Tag: ಧಾರವಾಡ

  • ಧಾರವಾಡದಲ್ಲಿ 18 ಕೋಟಿ ಪತ್ತೆ – ಎಸ್‌ಬಿಐಗೆ ಹಣ ರವಾನೆ

    ಧಾರವಾಡದಲ್ಲಿ 18 ಕೋಟಿ ಪತ್ತೆ – ಎಸ್‌ಬಿಐಗೆ ಹಣ ರವಾನೆ

    ಧಾರವಾಡ: ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿರುವ ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ದತ್ತುನವರ ಅವರ ಮನೆಯಲ್ಲಿ ಜಪ್ತಿ ಮಾಡಲಾದ 18 ಕೋಟಿ ರೂ. ಹಣವನ್ನು ಐಟಿ (Income Tax) ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ (SBI) ರವಾನಿಸಿದ್ದಾರೆ.

    ಮಂಗಳವಾರ ರಾತ್ರಿ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಬಸವರಾಜ ದತ್ತುನವರ ಅವರ ಮನೆಯಲ್ಲಿ ಮದ್ಯ (Liquor) ಶೇಖರಿಸಿ ಇಡಲಾಗಿದೆ ಎಂಬ ಶಂಕೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ 18 ಕೋಟಿ ರೂ. ಬೃಹತ್ ಮೊತ್ತದ ಹಣ ಪತ್ತೆಯಾಗಿತ್ತು.ಕೂಡಲೇ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?

     

    20 ಜನ ಅಧಿಕಾರಿಗಳು ದತ್ತುನವರ ಮನೆಯಲ್ಲಿ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಮಶಿನ್ ಮುಖಾಂತರ ಹಣ ಎಣಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನದವರೆಗೂ ಅಧಿಕಾರಿಗಳು ತಪಾಸಣೆ ನಡೆಸಿ 18 ಕೋಟಿ ರೂ. ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿ ಪೊಲೀಸ್ ಭದ್ರತೆ ಮಧ್ಯೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಸಾಗಿಸಿದ್ದಾರೆ.  ಇದನ್ನೂ ಓದಿ: ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದರಿಂದ ಐಟಿ ಅಧಿಕಾರಿಗಳು ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆವರೆಗೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ್ ವಾಹನದ ಸಮೇತ ಭದ್ರತೆಯೊಂದಿಗೆ 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ರವಾನಿಸಿದ್ದಾರೆ.

  • ಧಾರವಾಡದಲ್ಲಿ ಚುನಾವಣಾ ಕ್ಷಿಪ್ರ ಪಡೆ ದಾಳಿ- 18 ಕೋಟಿ ವಶಕ್ಕೆ

    ಧಾರವಾಡದಲ್ಲಿ ಚುನಾವಣಾ ಕ್ಷಿಪ್ರ ಪಡೆ ದಾಳಿ- 18 ಕೋಟಿ ವಶಕ್ಕೆ

    ಧಾರವಾಡ: ಇಲ್ಲಿನ ಬಸವರಾಜ ದುತ್ತಣ್ಣವರ ಎಂಬವರ ಮನೆ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ 18 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

    ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿ ಬಸವರಾಜ್ ದುತ್ತಣ್ಣವರ ಎಂಬವರ ಮನೆ ಇದೆ. ಚುನಾವಣೆ ಹಿನ್ನೆಲೆ ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಟ್ಟ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಮನೆಯಲ್ಲಿ ಮದ್ಯ ಹುಡುಕುತ್ತಿದ್ದಾಗ ಅಲ್ಮೆರಾದಲ್ಲಿ ಹಣ ಪತ್ತೆಯಾಗಿದೆ. ಇದಕ್ಕೂ ಮೊದಲು ಮನೆಯಲ್ಲಿದ್ದ ವಿವಿಧ ಚೀಲಗಳಲ್ಲಿ ಮದ್ಯ ಹುಡುಕಿದ ಅಧಿಕಾರಿಗಳಿಗೆ ಮದ್ಯದ ಬಾಟ್ಲಿಗಳು ಸಿಗದೇ ಹೋದಾಗ ಅಲ್ಮೆರಾದಲ್ಲೂ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೃಹತ್ ಮೊತ್ತ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

