Tag: ಧರ್ಮ ಕೀರ್ತಿರಾಜ್

  • ರಾಗಿಣಿ ಜೊತೆ ‘ಸಿಂಧೂರಿ’ ಕಥೆ ಹೇಳಲು ಬಂದ ಧರ್ಮ ಕೀರ್ತಿರಾಜ್

    ರಾಗಿಣಿ ಜೊತೆ ‘ಸಿಂಧೂರಿ’ ಕಥೆ ಹೇಳಲು ಬಂದ ಧರ್ಮ ಕೀರ್ತಿರಾಜ್

    ಸ್ಯಾಂಡಲ್‌ವುಡ್ ನಟ ಧರ್ಮ ಕೀತೀರಾಜ್ ಅವರು (Dharma Kirthiraj) ‘ಬಿಗ್ ಬಾಸ್ ಕನ್ನಡ 11’ರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ತುಪ್ಪದ ಬೆಡಗಿ ರಾಗಿಣಿ (Ragini Dwivedi) ಜೊತೆ ‘ಸಿಂಧೂರಿ’ ಎಂಬ ಕಥೆ ಹೇಳಲು ರೆಡಿಯಾಗಿದ್ದಾರೆ.

    ‘ಸಿಂಧೂರಿ’ (Sindhoori) ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧರ್ಮ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಗಿಣಿ ಪಾತ್ರಕ್ಕೂ ಚಿತ್ರದಲ್ಲಿ ತೂಕವಿದೆ. ಇಬ್ಬರೂ ಇದೀಗ 1990ರ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಶಂಕರ್ ಕೋನಮಾನಹಳ್ಳಿ ಎಂಬುವವರು ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ

    ಏ.30ರಂದು ಅಕ್ಷಯ ತೃತೀಯ ಹಿನ್ನೆಲೆ ‘ಸಿಂಧೂರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ನಾಳೆ ಈ ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್ ಹೊರಬೀಳಲಿದೆ. ಇದನ್ನೂ ಓದಿ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ

    ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್, ತೆಲುಗು ಬ್ಲಡ್ ರೋಸಸ್, ನಯನ ಮಧುರ, ವಸುಂಧರ ದೇವಿ ಸೇರಿದಂತೆ ಹಲವು ಸಿನಿಮಾಗಳು ಧರ್ಮ ಕೀರ್ತಿರಾಜ್ ಕೈಯಲ್ಲಿವೆ.

  • ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

    ತೆಲುಗಿನತ್ತ ಧರ್ಮ ಕೀರ್ತಿರಾಜ್- ಅಪ್ಸರ ರಾಣಿ ಜೊತೆ ಸಿನಿಮಾ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಸ್ಪರ್ಧಿ ಧರ್ಮ ಕೀರ್ತಿರಾಜ್ (Dharma Kirthiraj) ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಟಾಲಿವುಡ್‌ನ ಬೋಲ್ಡ್ ಬ್ಯೂಟಿ ಅಪ್ಸರ ರಾಣಿ ಜೊತೆ ಧರ್ಮ ತೆರೆಹಂಚಿಕೊಳ್ಳುತ್ತಿದ್ದಾರೆ. ‘ಬ್ಲಡ್ ರೋಸಸ್’ (Blood Roses) ಚಿತ್ರಕ್ಕೆ ಅವರು ಸಾಥ್ ನೀಡಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕೂಡ ಅನಾವರಣ ಆಗಿದೆ. ಇದನ್ನೂ ಓದಿ:‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು

    ‘ಬ್ಲಡ್ ರೋಸಸ್’ ಎಂಬ ತೆಲುಗಿನ ಸಿನಿಮಾದಲ್ಲಿ ಧರ್ಮಗೆ ಪವರ್‌ಫುಲ್ ಪಾತ್ರಕ್ಕೆ ಸಿಕ್ಕಿದೆ. ಆರ್‌ಜಿವಿ ನಿರ್ದೇಶನದ ‘ಡೇಂಜರಸ್’ ಚಿತ್ರದಲ್ಲಿ ನಟಿಸಿದ್ದ ಅಪ್ಸರ ರಾಣಿ (Apasara Rani) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅವರು ಖದರ್ ತೋರಿಸಲಿದ್ದಾರೆ. ಕನ್ನಡದ ನಟ ಧರ್ಮಗೆ ಅಪ್ಸರ ಜೊತೆಯಾಗಿದ್ದಾರೆ. ಸದ್ಯ ರಿವೀಲ್ ಆಗಿರೋ ಚಿತ್ರದ ಫಸ್ಟ್ ಲುಕ್‌ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ಚಿತ್ರತಂಡದ ಜೊತೆಗಿನ ಫೋಟೋಗಳನ್ನು ಧರ್ಮ ಶೇರ್ ಮಾಡಿ ತೆಲುಗಿನಲ್ಲಿ ನಟಿಸಿರುವ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುದ್ದಿ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್‌ ಬಗ್ಗೆ ತಂಡ ಅಪ್‌ಡೇಟ್‌ ನೀಡಲಿದೆ. ತೆಲುಗಿನ ಜೊತೆ ಕನ್ನಡದಲ್ಲೂ ಈ ಸಿನಿಮಾ ಬರಲಿದೆಯಾ ಎಂದು ಕಾಯಬೇಕಿದೆ. ಈ ಚಿತ್ರತಂಡ ಈ ಬಗ್ಗೆ ಏನಾದರೂ ಅಪ್‌ಡೇಟ್ ಕೊಡಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

  • ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ದೊಡ್ಮನೆಯ (Bigg Boss Kannada 11) ಆಟದಿಂದ 57ದಿನಕ್ಕೆ ಧರ್ಮ ಕೀರ್ತೀರಾಜ್ (Dharma Keerthiraj) ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಧರ್ಮ ಆಪ್ತ ದರ್ಶನ್‌ಗೆ (Darshan) ಜಾಮೀನು ಸಿಕ್ಕಿರುವ ಬಗ್ಗೆ ಹಾಗೂ ಕೇಸ್ ಕುರಿತು ಅವರು ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಸರ್‌ಗೆ ಬೇಲ್ ಸಿಕ್ಕಿದು ತುಂಬಾ ಖುಷಿಯಾಯ್ತು ಎಂದು ಧರ್ಮ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ (Darshan) ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ ಖುಷಿಯಾಯಿತು. ಜೊತೆಗೆ ಅವರಿಗೆ ಬೆನ್ನು ನೋವಿದೆ ಆಪರೇಷನ್ ಮಾಡಬೇಕು ಎಂದಿದ್ದು ಬೇಜರಾಯಿತು. ಇದನ್ನೂ ಓದಿ:ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಓಡಿಸುವಾಗ ಆವಾಗಲೇ ಅವರಿಗೆ ಬೆನ್ನು ನೋವಿತ್ತು. ಸ್ಟಂಟ್ ಮಾಡುವಾಗಲೂ ಅವರಿಗೆ ಬೆನ್ನಿಗೆ ಎಷ್ಟು ನೋವಾಗುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಈ ಸಲ ಸ್ವಲ್ವ ಜಾಸ್ತಿ ಆಗಿರೋದು ಕೇಳಿ ನೋವಾಗಿದೆ. ಅವರು ಬೇಗ ಗುಣಮುಖರಾಗಲಿ ಅಂತ ಆಶಿಸುತ್ತೇನೆ ಎಂದಿದ್ದಾರೆ ಧರ್ಮ.

    ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ನೋಡಿದಾಗ ಕಾನೂನಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಇದನ್ನು ಕೋರ್ಟ್ ನಿರ್ಧಾರ ಮಾಡುತ್ತೆ. ನನಗೆ ಒಂದು ಲೈಫ್ ಅಂತ ಕೊಟ್ಟಿರೋದು ದರ್ಶನ್ ಸರ್. ಸಿನಿಮಾರಂಗದಲ್ಲಿ ನಾನು ನಿಲ್ಲೋಕೆ ಅವರು ಕಾರಣ. ಅವರು ನನ್ನ ಶಕ್ತಿ. ನಾನು ದೇವರಲ್ಲಿ ಕೇಳಿಕೊಳ್ಳೋದು ಏನು ಅಂದರೆ ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ ಎಂದು ದರ್ಶನ್ ಕುರಿತು ನಟ ಮಾತನಾಡಿದ್ದಾರೆ.

    ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ (Navagraha) ಸಿನಿಮಾದಲ್ಲಿ ಧರ್ಮ ಅವರು ಚಾಕ್‌ಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಶರ್ಮಿಳಾ ಮಾಂಡ್ರೆಗೆ ಹೀರೋ ಆಗಿ ನಟಿಸಿದ್ದರು. ಈ ಚಿತ್ರದ ಮೂಲಕ ಧರ್ಮ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  • ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟದಿಂದ ಧರ್ಮ ಕೀರ್ತಿರಾಜ್ (Dharma Keerthiraj) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಆಟ, ಅನುಷಾ (Anusha Rai) ಒಡನಾಟ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಾಕ್‌ಲೇಟ್ ಹೀರೋ ಧರ್ಮ ರಿಯಾಕ್ಟ್ ಮಾಡಿದ್ದಾರೆ. ಅನುಷಾ ಕುಟುಂಬದಿಂದ ಮದುವೆ (Wedding) ಪ್ರಪೋಸಲ್ ಬಂದ್ರೆ ನಟನ ಉತ್ತರವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ಧರ್ಮ ಮತ್ತು ಅನುಷಾ (Anusha Rai) ಬಿಗ್ ಬಾಸ್ ಮನೆಯಲ್ಲಿ ಒಡನಾಟ ನೋಡಿ ಅಭಿಮಾನಿಗಳು ಇವರು ರಿಯಲ್ ಲೈಫ್‌ನಲ್ಲೂ ಜೊತೆಯಾದ್ರೆ ಚೆನ್ನಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಈ ಜೋಡಿಯ ಮೇಲೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ಹಾಗಾಗಿ ಮದುವೆ ಬಗ್ಗೆ ಧರ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಫ್ರೆಂಡ್ಸ್ ಅನ್ನೋದ್ದಕ್ಕೆ ನಾವಿಬ್ಬರು ಉದಾಹರಣೆ. ನನ್ನ ಮತ್ತು ಅನುಷಾ ಸ್ನೇಹ ಚೆನ್ನಾಗಿತ್ತು. ಫ್ಯಾನ್ಸ್ ಹೇಳ್ತಿದ್ದಾರೆ ನಾವು ಲವರ್ಸ್ ಅಂತ ಆದರೆ ಹಾಗೇ ನಮ್ಮೀಬ್ಬರ ನಡುವೆ ಏನು ಇಲ್ಲ. ನಮ್ಮದು ನಿಷ್ಕಲ್ಮಶ ಸ್ನೇಹ, ನಮ್ಮೀಬ್ಬರಿಗೂ ಪ್ರೀತಿ ಅನ್ನೋ ಭಾವನೆ ಇಲ್ಲ. ಸ್ನೇಹಿತರು ಹೇಗಿರಬೇಕು ಹಾಗೇ ಇದ್ದೀವಿ. ಬಿಗ್ ಬಾಸ್‌ನಲ್ಲಿ ಎಮೋಷನಲ್ ಆಗಿ ಬೆಂಬಲ ಬೇಕು. ಆ ರೀತಿಯಲ್ಲಿ ಅನುಷಾ ನನಗೆ ವಂಡಲ್‌ಫುಲ್ ಫ್ರೆಂಡ್ ನನಗೆ. ನೀವು ನಮ್ಮನ್ನ ಸಿನಿಮಾ ಮೂಲಕ ಜೊತೆಯಾಗಿ ನೋಡಬಹುದು. ಸಿನಿಮಾದಲ್ಲಿ ಕಪಲ್ ಆಗಿದ್ದೀವಿ. ಅಲ್ಲಿ ನೋಡಿ ನೀವು ನಮ್ಮನ್ನು ಬೆಂಬಲಿಸಬಹುದು ಎಂದಿದ್ದಾರೆ.

    ಅನುಷಾ ಕಡೆಯಿಂದ ಮದುವೆ ಪ್ರಪೋಸಲ್ ಬರಲ್ಲ. ಅವರ ಮನೆ ಕಡೆಯಿಂದಲೂ ಮದುವೆ ಸಂಬಂಧ ಬರಲ್ಲ. ಏನಾದರೂ ಮದುವೆ ಸಂಬಂಧ ಬಂದರೆ ಕೂಡ ಅದು ಆಗಲ್ಲ. ನಮ್ಮೀಬ್ಬರ ನಡುವೆ ಫ್ರೆಂಡ್‌ಶಿಪ್ ಟ್ಯಾಗ್ ತುಂಬಾ ಚೆನ್ನಾಗಿದೆ. ಅದು ಫ್ರೆಂಡ್ಸ್ ಆಗಿಯೇ ಉಳಿದುಕೊಂಡರೆ ಚೆನ್ನಾಗಿರುತ್ತೆ ಅನಿಸುತ್ತದೆ. ಮದುವೆ ರೂಪದಲ್ಲಿ ಕನೆಕ್ಟ್ ಆಗಲ್ಲ ಎಂದು ಧರ್ಮ ಮಾತನಾಡಿದ್ದಾರೆ.

  • BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

    BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

    ದೊಡ್ಮನೆಗೆ ಎಂಟ್ರಿ ಕೊಟ್ಟಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಮತ್ತು ಶೋಭಾ ಶೆಟ್ಟಿಗೆ (Shobha Shetty) ಅದ್ಧೂರಿ ಸ್ವಾಗತ ಸಿಕ್ಕಿದೆ. ಒಳಗಿರುವ ಸದಸ್ಯರಿಗೆ ಇವರಿಬ್ಬರ ಆಗಮನ ಶಾಕ್ ಕೊಟ್ಟಿದೆ. ಜೋಶ್‌ನಲ್ಲಿರುವ ರಜತ್ ಮತ್ತು ಶೋಭಾಗೆ ‘ಬಿಗ್ ಬಾಸ್’ ಟಾಸ್ಕ್ ಒಂದು ಆಡಿಸಿದರು. ಮನೆಯಲ್ಲಿರುವ ಸ್ಪರ್ಧಿಗಳ ಆಟ ಕುರಿತು ಇಬ್ಬರಿಗೂ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ, ಧರ್ಮಗೆ (Dharma Kirthiraj) ಐ ಲೈಕ್ ಯೂ ಎಂದು ಶೋಭಾ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.

