Tag: ಧರ್ಮ ದಂಗಲ್

  • ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್- ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ

    ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್- ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ

    ಮಂಗಳೂರು: ಕರಾವಳಿಯಲ್ಲಿ ಮತ್ತೆ ವ್ಯಾಪಾರ ಧರ್ಮ ದಂಗಲ್ ಆರಂಭವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ಮುಂದುವರಿದಿದೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya Temple) ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದಾರೆ. ಡಿ.18 ರಂದು ಕುಕ್ಕೆಯಲ್ಲಿ ಚಂಪಾ ಷಷ್ಠಿ ನಡೆಯಲಿದ್ದು, ಈ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಅಲ್ಲದೆ ಈ ಸಂಬಂಧ ಹಿಂದೂ ಸಂಘಟನೆ ಮುಖಂಡರು ದೇವಳದ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.

    ಇತ್ತ ಸುಬ್ರಹ್ಮಣ್ಯದ ಕುಮಾರಧಾರ ಬಳಿ ಬ್ಯಾನರ್ ಕೂಡ ಹಾಕಿದ್ದಾರೆ. ಹಿಂದೂ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯ ಅನ್ನೋ ಹೆಸರಲ್ಲಿ ಬ್ಯಾನರ್ ಹಾಕಲಾಗಿದೆ. ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯಮತೀಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಅಂತ ಬ್ಯಾನರ್ ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ಮಹದೇವಯ್ಯ ಹತ್ಯೆ ಕೇಸ್ – ತಮಿಳುನಾಡು ಮೂಲದ ಓರ್ವ ಅರೆಸ್ಟ್

    ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದಾಗಿದೆ.

  • ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಧರ್ಮ ದಂಗಲ್?- ಸಚಿವರ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಕಿಡಿ

    ರಾಜ್ಯದಲ್ಲಿ ಮತ್ತೆ ಶುರುವಾಗುತ್ತಾ ಧರ್ಮ ದಂಗಲ್?- ಸಚಿವರ ಹೇಳಿಕೆಗೆ ಹಿಂದೂಪರ ಸಂಘಟನೆಗಳು ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ತಣ್ಣಗಾಗಿದ್ದ ಧರ್ಮದಂಗಲ್ ಮತ್ತೆ ಸದ್ದು ಮಾಡುವ ಸಾಧ್ಯತೆ ಹೆಚ್ಚಾಗ್ತಿದೆ. ಪಶು ಸಂಗೋಪನಾ ಸಚಿವರ ಹೇಳಿಕೆಯೊಂದು ಸದ್ಯ ಇಡೀ ಹಿಂದೂ ಸಂಘಟಕರು ಕೆರಳುವಂತೆ ಮಾಡಿದೆ. ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.

    ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ (Congress Manifesto) ಬಿಡುಗಡೆಯಾದಗಿನಿಂದಲೂ ಕಾಂಗ್ರೆಸ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರುತ್ತಿದ್ದವು. ಇದರ ಬೆನ್ನಲ್ಲೆ ಪ್ರಣಾಳಿಕೆ ಕೆಲ ಅಂಶಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಕೆಲ ಸಚಿವರು, ಕಾಂಗ್ರೆಸ್ ಮುಖಂಡರ ಹೇಳಿಕೆ ಹಿಂದೂ ಪರರನ್ನ ಆಕ್ರೋಶಗೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರ (Congress Government) ಯಾರನ್ನೋ ಮೆಚ್ಚಿಸೋಕೆ ಈ ರೀತಿಯ ನಿರ್ಧಾರಗಳಿಗೆ ಮುಂದಾಗುತ್ತಿದೆ ಎಂಬ ಆರೋಪದ ಜೊತೆಗೆ ಇದರ ವಿರುದ್ಧ ಅದೆಂತಹದ್ದೆ ಪರಿಸ್ಥಿತಿ ಬಂದರೂ ನಾವು ಹೋರಾಟಕ್ಕೆ ಸಿದ್ಧವಾಗೋಣ. ಸರ್ಕಾರ ವಿರುದ್ಧ ಹೋರಾಡೋಣ ಎಂಬ ಬಹಿರಂಗ ಕರೆ ನೀಡುವ ಮೂಲಕ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ

    ಇದರ ಮಧ್ಯೆ ಪಶು ಸಂಗೋಪನಾ ಸಚಿವ ವೆಂಕಟೇಶ್ (Minister Venkatesh) ಕೂಡ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿರುವ ಹಿಂದೂ ಸಂಘಟನೆಗಳು, ಒಂದೊಮ್ಮೆ ಕೂಡಲೇ ಕ್ಷಮೆ ಕೇಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಗಲ್ಲಿಗೇರಿಸಿದ್ರೂ ನಾವು ಮಾತ್ರ ಹೋರಾಟ ನಿಲ್ಲಿಸಲ್ಲ. ಇಡೀ ರಾಜ್ಯವ್ಯಾಪಿ ಹಿಂದೂಗಳು ಮತ್ತು ಸ್ವಾಮೀಜಿಗಳ ಗೋ ರಕ್ಷಣೆಗೆ ಮುಂದಾಗಬೇಕಾಗುತ್ತೆ ಎಂಬ ಎಚ್ಚರಿಕೆ ನೀಡಿದ್ದಾರೆ.

    ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಧರ್ಮಗಳ ನಡುವಿನ ಕಿತ್ತಾಟಕ್ಕೆ ಕಾರವಾಗುವ ಆತಂಕ ಎದುರಾಗಿದೆ. ಸರ್ಕಾರ ಯಾವ ರೀತಿ ಪರಿಸ್ಥಿತಿ ನಿಭಾಯಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಎಮ್ಮೆ ಕಡಿಯೋದಾದ್ರೆ ಹಸು ಏಕೆ ಕಡಿಯಬಾರದು?: ಸಚಿವ ವೆಂಕಟೇಶ್ ವಿವಾದಾತ್ಮಕ ಹೇಳಿಕೆ

  • ಹೈಟೆನ್ಷನ್ ವೈರ್‌ನಡಿ ಮಸೀದಿ ನಿರ್ಮಾಣ ಆರೋಪ- ತೆರವಿಗೆ ಹಿಂದೂ ಸಂಘಟನೆಗಳ ಪಟ್ಟು

    ಹೈಟೆನ್ಷನ್ ವೈರ್‌ನಡಿ ಮಸೀದಿ ನಿರ್ಮಾಣ ಆರೋಪ- ತೆರವಿಗೆ ಹಿಂದೂ ಸಂಘಟನೆಗಳ ಪಟ್ಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಧರ್ಮ ದಂಗಲ್ ಕಿಡಿ ನಿಧಾನಕ್ಕೆ ಕಾವೇರುತ್ತಿದೆ. ಹೈಟೆನ್ಷನ್ ವೈರ್ ಅಡಿ ಆಕ್ರಮವಾಗಿ ಮಸೀದಿ (Mosque) ನಿರ್ಮಾಣ ಆಗ್ತಿರೋ ಬಗ್ಗೆ ಹಿಂದೂ ಸಂಘಟನೆಗಳು ಆರೋಪಿಸಿದ್ದು, ತೆರವು ಮಾಡುವಂತೆ ಪಾಲಿಕೆಗೆ ದೂರು ನೀಡಿವೆ.

    ಪಾಲಿಕೆ ಒಂದಾದ ಬಳಿಕ ಮತ್ತೊಂದು ವಿವಾದಗಳನ್ನು ಥಳಕು ಹಾಕಿಕೊಳ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಕ್ರಮವಾಗಿ ಮಸೀದಿ ನಿರ್ಮಾಣವಾಗ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ಪಾಲಿಕೆ ವಿರುದ್ಧ ಸಿಡಿದೆದ್ದಿದ್ದು, ಮಸೀದಿ ತೆರವಿಗೆ ಪಟ್ಟು ಹಿಡಿದಿವೆ.

    ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಕೆಪಿಟಿಸಿಎಲ್ (KPTCL) ಹೈಟೆನ್ಷನ್ ವೈರ್ ಕೆಳಗಡೆ ಮಸೀದಿ ನಿರ್ಮಾಣ ಆಗುತ್ತಿದೆ. ಈ ಬಗ್ಗೆ ಪಾಲಿಕೆ, ಕೆಪಿಟಿಸಿಎಲ್ ಗಮನ ಹರಿಸಿಲ್ಲ. ಆಕ್ರಮ ಆರೋಪದ ಹಿನ್ನೆಲೆ ಬಿಬಿಎಂಪಿ ಹಲವೆಡೆ ನೂರಾರು ದೇವಸ್ಥಾನಗಳನ್ನ ತೆರವು ಮಾಡಿದೆ. ಆದರೆ ಮಸೀದಿ ವಿಚಾರಕ್ಕೆ ಬಂದಾಗ ಬಿಬಿಎಂಪಿ (BBMP) ಈ ರೀತಿ ಸೈಲೆಂಟ್ ಆಗ್ತಿರೋದ್ಯಾಕೆ? ಹಿಂದೂ ಸಂಘಟನೆಗಳು ಬಿಬಿಎಂಪಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಮಲತಾ ಜೊತೆ ನಮ್ಮ ಕಾರ್ಯಕರ್ತರು ಗುರುತಿಸಿಕೊಳ್ಳಬೇಡಿ: ಮಂಡ್ಯ ಕಾಂಗ್ರೆಸ್

    ಈ ವಿಷಯ ತಿಳಿಯುತ್ತಿದಂತೆ ಬಿಬಿಎಂಪಿ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ಹೈಟೆನ್ಷನ್ ಲೈನ್ ಕೇಳಗೆ ಮಸೀದಿ ನಿರ್ಮಾಣವಾದ್ರು ಕ್ರಮಕೈಗೊಳ್ಳದೇ ಅಧಿಕಾರಿಗಳು ಸುಮ್ಮನಿದ್ದಾರೆ. ಇದೇ ವಿಚಾರವಾಗಿ ಬಿಬಿಎಂಪಿಗೆ ಮಸೀದಿ ತೆರವು ಮಾಡುವಂತೆ ದೂರು ನೀಡಿದ್ದಾರೆ. ಕೆಪಿಟಿಸಿಎಲ್ ಹೈಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ. ಹೈಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ. ಆದರೂ ಸಿಂಗಸಂದ್ರದಲ್ಲಿ 3-4 ಅಂತಸ್ತಿನ ಅಕ್ರಮ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಒಂದೊಮ್ಮೆ ಮನವಿಗೆ ಸ್ಪಂದಿಸಿ ಮಸೀದಿ ತೆರವು ಮಾಡದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

    ಹಿಂದೂ ಸಂಘಟನೆಗಳ ಮನವಿ ಬೆನ್ನಲ್ಲೆ ಬಿಬಿಎಂಪಿ ಕೂಡ ಅಲರ್ಟ್ ಆಗಿದ್ದು, ಈ ಬಗ್ಗೆ ಬಿಬಿಎಂಪಿ ಕಮಿಷನರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಟಿಸಿಎಲ್ ಲೈನ್ ಕೆಳಗೆ ತಮ್ಮ ಭೂಮಿ ಇದ್ದರೂ ನಿರ್ಮಾಣಕ್ಕೆ ನಿರ್ಬಂಧ ಇದೆ. ಇದನ್ನ ವೈಯಲನ್ಸ್ ಮಾಡಿ ನಿರ್ಮಾಣ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಬಹುದು. ಈಗ ನಿರ್ಮಾಣ ಆಗುತ್ತಿರೋ ಕಟ್ಟಡಕ್ಕೆ ನಾವು ಪರ್ಮಿಷನ್ ಕೊಟ್ಟಿಲ್ಲ. ನಮ್ಮಲ್ಲಿ ನಿರ್ಮಾಣ ಮಾಡದಂತೆ ರೂಲ್ಸ್ ಇದೆ. ಈ ರೀತಿ ಆದರೆ ಓನರ್ ಗೆ ಹೇಳಿ ಡೆಮಾಲಿಷನ್‍ಗೆ ತಿಳಿಸುತ್ತೇವೆ. ಸದ್ಯ ಇದನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

