Tag: ಧಾರವಾಡ

  • ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದೇವೆ, ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ, ಮೋದಿಗೆ ಗಿಫ್ಟ್ ಕೊಡಿ: ಪ್ರಹ್ಲಾದ್ ಜೋಶಿ

    ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದೇವೆ, ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ, ಮೋದಿಗೆ ಗಿಫ್ಟ್ ಕೊಡಿ: ಪ್ರಹ್ಲಾದ್ ಜೋಶಿ

    ಧಾರವಾಡ: ದೇಶದಲ್ಲಿ ಮೊದಲು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು. ಆರ್ಟಿಕಲ್ 370 ( Article 370) ತೆಗೆದು ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದ ಕಬಡ್ಡಿ ಪಂದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಮೊದಲು ಬೆಂಗಳೂರು, ಹೈದರಾಬಾದ್‍ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲವೂ ಬಂದ್ ಆಗಿದೆ. ಏಕೆಂದರೆ ಆರ್ಟಿಕಲ್ 370 ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಧರ್ಮಪತ್ನಿಯನ್ನು ನಮಗೆ ಪರಿಚಯಿಸಿ: ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಒತ್ತಾಯ

    ಮೋದಿಯವರು (Narendra Modi) ಆರ್ಟಿಕಲ್ 370 ತೆಗೆದಿದ್ದೇ ಇದಕ್ಕೆಲ್ಲ ಕಾರಣ. ಹೀಗಾಗಿ ಬಿಜೆಪಿಯ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. ಇದುವೇ ನೀವು ಮೋದಿಯವರಿಗೆ ಕೊಡುವ ಗಿಫ್ಟ್ ಎಂದು ಹೇಳಿದರು. ಇದನ್ನೂ ಓದಿ: ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನರ ಮನಸ್ಥಿತಿಗೆ ಸಾಕ್ಷಿ: ಡಿಕೆಶಿ

  • 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಧಾರವಾಡದ (Dharwad) ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ.

    ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ (Dodamani Markandeya) ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ (PHD) ಮುಗಿಸಿ ಇದೀಗ ಡಾಕ್ಟರೇಟ್ (Doctorate) ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್‌ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಈ ಅವಧಿಯಲ್ಲಿ ಅವರ ಗೈಡ್ ನಿಧನರಾದ ಹಿನ್ನೆಲೆ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಇತರ ಕಡೆಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಬಗ್ಗೆ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ಅವರು ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

    ಡೋಹರ ಸಮುದಾಯದ ಚರಿತ್ರೆ, ಬಸವಣ್ಣನವರ ವಚನಗಳಲ್ಲಿ ಕಕ್ಕಯ್ಯನವರನ್ನು ಸ್ಮರಿಸಿಕೊಂಡಿರುವುದು, ಧಾರವಾಡ ಸಮೀಪದಲ್ಲೇ ಕಕ್ಕಯ್ಯ ಪ್ರಾಣ ಬಿಟ್ಟಿರುವುದು, ಗುಜರಾತ್, ಕಾಶ್ಮೀರ ಮತ್ತು ತಮಿಳುನಾಡು ಮೂಲದಿಂದ ಕಲ್ಯಾಣಕ್ಕೆ ಬಂದ ಶಿವಶರಣರ ನಂಟು ಇವೆಲ್ಲದರ ಮೇಲೆ ಮಾರ್ಕಂಡೇಯ ಸಮಗ್ರ ಬೆಳಕು ಚೆಲ್ಲಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

  • ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

    ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

    ಧಾರವಾಡ: ಓದಿನ ಕಡೆ ಗಮನ ಕೊಡು ಎಂದು ಪೋಷಕರು ಹೇಳಿದ್ದಕ್ಕೆ ಯುವಕನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಮೃತನನ್ನು ಚೇತನ್ ತೊಂಡಿಹಾಳ ಎಂದು ಗುರುತಿಸಲಾಗಿದೆ. ಈತ ಧಾರವಾಡದ ಸಾಧನಕೇರಿಯ ನಿವಾಸಿಯೇ ನಗರದ ಕಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳ್ಳೆಯ ಫುಟ್ಬಾಲ್ ಪ್ಲೇಯರ್ (FootBall Player) ಆಗಿದ್ದ ಈತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನು. ಇದನ್ನೂ ಓದಿ: ಮಲೆನಾಡಲ್ಲಿ ಮತ್ತೆ ನಕ್ಸಲರ ಹೆಜ್ಜೆ – ಹೈ ಅಲರ್ಟ್ ಘೋಷಣೆ

