2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯ ಸಾಕ್ಷ್ಯನಾಶ ಮಾಡಲು ಪ್ರಯತ್ನ ಮಾಡಿದ್ದರು ಎಂದು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮೇಲೆ ಸಿಬಿಐ ಅಧಿಕಾರಿಗಳು ಸಾಕ್ಷಿ ನಾಶದ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ತಿಂಗಳ ಹಿಂದೆ ಹೈಕೋರ್ಟ್ ಸಾಕ್ಷ್ಯನಾಶದ ಅರ್ಜಿ ವಜಾ ಮಾಡಿತ್ತು. ಅರ್ಜಿ ವಜಾ ಪ್ರಶ್ನಿಸಿ, ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಸುಪ್ರೀಂಕೋರ್ಟ್ ಸಿಬಿಐ ಅರ್ಜಿ ಪುರಸ್ಕರಿಸಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಸಾಕ್ಷ್ಯನಾಶದ ಪ್ರಕರಣದಲ್ಲಿ ಹಿನ್ನಡೆಯಾಗಿದೆ.
ಯೋಗೀಶ್‌ಗೌಡ ಕೊಲೆಯಾದ ನಂತರ ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದನ್ನ ಸಿಬಿಐಗೆ ನೀಡಿತ್ತು. ಸದ್ಯ ಇದೇ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲು ಸೇರಿದ್ದಾರೆ.
ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ (Cruiser) ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಗದಗ (Gadag) ಮೂಲದ ಕುಟುಂಬವು ಗದಗದಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿದ್ದರು. ಕೊಲ್ಲಾಪುರದಿಂದ ವಾಪಸ್ಸಾಗುತ್ತಿದ್ದಾಗ ಮುಲ್ಲಾ ಧಾಬಾ ಬಳಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳಿಗೆ ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಧಾರವಾಡ ಗರಗ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ (Hubballi) ಕೆಎಂಸಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಪ್ರಕರಣ ಪತ್ತೆಯಾಗಿದೆ.’
ಸೆ.23 ರಂದು ಕುಂದಗೋಳ ತಾಲೂಕಿನ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕೆಎಂಸಿಗೆ ದಾಖಲಾಗಿದ್ದರು. ಸುರಕ್ಷಿತವಾಗಿ ಮಹಿಳೆಗೆ ಹೆರಿಗೆ ಸಹ ಆಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿತ್ತು. ಇದನ್ನೂ ಓದಿ: ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ
ಮಗುವಿನ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡುಬಂದಿವೆ. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆಯ ಬೆಳೆವಣಿಗೆ ಆಗುತ್ತಿರುವುದು ವೈದ್ಯರು ಗುರುತಿಸಿದ್ದಾರೆ.
ಇದು ಬಹಳಷ್ಟು ಅಪರೂಪದ ಪ್ರಕರಣ ಅಸಹಜ ದ್ರವ್ಯ ಸಂಗ್ರಹಣೆ ಇಂತಹ ಬೆಳವಣಿಗೆ ಆಗುತ್ತವೆ. ಅದು ಪೂರ್ಣಗೊಂಡು ಮಗುವಿನ ರೂಪ ಪಡೆದುಕೊಳ್ಳುವುದು ಅಸಾಧ್ಯ. ಹೀಗಾಗಿ ಇನ್ನೂ ಕೆಲವೊಂದು ತಪಾಸಣೆ ಮಾಡಿ, ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅಂತ ಕೆಎಂಸಿ ಆಡಳಿತ ಮಂಡಳಿ ಹೇಳಿದೆ.