    ಸ್ಥಳಕ್ಕೆ ಎಸಿಪಿ ಬಸವರಾಜ ಹಾಗೂ ಇತರ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನಾನು, ದ್ವಾರಕೀಶ್ ಸೇರಿ ಸಿನಿಮಾ ಮಾಡ್ಬೇಕು ಅಂದ್ಕೊಂಡಿದ್ದೆವು: ಸಂತೋಷ್‌ ಲಾಡ್‌

    ನಾನು, ದ್ವಾರಕೀಶ್ ಸೇರಿ ಸಿನಿಮಾ ಮಾಡ್ಬೇಕು ಅಂದ್ಕೊಂಡಿದ್ದೆವು: ಸಂತೋಷ್‌ ಲಾಡ್‌

    ಧಾರವಾಡ: ನಟ, ನಿರ್ದೇಶಕ ದ್ವಾರಕೀಶ್ ಅವರ ನಿಧನ ಬಹಳ ದುಃಖ ತರಿಸಿದೆ. ಅವರು, ನಾನು ಸೇರಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santhosh Lad) ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ದ್ವಾರಕೀಶ್ ಅವರ ನಿಧನ ಸುದ್ದಿ ಬಹಳ ಆಘಾತಕಾರಿ. ಅವರು ನಟ, ನಿರ್ದೇಶಕರಾಗಿ ಕೆಲಸ ಮಾಡಿದವರು. ದ್ವಾರಕೀಶ್ ಅವರು ನನಗೆ ಬಹಳ ಹತ್ತಿರದ ಪರಿಚಯ. ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ನಿಧನದ ಸುದ್ದಿ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದರು.

    ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್ (Dwarkish) ನಿಧನರಾಗಿದ್ದಾರೆ. 81ರ ವಯಸ್ಸಿನ ನಟ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಇಂದು ಬೆಳಗ್ಗೆ ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಅವರ ಪುತ್ರ ಯೋಗೀಶ್ ಅವರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್‌ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

  • ಹೃದಯಾಘಾತದಿಂದ ಸಾವು ತಡೆಗೆ ಸಿಗಲಿದೆ ಇಂಜಕ್ಷನ್: ಪುನೀತ್‌ ಹೆಸರಲ್ಲಿ ʻಹೃದಯ ಜ್ಯೋತಿʼ ಯೋಜನೆ ಜಾರಿ!

    ಹೃದಯಾಘಾತದಿಂದ ಸಾವು ತಡೆಗೆ ಸಿಗಲಿದೆ ಇಂಜಕ್ಷನ್: ಪುನೀತ್‌ ಹೆಸರಲ್ಲಿ ʻಹೃದಯ ಜ್ಯೋತಿʼ ಯೋಜನೆ ಜಾರಿ!

    ಧಾರವಾಡ: ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಲ್ಲಿ ಹೃದಯಾಘಾತ (Heart Attack) ಕಾಣಿಸಿಕೊಂಡು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ದಿ. ಪುನೀತ್ ರಾಜಕುಮಾರ್‌ (Puneeth Rajkumar) ಅವರ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.

    ರಾಜ್ಯ ಸರ್ಕಾರ ಡಾ.ಪುನೀತ್ ರಾಜಕುಮಾರ್‌ ಅವರ ಹೆಸರಿನಲ್ಲಿ ʻಹೃದಯ ಜ್ಯೋತಿʼ (Hrudaya Jyoti) ಯೋಜನೆ ಜಾರಿಗೆ ತಂದಿದ್ದು, 2ನೇ ಹಂತದ ಈ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಧಾರವಾಡದ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಇದನ್ನೂ ಓದಿ: ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಇಂದೇ ಅಂತಿಮ? – ಯದುವೀರ್ ವಿರುದ್ಧ ಯಾರು ಕಣಕ್ಕೆ? 

    ಹೃದಯಾಘಾತವಾದ ಕೆಲವೇ ಸಮಯದಲ್ಲಿ ಬಡವರಿಗೂ ಲಭ್ಯವಾಗುವ ರೀತಿಯಲ್ಲಿ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 28,000 ರೂ. ಮೌಲ್ಯದ Tenecteplase ಇಂಜಕ್ಷನ್‌ ಅನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದೆ. ಹೃದಯಾಘಾತವಾದ ಕೆಲ ಸಮಯದಲ್ಲಿ ತಕ್ಷಣ ಇಸಿಜಿ ಮಾಡುವ ಸ್ಟೆಮಿ ಕಿಟ್‌ ಅನ್ನೂ ಈ ಯೋಜನೆಯಡಿ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದಿಂದ ಈ ಯೋಜನೆ ಜಾರಿ ಮಾಡಲಾಗಿದೆ.

