ಧಾರವಾಡ: ಗಣೇಶ ಮೆರವಣಿಗೆ ವೇಳೆ ಜನರ ಹುಚ್ಚಾಟವನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಪರಿಣಾಮ ಪೊಲೀಸರು ಲಘು ಲಾಠಿಚಾರ್ಜ್ ಮಾಡಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಶನಿವಾರ ಸಂಜೆ ಗ್ರಾಮದ ಎರಡು ಓಣಿಯವರು ಗಣೇಶ ವಿಸರ್ಜನೆಯನ್ನು ಏಕಕಾಲಕ್ಕೆ ಆರಂಭ ಮಾಡಿದ್ದರು. ಈ ಮೆರವಣಿಗೆ ವೇಳೆ ಎರಡೂ ಓಣಿಯವರು ಎದುರು ಬದುರು ಡಿಜೆ ಹಾಕಿ ಹುಚ್ಚೆದು ಕುಣಿಯಲು ಆರಂಭಿಸಿದ್ದರು. ಆಗ ಪೊಲೀಸರು ಎರಡು ಡಿಜೆಯನ್ನು ಬೇರೆ ಬೇರೆ ಕಡೆ ತಿರುಗಿಸಲು ಯತ್ನಿಸಿದ್ದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು
ಆದರೆ ಅಲ್ಲಿದ್ದ ಜನರು ಎರಡು ಡಿಜೆಯನ್ನು ಬೇರೆ ಕಡೆ ತಿರುಗಿಸದಂತೆ ಒತ್ತಾಯಿಸಿದ್ದರು. ಜನರ ನಿಯಂತ್ರಣ ಮಾಡಲು ಪ್ರಯತ್ನಿಸಿದಾಗ ಪೊಲೀಸರಿಗೆ ಅವಾಜ್ ಹಾಕಿ, ಜನರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು.
ಇದರಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿ, ಶಾಂತಿಯುತವಾಗಿ ಗಣೇಶನ ವಿಸರ್ಜನೆ ಮಾಡಿಸಿದರು.
ಧಾರವಾಡ: ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದ ಇಬ್ಬರು ಕಳ್ಳರ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೈಕ್ ಮೇಲೆ ಹೊರಡಿದ್ದ ಯುವಕನನ್ನ ನಿಲ್ಲಿಸಿ ಹುಸೇನ್ ಎನ್ನುವವನ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನ ವಶಕ್ಕೆ ಪಡೆದು, ಆತನ ಸಹಚರರ ಬಳಿ ಕರೆದುಕೊಂಡು ಹೋದ ಪೊಲೀಸರ ಮೇಲೆಯೇ ಮತ್ತಿಬ್ಬರು ಕಳ್ಳರು ದಾಳಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಕೂಡ ಇಬ್ಬರ ಮೇಲೆ ಪ್ರತಿ ದಾಳಿ ಮಾಡಿ ಬಂಧಿಸಿದ್ದರು. ಇದನ್ನೂ ಓದಿ: ನಕಲಿ ಬಿಲ್ ಪಾವತಿಗಾಗಿ ಹಿರಿಯ ಅಧಿಕಾರಿಗಳ ಕಿರುಕುಳ – ಮಹಿಳಾ ಎಂಜಿನಿಯರ್ ಸೂಸೈಡ್
ಈ ವೇಳೆ ವಿಜಯ ಮತ್ತು ಮುಜಮ್ಮಿಲ್ ಎಂಬ ಕಳ್ಳರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡ ಪಿಎಸ್‌ಐ ಮಲ್ಲಿಕಾರ್ಜುನ ಹಾಗೂ ಪೊಲೀಸ್ ಪೇದೆ ಇಸಾಕ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕನ್ನಡ ಮಾತಾಡಿ ಎಂದಿದ್ದಕ್ಕೆ ರೂಲ್ಸ್ ಇದೆಯಾ ಎಂದು ದರ್ಪ ಮೆರೆದ ಬ್ಯಾಂಕ್ ಸಿಬ್ಬಂದಿ
ಈ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ಬುಧವಾರ ರಾತ್ರಿ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಬಳಿ 3 ಜನ ಕಳ್ಳರು ಓರ್ವನನ್ನು ಅಡ್ಡಗಟ್ಟಿ, ಆತನ ಬೈಕ್ ಕಸಿದುಕೊಳ್ಳಲು ಯತ್ನಿಸಿದರು. ಆ ಕೆಲಸ ಆಗದೇ ಹೋದಾಗ ಅಲ್ಲಿಂದ 3 ಜನ ಪರಾರಿಯಾಗಿದ್ದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡದ 3 ಠಾಣೆಯವರು ಚೆಕ್‌ಪೋಸ್ಟ್ ಹಾಕಿ, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ
ಬೆಳಗ್ಗಿನ ಜಾವ ಹುಸೇನ್‌ಸಾಬ್ ಎಂಬಾತನನ್ನು ಹಿಡಿಯಲಾಗಿದ್ದು, ಈತ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂತು. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಇನ್ನೋರ್ವ ಕಳ್ಳ ಇರುವ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋದ. ಅಲ್ಲಿ ಇಬ್ಬರು ಕಳ್ಳರು ಇದ್ದದ್ದು ಗೊತ್ತಾಯಿತು. ಈ ವೇಳೆ ಹುಸೇನ್‌ಸಾಬ್ ಪೊಲೀಸರನ್ನು ನೂಕಿ ಓಡಿದ್ದ. ಸ್ಥಳದಲ್ಲಿದ್ದ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಎಂಬಾತನನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪೊಲೀಸರ ಮೇಲೆ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಮೂರು ಸುತ್ತು ಫೈರಿಂಗ್ ನಡೆಸಿದ್ದು, ಆರೋಪಿಗಳ ಕಾಲಿಗೆ ಗುಂಡು ತಾಗಿದೆ. ತಪ್ಪಿಸಿಕೊಂಡ ಹುಸೇನ್‌ಸಾಬ್ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ಗಾಯಾಳುಗಳು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಧಾರವಾಡ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಧಾರವಾಡ (Dharwad) ಉಪನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಒಟ್ಟು 5 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಸಿಪಿಐ ದಯಾನಂದ ಶೇಗುಣಸಿ, ಪಿಎಸ್‌ಐ ರುದ್ರಪ್ಪ ಗುಡದರಿ, ವಿ.ಐ.ಬಳ್ಳಾರಿ, ಸಿಬ್ಬಂದಿ ದಯಾನಂದ, ಮುಸ್ತಫಾ ಬೀಳಗಿ, ನಾಗರಾಜ ವಡ್ಡಪ್ಪಗೋಳ, ಪ್ರದೀಪ ಕುಂದಗೋಳ, ಹನುಮಂತ ಜಟ್ಟಣ್ಣವರ ಸೇರಿ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ನಾಲ್ಕು ಮಕ್ಕಳ ತಾಯಿಯನ್ನೇ ಮದ್ವೆಯಾಗಿದ್ದ ಭೂಪನೊಬ್ಬ, ಮದುವೆ ಬಳಿಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು (Dharwad Kalaghatagi Police) ಪತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಆರೋಪಿ ಮುಜಾಹಿದ್ ನಾಲ್ಕು ಮಕ್ಕಳ ತಾಯಿಯಾಗಿದ್ದ ಅಶ್ವಿನಿ ಎಂಬಾಕೆಯನ್ನು 2017ರಲ್ಲಿ 2ನೇ ಮದುವೆಯಾಗಿದ್ದ. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸ್ವಲ್ಪ ದಿನ ಕಳೆದಂತೆ ಮುಜಾಹಿದ್, ಪತ್ನಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಜೊತೆಗೆ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಬಗ್ಗೆ ಕಳೆದ ಶುಕ್ರವಾರ ಅಶ್ವಿನಿ, ತನ್ನ ಪತಿ ವಿರುದ್ಧ ಕಲಘಟಗಿ ಪೊಲೀಸರಿಗೆ ದೂರು ನೀಡಿದ್ದರು.
