Tag: ಧಾರವಾಡ

  • ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ

    ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ

    ಧಾರವಾಡ: ಯಾವುದೇ ದಾಖಲಾತಿ ಇಲ್ಲದೇ ಮುಂಬೈನಿಂದ (Mumbai) ಹುಬ್ಬಳ್ಳಿಗೆ (Hubballi) ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಧಾರವಾಡ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಧಾರವಾಡದ (Dharawada) ನರೇಂದ್ರ ಕ್ರಾಸ್ ಬಳಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಎರಡು ದಿನಗಳ ಹಿಂದೆ ಆ ಬಸ್ ತಡೆದು ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 18.14 ಲಕ್ಷ ಮೌಲ್ಯದ ಕ್ಷೀರ ಭಾಗ್ಯ ಹಾಲಿನ ಪುಡಿ ಜಪ್ತಿ

    ಭವರ್‌ಸಿಂಗ್ ಬಂಧಿತ ವ್ಯಕ್ತಿ. ಈತನಿಂದ ಒಬರೊಬ್ಬರಿ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ. ಮೇಲ್ನೋಟಕ್ಕೆ ಸುಮಾರು 2 ಕೋಟಿ ರೂ. ನಷ್ಟು ಚಿನ್ನಾಭರಣವನ್ನು ಜಪ್ತಿ ಮಾಡಲಾಗಿತ್ತು ಎಂದು ಊಹಿಸಲಾಗಿತ್ತು. ಆದರೆ, 98 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನದ್ದು 80 ಪರ್ಸೆಂಟ್‌ ಭ್ರಷ್ಟಾಚಾರ ಸರ್ಕಾರ: ಕಟೀಲ್‌ ವಾಗ್ದಾಳಿ

    ಮೂಲತಃ ರಾಜಸ್ಥಾನದವನಾದ ಹಾಗೂ ಹಾಲಿ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ವಾಸವಿದ್ದ ಭರವರಸಿಂಗ್ ಚೌಹಾಣ್ ಎಂಬಾತ ಯಾವುದೇ ದಾಖಲೆ ಇಲ್ಲದೇ ಒಂದು ಬ್ಯಾಗ್ ಹಾಗೂ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 1237.20 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ಚಿನ್ನದ ಬಿಸ್ಕೆಟ್, 15 ಕೆಜಿ ಬೆಳ್ಳಿಯ ಗಟ್ಟಿ ಆಭರಣ ಹಾಗೂ ಸಾಮಾನುಗಳನ್ನು ಸಾಗಿಸುತ್ತಿದ್ದ. ಒಟ್ಟು 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಆತನಿಂದ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಿಟೇಲ್‌ ಸ್ಟೋರ್‌ ತೆರೆಯಲು ಮುಂದಾದ ಆಪಲ್‌

    ಭವರಸಿಂಗ್ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ರಾಜಸ್ತಾನ (Rajasthan) ಮೂಲದ ನರಪಲ್‌ಸಿಂಗ್ ಬಾಲೋಥ್ ಕೂಡ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ನರಪಲ್ ಸಿಂಗ್ ಕೈಕೆಳಗಡೆ ಈ ಭವರ್‌ಸಿಂಗ್ ಕೆಲಸ ಮಾಡುತ್ತಿದ್ದ. ಸದ್ಯ ಭವರ್‌ಸಿಂಗ್ ಪೊಲೀಸರ ವಶದಲ್ಲಿದ್ದು, ನರಪಲ್‌ಸಿಂಗ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ಸದ್ಯ ಧಾರವಾಡದಲ್ಲಿ ಸಿಕ್ಕ ಚಿನ್ನ ಹಾಗೂ ಬೆಳ್ಳಿಯ ಆಭರಣಕ್ಕೆ ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಸ್ವತಃ ಐಜಿಪಿಯವರೇ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್| 35 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

  • ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು

    ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು

    ಧಾರವಾಡ: ಒಂದೆಡೆ ಮುಡಾ ಹಗರಣದ (MUDA Scam) ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿದೆ. ಇದರ ಮಧ್ಯೆ ಧಾರವಾಡದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ (Guarantee convention) ಯೋಜನೆಗಳ ಸಮಾವೇಶದಲ್ಲಿ ದೊಡ್ಡ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ (Lokayukta Police) ದೂರು ಸಲ್ಲಿಕೆಯಾಗಿದೆ.

