ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬರು ಸಾಕಿದ್ದ 23 ಪಾರಿವಾಳಗಳ (Pigeon) ತಲೆ ಕತ್ತರಿಸಿ ಕೊಂದಿರುವ ಅಮಾನುಷ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್‌ನಲ್ಲಿ ಘಟನೆ ನಡೆದಿದೆ. ಪಕ್ಷಿ ಪ್ರೇಮಿ ರಾಹುಲ್ ದಾಂಡೇಲಿ ಅವರು ಮನೆಯಲ್ಲಿ ಹಲವಾರು ಪಾರಿವಾಳಗಳನ್ನು ಸಾಕಿದ್ದರು. ಆದರೆ ಕಿಡಿಗೇಡಿಗಳು 23 ಪಾರಿವಾಳಗಳ ಕತ್ತು ಸೀಳಿ ಸಾಯಿಸಿದ್ದಾರೆ. ಇದನ್ನೂ ಓದಿ: ನಾಗರಹೊಳೆ ಸಫಾರಿ ವಾಹನದ ಮೇಲೆ ಆನೆ ದಾಳಿ
ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಪಾರಿವಾಳಗಳ ಕತ್ತನ್ನು ಸೀಳಿ ಕೊಂದಿದ್ದಾರೆ. ಇದೀಗ ಪಾರಿವಾಳಗಳನ್ನು ನಿರ್ದಯವಾಗಿ ಕೊಂದಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: 40ನೇ ಫ್ಲೋರ್‌ನಿಂದ ನೆಲಕ್ಕೆ ಕುಸಿದ ಲಿಫ್ಟ್ – 7 ಜನರ ದುರ್ಮರಣ
ಧಾರವಾಡ: ಕೇಂದ್ರ ಸರ್ಕಾರದ ನಿಯಮದಂತೆ ನಾವು ಬರಗಾಲ (Drought) ಘೋಷಣೆ ಮಾಡಬೇಕು. ಮುಂದಿನ ವಾರ ಬರಗಾಲ ಘೋಷಣೆ ಮಾಡುತ್ತೇವೆ. ಕೇಂದ್ರದ ಸಹಾಯ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಧಾರವಾಡ (Dharwad) ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರೈತರಿಗೆ ಕೃಷಿ ಉತ್ಪಾದನೆ ಆಗಬೇಕು. ರೈತರು, ಸೈನಿಕರು, ಶಿಕ್ಷಕರು ಬಹಳ ಮುಖ್ಯ. ಬಹಳ ಸಂತೋಷದಿಂದ ಧಾರವಾಡ ಕೃಷಿ ವಿವಿಯಲ್ಲಿ ಕೃಷಿ ಮೇಳವನ್ನು ನಾನು ನನ್ನ ಮಿತ್ರರು ಉದ್ಘಾಟನೆ ಮಾಡಿದ್ದೇವೆ. ಕೃಷಿ ವಿವಿ ರೈತರಿಗೆ ಅನುಕೂಲ ಮಾಡುವ ಇಲಾಖೆ. 60% ಗೂ ಹೆಚ್ಚು ಜನಸಂಖ್ಯೆ ಕೃಷಿ ಮೇಲೆ ಅವಲಂಬನೆ ಆಗಿದೆ. ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ. ರೈತರ ಆದಾಯ ಕೂಡಾ ಹೆಚ್ಚು ಆಗಲಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಎರಡು ಸರ್ಕಾರ ಕೂಡಾ ಕೃಷಿ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡಬೇಕು. ನಮ್ಮದು ಕೃಷಿ ಪ್ರಧಾನ ದೇಶ ಎಂದು ಕರೆಯುತ್ತೇವೆ. ಕೆಲವರು ಕೃಷಿ ಬಿಡುತ್ತಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಎಂದು ವಿಮುಖರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಮಳೆಯಾಶ್ರಿತ ಬೇಸಾಯ ಹೆಚ್ಚು. ರಾಜಸ್ಥಾನ ಬಿಟ್ಟರೆ ನಾವೇ ಹೆಚ್ಚು. ಇದರಲ್ಲಿ ಕೃಷಿ ವಿವಿಗಳ ಪಾತ್ರ ಮುಖ್ಯ. ಒಣ ಬೇಸಾಯದ ಕಡೆ ಹೆಚ್ಚು ಗಮನ ಕೊಡಬೇಕಿರುವುದು ವಿವಿಗಳ ಕರ್ತವ್ಯ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ: ಡಿಕೆಶಿ ಟಾಂಗ್