ಧಾರವಾಡ: ಮಾಜಿ ಸೈನಿಕನ (Former Soldier) ಮೇಲೆ ಹಲ್ಲೆ ಪ್ರಕರಣಕ್ಕೆ ಎಎಸ್‌ಐ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಇದೀಗ ಮಾಜಿ ಸೈನಿಕನ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಧಾರವಾಡ (Dharwad) ಸಪ್ತಾಪುರದಲ್ಲಿರುವ ಸೈನಿಕ ಮೆಸ್ ಮಾಲೀಕ ರಾಮಪ್ಪ ನಿಪ್ಪಾಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಎಸ್‌ಐ ವಿದ್ಯಾನಂದ ಸುಬೇದಾರ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರಾಚಪ್ಪ ಕಣಬೂರರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು
ಪೊಲೀಸರು ಕೂಡ ಆ ಮಾಜಿ ಸೈನಿಕ ನಿಪ್ಪಾಣಿ ಮೇಲೆ ದೂರು ದಾಖಲಿಸಿದ್ದಾರೆ. ಕರ್ತವ್ಯದ ಮೇಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆ ರೀತಿ ಹಲ್ಲೆ ನಡೆಸಿದ್ದರೆ ಆ ಮಾಜಿ ಸೈನಿಕನ ಮೇಲೂ ಕ್ರಮ ಆಗಲಿದೆ. ಸದ್ಯ ಸಿಸಿಟಿವಿ ಡಿವಿಆರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?
ಭಾನುವಾರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯಾವಳಿ ನಡೆದಿತ್ತು. ಈ ವೇಳೆ ಯಾವುದೇ ಗಲಾಟೆಗಳು ಆಗದಂತೆ ಪೊಲೀಸರು ಗಸ್ತು ತಿರುಗುತ್ತಿದ್ದರು. ರಾತ್ರಿ 12 ಗಂಟೆಯಾದರೂ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ತಮ್ಮ ಮೆಸ್ ತೆಗೆದು ಊಟ ಕೊಡುತ್ತಿದ್ದರು. ಈ ವೇಳೆ ಮೆಸ್ ಬಂದ್ ಮಾಡುವಂತೆ ಹೇಳಲು ಹೋದ ಪೊಲೀಸರ ಮೇಲೆ ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದರು ಆರೋಪಿಲಾಗಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ
ಪೊಲೀಸರು ಮೆಸ್ ಬಂದ್ ಮಾಡುವಂತೆ ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸೈನಿಕ ಆರೋಪಿಸಿದ್ದಾರೆ. ಇದೀಗ ಪೊಲೀಸರು ನೀಡಿದ ದೂರಿನಾಧಾರ ಮಾಜಿ ಸೈನಿಕ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
– ನನ್ನ ಪತ್ನಿ ಹಿಂದೂ ಧರ್ಮವನ್ನೇ ಪಾಲಿಸ್ತಾಳೆ, ನಾನು ಕೂಡ ಕನ್ನಡ ಹಿಂದೂನೇ ಎಂದ ಯೂಟ್ಯೂಬರ್
ಧಾರವಾಡ: ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂದು ಲವ್ ಜಿಹಾದ್ ಆರೋಪವನ್ನು ಯೂಟ್ಯೂಬರ್ ಮುಕಳೆಪ್ಪ ತಳ್ಳಿಹಾಕಿದ್ದಾರೆ.
ಅನ್ಯ ಧರ್ಮದ ಯುವತಿ ಜೊತೆ ಮದುವೆ ಪ್ರಕರಣ ಆರೋಪ ಸಂಬಂಧ ಮೊದಲ ಬಾರಿಗೆ ತನ್ನ ಹೇಳಿಕೆ ಬಿಡುಗಡೆ ಮಾಡಿದ ಧಾರವಾಡದ ಕಾಮಿಡಿ ಯೂಟ್ಯೂಬರ್ ಮುಕಳೆಪ್ಪ, ನನ್ನ ಪತ್ನಿ ಮತಾಂತರ ಆಗಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಕಳೆಪ್ಪ ಜೊತೆ ಆತನ ಪತ್ನಿ ಕೂಡ ಹೇಳಿಕೆ ನೀಡಿದ್ದಾರೆ.