    ಒಟ್ಟಾರೆ ವಿವಾದ ತಣ್ಣಗಿರುವಾಗಲೇ ಬಿಬಿಎಂಪಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲಂದ್ರೆ ಮತ್ತೆ ವಿವಾದ ಕಾಡ್ಗಿಚ್ಚಾದ್ರು ಆಶ್ಚರ್ಯ ಪಡಬೇಕಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವ್ಯಾಪಾರ ಬಹಿಷ್ಕಾರದ ಧರ್ಮ ದಂಗಲ್ ಮತ್ತೆ ಮುಂದುವರಿದಿದೆ. ಕಳೆದ ವರ್ಷದಿಂದ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕಲಾಗುತ್ತಿದೆ. ಇದೀಗ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಮಂಗಳೂರಿನ (Mangaluru) ಕಾವೂರು (Kavoor) ಶ್ರೀಮಹಾಲಿಂಗೇಶ್ವರ ದೇವಸ್ಥಾನದ (Shree Mahalingeswara Temple) ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ವಿಎಚ್‍ಪಿ – ಭಜರಂಗದಳ ಬಹಿಷ್ಕಾರ ಹಾಕಿದ್ದು, ಕ್ಷೇತ್ರದ ಆಡಳಿತ ಮಂಡಳಿಯೂ ಸಮ್ಮತಿ ನೀಡಿದೆ.

    ಕಳೆದ ವರ್ಷದಿಂದ ಕರಾವಳಿಯ ಹೆಚ್ಚಿನ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಈ ಸಂಪ್ರದಾಯ ಈ ವರ್ಷವೂ ಮುಂದುವರಿದಿದ್ದು, ಇದೀಗ ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಈ ಬಹಿಷ್ಕಾರ ಮುಂದುವರಿದಿದೆ. ಈ ದೇವಸ್ಥಾನದ ಜಾತ್ರಾ ಮಹೋತ್ಸವವು (Fair) ಜ. 14ರ ಮಕರ ಸಂಕ್ರಮಣದಿಂದ ಆರಂಭಗೊಂಡು ಜ. 18ರವರೆಗೆ ನಡೆಯಲಿದೆ.

    ಈ 4 ದಿನಗಳ ಕಾಲ ಸಾವಿರಾರು ಜನ ಸೇರುವ ಈ ಜಾತ್ರೆಯಲ್ಲಿ ನೂರಾರು ವ್ಯಾಪಾರಸ್ಥರು ವ್ಯಾಪಾರ ಮಾಡ್ತಾರೆ. ಕಳೆದ ಹಲವಾರು ವರ್ಷಗಳಿಂದಲೂ ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಮುಸ್ಲಿಂ ವ್ಯಾಪಾರಸ್ಥರಿಗೆ ಈ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಪಡೆದು ಕ್ಷೇತ್ರದ ಆವರಣದಲ್ಲಿ ವಿಎಚ್‍ಪಿ ಹಾಗೂ ಭಜರಂಗದಳ ಬ್ಯಾನರ್ ಅಳವಡಿಕೆ ಮಾಡಿದ್ದು, ಅನ್ಯಧರ್ಮಿಯರ ವ್ಯಾಪಾರಕ್ಕೆ ಸಂಪೂರ್ಣ ಬಹಿಷ್ಕಾರ ಹಾಕಲಾಗಿದೆ.

    ಹಿಂದೂ ಸಂಘಟನೆ ಅಳವಡಿಸಿರುವ ಬ್ಯಾನರ್‍ನಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ, ವಿಗ್ರಹರಾಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರದ ಅವಕಾಶವಿಲ್ಲ ಎಂದು ಬರೆಯಲಾಗಿದೆ. ಈಗಾಗಲೇ ದೇವಸ್ಥಾನದ ಜಾತ್ರೆ ಆರಂಭಗೊಂಡಿದ್ದು, ಕ್ಷೇತ್ರದ ಒಳ ಹಾಗೂ ಹೊರ ಭಾಗದಲ್ಲಿ ನೂರಾರು ಸ್ಟಾಲ್‍ಗಳ ನಿರ್ಮಾಣವಾಗಿದೆ. ಈ ಬಾರಿ ಸ್ಟಾಲ್‍ಗಳ ನಿರ್ವಹಣೆಯ ಉಸ್ತುವಾರಿಯನ್ನು ಭಜರಂಗದಳ ಕಾರ್ಯಕರ್ತರಿಗೆ ನೀಡಿರುವುದರಿಂದ ಇತರ ಧರ್ಮದವರಿಗೆ ಯಾವುದೇ ಕಾರಣಕ್ಕೂ ವ್ಯಾಪಾರ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ. ಮುಸ್ಲಿಮರಿಗೆ ಈ ಕ್ಷೇತ್ರದಲ್ಲಿ ವ್ಯಾಪಾರ ಬಹಿಷ್ಕಾರ ನಡೆಸಲು ಆಡಳಿತ ಮಂಡಳಿಯ ಸಭೆಯಲ್ಲೇ ನಿರ್ಧರಿಸಲಾಗಿದೆ. ಇದನ್ನೂ ಓದಿ: ಗುಜರಾತಿನಲ್ಲಿ ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಅನುಮಾನಗಳಿವೆ: ಹೆಚ್.ಡಿ.ಕುಮಾರಸ್ವಾಮಿ

    ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಎನ್ನುವ ಬ್ಯಾನರ್ ಪ್ರತ್ಯಕ್ಷವಾಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ದೇವಸ್ಥಾನದ ಸುತ್ತ ಸಿಎಆರ್ ತುಕಡಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಲಾಗಿದೆ. ಒಟ್ಟಿನಲ್ಲಿ ಹಲವು ವರ್ಷಗಳಿಂದ ಸೌಹಾರ್ದಯುತವಾಗಿ ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಸ್ಥರಿಗೆ ಇನ್ನು ಮಾತ್ರ ವ್ಯಾಪಾರ ಮಾಡುವ ಅವಕಾಶ ಕಡಿಮೆಯಾದಂತಿದೆ. ಇದನ್ನೂ ಓದಿ: ಬೆಂಗಳೂರಿನ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಚಿರತೆ ಆತಂಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧರ್ಮ ದಂಗಲ್‌ಗೆ ತೆರೆ ಎಳೆಯಲು ಮುಂದಾದ ಬಿಜೆಪಿ – ರಾಜ್ಯ ಘಟಕಗಳಿಗೆ ಹೈಕಮಾಂಡ್‌ ವಾರ್ನಿಂಗ್‌

    ಧರ್ಮ ದಂಗಲ್‌ಗೆ ತೆರೆ ಎಳೆಯಲು ಮುಂದಾದ ಬಿಜೆಪಿ – ರಾಜ್ಯ ಘಟಕಗಳಿಗೆ ಹೈಕಮಾಂಡ್‌ ವಾರ್ನಿಂಗ್‌

    ಬೆಂಗಳೂರು: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತಲೆದೋರಿರುವ ಧರ್ಮ ದಂಗಲ್‌ಗೆ ತೆರೆ ಎಳೆಯಲು ಹೈಕಮಾಂಡ್‌ ಮುಂದಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಬಿಜೆಪಿ ಹೈಕಮಾಂಡ್‌ ವಾರ್ನಿಂಗ್‌ ನೀಡಿದೆ.

    ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬಳಿಕ ರಾಷ್ಟ್ರೀಯ ಬಿಜೆಪಿ ಅಲರ್ಟ್ ಆಗಿದೆ. ಧರ್ಮ ದಂಗಲ್‌ಗೆ ತೆರೆ ಎಳೆಯಲು ಬಿಜೆಪಿಯಲ್ಲಿ ಪ್ರಯತ್ನ ನಡೆದಿದೆ. ನೂಪುರ್ ಶರ್ಮಾ ಉಚ್ಚಾಟನೆ ಮೂಲಕ ರಾಜ್ಯಗಳ ಬಿಜೆಪಿ ಘಟಕಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆ ಮೂಲಕ ಎಲ್ಲ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೈಕಮಾಂಡ್ ವಾರ್ನಿಂಗ್ ನೀಡಿದೆ. ಇದನ್ನೂ ಓದಿ: ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

    ಧರ್ಮ ದಂಗಲ್ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸದಂತೆ ತಾಕೀತು ಮಾಡಿದೆ. ಮಸೀದಿ ಗಲಾಟೆ ಸೇರಿ ಇತರೆ ಧರ್ಮ ಸೂಕ್ಷ್ಮ ವಿಚಾರಗಳ ಕುರಿತು ಮಾತಾಡದಂತೆ ಹೈಕಮಾಂಡ್‌ ನಿರ್ದೇಶನ ನೀಡಿದೆ.

    ಸಬ್ ಕಾ ಸಾತ್ ಸಬ್ ಕಾ ವಿಕಾಸ್ ನಿಲುವಿಗೆ ಧರ್ಮ‌ ದಂಗಲ್ ಅಡ್ಡಿಯಾಗಿದೆ. ಇನ್ಮುಂದೆ ಧರ್ಮ ಸೂಕ್ಷ್ಮ ವಿಚಾರಗಳ ಬಗ್ಗೆ ಪಕ್ಷದ ಮುಖಂಡರು, ವಕ್ತಾರರು ಹೇಳಿಕೆಗಳನ್ನು ಕೊಡಬಾರದು. ಕೆಲವು ಪ್ರಕರಣಗಳಲ್ಲಿ ಹೇಳಿಕೆ, ಅಭಿಪ್ರಾಯ ಕೊಡಲೇಬೇಕಾದ ಅನಿವಾರ್ಯತೆ ಇದ್ದರೆ ಅದರ ಬಗ್ಗೆ ಮೊದಲೇ ಗಮನಕ್ಕೆ ತಂದು ಅನುಮತಿ ಪಡೆಯಬೇಕು ಎಂದು ಖಡಕ್‌ ಸೂಚನೆ ನೀಡಿದೆ. ಇದನ್ನೂ ಓದಿ: ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

    ಹಿಜಬ್‌, ಹಿಂದೂ ದೇವಾಲಯ, ಮಸೀದಿ ಸೇರಿದಂತೆ ಅನೇಕ ವಿಚಾರಗಳಿಗಾಗಿ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಧಾರ್ಮಿಕ ಸಂಘರ್ಷ ನಡೆಯುತ್ತಿದೆ. ಇದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಮರಕ್ಕೂ ಕಾರಣವಾಗಿದೆ.

  • ಕೊಡಗಿನಲ್ಲಿ ವಿವಾದ ಎಬ್ಬಿಸಿದ ಬುರ್ಖಾ ಡ್ಯಾನ್ಸ್

    ಕೊಡಗಿನಲ್ಲಿ ವಿವಾದ ಎಬ್ಬಿಸಿದ ಬುರ್ಖಾ ಡ್ಯಾನ್ಸ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆ ನಡೆದು  ತಣ್ಣಗಾಗುವ ಹೊತ್ತಿಗೆ ಇದೀಗಾ ಕೊಡಗಿನ ಗ್ರಾಮಯೊಂದರಲ್ಲಿ ನಡೆದ ಬುರ್ಖಾ ಡ್ಯಾನ್ಸ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

    ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗು ಜಿಲ್ಲೆಯಲ್ಲೂ ಕಳೆದ ಕೆಲ ದಿನಗಳ ಹಿಂದೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಬುರ್ಖಾ ಹಾಕಿ ಕೆಲ ಯುವಕರು ನೃತ್ಯ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಕೊಳಕೇರಿ ಗ್ರಾಮದಲ್ಲಿ ಮೇ 28 ಮತ್ತು 29ರಂದು ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ವಜ್ರಮಹೋತ್ಸವ ಆಚರಣೆಯನ್ನು ಪಶ್ಚಿಮ ಕೊಳಕೇರಿ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಕೆಲ ಯುವಕರು ಬುರ್ಖಾ ಹಾಕಿ ಕೊಡವ ವಾಲಗಕ್ಕೆ ನೃತ್ಯ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಂ ಧಾರ್ಮಿಕ ಉಡುಪುಗಳಿಗೆ ಅಪಮಾನ ಮಾಡಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದ್ಯದ ಚಟ ಬಿಡಿಸಲು ತಂದೆಗೆ ತಂದಿದ್ದ ಜೌಷಧಿಯನ್ನು ಸೇವಿಸಿ ಬಾಲಕ ಸಾವು

    ಈ ನೃತ್ಯದ ಬಗ್ಗೆ ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ದಿ ಸಂಘದ ಪ್ರಮುಖರು ಮಾತನಾಡಿ, ಈ ನೃತ್ಯ ಮಾಡಿರುವುದು ಯಾವುದೇ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಅಲ್ಲ. ಕೇವಲ ಮನರಂಜನೆಗೆ ಮಾತ್ರ ಕೆಲ ಯುವಕರು ಬುರ್ಖಾ ಧರಿಸಿಕೊಂಡು ನೃತ್ಯ ಮಾಡಿದ್ದಾರೆ. ಕೊಡಗಿನಲ್ಲಿ ಸಾಕಷ್ಟು ಶಾಲಾ ಕಾಲೇಜಿನಲ್ಲಿ ಇರುವ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯ ಕಾರ್ಯಕ್ರಮಗಳಲ್ಲಿ ಕೊಡವ ಉಡುಗೆ ತೊಡುಗೆಗಳನ್ನು ಹಾಕಿ ನೃತ್ಯ ಮಾಡುತ್ತಾರೆ. ಅವರು ಮಾಡುವ ನೃತ್ಯಗಳನ್ನು ನೋಡಿದ್ರೆ ನಮಗೂ ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುತ್ತಾರೆ ಎನ್ನುವ ಖುಷಿ ಇದೆ. ನಾವು ಯಾವತ್ತು ಆಕ್ಷೇಪಣೆ ಮಾಡಿಲ್ಲ. ಆದರೆ ಇದೀಗ ಈ ನೃತ್ಯದ ಬಗ್ಗೆ ಸುಮ್ಮನೆ ಅಪಪ್ರಾಚಾರ ಮಾಡುತ್ತಿದ್ದಾರೆ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗೀಯ ಜನರು ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುತ್ತಿದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಧರ್ಮ ದಂಗಲ್‌ನಿಂದ ರಾಜ್ಯಕ್ಕೆ ಹೊಡೆತ ಇಲ್ಲ: ಬೊಮ್ಮಾಯಿ

    ಧರ್ಮ ದಂಗಲ್‌ನಿಂದ ರಾಜ್ಯಕ್ಕೆ ಹೊಡೆತ ಇಲ್ಲ: ಬೊಮ್ಮಾಯಿ

    ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‌ನಿಂದ ಕೈಗಾರಿಕೆಗಳಿಗೆ, ಹೊಸ ಉದ್ದಿಮೆಗಳಿಗೆ ಹಾಗೂ ಐಟಿ ಸೆಕ್ಟರ್‌ಗಳಿಗೆ ಹೊಡೆತ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಣಿಪಾಲದಲ್ಲಿ ಮಾತನಾಡಿ, ಪ್ರಸಕ್ತ ವಿದ್ಯಮಾನಗಳಿಂದ ಯಾವುದೇ ತೊಂದರೆ ಆಗಲ್ಲ ಎಂದಿದ್ದಾರೆ.

    ರಾಜ್ಯದಲ್ಲಿ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುವುದಿಲ್ಲ. ಕೈಗಾರಿಕೆಗೆ ಸಮಸ್ಯೆಯಾಗುತ್ತದೆ ಎಂಬುದು ಸುಳ್ಳು. ರಾಜ್ಯದ ಪ್ರಸಕ್ತ ಬೆಳವಣಿಗೆಗಳಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ ನಿಧನ

    ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅತಿ ಹೆಚ್ಚು ಎಫ್‌ಡಿಐ ಹೂಡಿಕೆ ನಮ್ಮ ರಾಜ್ಯಕ್ಕೆ ಬರುತ್ತಿದೆ. ಈ ಕ್ವಾರ್ಟರ್‌ನಲ್ಲಿ ದೇಶದ ಶೇ.43 ರಷ್ಟು ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದೆ. ಪ್ರಪಂಚದ ಮೂಲೆಮೂಲೆಗಳಿಂದ ಹೂಡಿಕೆದಾರರು ಬರುತ್ತಿದ್ದಾರೆ. ಕೈಗಾರಿಕೆಗಳು ನಮ್ಮ ರಾಜ್ಯ ತೊರೆಯುವ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಯಥೇಚ್ಛವಾಗಿದೆ. ಮೂಲಸೌಕರ್ಯದ ಗುಣಮಟ್ಟ ಬಹಳ ಚೆನ್ನಾಗಿದೆ. ದೇಶದ ಟಾಪ್ ಸಂಶೋಧನಾ ಮತ್ತು ಅಭಿವೃದ್ಧಿ(ಆರ್‌ಆಂಡ್‌ಡಿ) ಕೇಂದ್ರಗಳು ನಮ್ಮಲ್ಲಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು

    ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ಉದ್ಯಮಿಗಳಿಗೆ ಆಫರ್ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅಂಗಡಿಗಳಲ್ಲಿ ವ್ಯಾಪಾರ ಇಲ್ಲದಾಗ ಆಫರ್ ಕೊಡುವುದಿಲ್ಲವೇ? ಆ ರಾಜ್ಯಗಳಿಗೆ ಯಾವುದೇ ಬೇಡಿಕೆ ಇಲ್ಲ. ಆಫರ್ ಕೊಟ್ಟು ಕರೆಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಉದ್ದಿಮೆಗಳನ್ನು, ಕೈಗಾರಿಕೆಗಳನ್ನು ಆರಂಭ ಮಾಡಲು ಹಲವಾರು ಕಂಪನಿಗಳು ಉತ್ಸುಕರಾಗಿದೆ ಎಂದರು.