ನಾವು ಜಿಡಿಪಿ ಬೆಳವಣಿಗೆಗೆ ಕೃಷಿ, ಸೇವಾ ಹಾಗೂ ಕೈಗಾರಿಕಾ ವಲಯ ಆರಿಸುತ್ತೇವೆ. ಕೃಷಿ ವಲಯ ಬೆಳೆದರೆ ಜಿಡಿಪಿ ಬೆಳೆಯುತ್ತದೆ. ಕೃಷಿ ಬೆಳೆಯದೇ ಇದ್ದರೆ ತಲಾ ಆದಾಯ ಕಡಿಮೆಯಾಗಲಿದೆ. ಆಗ ಜನ ಕೊಂಡುಕೊಳ್ಳುವುದಿಲ್ಲ. ಕೃಷಿ ಜನರಿಗೆ ಆಸಕ್ತಿ ಬರಬೇಕು. ಯುವಕರಿಗೆ ಹೆಚ್ಚು ಆಸಕ್ತಿ ಇರಬೇಕು. ಟೀಚರ್ ಆಗಿ ನಿವೃತ್ತ ಆದರೂ ಒಬ್ಬರು ಕೃಷಿ ಮಾಡುತ್ತಿದ್ದಾರೆ. ಬೋರ್‌ವೆಲ್ ಹಾಕಿ ಕೃಷಿ ಮಾಡಿ ಯಶಸ್ಸು ಆಗಿದ್ದಾರೆ. ಎಲ್ಲ ರೈತರು ಆ ಪ್ರಯತ್ನ ಮಾಡಬೇಕು. ಅದಕ್ಕೆ ಪೂರಕ ಕೆಲಸ ವಿವಿ ಮಾಡಬೇಕು ಎಂದರು. ಇದನ್ನೂ ಓದಿ: ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ಮೈತ್ರಿ: ಡಿ.ಕೆ.ಸುರೇಶ್
ಧಾರವಾಡ: ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ದ್ವಂದ್ವ ಹೇಳಿಕೆಗೆ ಧಾರವಾಡ (Dharwad) ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಲಾಡ್, ಮುನೇನಕೊಪ್ಪ ಹಾಗೂ ಚಿಕ್ಕನಗೌಡರು ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಕೆಲವರು ಸ್ವಯಂ ಪ್ರೇರಣೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನೂ ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬಯಸುವ ಆಸಕ್ತರನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೂ ರಿವರ್ಸ್ ಇಲ್ಲ. ಪ್ರಜಾಪ್ರಭುತ್ವದ ದೊಡ್ಡ ಪಕ್ಷ ನಮ್ಮದು. ನಮ್ಮ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂದರು.
ನಮ್ಮ ಪಕ್ಷ ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ. ಬೇಕಾದವರು ಬರಬಹುದು. ಬಿಜೆಪಿಯ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿಯಾಗಿರುತ್ತಾರೆ. ರಾಜಕೀಯ ಅಜೆಂಡಾ ಸಹ ಇರಬಹುದು. ಯಾರ್ಯಾರು ಸಿಎಂ ಅವರನ್ನು ಭೇಟಿ ಮಾಡಿದ್ದಾರೋ ಯಾಕೆ ಭೇಟಿ ಆಗಿದ್ದಾರೆ ಅಂತಾ ಅವರನ್ನೇ ಕೇಳಬೇಕು ಎಂದರು.