    ಮನೆಯ ಗಾರ್ಡನ್ ಏರಿಯಾದಲ್ಲಿ ರಜತ್ (Rajath Kishen) ಮತ್ತು ಶೋಭಾ ಅವರನ್ನು ನಿಲ್ಲಿಸಿದ ಬಿಗ್ ಬಾಸ್, ಇಬ್ಬರಿಗೂ ಪ್ರಶ್ನೆಗಳು ಕೇಳುತ್ತಾ ಹೋದರು. ಉತ್ತರ ಹೇಳಿದ ಬಳಿಕ ಇಬ್ಬರು ಕೂಡ ತೆಂಗಿನಕಾಯಿಯನ್ನು ಒಡೆಯಬೇಕು ಎಂದರು. ಅಂದರಂತೆ, ಈ ಮನೆಯಲ್ಲಿ ಯಾರ ಮುಖವಾಡವನ್ನು ಕಳಚಿ, ಅವರ ಅಸಲಿ ಮುಖವನ್ನು ಬಯಲಿಗೆ ಎಳೆಯುತ್ತೀರಿ? ಎಂದು ಶೋಭಾಗೆ ಬಿಗ್ ಬಾಸ್ ಪ್ರಶ್ನೆ ಕೇಳಿದರು. ನನ್ನ ಪ್ರಕಾರ, ಗೌತಮಿ ಇನ್ನೂ ಮುಖವಾಡ ಹಾಕಿಕೊಂಡಿದ್ದಾರೆ. ಅವರ ಅಸಲಿ ಮುಖವನ್ನು ನಾನು ಬಯಲು ಮಾಡಬಹುದು ಎನ್ನುತ್ತಾ ತೆಂಗಿನಕಾಯಿಯನ್ನು ಶೋಭಾ ಒಡೆದಿದ್ದಾರೆ. ಇದನ್ನೂ ಓದಿ:ಮಗನಿಗೆ ಬೇಬಿ ರೆಬೆಲ್ ಎಂದ ಅಭಿಷೇಕ್- ನಟನ ಪೋಸ್ಟ್‌ಗೆ ಅಂಬಿ ಫ್ಯಾನ್ಸ್ ದಿಲ್ ಖುಷ್

    ಆ ನಂತರ ನೀವು ಈ ಮನೆಯ ಯಾವ ಸದಸ್ಯರ ಜೊತೆ ಸ್ನೇಹದಿಂದ ಇರಲು ಬಯಸುತ್ತೀರಿ? ಶೋಭಾಗೆ ಪ್ರಶ್ನೆ ಎದುರಾಯಿತು. ಇರೋದ್ರಲ್ಲಿ ಒಬ್ಬರು ನನಗೆ ಇಂಪ್ರೆಸ್ ಎನ್ನಿಸಿದರು. ಅದು ಧರ್ಮ. ನಾನು ಒಳಗೆ ಲಗೇಜ್ ತರುವಾಗ ಅವರು ಬಂದು ಅದನ್ನು ತೆಗೆದುಕೊಂಡರು. ಅವರು ನಡೆದುಕೊಂಡ ರೀತಿ ನನಗೆ ಇಷ್ಟ ಆಯ್ತು. ಐ ಲೈಕ್ ಯೂ ಧರ್ಮ ಎಂದರು. ಶೋಭಾರ ಮಾತಿಗೆ ಧರ್ಮ ನಾಚಿ ನೀರಾದರು.

    ಇನ್ನೂ ಈ ಮನೆಯ ಯಾವ ಸ್ಪರ್ಧಿಗೆ ನೇರಾ ನೇ ಠಕ್ಕರ್ ಕೊಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ನಾನು ಮಂಜು ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನಟಿ ಉತ್ತರಿಸಿದರು. ರಜತ್ ಅವರು ತ್ರಿವಿಕ್ರಮ್ ಹೆಸರನ್ನು ಹೇಳಿದರು. ಮನೆಯ ಯಾವ ಸದಸ್ಯರ ಜೊತೆ ಅಂತರ ಕಾಯ್ದುಕೊಳ್ಳುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ನಾನು ಮಂಜುರಿಂದ ಅಂತರ ಕಾಯ್ದುಕೊಳ್ಳುತ್ತೇನೆ. ಮಂಜು ನಂಬಿಕಸ್ಥ ಎಂದು ಎನಿಸುವುದಿಲ್ಲ ಎಂದರು. ಚೈತ್ರಾ ಕುಂದಾಪುರ ಹೆಸರನ್ನು ರಜತ್ ಹೇಳಿದರು.

    ಇನ್ನೂ ಅನುಷಾ (Anusha Rai) ಎಲಿಮಿನೇಟ್ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಜತ್ ಮತ್ತು ಶೋಭಾ ಆಗಮನವಾಗಿದೆ. ರಜತ್, ಶೋಭಾ ಕೂಡ ಇಬ್ಬರೂ ಸ್ಟ್ರಾಂಗ್ ಸ್ಪರ್ಧಿಗಳೇ ಹಾಗಾಗಿ ಇನ್ಮೇಲೆ ಅಸಲಿ ಆಟ ಶುರುವಾಗಲಿದೆ. ಯಾರಿಗೆ ಹೇಗೆ ಠಕ್ಕರ್ ಕೊಡುತ್ತಾರೆ ಕಾಯಬೇಕಿದೆ.

  • BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    ನ್ನಡದ ‘ಬಿಗ್ ಬಾಸ್ ಸೀಸನ್ 11’ಕ್ಕೆ ‘ರಾಮಾಚಾರಿ’ (Ramachari) ಸೀರಿಯಲ್ ಖ್ಯಾತಿಯ ಜೋಡಿ ಮೌನ ಗುಡ್ಡೆಮನೆ (Mouna Guddemane) ಮತ್ತು ರಿತ್ವಿಕ್ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ‘ಬಿಗ್ ಬಾಸ್’ನಲ್ಲಿ ಮನರಂಜನೆ ದುಪ್ಪಟ್ಟಾಗಿದೆ. ರಾಮಾಚಾರಿ ಸೀರಿಯಲ್ ಜೋಡಿಯ ಮುಂದೆ ‘ರಾ ರಾ ರಕ್ಕಮ್ಮ’ ಹಾಡಿಗೆ ಐಶ್ವರ್ಯಾ (Aishwarya Shindogi) ಮತ್ತು ಧರ್ಮ ಹೆಜ್ಜೆ ಹಾಕಿದ್ದಾರೆ.

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ನಲ್ಲಿ ಹನುಮಂತನ ಎಂಟ್ರಿ ಆದ್ಮೇಲೆ ಕಾರ್ಯಕ್ರಮ ಮತ್ತಷ್ಟು ರಂಗೇರಿದೆ. ಇಂದಿನ ಸಂಚಿಕೆಯಲ್ಲಿ ಜನಪ್ರಿಯ ರಾಮಾಚಾರಿ ಮತ್ತು ಚಾರು ಜೋಡಿ ದೊಡ್ಮನೆಗೆ ಆಗಮಿಸಿದ್ದಾರೆ. ಇವರನ್ನು ಇಂಪ್ರೆಸ್ ಮಾಡೋದೆ ಸ್ಪರ್ಧಿಗಳು ಟಾಸ್ಕ್ ಆಗಿದೆ. ಇದನ್ನೂ ಓದಿ:ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ

    ಅದರಂತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಭರ್ಜರಿಯಾಗಿ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ಶಿಶಿರ್ ಕೂಡ ಸಾಥ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿನ ಸುದೀಪ್ ಸ್ಟೈಲ್‌ ಅನ್ನೇ ಧರ್ಮ (Dharma Kirthiraj) ಅನುಕರಣೆ ಮಾಡಿದ್ದಾರೆ. ಜೀನ್ಸ್‌ ಪ್ಯಾಂಟ್‌ಗೆ ರವಿಕೆ ಮತ್ತು ಕೆಂಪು ಶಾಲ್ ಹಾಕಿ ಐಶ್ವರ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಧರ್ಮ ಮತ್ತು ಐಶ್ವರ್ಯಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಡ್ಯಾನ್ಸ್‌ಗೆ ‘ರಾಮಾಚಾರಿ’ ಸೀರಿಯಲ್ ಜೋಡಿ ಇಂಪ್ರೆಸ್ ಆದ್ರಾ? ಕಾದುನೋಡಬೇಕಿದೆ. ಇಂದಿನ ಎಪಿಸೋಡ್ ರಾತ್ರಿ 9:30ಕ್ಕೆ ಉತ್ತರ ಸಿಗಲಿದೆ. ಒಟ್ನಲ್ಲಿ ಇಂದಿನ ಸಂಚಿಕೆ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

    BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಸಾಮಾನ್ಯವಾಗಿ ಹೊರಗಿನ ವಿಚಾರ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಇದೀಗ ಸುದೀಪ್ (Sudeep) ತಾಯಿಯ ನಿಧನದ ಸುದ್ದಿ ಸಿಕ್ಕ ಬೆನ್ನಲ್ಲೇ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಮರುಬಿಡುಗಡೆಯ ಬಗ್ಗೆ ಶೋನಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ನನ್ನ ವೃತ್ತಿ, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ: ವಿಜಯ್ ಪವರ್‌ಫುಲ್ ಸ್ಪೀಚ್

    ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಈ ವಾರಾಂತ್ಯ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ (Srujan Lokesh) ಅತಿಥಿಗಳಾಗಿ ಬಿಗ್ ಬಾಸ್‌ಗೆ ಆಗಮಿಸಿದ್ದರು. ಸೃಜನ್ ಆಗಮಿಸಿದ್ದು, ಧರ್ಮಗೆ ಖುಷಿಯಾಗಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ.