    ಈಗಾಗಲೇ ರಾಜ್ಯದ 15 ಜಿಲ್ಲೆಯ 71 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. 2ನೇ ಹಂತದಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಸೇರಿದಂತೆ 36 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು. ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್‌ ಪಿನ್‌ ಮಾರ್ಟಿನ್‌ ಯಾರು?

    ಹೃದಯಾಘಾತವಾದ ವ್ಯಕ್ತಿಗೆ Tenecteplase ಇಂಜಕ್ಷನ್ ನೀಡಿದರೇ ವ್ಯಕ್ತಿ ಬದುಕುವಂತೆ ಮಾಡುತ್ತದೆ, ನಂತರ ಆ ವ್ಯಕ್ತಿಗೆ ಮುಂದಿನ ಚಿಕಿತ್ಸೆ ನೀಡಬಹುದಾಗಿದೆ. ಇಂತಹ ಇಂಜಕ್ಷನ್ ಬಡವರಿಗೂ ಸಿಗಲಿ ಎಂದು ಈ ಯೋಜನೆ ಜಾರಿ ಮಾಡಲಾಗಿದೆ. ಬರುವ ದಿನಗಳಲ್ಲಿ ಈ ಇಂಜಕ್ಷನ್‌ ಅನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲೂ ಇಡುವ ಯೋಜನೆ ಸರ್ಕಾರದ ಮುಂದೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

  • ಹಣಕ್ಕಾಗಿ ತಾಯಿಯನ್ನು ಹತ್ಯೆಗೈದು ನೇಣಿಗೆ ಶರಣಾದ ಮಗ

    ಹಣಕ್ಕಾಗಿ ತಾಯಿಯನ್ನು ಹತ್ಯೆಗೈದು ನೇಣಿಗೆ ಶರಣಾದ ಮಗ

    ಧಾರವಾಡ: ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೊಸಯಲ್ಲಾಪುರದ ಉಡುಪಿ ಓಣಿಯಲ್ಲಿ ನಡೆದಿದೆ.

    ಶಾರದಾ ಭಜಂತ್ರಿ (60) ಎಂಬ ಮಹಿಳೆ ತನ್ನ ಮಗನಿಂದಲೇ ಹತ್ಯೆಯಾಗಿದ್ದು, ಆಕೆಯ ಮಗ ರಾಜೇಂದ್ರ ಭಜಂತ್ರಿ (40) ಎಂಬಾತನೇ ಆಕೆಯನ್ನು ಹತ್ಯೆ ಮಾಡಿದ್ದಾನೆ. ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ – FSL ವರದಿ ಇನ್ನೂ ಬಂದಿಲ್ಲ, ಬಂದ ನಂತರ ಕ್ರಮ : ಪರಮೇಶ್ವರ್‌

    ತಾಯಿಗೆ ಬರುತ್ತಿದ್ದ ಪಿಂಚಣಿ ಹಣದ ಮೇಲೆ ರಾಜೇಂದ್ರ ಕಣ್ಣಿಟ್ಟಿದ್ದ. ಅಲ್ಲದೇ ಖಾಲಿ ಜಾಗವನ್ನು ತನಗೆ ಕೊಡುವಂತೆ ತಾಯಿಗೆ ದಂಬಾಲು ಬಿದ್ದಿದ್ದ. ಖಾಲಿ ಜಾಗ ಕೊಡಲು ತಾಯಿ ನಿರಾಕರಿಸಿದ್ದಳು. ಇದೇ ಕಾರಣಕ್ಕಾಗಿ ಜಗಳ ನಡೆದು ತನ್ನ ತಾಯಿಯ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿ ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ – ರಥಯಾತ್ರೆಗೆ ಹೈಕೋರ್ಟ್ ಅಸ್ತು

  • ಧಾರವಾಡ ಹೈಕೋರ್ಟ್ ಪೀಠಕ್ಕೆ ವಾದ ಮಾಡಲು ಬಂದಿದ್ದೆ: ನೆನಪಿನ ಬುತ್ತಿ ಬಿಚ್ಚಿಟ್ಟ ಉಪರಾಷ್ಟ್ರಪತಿ ಧನಕರ್