    ನಾಲ್ಕು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೇತನ್, ಅದರಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದನು. ಆತನ ಕುಟುಂಬಸ್ಥರು ಆತನಿಗೆ ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದರು. ಆದರೆ ಖಿನ್ನತೆಯಿಂದ ಹೊರಬರಲಾಗದೇ ಚೇತನ್ ಕೊನೆಗೆ ಕೆಲಗೇರಿ ಕೆರೆಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

    ಚೇತನ್ ತನಗಿಷ್ಟ ಬಂದಂತೆ ಇರಲಿ ಎಂದು ನಾವು ಒತ್ತಡ ಹಾಕಿರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತನಿಗೆ ಚಿಕಿತ್ಸೆ ಸಹ ಕೊಡಿಸಿದ್ದೆವು. ಆದರೆ ಆತ ಮನೆ ಬಿಟ್ಟು ಹೊರಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚೇತನ್ ಪೋಷಕರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.

    ಈ ಸಂಬಂಧ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  • ಧಾರವಾಡದ ತಡಕೋಡ ಧ್ವಜ ಗಲಾಟೆ – ಹಿಂದೂ ಕಾರ್ಯಕರ್ತರಿಗೆ ಜಾಮೀನು ಮಂಜೂರು

    ಧಾರವಾಡದ ತಡಕೋಡ ಧ್ವಜ ಗಲಾಟೆ – ಹಿಂದೂ ಕಾರ್ಯಕರ್ತರಿಗೆ ಜಾಮೀನು ಮಂಜೂರು

    ಧಾರವಾಡ: ತಡಕೋಡ (Tadakod) ಗ್ರಾಮದಲ್ಲಿ ಉಂಟಾಗಿದ್ದ ಧ್ವಜ (Flag) ಗಲಾಟೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹಿಂದೂ ಕಾರ್ಯಕರ್ತರಿಗೆ (Hindu Activists)  ಜಾಮೀನು (Bail) ಮಂಜೂರಾಗಿದ್ದು, ಎಲ್ಲ ಹಿಂದೂ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

    ತಡಕೋಡ ಗ್ರಾಮದ ಸದ್ದಾಂಹುಸೇನ್ ಎಂಬಾತ ಅಯೋಧ್ಯೆ ರಾಮಮಂದಿರದ ಫೋಟೋ ಮೇಲೆ ಹಸಿರು ಧ್ವಜ, ಓವೈಸಿ ಫೋಟೋ ಹಾಕಿ, ಇದು ಇಸ್ಲಾಮಿಕ್ ಪವರ್ ಎಂಬ ಸಂದೇಶ ಹಾಕಿ ಎಡಿಟ್ ಮಾಡಿದ್ದ ಫೋಟೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ. ಇದನ್ನೂ ಓದಿ: ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

    ಇದರಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ತಡಕೋಡ ಗ್ರಾಮದ ಈದ್ಗಾ ಕಟ್ಟಡದ ಗುಂಬಜ್ ಮತ್ತು ಸದ್ದಾಂ ಮನೆ ಮೇಲೆ ದಾಳಿ ಮಾಡಿ ಮನೆಯಲಿದ್ದ ವಸ್ತುಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದರು. ಆಗ ಗರಗ ಠಾಣೆ ಪೊಲೀಸರು ಕೆಲ ಹಿಂದೂ ಕಾರ್ಯಕರ್ತರನ್ನ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು. ಈಗ ಎಲ್ಲ ಹಿಂದೂ ಕಾರ್ಯಕರ್ತರಿಗೆ ಜಾಮೀನು ಮಂಜೂರಾಗಿದ್ದು, ಮಾಜಿ ಶಾಸಕ ಅಮೃತ್ ದೇಸಾಯಿ (Amrut Ayyappa Desai) ಅವರು ಸ್ವತಃ ಕೇಂದ್ರ ಕಾರಾಗೃಹಕ್ಕೆ ತೆರಳಿ ಜೈಲಿನಿಂದ ಬಿಡುಗಯಾದ ಹಿಂದೂ ಕಾರ್ಯಕರ್ತರನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

  • ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಅಂತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ: ಪ್ರಹ್ಲಾದ್ ಜೋಶಿ

    ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಅಂತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ: ಪ್ರಹ್ಲಾದ್ ಜೋಶಿ

    ಧಾರವಾಡ: ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎನ್ನುತ್ತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ. ನಾನು ಧಾರವಾಡ (Dharwad) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಯ ತಯಾರಿ ಮಾಡಿಕೊಂಡಿದ್ದೇನೆ. ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಜೋಶಿನೆ ಅಭ್ಯರ್ಥಿಯಲ್ಲದೇ ಇನ್ನೇನೂ? ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಖಚಿತ: ಭೂಪೇಂದ್ರ ಯಾದವ್

    ಕ್ಷೇತ್ರದಲ್ಲಿ ಶಾಸಕರು, ನಗರ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಇದರ ನಡುವೆ ಕೆಲವರು ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎನ್ನುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಎಂದಿಲ್ಲ. ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ (Jagadish Shettar) ಅಭ್ಯರ್ಥಿ ಆಗುತ್ತಾರೆ ಎಂದು ಹೇಳುತ್ತಿಲ್ಲ ಎಂದಿದ್ದಾರೆ.

    ಶೆಟ್ಟರ್ ಆರು ತಿಂಗಳ ಹಿಂದೆಯೇ ವಾಪಾಸ್ ಬರುತ್ತಾರೆ ಎಂದಿದ್ದೆ. ಅವರು ಬಂದಿದ್ದಕ್ಕೆ ನನಗೆ ಸಂತೋಷವಿದೆ. ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ ಎಂದಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್, ಸರ್ಕಾರವನ್ನು ಐದು ವರ್ಷ ನಡೆಸಬೇಕು. ಆದರೆ ಅವರಲ್ಲಿನ ಆಂತರಿಕ ಕಚ್ಚಾಟದಿಂದ ಅದು ಸರ್ಕಾರವನ್ನು ಸರಿಯಾಗಿ ನಡೆಸುತ್ತಿಲ್ಲ. ಈ ಬಗ್ಗೆ ಜನರಿಗೂ ಆಕ್ರೋಶವಿದೆ. ಇದರಿಂದಾಗಿ ನಮಗೆ ಅವಕಾಶ ಇದೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಅನ್ನೋದನ್ನ ಶಾಮನೂರು ಸೂಕ್ಷ್ಮವಾಗಿ ಹೇಳಿದ್ದಾರೆ: ಸಿ.ಟಿ ರವಿ

  • ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ : ಜೋಶಿ

    ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ : ಜೋಶಿ

    ಬೆಂಗಳೂರು: ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಮತ್ತು ಸೋಯಾಬಿನ್ (Groundnut, Soybean) ಬೆಳೆಗಳಿಗೂ ಮಧ್ಯಂತರ ಬೆಳೆ ವಿಮೆ (Insurance) ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಂಸದೀಯ ಸಚಿವ ಜೋಶಿ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬೆಳೆ ಹಾನಿ ಸಮೀಕ್ಷೆಗೂ ಮೊದಲೇ ಶೇಂಗಾ ಹಾಗೂ ಸೋಯಾಬಿನ್ ಬೆಳೆ ಕಟವು ಆಗಿದ್ದರಿಂದ ಈ ಎರಡೂ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ಪ್ರಕ್ರಿಯೆಯಿಂದ ವಿಮಾ ಕಂಪನಿ ಕೈ ಬಿಟ್ಟಿತ್ತು.  ಇದನ್ನೂ ಓದಿ: 60 ವರ್ಷದ ಕನಸಿನ ಯೋಜನೆ – ಇಂದು ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ

    ಧಾರವಾಡ ಜಿಲ್ಲಾಡಳಿತ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೋಯಾಬಿನ್ ಮತ್ತು ಶೇಂಗಾ ಬೆಳೆಗಳನ್ನ ಹೊರತುಪಡಿಸಿ ಮಿಕ್ಕ ಎಲ್ಲಾ ಬೆಳೆಗಳನ್ನು SBI ವಿಮೆ ಕಂಪನಿ ಅಂಗೀಕರಿಸಿ ಮಧ್ಯಂತರ ವಿಮೆ ಹಣ ಬಿಡುಗಡೆ ಮಾಡಿತ್ತು.