    ದೊಡ್ಮನೆಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಪರಿಚಯ ತಮಗೆ ಮೊದಲೇ ಇದೆ ಎಂಬುದನ್ನು ಹೇಳಿದರು. ಆಗ ಧರ್ಮ (Dharma Keerthiraj) ಬಳಿ ನಿಮಗೆ ಒಂದು ಗುಡ್ ನ್ಯೂಸ್ ಇದೆ ಎಂದರು ಸೃಜನ್. ‘ನವಗ್ರಹ’ ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಇದನ್ನು ಕೇಳಿ ಯಾವಾಗ ಎಂದು ಪ್ರಶ್ನೆ ಮಾಡಿದರು. ನವೆಂಬರ್ 8ಕ್ಕೆ ಎಂದು ಸೃಜನ್ (Srujan Lokesh) ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಖುಷಿಪಟ್ಟರು. ಈ ಮೂಲಕ ಬಿಗ್ ಬಾಸ್ ಮನೆಯೊಳಗೂ ನವಗ್ರಹ ಚಿತ್ರದ್ದೇ ಚರ್ಚೆಯಾಗಿದೆ.

    ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ 16 ವರ್ಷಗಳ ಹಿಂದೆ 2008ರ ನವೆಂಬರ್ 7ರಂದು ರಿಲೀಸ್ ಆಗಿತ್ತು. ದರ್ಶನ್ ಜೊತೆ ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ಶರ್ಮಿಳಾ ಮಾಂಡ್ರೆ, ವರ್ಷಾ, ತರುಣ್ ಸುಧೀರ್, ವಿನೋದ್ ಪ್ರಭಾಕರ್ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇದೀಗ ಇದೇ ನ.8ಕ್ಕೆ ಸಿನಿಮಾ ಮರುಬಿಡುಗಡೆ ಆಗುತ್ತಿದೆ.

  • ‘ಬಿಗ್ ಬಾಸ್’ ಮನೆಯೊಳಗೂ ಹೊರಗೂ ಧರ್ಮ, ಉಗ್ರಂ ಮಂಜುದ್ದೇ ಹವಾ- ಏನದು ಅಪ್‌ಡೇಟ್?

    ‘ಬಿಗ್ ಬಾಸ್’ ಮನೆಯೊಳಗೂ ಹೊರಗೂ ಧರ್ಮ, ಉಗ್ರಂ ಮಂಜುದ್ದೇ ಹವಾ- ಏನದು ಅಪ್‌ಡೇಟ್?

    ಸ್ಯಾಂಡಲ್‌ವುಡ್‌ನಲ್ಲಿ ‘ಟೆನೆಂಟ್’ (Tenant) ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ‘ಟೆನೆಂಟ್’ ಪ್ರಮೋಷನ್ ಅಂಗಳಕ್ಕೆ ಇಳಿದಿದೆ. ಸದ್ಯ ‘ಬಿಗ್ ಬಾಸ್’ (Bigg Boss Kannada 11) ಮನೆಯೊಳಗೆ ಇರುವ ನಟ ಧರ್ಮ ಕೀರ್ತಿರಾಜ್ (Dharma Keerthiraj) ಮತ್ತು ಉಗ್ರಂ ಮಂಜು (Ugramm Manju) ಮನೆ ಹೊರಗೂ ಟೆನೆಂಟ್‌ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ.

    ‌’ಟೆನೆಂಟ್’ ಚಿತ್ರದಲ್ಲಿ ಧರ್ಮ, ಉಗ್ರಂ ಮಂಜು ಜೊತೆ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ (Sonu Gowda) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಶ್ರೀಧರ್ ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಶ್ರೀಧರ್ ಅವರಿಗೆ ಇದು ಮೊದಲ ಸಿನಿಮಾ. ಯುವ ನಿರ್ದೇಶಕನ ಪ್ರಯತ್ನಕ್ಕೆ ತಾರಾಬಳಗ ಸಾಥ್ ಕೊಟ್ಟಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿದ್ರೆ, ಇದು ಚೊಚ್ಚಲ ಸಿನಿಮಾ ಅಂತ ಅನಿಸದ ಹಾಗೆ ಅಷ್ಟೆ ಅಚ್ಚುಕಟ್ಟಾಗಿ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ:ಮಗನ ಲೇಟೆಸ್ಟ್‌ ಫೋಟೋ ಶೇರ್‌ ಮಾಡಿದ ‘ಹೆಬ್ಬುಲಿ’ ನಟಿ

    ಮಾಸ್ಟರ್ ಚಾಯ್ಸ್ ಕ್ರಿಯೇಶನ್ ನಡಿ ನಾಗರಾಜ್ ಟಿ ನಿರ್ಮಾಣ ಮಾಡಿರುವ ‘ಟೆನೆಂಟ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸದ್ಯ, ಗಮನ ಸೆಳೆಯುತ್ತಿದೆ. ವಿಶೇಷ ಎಂದರೆ, ಈ ಟೀಸರ್ ಅನ್ನು ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ಸೇರಿ ರಿಲೀಸ್ ಮಾಡಿದ್ದಾರೆ. ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಖ್ಯಾತ ಛಾಯಾಗ್ರಹಕರಾದ ಸತ್ಯ ಹೆಗ್ಡೆ, ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ನಟ, ನಿರ್ದೇಶಕ ವಿಕ್ಕಿ, ನಟ ನವೀಶ್ ಶಂಕರ್, ಸೇರಿದಂತೆ ಅನೇಕರು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಸಾಥ್ ನೀಡಿದ್ದಾರೆ.

    ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಟೆನೆಂಟ್’ ಸಿನಿಮಾದ ಟೀಸರ್ ಆಕರ್ಷಕವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಕಣ್ ಕಣ್ಣ ಸಲಿಗೆ’ ಎಂದು ಲವರ್ ಬಾಯ್ ಆಗಿ ಮಿಂಚುತ್ತಿದ್ದ ನಟ ಧರ್ಮ ಕೀರ್ತಿರಾಜ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿರುವುದು ವಿಶೇಷ. ಇನ್ನೂ ತಿಲಕ್ ರಾಜ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹಾಗಾಗಿಯೇ ಈ ಸಿನಿಮಾದ ಮೇಲೆ ಅವರಿಗೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಟೀಸರ್‌ನಲ್ಲಿ ಎಲ್ಲರ ಪಾತ್ರಗಳು ಸಹ ಗಮನ ಸೆಳೆಯುತ್ತಿದೆ. ಅಂದಹಾಗೆ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಜ್ವಲ್ ಸಂಕಲನ, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ.

  • BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    BBK 11: ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ

    ಬಿಗ್ ಬಾಸ್ ಮನೆಯ ‌(Bigg Boss Kannada 11) ಆಟ ಶುರುವಾಗಿ 10 ದಿನಗಳು ಕಳೆದಿವೆ. ಮೊದಲ ವಾರವೇ ಯಮುನಾ ಶ್ರೀನಿಧಿ ದೊಡ್ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ಇದೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಲವ್ವಿ ಡವ್ವಿ ಶುರುವಾಗಿದೆ. ಧರ್ಮ (Dharma Keerthiraj) ಮತ್ತು ಐಶ್ವರ್ಯಾ (Aishwarya) ವಿಚಾರ ಮಾತನಾಡುತ್ತಾ ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ? ಅಂತ ಚೈತ್ರಾಗೆ ಅನುಷಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    ದೊಡ್ಮನೆಯಲ್ಲಿ ಹೇಗೆ ಇದ್ದರೆ ವರ್ಕೌಟ್ ಆಗುತ್ತದೆ ಎನ್ನುವ ಪ್ರಶ್ನೆ ಚೈತ್ರಾ ಕುಂದಾಪುರ ಹಾಗೂ ನಟಿ ಅನುಷಾ ಮೂಡಿದೆ. ನನ್ನ ಜೊತೆ ಧರ್ಮ ಮಾತನಾಡಲು ಬಂದರೆ ಐಶ್ವರ್ಯಾ ಸಹಿಸಿಕೊಳ್ಳಲ್ಲ. ಐಶ್ವರ್ಯಾ ಮತ್ತು ಧರ್ಮ ಕೀರ್ತಿರಾಜ್ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಧರ್ಮ ಅವರು ಐಶ್ವರ್ಯಾ ವಿಚಾರದಲ್ಲಿ ಪಾಸಿಟಿವ್ ಆಗಿ ಇದ್ದಾರೆ ಎಂದಿನಿಸುತ್ತಿದೆ. ಇಬ್ಬರೂ ಜೊತೆಯಾಗಿ ಅಡುಗೆ ಮಾಡೋದು ಹೀಗೆಯಲ್ಲಾ ನಡೆಯುತ್ತಿದೆ. ಕಂಟೆಂಟ್‌ಗೋಸ್ಕರ ಕೂಡ ಲವ್ ಆಗುತ್ತಾ? ಎಂದು ಅನುಷಾ (Anusha Rai) ಅವರು ಚೈತ್ರಾಗೆ (Chaithra Kundapura) ಪ್ರಶ್ನೆ ಕೇಳಿದ್ದಾರೆ. ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸುತ್ತಿರುವ ರೀತಿ ನೋಡಿದ್ರೆ, ಇವರಿಬ್ಬರ ನಡುವೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಅಲ್ಲಿರುವ ಸ್ಪರ್ಧಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿಯೂ ಮೂಡಿದೆ.

