Tag: ಧವನ್

  • ಭಾವೋದ್ವೇಗಕ್ಕೆ ಒಳಗಾದ ಧವನ್ – ‘ಹಾರ್ಟ್ ಬ್ರೇಕಿಂಗ್’ ಎಂದ ಸಚಿನ್

    ಭಾವೋದ್ವೇಗಕ್ಕೆ ಒಳಗಾದ ಧವನ್ – ‘ಹಾರ್ಟ್ ಬ್ರೇಕಿಂಗ್’ ಎಂದ ಸಚಿನ್

    ಲಂಡನ್: ವಿಶ್ವಕಪ್ ಟೂರ್ನಿಯ ನಡುವೆಯೇ ಗಾಯದ ಸಮಸ್ಯೆಯಿಂದ ಹೊರ ಬಂದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಧವನ್ ಅಭಿಮಾನಿಗಳಿಗೆ ಭಾವೋದ್ವೇಗದ ಸಂದೇಶ ನೀಡಿದ್ದಾರೆ. ಇತ್ತ ಧವನ್ ತಂಡದಿಂದ ಹೊರಗುಳಿದಿರುವುದು ಹಾರ್ಟ್ ಬ್ರೇಕಿಂಗ್ ಎಂದು ಸಚಿನ್ ಹೇಳಿದ್ದಾರೆ.

    ಟೂರ್ನಿಯಿಂದ ಧವನ್ ಹೊರ ಬರುತ್ತಿರುವ ಬಗ್ಗೆ ಬಿಸಿಸಿಐ ಬುಧವಾರದಂದು ಅಧಿಕೃತವಾಗಿ ದೃಢಪಡಿಸಿತ್ತು. ಆ ಬಳಿಕ ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದ ಧವನ್ ಭಾವೋದ್ವೇಗಕ್ಕೆ ಒಳಗಾಗಿದ್ದರು.

    2019ರ ವಿಶ್ವಕಪ್ ಟೂರ್ನಿಯ ಭಾಗವಾಗಿರುವುದಿಲ್ಲ ಎಂದು ನಿಮಗೆ ತಿಳಿಸಲು ಬೇಸರವಾಗುತ್ತಿದ್ದು, ನನ್ನ ಹೆಬ್ಬೆರಳಿನ ಗಾಯ ಸಂಪೂರ್ಣವಾಗಿ ಗುಣವಾಗಿಲ್ಲ. ದೇಶಕ್ಕಾಗಿ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಆಸೆಯಾಗಿತ್ತು. ಸದ್ಯ ನಾನು ವಿಶ್ರಾಂತಿ ಪಡೆದು ಮುಂದಿನ ಟೂರ್ನಿಯ ಬಗ್ಗೆ ಯೋಚಿಸಬೇಕಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲ್ಲಲಿದೆ. ತಂಡವನ್ನು ಬೆಂಬಲಿಸುವ ಅಗತ್ಯವಿದ್ದು, ನಿಮ್ಮ ಪ್ರೀತಿ ಹಾಗೂ ಪ್ರಾರ್ಥನೆಗಳಿಗೆ ಧನ್ಯವಾದ. ಜೈ ಹಿಂದ್ ಎಂದು ಹೇಳಿದ್ದಾರೆ.