ಧಾರವಾಡ: ಬೆಳಗಾವಿಯ (Belagavi) ಮಲಪ್ರಭಾ ನದಿಗೆ ಬಿದ್ದು ಧಾರವಾಡ (Dharwad) ಮೂಲದ ಆಸ್ಟ್ರೇಲಿಯಾ (Australia) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಮಹಿಳೆ ಡೆತ್‍ನೋಟ್ ಬರೆದು ಕೊರಿಯರ್ ಮಾಡಿದ್ದು, ಮಹಿಳೆಯ ಸಾವಿಗೆ ಆಸ್ಟ್ರೇಲಿಯಾ ಕಾನೂನುಗಳೇ ಕಾರಣ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದಲ್ಲಿದ್ದ ಪ್ರಿಯದರ್ಶಿನಿ ಎಂಬ ಮಹಿಳೆ ಅಲ್ಲಿನ ಕಠಿಣ ಕಾನೂನಿನಿಂದ ನ್ಯಾಯ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮಹಿಳೆಯ ಮಗ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಅಲ್ಲಿಯ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ರೋಗ ಗುಣಮುಖ ಆಗುವ ಬದಲು ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇದನ್ನೂ ಓದಿ: ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಲಾಂಗ್ ಝಳಪಿಸಿದ ವಿದ್ಯಾರ್ಥಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈಫಲ್ಯ ಎಂದು ಪ್ರಿಯದರ್ಶಿನಿ ದೂರು ದಾಖಲಿಸಿದ್ದಳು. ಆದರೆ ಆಸ್ಟ್ರೇಲಿಯಾ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಪ್ರಿಯದರ್ಶಿನಿ ಮೇಲೆ ಇತ್ತು. ಇದಕ್ಕಾಗಿ ಪ್ರಿಯದರ್ಶಿನಿ ಕಾನೂನು ಹೋರಾಟ ಆರಂಭಿಸಿದ್ದಳು. ಆದರೆ ಪ್ರಯೋಜನವಾಗದೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಪ್ರಿಯದರ್ಶಿನಿ ಆತ್ಮಹತ್ಯೆ ವಿಚಾರವಾಗಿ ಭಾರತ ಸರ್ಕಾರದ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಮೊರೆ ಹೋಗಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಮಹಿಳೆಗೆ ಎರಡು ಮಕ್ಕಳಿದ್ದು, ಅವರು ಆಸ್ಟ್ರೇಲಿಯಾದಲ್ಲೇ ಹುಟ್ಟಿದ್ದರಿಂದ ಅಲ್ಲಿಯ ಪೌರತ್ವ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಪ್ರಿಯದರ್ಶಿನಿ ಆಸ್ಟ್ರೇಲಿಯಾದಿಂದ ಕಳೆದ ಭಾನುವಾರ ಭಾರತಕ್ಕೆ ಬಂದಿದ್ದರು. ಆ ದಿನ ತನ್ನ ಎಲ್ಲಾ ಬ್ಯಾಗ್‍ಗಳನ್ನು ಮನೆಗೆ ಕೊರಿಯರ್ ಮಾಡಿದ್ದಳು. ಆದರೆ ಆಕೆ ಮನೆಗೆ ಬರದೇ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಆಕೆಯ ಶವ ಬೆಳಗಾವಿ ಜಿಲ್ಲೆಯ ಗೋರವನಕೊಳ್ಳ ಗ್ರಾಮದ ಬಳಿ ಪತ್ತೆಯಾಗಿತ್ತು. ಇದನ್ನೂ ಓದಿ: WWE ಮಾಜಿ ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ
ಧಾರವಾಡ: ಹಾಡಹಗಲೇ ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಗುಂಡು ಹಾರಿಸಿದ ಘಟನೆ ಧಾರವಾಡ ಹೊರವಲಯದ ಟೈವಾಕ್ ಕಂಪನಿ ಬಳಿ ನಡೆದಿದೆ.
