Tag: ಧಾರವಾಡ

  • ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್

    ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್

    ಧಾರವಾಡ: ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ. ಅವರು ಆಡಿದ್ದೇ ಆಟ ಎಂದು ಧಾರವಾಡ (Dharwad) ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ (IT Raid) ಸಿಕ್ಕ 40 ಕೋಟಿ ರೂ. ಹಣ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಸಾಮಾನ್ಯವಾಗಿ ಈ ರೀತಿಯ ಆರೋಪ ಮಾಡಿಯೇ ಮಾಡುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ನಂಜುಂಡೇಶ್ವರನ ಸನ್ನಿಧಾನದಲ್ಲಿ ಹೆಚ್‍ಡಿಕೆ ಕುಟುಂಬದಿಂದ ಬೆಲ್ಲದ ತುಲಾಭಾರ

    ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಐಟಿ, ಇಡಿ, ಸಿಬಿಐ ಎಲ್ಲವೂ ಅವರ ಕೈಯಲ್ಲಿದೆ. ಅವರು ಆಡಿದ್ದೇ ಆಟ. ಈಗ ಎಲ್ಲವೂ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯವವರೆಗೂ ಕಾಯೋಣ ಎಂದರು.

    ಅಬಕಾರಿ ಇಲಾಖೆ ಮದ್ಯ ವ್ಯಾಪಾರಿಗಳಿಂದ ಲಂಚ ಪಡೆಯುತ್ತಿದೆ ಎಂದು ಮದ್ಯ ವ್ಯಾಪಾರಿಗಳು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್, ಈ ವಿಚಾರ ಸಿಎಂ ಗಮನಕ್ಕೆ ಹೋಗಿದೆ. ಅವರು ಅದಕ್ಕೆ ಪರಿಹಾರ ಕಂಡು ಹಿಡಿಯುತ್ತಾರೆ ಎಂದರು. ಇದನ್ನೂ ಓದಿ: ಹೈಕಮಾಂಡ್ ನಯಾ ಪೈಸೆ ಕೇಳಿಲ್ಲ- ಬಿಜೆಪಿ ಆರೋಪಕ್ಕೆ ಸಿಎಂ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಧಾರವಾಡ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಅಕ್ಟೋಬರ್ 8 ರಂದು ಧಾರವಾಡ (Dharwad) ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಘಟನೆ ನಡೆದಿತ್ತು. ಯುವಕ ಹಾಗೂ ಯುವತಿ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಆರೋಪಿ ಯುವಕ ಕಟರ್‌ನಿಂದ ಯುವತಿಗೆ ಇರಿದಿದ್ದ.

    ಬಿಬಿ ನಿಸ್ಬಾ ಡಂಬಳ (20) ಹಲ್ಲೆಗೊಳಗಾಗಿದ್ದ ಯುವತಿಯಾಗಿದ್ದು, ಆರೋಪಿ ಇಮಾಮಜಾಫರ್ ಯುವತಿಯ ಕುತ್ತಿಗೆ ಹಾಗೂ ಕೈಗೆ ಇರಿದಿದ್ದ. ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಸ್ಥಳೀಯರಿಗೆ ಸಿಕ್ಕಿದ್ದು, ನಂತರ ಪೊಲೀಸರನ್ನು ಕರೆಸಿದ್ದಾರೆ. ಬಳಿಕ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ನೀಡಿದ ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ಧಾರವಾಡ ಕುರಬರ ಓಣಿಯ ನಿವಾಸಿಯಾಗಿರುವ ಬಿಬಿ ಹಾಗೂ ಇಮಾಮಜಾಫರ್ ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಬಿಬಿ ಬೇರೆ ಯುವಕನ ಜೊತೆ ಮೊಬೈಲ್‌ನಲ್ಲಿ ಮಾತನಾಡುವುದನ್ನು ಇಮಾಮಜಾಫರ್ ಗಮನಿಸಿದ್ದ. ಹೀಗಾಗಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಟರ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದೀಗ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವತಿಯನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ – ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದ ಕಿಡಿಗೇಡಿಗಳು

    ಯುವತಿಯನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ – ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದ ಕಿಡಿಗೇಡಿಗಳು

    ಧಾರವಾಡ: ಯುವತಿಯೊಬ್ಬಳನ್ನು ಅಪಹರಿಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಧಾರವಾಡ (Dharwad) ತಾಲೂಕಿನ ಸಲಕಿನಕೊಪ್ಪದಲ್ಲಿ ನಡೆದಿದೆ.

    ಯುವತಿಯ ಕುತ್ತಿಗೆ ಹಾಗೂ ಕೈಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು, ಆಕೆ ಸ್ಥಳೀಯರ ಕಣ್ಣಿಗೆ ಕಾಣಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ದಾಳಿಯಿಂದ ಕೇರಳದ ಶೀಜಾ ಆನಂದ್‍ಗೆ ಗಾಯ

    ಯುವತಿ ಕೊಟ್ಟ ಮಾಹಿತಿ ಪ್ರಕಾರ ಆಕೆ ಧಾರವಾಡದ ಕುರುಬರ ಬೀದಿಯ ನಿವಾಸಿಯಾಗಿದ್ದಾಳೆ. ಮಹಮ್ಮದ್ ಸಾದೀಕ್ ಎಂಬಾತ ಆಕೆಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಲ್ಲದೇ ಬೈಕ್‍ನಲ್ಲಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾಳೆ. ಬಳಿಕ ನನ್ನನ್ನು ಹಿಂದಿನಿಂದ ಹಿಡಿದು ಅಪಹರಿಸಿದ್ದು, ನನಗೆ ಇಲ್ಲಿಗೆ ಹೇಗೆ ಬಂದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾಳೆ. ಅಲ್ಲದೇ ಯುವತಿ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದಾಳೆ.

    ಈ ಸಂಬಂಧ ಧಾರವಾಡದ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ನಾನು ‘ಹಿಟ್ ಅಂಡ್ ರನ್’ ಮಾಡಿಲ್ಲ: ನಟ ನಾಗಭೂಷಣ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ

    ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ

    ಕಾರವಾರ: ಧಾರವಾಡದ ಮುಸ್ಲಿಂ ಕುಟುಂಬವೊಂದು (Dharwad Muslim Family) 2 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ (Gokarna) ಪಿತೃಪಕ್ಷದ (Pitru Paksha) ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

    ಕಾರ್ಪೆಂಟರ್ ಕೆಲಸ ಮಾಡುವ ಕುಟುಂಬವೊಂದು ಧಾರವಾಡದ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನ ಇಲ್ಲಿಯ ಪಿತೃಶಾಲೆಯಲ್ಲಿ ನಡೆಸಿದ್ದಾರೆ.

    ನಾವು ಮೊದಲಿನಿಂದಲೂ ಕುಂಡಲಿ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರು. ನಮ್ಮ ತಂದೆ ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಬೆಳೆದವರು. ತಮ್ಮನಿಗೆ ಮದುವೆ ಸಂಬಂಧ ಸರಿಯಾಗಿ ಹೆಣ್ಣು ಸಿಗದೇ ಇದ್ದಾಗ ಜ್ಯೋತಿಷಿಯ ಮೊರೆ ಹೋಗಿದ್ದೆವು. ಅವರು ತಿಳಿಸಿದಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ಧೇಶದಿಂದ ಈ ಕಾರ್ಯ ಮಾಡಿದ್ದೇವೆ ಎಂದು ಪಿತೃಕಾರ್ಯದಲ್ಲಿ ಭಾಗಿಯಾದ ಧಾರವಾಡದ ಧಾನೇಶ್ವರಿ ನಗರದ ಶಂಸಾದ್ ತಿಳಿಸಿದರು.

    ಮುಸ್ಲಿಂ ಕುಟುಂಬ ಜ್ಯೋತಿಷಿಯ ಸಲಹೆಯಂತೆ  ಗೋಕಣಕ್ಕೆ ಬಂದು ಕ್ಷೇತ್ರ ಪುರೋಹಿತರಾದ ವೇ.ನಾಗರಾಜ ಭಟ್ ಹಾಗೂ ವೇ.ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯ ನೆರವೇರಿಸಿದ್ದಾರೆ.  ಇದನ್ನೂ ಓದಿ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    ಗೋಕರ್ಣದಲ್ಲಿ ಕ್ರೈಸ್ತ ಸಮುದಾಯದವರು ಇಂತಹ ಪಿತೃ ಕಾರ್ಯ ನೆರವೇರಿಸಿದ ಅನೇಕ ಉದಾಹರಣೆಗಳಿವೆ. ಆದರೆ ಮುಸ್ಲಿಂ ಕುಟುಂಬ ಇದೇ ಮೊದಲ ಬಾರಿಗೆ ಬಾರಿಗೆ ಪಿತೃಕಾರ್ಯ ನೆರವೇರಿಸಿದೆ ಎಂಬ ಮಾತುಗಳು ಕೇಳಿಬಂದಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ನವದೆಹಲಿ/ ಧಾರವಾಡ: ಅರೆ ಮಲೆನಾಡು, ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಧಾರವಾಡ (Dharawada) ಈಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ದೆಹಲಿ ವಿಶೇಷ ಪೊಲೀಸ್ ದಳ ನಡೆಸಿದ ಮಹತ್ವದ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರಾದ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಿದೆ. ಈ ಮೂವರ ಪೈಕಿ ಶಹನವಾಜ್ ಧಾರವಾಡ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ‌ ಹಾದು ಹೋಗುವ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ.

    ಬಂಧನಕ್ಕೆ ಒಳಗಾಗಿದ್ದ ಶಹನವಾಜ್ (Shahnawaz) ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಈಗ ನಿರಂತರವಾಗಿ ದೆಹಲಿ ಪೊಲೀಸರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಡಿಕೆಶಿ, ಶಾಮನೂರ್‌ಗೆ ಹೆದರಬೇಡಿ- ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್

    ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಹುಬ್ಬಳ್ಳಿ, ಧಾರವಾಡ ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಧಾರವಾಡ ದಾಟುತ್ತಿದ್ದಂತೆ ಅನೇಕ ಕಾಡುಗಳಿವೆ. ಶಹನವಾಜ್ ಹೇಳಿದ ಹೇಳಿಕೆಯ ಜಾಡು ಹಿಡಿದು ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ‌ ಹಿಂದೆ 2014-15 ರಲ್ಲಿ ಧಾರವಾಡ ಆರೋಗ್ಯನಗರದಲ್ಲಿ ಮೂವರು ಶಂಕಿತ ಉಗ್ರರು ಬಂದು ಬಾಡಿಗೆ ಮನೆ ಮಾಡಿ ಇದ್ದರು. ಇವರ ಬೆನ್ನತ್ತಿ ಮುಂಬೈ ಎಟಿಎಸ್‌ನವರು ಬಂದು ಹೋಗಿದ್ದರು.

    ಪಾಕ್‌ನಲ್ಲಿ ಹ್ಯಾಂಡ್ಲರ್‌: ಬಂಧಿತರಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಸೇರಿದಂತೆ ಮೂವರು ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ಸಜ್ಜಾಗುತ್ತಿರುವ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಶಂಕಿತರ ಹ್ಯಾಂಡ್ಲರ್ ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಭಯೋತ್ಪಾದಕ ಫರ್ಹಾತುಲ್ಲಾ ಗೋರಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಫರ್ಹಾತುಲ್ಲಾ ಗೋರಿ ಭಾರತದಲ್ಲಿ ಐಸಿಸ್ ಹೆಸರಿನಲ್ಲಿ ಯುವಕರನ್ನು ತಲೆಕೆಡಿಸಿ ಆನ್‌ಲೈನ್‌ ಜಿಹಾದ್‌ಗೆ ತಯಾರು ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ; ಅಧಿಕಾರಿಗೆ 1 ವರ್ಷ ಜೈಲು, 25 ಸಾವಿರ ರೂ. ದಂಡ

    ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ; ಅಧಿಕಾರಿಗೆ 1 ವರ್ಷ ಜೈಲು, 25 ಸಾವಿರ ರೂ. ದಂಡ

    ಧಾರವಾಡ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು (Lokayukta Police) ಸಲ್ಲಿಸಿದ್ದ ದೋಷಾರೋಪ ಪಟ್ಟಿ ಪರಿಶೀಲಿಸಿದ ಧಾರವಾಡದ (Dharwad) 3ನೇ ಅಧಿಕ, ಸೆಷನ್ಸ್‌ ಹಾಗೂ ವಿಶೇಷ ನ್ಯಾಯಾಲಯವು (Court) ಅಧಿಕಾರಿಯೊಬ್ಬರಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ನೂರ್‌ ಅಹ್ಮದ್‌ ಖಾನ್ ಎಂಬಾತನೇ ಶಿಕ್ಷೆಗೆ ಗುರಿಯಾದ ಅಧಿಕಾರಿ. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಬೌಲಿಂಗ್‌ನಲ್ಲಿ ಕೈಹಿಡಿದ ಮ್ಯಾಕ್ಸಿ – ಪಂದ್ಯ ಸೋತು ಸರಣಿ ಗೆದ್ದ ಭಾರತ

    ನೂರ್‌ ಅಹ್ಮದ್ ಖಾನ್ ಅವರ ಮೇಲೆ 2010ರ ನವೆಂಬರ್ 15 ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಂಗ್ಳೂರು-ಹೊಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್; ಗಂಟೆಗಟ್ಟಲೆ ನಿಂತಲ್ಲೇ ನಿಂತ ವಾಹನಗಳು

    ಇಂದು ವಿಚಾರಣೆ ನಡೆಸಿದ ಕೋರ್ಟ್‌ ನೂರ್‌ ಅಹ್ಮದ್‌ಖಾನ್‌ ಅವರ ಮೇಲಿನ ಆರೋಪ ಸಾಬೀತಾಗಿದ್ದು, ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಜೊತೆಗೆ 25 ಸಾವಿರ ರೂ. ದಂಡ ವಿಧಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣಪನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ

    ಗಣಪನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಕುಟುಂಬ

    ಹುಬ್ಬಳ್ಳಿ: ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆ ಮುಸ್ಲಿಂ ಕುಟುಂಬವೊಂದು (Muslim Family) ಗಣಪನಿಗೆ ಪೂಜೆ ಸಲ್ಲಿಸಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಗಣೇಶನಿಗೆ ಮುಸ್ಲಿಂ ಕುಟುಂಬ ಪೂಜೆ ಸಲ್ಲಿಸಿದೆ. ನಗರದ ನಿವಾಸಿ ಅಲಿಸಾಬ್ ಅದಾಪ್ ಹಾಗೂ ಮುಸಲ್ಮಾನ ಬಾಂಧವರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಶಾಲಾ ವಾಹನ ನಿಲ್ಲಿಸಿ, ಗನ್ ಝಳಪಿಸಿ ರೀಲ್ಸ್ ಮಾಡಿದ ಪುಂಡರು!

    ಗಣಪನಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸಿದ ಬಳಿಕ ಮುಸ್ಲಿಂ ಕುಟುಂಬ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದ್ದಾರೆ. ಈ ಮೂಲಕ ಪಂಚಾಕ್ಷರಿ ನಗರದ ಗಣೇಶ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲಗಿದ್ದಲ್ಲೇ ಅಸುನೀಗಿದ ಲಾರಿ ಚಾಲಕ

    ಮಲಗಿದ್ದಲ್ಲೇ ಅಸುನೀಗಿದ ಲಾರಿ ಚಾಲಕ

    ಧಾರವಾಡ: ಮಿನಿ ಲಾರಿ ಚಾಲಕನೋರ್ವ (Lorry Driver) ಲಾರಿಯಲ್ಲಿ ಮಲಗಿದ್ದಲ್ಲೇ ಅಸುನೀಗಿರುವ ಘಟನೆ ಧಾರವಾಡ (Dharwad) ಸಮೀಪದ ರಾಯಾಪುರದ ಬಳಿ ನಡೆದಿದೆ.

    ಮೂಲತಃ ತಮಿಳುನಾಡಿನ ರಾಜೇಂದ್ರ ಚೋಜಾನ್ ಕಲಿಯಾಪೆರುಮಾಳ (41) ಸಾವನ್ನಪ್ಪಿದ ಚಾಲಕ. ತಮಿಳುನಾಡಿನಿಂದ ರಾಯಾಪುರದ ಕೃಷ್ಣ ವೇರ್‌ಹೌಸ್‌ಗೆ ವಾಷಿಂಗ್ ಮಶಿನ್ ಬಿಡಿ ಭಾಗಗಳನ್ನು ಈ ಚಾಲಕ ತಂದಿದ್ದ. ರಾತ್ರಿ ಲಾರಿಯಲ್ಲಿ ಮಲಗಿದ್ದ ಚಾಲಕನಿಗೆ ಅಲ್ಲೇ ಹೃದಯಾಘಾತವಾಗಿದೆ. ಇದನ್ನೂ ಓದಿ: ವ್ಯಸನ ಮುಕ್ತನಾಗಲು ಬಂದು ಲಕ್ಷಗಟ್ಟಲೆ ಹಣ ಎಗರಿಸಿದ ಭೂಪ!

    ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ನಂತರ ಶವವನ್ನು ತಮಿಳುನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ – ಮಾಜಿ ಸೈನಿಕ ಸಾವು, ನಾಲ್ವರಿಗೆ ಗಂಭೀರ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಲವು ಷರತ್ತು ವಿಧಿಸಿ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಅನುಮತಿ

    ಹಲವು ಷರತ್ತು ವಿಧಿಸಿ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಅನುಮತಿ

    ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ (Eidgah Maidaan) ಗಣೇಶನ ಪ್ರತಿಷ್ಠಾಪನೆಗೆ ಹೈಕೋರ್ಟ್ ಅನುಮತಿ ನೀಡಿದರೂ ಪಾಲಿಕೆ ಆಯುಕ್ತರು (Corporation Commissioner) ಅನುಮತಿ ನೀಡಿರಲಿಲ್ಲ. ಇದೀಗ ಹಲವು ಷರತ್ತುಗಳನ್ನು ವಿಧಿಸಿ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.

    ಸೆಪ್ಟೆಂಬರ್ 19 ರಂದು ಬೆಳಗ್ಗೆ 6 ಗಂಟೆಯಿಂದ 21 ಮಧ್ಯಾಹ್ನ 12 ಗಂಟೆಯವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ದೊರೆತಿದೆ. 30×30 ಅಳತೆಯ ಪೆಂಡಾಲ್‌ಗೆ ಅವಕಾಶ ನೀಡಲಾಗಿದೆ. ಗಣೇಶ ಉತ್ಸವದ ಹೊರತಾಗಿ ಯಾವುದೇ ಬಾವುಟ, ಭಿತ್ತಿಪತ್ರ, ವಿವಾದಿತ ಫೋಟೋ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?

    ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ (Ganesh Chaturthi) ಹಬ್ಬ ಆಚರಣೆ ವೇಳೆ ಮನರಂಜನಾ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಅನಾವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೇ ಹೊಣೆಯಾಗಲಿದ್ದಾರೆ. ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ. ಮಾತ್ರವಲ್ಲದೇ ಪ್ರಚೋದನಕಾರಿ ಹೇಳಿಕೆ, ಭಾಷಣ ನಿಷೇಧ ಸೇರಿದಂತೆ 18 ಷರತ್ತುಗಳನ್ನು ಮಹಾನಗರ ಪಾಲಿಕೆ ವಿಧಿಸಿದೆ. ಇದನ್ನೂ ಓದಿ: 39 ವರ್ಷದ ವ್ಯಕ್ತಿಗೆ ಪಾಸಿಟಿವ್- ಕೇರಳದಲ್ಲಿ ನಿಫಾ ಪ್ರಕರಣ 6ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್

    ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ (Hubballi Eidgah Maidan) ಗಣೇಶ ಪ್ರತಿಷ್ಠಾಪನೆಗೆ ಕಳೆದ ಬಾರಿ ಸುಪ್ರೀಂ ಕೋರ್ಟ್ ನಮಗೆ ಅವಕಾಶ ನೀಡಿದೆ. ಈ ಬಾರಿಯೂ ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದು, ಕಾಂಗ್ರೆಸ್ (Congress) ಸರ್ಕಾರ ವಿನಾಕಾರಣ ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ಪರ್ಮಿಶನ್ ಕೊಡ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ (Arvind Bellad) ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡುತ್ತಿಲ್ಲ. ಜಗತ್ತಿಗೆ ಬೇಡವಾದ ಟಿಪ್ಪು ಜಯಂತಿಯನ್ನು ಅಲ್ಲಿ ಮಾಡಿದ್ದಾರೆ. ನಮಾಜ್ ಕೂಡಾ ಮಾಡಿದ್ದಾರೆ. ನಾವು ಪ್ರತಿಷ್ಠಾಪನೆಗೆ ಮನವಿ ಕೇಳಿದರೆ ಅವಕಾಶ ಕೊಡುತ್ತಿಲ್ಲ. ಅನುಮತಿ ಕೋರಿ ನಾವು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ. ಅನುಮತಿ ಕೊಡಲಿ ಬಿಡಲಿ. ನಾವು ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ನಾವು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂದರು.

    ಯಾರೂ ಅನುಮತಿ ಕೊಡಬೇಡಿ ಅಂತಾರೆ ಅವರು ದೇಶ ವಿರೋಧಿ ಸಂಘಟನೆಗಳು. ಒಂದು ತಿಂಗಳ ಹಿಂದೆ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಸರ್ಕಾರದಿಂದ ಏನೂ ಬಂದಿಲ್ಲ. ಇದು ಪಾಲಿಕೆ ಜಾಗ, ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಬರಲ್ಲ. ಗಣಪತಿ ಪ್ರಿಯರ ಪರವಾಗಿ ನಾನು ಮಾತಾಡ್ತಿದ್ದೇನೆ. ಜನರ ಭಾವನೆ ನಾನು ಸರ್ಕಾರಕ್ಕೆ ಮುಟ್ಟಿಸುತ್ತೇನೆ. ಪಾಲಿಕೆ ಕಮಿಷನರ್ ಸರ್ಕಾರಕ್ಕೆ ಕೇಳೋ ಅವಶ್ಯಕತೆ ಇಲ್ಲ. ಗಣೇಶ ಹಬ್ಬ ಮಾಡಿದರೆ ಅಲ್ಪ ಸಂಖ್ಯಾತರು ಸಿಟ್ಟಾಗುತ್ತಾರೆ ಎಂದು ಕಾಂಗ್ರೆಸ್ ತಿಳಿದುಕೊಂಡಿದೆ. ಹೀಗಾಗಿ ಅನುಮತಿ ತಡ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ 8 ಯುವಕರಿಗೆ ಮತ್ತು ಬರೋ ಚಾಕ್ಲೇಟ್ ನೀಡಿ ದರೋಡೆ

    ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ತುಷ್ಟೀಕರಣ ಬೇಕು. ಕಳೆದ ಒಂದು ತಿಂಗಳಿಂದ ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಅಧಿಕೃತವಾಗಿ ಪಾಲಿಕೆ ಲಿಖಿತವಾಗಿ ಅನುಮತಿ ಕೊಟ್ಟಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಅಧಿಕಾರಿಗಳು ಅವರ ಕೈಗೊಂಬೆ ಆಗಿದ್ದಾರೆ. ದೇಶ ವಿರೋಧಿ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಕಾಂಗ್ರೆಸ್ ಕೊಂಬು ಚಿಗುರು ಬರುತ್ತದೆ ಎಂದರು.

    ಎಸ್‌ಡಿಪಿಐ, ಎಐಎಂಐಎಂ ಸಂಘಟನೆಗಳು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಡಿ ಎಂದು ಮನವಿ ಕೊಟ್ಟಿವೆ. ಅವೆರಡು ದೇಶ ವಿರೋಧಿ ಸಂಘಟನೆಗಳು ಎಂದು ಬೆಲ್ಲದ್ ಹೇಳಿದರು. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ – ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಗುಂಡೂರಾವ್ ಸೂಚನೆ