     

    ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿಮೆ ಕಂಪನಿಯನ್ನು ಸಂಪರ್ಕಿಸಿ, ಸಭೆ ನಡೆಸಿ ಮುಂಗಾರಿನ ಶೇಂಗಾ ಮತ್ತು ಸೋಯಾಬೀನ್ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಎಂದು ಸಚಿವ ಜೋಶಿ ತಿಳಿಸಿದ್ದಾರೆ.   ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

    ಈ ಬೆಳೆಗಾರರ ಸಮಸ್ಯೆ ಅರಿತು ಕೇಂದ್ರ ಕೃಷಿ ಸಚಿವ ಅರ್ಜುನ್ ಅವರೊಂದಿಗೂ ಚರ್ಚೆ ನಡೆಸಿ, ಫಸಲ್ ಬಿಮಾ CEO ರಿತೇಶ್ ಚೌಹಾನ್ ಮತ್ತು SBI ವಿಮೆ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥ ಪಿಯೂಷ್ ಸಿಂಗ್ ಅವರ ಗಮನ ಸೆಳೆದು ಶೇಂಗಾ, ಸೋಯಾಬೀನ್ ಬೆಳೆ ಗಾರರಿಗೂ ಮಧ್ಯಂತರ ಬೆಳೆ ವಿಮೆ ಪರಿಹಾರ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೋಶಿ ಹೇಳಿದ್ದಾರೆ.

    ಧಾರವಾಡ ಜಿಲ್ಲೆಯ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅತಿ ಶೀಘ್ರದಲ್ಲಿ ಪತ್ರ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಧಾರವಾಡ: ಜನವರಿ 22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನಡೆದರೆ ಮನೆ ಮನೆಗಳಲ್ಲಿ ರಾಮನ ಧ್ವಜ (Ram Flag) ಹಾರಲಿದೆ. ಈ ಕಾರಣಕ್ಕೆ ವಿದ್ಯಾನಗರಿ ಧಾರವಾಡದಲ್ಲಿ (Dharawada) ರಾಮನ ಧ್ವಜದ ತಯಾರಿ‌ ಜೋರಾಗಿ ನಡೆಯುತ್ತಿದೆ.

    ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್‌ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್‌ ಬಂದಿದೆ. ಕಳೆದ 15 ದಿನಗಳಿಂದ ಈ ಪ್ರತೀಶ್ ಅವರು ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?

    ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್‌ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಬಂಪರ್‌ ಆರ್ಡರ್ ಬಂದಿವೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಬಂದಿದೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ.  5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ.‌ ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ – ಅಯೋಧ್ಯೆ ರಾಮ ಮಂದಿರ

    ಮಹಿಳೆಯರು ಹಗಲು ಕೆಲಸ ಮಾಡಿದರೆ, ಪುರುಷರು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ‌ ಮಾಡುತ್ತಿದ್ದಾರೆ. ಅಯೋಧ್ಯೆ ಕಾರ್ಯಕ್ರಮದಿಂದಾಗಿ ಎಷ್ಟೋ ಬಡವರಿಗೆ ಈಗ ಕೆಲಸ ಸಿಕ್ಕಿದೆ.

  • ಎರಡು ಕಾರು, ಲಾರಿ ಮಧ್ಯೆ ಸರಣಿ ಅಪಘಾತ – ನಾಲ್ವರು ದುರ್ಮರಣ

    ಎರಡು ಕಾರು, ಲಾರಿ ಮಧ್ಯೆ ಸರಣಿ ಅಪಘಾತ – ನಾಲ್ವರು ದುರ್ಮರಣ

    ಹುಬ್ಬಳ್ಳಿ: ಎರಡು ಕಾರು (Car) ಮತ್ತು ಲಾರಿ (Lorry) ನಡುವೆ ಸರಣಿ ಅಪಘಾತ (Accident) ನಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡ (Dharwad) ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿ ನಡೆದಿದೆ.

    ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ (Hubballi) ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಧಾರವಾಡ ಎಸ್ಪಿ ಡಾ.ಗೋಪಾಲ ಬ್ಯಾಕೋಡ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದ ಮ್ಯಾನೇಜರ್ ಮನೆಗೆ ಕರೆದೊಯ್ದು ರೇಪ್‌ ಮಾಡ್ದ!