ಮಹಾರಾಷ್ಟ್ರ (Maharashtra) ಮೂಲದ ಸುಶಾಂತ್ ಅಗರವಾಲ್ ಎಂಬುವವರು ಅತ್ತಿಕೊಳ್ಳದ ಬಳಿ ಆಸ್ತಿ ಹೊಂದಿದ್ದಾರೆ. ಇವರ ಆಸ್ತಿ ಪಕ್ಕದಲ್ಲೇ ಪವನ್ ಕುಲಕರ್ಣಿ ಎಂಬುವವರ ಜಾಗ ಕೂಡ ಇದೆ. ಇಂದು ಪವನ್ ಕುಲಕರ್ಣಿ ಸೇರಿದಂತೆ ಇತರರು ಸುಶಾಂತ್ ಅಗರವಾಲ್ ಅವರ ಜಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ಸುಶಾಂತ್ ನಮ್ಮ ಆಸ್ತಿಯಲ್ಲಿ ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲಸ ಮಾಡುತ್ತಿದ್ದ ಕೆಲವರು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ
ಈ ವೇಳೆ ಭಯದಿಂದ ಸುಶಾಂತ್ ತಮ್ಮ ಬಳಿ ಇದ್ದ ಪರವಾನಿಗೆ ಹೊಂದಿರುವ ರಿವಾಲ್ವಾರ್‌ನಿಂದ ನೆಲಕ್ಕೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸುತ್ತಿದ್ದಂತೆ ಅಲ್ಲಿಂದ ಕೆಲಸ ಮಾಡುತ್ತಿದ್ದವರು ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಿವಾಲ್ವಾರ್‌ನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡ: ಆಪರೇಶನ್ ಹಸ್ತದ ಮಧ್ಯೆ ಧಾರವಾಡದ ಮಾಜಿ ಶಾಸಕ ಅಮೃತ ದೇಸಾಯಿ ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಶಾಸಕ ಅಮೃತ ದೇಸಾಯಿ, ಭಾರತೀಯ ಜನತಾ ಪಾರ್ಟಿ ಚಿನ್ಹೆ ಮೇಲೆ ಆರಿಸಿ ಬಂದ ಯಾವೊಬ್ಬ ಅಭ್ಯರ್ಥಿಯೂ ಕಾಂಗ್ರೆಸ್‍ಗೆ (Congress) ಹೋಗುವುದಿಲ್ಲ. ಅವರು ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‍ನಲ್ಲಿ ಸಾಕಾಗಿಯೇ ಅವರು ಬಿಜೆಪಿಗೆ (BJP) ಬಂದಿದ್ದಾರೆ ಎಂದರು. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?
ಮತ್ತೆ ಮರಳಿ ಅವರೇಕೆ ಕಾಂಗ್ರೆಸ್‍ಗೆ ಹೋಗುತ್ತಾರೆ? ಸಿದ್ದರಾಮಯ್ಯನವರ ಆಡಳಿತದಿಂದ ಬೇಸತ್ತು 40-50ಜನ ಕಾಂಗ್ರೆಸ್ ಶಾಸಕರೇ ಬಿಜೆಪಿಗೆ ಬರುತ್ತಾರೆ ಎಂಬ ಮಾಹಿತಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ ಅವರು, ಈಗ ನಾವು ಇವ್ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ಈ ಸಮಯ ಸೂಕ್ತವೂ ಅಲ್ಲ. ರೈತರ ಸಮಸ್ಯೆಗಳಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳನ್ನು ಬಿಟ್ಟು ಜನರ ಮರೆಮಾಚುವ ಸಲುವಾಗಿ ಕಾಂಗ್ರೆಸ್ ಅವರು ಕಾಂಗ್ರೆಸ್‍ಗೆ ಬರುತ್ತಾರೆ ಇವರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಮಾಡುವ ಕೆಲಸ ಬಹಳಷ್ಟಿದೆ ಎಂದ ಅಮೃತ ದೇಸಾಯಿ, ಕಾಂಗ್ರೆಸ್‍ನವರು ಕೊಟ್ಟ ಗ್ಯಾರಂಟಿಗಳೇ ಬೋಗಸ್ ಇವೆ. ಮಹಿಳೆಯರ ಅಕೌಂಟ್‍ಗೆ ಹಣ ಹಾಕುತ್ತೇವೆ ಎಂದಿದ್ದರು. ಇದುವರೆಗೂ ಹಣ ಜಮಾ ಆಗಿಲ್ಲ ಎಂದರು.
ಬರಗಾಲದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಕಾಲಹರಣ ಮಾಡುತ್ತಿದೆ. ಐದು ವರ್ಷ ಕಾಲಹರಣ ಮಾಡಿ ಹೋಗಲು ಈ ಸರ್ಕಾರ ಬಂದಿದೆ. ಬಿಜೆಪಿಯಿಂದ ಯಾರೂ ಕಾಂಗ್ರೆಸ್‍ಗೆ ಹೋಗುವುದಿಲ್ಲ. 40-50 ಜನ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ ಎಂದರು.
ಹುಬ್ಬಳ್ಳಿ/ಧಾರವಾಡ: ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿರುವುದಾಗಿ ನಾವು ತಿಳಿಸಿರಲಿಲ್ಲ. ಮಗು ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬದುಕೇ ಇತ್ತು. ಸ್ವ ಇಚ್ಛೆಯಿಂದ ಪಾಲಕರೇ ತಮ್ಮ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ (Hubballi KIMS) ಸ್ಪಷ್ಟನೆ ನೀಡಿದೆ.
ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವುದಾಗಿ ಭಾವಿಸಿ ಅಂತ್ಯಕ್ರಿಯೆ ವೇಳೆ ಉಸಿರಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಅರುಣ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಮಗುವಿನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಬದುಕುವ ಸಾಧ್ಯತೆ ಬಹಳಷ್ಟು ಕಡಿಮೆ ಇತ್ತು. ಹೀಗಾಗಿ ಬಾಲಕನ ಪರಿಸ್ಥಿತಿಯನ್ನು ವಿವರಿಸಿ ಬದುಕುವುದು ಕಷ್ಟ ಎಂದು ಪಾಲಕರಿಗೆ ಹೇಳಿದ್ದೆವು. ಹೀಗಾಗಿ ಅವರು ಸ್ವ ಇಚ್ಛೆಯಿಂದಲೇ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಕಿಮ್ಸ್ ಆಸ್ಪತ್ರೆಯಿಂದ ಮಗು ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಮಗುವನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೇವೆ. ಆದರೆ ಅವರು ಬೇಡ ಎಂದು ಮತ್ತೆ ವಾಪಸ್ ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ವಿಚಿತ್ರ ಘಟನೆ – ಮೃತಪಟ್ಟಿದೆ ಎಂದ ವೈದ್ಯರು, ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು!
ಘಟನೆಯೇನು?
ಹೈಡ್ರೋ ಸೇಫಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಆಕಾಶ್‌ನನ್ನು ಆಗಸ್ಟ್ 13 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವೇಳೆ ಮಗು ಬದುಕುವುದು ಕಷ್ಟ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಪೋಷಕರು ಮಗು ಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಳಗಾವಿ ವಿಭಜನೆ ಮಾಡೋದಾದರೆ ಮೊದಲ ಆದ್ಯತೆ ಬೈಲಹೊಂಗಲಕ್ಕೆ ಕೊಡಿ: ಜಾರಕಿಹೊಳಿ ಹೇಳಿಕೆಗೆ ವಿರೋಧ
ಅಂತ್ಯಕ್ರಿಯೆ ಸಂದರ್ಭ ಬಾಯಿಗೆ ನೀರು ಬಿಟ್ಟ ತಕ್ಷಣ ಮಗು ಕೈ ಕಾಲು ಅಲುಗಾಡಿಸಿದೆ. ಮಗು ಉಸಿರಾಡುತ್ತಿದೆ ಎಂಬುದು ಗೊತ್ತಾದ ತಕ್ಷಣ ಗುರುವಾರ ರಾತ್ರಿ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ದುರಾದೃಷ್ಟವಶಾತ್ ಆಕಾಶ್ ಶುಕ್ರವಾರ ಉಸಿರು ಚೆಲ್ಲಿದ್ದಾನೆ.
