Tag: ಧರ್ಮ ಸಂಘರ್ಷ

  • ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು

    ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸಿದ ಅನ್ಯಕೋಮಿನ ವ್ಯಾಪಾರಸ್ಥರು

    ಮಡಿಕೇರಿ: ಸುಬ್ರಹ್ಮಣ್ಯ ಷಷ್ಠಿ ಹಾಗೂ ದೇವಾಲಯ (Temple) ವಾರ್ಷಿಕೋತ್ಸವದಲ್ಲಿ ಅನ್ಯಕೋಮಿನವರು ವ್ಯಾಪಾರ ವಹಿವಾಟು ನಡೆಸಬಾರದು ಎಂದು ಹಿಂದೂ ಸಂಘಟನೆ ಹಾಗೂ ಭಜರಂಗದಳದವರು (Bajrang Dal) ಎಚ್ಚರಿಕೆ ನೀಡಿದ್ದಾರೆ. ಆದರೆ ಹಿಂದೂಗಳ (Hindu) ಆಧಾರ್ ಕಾರ್ಡ್‌ಗಳನ್ನು (Aadhaar Card) ಬಳಸಿಕೊಂಡು ಅನ್ಯಕೋಮಿನ ಯುವಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.

    ಇಂದು ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಹರಿಹರ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಹಾಗೂ ದೇವಾಲಯದ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ 4 ದಿನಗಳ ಹಿಂದೆಯೇ ಹಿಂದೂಯೇತರರು ವ್ಯಾಪಾರ ವಹಿವಾಟು ನಡೆಸಬಾರದು ಎಂಬ ಎಚ್ಚರಿಕೆ ನೀಡಲಾಗಿತ್ತು. ಒಂದು ವೇಳೆ ವ್ಯಾಪಾರ ನಡೆಸಲು ಬಂದರೆ ಅದರ ಪರಿಣಾಮ ಬೇರೆ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹಿಂದೂ ಸಂಘಟನೆ ಪ್ರಮುಖರು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ: ಕಾಂಗ್ರೆಸ್

    ಈ ಎಚ್ಚರಿಕೆಗಳ ನಡುವೆಯೂ ಇಂದು ಸುಬ್ರಹ್ಮಣ್ಯ ಷಷ್ಠಿ ಇರುವ ಹಿನ್ನೆಲೆಯಲ್ಲಿ ಅನ್ಯಕೋಮಿನ ಕೆಲ ಯುವಕರು ಹಿಂದೂಗಳ ನಕಲಿ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಹೊರಭಾಗದಲ್ಲಿ ವ್ಯಾಪಾರ ನಡೆಸುತ್ತಿರುವುದನ್ನು ಕಂಡ ಸಂಘಟನಾಕಾರರು ವ್ಯಾಪಾರಸ್ಥರ ಐಡಿ ಕಾರ್ಡ್ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕುಕ್ಕೆಯಲ್ಲಿ ಮೊದಲ ಬಾರಿಗೆ ವ್ಯಾಪಾರದಿಂದ ದೂರ ಉಳಿದ ಮುಸ್ಲಿಂ ವ್ಯಾಪಾರಿಗಳು- ಸಂಘರ್ಷವಿಲ್ಲದೆ ಜಾತ್ರೆ ಸಂಪನ್ನ

    ಅನ್ಯಕೋಮಿನ ಯುವಕರು ಹಿಂದೂಗಳ ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದ ತಕ್ಷಣವೇ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದುರ್ಗ ವಾಹಿನಿಯ ಜಿಲ್ಲಾ ಸಂಚಾಲಕಿ ಅಂಬಿಕಾ ಅವರು ಸ್ಥಳಕ್ಕೆ ತೆರಳಿ ಅನ್ಯಕೋಮಿನ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರ ವ್ಯಾಪಾರದ ಸಾಮಗ್ರಿಗಳನ್ನು ತೆರವು ಮಾಡಿ ಅಲ್ಲಿಂದ ಕಳುಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಸಂಘರ್ಷಕ್ಕೆ ಕಾರಣರಾದ 6 ವಿದ್ಯಾರ್ಥಿಗಳಿಗೆ ಬೇಕಿದೆ ಮಾನಸಿಕ ಚಿಕಿತ್ಸೆ – ಆಂದೋಲ ಶ್ರೀ