    ರಾಜ್ಯ ಕಾಂಗ್ರೆಸ್ ಸರ್ಕಾರ (Government of Karnataka) ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನೇನೋ (Guarantee Scheme) ಜಾರಿಗೆ ಮಾಡಿತು. ಆ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ದೊಡ್ಡ ದೊಡ್ಡ ಸಮಾವೇಶಗಳನ್ನು ರಾಜ್ಯ ಸರ್ಕಾರ ಮಾಡಿತು. ಆ ಸಮಾವೇಶಗಳು ಧಾರವಾಡ ಜಿಲ್ಲೆಯಲ್ಲೂ ನಡೆದಿದ್ದವು. ಆದರೆ, ಆ ಸಮಾವೇಶಗಳಲ್ಲಿ ಗೋಲ್ಮಾಲ್ ನಡೆದಿದ್ದು, ಅದರ ಸಂಪೂರ್ಣ ತನಿಖೆ ನಡೆಸುವಂತೆ ಧಾರವಾಡ ಜಿಲ್ಲೆಯ ನವಲಗುಂದದ ಆರ್‌ಟಿಐ ಕಾರ್ಯಕರ್ತ (RTI Worker) ಮಾಬುಸಾಬ್ ಯರಗುಪ್ಪಿ ಇದೀಗ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

    ಕಳೆದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಗ್ಯಾರಂಟಿ ಸಮಾವೇಶಗಳು ನಡೆದಿದ್ದವು. ಒಂದು ಸಮಾವೇಶದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದ ಸಮಾವೇಶದ ಲೆಕ್ಕಪತ್ರಗಳೇ ಏರುಪೇರಾಗಿವೆ ಎಂದು ನವಲಗುಂದದ ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಅವರು ಪಡೆದ ಮಾಹಿತಿಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ನವಲಗುಂದದ ಸಮಾವೇಶದಲ್ಲಿ ಸಿಎಂ ಭಾಗಿಯಾಗಿದ್ದರು. ಈ ಸಮಾವೇಶದ ದಿನಾಂಕ ಮತ್ತು ಖರ್ಚು ವೆಚ್ಚದ ದಾಖಲೆಗಳೇ ಏರುಪೇರಾಗಿವೆ. ಸಮಾವೇಶ ಮುಗಿದ ಬಳಿಕ ಊಟದ ಕೊಟೇಶನ್ ಪಡೆಯಲಾಗಿದೆ. ಕೊಟೇಶನ್ ಸಲ್ಲಿಕೆಗೂ ಮುನ್ನವೇ ಊಟ, ಉಪಾಹಾರ ಪೂರೈಕೆ ಮಾಡಲಾಗಿದೆ. ಕುಂದಗೋಳ ಸಮಾವೇಶದಲ್ಲಿನ ಊಟ, ಉಪಹಾರದ ಕೊಟೇಶನ್‌ಗೆ ಸಹಿಯೇ ಇಲ್ಲ. ಆದರೂ ಏಜೆನ್ಸಿಯೊಂದಕ್ಕೆ ಊಟ, ಉಪಹಾರದ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಿಕೊಟ್ಟಿತ್ತು. ಈ ಸಮಾವೇಶಗಳ ಬಹುತೇಕ ಲೆಕ್ಕಪತ್ರಗಳು ಸರಿಯಾಗಿಲ್ಲ ಎಂದು ಆರೋಪಿಸಿರುವ ಆರ್‌ಟಿಐ ಕಾರ್ಯಕರ್ತ, ಗ್ಯಾರಂಟಿ ಸಮಾವೇಶದ ಕಾರ್ಯಕ್ರಮ ನಿರ್ವಹಣಾ ಸಮಿತಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ದುರ್ಗಾ ಪೂಜೆಯಂದು ರಜೆ ನೀಡಬಾರದು, ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಬಾರದು: ಬಾಂಗ್ಲಾ ಹಿಂದೂಗಳಿಗೆ ಎಚ್ಚರಿಕೆ

    ಈ ಸಮಿತಿ ಡಿಸಿ ದಿವ್ಯ ಪ್ರಭು, ಎಡಿಸಿ ಗೀತಾ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಿಡಬ್ಲುಡಿ ಎಇ ವಿಜಯಕುಮಾರ, ಪಾಲಿಕೆ ಲೆಕ್ಕಾಧಿಕಾರಿ ವಿಶ್ವನಾಥ ಅವರನ್ನೊಳಗೊಂಡಿದೆ. ಇವರ ಹೆಸರನ್ನೊಳಗೊಂಡು ಇದೀಗ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ನವಲಗುಂದದ ಸಮಾವೇಶದಲ್ಲಿ 87 ಲಕ್ಷ ರೂ., ಧಾರವಾಡ ಸಮಾವೇಶದಲ್ಲಿ 1.37 ಕೋಟಿ ರೂ., ಹುಬ್ಬಳ್ಳಿ ಸಮಾವೇಶದಲ್ಲಿ 1.24 ಕೋಟಿ ರೂ., ಕಲಘಟಗಿ ಸಮಾವೇಶದಲ್ಲಿ 57 ಲಕ್ಷ ರೂ. ಹಾಗೂ ಕುಂದಗೋಳ ಸಮಾವೇಶಕ್ಕೆ 54 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಇದರಲ್ಲಿ ವ್ಯತ್ಯಾಸವಿದೆ ಎಂದು ದೂರು ಸಲ್ಲಿಕೆಯಾಗಿದೆ. ಇದನ್ನೂ ಓದಿ: ಕೇಂದ್ರದಿಂದ ದುರುಪಯೋಗ ತಡೆಯಲು ಸಿಬಿಐಗೆ ಕೊಟ್ಟಿದ್ದ ಅನುಮತಿ ವಾಪಸ್ ಪಡೆದಿದ್ದೇವೆ: ಚಲುವರಾಯಸ್ವಾಮಿ

  • ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ – ಯುವಕ ಪೊಲೀಸ್ ವಶಕ್ಕೆ

    ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ – ಯುವಕ ಪೊಲೀಸ್ ವಶಕ್ಕೆ

    ಧಾರವಾಡ: ಸಂಗೊಳ್ಳಿ ರಾಯಣ್ಣ (Sangolli Rayanna) ಹಾಗೂ ರೈತ ಹುತಾತ್ಮನ ಮೂರ್ತಿ ಭಗ್ನ ಮಾಡಿದ ಘಟನೆ ಧಾರವಾಡದ (Dharwad) ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.

    ನರಗುಂದ-ನವಲಗುಂದ ಬಂಡಾಯದ ಗೋಲಿಬಾರ್‌ನಲ್ಲಿ ಹುತಾತ್ಮರಾದ ಬಸಪ್ಪ ಲಕ್ಕುಂಡಿ ಪ್ರತಿಮೆ ಭಗ್ನ ಮಾಡಿದ ಯುವಕ, ಗ್ರಾಮದ ಬಸ್ ನಿಲ್ದಾಣದ ಎದುರಿನ ಸಂಗೊಳ್ಳಿ ರಾಯಣ್ಣನ ಮೂರ್ತಿ ಹಾಗೂ ಮೂರ್ತಿಯ ಖಡ್ಗಕ್ಕೆ ಭಗ್ನ ಮಾಡಿದ್ದಾನೆ. ಮೂರ್ತಿಯ ಕೆಲ ಭಾಗ ಭಗ್ನ ಮಾಡಿರುವವನು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ನವಲಗುಂದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಭಗ್ನವಾಗಿರುವ ಮೂರ್ತಿಗಳಿಗೆ ಬಟ್ಟೆ ಸುತ್ತಿರುವ ಪೊಲೀಸರು, ಭಗ್ನ ಮಾಡಿರೋ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

    ಅಳಗವಾಡಿ ಗ್ರಾಮದಲ್ಲಿ ಪೊಲೀಸರು ಶಾಂತಿ ಸಭೆನ್ನು ಮಾಡಿದ್ದು, ಐದು ದಿನಗಳಲ್ಲಿ ರಾಯಣ್ಣನ ಹಾಗೂ ರೈತ ಹುತಾತ್ಮನ ಹೊಸ ಮೂರ್ತಿ ಮಾಡಿಸಿ ಕೊಡುವ ಭರವಸೆ ನೀಡಿದ್ದಾರೆ. ಮೂರ್ತಿ ಭಗ್ನ ಮಾಡಿದವನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ: ರವಿಕುಮಾರ್ ಕಿಡಿ

  • 3 ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಟ್ವಿಸ್ಟ್ – ಈಗ ಕೊಲೆ ಆರೋಪ

    3 ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಟ್ವಿಸ್ಟ್ – ಈಗ ಕೊಲೆ ಆರೋಪ

    ಧಾರವಾಡ: ಮೂರು ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರವಾಗಿ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಮೃತ ಚಂದ್ರಶೇಖರನ ತಾಯಿ ಹಾಗೂ ಸಹೋದರರು ಪತ್ತೆಯಾಗಿದ್ದಾರೆ. ಮಾತ್ರವಲ್ಲದೇ ತನ್ನ ಪುತ್ರನು ಅನಾರೋಗ್ಯದಿಂದ ಸಾವಾಗಿಲ್ಲ. ಇದು ಕೊಲೆ ಎಂದು ಶಂಖೆ ವ್ಯಕ್ತಪಡಿಸಿ, ಮೂವರ ಮೇಲೆ ಧಾರವಾಡ (Dharwad) ವಿದ್ಯಾಗಿರಿ ಠಾಣೆಯಲ್ಲಿ ಮೃತ ಚಂದ್ರಶೇಖರ್ ತಾಯಿ ದೂರು ದಾಖಲಿಸಿದ್ದಾರೆ.

    ಕಳೆದ ತಿಂಗಳು ಜುಲೈ 13 ಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು, ಕಾಣೆಯಾದ ವ್ಯಕ್ತಿಯ ದೂರಿನ ತನಿಖೆಯ ಭಾಗವಾಗಿ ಧಾರವಾಡ ಮಾಳಮಡ್ಡಿಯಲ್ಲಿನ ಮನೆಯೊಂದರ ಬಾಗಿಲು ಮುರಿದು ನೋಡಿದ್ದರು. ಅಲ್ಲಿ ಆ ಮನೆ ಮಾಲೀಕ ಮಲಗಿದಲ್ಲಿಯೇ ಸತ್ತು ಅಸ್ಥಿಪಂಜರವಾಗಿದ್ದು ಪತ್ತೆಯಾಗಿತ್ತು. ಆ ವ್ಯಕ್ತಿ ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿತ್ತು. ಇದನ್ನೂ ಓದಿ: ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಶಿವಮೊಗ್ಗ ಆಯ್ಕೆ ಮಾಡಲು ಹೆಚ್‌ಡಿಕೆಗೆ ಮನವಿ