ಧಾರವಾಡ: ಮೃತಪಟ್ಟಿದೆ ಎಂದು ಭಾವಿಸಿ ಒಂದೂವರೆ ವರ್ಷದ ಮಗುವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಉಸಿರಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಬಸವರಾಜ್ ಎಂಬವರ ಮಗ ಒಂದೂವರೆ ವರ್ಷದ ಆಕಾಶ್ ಮೃತಪಟ್ಟಿರುವುದಾಗಿ ಹುಬ್ಬಳ್ಳಿ ಕಿಮ್ಸ್ (KIMS Hospital Hubli) ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು.
ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಜೀವಂತವಾಗಿದೆ. ಮಗು ಕೈಕಾಲು ಅಲುಗಾಡಿಸಿದ್ದಕ್ಕೆ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಆಪರೇಷನ್ ಬಿಪಿಎಲ್ ಕಾರ್ಡ್- ಸತ್ತವರ ಹೆಸ್ರಲ್ಲೂ ಅಕ್ಕಿ ಪಡೆಯುತ್ತಿದ್ದ ಕುಟುಂಬಸ್ಥರು
ಧಾರವಾಡ: ಬುಧವಾರ ಸಂಜೆ ಧಾರವಾಡ (Dharwad) ಬೇಲೂರು ಕೈಗಾರಿಕಾ ಪ್ರದೇಶದ ಹೈಕೋರ್ಟ್ ಪೀಠದ ಬಳಿ ಗ್ಯಾಸ್ ಟ್ಯಾಂಕರ್ (Tanker) ಲೀಕೇಜ್ ಆಗಿತ್ತು. ಇದರಿಂದ ಇಡಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಗುರುವಾರ ಆ ಗ್ಯಾಸ್ ಟ್ಯಾಂಕರ್ ಲೀಕೇಜ್ ತಡೆದು, ಟ್ಯಾಂಕರ್ ಸ್ಥಳಾಂತರ ಮಾಡಲಾಗಿದ್ದು, ರಾತ್ರಿಯಿಡೀ ವಿದ್ಯುತ್ ಇಲ್ಲದೆ ಕಳೆದಿದ್ದ ಅಲ್ಲಿನ ಜನ ಈಗ ನಿಟ್ಟುಸಿರು ಬಿಡುವಂತೆ ಆಗಿದೆ.
ಧಾರವಾಡದಲ್ಲಿ ನಿರಂತರ 18 ಗಂಟೆಗಳ ಕಾಲ ಜೀವ ಕೈಯಲ್ಲಿ ಹಿಡಿದು ಕ್ಷಣ ಕ್ಷಣ ಕಳೆದಿದ್ದ ನೂರಾರು ಹಳ್ಳಿಯ ಜನ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4ರ ಧಾರವಾಡದ ಬೇಲೂರು ಹೈಕೋರ್ಟ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿನ್ನೆ ಹೆಚ್‌ಪಿ ಕಂಪನಿಯ ಟ್ಯಾಂಕರ್ ಸಿಲುಕಿ ಬಿಟ್ಟಿತ್ತು. ಅಂಡರ್‌ಪಾಸ್‌ನ ಮೇಲ್ಭಾಗದ ರಸ್ತೆಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗೋದಕ್ಕೆ ಆರಂಭವಾಗಿತ್ತು.
ಇದನ್ನು ಸಮರೋಪಾದಿಯಲ್ಲಿ ತಹಬದಿಗೆ ತರಲು ಸುಮಾರು 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಬೇಕಾಯ್ತು. ಸಣ್ಣದೊಂದು ಕಿಡಿ ಹಾರಿದ್ದರು ಕೂಡಾ ದೊಡ್ಡ ಅನಾಹುತ ಸಂಭವಿಸೋ ಸಾಧ್ಯತೆ ಇತ್ತು. ಹೀಗಾಗಿ ವಿದ್ಯುತ್ ಕಡಿತಗೊಳಿಸಿ, ಜನರಿಗೆ ಯಾವುದೇ ರೀತಿಯ ಬೆಂಕಿ ಹೊತ್ತಿಸದಂತೆ ಸೂಚಿಸಲಾಗಿತ್ತು. ಇದರಿಂದಾಗಿ ಅಮಾವಾಸ್ಯೆ ರಾತ್ರಿ ನಮಗೆ ಕರಾಳವಾಗಿ ಹೋಯ್ತಾ? ಅನ್ನೋ ಆತಂಕದಲ್ಲಿಯೇ ಜನ ರಾತ್ರಿ ಕಳೆದರು.
