Tag: ಧಾರವಾಡ

  • ಶಿಕ್ಷಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಕೊಲೆಗೈದು ಪರಾರಿಯಾಗಿದ್ದ ಆರೋಪಿ ಪೊಲೀಸರ ಅತಿಥಿ

    ಶಿಕ್ಷಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಕೊಲೆಗೈದು ಪರಾರಿಯಾಗಿದ್ದ ಆರೋಪಿ ಪೊಲೀಸರ ಅತಿಥಿ

    ಧಾರವಾಡ: ಇಲ್ಲಿನ ಓಂನಗರದಲ್ಲಿ ಇತ್ತೀಚೆಗಷ್ಟೇ ನಿವೃತ್ತ ಶಿಕ್ಷಕಿಯೊಬ್ಬರು (Teacher) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಪೊಲೀಸರು (Police) ಭೇದಿಸಿದ್ದಾರೆ.

    ಗಿರಿಜಾ ನಡೂರಮಠ (63) ಎಂಬ ನಿವೃತ್ತ ಶಿಕ್ಷಕಿಯ ಶವ ಕೊಳೆತ ಸ್ಥಿತಿಯಲ್ಲಿ ಡಿ.15 ರಂದು ಅವರ ಮನೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಸಹಜ ಸಾವು ಅಥವಾ ಆತ್ಮಹತ್ಯೆ ಇರಬಹುದು ಎಂದು ಎಲ್ಲರೂ ಊಹಿಸಿದ್ದರು. ಇದೀಗ ವಿದ್ಯಾಗಿರಿ ಠಾಣೆಯ ಪೊಲೀಸರು ಇದು ಕೊಲೆ ಎಂದು ಸಾಬೀತುಪಡಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ದುರ್ಮರಣ

    ಗಿರಿಜಾ ಅವರೊಂದಿಗೆ ಅಮರಗೋಳದ ಮಂಜುನಾಥ ದಂಡಿನ ಎಂಬಾತ ಹಣದ ವ್ಯವಹಾರ ಇಟ್ಟುಕೊಂಡಿದ್ದ. ಅವರಿಗೆ ಸುಮಾರು 10 ಲಕ್ಷ ರೂ. ಹಣ ಕೊಡಬೇಕಾಗಿತ್ತು. ಇದೇ ಕಾರಣಕ್ಕೆ ಗಿರಿಜಾ ಅವರನ್ನು ಆತ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

    ಆರೋಪಿ ಮಂಜುನಾಥ್ ವೇಲ್‍ನಿಂದ ಶಿಕ್ಷಕಿಯ ಕತ್ತು ಬಿಗಿದು ಕೊಲೆಗೈದಿದ್ದಾನೆ. ಆದರೆ ಕೊಲೆ ಎಂದು ಯಾವುದೇ ಗುರುತು ಆರಂಭದಲ್ಲಿ ಗೊತ್ತಾಗಿರಲಿಲ್ಲ. ದೇಹವನ್ನು ಪರೀಕ್ಷಿಸಿದಾಗ ಕುತ್ತಿಗೆಯ ಭಾಗದಲ್ಲಿ ಸಣ್ಣ ಕಲೆ ಕಂಡಿದ್ದು ಇದನ್ನೇ ಇಟ್ಟುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿ ಟೀ ಅಂಗಡಿಗೆ ಟ್ರಕ್‌ ನುಗ್ಗಿಸಿದ ಚಾಲಕ- ಐವರ ದುರ್ಮರಣ

  • ಚುನಾವಣೆಯಲ್ಲಿ ಸೋತಿದ್ದಕ್ಕೆ ಕರ್ನಾಟಕ ವಿವಿ ನೌಕರ ಆತ್ಮಹತ್ಯೆ

    ಚುನಾವಣೆಯಲ್ಲಿ ಸೋತಿದ್ದಕ್ಕೆ ಕರ್ನಾಟಕ ವಿವಿ ನೌಕರ ಆತ್ಮಹತ್ಯೆ

    ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ (Karnataka University) ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ (Election) ಸ್ಪರ್ಧಿಸಿ ಸೋತ ಅಭ್ಯರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮುರುಘಾ ಮಠದ ಬಳಿ ನಡೆದಿದೆ.