ವೀಡಿಯೋದಲ್ಲಿ ಮೊದಲು ಮಾತನಾಡಿದ ಮುಕಳೆಪ್ಪ, ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಇಬ್ಬರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ, ಅದೇ ಧರ್ಮ ಪಾಲಿಸುತ್ತೇನೆ. ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸುತ್ತೇನೆ. ಯಾವುದೇ ಮತಾಂತರ ಮಾಡಲ್ಲ. ಕಲಾವಿದರಲ್ಲಿ ಯಾವುದೇ ಜಾತಿ-ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂದರೆ ನಾನು ಕೂಡ ಕನ್ನಡ ಹಿಂದೂನೇ. ನಮಗೆ ಯಾವುದೇ ಥರದ ಕಿರಿಕಿರಿ ಮಾಡೋದು ಮತ್ತು ನಮ್ಮ ಬಗ್ಗೆ ವೀಡಿಯೋ ಮಾಡಿ ಹಾಕೋದು ಮಾಡಬೇಡಿ. ನಮ್ಮನ್ನ ಬದುಕಲು ಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.
ವೀಡಿಯೋ ಬಿಡುಗಡೆ ಮಾಡಿರುವ ಮುಕಳೆಪ್ಪ ಮತ್ತು ಆತನ ಪತ್ಮಿ ಗಾಯತ್ರಿ, ನಮ್ಮನ್ನ ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ಅದೇ ವೇಳೆ ಮುಕಳೆಪ್ಪ ಪತ್ನಿ ಕೂಡ ಮಾತನಾಡಿ, ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನ್ನನ್ನು ಮಾತಾಂತರ ಮಾಡಿದ್ದಾರೆ ಎನ್ನುವುದೆಲ್ಲ ಸುಳ್ಳು. ಇದನ್ನ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದೀರೋ ಅದೇ ರೀತಿ ನೋಡ್ರಿ. ಕೈಮುಗಿದು ಕೇಳ್ತೇನೆ. ನಮ್ಮನ್ನ ಬದುಕಲು ಬಿಡಿ ಎಂದ ಗಾಯತ್ರಿ ಹೇಳಿದ್ದಾರೆ.
ನಾವಿಬ್ಬರೂ ಒಪ್ಪಿ ಮದುವೆಯಾಗಿದ್ದೇವೆ. ಯಾರು ಕೂಡ ಮೈಂಡ್ ವಾಶ್ ಮಾಡಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸ್ವತಃ ನಾವೇ ಗಂಡ ಹೆಂಡತಿ ಕುಳಿತು ಹೇಳುತಿದ್ದೇವೆ. ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದಾರೆ.
ಧಾರವಾಡ: ಯೂಟ್ಯೂಬರ್ ಮುಕಳೆಪ್ಪನ (Youtuber Mukaleppa) ಹೆಂಡತಿ ಗಾಯತ್ರಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದು ಧಾರವಾಡದ ಶಕ್ತಿ ಸದನ ಕೇಂದ್ರದಲ್ಲಿರಿಸಿದ್ದಾರೆ.
ಮುಕಳೆಪ್ಪ ಲವ್ ಜಿಹಾದ್ ಮಾಡಿ, ಖೊಟ್ಟಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಗಾಯತ್ರಿಯ ತಲೆ ಕೆಡಿಸಿ, ಆಕೆಯ ಮನೆಯವರನ್ನೂ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಸ್ವತಃ ಗಾಯತ್ರಿ ಪಾಲಕರೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸದ್ಯ ಗಾಯತ್ರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಗೆ ನಾಳೆಯವರೆಗೂ ಇರಲು ಧಾರವಾಡದ ಶಕ್ತಿ ಸದನ ಕೇಂದ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮುಕಳೆಪ್ಪನ ಹೆಂಡತಿಯ ಮತ್ತೊಂದು ವೀಡಿಯೋ ವೈರಲ್ – ತಾಯಿ ಜೊತೆ ಗಾಯತ್ರಿ ಮಾತಾಡಿದ್ದೇನು?
ಇವತ್ತು ರಾತ್ರಿ ಗಾಯತ್ರಿ ಜೊತೆ ಮಹಿಳಾ ಪೊಲೀಸ್ ಸಿಬ್ಬಂದಿಯೇ ವಸತಿ ಮಾಡಲಿದ್ದು, ನಾಳೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಒಟ್ಟಾರೆ ಕಾಮಿಡಿ ವೀಡಿಯೋಗಳ ಮೂಲಕವೇ ಹೆಸರು ಮಾಡಿದ್ದ ಮುಕಳೆಪ್ಪನ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬರುವುದರ ಜೊತೆಗೆ ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಸದ್ಯ ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಯೂಟ್ಯೂಬರ್ ಮುಕಳೆಪ್ಪ ಮದುವೆ ಕೇಸ್; ಪೋಷಕರ ವಿರುದ್ಧವೇ ತಿರುಗಿ ಬಿದ್ದ ಮಗಳು!