ನಿನ್ನೆ ಸಂಜೆ 6:20ರ ಹೊತ್ತಿಗೆ ಈ ಟ್ಯಾಂಕರ್ ಅಂಡರ್‌ಪಾಸ್ ಅಡಿ ಸಿಲುಕಿತ್ತು. ಸಾಮಾನ್ಯವಾಗಿ ಯಾವುದೇ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬರೋದೇ ಇಲ್ಲ. ಆದರೆ ಚಾಲಕನ ಸಣ್ಣದೊಂದು ಮೈಮರೆವು ಈ ಅವಘಡಕ್ಕೆ ಕಾರಣವಾಗಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿರೋ ಹೆಚ್‌ಪಿಸಿಎಲ್ ಘಟಕಕ್ಕೆ ಮುಂಬೈನಿಂದ ಬಂದಿರೋ ಈ ಟ್ಯಾಂಕರ್ ತಲುಪಬೇಕಿತ್ತು. ಆದರೆ ಚಾಲಕ ಮೈಮರೆತು ತೀರಾ ಮುಂದೆ ಬಂದು ಬಿಟ್ಟಿದ್ದ. ಹೀಗಾಗಿ ಹೈಕೋರ್ಟ್ ಮುಂದೆ ಎಡಕ್ಕೆ ಟರ್ನ್ ತೆಗೆದುಕೊಂಡು ಸರ್ವಿಸ್ ರಸ್ತೆಗೆ ಇಳಿದ ಚಾಲಕ ಬಳಿಕ ಈ ಅಂಡರ್‌ಪಾಸ್ ಮೂಲಕ ಆಚೆ ರಸ್ತೆ ಸೇರಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಉಡುಪಿ ಕಾಲೇಜಿನ ವೀಡಿಯೋ ಪ್ರಕರಣ- ಗುಜರಾತ್ FSLಗೆ ರವಾನೆ ಸಾಧ್ಯತೆ
ಈ ವೇಳೆ ರಸ್ತೆಯ ಮೇಲ್ಭಾಗ ಟ್ಯಾಂಕರ್‌ಗೆ ತಾಗಿದೆ. ಆ ಕ್ಷಣವೇ ಟ್ಯಾಂಕರ್ ಮೇಲ್ಭಾಗದಲ್ಲಿನ ವಾಲ್ವ್‌ಗೆ ಹಾನಿ ಆಗಿದೆ. ವಾಲ್ವ್ ಬಳಿಯಿಂದಲೇ ಗ್ಯಾಸ್ ಸೋರಿಕೆ (Gas Leak) ಶುರುವಾಗಿ ಬಿಟ್ಟಿದೆ. ಆ ಕ್ಷಣವೇ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಬೇಲೂರು ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿ ಕೇವಲ 10 ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದಾರೆ.
ಸುಮಾರು 18 ಟನ್ ಸಾಮರ್ಥ್ಯದ ಗ್ಯಾಸ್ ಇದ್ದ ಕಾರಣಕ್ಕೆ ಬೇಗ ಖಾಲಿ ಮಾಡುವುದೇ ಸವಾಲಾಗಿತ್ತು. ಹೀಗಾಗಿ ನಿಧಾನವಾಗಿ ಅದೆಲ್ಲ ಗ್ಯಾಸ್ ಖಾಲಿ ಆಗೋವರೆಗೂ ಕಾದ ಎಲ್ಲರೂ, ಬೆಳಗ್ಗೆ 11ರ ಹೊತ್ತಿಗೆ ಸ್ವಲ್ಪ ಗ್ಯಾಸ್ ಖಾಲಿಯಾದಾಗ ಟ್ಯಾಂಕರ್ ಮೇಲ್ಭಾಗಕ್ಕೆ ತೆರಳಿ ವಾಲ್ವ್ ಸರಿಪಡಿಸಿದ್ದಾರೆ. ಉಳಿದ ಗ್ಯಾಸ್ ಅನ್ನು ಮತ್ತೊಂದು ಖಾಲಿ ಟ್ಯಾಂಕರ್‌ಗೆ ತುಂಬಿಸಿ, ಅಲ್ಲಿಂದ ತೆರವು ಮಾಡಿದ್ದಾರೆ.