    ಈ ಘಟನೆಯಲ್ಲಿ ಹಾಸನ ಮೂಲದ ಮೂವರು ಹಾಗೂ ಬೆಂಗಳೂರಿನ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮಣಿಕಂಠ (26), ಪವನ (23), ಚಂದನ (31) ಎಂದು ಗುರುತಿಸಲಾಗಿದೆ. ಈ ಮೂವರು ಪರಸ್ಪರ ಗೆಳೆಯರಾಗಿದ್ದು, ಹಾಸನದಿಂದ ಗೋವಾಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೃತಪಟ್ಟ ಮತ್ತೋರ್ವನನ್ನು ಹರೀಶ್ (34) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನಿಂದ ಶಿರಡಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ

  • ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ – ಭಜನೆಯೊಂದಿಗೆ ಅದ್ಧೂರಿ ಮೆರವಣಿಗೆ

    ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ – ಭಜನೆಯೊಂದಿಗೆ ಅದ್ಧೂರಿ ಮೆರವಣಿಗೆ

    ಧಾರವಾಡ: ದೇಶದ ಹಳ್ಳಿ ಹಳ್ಳಿಗಳಲ್ಲೂ ಈಗ ರಾಮ ಜಪ ಆರಂಭಗೊಂಡಿದೆ. ಇದೇ ಜ.22 ರಂದು ಅಯೋಧ್ಯೆಯಲ್ಲಿ (Ayodhya) ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು, ಈ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ.

    ಈಗಾಗಲೇ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ (Mantrakshate) ಹಾಗೂ ಪ್ರಭು ಶ್ರೀರಾಮಚಂದ್ರನ ಫೋಟೋಗಳನ್ನು ಜ.22 ರಂದು ಪೂಜೆ ಮಾಡಲು ಎಲ್ಲೆಡೆ ವಿತರಣೆ ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: Ram Mandir: ಏನಿದು ಪ್ರಾಣ ಪ್ರತಿಷ್ಠೆ? ಆಚರಣೆ ಹೇಗಿರುತ್ತೆ?

    ಆರ್‌ಎಸ್‌ಎಸ್ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರೆಲ್ಲರೂ ಸೇರಿ ಭಜನಾ ಮೆರವಣಿಗೆ ಮಾಡುವ ಮೂಲಕ ಮಂತ್ರಾಕ್ಷತೆ ಮತ್ತು ಶ್ರೀರಾಮನ ಭಾವಚಿತ್ರವನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿದರು.

    ಈ ಮೆರವಣಿಗೆಯಲ್ಲಿ ಹೆಣ್ಣುಮಕ್ಕಳೂ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಂತ್ರಾಕ್ಷತೆಯ ಬಾಕ್ಸ್ ಹಿಡಿದು ಮೆರವಣಿಗೆ ಹೊರಟ ಯುವಕರ ಪಾದಕ್ಕೆ ಗ್ರಾಮಸ್ಥರು ನೀರು ಹಾಕಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಪುಣ್ಯ ಭಾವದಿಂದ ಸ್ವಾಗತಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಸಹ ಒದಗಿಸಲಾಗಿತ್ತು. ಇದನ್ನೂ ಓದಿ: Ram Mandir Inauguration: ತಿರುಪತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ

  • ಧಾರವಾಡದಿಂದ ಅಯೋಧ್ಯೆಗೆ ಕುರಿ ಉಣ್ಣೆ ಕಂಬಳಿ

    ಧಾರವಾಡದಿಂದ ಅಯೋಧ್ಯೆಗೆ ಕುರಿ ಉಣ್ಣೆ ಕಂಬಳಿ

    ಧಾರವಾಡ: ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ದಿನ ಜನವರಿ 22. ಏಕೆಂದರೆ ಆ ದಿನ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಲ್ಲಲಿದ್ದಾನೆ. ಆ ದಿನವನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ಪ್ರಭು ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾಪನೆಗಾಗಿ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆ ವಸ್ತುಗಳು ಹೋಗುತ್ತಿವೆ. ಇದಕ್ಕೆ ನಮ್ಮ ಹೆಮ್ಮೆಯ ಧಾರವಾಡ ಕೂಡ ಹೊರತಾಗಿಲ್ಲ.