  • ಪ್ರಯಾಣಿಕರೇ ನಮಗೆ ದೇವರು.. ಈ ಧರ್ಮ-ಜಾತಿ ಯುದ್ಧ ಬೇಕಾಗಿಲ್ಲ: ಬಸ್ ಚಾಲಕರು

    ಪ್ರಯಾಣಿಕರೇ ನಮಗೆ ದೇವರು.. ಈ ಧರ್ಮ-ಜಾತಿ ಯುದ್ಧ ಬೇಕಾಗಿಲ್ಲ: ಬಸ್ ಚಾಲಕರು

    ಬೆಂಗಳೂರು: ರಾಜ್ಯದಲ್ಲಿ ಹಿಂದೂ ಮುಸ್ಲಿಂ ನಡುವಿನ ಧರ್ಮದ ವಾರ್ ಒಂದಿಲ್ಲೊಂದು ರೂಪ ಪಡೆದುಕೊಳ್ಳುತ್ತಿದೆ. ಹಿಜಬ್‍ನಿಂದ ಶುರುವಾದ ಈ ಧರ್ಮದ ದಂಗಲ್ ಈಗ ವ್ಯಾಪಾರ ವಹಿವಾಟಗಳ ಮೇಲೆ ಪ್ರಭಾವ ಬೀರುವುದಕ್ಕೆ ಶುರು ಮಾಡಿದೆ. ಹಿಂದೂ ಸಂಘಟನೆಗಳು ಒಂದೊಂದೇ ಅಭಿಯಾನಕ್ಕೆ ಕೈಹಾಕುತ್ತಿವೆ. ಈಗ ಖಾಸಗಿ ಬಸ್ ಪ್ರಯಾಣದ ಮೇಲೆ ಅಭಿಯಾನ ಶುರುವಾಗಿದೆ.

    ನಿನ್ನೆಯಿಂದ ಹಿಂದೂ ಸಂಘಟನೆಗಳು ಹೊಸ ಆಂದೋಲನ ಶುರು ಮಾಡಿವೆ. ಹಿಂದೂಗಳು ತಾವೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಾಗ ಮುಸ್ಲಿಂ ಚಾಲಕರ ಮತ್ತು ಮುಸ್ಲಿಂ ಮಾಲೀಕರ ವಾಹನಗಳನ್ನ ಬಳಸಬೇಡಿ ಅಂತಾ ಅಭಿಯಾನ ಶುರು ಮಾಡಿದ್ದಾರೆ. ಅನ್ಯಧರ್ಮೀಯರು ನಮ್ಮ ಧರ್ಮವನ್ನ ನಂಬುವುದಿಲ್ಲ. ಅವರ ಜೊತೆಗೆ ಪ್ರಯಾಣ ಮಾಡುವ ಬದಲು ಹಿಂದೂ ಚಾಲಕರ ಮತ್ತು ಹಿಂದೂ ಮಾಲೀಕರ ವಾಹನಗಳನ್ನೇ ಬಳಸಿ ಅಂತಾ ಹೊಸ ವಾದವನ್ನು ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ

    ಇದಕ್ಕೆ ಚಾಲಕರ ವರ್ಗದಲ್ಲಿ ಭಾರೀ ವಿರೋಧ ಶುರುವಾಗಿದೆ. ನಮಗೆ ಪ್ರಯಾಣಿಕರೇ ದೇವರು, ಅವರ ಜಾತಿ, ಧರ್ಮ ಯಾವುದಾದರೇ ನಮಗೇನು. ನಮ್ಮ ಬಸ್ ಹತ್ತುವ ಪ್ರಯಾಣಿಕರನ್ನು ಅವರ ಸ್ಥಳಕ್ಕೆ ಬಿಡುವ ಕಾರ್ಯ ಮಾಡುವವರು ನಾವು. ನಮ್ಮಲ್ಲಿ ಎಲ್ಲ ಜಾತಿಯ ಎಲ್ಲ ಧರ್ಮದವರು ಇದ್ದಾರೆ. ನಾವೂ ಕೆಲಸ ಮಾಡುವ ಜಾಗದಲ್ಲಿ ಧರ್ಮವನ್ನು ತರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್

    ಇದು ಕೆಲಸಕ್ಕೆ ಬಾರದವರು ಮಾಡುತ್ತಿರುವ ಕುತಂತ್ರ. ರಾಜ್ಯದಲ್ಲಿ ಏನ್ ಆಗುತ್ತಿದೆ. ಎಲ್ಲ ಬೆಲೆಗಳು ಗಗನಕ್ಕೆ ಏರಿಕೆಯಾಗುತ್ತಿವೆ. ಜನ ಜೀವನ ಮಾಡುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಇತಂಹ ಸಮಯದಲ್ಲಿ ಬೇಡದ ವಿಚಾರವನ್ನು ತಂದು ಜನರ ದಿಕ್ಕು ತಪ್ಪಿಸೋ ಕೆಲಸ ಆಗುತ್ತಿದೆ. ನಾವೆಲ್ಲ ಒಂದೇ ಭಾವನೆಯಿಂದ ಕೆಲಸ ಮಾಡುವ ಜನ. ನಮಗೆ ಕಷ್ಟ ಬಂದಾಗ ಹಿಂದೂಗಳು ಬರ್ತಾರೆ. ನಾವೂ ಅವ್ರ ಕಷ್ಟಕ್ಕೆ ಹೋಗ್ತೀವಿ. ಇಲ್ಲಿ ಧರ್ಮದ ಹೆಸರಿನಲ್ಲಿ ನಮ್ಮ ನಡುವೆ ಬಿರುಕು ತರುವ ಕೆಲಸ ನಡೆಯುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    BRIBE