ಇದೆಲ್ಲವೂ ಆಗೋ ಹೊತ್ತಿಗೆ ಸುಮಾರು 20 ಗಂಟೆಗಳು ಕಳೆದು ಹೋಗಿದ್ದವು. ಇಷ್ಟು ಸುದೀರ್ಘ ಅವಧಿ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಸದ್ಯ ರಸ್ತೆ ಸಂಚಾರವೂ ಸುಗಮವಾಗಿದೆ. ಸದ್ಯ ಚಾಲಕನ ಸಣ್ಣ ತಪ್ಪು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಹಾಗೂ ಸಾವಿರಾರು ಲಾರಿ ಚಾಲಕರು ಪರದಾಟ ನಡೆಸಿದ್ದಾರೆ. ಅಲ್ಲದೇ ಕೈಗಾರಿಕೆ ಬಂದ್ ಮಾಡುವ ಸ್ಥಿತಿಯೂ ಬಂದಿತ್ತು. ಸದ್ಯ ಎಲ್ಲ ಪ್ರಯತ್ನ ಸಫಲವಾಗಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನುವುದೇ ನೆಮ್ಮದಿಯ ವಿಷಯ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ
ಧಾರವಾಡ: ಗ್ಯಾಸ್ ತುಂಬಿದ ಟ್ಯಾಂಕರ್ (Gas Tanker) ಒಂದು ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಗೆ ತಾಗಿ ಗ್ಯಾಸ್ ಲೀಕ್ (Gas Leak) ಆಗಿರುವ ಘಟನೆ ಧಾರವಾಡದ (Dharwad) ಬೇಲೂರು ಗ್ರಾಮದ ಬಳಿಯ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ಸದ್ಯ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಗ್ಯಾಸ್ ಲೀಕೇಜ್ ದೊಡ್ಡ ಮಟ್ಟದಲ್ಲಿ ಆಗಿದ್ದು, ಜನ ಸಂಚಾರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದು, ಯಾವುದೇ ಅನಾಹುತ ಆಗದಂತೆ ಕಣ್ಣಿಟ್ಟಿದ್ದಾರೆ. ಹೈಕೋರ್ಟ್ ಅಕ್ಕಪಕ್ಕದ ಬೇಲೂರು, ಕೋಟೂರು, ಮುಮ್ಮಿಗಟ್ಟಿ ಸೇರಿದಂತೆ ಇಡಿ ಕೈಗಾರಿಕಾ ಪ್ರದೇಶದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.
ಗ್ಯಾಸ್ ಲೀಕೇಜ್‌ನಿಂದಾಗಿ ಬುಧವಾರ ಸಂಜೆಯಿಂದಲೇ ರಸ್ತೆಯನ್ನು ಬಂದ್ ಮಾಡಲಾಗಿದೆ. ಲೀಕೇಜ್ ತಡೆಯಲು ಸಾಧ್ಯವಾಗದ ಹಿನ್ನೆಲೆ ಟ್ಯಾಂಕರ್‌ನಲ್ಲಿರುವ ಇಡೀ ಗ್ಯಾಸ್ ಅನ್ನು ಹೊರ ಹಾಕಿ ಅದನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ. ಕಳೆದ 12 ಗಂಟೆಯಿಂದ ಗ್ಯಾಸ್ ನಿರಂತರವಾಗಿ ಸೋರಿಕೆಯಾಗುತ್ತಿದೆ. ರಾತ್ರಿಯಿಡೀ ಕಳೆದರೂ ಟ್ಯಾಂಕರ್ ಇನ್ನೂ ಖಾಲಿಯಾಗಿಲ್ಲ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕಂಪನಿಗೆ ಭಾರೀ ವಿರೋಧ!