ಧಾರವಾಡ: ಸೋಶಿಯಲ್ ಮೀಡಿಯಾದಲ್ಲಿ (Social Media) ಲೈಕ್ಸ್ ಗಿಟ್ಟಿಸಿಕೊಳ್ಳುವ ಸಲುವಾಗಿ ಕಾಲೇಜು ಹುಡುಗಿಯರನ್ನು ಚುಡಾಯಿಸುವ ವೀಡಿಯೋ (Video) ಮಾಡಿ ಹಂಚಿಕೊಳ್ಳುತ್ತಿದ್ದ ಯುವಕರ ತಂಡಕ್ಕೆ ಧಾರವಾಡ ನಗರ ಠಾಣೆ ಪೊಲೀಸರು (Dharwad Police) ಬಿಸಿ ಮುಟ್ಟಿಸಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರನ್ನು ಧಾರವಾಡ ನಗರ ಠಾಣೆ ಪೊಲೀಸರು ಬಂಧಿಸಿದ್ದು, ನಂತರ ಬಿಫೋರ್, ಆಫ್ಟರ್ ವೀಡಿಯೋ ಮಾಡಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೋಗಿ ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅದರಲ್ಲೂ ಯುವಕರು ಏನೇನೋ ಮಾಡಲು ಹೋಗಿ ಪೊಲೀಸರಿಂದ ಹೊಡೆತ ತಿನ್ನುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಧಾರವಾಡದ ಮೂವರು ಯುವಕರು ಸೇರ್ಪಡೆಯಾಗಿದ್ದಾರೆ.
2 ದಿನಗಳ ಹಿಂದೆ ಧಾರವಾಡದ ಕಾಲೇಜೊಂದರ ಬಳಿ ಹೋಗುತ್ತಿದ್ದ ವಿದ್ಯಾರ್ಥಿನಿಯರ ಗುಂಪಿನ ಹಿಂದೆ ಬೈಕ್ ಮೇಲೆ ಬಂದ ಓರ್ವ ಯುವಕ ಅವರ ಸಮೀಪ ಬರುತ್ತಿದ್ದಂತೆಯೇ ಜೋರಾಗಿ ಚೀರಿ ಅವರು ಹೆದರಿದಾಗ ವಿಕೃತ ಆನಂದ ಪಡೆದಿದ್ದ. ಈ ದೃಶ್ಯವನ್ನು ಛೇಡಿಸಿದ ಯುವಕನ ಸ್ನೇಹಿತ ಮತ್ತೊಂದು ಬೈಕ್ ಮೇಲೆ ಕುಳಿತುಕೊಂಡು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಖುಷಿ ಪಟ್ಟಿದ್ದರು.
ಧಾರವಾಡದ ಕಾಲೇಜೊಂದರ ಹತ್ತಿರ ಬೈಕ್ ಚಾಲನೆ ಮಾಡುತ್ತ ವಿದ್ಯಾರ್ಥಿನಿಯರಿಗೆ ಹೆದರಿಸುವ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಮೂವರು ಯುವಕರನ್ನು ಇಂದು ಧಾರವಾಡ ವಿಭಾಗ ACP ರವರ ನೇತೃತ್ವದಲ್ಲಿ pic.twitter.com/gADFq3fogV
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) July 22, 2023
ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇಂತಹ ಹುಚ್ಚಾಟಗಳನ್ನು ಮಾಡುತ್ತಿದ್ದ ಮೂವರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ನಿತ್ಯವೂ ಈ ರೀತಿ ಮಾಡಿ, ವೀಡಿಯೋವನ್ನು ಟ್ವಿಟ್ಟರ್‌ಗೆ ಹಾಕಿ ವಿಕೃತ ಆನಂದ ಪಡೆಯುತ್ತಿದ್ದ ಧಾರವಾಡ ನಗರದ ಅಹ್ಮದ್ ಖಾತರ್, ಜುನೇದ್ ಸೌದಾಗರ್, ಮನ್ಸೂರ್ ಶಿರಹಟ್ಟಿ ಎಂಬುವವರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ
ಪೊಲೀಸರು ಅವರನ್ನು ಅಷ್ಟಕ್ಕೇ ಬಿಟ್ಟಿಲ್ಲ. ಕೇಸು ದಾಖಲಿಸಿದ ಬಳಿಕ ಅದೇ ಯುವಕರ ವೀಡಿಯೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಬುದ್ಧಿ ಕಲಿಸಿದ್ದಾರೆ. ಯುವಕರ ವೀಡಿಯೋಗೆ ಪೊಲೀಸರು ಪ್ರತಿ ವೀಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಕೆಲವು ವೀಡಿಯೋಗಳು ವೈರಲ್ ಆಗುವ ರೀತಿಯಲ್ಲಿಯೇ ಪೊಲೀಸರು ಬಿಫೋರ್, ಆಫ್ಟರ್ ಎಫೆಕ್ಟ್ ಹಾಕಿ ವೀಡಿಯೋ ರಿಲೀಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವೀಡಿಯೋವನ್ನು ಪೊಲೀಸರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಟ್ವಿಟ್ಟರ್ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ? – ಮಸ್ಕ್ ಹೊಸ ಬಾಂಬ್