ಹುಬ್ಬಳ್ಳಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ಸಮಾರಂಭದ ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಆತ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಎಂದಿದ್ದ ಮುಕುಳೆಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದಾನೆ. ಮುಕಳೆಪ್ಪನನ್ನು ಕೂಡಲೇ ಬಂಧಿಸಿ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.
ಯುವತಿ ಹೆತ್ತವರ ದೂರಿನಾಧಾರದಲ್ಲಿ ಮುಕಳೆಪ್ಪನ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸರು ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಲವ್ ಜಿಹಾದ್ ಆರೋಪದ ಮೇಲೂ ದೂರು
ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ. ಇದು ಲವ್ ಜಿಹಾದ್ ಎಂದು ಬಜರಂಗದಳ ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದಾರೆ.
ಧಾರವಾಡ: ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ (Agriculture University) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳಕ್ಕೆ ಮಂಗಳವಾರ (ಸೆ.16) ತೆರೆಬಿದ್ದಿದ್ದು, ನಾಲ್ಕೇ ದಿನದಲ್ಲಿ 23.7 ಲಕ್ಷ ಜನರು ಭೇಟಿ ನೀಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿವರ್ಷ ನಡೆಯುವ ಕೃಷಿ ಮೇಳ ಇಡೀ ರಾಜ್ಯದಲ್ಲೇ ಹೆಸರುವಾಸಿ. ಇದನ್ನು ರೈತರ ಜಾತ್ರೆ ಎಂದೇ ಕರೆಯುತ್ತಾರೆ. ಈ ವರ್ಷ ಸೆ.13ರಿಂದ ಸೆ.16ರವರೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಾಖಲೆಯ ಜನರು ಭೇಟಿ ನೀಡಿದ್ದಾರೆ.ಇದನ್ನೂ ಓದಿ: ದುಂಬಿ ಕೀಟಕ್ಕೆ ಚಿಪ್ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ
ನಾಲ್ಕು ದಿನಗಳ ಕಾಲ ನಡೆದ ಈ ಕೃಷಿ ಮೇಳಕ್ಕೆ ಬರೋಬ್ಬರಿ 23.74 ಲಕ್ಷ ಜನ ಭೇಟಿ ನೀಡಿದ್ದರು. ಮೊದಲ ದಿನ ಶನಿವಾರ (ಸೆ.13) 3.65 ಲಕ್ಷ ಜನ, ಎರಡನೇ ದಿನ ಭಾನುವಾರ (ಸೆ.14) 7.74 ಲಕ್ಷ, ಮೂರನೇ ದಿನ ಸೋಮವಾರ (ಸೆ.15) 8.6 ಲಕ್ಷ ಹಾಗೂ ಕೊನೆಯ ದಿನ ಮಂಗಳವಾರ (ಸೆ.16) 3.75 ಲಕ್ಷ ಜನ ಸೇರಿ ಒಟ್ಟು 23.74 ಲಕ್ಷ ಜನ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ.
ಧಾರವಾಡ: ಅಂಬುಲೆನ್ಸ್‌ಗೆ (Ambulence) ಎಷ್ಟೋ ಜನ ಜಾಗಬಿಟ್ಟುಕೊಡುವುದೇ ಇಲ್ಲ. ಇನ್ನು, ಸಿಎಂ ಕಾನ್ವೆ ಕಾರು ಬರುವಾಗ ಅಂಬುಲೆನ್ಸ್‌ಗೆ ಜಾಗಬಿಟ್ಟುಕೊಡುವುದಿಲ್ಲ, ಟ್ರಾಫಿಕ್‌ನಲ್ಲೇ ಅಂಬುಲೆನ್ಸ್ ಸಿಲುಕುತ್ತೆ ಅಂತಾ ದೂರಿದ್ದವರೇ ಹೆಚ್ಚು. ಆದರೆ ಸಿಎಂ ಸಿದ್ದರಾಮಯ್ಯ (Siddaramaiah), ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಮೂಲಕ ಅಪವಾದಿಂದ ಮುಕ್ತರಾಗಿದ್ದಾರೆ.
ಹೌದು, ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನ ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ದಾರಿ ಬಿಟ್ಟು ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಧಾರವಾಡ (Dharwad) ಕೃಷಿ ವಿವಿಯ ಕೃಷಿ ಮೇಳ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದ ವೇಳೆ ಧಾರವಾಡ ನಗರದ ಎನ್‌ಟಿಟಿಎಫ್ ಬಳಿ ಸಿಎಂ ಕಾರು ಇದ್ದಾಗಲೇ ಹಿಂದಿನಿಂದ ಅಂಬುಲೆನ್ಸ್ ಬಂದಿದೆ. ಇದನ್ನೂ ಓದಿ: ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ
ಧಾರವಾಡ: ಈ ಬಾರಿ ಅತಿಯಾದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಬೆಳೆ ನಾಶವಾಗಿದ್ದು, ಈಗಾಗಲೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ರೈತರಿಗೆ ಆದಷ್ಟು ಬೇಗ ಪರಿಹಾರ (Crop Relief) ಕೊಡುತ್ತೇವೆ. ದುಡ್ಡಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಿಂದ ಶೀಘ್ರ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ ಎಂದು ಡಿಸಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?
ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ. ನಾಗರಿಕತೆ ಆರಂಭ ಆದ ಮೇಲೆ ಕೃಷಿಯನ್ನೇ ಮಾಡುತ್ತ ಬರಲಾಗಿದೆ. ಭಾರತದಲ್ಲಿ ಜನಸಂಖ್ಯೆ ಏರುತ್ತಿದೆ. ಇಡೀ ಜಗತ್ತಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಚೀನಾ ಜನಸಂಖ್ಯೆಯಲ್ಲಿ ಮುಂದೆ ಇತ್ತು. ಈಗ ನಾವು ಅವರನ್ನು ಹಿಂದೆ ಹಾಕಿ ಮುಂದೆ ಬಂದಿದ್ದೇವೆ. ಇಷ್ಟೂ ಜನರಿಗೆ ಆಹಾರ ಹಾಕಬೇಕು. ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಆಹಾರ ಭದ್ರತೆ ಬಂದಿದೆ. ಆಹಾರ ಉತ್ಪಾದನೆ ಈಗ ಆಗುತ್ತಿಲ್ಲ, ಅದು ಸ್ಥಗಿತ ಆಗಿದೆ. ಇದಕ್ಕೆ ಕಾರಣ ಮಣ್ಣಿನ ಫಲವತ್ತತೆ. ಇದನ್ನು ಕೃಷಿ ವಿವಿಯವರು ಗಮನಕ್ಕೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: Hassan Tragedy – ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಶ್ಚಲಾನಂದನಾಥ ಶ್ರೀ
ಜನಸAಖ್ಯೆ ಬೆಳೆದಂತೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು. ಸ್ವತಂತ್ರ ಬಂದಾಗ ಆಹಾರ ಉತ್ಪಾದನೆ ಇರಲಿಲ್ಲ, ಸ್ವಾವಲಂಬನೆ ಇತ್ತು. ಬೇರೆ ದೇಶದಿಂದ ಆಗ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಪ್ತು ಮಾಡುತ್ತಿದ್ದೇವೆ. ಜನಸಂಖ್ಯೆಗೆ ತಕ್ಕ ಆಹಾರ ಇರಬೇಕು. ಕೃಷಿ ವಿವಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಕೃಷಿಗೆ ಆದ್ಯತೆ ಕೊಟ್ಟಿದೆ. ಮುಂದೆಯೂ ಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್ ಲಾಡ್ ಕಾರಣ: ಸೋಮಣ್ಣ
ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಒಂದನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ನಮ್ಮ ರಾಜ್ಯದಲ್ಲಾಗುತ್ತಿದೆ. ಮುಂದೆ ನಂಬರ್ ಒನ್ ಸ್ಥಾನಕ್ಕೆ ನಾವು ಹೋಗಬೇಕು. ಒಂದೇ ಬೆಳೆ ಬೇಳೆಯುವಂತೆ ಆಗಬಾರದು. ತೋಟಗಾರಿಕೆ, ತರಕಾರಿ, ಭತ್ತ, ರಾಗಿ ಬೆಳೆಯಬೇಕು. ಬಹಳ ಜನರಿಗೆ ಈಗ ಮಧುಮೇಹ ಇದೆ. ಹೀಗಾಗಿ ಸಿರಿಧಾನ್ಯ ಬೆಳೆಯಲು ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹೆಚ್ಚು ಸಿರಿ ಧಾನ್ಯ ಬೆಳೆಯಬೇಕು. ಮನುಷ್ಯನಿಗೆ ಆಹಾರ ಪದ್ಧತಿಯಿಂದ ದೈಹಿಕ ಕಾಯಿಲೆ ಬರುತ್ತಿವೆ. ಕೃಷಿ ವಿಜ್ಞಾನಿಗಳು ಇದನ್ನ ಗಮನಕ್ಕೆ ತೆಗೆದುಕೊಳ್ಳಬೇಕು. ಅಕ್ಕಿ, ಗೋಧಿಯಲ್ಲಿ ಸಕ್ಕರೆ ಇದೆ. ಸಿರಿಧಾನ್ಯದಲ್ಲಿ ಸಕ್ಕರೆ ಕಡಿಮೆ ಇದೆ. ಹೀಗಾಗಿ ಅವುಗಳನ್ನು ಬೆಳೆಯಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಹೊಸ ತಳಿ ಬಂದ ಮೇಲೆ ಅವು ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು ಮತ್ತು ಲ್ಯಾಂಡ್ ಟು ಲ್ಯಾಬ್ ಆಗಬೇಕು. ಇವತ್ತು ಮತ್ತು ನಿನ್ನೆ ಕೃಷಿ ಮೇಳಕ್ಕೆ 6 ಲಕ್ಷ ರೈತರು ಬಂದಿದ್ದಾರೆ. ನಾವು ಭಾಗವಹಿಸಿ ಹೇಳೋದು ಒಂದು ಭಾಗ. ಆದರೆ, ರೈತರು ಭಾಗವಹಿಸುವುದು ಮುಖ್ಯ. ಹೊಸ ತಳಿ, ಹೊಸ ಬೀಜ, ಹೊಸತು ಏನೆಲ್ಲಾ ಇದೆ ಎಂದು ತಿಳಿಯಬೇಕು. ಇದರಿಂದ ಸಮೃದ್ಧಿ ಆಗಲಿದೆ ಎಂದು ನುಡಿದರು. ಇದನ್ನೂ ಓದಿ: ಹಾಸನ ದುರಂತ – ಕಂಬನಿ ಮಿಡಿದ ಟ್ರಕ್ ಚಾಲಕನ ಗ್ರಾಮಸ್ಥರು
ಹಿಂದೆ ಗ್ರಾಮಸೇವಕರು ಇದ್ದರು. ಈಗ ಅವರು ಕಡಿಮೆಯಾಗಿದ್ದಾರೆ. ಅವರು ರೋಗಕ್ಕೆ ಔಷಧಿ ಕೊಡುತ್ತಿದ್ದರು, ಈಗ ಅದು ಕಡಿಮೆಯಾಗಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿವಿ, ರೈತರ ನಡುವೆ ಸೇತುವೆ ನಿರ್ಮಾಣ ಮಾಡಬೇಕು. ನವಲಗುಂದದಲ್ಲಿ ಬೆಣ್ಣೆ ಹಳ್ಳ ಇದೆ. ಅದಕ್ಕೆ ಪ್ರವಾಹ ಬಂದಾಗ ರೈತರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಟೆಂಡರ್ ಕೂಡ ಆಗಲಿದೆ ಎಂದರು. ಇದನ್ನೂ ಓದಿ: 14 ಸೈಟ್ ನುಂಗಿದ ನೀವು ನನಗೆ ಹೇಳಲು ಬರೋದು ಬೇಡ: ಸಿಎಂಗೆ ಪ್ರತಾಪ್ ತಿರುಗೇಟು