    ಮೃತನ ಪತ್ನಿಯ ಸೋದರಿಯ ಮಗ ರಾಣೇಬೆನ್ನೂರಿನ ಯಶವಂತ ಪಾಟೀಲ ಎಂಬಾತನೇ ಈ ಚಂದ್ರಶೇಖರ್ ಕಾಣೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕೋವಿಡ್ ಅವಧಿಯಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಆತ ಹೇಳಿಕೊಂಡಿದ್ದ. ತನ್ನ ಚಕ್ಕಪ್ಪನಿಗೆ ತಾನು ಬಿಟ್ಟರೆ ಬೇರೆ ಯಾರೂ ಸಂಬಂಧಿಗಳೇ ಇಲ್ಲ ಎಂದು ಹೇಳಿ ಎಲ್ಲ ಕ್ರಿಯೆಗಳನ್ನು ಪೂರ್ಣಗೊಳಿಸಿದ್ದ.

    ಮೃತನ ತಾಯಿ ಮಲ್ಲವ್ವ ದಾಖಲಿಸಿರುವ ದೂರಿನಲ್ಲಿ ಮೂವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಅದರಲ್ಲಿ ಈ ಹಿಂದೆ ತನ್ನ ಚಿಕ್ಕಪ್ಪ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿದ್ದ ಯಶವಂತ ಪಾಟೀಲ, ಸೇರಿದಂತೆ ಅಸ್ಥಿಪಂಜರ ಸಿಕ್ಕ ಮನೆಯ ಪಕ್ಕದಲ್ಲಿಯೇ ಅದೇ ಆಸ್ಥಿಗೆ ಸಂಬಂಧಿಸಿ ಹಲವಾರು ವರ್ಷಗಳಿಂದ ಮನೆಯಲ್ಲಿ ಭೋಗ್ಯದಲ್ಲಿರೋ ಶಹಾಬುದ್ದೀನ್ ಬಳ್ಳಾರಿ ಹಾಗೂ ಮೃತನ ಪತ್ನಿಯ ಇನ್ನೋರ್ವ ಸೋದರಿ ಸಾಂಗ್ಲಿಯ ವಿನೋದಾ ಉತ್ತಪ್ಪನ್ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ನಡುವೆ ಶಾಂತಿ ಮಾತುಕತೆಗೆ ಮೋದಿ ಪ್ರಯತ್ನ; ಮಾಸ್ಕೋಗೆ ಅಜಿತ್‌ ದೋವಲ್‌

    ಚಂದ್ರಶೇಖರ ಕುಟಂಬ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿದ್ದು, ಚಂದ್ರಶೇಖರ ಸೆಕ್ಯೂರಿಟಿ ಕೆಲಸಕ್ಕೆ ಅಂತಾ ಬಂದು ಧಾರವಾಡದಲ್ಲಿದ್ದರು. ಮಾಳಮಡ್ಡಿಯ ಸುರೇಖಾಳನ್ನು ಮದುವೆಯಾಗಿದ್ದ. 2015ರಲ್ಲಿ ಸುರೇಖಾ ಮೃತಪಟ್ಟ ಬಳಿಕ, ಹೆಂಡತಿಯ ಹೆಸರಿನಲ್ಲಿದ್ದ ಮನೆ ಮತ್ತು ಜಾಗವೆಲ್ಲ ಚಂದ್ರಶೇಖರ ಹೆಸರಿಗೆ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪತ್ನಿಯ ಸೋದರಿಯ ಮಗನಾದ ಯಶವಂತ ಮತ್ತು ಇನ್ನೋರ್ವ ಸೋದರಿ ವಿನೋದಾ ಆಗಾಗ ಬಂದು ಜಗಳ ತೆಗೆಯುತ್ತಿದ್ದರಂತೆ. ಇದಕ್ಕೆ ಈ ಮನೆಯ ಪಕ್ಕದಲ್ಲಿಯೇ ಇರೋ ಇನ್ನೊಂದು ಮನೆಯಲ್ಲಿ ಲೀಜ್‌ನಲ್ಲಿರುವ ಶಹಾಬುದ್ಧೀನ ಸಹ ಸಾಥ್ ನೀಡಿದ್ದಾನೆ. ಇವರ ವಿರುದ್ದ ಚಂದ್ರಶೇಖರ 2021ರ ಮಾರ್ಚ್ನಲ್ಲಿ ವಿದ್ಯಾಗಿರಿ ಠಾಣೆಗೆ ದೂರು ಸಹ ದಾಖಲಿಸಿದ್ದ. ಇದನ್ನೂ ಓದಿ: 15 ದಿನದಲ್ಲಿ ಎಲ್ಲಾ ಗುಂಡಿಗಳು ಮುಚ್ಚಲೇಬೇಕು, ದೂರು ಬಂದ್ರೆ ಅಧಿಕಾರಿಗಳೇ ನೇರ ಹೊಣೆ – ಡಿಕೆಶಿ ವಾರ್ನಿಂಗ್