    ಧವನ್ ಅವರು ತಂಡದಿಂದ ಹೊರಗುಳಿಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್, ನೀವು ಉತ್ತಮ ಪ್ರದರ್ಶನ ನೀಡಿದ್ದೀರಿ. ಇಂತಹ ಪ್ರಮುಖ ಟೂರ್ನಿಯ ನಡುವೆಯೇ ಗಾಯದ ಸಮಸ್ಯೆಗೆ ಉಂಟಾಗಿರುವುದು ‘ಹಾರ್ಟ್ ಬ್ರೇಕಿಂಗ್. ಈ ಹಿಂದಿಕ್ಕಿಂತಲೂ ಶಕ್ತಿಯಲ್ಲಿ ಮತ್ತೆ ವಾಪಸ್ ಬರುವ ನಂಬಿಕೆ ನನಗಿದೆ ಎಂದಿದ್ದಾರೆ. ಅಲ್ಲದೇ ಧವನ್ ಸ್ಥಾನದಲ್ಲಿ ಆಯ್ಕೆ ಆಗಿದ್ದ ರಿಷಬ್ ಪಂತ್‍ಗೆ ಶುಭ ಕೋರಿರುವ ಸಚಿನ್, ರಿಬಷ್ ತನ್ನನ್ನು ಸಾಬೀತು ಪಡಿಸಿಕೊಳ್ಳಲು ಇದಕ್ಕಿಂತ ದೊಡ್ಡ ವೇದಿಕೆ ಸಿಗುವುದಿಲ್ಲ ಎಂದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಆ ಬಳಿಕ ಮೂರು ವಾರಗಳ ಕಾಲ ಅವರು ಟೂರ್ನಿಗೆ ಅಲಭ್ಯ ಆಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಆದರೆ ಬುಧವಾರ ಗಾಯದ ತಪಾಸಣೆ ನಡೆಸಿದ ವೈದ್ಯರು ಧವನ್ ಅವರಿಗೆ ಸುದೀರ್ಘ ವಿಶ್ರಾಂತಿ ಅಗತ್ಯವಿರುವುದಾಗಿ ತಿಳಿಸಿದ್ದಾರೆ. ಟೀಂ ಇಂಡಿಯಾ ಶನಿವಾರ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗಾಯಗೊಂಡ್ರೂ ಜಿಮ್‍ನಲ್ಲಿ ಬೆವರಿಳಿಸಿದ ಧವನ್

    ಗಾಯಗೊಂಡ್ರೂ ಜಿಮ್‍ನಲ್ಲಿ ಬೆವರಿಳಿಸಿದ ಧವನ್

    ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಧವನ್ ಜಿಮ್‍ನಲ್ಲಿ ಬೆವರಿಳಿಸಿದ್ದಾರೆ.

    ರೆಕ್ಕಗಳೊಂದಿಗೆ ಅಲ್ಲ.. ಸಂಕಲ್ಪದಿಂದ ಹಾರಾಡುತ್ತೇನೆ ಎಂದು ಟ್ವೀಟ್ ಮಾಡಿದ್ದ ಧವನ್, ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ವಿಶ್ರಾಂತಿ ಪಡೆಯದೆ ಫಿಟ್ನೆಸ್ ಕಾಯ್ದುಕೊಳ್ಳಲು ಜಿಮ್‍ನಲ್ಲಿ ಕಸರತ್ತು ಮಾಡಿದ್ದಾರೆ.

    33 ವರ್ಷದ ಧವನ್ ತಾವು ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ಒಂದು ಕೆಟ್ಟ ಕನಸಿನಂತೆ ಆಗುವ ಸಂದರ್ಭ ಎದುರಾಗಿದ್ದು, ಮತ್ತೆ ಚೇತರಿಸಿಕೊಳ್ಳುವ ಅವಕಾಶ ಇದೆ. ನಾನು ಬೇಗ ಗಾಯದಿಂದ ಚೇತರಿಸಿಕೊಳ್ಳುವಂತೆ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಇತ್ತ ಗಾಯಗೊಂಡು 3 ವಾರಗಳ ಕಾಲ ಧವನ್ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದ್ದರು. ಇಂಗ್ಲೆಂಡ್‍ನಲ್ಲಿ ತಂಡದೊಂದಿಗೆ ಉಳಿದುಕೊಂಡಿದ್ದಾರೆ. ಈ ಕುರಿತು ನಾಯಕ ಕೊಹ್ಲಿ ಸ್ಪಷ್ಟನೆ ನೀಡಿದ್ದು, ಧವನ್ ಕೈಗೆ ಕೆಲ ವಾರಗಳ ಕಾಲ ಚಿಕಿತ್ಸೆ ಬೇಕಾಗಿದ್ದು, ಟೂರ್ನಿಯ ಲೀಗ್ ಪಂದ್ಯಗಳ ಅಂತ್ಯದಲ್ಲಿ ಅಥವಾ ಸೆಮಿಸ್ ವೇಳೆಗೆ ಮತ್ತೆ ಲಭ್ಯವಾಗುವ ಅವಕಾಶವಿದೆ. ಧವನ್ ಮತ್ತೆ ಆಡಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ. ನಮ್ಮ ಮುಂದಿನ ಚಿಂತನೆ ಭಾನುವಾರದ ಪಂದ್ಯದತ್ತ ಇದ್ದು, ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಕೋಚ್ ಸಂಜಯ್ ಬಂಗಾರ್, ಧವನ್ ರನ್ನ ಟೂರ್ನಿಯಿಂದ ಕೈಬಿಡಲು ನಾವು ಸಿದ್ಧರಿಲ್ಲ ಎಂದಿದ್ದಾರೆ. ಇತ್ತ ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನದೊಂದಿಗೆ ಸೆಣಸಲಿದ್ದು, ಜೂನ್ 22 ರಂದು ಆಘ್ಘಾನಿಸ್ತಾನದ ವಿರುದ್ಧ ಆಡಲಿದೆ.