    ಒಟ್ಟಿನಲ್ಲಿ ರಾಜ್ಯದ ಶಾಂತಿಯನ್ನು ಕೆಡಿಸುವ ಕೆಲಸಕ್ಕೆ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ ಅನ್ನುವ ವಿಷ ಬೀಜ ಭಿತ್ತನೆ ಮಾಡಿ ಅದರ ಲಾಭ ಮಾಡಿಕೊಳ್ಳಲು ಒಂದಿಲ್ಲೊಂದು ತಂತ್ರಗಳನ್ನು ಕೆಲವರು ಮಾಡುತ್ತಿದ್ದಾರೆ. ಜನ ಮಾತ್ರ ಇದೆಲ್ಲ ಬೇಕಾ ಅಂತ ತಮ್ಮ ಪಾಡಿಗೆ ತಾವು ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನಾದರೂ ಈ ಅಭಿಯಾನಗಳು ಕೊನೆಯಾಗಿ ಜನ ನೆಮ್ಮದಿಯಿಂದ ಸಹಬಾಳ್ವೆ ಮಾಡುವಂತೆ ಆಗಲಿ.

  • ಕಾಂಗ್ರೆಸ್-ಬಿಜೆಪಿ ಮಧ್ಯೆ ಸ್ಟಾರ್ಟ್ ಅಪ್ ದಂಗಲ್ – ತೆಲಂಗಾಣ ಜೊತೆ ಹೋಲಿಸಿದ ಡಿಕೆಶಿಗೆ ಸಿಎಂ ಕ್ಲಾಸ್

    ಕಾಂಗ್ರೆಸ್-ಬಿಜೆಪಿ ಮಧ್ಯೆ ಸ್ಟಾರ್ಟ್ ಅಪ್ ದಂಗಲ್ – ತೆಲಂಗಾಣ ಜೊತೆ ಹೋಲಿಸಿದ ಡಿಕೆಶಿಗೆ ಸಿಎಂ ಕ್ಲಾಸ್

    – ಬೆಂಗಳೂರಿನ ಉದ್ಯಮಿಯ ಟ್ವೀಟ್ ವಿವಾದದ ಮೂಲ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಧರ್ಮ ದಂಗಲ್ ನಡುವೆ ಸ್ಟಾರ್ಟ್ ಅಪ್ ದಂಗಲ್ ಶುರುವಾದಂತಿದೆ. ಸಿಲಿಕಾನ್ ಸಿಟಿಯ ಉದ್ಯಮಿಯೊಬ್ಬರಿಗೆ ತೆಲಂಗಾಣ ಸಚಿವರು ಬೆಂಗಳೂರು ಬಿಟ್ಟು ನಮ್ಮಲ್ಲಿಗೆ ಹೂಡಿಕೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ ಈ ವಿವಾದದ ಮೂಲವಾಗಿದೆ. ಆದರೆ ಈ ಬೆಳವಣಿಗೆಯಲ್ಲಿ ರಾಜ್ಯ ನಾಯಕರುಗಳು ರಾಜ್ಯದ ಹಿತ ಮರೆತವರಂತೆ ಕೆಸರೆರಚಾಟ ಮಾಡಿಕೊಂಡಿದ್ದಾರೆ.

    ಬೆಂಗಳೂರಿನ ಕೋರಮಂಗಲದ ಖಾತಾ ಬುಕ್ ಸಿಇಓ ರವೀಶ್ ನರೇಶ್ ಐದು ದಿನಗಳ ಹಿಂದೆ ಬೆಂಗಳೂರು ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ, ರಾಜ್ಯ ಸರ್ಕಾರ ಹಾಗೂ ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಸಹಾ ಮಾಡಿದ್ದರು. ಈ ಟ್ವೀಟನ್ನೇ ಬಂಡವಾಳ ಮಾಡಿಕೊಂಡು ತೆಲಂಗಾಣ ಸಚಿವ ಕೆಟಿಆರ್ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಮ್ಮ ಹೈದರಬಾದ್‍ಗೆ ಬನ್ನಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಕೆಟಿಆರ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಮ್ಮ ವಾಲೆಂಜ್ ಸ್ವೀಕರಿಸುತ್ತೇನೆ 2023ಕ್ಕೆ ನಮ್ಮದೇ ಸರ್ಕಾರ ಬರುತ್ತೆ, ಆಗ ಬೆಂಗಳೂರನ್ನ ಉತ್ತಮ ನಗರವಾಗಿ ರೂಪಿಸುತ್ತೇವೆ ಎಂದಿದ್ದಾರೆ.

    ಅದಕ್ಕೆ ಪ್ರತಿಕ್ರಿಯಿಸಿದ ಕೆಟಿಆರ್, ನಿಮ್ಮ ರಾಜ್ಯದ ರಾಜಕೀಯ ನನಗೆ ಗೊತ್ತಿಲ್ಲ. ನಿಮ್ಮ ಪಕ್ಷ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ. ಆದರೆ ನಿಮ್ಮ ಚಾಲೆಂಜ್ ತಗೆದುಕೊಳ್ಳುತ್ತೇನೆ. ತೆಲಂಗಾಣ ಕರ್ನಾಟಕದ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಜೊತೆಗೆ ಹಿಜಾಬ್ ಲಾಲ್ ರಾಜಕೀಯ ಬೇಡ ಎಂದು ಕುಟುಕಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ರಾಜ್ಯ ಬಿಜಪಿ 2023 ರಲ್ಲಿ ಕೆಟಿಆರ್ ಡಿಕೆಶಿ ಇಬ್ಬರು ಪ್ಯಾಕ್ ಅಪ್ ಮಾಡಬೇಕಾಗುತ್ತೆ ಡಬ್ಬಲ್ ಇಂಜಿನ್ ಸರ್ಕಾರ ತೆಲಂಗಾಣದಲ್ಲೂ ಬರಲಿದೆ ಎರೆಡೂ ಕಡೆ ಅಭಿವೃದ್ಧಿ ಆಗಲಿದೆ ಎಂದು ಟ್ವೀಟ್ ಮೂಲಕ ತಿವಿದಿದೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ಆಸ್ಪತ್ರೆಗೆ ದಾಖಲು