    ಇದಾದ ಬಳಿಕವೇ ಚಂಧ್ರಶೇಖರ ತಾಯಿ ಮತ್ತು ಸೋದರರ ಭೇಟಿಗೂ ಬಾರದೇ ಕಾಣೆಯಾಗಿದ್ದನ್ನು. ಆತ ಊರುರು ತಿರುಗುವ ಖಯಾಲಿ ಇರೋದಕ್ಕೆ ಎಲ್ಲಿಗೋ ಹೋಗಿರಬಹುದು ಎಂದು ಸುಮ್ಮನಿದ್ದರಂತೆ. ಆದರೆ ಈಗ ಆತ ಸತ್ತು ಹೋಗಿರೋದು ಗೊತ್ತಾಗಿ, ಕಾನೂನು ಹೋರಾಟ ಆರಂಭಿಸುತ್ತಿದ್ದಾರೆ.

    ಚಂದ್ರಶೇಖರ ಮನೆಯಲ್ಲಿಯೇ ಸಾವಾಗಿದ್ದರೇ, ಮೃತದೇಹ ಕೊಳೆತಾಗ ವಾಸನೆಯೇ ಬರಲಿಲ್ಲವಾ? ಅನ್ನೋದು ಆಸ್ಥಿಪಂಜರ ಸಿಕ್ಕಾಗಿನಿಂದಲೂ ಪೊಲೀಸರಿಗೂ ಕಾಡುತ್ತಿದ್ದಪ್ರಶ್ನೆಯಾಗಿತ್ತು. ಈಗ ಆತನ ತಾಯಿ ಮತ್ತು ಸೋದರರು ಇರೋದು ಸಹ ದೃಢಪಟ್ಟಿದ್ದು, ಈಗ ಕೊಲೆಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಾರಾ ಎನ್ನುವುದನ್ನು ನೋಡಬೇಕಿದೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಚ್ಚಿ ಕೊಲೆ – ಪತ್ನಿಯ ಮೇಲೆ ಕುಟುಂಬಸ್ಥರ ಶಂಕೆ

  • ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

    ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

    ಧಾರವಾಡ: ಸಿದ್ದರಾಮಯ್ಯ (Siddaramaiah) ಅವರು ಕೂಡಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ (S R Hiremath) ಹೇಳಿದರು.

    ಧಾರವಾಡದಲ್ಲಿ (Dharwad)  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನೈತಿಕತೆ ಎನ್ನುವುದು ಇದ್ದರೆ ಕೂಡಲೇ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು. ಮುಡಾ ಸೈಟ್ (MUDA) ಸಿದ್ದರಾಮಯ್ಯನವರ ಹೆಸರಿನಲ್ಲಿಲ್ಲ, ಅವರ ಪತ್ನಿ ಹೆಸರಿನಲ್ಲಿದೆ. ಆದ ಕಾರಣ ಅವರು ಸೈಟ್‌ಗಳನ್ನು ವಾಪಸ್ ಕೊಡಬೇಕು ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

    ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೋ ಅಥವಾ ಬಿಡಬೇಕೋ ಎನ್ನುವುದು ರಾಜಕೀಯ ನಿರ್ಧಾರ. ಆದರೆ ಸಿದ್ದರಾಮಯ್ಯ ಅವರು ರಾಜೀನಾಮೆ ಬಗ್ಗೆ ನಮ್ಮ ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಸಿಎಂ ಅವರು ಮುಡಾದಲ್ಲಿ ನನ್ನ ಸಹಿ ಎಲ್ಲೂ ಇಲ್ಲ ಎಂದು ಹೇಳುವ ಬದಲು ಸೈಟ್‌ಗಳನ್ನು ವಾಪಸ್ ಕೊಡಬೇಕು, ರಾಜಕೀಯದಲ್ಲಿ ಇರುವವರಿಗೆ ಜನರ ಬಗ್ಗೆ ಚಿಂತೆಯೇ ಇಲ್ಲದಂತಾಗಿದೆ. ಸಚಿವರು ಇರುವಾಗಲೇ ಅವರ ಗಮನಕ್ಕೆ ಬಾರದೇ ಹಗರಣ ಆಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾ ಖಾವೋಂಗಾ ನಾ ಖಾನೆದೂಂಗಾ ಎಂದು ಹೇಳಿದ್ದರು. ಆದರೆ ರಾಜ್ಯದ ಗುತ್ತಿಗೆದಾರರು ರಾಜ್ಯ ಬಿಜೆಪಿ (BJP) ನಾಯಕರ ವಿರುದ್ಧವೇ ಮೋದಿ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿಯಲ್ಲಿ ಎಲ್ಲಾ ಕೊಳೆತಿದೆ. ಮೊದಲು ಅದನ್ನು ಅವರು ಸ್ವಚ್ಛ ಮಾಡಿಕೊಳ್ಳಲಿ. ಆಗ ಮಾತ್ರ ಬಿಜೆಪಿಗೆ ಭವಿಷ್ಯ ಇದೆ. ಬಿಜೆಪಿ ತನ್ನ ನಾಟಕ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ

    ಮುಡಾ ವಿಷಯದಲ್ಲಿ ಬಿಜೆಪಿಯವರು ಸಿಎಂ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಈ ಕೆಸರೆರಚಾಟ ಬೇಡ, ಬಿಜೆಪಿಯವರು ಏನು ಸಾಚಾನಾ, ಗಣಿ ಭ್ರಷ್ಟಾಚಾರದಲ್ಲಿ ತೊಡಗಿದವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಮೇಲೆ ಶೇ.40 ಕಮೀಷನ್ ಆರೋಪ ಮಾಡಿ ಕಾಂಗ್ರೆಸ್‌ನವರು (Congress) ಅಧಿಕಾರಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • KIADB ಅಧಿಕಾರಿಗಳ ಮನೆಯಲ್ಲಿ 2 ಕೋಟಿ ಜಪ್ತಿ – ಇಡಿ ದಾಳಿ ನಡೆಸಿದ್ದು ಯಾಕೆ?

    KIADB ಅಧಿಕಾರಿಗಳ ಮನೆಯಲ್ಲಿ 2 ಕೋಟಿ ಜಪ್ತಿ – ಇಡಿ ದಾಳಿ ನಡೆಸಿದ್ದು ಯಾಕೆ?

    ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ (KIADB) ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು 2 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಶುಕ್ರವಾರ ಬೆಂಗಳೂರು (Bengaluru) ಮತ್ತು ಧಾರವಾಡದ (Dharwada) ಕೆಐಎಡಿಬಿ ಕಚೇರಿ ಮತ್ತು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿತ್ತು. ದಾಳಿ ಮುಂದುವರಿದಿದ್ದು ಅಧಿಕಾರಿಗಳ ಮನೆಯಲ್ಲಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಶೋಧ ಕಾರ್ಯ ನಡೆಯುತ್ತಿದೆ. ಕಚೇರಿಯ ದಾಖಲೆಗಳನ್ನು ತೆಗೆದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

     

    ದಾಳಿ ಮಾಡಿದ್ದು ಯಾಕೆ?
    ಭೂ ಸ್ವಾಧೀನ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಕೆಐಎಡಿಬಿ ಅಧಿಕಾರಿಗಳು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದು ಪ್ರದೇಶಗಳಿಗೆ 2 ಬಾರಿ ಪರಿಹಾರ ಒದಗಿಸುವಂತೆ ದಾಖಲೆ ತೋರಿಸಿ ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಈ ಅಕ್ರಮ ಎಸಗಲು ಐಡಿಬಿಐ ಬ್ಯಾಂಕ್‌ನಲ್ಲಿ 24 ಖಾತೆ ತೆರೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ಈಗ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

     

  • 4 ವರ್ಷಗಳ ಬಳಿಕ ಧಾರವಾಡದ ಇಂದಿರಮ್ಮನ ಕೆರೆ ಭರ್ತಿ – 1,500 ಕ್ಯುಸೆಕ್ ನೀರು ಹೊರಕ್ಕೆ

    4 ವರ್ಷಗಳ ಬಳಿಕ ಧಾರವಾಡದ ಇಂದಿರಮ್ಮನ ಕೆರೆ ಭರ್ತಿ – 1,500 ಕ್ಯುಸೆಕ್ ನೀರು ಹೊರಕ್ಕೆ

    ಧಾರವಾಡ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಧಾರವಾಡ (Dharwad) ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ (Indiramma Lake) ಸಂಪೂರ್ಣ ಭರ್ತಿಯಾಗಿದೆ.

    ಕಳೆದ ನಾಲ್ಕು ವರ್ಷಗಳಿಂದ ಈ ಇಂದಿರಮ್ಮನ ಕೆರೆ ಭರ್ತಿಯಾಗಿರಲಿಲ್ಲ. ಆದರೆ, ಕಳೆದ 10-15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದಿರಮ್ಮನ ಕೆರೆ ಭರ್ತಿಯಾಗಿದ್ದು, ಹೆಚ್ಚಿನ ನೀರು ಹೊರ ಹೋಗುತ್ತಿದೆ. ಇದನ್ನೂ ಓದಿ: ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ

    ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೆರೆ ತುಂಬಿ ತಡೆಗೋಡೆ ದಾಟಿ ನೀರು ಹೊರಗಡೆ ಹೋಗುತ್ತಿದ್ದು, ಈ ನೀರು ಅಳ್ನಾವರ ಡವಗಿ ನಾಲಾಕ್ಕೆ ಹೋಗಿ ಸೇರಲಿದೆ. ಇದನ್ನೂ ಓದಿ: Landslide In Karnataka: ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ

    ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಇದೀಗ ಈ ಕೆರೆ ಭರ್ತಿಯಾಗಿದೆ. ಸದ್ಯ ಕೆರೆ ತುಂಬಿದ್ದನ್ನು ನೋಡಲು ನೂರಾರು ಜನರು ಕೆರೆ ಬಳಿ ಬರುತ್ತಿದ್ದು, ಪೊಲೀಸ್ ಭದ್ರತೆಯನ್ನು ಕೂಡ ನಿಯೋಜಿಸಲಾಗಿದೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಪಾದಯಾತ್ರೆ ರಾಜಕೀಯ ನಾಟಕ: ಸಲೀಂ ಅಹಮದ್

  • ನಿರಂತರ ಮಳೆ, ಶೀತಗಾಳಿ – ಧಾರವಾಡ ಜಿಲ್ಲಾದ್ಯಂತ 2 ದಿನ ಶಾಲಾ ಕಾಲೇಜುಗಳಿಗೆ ರಜೆ

    ನಿರಂತರ ಮಳೆ, ಶೀತಗಾಳಿ – ಧಾರವಾಡ ಜಿಲ್ಲಾದ್ಯಂತ 2 ದಿನ ಶಾಲಾ ಕಾಲೇಜುಗಳಿಗೆ ರಜೆ

    ಧಾರವಾಡ: ಜಿಲ್ಲೆಯಾದ್ಯಂತ ನಿರಂತರ ಮಳೆ (Rain) ಮತ್ತು ತಂಪು ಗಾಳಿ ಬೀಸುತ್ತಿರುವುದರಿಂದ ಜುಲೈ 25 ಮತ್ತು 26 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ (Holiday) ಘೋಷಿಸಿ ಧಾರವಾಡ ಜಿಲ್ಲಾಧಿಕಾರಿ (Dharwad DC) ದಿವ್ಯ ಪ್ರಭು (Divya Prabhu) ಆದೇಶಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ, ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ ಮತ್ತು ತಂಪುಗಾಳಿ ಬೀಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಶಾಲಾ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

     

    ಈ ರಜಾ ದಿನಗಳನ್ನು ಮುಂದಿನ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣೆಕೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.  ಇದನ್ನೂ ಓದಿ: ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಆತಂಕ

     

  • ರಾಜ್ಯ ಸರ್ಕಾರದ ದಿಕ್ಕು, ದಾರಿ ತಪ್ಪಿದೆ: ಜೋಶಿ ವಾಗ್ದಾಳಿ

    ರಾಜ್ಯ ಸರ್ಕಾರದ ದಿಕ್ಕು, ದಾರಿ ತಪ್ಪಿದೆ: ಜೋಶಿ ವಾಗ್ದಾಳಿ

    ಧಾರವಾಡ: ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ದಿಕ್ಕು, ದಾರಿ ತಪ್ಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು.

    ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಒಬ್ಬರ ವಿರುದ್ಧ ಒಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಚ್ಚು ಡಿಸಿಎಂ ಸ್ಥಾನ ಸೃಷ್ಟಿ ಮಾಡಬೇಕು ಎಂಬ ಒತ್ತಾಯ ಎಬ್ಬಿಸುತ್ತಿದ್ದಾರೆ. ಇದನ್ನು ಸಿಎಂ ತಮ್ಮ ಬಾಲಂಗೋಚಿಗಳ ಕಡೆಯಿಂದ ಹೇಳಿಸುತ್ತಿದ್ದಾರೆ. ಇತ್ತ ಸಿಎಂ ಅವರನ್ನೇ ಬದಲಾವಣೆ ಮಾಡಿಸಬೇಕು ಎಂದು ಡಿಸಿಎಂ ತಮ್ಮ ಹಿಂಬಾಲಕರ ಕಡೆಯಿಂದ ಹೇಳಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ರೆ ಡಿಕೆಶಿ ಸಿಎಂ ಆಗ್ತಾರೆ: ಜಿಟಿ ದೇವೇಗೌಡ

    ಈ ಸರ್ಕಾರ ದಾರಿ ತಪ್ಪಿದ ಮಗನಂತಾಗಿದೆ. ಒಬ್ಬರಿಗೊಬ್ಬರು ತಮ್ಮ ಹಿಂಬಾಲಕರನ್ನು ಬಿಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳತ್ತದೆ ಎನ್ನುತ್ತಾರೆ. ಏನು ಹೇಳಿದರೂ ಕ್ರಮ ಆಗಿಲ್ಲ. ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಒಂದೇ ವರ್ಷದಲ್ಲಿ ಕಾಂಗ್ರೆಸ್ ಹೀಗಾಗಿದೆ. ಗ್ಯಾರಂಟಿ ಕೊಟ್ಟರೂ ಲೋಕಸಭೆಯಲ್ಲಿ ಬಹುಪಾಲು ಬಿಜೆಪಿ ಮುಂದೆ ಇದೆ. ಕಾಂಗ್ರೆಸ್ ಬಗ್ಗೆ ಜನ ಬೇಸತ್ತಿದ್ದಾರೆ. ರಾಜ್ಯದ ಆಡಳಿತ ನಿಷ್ಟ್ರಿಯಗೊಳ್ಳುತ್ತಿದೆ. ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಕೊಡಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇವರು ಕೂಡಲೇ ತಮ್ಮ ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಜನರ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