    ಇದೇ ವೇಳೆ, ನಟಿ ಅನುಷಾ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಹೊರಗೆ ಬಾಯ್‌ಫ್ರೆಂಡ್ ಇಲ್ಲ. ಎಂಗೇಜ್‌ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ (Love) ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಯೆಸ್ ಎಂದು ಹೇಳುತ್ತೇನೆ. ಸರಿಯಾದ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ ಎಂದಿದ್ದಾರೆ.

    ಇನ್ನೂ ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಲವ್ ಮಾಡಿ ಗಿಮಿಕ್ ಮಾಡಿದ್ದು ಇದೆ. ದೊಡ್ಮನೆ ಆಟ ಮುಗಿದ ಮೇಲೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ ಎಂದು ಅನ್ನೋ ಹಾಗೆ ಇದ್ದಿದ್ದು ಇದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಐಶ್ವರ್ಯಾ ಲವ್ ಧರ್ಮ ಲವ್ ಟ್ರ್ಯಾಕ್ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾಯಬೇಕಿದೆ.

  • BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಪ್ರೀತಿ ಚಿಗುರಿ ಆ ನಂತರ ಬ್ರೇಕಪ್ ಕಾಮನ್ ಆಗಿದೆ. ಪ್ರತಿ ಸೀಸನ್‌ನಲ್ಲೂ ಕೂಡ ಒಂದಲ್ಲಾ ಒಂದು ಲವ್ ಸ್ಟೋರಿಗಳು ಸದ್ದು ಮಾಡುತ್ತಲೇ ಇರುತ್ತದೆ. ಈ ಬಾರಿ ಒಬ್ಬ ಹುಡುಗನ ಮೇಲೆ ಇಬ್ಬರೂ ಹುಡುಗಿಯರಿಗೆ ಕ್ರಶ್ ಆಗಿದೆ. ಟ್ರಯಾಂಗಲ್ ಲವ್ ಟ್ರ್ಯಾಕ್ ನಡೆಯುತ್ತಿದೆ. ಯಾರು ಅದು ಅಂತೀರಾ? ಅದು ಬೇರೆ ಯಾರೋ ಅಲ್ಲ, ಚಾಕ್‌ಲೇಟ್ ಹೀರೋ ಧರ್ಮ ಕೀರ್ತಿರಾಜ್ (Dharma Keerthiraj) ಲವ್ ಕಹಾನಿ. ಇದನ್ನೂ ಓದಿ:ಆರಾಮ್ ಅರವಿಂದ್ ಸ್ವಾಮಿ: ರೊಮ್ಯಾಂಟಿಕ್ ಹಾಡಿನಲ್ಲಿ ಅನೀಶ್ ತೇಜಶ್ವರ್

    ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಪ್ರೀತಿ, ಪ್ರೇಮ ಚಿಗುರುವ ಲಕ್ಷಣ ಕಾಣಿಸಿದೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ನಡುವೆ ಲವ್ ಆಗಿತ್ತು. ಈಗ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ (Aishwarya Shindogi)  ಅವರು ಪರಸ್ಪರ ಆಕರ್ಷಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನುಷಾ ರೈ (Anusha Rai) ಕೂಡ ಇದೇ ಟ್ರ‍್ಯಾಕ್‌ನಲ್ಲಿ ಇದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ತ್ರಿಕೋನ ಪ್ರೇಮ ಶುರುವಾಗುವ ಸೂಚನೆ ಸಿಕ್ಕಿದೆ.

    ಆ ಕಡೆ ಅನುಷಾ ಜೊತೆ ಧರ್ಮ ಲವ್ವಿ ಡವ್ವಿ, ಈ ಕಡೆ ಐಶ್ವರ್ಯಾ ಜೊತೆನೂ ಲವ್ವಿ ಡವ್ವಿ. ಟೋಟಲಿ ಬಿಗ್ ಮನೆಯಲ್ಲಿ ಏನು ಆಗ್ತಿದೆ ಅನ್ನೋದು ಮನೆ ಮಂದಿಗೆ ಫುಲ್ ಕನ್‌ಫ್ಯೂಷನ್ ಆಗೋಗಿದೆ. ಧರ್ಮ ಅಂತೂ ಬಿಗ್ ಬಾಸ್ ಮನೆಯಲ್ಲಿ ಕೃಷ್ಣ ಆಗಿರೋದಂತೂ ಗ್ಯಾರಂಟಿ. ಯಾರಿಗೆ ಯಾರು ಸಿಕ್ತಾರೆ ಕೊನೆಯಲ್ಲಿ ಅನ್ನೋದೇ ಸದ್ಯದ ಕುತೂಹಲ.