    ಧಾರವಾಡ ಹೈಕೋರ್ಟ್ ಪೀಠಕ್ಕೆ ವಾದ ಮಾಡಲು ಬಂದಿದ್ದೆ: ನೆನಪಿನ ಬುತ್ತಿ ಬಿಚ್ಚಿಟ್ಟ ಉಪರಾಷ್ಟ್ರಪತಿ ಧನಕರ್

    ಧಾರವಾಡ: ಇಲ್ಲಿನ ಹೈಕೋರ್ಟ್ ಪೀಠಕ್ಕೆ ಪ್ರಕರಣವೊಂದರ ವಾದ ಮಾಡಲು ಬಂದಿದ್ದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice-President Jagdeep Dhankhar) ಧಾರವಾಡದೊಂದಿಗಿನ (Dharwad) ಹಳೆಯ ನೆನಪೊಂದನ್ನು ಅವರು ಮೆಲಕು ಹಾಕಿದ್ದಾರೆ.

    ಇಲ್ಲಿನ ಐಐಟಿ (IIT) ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನನಗೂ ಧಾರವಾಡ ಹೈಕೋರ್ಟ್ ಪೀಠಕ್ಕೂ (Dharwad bench of the Karnataka High Court) ಸಂಬಂಧವಿದೆ. ನಾನು ಇಲ್ಲಿ ಪ್ರಕರಣವೊಂದನ್ನು ವಾದ ಮಾಡಲು ಬಂದಿದ್ದೆ. ಕರ್ನಾಟಕದ ಜೊತೆ ನನಗೆ ಹಳೆಯ ಸಂಬಂಧವಿದೆ. ನಾನು ರಾಜ್ಯಸಭೆಯ ಸಭಾಪತಿ ಬಲಗಡೆ ನೋಡಿದರೆ ಪ್ರಹ್ಲಾದ್ ಜೋಶಿ ಕಾಣುತ್ತಾರೆ. ಎಡಗಡೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಣುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಹಳ ಅನುಭವಿ ರಾಜಕಾರಣಿ. ಜೋಶಿಯವರು ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುವ ವ್ಯಕ್ತಿ. ಅವರಿಗೆ ಈ ಭಾಗದ ಬಗ್ಗೆ ಬಹಳಷ್ಟು ಕಾಳಜಿ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಇಂದಿನ ವಿದ್ಯಾರ್ಥಿಗಳಿಂದ ಈ ದೇಶದ ಬದಲಾವಣೆ ಆಗಬೇಕಿದೆ. ದೇಶದ ವಿವಿಧ ಐಐಟಿಗಳಲ್ಲಿ ಯುವಕರು ಕಲಿಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಮೊದಲ ಐಐಟಿ ಧಾರವಾಡದ್ದು. ಇಡೀ ವಿಶ್ವದಲ್ಲೇ ಧಾರವಾಡ ಐಐಟಿ ಉತ್ತುಂಗಕ್ಕೆ ಏರಬೇಕು. ಇಂದಿನ ಯುವಕರೇ ನಾಳಿನ ಈ ದೇಶದ ಭದ್ರ ಬುನಾದಿ ಎಂದಿದ್ದಾರೆ.

    ಲೋಕಸಭೆಯಲ್ಲಿ 33%ರಷ್ಟು ಮೀಸಲಾತಿ ಮಹಿಳೆಯರಿಗೆ ಸಿಕ್ಕಿದೆ. 2029ಕ್ಕೆ 33%ರಷ್ಟು ಮಹಿಳಾ ಸಂಸದರು ಸಂಸತ್‍ನಲ್ಲಿ ಇರುತ್ತಾರೆ. ಚಂದ್ರಯಾನ ಹಾಗೂ ಆದಿತ್ಯ ಎಲ್-1ರಂತಹ ಅನೇಕ ಸಾಧನೆಗಳನ್ನು ನಾವು ಮಾಡಿದ್ದೇವೆ. ಸಾಧನೆ ಮೂಲಕ ದೇಶದ ವಿರೋಧಿಗಳಿಗೆ ನಾವು ತಕ್ಕ ಉತ್ತರ ಕೊಡಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೆವೆ ಇಡ್ಲಿ ತಿಂದು ಬಾಂಬ್ ಇಟ್ಟು ಹೋದ ಆರೋಪಿ – ಬಾಂಬ್‌ ಸ್ಫೋಟ ಸ್ಥಳಕ್ಕೆ ಡಿಕೆಶಿ ಭೇಟಿ

  • ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು

    ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು

    ಧಾರವಾಡ: ತಂದೆಯಿಂದಲೇ ನೆಲಕ್ಕೆ ಎಸೆಯಲ್ಪಟ್ಟಿದ್ದ ಹೆಣ್ಣು ಮಗು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

    ಶ್ರೇಯಾ (1 ವರ್ಷ) ಮೃತ ದುರ್ದೈವಿ ಕಂದಮ್ಮ. ಈಕೆಯನ್ನು ತಂದೆ ಶಂಭುಲಿಂಗಯ್ಯ ಕೊಲೆ ಮಾಡಿದ್ದಾನೆ. ಈತ ಧಾರವಾಡ (Dharwad) ತಾಲೂಕಿನ ಯಾದವಾಡ ಗ್ರಾಮದ ನಿವಾಸಿ. ಇದನ್ನೂ ಓದಿ: ಮಗು ಜೋರಾಗಿ ಅಳುತ್ತೆಂದು ನೆಲಕ್ಕೆ ಹೊಡೆದ ತಂದೆ!

    ಏನಿದು ಪ್ರಕರಣ: ನಾಲ್ಕು ವರ್ಷಗಳ ಹಿಂದೆ ಶಂಭಯ್ಯ ಮತ್ತು ಸವಿತಾ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಮೊದಲನೇಯ ಗಂಡು ಮಗುವಿಗೆ ಮೂರು ವರ್ಷವಾಗಿದೆ. ಶಂಭಯ್ಯ ಧಾರವಾಡ ನಗರದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿತ್ಯ ವಿಪರೀತವಾಗಿ ಕುಡಿಯುತ್ತಿದ್ದ ಶಂಭಯ್ಯ ಮಂಗಳವಾರ ತಡರಾತ್ರಿ ತನ್ನ ಮೇಲೆ ಹಲ್ಲೆ ಮಾಡಿ ಬಳಿಕ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಸವಿತಾ ಮತ್ತು ಸಹೋದರ ಅಳಿಯ ಕಲ್ಲಯ್ಯ ನೋವು ತೋಡಿಕೊಂಡಿದ್ದಾರೆ.

    ಮಲಗುವಾಗ ಮಗು ಅಳುತ್ತೆ ಎಂಬ ಕಾರಣಕ್ಕೆ ಮಗುವನ್ನ ನೆಲಕ್ಕೆ ಎತ್ತಿ ಬಡಿದಿದ್ದಾನೆ. ಪರಿಣಾಮ ಮಗು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

    ಘಟನೆ ಸಂಬಂಧ ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ನೀಡಿದ್ದು, ಗರಗ ಠಾಣೆ ಪೆÇಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗರಗ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

    ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

    ಹುಬ್ಬಳ್ಳಿ: ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಫೆ.28ರಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (Dharwad Lok Sabha Constituency) ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಪುಸ್ತಕವನ್ನು ಜೈಶಂಕರ್ ಅಂದು ಬಿಡುಗಡೆಗೊಳಿಸಲಿದ್ದಾರೆ.  ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು? – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ

     

    ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಫೆ.28ರಂದು ಸಂಜೆ 4:30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ. ಇದನ್ನೂ ಓದಿ: 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟನೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಸಂಸದ ಪ್ರಹ್ಲಾದ್‌ ಜೋಶಿ (Pralhad Joshi) ಅವರ 16 ವರ್ಷದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಒಳಗೊಂಡ ಪುಸ್ತಕ ಇದಾಗಿದೆ.

    ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕಾಗಿ ಕೈಗೊಂಡ ಚಟುವಟಿಕೆಗಳನ್ನು ಈ ಪುಸ್ತಕ ವಿಸ್ತಾರವಾಗಿ ಒಳಗೊಂಡಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

     

  • ಉತ್ತರ ಕಾಶ್ಮೀರದಲ್ಲಿ ‘ಕನ್ನಡ’ ಬಾವುಟ ಹಾರಿಸಿದ ಧಾರವಾಡದ ಯುವತಿ

    ಉತ್ತರ ಕಾಶ್ಮೀರದಲ್ಲಿ ‘ಕನ್ನಡ’ ಬಾವುಟ ಹಾರಿಸಿದ ಧಾರವಾಡದ ಯುವತಿ

    – ಧಾರವಾಡದಿಂದ ಕಾಶ್ಮೀರಕ್ಕೆ ಬೈಕ್‌ನಲ್ಲಿ ತೆರಳಿ ರೆಕಾರ್ಡ್

    ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಧಾರವಾಡದ (Dharwad) ಯುವತಿಯೊಬ್ಬಳು ಸಾಕ್ಷಿಯಾಗಿದ್ದಾಳೆ. ಬೈಕ್ ರೈಡರ್ (Bike Raider) ಆದ ಈಕೆ ಉತ್ತರ ಕಾಶ್ಮೀರಕ್ಕೆ (North Kashmir) ಒಬ್ಬಂಟಿಯಾಗಿ ಹೋಗಿ ಹೊಸ ದಾಖಲೆ ಬರೆದಿದ್ದಾಳೆ.

    ವಿದ್ಯಾಕಾಶಿ ಧಾರವಾಡದ ಯುವತಿ 18ನೇ ವಯಸ್ಸಿಗೆ ಹೊಸ ದಾಖಲೆ ನಿರ್ಮಿಸಿದ್ದಾಳೆ. ನಗರದ ಆರ್.ಎನ್ ಶೆಟ್ಟಿ ಕ್ರೀಡಾಂಗಣ ಬಳಿಯ ನಿವಾಸಿ ಪ್ರತೀಕ್ಷಾ ಹರವಿಶಟ್ಟರ್ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ರೈಡಿಂಗ್ ಹವ್ಯಾಸವಿರುವ ಪ್ರತೀಕ್ಷಾ ಸೋಲೋ ಬೈಕ್ ರೈಡಿಂಗ್ ಮೂಲಕ ಉತ್ತರ ಕಾಶ್ಮೀರಕ್ಕೆ ಹೋಗಿಬಂದಿದ್ದಾಳೆ. ಸುಮಾರು 6 ಸಾವಿರ ಕಿಲೋ ಮೀಟರ್ ದೂರದ ರಸ್ತೆ ಕ್ರಮಿಸಿ ಬಂದಿರುವ ಪ್ರತೀಕ್ಷಾ 10 ದಿನಗಳಲ್ಲಿ ಈ ಸಾಧನೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ 9 ದಿನಗಳಲ್ಲೇ ತಮ್ಮ ಗುರಿ ಸಾಧಿಸಿದ್ದಾರೆ. ದಾರಿಯುದ್ದಕ್ಕೂ ಜನರ ಸಹಕಾರ ಕೊಟ್ಟರು ಎನ್ನುತ್ತಾರೆ ಪ್ರತೀಕ್ಷಾ. ಇದನ್ನೂ ಓದಿ: ಸಿದ್ದರಾಮುಲ್ಲ ಖಾನ್ ಎನ್ನುತ್ತಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಸಂಸದ ಅನಂತ್ ಕುಮಾರ್ ಹೆಗಡೆ

    ಬೈಕ್ ರೈಡರ್ ಪ್ರತೀಕ್ಷಾಗೆ ಇಲ್ಲಿಂದ ಕಾಶ್ಮೀರದವರೆಗೆ ಹೋಗಲು ಸಹಾಯ ಆಗಿದ್ದು ಜಿಪಿಎಸ್ ಲೊಕೇಷನ್. ನಡುರಸ್ತೆಯಲ್ಲಿ ದಾರಿ ಗೊಂದಲವಾದಾಗ ಸಹೋದರಿ ಕೋಮಲ್ ಜಿಪಿಎಸ್ ಮೂಲಕ ಸಹಾಯ ಮಾಡಿದ್ದಾರೆ. ದಾಖಲೆ ಮಾಡಲೆಂದೇ ಈ ರೈಡ್ ಮಾಡಿದ್ದು ಎನ್ನಲಾಗಿದೆ. ಈ ಹಿಂದೆ 21 ವರ್ಷದ ಕೇರಳ ಯುವತಿ ಕಾಶ್ಮೀರದವರೆಗೆ ಒಬ್ಬಂಟಿ ಹೋಗಿರುವ ದಾಖಲೆ ಇದೆ. ಇದಾದ ನಂತರ ಪ್ರತೀಕ್ಷಾಳ ಸಹೋದರಿ ಕೋಮಲ್ 19 ವರ್ಷದವಳಿದ್ದಾಗ ಕಾಶ್ಮೀರಕ್ಕೆ ಹೋಗಿದ್ದರು. ಈಗ 18 ವರ್ಷದ ಪ್ರತೀಕ್ಷಾ ಅಕ್ಕನ ದಾಖಲೆಯನ್ನೂ ಮುರಿದಿದ್ದಾರೆ. ಪ್ರತೀಕ್ಷಾ ಸಾಧನೆಗೆ ಅಕ್ಕ ಕೋಮಲ್ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರ ಅಸ್ತು- ರಾಜ್ಯ ಸರ್ಕಾರಕ್ಕೆ ಕ್ಯಾಬ್ ಅಸೋಸಿಯೇಷನ್ ಎಚ್ಚರಿಕೆ

