಸಿ ಚಾಲ್ತಿ ಇದ್ದರೂ ಚಿಕಿತ್ಸೆ ಪಡೆದ ಹಣ ಪಾವತಿಸಲು ನಿರಾಕರಿಸಿದ ಎಸ್‌ಬಿಐ ವಿಮಾ ಕಂಪನಿಗೆ 35 ಸಾವಿರ ರೂ. ದಂಡದೊಂದಿಗೆ 51,350 ರೂ. ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಧಾರವಾಡ (Dharwad) ಜಿಲ್ಲಾ ಗ್ರಾಹಕರ ಆಯೋಗ (District Consumer Commission) ಆದೇಶಿಸಿದೆ.

    ಹುಬ್ಬಳ್ಳಿಯ ರಾಜೇಂದ್ರ ಪತ್ತಾರ ಎಂಬವರು ಎಸ್‌ಬಿಐ ವಿಮಾ ಕಂಪನಿಯಲ್ಲಿ (SBI Insurance Company) 10,502 ರೂ.ಗಳ ಪ್ರೀಮಿಯಮ್ ಸಂದಾಯ ಮಾಡಿದ್ದರು. 2019ರ ಜ.25ರಂದು ಮೆಡಿಕ್ಲೇಮ್ ಆರೋಗ್ಯ ಪ್ಲಸ್ ಪಾಲಿಸಿ ಪಡೆದು, ಪ್ರತಿ ವರ್ಷ ಪ್ರೀಮಿಯಮ್ ಹಣ ಪಾವತಿಸಿ ವಿಮೆ ನವೀಕರಿಸುತ್ತಿದ್ದರು. 2021ರ ಅಕ್ಟೋಬರ್‌ನಲ್ಲಿ ರಾಜೇಂದ್ರ ತಮ್ಮ ಮೂತ್ರದೋಷ ನಿವಾರಣೆಗಾಗಿ ಹುಬ್ಬಳ್ಳಿಯ (Hubballi) ಶುಶ್ರುತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಅದಕ್ಕೆ 51,350 ರೂ. ವೆಚ್ಚ ತಗುಲಿತ್ತು. ತನ್ನ ಆರೋಗ್ಯ ಪ್ಲಸ್ ವಿಮಾ ಪಾಲಿಸಿ ಚಾಲ್ತಿ ಇರುವುದರಿಂದ ಆಸ್ಪತ್ರೆಯ ಖರ್ಚು ಭರಿಸುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್

    ಆದರೆ ವಿಮಾ ಕಂಪನಿ 4-5 ವರ್ಷಗಳಿಂದ ದೂರುದಾರರಿಗೆ ಮೂತ್ರ ದೋಷ ಇದ್ದರೂ ಅದನ್ನು ವಿಮೆ ಪಡೆಯುವಾಗ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸದೆ ಮರೆಮಾಚಿದ್ದಾರೆ ಎಂದು ಕಾರಣ ನೀಡಿ, ಕ್ಲೈಮ್‌  ತಿರಸ್ಕರಿಸಿದ್ದರು. ಈ ಕುರಿತು ರಾಜೇಂದ್ರ ಅವರು, ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಗ್ಯಾರಂಟಿ ಗೊಂದಲ- ರಾಜ್ಯದ ರೈತರಿಂದ ಅಕ್ಕಿ ಖರೀದಿಸಲ್ವಾ ಸಿಎಂ?

    ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಒಂದು ತಿಂಗಳೊಳಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 51,350 ರೂ. ಹಾಗೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ 35 ಸಾವಿರ ರೂ. ಪರಿಹಾರ ಮತ್ತು ಪ್ರಕರಣದ ವೆಚ್ಚ 10 ಸಾವಿರ ರೂ. ಅನ್ನು ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ. ಇದನ್ನೂ ಓದಿ: ಬಿಜೆಪಿಯ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳನ್ನ ತಂದಿದೆ: ದಿನೇಶ್ ಗುಂಡೂರಾವ್