    ಬೆಲೆ ಏರಿಕೆ ಮಾಡಿ ಜನರಿಂದಲೇ ಹಣ ಪೀಕಿ ಅದೇ ದುಡ್ಡನ್ನು ಜನರಿಗೆ ಕೊಡುತ್ತಿದ್ದಾರೆ. ಒಂದು ಕೈಯಿಂದ ಕಸಿದುಕೊಂಡು ಇನ್ನೊಂದು ಕೈಯಿಂದ ಕೊಡುತ್ತಿದೆ. ಸಿದ್ದರಾಮಯ್ಯ ಒಬ್ಬ ವಿಫಲ ಮುಖ್ಯಮಂತ್ರಿ ಎಂದ ಜೋಶಿ, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತದೆ ಎಂಬ ಗುಮಾನಿ ಬಗ್ಗೆ ನಾನು ಮೊದಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗಲೂ ಪ್ರತಿಕ್ರಿಯಿಸಲಾರೆ. ಜನ ಅವರಿಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಜನತೆಯ ಆದೇಶ ಐದು ವರ್ಷ. ಈ ಅವಧಿಯಲ್ಲಿ ಅವರು ಚೆನ್ನಾಗಿಯೇ ಆಡಳಿತ ಮಾಡಲಿ ಎಂಬುದೇ ನಮ್ಮ ಉದ್ದೇಶ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಮುಂದಿನ 2 ಗಂಟೆಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

    ಅವರವರ ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಅದಕ್ಕೆ ಇವರು ಆಪರೇಶನ್ ಕಮಲ ಎನ್ನುತ್ತಾರೆ. ಆ ವಿಚಾರ ನಮ್ಮ ತಲೆಯಲ್ಲಿಲ್ಲ ಎಂದರಲ್ಲದೇ. ಸಮಾಜ ವಿಜ್ಞಾನ ಪಠ್ಯದಲ್ಲಿ ವೀರಶೈವ ಪದ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ ಮತ್ತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಎಂದು ಮೊದಲು ಹೇಳಿತ್ತು. ಈಗ ವೀರಶೈವ ಪದ ತೆಗೆದಿದೆ. ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

  • ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ: ಸಂತೋಷ್ ಲಾಡ್

    ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ: ಸಂತೋಷ್ ಲಾಡ್

    ಧಾರವಾಡ: ಈಗ ರಾಹುಲ್ ಗಾಂಧಿ (Rahul Gandhi) ವಿಪಕ್ಷ ನಾಯಕರಾಗಿದ್ದಾರೆ. ಈಗ ಮೋದಿಯವರ (Narendra Modi) ಸುಳ್ಳಾಟ ಬಯಲಿಗೆ ಎಳೆಯಲು ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

    ಲೋಕಸಭೆ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ ವಿಚಾರದ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದು ಖುಷಿ ಇದೆ. ಇಂಡಿ ಒಕ್ಕೂಟಕ್ಕೆ ಧನ್ಯವಾದ ಹೇಳುವೆ. ರಾಹುಲ್ ಗಾಂಧಿ ಸಮರ್ಥರಿದ್ದಾರೆ. ಹದಿನೈದು ವರ್ಷ ಸುದ್ದಿಗೋಷ್ಠಿ ಮಾಡದೇ ದೇಶ ನಡೆಸಿದ್ದಾರೆ. ಇನ್ನು ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ನಡೆಸಲು ಆಗಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ಹನಿಟ್ರ್ಯಾಪ್ ನಡೆದಿಲ್ಲ: ಶಾಸಕ ಹರೀಶ್ ಗೌಡ ಸ್ಪಷ್ಟನೆ

    ವಯನಾಡ್‌ನಲ್ಲಿ ಪ್ರಿಯಂಕಾ ಗಾಂಧಿ ಸ್ಪರ್ಧಿಸಿ, ಗೆಲ್ಲುತ್ತಾರೆ. ಅವರು ಸಂಸತ್‌ಗೆ ಬಂದರೆ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು. ಡಿಕೆಶಿ ಸಿಎಂ ಆಗಲಿ ಎಂದು ಚನ್ನಗಿರಿ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ಇದನ್ನೂ ಓದಿ: ಉಸಿರಾಡುವ ಗಾಳಿಗೊಂದು ಟ್ಯಾಕ್ಸ್ ಹಾಕೋದು ಬಾಕಿ ಇದೆ: ಸಿ.ಟಿ ರವಿ ಕಿಡಿ