    ವಿಶ್ವವಿದ್ಯಾಲಯದ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಚಂದ್ರಕಾಂತ್ ಸಾವಳಗಿ (55) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಶನಿವಾರ ಚುನಾವಣೆ ಫಲಿತಾಂಶ ಬಂದ ಮೇಲೆ ಮನೆಗೆ ವಾಪಸ್ ಆಗಿದ್ದ ಅವರು ಅದೇ ದಿನ ರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೂರ್ನಾಲ್ಕು ದಿನಗಳಿಂದ ಮನೆಯ ಬಾಗಿಲು ತೆರೆಯದ ಕಾರಣ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಬಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೋಮಾರಿ ಸಿದ್ದ ಪದ ಬಳಸಿದ್ದು ಸಿದ್ದರಾಮಯ್ಯರಿಗೆ ಅಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ

    ಚುನಾವಣೆಯಲ್ಲಿ ಸೋಲನುಭವಿಸಿದ್ದಕ್ಕೆ ಚಂದ್ರಕಾಂತ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಹರ ಠಾಣೆ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

  • ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ: ಸಚಿವ ಲಾಡ್

    ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ: ಸಚಿವ ಲಾಡ್

    ಧಾರವಾಡ: ಮದ್ಯಪ್ರಿಯರ ಕೆಲವೊಂದಿಷ್ಟು ಬೇಡಿಕೆಗಳು ನ್ಯಾಯಯುತವಾಗಿವೆ. ಮದ್ಯದ ಬಾಟಲಿಯ ಮೇಲೆ ವಿಮೆ ಮಾಡುವಂತೆ ಮದ್ಯಪ್ರಿಯರು ಬೇಡಿಕೆ ಇಟ್ಟಿದ್ದಾರೆ. ಇದು ಚರ್ಚಿಸುವ ವಿಚಾರ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

    ಧಾರವಾಡದಲ್ಲಿ (Santosh Lad) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದ (Suvarna Vidhana Soudha) ಎದುರು ಮದ್ಯಪ್ರಿಯರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮದ್ಯದ ಬಾಟಲಿ ಮೇಲೆ ವಿಮೆ ಮಾಡಿದರೆ, ವಿಮೆ ಕಟ್ಟಲು ಅವರು ತಯಾರಿದ್ದಾರೆ. ಇದು ಎರಡೂ ಕಡೆ ಲಾಭ ಆಗುತ್ತದೆ. ವಿಮೆಯಿಂದ ಅವರ ಆರೋಗ್ಯಕ್ಕೆ ವಿಮೆ ಅನುಕೂಲ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಮದ್ಯಪ್ರಿಯರ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಜೊತೆಗೆ ಚರ್ಚೆ ಮಾಡುತ್ತೇನೆ. ಇದು ಅವರ ಒಳ್ಳೆಯ ಸಲಹೆ. ಈ ಬೇಡಿಕೆಯ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ನಗುತ್ತ ಪ್ರತಿಕ್ರಿಯಿಸಿದ್ದಾರೆ.

    ಬಳಿಕ ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ಇಲಾಖೆಯೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್‌ ಜಾಮ್‌ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ

  • ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ

    ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ

    ಧಾರವಾಡ: ಮೌಲ್ವಿ ತನ್ವೀರ್ ಪೀರಾ (Maulvi Tanveer Peer) ಜೊತೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಇಲ್ಲಿನ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.

    ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೀರಾ ಸೋದರ ಮಾವನೊಂದಿಗೆ ಯತ್ನಾಳ್ ಅವರ ವ್ಯವಹಾರದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ವಿಜಯಪುರದ ಎಂ.ಜಿ ರಸ್ತೆಯ ವಾರ್ಡ್ ನಂ.3ರಲ್ಲಿ ಹೋಟೆಲ್ ಟೂರಿಸ್ಟ್ ಕಟ್ಟಿದ್ದಾರೆ. ಇದನ್ನು ಎಂ.ಎಂ ಪೀರಜಾದೆ ಹಾಗೂ ಯತ್ನಾಳ್ ಒಡೆತನದಲ್ಲಿ ಕಟ್ಟಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ – ಆಸ್ತಿ ವಿಚಾರಕ್ಕೆ ಮಗನಿಂದ ಹತ್ಯೆ ಶಂಕೆ