  • ಮತ್ತೆ ವಾಪಸ್ ಆಗ್ತೇನೆ ಎಂದು ಕವಿತೆ ಹಂಚಿಕೊಂಡ ಧವನ್

    ಮತ್ತೆ ವಾಪಸ್ ಆಗ್ತೇನೆ ಎಂದು ಕವಿತೆ ಹಂಚಿಕೊಂಡ ಧವನ್

    ಲಂಡನ್: ವಿಶ್ವಕಪ್ ಟೂರ್ನಿಯ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತೆ ವಾಪಸ್ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಗಾಯಗೊಂಡ ಬಳಿಕ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಧವನ್, ಟ್ವಿಟ್ಟರ್ ನಲ್ಲಿ ಡಾ. ರಾಹತ್ ಇಂದೋರಿ ಅವರ ಕವಿತೆಯನ್ನು ಹಂಚಿಕೊಂಡಿದ್ದು, ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಧವನ್ ಸದ್ಯ ತಂಡದಿಂದ ಹೊರಗುಳಿದಿದ್ದರು ಕೂಡ ಬಿಸಿಸಿಐ ಅವರನ್ನು ಇಂಗ್ಲೆಂಡ್‍ನಲ್ಲಿಯೇ ಉಳಿಸಿಕೊಂಡಿದೆ. ಆ ಮೂಲಕ ಬಹುಬೇಗ ಚೇತರಿಕೆಗೆ ಸಹಕಾರ ಆಗುವಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯುತ್ತಿದ್ದಾರೆ. ಇತ್ತ ಧವನ್ ಸ್ಥಾನದಲ್ಲಿ ರಿಷಬ್ ಪಂತ್ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದು, ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ ಪಂತ್ ಅವಗಿಂತ ಹೆಚ್ಚಿನ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಆಡುವ 11 ಬಳಗದಲ್ಲಿ ಇದ್ದರು ಅಚ್ಚರಿ ಸಂಗತಿ ಏನು ಅಲ್ಲ.

    ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಇಂದು ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದ್ದು, ಈ ವೇಳೆ ಧವನ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದರು. ಇತ್ತ ವಿಶ್ವಕಪ್ ಟೂರ್ನಿಗಳಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ 4 ರಲ್ಲಿ ಸೋತಿದೆ.

    ವಿಶ್ವಕಪ್ ನಲ್ಲಿ 16 ವರ್ಷಗಳ ಹಿಂದೆ ಅಂದರೆ 2003 ರಲ್ಲಿ ಇತ್ತಂಡಗಳು ಮುಖಾಮುಖಿ ಆಗಿದ್ದವು. ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತಿದ್ದ ಜಹೀರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.

  • ಕೊಹ್ಲಿ ಅಬ್ಬರಕ್ಕೆ ಆಫ್ರಿಕಾ ಬೌಲರ್ ಗಳು ಸುಸ್ತು- ಡರ್ಬನ್ ನಲ್ಲಿ ಗೆಲುವಿನ ಖಾತೆ ತೆರೆದ ಬ್ಲೂಬಾಯ್ಸ್

    ಕೊಹ್ಲಿ ಅಬ್ಬರಕ್ಕೆ ಆಫ್ರಿಕಾ ಬೌಲರ್ ಗಳು ಸುಸ್ತು- ಡರ್ಬನ್ ನಲ್ಲಿ ಗೆಲುವಿನ ಖಾತೆ ತೆರೆದ ಬ್ಲೂಬಾಯ್ಸ್

    ಡರ್ಬನ್: ಟೆಸ್ಟ್ ಸರಣಿ ಸೋಲಿನ ನಿರಾಸೆಯಿಂದ ಹೊರಬಂದು ಕೆಚ್ಚೆದೆಯ ಆಟವಾಡಿದ ಪ್ರವಾಸಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಡರ್ಬನ್‍ನ ಕಿಂಗ್ಸ್ ಮೇಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ನೀಡಿದ್ದ 270 ರನ್‍ಗಳ ಸವಾಲಿನ ಗುರಿಯನ್ನು 45.3 ಓವರ್‍ಗಳಲ್ಲಿ 4ವಿಕೆಟ್ ನಷ್ಟದಲ್ಲಿ ಚೇಸ್ ಮಾಡಿದ ಭಾರತ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ – ಧವನ್ ಜೋಡಿ 33 ರನ್ ಗಳಿಸುವಷ್ಟರಲ್ಲಿಯೇ ಬೇರ್ಪಟ್ಟಿತ್ತು. ಶರ್ಮಾ 20 ರನ್‍ಗಳಿಸಿ ಔಟಾದರೆ 35 ರನ್‍ಗಳಿಸಿ ಆಡುತ್ತಿದ್ದ ಧವನ್ ರನೌಟ್‍ಗೆ ಬಲಿಯಾದರು. ಬಳಿಕ ಜೊತೆಯಾದ ನಾಯಕ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೂರನೇ ವಿಕೆಟ್‍ಗೆ 189ರನ್‍ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

    105 ಎಸೆತಗಳಲ್ಲಿ 9 ಬೌಂಡರಿಗಳಿಂದ ವೃತ್ತಿ ಜೀವನದ 33ನೇ ಶತಕ ದಾಖಲಿಸಿದ ಕೊಹ್ಲಿ, ಆಫ್ರಿಕಾ ಬೌಲರ್‍ಗಳ ಬೆವರಿಳಿಸಿದರು. ಚೇಸಿಂಗ್ ವೇಳೆ 20ನೇ ಶತಕ ಸಿಡಿಸಿz ಕೊಹ್ಲಿ ಬ್ಯಾಟಿಂಗ್‍ನಲ್ಲಿ ಮತ್ತೊಮ್ಮೆ ಕಮಾಲ್ ಮಾಡಿದರು. ವಿದೇಶಗಳಲ್ಲಿ ಕೊಹ್ಲಿ ಗಳಿಸಿದ 19ನೇ ಶತಕ ಇದಾಗಿದ್ದು, ಆಫ್ರಿಕಾದಲ್ಲಿ ಇದೇ ಮೊದಲ ಬಾರಿ ಶತಕದ ಸಂಭ್ರಮವನ್ನಾಚರಿಸಿದರು. 119 ಎಸೆತಗಳಿಂದ 112 ರನ್‍ಗಳಿಸಿ ಗೆಲುವಿನ ಸನಿಹದಲ್ಲಿ ರಬಾಡಾಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯಾ ರಹಾನೆ 86 ಎಸೆತಗಳಿಂದ 5 ಬೌಂಡರಿ ಹಾಗೂ 2 ಸಿಕ್ಸರ್‍ಗಳ ನೆರವಿನಿಂದ ಆಕರ್ಷಕ 79 ರನ್‍ಗಳಿಸಿ ಫೆಲುಕ್ವಾಯೊಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ 4 ಹಾಗೂ ಪಾಂಡ್ಯಾ 3 ರನ್‍ಗಳಿಸಿ ಗೆಲುವಿನ ಸಂಭ್ರವನ್ನಾಚರಿಸಿದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಹರಿಣಗಳು ನಾಯಕ ಡುಪ್ಲೆಸ್ಸಿಸ್ ಶತಕದ ನೆರವಿನಿಂದ 8 ವಿಕೆಟ್ ನಷ್ಟದಲ್ಲಿ 269ರನ್‍ಗಳಿಸಿತ್ತು. 34 ರನ್ ಗಳಿಸಿದ್ದ ಡಿ ಕಾಕ್‍ರನ್ನು ಎಲ್‍ಬಿಡಬ್ಲ್ಯೂ ಬಲೆಯಲ್ಲಿ ಕೆಡವಿದ ಸ್ಪಿನ್ನರ್ ಚಾಹಲ್ ಆಫ್ರಿಕಾಗೆ ಶಾಕ್ ನೀಡಿದ್ದರು. ಮಾರ್ಕ್ ರಮ್ (9), ಜೆಪಿ ಡ್ಯುಮಿನಿ (12), ಡೇವಿಡ್ ಮಿಲ್ಲರ್ (7) ರನ್‍ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ದರು. ಆದರೆ ಇನ್ನೊಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ನಾಯಕ ಡು ಪ್ಲೆಸಿಸ್ ಮಾತ್ರ ಏಕಾಂಗಿಯಾಗಿ ಹೋರಾಟ ಚಾಲ್ತಿಯಲ್ಲಿರಿಸಿದ್ದರು.

    ವೃತ್ತಿ ಜೀವನದ 117ನೇ ಏಕದಿನ ಪಂದ್ಯದಲ್ಲಿ 9ನೇ ಶತಕ ಬಾರಿಸಿದ ಡು ಪ್ಲೆಸಿಸ್ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಂತಿಮ ಓವರ್ ವರೆಗೂ ಕ್ರೀಸ್ ಆಕ್ರಮಿಸಿಕೊಂಡಿದ್ದ ಹರಿಣಗಳ ನಾಯಕ, 112 ಎಸೆತಗಳೆದುರು 11 ಬೌಂಡರಿ ಹಾಗೂ 2 ಸಿಕ್ಸರ್‍ಗಳನ್ನು ಒಳಗೊಂಡ 120 ರನ್‍ಗಳಿಸಿ ಆಫ್ರಿಕಾದ ಮಾನ ಕಾಪಾಡಿದರು. ಶತಕ ಪೂರ್ತಿಗೊಳಿಸಲು ಡು ಪ್ಲೆಸಿಸ್ ಎದುರಿಸಿದ್ದು 101 ಎಸೆತ. ಕೊನೆಯಲ್ಲಿ ಅಬ್ಬರಿಸಿದ ಆಲ್‍ರೌಡರ್ ಕ್ರಿಸ್ ಮಾರಿಸ್ 37 ಹಾಗೂ ಬೌಲರ್ ಫೆಲುಕ್ವಾಯೊ 27 ರನ್‍ಗಳಿಸಿದರು. 6ನೇ ವಿಕೆಟ್ ಜತೆಯಾಟದಲ್ಲಿ 74 ರನ್ ಗಳಿಸಿದ್ದರಿಂದ ಆಫ್ರಿಕಾದ ಮೊತ್ತ 250 ದಾಟಿತು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಡರ್ಬನ್‍ನಲ್ಲಿ ಸೋಲಿನ ಸರಪಳಿ ಕಳಚಿತು. ಈ ಹಿಂದೆ ಇದೇ ಮೈದಾನದಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 6 ರಲ್ಲೂ ಭಾರತ ಸೋಲನುಭವಿಸಿತ್ತು.

    ಉಳಿದ ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಮತ್ತೊಂದೆಡೆ ತನ್ನ ನೆಲದಲ್ಲಿ ಸೋಲರಿಯದ ಸರದಾರನಂತೆ ಮೆರೆಯುತ್ತಿದ್ದ ಆಫ್ರಿಕದ ಗೆಲುವಿನ ಯಾತ್ರೆಗೂ ಕೊಹ್ಲಿ ಬಾಯ್ಸ್ ಬ್ರೇಕ್ ಹಾಕಿದೆ. ಸತತ 17 ಏಕದಿನ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಹರಿಣಗಳಿಗೆ ಈಗ ಸೋಲಿನ ರುಚಿ ತೋರಿಸಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯ ಸೋಲಿಗೆ ಮೊದಲನೇ ಏಕದಿನ ಪಂದ್ಯದಲ್ಲೇ ಸೇಡು ತೀರಿಸಿಕೊಂಡಿದೆ.

    6 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಸೆಂಚೂರಿಯನ್‍ನ ಸೂಪರ್ ಸ್ಪೋರ್ಟ್ಸ್  ಪಾರ್ಕ್‍ನಲ್ಲಿ ಭಾನುವಾರ ನಡೆಯಲಿದೆ.