    ಹಿಜಬ್ ಸಂಘರ್ಷಕ್ಕೆ ಕಾರಣರಾದ 6 ವಿದ್ಯಾರ್ಥಿಗಳಿಗೆ ಬೇಕಿದೆ ಮಾನಸಿಕ ಚಿಕಿತ್ಸೆ – ಆಂದೋಲ ಶ್ರೀ

    ಕಲಬುರಗಿ: ಹಿಜಬ್ ವಿಚಾರದಲ್ಲಿ 6 ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ. ಧರ್ಮ ಸಂಘರ್ಷವೂ 6 ಜನರ ಪಾಪದ ಕೂಸು. ಈ ವಿದ್ಯಾರ್ಥಿಗಳ ಮೆದುಳಿಗೆ ಮಾನಸಿಕ ಚಿಕಿತ್ಸೆ ಆಗಬೇಕಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಕುಟುಕಿದ್ದಾರೆ.

    hijab (1)

    ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡುವಂತೆ 6 ವಿದ್ಯಾರ್ಥಿಗಳು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದು, ಇವರು ಸಂವಿಧಾನಕ್ಕೆ ಬೆಲೆ ಕೊಟ್ಟಿಲ್ಲ. ಶಾಲಾ ಮಂಡಳಿ, ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ವಿದ್ಯಾರ್ಥಿನಿಯರು ಹೋರಾಟ ಮಾಡಿದ್ದಾರೆ. ಈಗ ಹಿಜಬ್ ವಿವಾದ ಎದ್ದ ಮೇಲೆ ಕರ್ನಾಟಕದಲ್ಲಿ ನಡೆದ ಧರ್ಮಸಂಘರ್ಷಕ್ಕೆ ನಾವು ಕಾರಣವಲ್ಲ ಎನ್ನುತ್ತಾರೆ. ಹಾಗಾದರೆ, ಮತ್ತಾರು ಕಾರಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    HIJAB

    ಇವರ ಹಠದಿಂದಲೇ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಹಲಾಲ್, ಆಜಾನ್ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿರ್ಬಂಧಕ್ಕೂ ಈ ವಿದ್ಯಾರ್ಥಿಗಳೇ ಮೂಲ ಕಾರಣ. ಈ ವಿವಾದಗಳೆಲ್ಲವೂ ಇವರ ಪಾಪದ ಕೂಸುಗಳು. ಇವರ ಮೆದುಳಿಗೆ ಚಿಕಿತ್ಸೆ ಆಗಬೇಕಿದೆ. ಏಕೆಂದರೆ ಇವರ ಮನಸ್ಥಿತಿ ಭಾರತ ಸಂವಿಧಾನವನ್ನು ಒಪ್ಪುತ್ತಿಲ್ಲ. ಇವರಿಂದಲೇ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ. ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್‌ ಮುತಾಲಿಕ್‌

    Andola shri (1)

    ಈ ವಿದ್ಯಾರ್ಥಿಗಳು ಭಯೋತ್ಪಾದಕರು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಸೂಚನೆಗಳ ಪ್ರಕಾರವೇ ಈ ದೇಶ, ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಹೈಕೋರ್ಟ್ ಆದೇಶ ತಳ್ಳಿಹಾಕಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ, ಅದು ಮೂರ್ಖತನದ ಪರಮಾವಧಿ ಆಗುತ್ತದೆ. ನ್ಯಾಯಾಂಗ ನಿಂದನೆಯೂ ಆಗುತ್ತದೆ. ಹಾಗಾಗಿ ಸರ್ಕಾರ ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಇದೇ ವೇಳೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕೆ.ಎಸ್.ಈಶ್ವರಪ್ಪ ಕಟ್ಟಾ ಹಿಂದೂವಾದಿ, ಹಿಂದುತ್ವದ ಬಗ್ಗೆ ಪ್ರಖರತೆಯಿಂದ ಮಾತನಾಡ್ತಾರೆ. ಅವರನ್ನು ಟಾರ್ಗೆಟ್ ಮಾಡಿ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಂಚವನ್ನು ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲು

    eshwarappa

    ದೇಶದಲ್ಲಿ ಭ್ರಷ್ಟಾಚಾರದ ಮೆಟ್ಟಿಲುಗಳನ್ನು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಅದನ್ನು ಎಲ್ಲ ಪಕ್ಷಗಳು ಹತ್ತುತ್ತಿವೆ. ದೇಶ ಅಭಿವೃದ್ಧಿ ಆಗಬೇಕಾದರೆ, ಇದಕ್ಕೆ ಕಡಿವಾಣ ಹಾಕಲೇಬೇಕು. ಈಶ್ವರಪ್ಪ ಅವರ ವಿಚಾರದಲ್ಲಿ ಸಂಪೂರ್ಣ ತನಿಖೆಯಾಗಬೇಕು. ಹಾಗೆಯೇ ಸಂತೋಷ್ ಪಾಟೀಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೋ ಇಲ್ಲವೋ ಎನ್ನುವ ಬಗ್ಗೆಯೂ ತನಿಖೆಯಾಗಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಾಯಿಸಿದ್ದಾರೆ.