    ವಿದ್ಯಾಕಾಶಿ ಧಾರವಾಡ ವಿಶಿಷ್ಟತೆಗಳಲ್ಲಿ ವಿಶಿಷ್ಟತೆ ಹೊಂದಿದ ಜಿಲ್ಲೆ. ಈ ಜಿಲ್ಲೆಯಿಂದ ಇದೀಗ ಮರ್ಯಾದಾ ಪುರುಷೋತ್ತಮನಿಗೆ ಕಂಬಳಿಗಳು ಹೋಗುತ್ತಿವೆ. ರೈತರು ಈ ಕಂಬಳಿಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ. ಶುಭ ಕಾರ್ಯಗಳಿಗೆ ಈ ಕಂಬಳಿಗಳು ಬೇಕೇ ಬೇಕು. ಇದನ್ನೂ ಓದಿ: ಹಿಂದೂಗಳು ದರ್ಬಲಗೊಂಡರೆ ಮತ್ತೊಂದು ಪಾಕ್ ಸೃಷ್ಟಿ: ಯತೀಂದ್ರ ಹೇಳಿಕೆಗೆ ಸಿ.ಟಿ ರವಿ ತಿರುಗೇಟು

    ಇದೀಗ ಧಾರವಾಡದಲ್ಲಿ ಶ್ರೀರಾಮ ಚಂದ್ರನಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕಂಬಳಿಗಳು ಅಯೋಧ್ಯೆಗೆ ಹೊರಟಿವೆ. ಧಾರವಾಡದ ರೈತರ ಓಣಿ ಎಂದೇ ಕರೆಯಲಾಗುವ ಕಮಲಾಪುರ ಬಡಾವಣೆಯ ಸುಭಾಷ ರಾಯಣ್ಣವರ ಅವರು ಮೂರು ತಲೆಮಾರುಗಳಿಂದ ಕಂಬಳಿ ಕಟ್ಟುತ್ತಾ ಬಂದಿದ್ದಾರೆ. ಇದೀಗ ಸುಭಾಷ್ ಅವರು ಅಯೋಧ್ಯೆಗೆ ಕಳುಹಿಸಲೆಂದೇ ಎರಡು ಕಂಬಳಿಗಳನ್ನು ಕಟ್ಟಿದ್ದಾರೆ. ಅಲ್ಲದೇ ಅವುಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಅಯೋಧ್ಯೆಗೆ ಕಳುಹಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.

    ಈ ಕಂಬಳಿಗಳು 4 ಅಡಿ ಅಗಲ 10 ಅಡಿ ಉದ್ದ ಇವೆ. ಒಟ್ಟು 14 ಉಂಡೆ ಕುರಿ ಉಣ್ಣೆಯಿಂದ ಇವುಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಅಯೋಧ್ಯೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ಸಿಕ್ಕ ಮೇಲೆಯೇ ಸುಭಾಷ ಅವರು ಈ ಕಂಬಳಿಗಳಿಗೆ ಕರಿ ಕಟ್ಟಿದ್ದಾರೆ. ಯಾವ ಹೆಸರಿನ ಮೇಲೆ ಕರಿ ಕಟ್ಟುತ್ತಾರೋ ಆ ಕಂಬಳಿಗಳು ಅದೇ ಕೆಲಸಕ್ಕೆ ಬಳಕೆಯಾಗಬೇಕು ಎಂಬ ಪ್ರತೀತಿ ಇದೆ. ಪ್ರಹ್ಲಾದ್ ಜೋಶಿ ಕೂಡ ಈಗ ಆ ಕಂಬಳಿಗಳನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಲಿದ್ದಾರೆ.

    ಧಾರವಾಡದಿಂದ ಅಯೋಧ್ಯೆ ಕಂಬಳಿಗಳು ಪೂಜೆಗಾಗಿ ಹೊರಟಿದ್ದು, ಧಾರವಾಡದ ಹಿರಿಮೆ ಹೆಚ್ಚಿಸಿವೆ. ರಾಮನ ಮೇಲೆ ಅಪಾರ ಭಕ್ತಿ ಇಟ್ಟುಕೊಂಡು ಸುಭಾಷ್ ರಾಯಣ್ಣವರ ಎಂಬವರು ಈ ಕಂಬಳಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅವರ ಕನಸು ನನಸಾದಂತಾಗಿದೆ.