    ಸದ್ಯ ನಮ್ಮ ರಾಜ್ಯದ ಹೆಮ್ಮೆಯ ಯುವತಿ ಒಬ್ಬಂಟಿಯಾಗಿ ಕಾಶ್ಮೀರ ಲಾಲ್ ಚೌಕಗೆ ಒಬ್ಬಂಟಿಯಾಗಿ ಹೋಗಿಬಂದು ಹೊಸ ದಾಖಲೆ ಬರೆದಿದ್ದಾಳೆ. ಇವರ ಈ ಸಾಧನೆ ಜನರು ಕೊಂಡಾಡಿದರಷ್ಟೇ ಸಾಲದು. ದಾಖಲೆ ಪುಸ್ತಕದಲ್ಲೂ ದಾಖಲಾಗಬೇಕಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟಿಸ್ತಿರೋರು ರೈತರಲ್ಲ, ದೇಶದ್ರೋಹಿಗಳು: ಅನಂತ್‌ ಕುಮಾರ್‌ ಹೆಗಡೆ

  • 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    ಧಾರವಾಡ: ಆಸ್ಪತ್ರೆ ಸಹಾಯಕಿಯೊಬ್ಬಳು ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‍ನಲ್ಲಿ ಕೂರಿಸಿ ಸುಟ್ಟ ಗಾಯ ಮಾಡಿದ್ದು ತಪ್ಪು ಎಂದು ಪರಿಗಣಿಸಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multi Speciality) ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು 10 ಲಕ್ಷ ದಂಡ ವಿಧಿಸಿ ಆದೇಶ ಮಾಡಿದೆ.

    ಹುಬ್ಬಳ್ಳಿಯ (Hubballi) ವಿನಯ ಹಂಜಿ ಅವರ ಪತ್ನಿ ರೇಖಾ ಅವರು 2019ರ ಡಿ.10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಿಸಿನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಚಾರವನ್ನು ಮಗುವಿನ ಪೋಷಕರು ಆಸ್ಪತ್ರೆ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೆ ಅದು ಚರ್ಮ ರೋಗ ಎಂದು ಹೇಳಿ ಆಸ್ಪತ್ರೆಯ ವೈದ್ಯರು ಅದನ್ನ ಮರೆ ಮಾಚಿದ್ದರು.

    ವಿನಯ ಹಂಜಿಯವರು ಪತ್ನಿ ಮತ್ತು ಆ ಮಗುವನ್ನು ಸಿಟಿ ಕ್ಲಿನಿಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಧಾರವಾಡದ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಆಸ್ಪತ್ರೆಯಲ್ಲಿ ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು. ಆಗ ಮಗು ಗುಣಮುಖವಾಯಿತು. ಈ ಬಗ್ಗೆ ವಿನಯ ಹಂಜಿಯವರು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಹಾಗೂ ಅಲ್ಲಿನ 7 ಮಂದಿ ವೈದ್ಯರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ಸದ್ಯ ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ 75% ಭಾಗ ಮತ್ತು ಬಾಕಿ 25% ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗೆ 10 ಲಕ್ಷ ಪರಿಹಾರ ನೀಡಬೇಕು, ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ 8% ಬಡ್ಡಿ ಲೆಕ್ಕಹಾಕಿ ಕೊಡಬೇಕು ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ.