Tag: ಧರ್ಮೇಂದ್ರ ಪ್ರಧಾನ್

  • ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ

    ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ

    ನವದೆಹಲಿ: ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನೀಡಿದ ಹೇಳಿಕೆ ರಾಜ್ಯಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಉಪ ಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು (BJP MP) ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಹಿನ್ನಲೆ ಅವರು ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಯಿತು.

    ಯಾರನ್ನೋ ಹೊಡೆದುರುಳಿಸು ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಅವರು ಕ್ಷಮೆಯಾಚಿಸಿದರು. ನಂತರ ಅ ಪದವನ್ನು ರಾಜ್ಯಸಭೆಯ ದಾಖಲೆಗಳಿಂದ ತೆಗೆದುಹಾಕಲಾಯಿತು. ಇದನ್ನೂ ಓದಿ: ರಾಯಚೂರು| ಎರಡು ಬೈಕ್‌ಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಐವರು ದುರ್ಮರಣ

    ರಾಜ್ಯಸಭೆಯಲ್ಲಿ (Rajya Sabha) ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆ ನಡೆಯುತ್ತಿತ್ತು, ಈ ವೇಳೆ ಡಿಎಂಕೆ ಸಂಸದರನ್ನು ಅನಾಗರಿಕರು ಎಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲು ಪ್ರತಿಪಕ್ಷಗಳು ಗದ್ದಲ ಮಾಡಿದವು. ಇದನ್ನೂ ಓದಿ: ಕಾಂಗ್ರೆಸ್‌ನಿಂದ SCSP, TSP ಹಣ ಗ್ಯಾರಂಟಿಗೆ ಬಳಕೆ – ಕೋಲಾರ ಬಿಜೆಪಿ ಮುಖಂಡರಿಂದ ಖಂಡನೆ

    ಗದ್ದಲದ ನಡುವೆಯೇ ಉಪ ಸಭಾಪತಿ ಹರಿವಂಶ್ ಅವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಮಾತನಾಡಲು ಸೂಚಿಸಿದರು. ಸಿಂಗ್ ಮಾತನಾಡುವ ಮೊದಲು ಎದ್ದು ನಿಂತ ಮಲ್ಲಿಕಾರ್ಜುನ್ ಖರ್ಗೆ ತಮ್ಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಉಪ ಸಭಾಪತಿ ಹರಿವಂಶ್ ಇದಕ್ಕೆ ನಿರಾಕರಿಸಿದರು. ಇದರಿಂದ ಕುಪಿತಗೊಂಡ ಖರ್ಗೆ ಪೀಠದತ್ತ ಕೈ ಮಾಡಿ ಇದು ಸರ್ವಾಧಿಕಾರ ಎಂದು ಹೇಳಿದರು‌. ಅಲ್ಲದೇ ನೀವು ಬೇರೆ ಏನೋ ಹೊಡೆಯಲು ಬಯಸುತ್ತೀರಿ, ನಾವೇ ಅದನ್ನು ಸರಿಯಾಗಿ ಹೊಡೆಯುತ್ತೇವೆ ಎಂದರು. ಖರ್ಗೆ ಅವರ ಈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದರು.

    ಗದ್ದಲ ಮುಂದುವರಿದಂತೆ ಮಲ್ಲಿಕಾರ್ಜುನ್ ಖರ್ಗೆ ಉಪಸಭಾಪತಿಯವರಿಗೆ ಕ್ಷಮೆಯಾಚಿಸಿದರು. ನಾನು ಅಧ್ಯಕ್ಷರ ಬಗ್ಗೆ ಅಂತಹ ಪದಗಳನ್ನು ಬಳಸಿಲ್ಲ. ನನ್ನ ಮಾತುಗಳಿಂದ ಉಪಸಭಾಪತಿಯವರಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ನಾನು ಸರ್ಕಾರದ ನೀತಿಗಳನ್ನು ಟೀಕಿಸುತ್ತಿದ್ದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಹೆಸರೇ ಇರಲಿಲ್ಲ: ರೇವಣ್ಣಗೆ ಶ್ರೇಯಸ್ ಪಟೇಲ್ ತಿರುಗೇಟು

    ನಂತರ, X ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ಧರ್ಮೇಂದ್ರ ಪ್ರಧಾನ್ ಅವರು ಈ ದೇಶದ ಒಂದು ಭಾಗದ, ಆದ್ರೆ ಜನರ ಒಂದು ಭಾಗದ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಉಲ್ಲೇಖಿಸುತ್ತಿರುವುದಾಗಿ ಹೇಳಿದರು. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ | ಮಿನಿಸ್ಟರ್ ಕೈವಾಡವಿದೆ ಅನ್ನೋದು ಊಹಾಪೋಹ ಎಂದ ಜಮೀರ್

  • ಡಿಎಂಕೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡ್ತಿದೆ – ತ್ರಿಭಾಷಾ ಸೂತ್ರಕ್ಕೆ ವಿರೋಧಕ್ಕೆ ಧರ್ಮೇಂದ್ರ ಪ್ರಧಾನ್ ಟೀಕೆ

    ಡಿಎಂಕೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡ್ತಿದೆ – ತ್ರಿಭಾಷಾ ಸೂತ್ರಕ್ಕೆ ವಿರೋಧಕ್ಕೆ ಧರ್ಮೇಂದ್ರ ಪ್ರಧಾನ್ ಟೀಕೆ

    – ಸಭಾತ್ಯಾಗ, ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ ಡಿಎಂಕೆ ಸಂಸದರು

    ನವದೆಹಲಿ: ಹೊಸ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರಕ್ಕೆ ವಿರೋಧ (language war) ವ್ಯಕ್ತಪಡಿಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ವಿರೋಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ (Tamil Nadu) ವಿದ್ಯಾರ್ಥಿಗಳ ಅಭಿವೃದ್ಧಿ ಬಗ್ಗೆ ಡಿಎಂಕೆ ಪಕ್ಷವು ಅಪ್ರಾಮಾಣಿಕ ಮತ್ತು ಅಸಡ್ಡೆ ಹೊಂದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

    ಡಿಎಂಕೆ ನಾಯಕರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ, ಅವರ ಏಕೈಕ ಕಾರ್ಯಸೂಚಿ ಭಾಷಾ ಆಧಾರಿತ ವಿಭಜನೆಗಳನ್ನು ಹುಟ್ಟುಹಾಕುವುದು. ಅವರು ರಾಜಕೀಯ ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಾಗರಿಕರು ಎಂದು ಅವರು ಟೀಕಿಸಿದರು.

    ಪ್ರಧಾನ್ ಅವರು ಡಿಎಂಕೆ ಪಕ್ಷದ ವಿರುದ್ಧ ಮಾಡಿದ ಕಟು ಟೀಕೆ ಕೋಲಾಹಲಕ್ಕೆ ಕಾರಣವಾಯಿತು, ಇದು ಡಿಎಂಕೆ ಸಂಸದರ ಪ್ರತಿಭಟನೆಗೆ ಕಾರಣವಾಯಿತು ಮತ್ತು ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ತ್ರಿಭಾಷಾ ನೀತಿ ಮತ್ತು ಗಡಿ ರಚನಾ ವಿಷಯಗಳ ವಿಷಯವನ್ನು ಎತ್ತಿದ್ದ ನಂತರ ಡಿಎಂಕೆ ಸಭಾತ್ಯಾಗ ಮಾಡಿತು.

    ಸಭಾತ್ಯಾಗದ ಬಗ್ಗೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಇದು ಬೇಜವಾಬ್ದಾರಿ ವರ್ತನೆ, ಅವರು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಇದು ಸಂಸತ್ತಿನ ಅವಮಾನಿಸುವ ದುಷ್ಟ ಸಂಚು, ನಮ್ಮ ಸರ್ಕಾರ ನಿಯಮಗಳ ಅಡಿಯಲ್ಲಿ ಎಲ್ಲವನ್ನೂ ಚರ್ಚಿಸಲು ಸಿದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

  • ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಪಾಟ್ನಾ: ಎನ್‌ಡಿಎ (NDA) ಮೈತ್ರಿಕೂಟದ ಜನತಾ ದಳ (Janata Dal)  (ಯುನೈಟೆಡ್) ಪಕ್ಷವು ಮೈಥಿಲಿ ಭಾಷೆಗೆ (Maithali Lnaguage) ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಬೇಕು ಎಂದು ಸೋಮವಾರ ಒತ್ತಾಯಿಸಿದೆ.

    ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ನಿರ್ಧರಿಸಿದ ಬೆನ್ನಲ್ಲೇ ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಜೆಡಿಯು ಈ ಬೇಡಿಕೆಯಿಟ್ಟಿದೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ (Sanjay Kumar Jha) ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಅವರನ್ನು ಭೇಟಿಯಾಗಿ ಈ ಬೇಡಿಕೆಗೆ ಒತ್ತಾಯಿಸುವುದಾಗಿ ಹೇಳಿದರು.

    ಇದಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಶೀಘ್ರದಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಮಾಡಿ ಮೈಥಿಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು. ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರವು ಮೊದಲಿನಿಂದಲೂ ನನ್ನ ಮೊದಲ ಆದ್ಯತೆಯಾಗಿದೆ.

    ಮೈಥಿಲಿ ಭಾಷೆ ಸುಮಾರು 1,300 ವರ್ಷಗಳಷ್ಟು ಹಳೆಯದು. ಅದರ ಸಾಹಿತ್ಯವು ಸ್ವಾತಂತ್ರ್ಯವಾಗಿ ಮತ್ತು ನಿರಂತರವಾಗಿ ಅಭಿವೃದ್ಧಿಯಾಗುತ್ತಾ ಬಂದಿದೆ. ಜೊತೆಗೆ ಮೈಥಿಲಿ ಭಾಷೆ ಸುಮಾರು 1300 ವರ್ಷಗಳಷ್ಟು ಹಳೆಯದು. ಆದ್ದರಿಂದ, ಇದನ್ನು ಶಾಸ್ತ್ರೀಯ ಭಾಷೆಯ ವರ್ಗಕ್ಕೆ ಸೇರಿಸಬೇಕು ಎಂದರು.

    ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಹಾರ ರಾಜ್ಯ ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೈಥಿಲಿ ಲಿಪಿಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ಧಿಗಾಗಿ ಮೈಥಿಲ್ ವಿದ್ವಾಂಸರನ್ನು ಆಹ್ವಾನಿಸುವ ಮೂಲಕ ಜಾವಡೇಕರ್ ಅವರು ನನ್ನ ಜ್ಞಾಪಕ ಪತ್ರವನ್ನು ಸ್ವೀಕರಿಸಿದರು. ಪರಿಣಿತ ಸಮಿತಿಯ ರಚನೆಗೆ ಸೂಚನೆಗಳನ್ನು ನೀಡಿದರು ಮತ್ತು ಅದಕ್ಕೆ ಹೆಸರುಗಳನ್ನು ಸೂಚಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ಬರೆದಿದ್ದಾರೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಕೂಲಂಕಷವಾಗಿ ಚರ್ಚಿಸಿದ ನಂತರ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

  • NEET Exam Row: ಉನ್ನತ ಮಟ್ಟದ ಸಮಿತಿ ರಚನೆ, ಯಾರನ್ನೂ ಬಿಡಲ್ಲ: ಧರ್ಮೇಂದ್ರ ಪ್ರಧಾನ್‌

    NEET Exam Row: ಉನ್ನತ ಮಟ್ಟದ ಸಮಿತಿ ರಚನೆ, ಯಾರನ್ನೂ ಬಿಡಲ್ಲ: ಧರ್ಮೇಂದ್ರ ಪ್ರಧಾನ್‌

    ನವದೆಹಲಿ: ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಅಂತಾ ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದ್ದಾರೆ.

    NEET ಪೇಪರ್ ಸೋರಿಕೆ ಮತ್ತು UGC-NET ಬಗ್ಗೆ ಇಡೀ ದೇಶದಲ್ಲಿ ಕೋಲಾಹಲವಿದೆ. ದೇಶದ ಹಲವೆಡೆ ವಿದ್ಯಾರ್ಥಿಗಳ ಪ್ರತಿಭಟನೆಯೂ ಮುಂದುವರಿದಿವೆ. ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

    ಪಾರದರ್ಶಕತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ನೀಟ್‌ನಲ್ಲಿನ ಅಕ್ರಮಗಳು ಮತ್ತು UGC- NET ಪರೀಕ್ಷೆ ರದ್ದತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

    ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಇಡುವಂತೆ ನಾನು ನನ್ನ ವಿರೋಧ ಪಕ್ಷದ ಸ್ನೇಹಿತರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಪಾರದರ್ಶಕತೆಗಾಗಿ ಪರೀಕ್ಷೆ ನಡೆಸಲು ಮತ್ತು ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಸುಧಾರಿಸಲು ನಮ್ಮ ಸರ್ಕಾರ 100% ಬದ್ಧವಾಗಿದೆ. ಈ ಬಗ್ಗೆ ನಾನು ನಿಮಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ನಮ್ಮ ಸರ್ಕಾರವು ಯಾವುದೇ ಅವ್ಯವಹಾರ, ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ ಎಂದರು. ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

    ನಾವು ಬಿಹಾರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಪಾಟ್ನಾದಿಂದ ಕೆಲವು ಮಾಹಿತಿಯನ್ನು ಪಡೆಯುತ್ತಿದ್ದೇವೆ. ಪಾಟ್ನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ವಿವರವಾದ ವರದಿಯನ್ನು ಅವರಿಂದ ಸಲ್ಲಿಸಲಾಗುವುದು. ಮಾಹಿತಿಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಡಾರ್ಕ್ ನೆಟ್‌ನಲ್ಲಿರುವ UGC-NET ಪ್ರಶ್ನೆಪತ್ರಿಕೆಯು UGC-NET ನ ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗುತ್ತಿದೆ. ಇದು ಸ್ಪಷ್ಟವಾದ ನಂತರ ನಾವು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಕೆಲವು ಅಕ್ರಮಗಳು ಸರ್ಕಾರದ ಗಮನಕ್ಕೆ ಬಂದಿವೆ. ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ವದಂತಿಗಳನ್ನು ನಂಬಬೇಡಿ ಎಂದು ನಾನು ವಿದ್ಯಾರ್ಥಿಗಳಲ್ಲಿ ಅತ್ಯಂತ ವಿನಂತಿಸುತ್ತೇನೆ. ಪೇಪರ್ ಸೋರಿಕೆಯು ಎನ್‌ಟಿಎಯ ಸಾಂಸ್ಥಿಕ ವೈಫಲ್ಯವಾಗಿದೆ. ಸುಧಾರಣಾ ಸಮಿತಿ ಇರುತ್ತದೆ ಮತ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಪ್ರಧಾನ್‌ ಭರವಸೆ ನೀಡಿದರು.

  • ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ

    ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ

    – ಕನ್ನಡದಲ್ಲೇ ಟ್ವೀಟ್ ಮಾಡಿ ಖಂಡನೆ

    ಬೆಂಗಳೂರು: ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಎನ್‌ಇಪಿ (NEP) ರದ್ದು ಕುರಿತ ಸಿಎಂ ಹೇಳಿಕೆಗೆ ಕನ್ನಡದಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಧರ್ಮೇಂದ್ರ ಪ್ರಧಾನ್ ವಿರೋಧಿಸಿದ್ದಾರೆ. ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್‌ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್‌

    ಟ್ವೀಟ್‌ನಲ್ಲಿ ಏನಿದೆ?
    ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಸ್ಥಗಿತಗೊಳಿಸುವ ಕರ್ನಾಟಕ ರಾಜ್ಯದ ಸಿಎಂ ಅವರ ರಾಜಕೀಯ ಪ್ರೇರಿತ ನಿರ್ಧಾರದ ಬಗ್ಗೆ ತಿಳಿದು ನಿರಾಶೆಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನದ ಅಗತ್ಯವಿದೆಯೇ ಹೊರತು ಹಿಂಜರಿಕೆಯಲ್ಲ. ಎನ್‌ಇಪಿ ಎಂಬುದು ಹಲವು ವರ್ಷಗಳ ಗಂಭೀರ ಸಮಾಲೋಚನೆಗಳನ್ನು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಫಲಿತಾಂಶವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಜಂಪ್ ಆಗ್ತಾರಾ ಬಾಂಬೆ ಫ್ರೆಂಡ್ಸ್? – ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಎಸ್‍ಟಿಎಸ್ ಕೆಂಡ

    ಈ ನಿರ್ಧಾರವು ಕಾಂಗ್ರೆಸ್‌ನ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ಗುಣಗಳನ್ನು ಬಹಿರಂಗಪಡಿಸುತ್ತದೆ. ಕರ್ನಾಟಕವು ಪ್ರಗತಿ ಶೀಲ ಮತ್ತು ಸರ್ವರನ್ನು ಒಳಗೊಳ್ಳುವಿಕೆಗೆ ಬೆಲೆಕೊಡುವ ನಾಯಕತ್ವವನ್ನು ಬಯಸುತ್ತದೆಯೇ ಹೊರತು ಕ್ಷುಲ್ಲಕ ರಾಜಕಾರಣವನ್ನಲ್ಲ. ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಮೊದಲ ಆದ್ಯತೆಯನ್ನು ಕೊಡೋಣ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸೋಣ ಎಂದು ಬರೆದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ : ಧರ್ಮೇಂದ್ರ ಪ್ರಧಾನ್

    ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ : ಧರ್ಮೇಂದ್ರ ಪ್ರಧಾನ್

    ಬೆಂಗಳೂರು : ಶಿಕ್ಷಣ ಕ್ಷೇತ್ರ ಮತ್ತು ಕೌಶಲ್ಯಾಭಿವೃದ್ದಿ ಕ್ಷೇತ್ರದಲ್ಲಿ ಕರ್ನಾಟಕದ ಮಾಡೆಲ್ ಇಡೀ ದೇಶದ ಮಾಡೆಲ್ ಆಗಲಿದೆ ಅಂತ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕರ್ನಾಟಕದ ಮಾಡೆಲ್ ಗೆ ಶಬ್ಬಾಶ್ ಗಿರಿ ಕೊಟ್ಟರು.

    ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ದೇಶದಲ್ಲಿ‌‌ ಮೊದಲ ರಾಜ್ಯವಾಗಿ ಕರ್ನಾಟಕ ಅನುಷ್ಠಾನ ಮಾಡಿದೆ. ಅನುಷ್ಠಾನ ‌ಮಾಡಿ ಅತ್ಯುತ್ತಮವಾಗಿ ಜಾರಿ ಮಾಡಿದೆ. ಕರ್ನಾಟಕದ ವ್ಯವಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು. ಕರ್ನಾಟಕದಲ್ಲಿ 1.5 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 3.5 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವಂತೆ ಸಲಹೆ ನೀಡಿದ್ದೇನೆ ಅಂತ ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕರ್ನಾಟಕ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ. ಕರ್ನಾಟಕ ಸಾಧನೆ ಸಂತೋಷ ಮತ್ತು ತೃಪ್ತಿ ತಂದಿದೆ ಅಂತ‌ ತಿಳಿಸಿದರು. ಕರ್ನಾಟಕ ಕೇವಲ ರಾಷ್ಟ್ರೀಯ ಶಿಕ್ಷಣ ನೀತಿ ಮಾತ್ರವಲ್ಲ ಕೌಶಲ್ಯಾಭಿವೃದ್ದಿಯಲ್ಲೂ ಅತ್ಯುತ್ತಮ ಕೆಲಸ ಮಾಡಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲೂ ಮುಂದಿದೆ. ಸ್ಕಿಲ್ ಡೆವಲಪ್ಮೆಂಟ್, ಉದ್ಯೋಗ ಸೃಷ್ಟಿಯಲ್ಲೂ ಉತ್ತಮ ಕೆಲಸ ಮಾಡುತ್ತಿದೆ ಅಂತ ಶ್ಲಾಘಿಸಿದರು. ಕರ್ನಾಟಕ ಸರ್ಕಾರ ಪ್ರಧಾನಿ ಮೋದಿಯವರ ಕನಸು ಸಾಕಾರ ಮಾಡುತ್ತಿದೆ. ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಯಲ್ಲಿ ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ ಎಂದರು.

    ಕಲಿಕಾ ಚೇತರಿಕೆಗೂ ಶಹಬ್ಬಾಸ್‌ ಗಿರಿ
    ಕೊರೊನಾ ಬಳಿಕ ಮಕ್ಕಳ ಶೈಕ್ಷಣಿಕ ವ್ಯತ್ಯಾಸ ಸರಿ ಮಾಡಲು ರಾಜ್ಯ ಸರ್ಕಾರ ಜಾರಿಗೆ ತರುತ್ತಿರೋ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದರು. ಕರ್ನಾಟಕದ ಮಾಡೆಲ್ ಅತ್ಯುತ್ತಮವಾಗಿದೆ. ಈ ಮಾಡೆಲ್ ಅನ್ನ ಎಲ್ಲಾ ರಾಜ್ಯಗಳು ಅನುಸರಿಬೇಕು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಅಂತ ತಿಳಿಸಿದರು. ರಾಜ್ಯ ಸರ್ಕಾರದ ಕಾರ್ಯವನ್ನು ಹೊಗಳಿದರು.

  • ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ – ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಸುನಿಲ್ ಕುಮಾರ್

    ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ – ಕೇಂದ್ರ ಸಚಿವರೊಂದಿಗೆ ಚರ್ಚಿಸಿದ ಸುನಿಲ್ ಕುಮಾರ್

    ನವದೆಹಲಿ: ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಕುರಿತಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

    ಧರ್ಮೇಂದ್ರ ಪ್ರಧಾನ್ ಅವರನ್ನು ಸುನಿಲ್ ಕುಮಾರ್, ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್

    ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸುನಿಲ್ ಕುಮಾರ್, ವಿಶೇಷವಾಗಿ ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ಬಗ್ಗೆ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಸ್ವಾಯತ್ತತೆ ನೀಡಿದರೆ ಮಾತ್ರ ಅದು ರಚನಾತ್ಮಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯ ಎಂಬ ಸಂಗತಿಯನ್ನು ಕೇಂದ್ರ ಸಚಿವರಿಗೆ ಮನದಟ್ಟು ಮಾಡಿಕೊಡಲಾಯಿತು. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸ್ವಾಯತ್ತತೆ ನೀಡುವ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮನವಿ ಸಲ್ಲಿಸಲಾಯಿತು. ಶಾಸ್ತ್ರೀಯ ಭಾಷೆಗೆ ಸಂಬಂಧಪಟ್ಟಹಾಗೆ ದೊಡ್ಡಮಟ್ಟದಲ್ಲಿ ಕಾರ್ಯಚಟುವಟಿಕೆಗಳನ್ನು ರೂಪಿಸಲು ಅಗತ್ಯ ಅನುದಾನವನ್ನು ಒದಗಿಸುವ ಕುರಿತು ಚರ್ಚಿಸಲಾಯಿತು. ಇದಕ್ಕೂ ಸಹ ಸ್ಪಂದಿಸಿದ ಕೇಂದ್ರ ಸಚಿವರು ಅನುದಾನ ಹೆಚ್ಚಳ ಮಾಡುವ ಬಗ್ಗೆ ಸಂಬಂಧಪಟ್ಟವರೊಂದಿಗೆ, ಚರ್ಚಿಸುವುದಾಗಿ ತಿಳಿಸಿದರು. ಬಹಳ ಮುಖ್ಯವಾಗಿ ಸ್ವತಃ ಧಮೇರ್ಂದ್ರ ಪ್ರಧಾನ್ ಶೀಘ್ರದಲ್ಲಿಯೇ ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

  • ಹಿಜಬ್‌-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ

    ಹಿಜಬ್‌-ಕೇಸರಿ ಶಾಲು ವಿವಾದ – ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಒತ್ತಾಯ

    ನವದೆಹಲಿ: ಕರ್ನಾಟಕದಲ್ಲಿ ತಲೆದೋರಿರುವ ದುರದೃಷ್ಟಕರ ಘಟನೆ ಹಿಜಬ್‌-ಕೇಸರಿ ಶಾಲು ವಿವಾದ ಕುರಿತು ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ-ಮಾರ್ಕ್ಸಿಸ್ಟ್‌ ನಾಯಕ ಎಲಮರಮ್‌ ಕರೀಂ ಅವರು ಒತ್ತಾಯಿಸಿದ್ದಾರೆ.

    ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್‌ ಧರಿಸಿದ್ದಕ್ಕಾಗಿ ತರಗತಿಗಳಿಗೆ ಹಾಜರಾಗುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕೋಮು ಧ್ರುವೀಕರಣ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿರುವುದನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

    ಈ ಬೆಳವಣಿಗೆ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಇಲ್ಲಿಯವರೆಗೂ ಮುಸ್ಲಿಂ ಹುಡುಗಿಯರು ಯಾವುದೇ ಆಕ್ಷೇಪವಿಲ್ಲದೇ ತಲೆಗೆ ಹಿಜಬ್‌ ಧರಿಸುತ್ತಿದ್ದರು. ಅವರು ಸಾಮಾನ್ಯ ಸಮವಸ್ತ್ರ ನಿಯಮ ಅನುಸರಿಸುತ್ತಿಲ್ಲ ಎಂದು ಹೇಳಿ ಹಿಜಬ್‌ಗೆ ಅನುಮತಿಸುತ್ತಿಲ್ಲ ಎಂದು

    ಇಷ್ಟು ವರ್ಷಗಳಿಂದ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಹಿಜಾಬ್‌ ಧರಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಏಕರೂಪತೆ ಅನುಸರಿಸಲು ಶಿರಸ್ತ್ರಾಣದ ಬಣ್ಣವನ್ನು ಸಹ ಸೂಚಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಶಕಗಳವರೆಗೆ ಯಾವುದೇ ವಿವಾದಗಳಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ವಿಭಜನ್‌ ಮತ್ತು ಕೋಮು ಭಾವನೆಗಳನ್ನು ಕೆರಳಿಸಲು ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮ ಹೇಳಿದಂತೆ ಮೈತುಂಬ ಬಟ್ಟೆ ಹಾಕುವುದು ತಪ್ಪಾ: ರಾಯರೆಡ್ಡಿ ಪ್ರಶ್ನೆ

    ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಹಕ್ಕು ಪ್ರಾಥಮಿಕ ಕಾಳಜಿಯಾಗಿರಬೇಕು. ಜನರ ನಡುವೆ ದ್ವೇಷ ಮತ್ತು ವಿಭಜನೆಯನ್ನು ಹರಡುವ ಯಾವುದೇ ಕ್ರಮವನ್ನು ಕಠಿಣ ಕ್ರಮಗಳೊಂದಿಗೆ ವ್ಯವಹರಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಮಧ್ಯಪ್ರವೇಶ ಅವಶ್ಯಕ ಎಂದು ಕೇಂದ್ರ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.

  • ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

    ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

    ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್.ಇ.ಪಿ ಸಹಾಯವಾಣಿ, ಉನ್ನತ ಶಿಕ್ಷಣ ಅಂತರಾಷ್ಟೀಕರಣ , 2021- 22 ನೇ ಸಾಲಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ ಡಾ: ಕೆ.ಕಸ್ತೂರಿರಂಗನ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

    ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಪಿ.ಸಿ.ಮೋಹನ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರು

  • ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ

    ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಚರ್ಚೆ ಇಲ್ಲದೆ ಬೊಮ್ಮಾಯಿ ಹೆಸರನ್ನು ಘೋಷಣೆ ಮಾಡಲಾಗಿದ್ದು, ಇದಕ್ಕೆ ಗೋವಿಂದ ಕಾರಜೋಳ ಅನುಮೋದನೆ ನೀಡಿದ್ದಾರೆ.

    ನಾಳೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪನವರ ರಾಜೀನಾಮೆಯಿಂದಾಗಿ ಸಂಪುಟ ವಿಸರ್ಜನೆಯಾಗಿದ್ದು, ಯಾರಿಗೆ ಲಕ್? ಯಾರಿಗೆ ಶಾಕ್ ಎದುರಾಗುತ್ತೆ ಅನ್ನೋದರ ಬಗ್ಗೆ ಕುತೂಹಲ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.

    ಇಂದು ಸಂಜೆ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಈ ಹೆಸರನ್ನು ಅಂತಿಮಗೊಳಿಸಲಾಯಿತು. ಸೋಮವಾರ ಬಿಜೆಪಿ ಸರ್ಕಾರ ರಚನೆಯಾದ ಎರಡು ವರ್ಷದ ಸಂಭ್ರಮಾಚರಣೆಯಲ್ಲಿಯೇ ಬಿ.ಎಸ್.ಯಡಿಯೂರಪ್ಪ ಅವರು ಗದ್ಗದಿತರಾಗಿಯೇ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿ, ತದನಂತರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದರು.

    ಆ ಬಳಿಕದಿಂದ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿತ್ತು. ಮುಂದಿನ ಸಿಎಂ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ರಾಜ್ಯಕ್ಕೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಅವರನ್ನು ಕಳುಹಿಸಿತ್ತು. ಇದಕ್ಕೂ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಹಂಗಾಮಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ತದನಂತರ ನೇರವಾಗಿ ಕ್ಯಾಪಿಟಲ್ಸ್ ಹೋಟೆಲ್ ನಲ್ಲಿಯ ಸಭೆಗೆ ಹಾಜರಾಗಿದ್ರು.

    ಇನ್ನು ವೀಕ್ಷಕರಾಗಿ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಸಹ ಮೊದಲಿಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ವೀಕ್ಷಕರ ಜೊತೆಯಲ್ಲಿಯೇ ಯಡಿಯೂರಪ್ಪ ಶಾಸಕಾಂಗ ಸಭೆಗೆ ಆಗಮಿಸಿದರು. ಕಾರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಯಡಿಯೂರಪ್ಪ ವಿಜಯದ ಸಂಕೇತ ತೋರಿಸಿ ಮುಗಳ್ನಗೆ ಬೀರಿ ಸಭೆಗೆ ಹೋದರು. ಇದೀಗ ಈ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು.