Tag: ಧರ್ಮೇಂದ್ರ ಕುಮಾರ್ ಮೀನಾ

  • ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

    ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

    ಬೆಂಗಳೂರು: ಕೃಷಿ ಮಸೂದೆ ವಿರುದ್ಧ ಭಾರತ್ ಬಂದ್‍ಗೆ ಕರೆಕೊಟ್ಟಿರುವ ರೈತರು ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮೇಲೆ ಕಾರು ಹತ್ನಿಸಲು ಯತ್ನಿಸಿರುವ ಘಟನೆ ಗೊರಗುಂಟೆಪಾಳ್ಯದಲ್ಲಿ ನಡೆದಿದೆ.

    ಗೊರಗುಂಟೆ ಪಾಳ್ಯ ಜಂಕ್ಷನ್‍ನ ರಸ್ತೆಯಲ್ಲಿ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಟ್ರ್ಯಾಕ್ಟರ್ ನಲ್ಲಿ ರ್‍ಯಾಲಿ ಕೂಡ ನಡೆಯಿತು. ರ್‍ಯಾಲಿಯಲ್ಲಿ ಬರುತ್ತಿದ್ದ ರಾಜ್ಯ ರೈತ ಸಂಘದ ಬೋರ್ಡ್ ಇದ್ದ ಕಾರೊಂದು ಏಕಾಏಕಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಚಲಿಸಿದೆ. ಪರಿಣಾಮ ಕಾಲಿಗೆ ಗಾಯವಾಗಿದ್ದು, ಡಿಸಿಪಿ ಕುಂಟುತ್ತ ಸಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ರೈತರಿಂದ ವಿನೂತನ ಪ್ರತಿಭಟನೆ

    ಗೊರಗುಂಟೆ ಪಾಳ್ಯದಲ್ಲಿ ಭದ್ರತೆಗಾಗಿ 150 ಕ್ಕೂ ಹೆಚ್ಚು ಪೋಲಿಸರು, ಒಂದು ಕೆಎಸ್‌ಆರ್‌ಪಿಸಿ ತುಕಡಿ, ಬಿಎಂಟಿಸಿ ಬಸ್ ನ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಕಾಲಿನ ಮೇಲೆ ಕಾರ್ ಚಲಿಸಿದೆ. ಕೂಡಲೇ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಆಗಿದ್ದು, ಕಣ್ಣಿಗೆ ಕಸ ಬಿತ್ತು ಎಂದು ಕಾರ್ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ರಸ್ತೆ ತಡೆಗೆ ಬಂದಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

  • ಅಪ್ರಾಪ್ತೆಗೆ ಕಿಸ್ ಮಾಡಿ ಪರಾರಿ – ಎಫ್‍ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ

    ಅಪ್ರಾಪ್ತೆಗೆ ಕಿಸ್ ಮಾಡಿ ಪರಾರಿ – ಎಫ್‍ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಹಾಡಹಗಲೇ ನಾಲ್ವರು ಪುಂಡರ ಜೊತೆ ಬಂದಿದ್ದ ಓರ್ವ ಯುವಕ 16 ವರ್ಷದ ಅಪ್ರಾಪ್ತೆಯ ಮೇಲೆ ದಾಳಿ ನಡೆಸಿ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಚಿಕ್ಕಜಾಲ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಪ್ರಾಪ್ತೆ ಕಿರುಚಾಡ್ತಿದ್ದಂತೆ ಯುವಕ ಮುತ್ತು ಕೊಟ್ಟು ಪರಾರಿಯಾಗಿದ್ದ. ಮುತ್ತು ನೀಡಿದ್ದು ಅಲ್ಲದೇ ಸೋಮವಾರ ಒಬ್ಬಳೇ ಸಿಗು ಎಂದು ವಾರ್ನಿಂಗ್ ನೀಡಿದ್ದ. ಇದನ್ನೂ ಓದಿ: ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಎಫ್ ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿ. ದೂರು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರೋದು ಗೊತ್ತಾದ್ರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರಿಗೆ ಡಿಸಿಪಿ ಖಡಕ್ ಸೂಚನೆ ರವಾನಿಸಿದ್ದಾರೆ.

    ಈ ಘಟನೆ ಬಗ್ಗೆ ಸಂಪೂರ್ಣ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?