ಲಿತನ್ಯ ಗೋಲ್ಡ್ ಲೀಫ್ ಮೀಡಿಯಾ ವೆಂಚರ್ಸ್ ಪ್ರೈ ಲಿ ಹಾಗೂ ಸಾರ್ಥಕ್ ಕ್ರಿಯೇಟರ್ಸ್ ಲಾಂಛನದಲ್ಲಿ ಜಿ.ಹೆಚ್.ಜನಾರ್ದನ್ ಹಾಗೂ ಸಿ.ಎಲ್ ಹರ್ಷವರ್ಧನ್ ನಿರ್ಮಿಸುತ್ತಿರುವ, ರಮೇಶ್ ರಾಜ್ ಅವರ ನಿರ್ದೇಶನದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.
ಧರ್ಮ ಕೀರ್ತಿರಾಜ್ (Dharma Keerthiraj) ನಟನೆಯ ಪ್ರೊಡಕ್ಷನ್ ನಂ 1 ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ ಅವರು ಆರಂಭ ಫಲಕ ತೋರಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುನೇಗೌಡ ಕ್ಯಾಮೆರಾ ಚಾಲನೆ ಮಾಡಿದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ
ಆ್ಯಕ್ಷನ್ ಡ್ರಾಮ ಜಾನರ್‌ನ ಈ ಚಿತ್ರಕ್ಕೆ ನಿರ್ದೇಶಕ ರಮೇಶ್ ರಾಜ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಗ್ಯಾಂಗ್ ಲೀಡರ್, ತವರಿನ ಋಣ ಚಿತ್ರಗಳನ್ನು ನಿರ್ದೇಶಿಸಿರುವ ರಮೇಶ್ ರಾಜ್ ಅವರಿಗೆ ಇದು ಮೂರನೇ ಚಿತ್ರ. ಈಶ್ವರಿ ಸುರೇಶ್ ಛಾಯಾಗ್ರಹಣ, ಶಶಿ ಸಂಕಲನ, ಬಿ.ವಿ.ರೆಡ್ಡಿ ಸಹ ನಿರ್ದೇಶನ ಹಾಗೂ ಮಂಜುನಾಥ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ವಂಟೂರು ಶ್ರೀನಿವಾಸ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧರ್ಮ ಕೀರ್ತಿರಾಜ್ ಅವರಿಗೆ ಪ್ರಿಯಾ ಹೆಗ್ಡೆ (Priya Hegde) ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.
ಧರ್ಮ ಕೀರ್ತಿರಾಜ್ (Dharma Keerthiraj) ಹಾಗೂ ಅದಿತಿ ಅಭಿನಯದ ‘ತಲ್ವಾರ್’ (Talwar) ಚಿತ್ರ ವೀಕ್ಷಿಸಿದ ಸೆನ್ಸಾರ್ (Censor) ಮಂಡಳಿಯು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಹೊಂದಿರುವ ಸಿನಿಮಾಗಿದ್ದು, ಈ ಚಿತ್ರದಲ್ಲಿ ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.
ಕಥೆ, ಚಿತ್ರಕಥೆ ಸಂಭಾಷಣೆ ಬರೆದು ರಾಘವ ಮುರಳಿ (Raghava Murali) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದು. ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್, ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (Jayaram Karthik) (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು.
ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.
ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ. ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ‘ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟು ಫ್ಯಾಮಿಲಿ ಹಾಳಾಗ್ತವೆ ಎಂಬ ಸಂದೇಶವನ್ನು ಈ ಚಿತ್ರ ದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು.