    ಸಚಿವ ಸುಧಾಕರ್ ಸಹಾ ಪಕ್ಷದ ನಿಲುವನ್ನೇ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಸಚಿವ ಅಶ್ವಥ್ ನಾರಾಯಣ ಅವರು ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಜನತೆಯ ಹಿತ ಕಾಪಾಡುವ ಬಗ್ಗೆ ನೀವು ಯೋಚಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ತೆಲಂಗಾಣ ಸರ್ಕಾರದೊಂದಿಗೆ ನೀವು ಯಾವ ರೀತಿಯ ರಾಜಕೀಯ ಹೊಂದಾಣಿಕೆಯನ್ನು ಹೊಂದಿದ್ದೀರಿ? ನಿಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಬೇಕಾಗಿ ರಾಜ್ಯದ ಘನತೆಯ ಬಗ್ಗೆ ಸವಾಲು ಹಾಕಬೇಡಿ ಅಂತಾ ಖಾರವಾಗಿ ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಡಿಕೆಶಿ ಸಿಎಂ ಆಗಲಿ ಸಚಿವರಾಗಲಿ ಪ್ರತಿಕ್ರಿಯಿಸದೆ ಇರುವಾಗ ರಾಜ್ಯದ ಪರವಾಗಿ ನಾನು ಮಾತನಾಡಿದೆ ಎಂದಿದ್ದಾರೆ.

    ಹೀಗೆ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಒಂದರ ಸಿಇಓ ಮಾಡಿದ ಟ್ವೀಟ್ ಈಗ ರಾಜಕೀಯ ಕೆಸರೆಚಾಟಕ್ಕೆ ವೇದಿಕೆಯಾಗಿದೆ. ಇದನ್ನ ತೆಲಂಗಾಣ ಸಚಿವ ಕೆಟಿಆರ್ ತಮ್ಮ ರಾಜ್ಯದ ಪರವಾಗಿ ಬಳಸಿಕೊಂಡು ಬೆಂಗಳೂರು ಹಾಗೂ ರಾಜ್ಯವನ್ನ ಟೀಕಿಸಿದ್ದಾರೆ. ಕೆ.ಟಿ.ರಾಮರಾವ್ ಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಕೆಟಿಆರ್ ಟ್ವೀಟ್ ಹಾಸ್ಯಾಸ್ಪದ ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರ್ತಿದ್ದಾರೆ. ಬರೀ ಭಾರತದ ಉದ್ಯಮಿಗಳಷ್ಟೇ ಬರುತ್ತಿಲ್ಲ. ಅತೀ ಹೆಚ್ಚು ಸ್ಟಾರ್ಟಪ್‍ಗಳು ಬೆಂಗಳೂರಿನಲ್ಲಿವೆ. ಅತೀ ಹೆಚ್ಚು ಎಫ್‍ಡಿಐ ಬೆಂಗಳೂರಿನಲ್ಲಿದೆ. ಕರ್ನಾಟಕದ ಕಳೆದ ಮೂರು ತ್ರೈಮಾಸಿಕಗಳ ಆರ್ಥಿಕತೆ ಹೆಚ್ಚಿನ ಮಟ್ಟದಲ್ಲಿದೆ. ಬೆಂಗಳೂರನ್ನು ಹೈದರಾಬಾದ್ ಗೆ, ಕರ್ನಾಟವನ್ನು ತೆಲಂಗಾಣಕ್ಕೆ ಹೋಲಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.

    ಆಡಳಿತ ಹಾಗೂ ವಿಪಕ್ಷ ನಾಯಕರುಗಳು ಪರ ವಿರುದ್ಧ ಹೇಳಿಕೆ ಮೂಲಕ ವಿವಾಧ ಮತ್ತಷ್ಟು ಜೋರಾಗಿಸಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ತೆಲಂಗಾಣ ಸಚಿವರಿಂದ ಕಂಪನಿಗೆ ಆಹ್ವಾನ ಬಂದಿದೆ. ತಪ್ಪೆನಿದೆ ಅವರು ಹೇಳಿದ್ದು ಮೊದಲು ನಿಮ್ಮ ಮನೆ ಸರಿಪಡಿಸಿಕೊಳ್ಳಿ ಅಂತ. ಮನೆ ಸರಿ ಇದ್ರೆ ಗಳ ಹಿರಿಯೋಕ್ಕೆ ಬರಲ್ಲ ಯಾರು ಯಾವುದೇ ಕಾರಣಕ್ಕೂ ತೆಲಂಗಾಣ ಮಿನಿಸ್ಟರ್ ಕರೆದಿದ್ದು ತಪ್ಪಲ್ಲ ಇನ್ವೆಸ್ಟರ್ಸ್ ಮೀಟ್ ಮಾಡಿ ಎಲ್ಲರು ಕರೆಯಲ್ಲ್ವಾ? ಎಂದಿದ್ದಾರೆ. ಒಟ್ಟಿನಲ್ಲಿ ತೆಲಂಗಾಣ ಸಚಿವರ ಟ್ವೀಟ್ ರಾಜ್ಯದ ಹಿತ ಬೆಂಗಳೂರಿನ ಗೌರವಕ್ಕೆ ಸವಾಲು ಹಾಕುವಂತಿದೆ.