    ಪೀರಜಾದೆಯವರು ಪೀರಾ ಅವರ ತಾಯಿಯ ಸಹೋದರರಾಗಿದ್ದು, ಅವರೊಂದಿಗೆ ಯತ್ನಾಳ್ ಅವರಿಗೆ 30-40 ವರ್ಷಗಳ ವ್ಯವಹಾರಿಕ ಸಂಬಂಧವಿದೆ. ಪೀರಾ ಹಾಗೂ ಪೀರಜಾದೆ ಎಲ್ಲರೂ ಸೇರಿ ವ್ಯವಹಾರ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

    ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಟ್ವೀಟ್ ಮಾಡಿದ್ದರು. ಇದಕ್ಕೆ ಯತ್ನಾಳ್ ಅವರು ಮರು ಟ್ವೀಟ್ ಮಾಡಿ ಪೀರಾ ಅವರೊಂದಿಗೆ ಯಾವುದೇ ವ್ಯವಹಾರ ಹೊಂದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ತಮಟಗಾರ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನನ್ನ, ಸಿದ್ದರಾಮಯ್ಯ ನಡುವೆ ಅಸಮಾಧಾನವಿಲ್ಲ, ಅವರಿಗೆ ಸಿಎಂ ಆಗುವ ಅದೃಷ್ಟ ಇತ್ತು: ಬಿ.ಕೆ ಹರಿಪ್ರಸಾದ್

  • ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಮಠಾಧೀಶರು, ಪಾದ್ರಿ, ಮೌಲ್ವಿಗಳು ರಾಜಕಾರಣ ಮಾಡಬಾರದು: ನಿಜಗುಣಾನಂದ ಶ್ರೀ ‌

    ಧಾರವಾಡ: ಮಠಾಧೀಶರು, ಪಾದ್ರಿಗಳು ಮತ್ತು ಮೌಲ್ವಿಗಳು ರಾಜಕಾರಣ ಮಾಡಬಾರದು ಎಂದು ನಿಜಗುಣಾನಂದ ಸ್ವಾಮೀಜಿ (Nijagunananda Swamiji) ಅಭಿಪ್ರಾಯಪಟ್ಟರು.

    ಡಿ.ಕೆ.ಶಿವಕುಮಾರ್‌ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ ಎಂದರು‌. ಇದನ್ನೂ ಓದಿ: ಯತ್ನಾಳ್‍ರಿಂದ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ: ಎಂ.ಬಿ ಪಾಟೀಲ್

    ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ, ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿವೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಚಾನೆಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್‌ಗಳು ಮತ್ತು ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ, ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು, ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

    ಮಠಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಆಗ ಮಹಾರಾಜರು ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶೈಕ್ಷಣಿಕ ಸಂಸ್ಥೆ, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳು ಇರುತ್ತಾರೆ. ಸಾವಿರಾರೂ ಪುಸ್ತಕ ಪ್ರಕಟಿಸಬೇಕಿರುತ್ತದೆ. ರಾಜಾಶ್ರಯ ಕಳೆದುಕೊಂಡ ಸಂಗೀತಗಾರರಿಗೆ ಮಠಗಳೇ ಆಶ್ರಯ ಆಗಿರುತ್ತವೆ. ಅನೇಕ ಜನರಿಗೆ ಮಠಗಳು ಅವಕಾಶ ಕಲ್ಪಿಸಿಕೊಡಬೇಕಿರುತ್ತದೆ. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ ಸಹ ಮಠದ ಸೇವೆ ಸಂಪೂರ್ಣ ಪ್ರಜೆಗಳಿಗೆ ಸಲ್ಲುತ್ತದೆ. ಹೀಗಾಗಿ ಸರ್ಕಾರ ಅನುದಾನ ಕೊಡಬೇಕಾಗುತ್ತದೆ ಎಂದು ಹೇಳಿದರು.

  • ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

    ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

    ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ ನಂತರ ಮೌಲ್ವಿ ತನ್ವೀರ್ ಪೀರಾ (Tanveer Peer) ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಹಳಷ್ಟು ಆರೋಪಗಳನ್ನು ಮಾಡಿದರು. ಈ ಆರೋಪಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ಮುಖಂಡರೊಬ್ಬರು ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.

    ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವ ಧಾರವಾಡದ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ, ಶಾಸಕ ಯತ್ನಾಳ್ ಆರೋಪ ಮಾಡಿದ್ದ ಮೌಲ್ವಿ ತನ್ವೀರ್ ಪೀರಾ ಜೊತೆಯಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಇರುವ ಫೋಟೋ ಬಿಡುಗಡೆ ಮಾಡಿದ್ದಾರೆ.

    ಫೋಟೋ ಬಿಡುಗಡೆ ಮಾಡಿ ಹೇಳಿಕೆ ನೀಡಿದ ಇಸ್ಮಾಯಿಲ್ ತಮಟಗಾರ, ಯತ್ನಾಳ್ ಅವರು ಒಂದು ಫೋಟೋ ಬಿಡುಗಡೆ ಮಾಡಿದ್ದಾರೆ, ಆ ಫೋಟೋಗಳನ್ನು ಈಗ ವೆಬ್‌ಸೈಟ್‌ನಿಂದ ತೆಗೆದಿದ್ದಾರೆ. ಅದೇ ವೆಬ್‌ಸೈಟ್‌ನಲ್ಲಿ ಬಿಜೆಪಿ ಮುಖಂಡರ ಫೋಟೋಗಳೂ ಇವೆ ಎಂದು ಹೇಳಿದರು. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಅದರಲ್ಲಿ ಗಡ್ಕರಿಯವರ ಫೋಟೋ ಸಹ ಇದೆ. ಇರಾಕ್‌ನಲ್ಲಿನ ಪ್ರಸಿದ್ಧ ದರ್ಗಾ ಅದು. ಆ ದರ್ಗಾದ ಮುಖ್ಯಸ್ಥರ ಜೊತೆ ಮೌಲ್ವಿ ತನ್ವೀರ್ ಪೀರಾ ಇರೋ ಫೋಟೋ ಇವೆ. ಅದೇ ಮುಖ್ಯಸ್ಥರನ್ನು ಗಡ್ಕರಿಯವರು ಈ ಹಿಂದೆ ಭೇಟಿಯಾಗಿದ್ದಾರೆ. ಆ ಭೇಟಿ ವೇಳೆಯ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಇರಾಕ್ ರಾಷ್ಟ್ರಧ್ವಜವೂ ಇದೆ. ಅದು ಜಗತ್ಪ್ರಸಿದ್ಧ ದರ್ಗಾ. ಅಲ್ಲಿ ಜಗತ್ತಿನ ಅನೇಕರು ಹೋಗುತ್ತಾರೆ. ಅದನ್ನೇ ಇಟ್ಟುಕೊಂಡು ಯತ್ನಾಳ್ ಆರೋಪ ಮಾಡುತ್ತಿದ್ದಾರೆ ಎಂದರು.

    ಯತ್ನಾಳರಿಗೆ ಧಾರವಾಡ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಇಲ್ಲವೇ ಇಲ್ಲಿನ ಹುಚ್ಚಾಸ್ಪತ್ರೆಯಿಂದ ಮಾತ್ರೆಯಾದರೂ ಒಯ್ದು ಕೊಡಬೇಕಿದೆ. ಇಲ್ಲಿ 50 ಕಿಮೀ ಸಮೀಪದ ಬೆಳಗಾವಿಗೆ ಅವರು ಬಂದಿದ್ದಾರೆ. ಹೀಗಾಗಿ ಧಾರವಾಡ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಇಸ್ಮಾಯಿಲ್ ಯತ್ನಾಳ್ ಬಗ್ಗೆ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಾನು ರಾಜ್ಯಾಧ್ಯಕ್ಷನಾದ 20 ದಿನಗಳಲ್ಲಿಯೇ ಬದಲಾವಣೆ: ವಿಜಯೇಂದ್ರ

  • ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಧಾರವಾಡ: ಸಿಎಂ ಸಿದ್ದರಾಮಯ್ಯನವರ (CM Siddaramaiah) ಭದ್ರತಾ ವಿಚಾರದಲ್ಲಿ ಧಾರವಾಡ ಪೊಲೀಸರು (Dharwad Police) ಎಡವಿದ್ರಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ವೇದಿಕೆ ಮೇಲೆ ಕುಳಿತವರ ಮಾಹಿತಿ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಮೊದಲೇ ಗೊತ್ತಿತ್ತು ಎಂಬ ವಿಚಾರ ಈಗ ಮೂಲಗಳಿಂದ ತಿಳಿದು ಬಂದಿದೆ.

    ತನ್ವೀರ್ ಪೀರಾ (Tanveer Peera) ಮೇಲಿನ ಅಪರಾಧಗಳ‌ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಇತ್ತು. ಆದರೆ ಯಾವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಬಿಜೆಪಿ ಶಾಸಕ ಯತ್ನಾಳ್‌ ಸಿಡಿಸಿದ ʼಐಸಿಸ್‌ ಬಾಂಬ್‌ʼ ನಿಂದ ಎಚ್ಚೆತ್ತ ಪೊಲೀಸರು ಕಾರ್ಯಕ್ರಮ ಆಯೋಜಕರಿಂದ ಮತ್ತೊಮ್ಮೆ ವೇದಿಕೆ ಮೇಲೆ ಕುಳಿತವರಿಂದ ಮಾಹಿತಿ ಪಡೆಯುತ್ತಿದ್ದಾರೆ.

     
    ವೇದಿಕೆಯ ಮೇಲೆ ಸಿಎಂ ಜೊತೆಗಿದ್ದ 26 ಜನರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್‌ ಮತ್ತಷ್ಟು ಬಾಂಬ್‌ ಸಿಡಿಸುವ ಸಾಧ್ಯತೆ ಇರುವುದರಿಂದ ಸರ್ಕಾರ ಎಚ್ಚೆತ್ತುಕೊಂಡು ಗಣ್ಯರ ಮಾಹಿತಿ ಸಂಗ್ರಹಿಸಲು ಸೂಚಿಸಿದೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ್ದ ಯತ್ನಾಳ್‌, ತನ್ವೀರ್‌ ಪೀರಾ ಮದರಸಾ ನಡೆಸುತ್ತಿದ್ದು, ವಿಮಾನದಲ್ಲೇ ದೇಶ, ವಿದೇಶಗಳನ್ನು ಸುತ್ತುತ್ತಿದ್ದಾರೆ. ಈ ವ್ಯಕ್ತಿಗೆ ಹಣ ನೀಡುವವರು ಯಾರು? ಟಿಕೆಟ್‌ ಬುಕ್‌ ಮಾಡುವವರು ಯಾರು? ಈ ವ್ಯಕ್ತಿಯ ಖಾತೆಗೆ ಯಾವ ದೇಶದಿಂದ ಎಷ್ಟು ಹಣ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿದರೆ ಎಲ್ಲಾ ವಿಚಾರಗಳು ಬಯಲಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಈ ವ್ಯಕ್ತಿಯ ಮೇಲೆ ತನಿಖೆ ನಡೆಸಬೇಕೆಂದು ಕೋರಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.

     

    ಯಾರು ಈ ತನ್ವೀರ್‌ ಪೀರಾ?
    ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್ ಪೀರಾ ಈ ವರ್ಷದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ನಡೆದಿದ್ದ ಶೂಟೌಟ್ ಕೇಸಲ್ಲಿ ಮೂರನೇ ಆರೋಪಿಯಾಗಿದ್ದಾರೆ.

    ಮೇ 6 ರಂದು ವಿಜಯಪುರದಲ್ಲಿ ನಡೆದ ಶೂಟೌಟ್‌ನಲ್ಲಿ ರೌಡಿ ಶೀಟರ್ ಹೈದರಾಲಿ ನದಾಫ್ ಎಂಬುವನ ಹತ್ಯೆ ನಡೆದಿತ್ತು. ಆ ಹತ್ಯೆಯನ್ನು ತನ್ವೀರ್‌ ಪೀರಾ ಹಾಸ್ಮಿ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹತ್ಯೆಯಾದ ಹೈದರಾಲಿ ಪತ್ನಿ ನಿಶಾತ್ ದೂರು ದಾಖಲಿಸಿದ್ದರು. ದೂರಿನಲ್ಲಿ ತನ್ವೀರ್ ಪೀರಾ ಹೆಸರನ್ನು ಕೂಡ ಹಾಕಲಾಗಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ಐಸಿಸ್‌ ಜೊತೆ ನಂಟು ಸಾಬೀತು ಪಡಿಸಿದ್ರೆ ದೇಶ ತೊರೆಯುತ್ತೇನೆ: ಯತ್ನಾಳ್‌ಗೆ ತನ್ವೀರ್‌ ಪೀರಾ ಸವಾಲ್‌

     

    ವಿಜಯಪುರ ಮೂಲದವ ಸದ್ಯ ಸೂಫಿ ಎಂದು ಗುರುತಿಸಿಕೊಂಡಿರುವ ತನ್ವೀರ್ ಪೀರಾ ದೇಶಾದ್ಯಂತ ಸುತ್ತಾಟ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basangouda Patil Yatnal) ಮತ್ತು ತನ್ವೀರ್ ಪೀರಾ ನಡುವಣ ವೈರತ್ವ ಇಂದಿನದ್ದಲ್ಲ. 2018ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಯತ್ನಾಳ್ ವಿರುದ್ಧ ತನ್ವೀರ್ ಅಬ್ಬರಿಸಿದ್ದರು. ಮುಂದೆ ಬಕ್ರೀದ್ ಬರಲಿದೆ. ಆಗ ಕುರುಬಾನಿ ಕೊಡುತ್ತೇವೆ. ಆಗ ಸೈತಾನ್ ವಿರೋಧಿಸಿದರೆ ನಾವು ಸುಮ್ಮನಿರಲ್ಲ. ಒಂದು ಕುರುಬಾನಿ ಜೊತೆಗೆ ಇನ್ನೊಂದು ಕುರುಬಾನಿ ಆಗಬಾರದು. ಈಗಲೇ ಎಚ್ಚರಿಸುತ್ತಿದ್ದೇನೆ ಎಂದಿದ್ದರು. ಈ ಸಂಬಂಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ತನ್ವೀರ್ ವಿರುದ್ಧ ಕೇಸ್ ದಾಖಲಾಗಿತ್ತು.

     

  • ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ – ಠಾಣೆ ಎದುರೇ ಹಾರ ಬದಲಿಸಿದ ಜೋಡಿ

    ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ – ಠಾಣೆ ಎದುರೇ ಹಾರ ಬದಲಿಸಿದ ಜೋಡಿ

    ಧಾರವಾಡ: ಮನೆಯವರ ವಿರೋಧದ ನಡುವೆಯೂ ಮುಸ್ಲಿಂ (Muslim) ಹುಡುಗಿ ಹಿಂದೂ (Hindu) ಹುಡಗನ ಕೈ ಹಿಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಮಂಜುನಾಥ್ ಹಾಗೂ ಉಮೇದ್ ಕಳೆದ ಆರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೀತಿಗೆ (Love) ಯುವತಿಯ ಮನೆಯವರ ತೀವ್ರ ವಿರೋಧವಿತ್ತು. ಅದಕ್ಕೆ ಕಾರಣ ಅವರಿಬ್ಬರ ಧರ್ಮ. ಆದರೆ ಈ ಪ್ರೇಮಿಗಳು ಧರ್ಮವನ್ನೂ ಮೀರಿ ಪ್ರೀತಿಸಿದ್ದು, ಕೊನೆಗೆ ಪೊಲೀಸ್ ಠಾಣೆಯಲ್ಲಿ ಮದುವೆಯಾಗುವ (Marriage) ಮೂಲಕ ಒಂದಾಗಿದ್ದಾರೆ. ಇದನ್ನೂ ಓದಿ: ಲವ್ವರ್ ಮಾತು ಕೇಳಿ ಪತಿ ಮೊಬೈಲ್‍ನಿಂದ ಬೆದರಿಕೆ ಮೆಸೇಜ್ ಕಳಿಸಿ ಸಿಕ್ಕಿಬಿದ್ದ ಪತ್ನಿ!

    ಧಾರವಾಡ (Dharwad) ತಾಲೂಕಿನ ಬಾಡ ಗ್ರಾಮದವರಾದ ಇವರಿಬ್ಬರು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದರು. ಯುವಕ ಮಂಜುನಾಥ್ ಹಿಂದೂ ಧರ್ಮಕ್ಕೆ ಸೇರಿದರೆ, ಯುವತಿ ಉಮೇದ್ ಮುಸ್ಲಿಂ ಧರ್ಮದವಳು. ಇವರ ಪ್ರೇಮಕ್ಕೆ ಯುವಕನ ಮನೆಯವರ ವಿರೋಧವೇನೂ ಇರಲಿಲ್ಲ. ಆದರೆ ಯುವತಿಯ ಮನೆಯವರು ಇವರಿಬ್ಬರ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿರೋಧದ ಮಧ್ಯೆಯೂ ಪ್ರೇಮಿಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹ ನೋಂದಣಿ ಸಹ ಮಾಡಿಕೊಂಡು ಊರು ಬಿಟ್ಟು ಹೋಗಿದ್ದರು. ಈ ಸಂಬಂಧ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು. ಇದನ್ನೂ ಓದಿ: ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರದ ಚೆಕ್ ವಿತರಣೆ

    ಇಂದು ಇಬ್ಬರೂ ಪ್ರೇಮಿಗಳು ತಮ್ಮನ್ನು ಒಂದು ಮಾಡುವಂತೆ ಪೊಲೀಸರ ಮೊರೆ ಹೋಗಿದ್ದರು. ಸ್ವತಃ ತಾವೇ ಠಾಣೆಗೆ ಬಂದು ಹಾಜರಾಗಿದ್ದರು. ಆದರೆ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸುವ ಮೂಲಕ ಇಬ್ಬರನ್ನೂ ಬೇರೆ ಬೇರೆ ಮಾಡುವ ಕೆಲಸ ಮಾಡಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಬಜರಂಗದಳ ಕಾರ್ಯಕರ್ತರು ಇಬ್ಬರೂ ಪ್ರೇಮಿಗಳನ್ನು ಒಂದು ಮಾಡಬೇಕು. ಯುವಕನ ಜೊತೆ ಹೋಗಲು ಯುವತಿಯ ಮನಸ್ಸಿದ್ದರೂ ಆಕೆಯನ್ನು ಒತ್ತಾಯದಿಂದ ಸಾಂತ್ವನ ಕೇಂದ್ರಕ್ಕೆ ಕಳುಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಬಜರಂಗದಳದ ಕಾರ್ಯಕರ್ತರು ಇಬ್ಬರೂ ಪ್ರೇಮಿಗಳಿಗೆ ಠಾಣೆಯಲ್ಲೇ ಮದುವೆ ಸಹ ಮಾಡಿಸಿ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

  • ನಡುರಸ್ತೆಯಲ್ಲೇ ವೃದ್ಧನ ಬರ್ಬರ ಹತ್ಯೆ- ದೃಶ್ಯ ಮೊಬೈಲ್‍ನಲ್ಲಿ ಸೆರೆ

    ನಡುರಸ್ತೆಯಲ್ಲೇ ವೃದ್ಧನ ಬರ್ಬರ ಹತ್ಯೆ- ದೃಶ್ಯ ಮೊಬೈಲ್‍ನಲ್ಲಿ ಸೆರೆ

    ಧಾರವಾಡ: ಆಸ್ತಿ ವಿಚಾರಕ್ಕಾಗಿ ವ್ಯಕ್ತಿಯೋರ್ವನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder) ಮಾಡಿದ ಘಟನೆ ನಗರದ (Dharwad) ಕೊಪ್ಪದಕೇರಿ ಶಿವಾಲಯದ ಬಳಿ ನಡೆದಿದೆ.

    ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಹತ್ಯೆಗೀಡಾದ ವ್ಯಕ್ತಿ. ಜನದಟ್ಟಣೆ ಇರುವ ಜಾಗದಲ್ಲೇ ಈ ಕೃತ್ಯ ನಡೆದಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಕರೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ವೃದ್ಧನ ಹತ್ಯೆಗೈಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ಯುವಕನೊಬ್ಬ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನೂ ಓದಿ: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಎಫ್‍ಐಆರ್

    ಕೊಲೆ ಮಾಡುತ್ತಿರುವ ಮೊಬೈಲ್ ವೀಡಿಯೋ ಪೊಲೀಸರಿಗೆ (Police) ಸಿಕ್ಕಿದ್ದು, ಮೂರು ಅರೋಪಿಗಳು ಕೊಲೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

  • ಕಾಂಗ್ರೆಸ್‍ನ ತುಷ್ಠೀಕರಣ ಪರಿಣಾಮ ಮುಸ್ಲಿಮರಿಗೆ ನಮ್ಮದೇ ರಾಜ್ಯ ಎನ್ನುವ ಭ್ರಮೆ: ಮುತಾಲಿಕ್

    ಕಾಂಗ್ರೆಸ್‍ನ ತುಷ್ಠೀಕರಣ ಪರಿಣಾಮ ಮುಸ್ಲಿಮರಿಗೆ ನಮ್ಮದೇ ರಾಜ್ಯ ಎನ್ನುವ ಭ್ರಮೆ: ಮುತಾಲಿಕ್

    ಧಾರವಾಡ: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಮುಂದಾಗಿ ಎಂದು ಬೆಂಗಳೂರಿನ (Bengaluru) ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇಡೀ ಹಿಂದೂಗಳಿಗೆ ಇವರು ಈ ರೀತಿಯ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್‍ನ (Congress) ತುಷ್ಟೀಕರಣ ಪರಿಣಾಮ ಮುಸ್ಲಿಮರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶವನ್ನು ಇಸ್ಲಾಂ ಮಾಡುತ್ತೇವೆ. ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಮುಜಾಹಿದ್ದೀನ್ ಎಂಬ ಹಿಂದೂ ವಿರೋಧಿ ಸಂಘಟನೆಯಿಂದ ಈ ರೀತಿಯ ಸಂದೇಶ ಬಂದಿದೆ. ಇದು ಬಹು ದೊಡ್ಡ ಆತಂಕದ ಸಂಗತಿಯಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: Bomb Threat: ಅಪ್ಪ-ಅಮ್ಮನಿಗೆ ಕಷ್ಟ ಆಗ್ತಿದೆ; ಪೊಲೀಸ್ ಕಂಪ್ಲೇಂಟ್ ಕೊಟ್ಟೇ ಕೊಡ್ತೀನಿ – ಪುಟ್ಟ ಬಾಲಕನ ಆಕ್ರೋಶ

    ಶಾಲಾ- ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರವಾಗಿದೆ. ಜನರು ತಮ್ಮ ಸುರಕ್ಷತೆ ಬಗ್ಗೆ ವಿಚಾರ ಮಾಡಬೇಕು. ಈ ಮೇಲ್‍ಗಳು ಎಲ್ಲಿಂದ ಯಾರಿಗೆ ಬಂದಿದೆ ಎಂಬುದನ್ನು ಪತ್ತೆ ಮಾಡಬೇಕು. ಇದೊಂದು ಭಯೋತ್ಪಾದನೆಗೆ ಸಂಬಂಧಪಟ್ಟ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಘಟನೆಗಳು ಆಗುವ ಬಗ್ಗೆ ಮೇಲ್‍ನಲ್ಲಿ ಸೂಚನೆ ಇದೆ. ಸರ್ಕಾರ ಇಂತವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಇವರನ್ನು ಒದ್ದು ಒಳಗೆ ಹಾಕಬೇಕು ಎಂದು ಗುಡುಗಿದ್ದಾರೆ.

    ಮೂರ್ತಿ ಉಪಾಸಕರನ್ನು ಕೊಲ್ಲಬೇಕು ಎಂದು ಕುರಾನ್‍ನಲ್ಲಿ ಬರೆಯಲಾಗಿದೆ. ಇದಕ್ಕೆ ಪುಷ್ಠಿಯಾಗಿ ಈ ಮೇಲ್ ಬಂದಿದೆ. ಇದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ತಂಗಿಯ ಮೇಲಿನ ಸೇಡಿಗೆ ಆಕೆಯ ಮಗುವನ್ನೇ ಕೊಲೆಗೈದು ಜೈಲು ಪಾಲಾದ ಅಕ್ಕ