ವಿಭಿನ್ನ ಕಥಾಹಂದರ ಹೊಂದಿರುವ ’ರೋನಿ’ (Ronnie) ಚಿತ್ರದ ಮೋಷನ್ ಪೋಸ್ಟರ್‌ನ್ನು ಪ್ರಜ್ವಲ್ ದೇವರಾಜ್ ಮತ್ತು ಟೀಸರ್‌ನ್ನು ಖ್ಯಾತ ನಿರ್ಮಾಪಕಿ ಶೈಲಜಾನಾಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ.ರಮೇಶ್ ಹಾಗೂ ಪವನ್‌ಕುಮಾರ್ ಮೊದಲಬಾರಿ ಕನ್ನಡ ಚಿತ್ರಕ್ಕೆ ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ಕಿರಣ್.ಆರ್.ಕೆ ಅವರ ಕಥೆ,ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವಿದೆ. ’ದ ಹಂಟರ್’ ಅಂತ ಅಡಿಬಹರದಲ್ಲಿ ಹೇಳಲಾಗಿದೆ.
ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂಧವೇನು? ಈಕೆಗೆ ನ್ಯಾಯ ಸಿಗುತ್ತದಾ? ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮಾಕ್ಸ್ ನಲ್ಲಿ ತಿಳಿಯುತ್ತದೆ.
ಧರ್ಮ ಕೀರ್ತಿರಾಜ್ (Dharma Keerthiraj) ಸಿನಿಮಾದ ನಾಯಕ. ಬಾಂಬೆ ಮೂಲದ ರುತ್ವಿ ಪಟೇಲ್ (Ruthvi Patel) ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ತಿಲಕ್ (Tilak) ಉಳಿದಂತೆ ಕೀರ್ತಿರಾಜ್, ವರ್ಧನ್, ರಘು ಪಾಂಡೇಶ್ವರ್, ಬಲರಾಜವಾಡಿ, ರತನ್ ಕರತಮಾಡ ಮುಂತಾದವರು ನಟಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ.
ಕವಿರಾಜ್-ಕಿನ್ನಾಳ್‌ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀನಸ್ ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ಸಾಹಸ ಕುಂಗುಫು ಚಂದ್ರು, ತಾಂತ್ರಿಕ ಮುಖ್ಯಸ್ಥ ಧರಂ.ಕೆ.ಸವಲಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ. ಇದೇ ಸಂಸ್ಥೆಯು ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು ಪ್ರಜ್ವಲ್ ದೇವರಾಜ್ (Prajvaj Devaraj) ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಜಯ ರಾಘವೇಂದ್ರ (Vijay Raghavendra), ಧರ್ಮ ಕೀರ್ತಿರಾಜ್ (Dharma Keerthiraj) ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಓ ಮನಸೇ’ (O Manase) ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲೂ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡಿದೆ. ಎಂ.ಎನ್ ಭೈರೆಗೌಡ, ಕೆ.ಹೆಚ್. ಧನಂಜಯ, ಕೆ.ವೆಂಕಟೇಶ್, ಸು.ಕಾ ರಾಮು, ಯುವರಾಜ್ ಕೆ.ಎ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ‘ಇದು ನಮ್ಮ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ. ಮುಂದೆಯೂ ಜನರಿಗೆ ಸದಭಿರುಚಿ ಸಿನಿಮಾ ಕೊಡುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ. ಒಂದು ಒಳ್ಳೆ ಸಿನಿಮಾ ಮಾಡಿದ ಖುಷಿ ನಮಗೆಲ್ಲಾ ಇದೆ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಜೊತೆ ನಾಯಕಿಯಾಗಿ ಸಂಚಿತ ಪಡುಕೋಣೆ ಅದ್ಬುತವಾಗಿ ನಟಿಸಿದ್ದಾರೆ. ಟ್ರೇಲರ್ ಗೆ ಯೂಟ್ಯೂಬ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈಗ ಹಾಡುಗಳು ಬಿಡುಗಡೆಯಾಗಿದೆ. ನಮ್ಮ ಬ್ಯಾನರ್ ನಿಂದ ಇನ್ನು ಹತ್ತಾರು ಸಿನಿಮಾ ಮಾಡುವ ಯೋಜನೆ ಇದೆ’ ಎಂದು ಹೇಳಿದರು.
ಈ ಮೊದಲು ‘ನವರಂಗಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದ ಉಮೇಶ್ ಗೌಡ ಈಗ ಮೂರನೇ ಪ್ರಯತ್ನವಾಗಿ ‘ಓ ಮನಸೇ’ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಸಿಕ್ಕಿದ್ದು, ಈಗ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಇದೊಂದು ನೈಜಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ’ ಎಂದು ಹೇಳಿದರು. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ವಿಜಯರಾಘವೇಂದ್ರ ‘ಸಿನಿಮಾ ಪ್ರಮೋಷನ್‌ನಲ್ಲಿ ಆಡಿಯೋ ಬಿಡುಗಡೆ ಎಂಬುದು ಮುಖ್ಯವಾದ ಹಂತ. ಸಿನಿಮಾ ಮಾಡೋದು ಮುಖ್ಯವಲ್ಲ ಜನರಿಗೆ ಅದನ್ನು ತಲುಪಿಸುವುದು ಮುಖ್ಯ. ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ.ಇದರಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದು, ಚಿತ್ರದಲ್ಲಿ ಕಾಮಿಡಿ. ಆ್ಯಕ್ಷನ್, ಲವ್ ಹೀಗೆ ಎಲ್ಲಾ ಅಂಶಗಳಿವೆ. ಇದು ನನಗೆ ಸ್ಪೆಷಲ್ ಸಿನಿಮಾ ಎನ್ನಬಹುದು’ ಎಂದರು. ‘ಕೊರೋನಾ ಟೈಮ್‌ನಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಕಮ್ ಬ್ಯಾಕ್ ಜರ್ನಿ ಎನ್ನಬಹುದು. ನಾನು ಈ ಚಿತ್ರದಲ್ಲಿ ಲವರ್ ಬಾಯ್ ಹಾಗೂ ನೆಗಟಿವ್ ಸೈಡ್ ಪಾತ್ರ ಮಾಡಿದ್ದೇನೆ’ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು. ‘ಇದು ತ್ರಿಕೋನ ಪ್ರೇಮ ಕಥೆ” ಒಳಗೊಂಡ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು ನಾಯಕಿ ಸಂಚಿತಾ ಪಡುಕೋಣೆ (Sanchita Padukone).
ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಮುಂತಾದವರು ಅಥಿತಿಗಳಾಗಿ ಆಗಮಿಸಿದ್ದರು. ಕವಿರಾಜ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವಾಗಿ ಎರಡು ಗೀತೆಗಳನ್ನು ಥೈಲ್ಯಾಂಡ್‌ನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದೆ. ಬಂಡೆ ಚಂದ್ರು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಂ.ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿದೆ.
Live Tv
[brid partner=56869869 player=32851 video=960834 autoplay=true]
ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಓ ಮನಸೇ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಚಿತ್ರದ ಕುರಿತು ಮಾತನಾಡಿದರು. ನಾನು ಕೊರೋನ ಒಂದನೇ ಅಲೆ ಮುಗಿದ ಮೇಲೆ ನಿರ್ಮಾಪಕರಲೊಬ್ಬರಾದ ರಾಮು ಅವರ ಬಳಿ ಈ ಚಿತ್ರದ ಕಥೆ ಹೇಳಿದೆ. ಅವರಿಗೆ ಕಥೆ ಇಷ್ಟವಾಗಿ, ತಮ್ಮ ಮಿತ್ರರ ಒಡಗೂಡಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆನಂತರ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅವರಿಗೆ ಚಿತ್ರದ ಕಥೆ ಹೇಳಲಾಯಿತು. ಅವರು ಸಹ ನಟಿಸಲು ಒಪ್ಪಿದರು. ಸಂಚಿತಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾದರು. ಲವ್ ಮತ್ತು ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರಕ್ಕೆ ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ಬೆಂಗಳೂರು ಮುಂತಾದ ಕಡೆ 55 ದಿನಗಳ ಕಾಲ ನಡೆದಿದೆ. ಹಾಡುಗಳ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ಆಗಿದೆ. ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎಂದು ನಿರ್ದೇಶಕ ಉಮೇಶ್ ಗೌಡ ತಿಳಿಸಿದರು.
ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ನಡುವೆ ಪೊಲೀಸ್ ಪಾತ್ರಗಳು ನನಗೆ ಹೆಚ್ಚು ಬರುತ್ತಿದೆ. ಮುಂದಿನ ಎರಡು ಚಿತ್ರಗಳಲ್ಲೂ ನನ್ನದು ಪೊಲೀಸ್ ಪಾತ್ರ. ಇದಕ್ಕೆ ಕಾರಣ “ಓ ಮನಸೇ” ತಂಡ ಎನ್ನಬಹುದು. ಏಕೆಂದರೆ ಕೊರೋನ ಸಮಯದಲ್ಲಿ ಬಿಡುವಿದಾಗ ಇವರು ಬಂದು ಈ ಚಿತ್ರದ ಕಥೆ ಹೇಳಿದರು. ಈ ಚಿತ್ರ ಒಪ್ಪಿದ ನಂತರ ಸಾಲುಸಾಲು ಚಿತ್ರಗಳನ್ನು ನಾನು ಒಪ್ಪಿಕೊಂಡೆ. ತ್ರಿಕೋನ ಪ್ರೇಮಕಥೆ ಆಧಾರಿತ “ಓ ಮನಸೇ” ಚಿತ್ರವನ್ನು ತಾವು ನೋಡಿ ಹಾರೈಸಿ ಎಂದರು ವಿಜಯ ರಾಘವೇಂದ್ರ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
ಕೊರೋನ ಸಮಯದಲ್ಲಿ ಸಿನಿಮಾಗಳು ಕಡಿಮೆಯಾಗಿದ್ದವು. ಅಂತಹ ಸಮಯದಲ್ಲಿ ನಿರ್ಮಾಪಕರು ಕರೆದು ಈ ಚಿತ್ರದ ಅಡ್ವಾನ್ಸ್ ನೀಡಿದರು. ಅವರು ಕೊಟ್ಟ ಘಳಿಗೆ ಚೆನ್ನಾಗಿದೆ. ಆನಂತರ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದ ಬಗ್ಗೆ ಹೇಳಬೇಕಾದರೆ, ನಾಯಕಿಯನ್ನು ನಾನು ಹಾಗೂ ವಿಜಯ ರಾಘವೇಂದ್ರ ಇಬ್ಬರೂ ಪ್ರೀತಿಸುತ್ತೇವೆ. ಯಾರಿಗೆ ಸಿಗುತ್ತಾರೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ನಿರ್ದೇಶಕರು ಅದ್ಭುತವಾಗಿ ಚಿತ್ರ ಮಾಡಿದ್ದಾರೆ ಎಂದರು ಧರ್ಮ ಕೀರ್ತಿರಾಜ್.
ನನಗೆ ಕನ್ನಡ ಚಿತ್ರದಲ್ಲಿ ನಟಿಸಲು ಬಹಳ ಆಸೆ. ನನ್ನನ್ನು ಈ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದ್ದ ನಿರ್ದೇಶಕ – ನಿರ್ಮಾಪಕರಿಗೆ ಧನ್ಯವಾದ ಎಂದರು ಸಂಚಿತಾ ಪಡುಕೋಣೆ. ನಿರ್ಮಾಪಕರಾದ ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದರು. ಧನು ಮಾಸ್ಟರ್ ನೃತ್ಯ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದರು. ರಮೇಶ್ ಹಂಡ್ರಂಗಿ ಕಥೆ ಬರೆದಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ “ಬುಲೆಟ್” ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್, ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು.
ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿದ್ದಾರೆ. ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಾಯಕಿಯರು. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಅಜಿತಾ ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಮಾಹಿತಿ ನೀಡಿದರು. ಇದನ್ನೂ ಓದಿ: ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗಶೌರ್ಯ ಮದುವೆ
ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವರೆ ಅಭಿನಯಿಸುತ್ತಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ ಕೀರ್ತಿರಾಜ್.
ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ನಿರ್ದೇಶಕ , ನಟ ಇಶ್ಯಾಕ್ ಬಾಜಿ, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ಮಾತನಾಡಿದರು.
Live Tv
[brid partner=56869869 player=32851 video=960834 autoplay=true]
ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ನಾಯಕ – ನಾಯಕಿಯಾಗಿ ನಟಿಸಿರುವ “ವಸುಂಧರದೇವಿ” (Vasundharadevi) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಸಂತೋಷವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಧರ್ಮ ಕೀರ್ತಿರಾಜ್ ಅವರೊಡನೆ ಇದು ಎರಡನೇ ಚಿತ್ರ. “ವಸುಂಧರದೇವಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಮುಖ್ಯಮಂತ್ರಿಗಳ ಮಗಳೊಬ್ಬಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ಬರುತ್ತಾರೆ. ಆ ಪಾತ್ರದಲ್ಲಿ(ತನಿಖಾಧಿಕಾರಿ) ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. “ವಸುಂಧರದೇವಿ” ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ. ಗೋವಿಂದೇ ಗೌಡ, ರೂಪೇಶ್, ಪೂಜಾ, ಸೆವೆನ್ ರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಯಿದೆ ಎಂದು ನಿರ್ದೇಶಕ ಮಹೇಶ್ ಚಿನ್ಮಯ್ ತಿಳಿಸಿದರು.
ನನ್ನ ಚಿತ್ರಕ್ಕೆ ಹಾರೈಸಲು ಅಪ್ಪ- ಅಮ್ಮ ಬಂದಿದ್ದಾರೆ. ಅವರಿಗೆ ಧನ್ಯವಾದ. ಈ ಹಿಂದೆ ನಟಿಸಿರುವ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ನನ್ನ ಹೇರ್ ಸ್ಟೈಲ್ ಕೂಡ ಈ ಚಿತ್ರಕ್ಕಾಗಿ ಬದಲಿಸಿಕೊಂಡಿದ್ದೀನಿ. ಮಹೇಶ್ ಒಂದೊಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಶೋಕ್ ನಿರ್ಮಾಣ ಮಾಡಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ. ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್
ನಾನು ಶಾಲಾ ದಿನಗಳಲ್ಲಿ ಮೈಕ್ ಮುಂದೆ ಮಾತನಾಡುವ ಪ್ರಸಂಗ ಬಂದರೆ ಹಿಂದೆ ಹೋಗುತ್ತಿದೆ. ಈಗ ಧೈರ್ಯ ಬಂದಿದೆ. ಇದೇ ಮೊದಲು ಮಾತನಾಡುತ್ತಿದ್ದೇನೆ. ಮಹೇಶ್ ಅವರು ಹೇಳಿದ್ದ ಕಥೆ ಇಷ್ಟವಾಯಿತು. ಧರ್ಮ ಕೀರ್ತಿರಾಜ್ ಅವರೆ ನಾಯಕರಾಗಲಿ ಎಂದೆ. ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವನ್ನು ಮಾಡಿದ್ದೀನಿ ಎನ್ನುತ್ತಾರೆ ನಿರ್ಮಾಪಕ ಅಶೋಕ್ ಕವೇಟಿ. ಈ ಚಿತ್ರದಲ್ಲಿ ಹಾಡಿಲ್ಲ. ರೀರೆಕಾರ್ಡಿಂಗ್ ಅದ್ಭುತವಾಗಿದೆ ಎಂದರು ಸಂಗೀತ ನಿರ್ದೇಶಕ ವಿನು ಮನಸು..
ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ನೀವೆಲ್ಲಾ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ಈಗ ನನ್ನ ಮಗನಿಗೂ ನಿಮ್ಮಿಂದ ಆದೇ ಪ್ರೋತ್ಸಾಹ ಸಿಗುತ್ತಿದೆ. “ವಸುಂಧರದೇವಿ” ಚಿತ್ರದ ಟೀಸರ್ ಚೆನ್ನಾಗಿದೆ. ಚಿತ್ರ ಯಶಸ್ಸು ಕಾಣಲಿ ಎಂದರು ಹಿರಿಯ ನಟ ಕೀರ್ತಿರಾಜ್. ಕಲಾವಿದ ಸೆವೆನ್ ರಾಜ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
Live Tv
[brid partner=56869869 player=32851 video=960834 autoplay=true]
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ಈಗ ಹಿರಿಯ ನಟ ಕೀರ್ತಿರಾಜ್ ಹಾಗೂ ಅವರ ಪುತ್ರ ಧರ್ಮ ಕೀರ್ತಿರಾಜ್ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದರು.
ದರ್ಶನ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಕೀರ್ತಿರಾಜ್ ಮಾಧ್ಯಮಗಳೊಂದಿಗೆ ಮಾತನಾಡಿ, “ಚಾಮುಂಡೇಶ್ಚರಿ ಆಶೀರ್ವಾದದಿಂದ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದರ್ಶನ್ ಜೀವಕ್ಕೆ ಯಾವುದೇ ತೊಂದರೆ ಇಲ್ಲ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ದರ್ಶನ್ ಅವರನ್ನು ಮಾತನಾಡಿಸಿದ್ದು, ಆರಾಮಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದರ್ಶನ್ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ- ಪತ್ನಿ ವಿಜಯಲಕ್ಷ್ಮಿ ವಿವರಿಸಿದ್ದು ಹೀಗೆ
ದರ್ಶನ್ ಸೇಫ್ ಆಗಿದ್ದಾರೆ. ದರ್ಶನ್ ಕೈ ಫ್ರಾಕ್ಚರ್ ಆಗಿದೆ. ಸದ್ಯ ಸರ್ಜರಿ ಮಾಡಿ ವೈದ್ಯರು ಸರಿ ಮಾಡಿದ್ದಾರೆ. ದೇವರಾಜು ಅವರು ಕೂಡ ಆರೋಗ್ಯವಾಗಿದ್ದಾರೆ. ದೇವರ ಆಶೀರ್ವಾದಿಂದ ಪಾರಾಗಿದ್ದಾರೆ. ಕೆಟ್ಟ ಗಳಿಗೆಯಲ್ಲಿ ಅಪಘಾತವಾಗಿದೆ. ಕಾರ್ ಸ್ಕಿಡ್ ಆಗಿ ಈ ಅವಘಡ ಸಂಭವಿದ್ದು, ಕಾರ್ ನಿಲ್ಲಲಿ ಎಂದು ಬ್ರೇಕ್ ಹಾಕುತ್ತೀವಿ, ಆದರೆ ಕೆಲವೊಂದು ಸಲ ಹೀಗಾಗುತ್ತೆ ಅಂದರು. ಇದನ್ನೂ ಓದಿ: ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ
ಯಾಕೆ ಅಪಘಾತವಾಯ್ತು, ಹೇಗೆ ಆಯ್ತು ಅನ್ನೋದು ಗೊತ್ತಿಲ್ಲ. ನಾವು ಕಾರು ಓಡಿಸುವಾಗ ಬ್ರೇಕ್ ಹಾಕುತ್ತೇವೆ. ಆಗ ವಾಹನ ನಿಲ್ಲುತ್ತೆ ಅಂದುಕೊಳ್ಳುತ್ತೇವೆ. ನಿಲ್ಲದೆ ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದರೆ ಏನು ಮಾಡಲು ಸಾಧ್ಯ? ಭಾನುವಾರ ರಾತ್ರಿ ಮಳೆಯಾಗಿತ್ತು. ಕಾರಿನಲ್ಲಿ ಬರುವಾಗ ಸ್ಕಿಡ್ ಆಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ದರ್ಶನ್ ಅವರು ಚೆನ್ನಾಗಿದ್ದಾರೆ. ನಾನು ಮಾತನಾಡಿಸಿಕೊಂಡು ಬಂದಿದ್ದೇನೆ ಎಂದು ಖಳನಟ ಕೀರ್ತಿರಾಜ್ ಹೇಳಿದರು. ಇದನ್ನೂ ಓದಿ: ದರ್ಶನ್ ಕಾರ್ ಅಪಘಾತದ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್ ಹೀಗಂದ್ರು
ಘಟನೆಯೇನು?:
ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಇಂದು ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದ ಬಳಿಕ ನಾಪತ್ತೆಯಾಗಿದ್ದ ದರ್ಶನ್ ಕಾರ್ ಪತ್ತೆ
ಘಟನೆಯಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಮುಂಜಾನೆ ಮಳೆಯಾಗುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಇತ್ತೀಚೆಗೆ ನಟರೆಲ್ಲರೂ ತನ್ನ ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದರೂ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಹಾಗೆಯೇ ಬಿಡುವು ಮಾಡಿಕೊಂಡು ಕಾರು ಮತ್ತು ಬೈಕ್ ರೈಡ್ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ನೈಟ್ ಜಾಲಿ ರೈಡ್ ಮಾಡಿದ್ದಾರೆ. ಅಸಲಿಗೆ ಆ ಬೈಕ್ ದರ್ಶನ್ ಖರೀದಿಸಿಲ್ಲ. ಹಿರಿಯ ಖಳನಟ ಕೀರ್ತಿ ರಾಜ್ ಅವರ ಮಗ ನಟ ಧರ್ಮ ಕೀರ್ತಿರಾಜ್ ಖರೀದಿಸಿದ್ದ ರಾಯಲ್ ಎನ್‍ಫೀಲ್ಡ್ ಬುಲೆಟ್‍ನಲ್ಲಿ ದರ್ಶನ್ ಸವಾರಿ ಮಾಡಿದ್ದಾರೆ. ಇದನ್ನೂ ಓದಿ: ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ
ಸೋಮವಾರ ರಾತ್ರಿ ದರ್ಶನ್ ಮೊದಲು ಆ ಬೈಕ್ ಓಡಿಸಿದ್ದಾರೆ. ನಂತರ ಅವರ ಜೊತೆ ಧರ್ಮ ಕೀರ್ತಿರಾಜ್ ಕೂಡ ಒಂದು ಜಾಲಿ ರೈಡ್ ಹೋಗಿದ್ದಾರೆ. ದರ್ಶನ್ ಕೂಡ ನೈಟ್ ಡ್ರೆಸ್ ಹಾಕಿಕೊಂಡು ರಾಯಲ್ ಎನ್‍ಫೀಲ್ದ್ ಬೈಕ್ ರೈಡ್ ಮಾಡಿದ್ದಾರೆ.
ದರ್ಶನ್ ರಾಯಲ್ ಬೈಕಿನಲ್ಲಿ ಒಂದು ರೌಂಡ್ ಓಡಾಡಿದ ಅಪರೂಪದ ಕ್ಷಣಗಳಲ್ಲಿ ಕೀರ್ತಿರಾಜ್ ದರ್ಶನ್ ಜೊತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆ ಫಿಲ್ಮ್ ಮಾಡಲು ನಾನು ರೆಡಿ: ಸುದೀಪ್
ದರ್ಶನ್ ಮತ್ತು ಕೀರ್ತಿರಾಜ್ ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದು, ಧರ್ಮರಾಜ್ ದರ್ಶನ್ ಜೊತೆ ನವಗ್ರಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.