Tag: ಧರ್ಮಾಧಿಕಾರಿ

  • ಶಕ್ತಿ ಯೋಜನೆಗೆ ಸಿಕ್ಕ ಜನಮನ್ನಣೆಗೆ ಮೆಚ್ಚುಗೆ ಸೂಚಿಸಿ ಸಿಎಂಗೆ ಧರ್ಮಾಧಿಕಾರಿ ಪತ್ರ

    ಶಕ್ತಿ ಯೋಜನೆಗೆ ಸಿಕ್ಕ ಜನಮನ್ನಣೆಗೆ ಮೆಚ್ಚುಗೆ ಸೂಚಿಸಿ ಸಿಎಂಗೆ ಧರ್ಮಾಧಿಕಾರಿ ಪತ್ರ

     ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು (Dr. D.Veerendra Heggade) ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 14ನೇ ಬಜೆಟ್ (Budget) ನ ಫಲಶೃತಿಯನ್ನು ಶ್ಲಾಘಿಸಿ ಹಾಗೂ ಶಕ್ತಿ ಯೋಜನೆಗೆ ಸಿಕ್ಕಿರುವ ಜನ ಮನ್ನಣೆಗೆ ಮೆಚ್ಚುಗೆ ಸೂಚಿಸಿ ಹೆಗ್ಡೆಯವರು ಪತ್ರವನ್ನು ಬರೆದಿದ್ದಾರೆ.

    ಪತ್ರದಲ್ಲೇನಿದೆ..?: ಅನೇಕ ಯೋಜನೆಗಳ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಧರ್ಮಸ್ಥಳ (Dharmasthala) ಕ್ಷೇತ್ರಕ್ಕೆ ಬರುತ್ತಿರುವ ಭಕ್ತರು, ವಿಶೇಷವಾಗಿ ಮಹಿಳೆಯರು ನಿಮ್ಮ ಹೆಸರಿನಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕೆಂಪು ಸುಂದರಿ ಜಾಗಕ್ಕೆ ಹುಣಸೆ ಹಣ್ಣು ಎಂಟ್ರಿ- ಡಿಮ್ಯಾಂಡ್ ಬೆನ್ನಲ್ಲೇ ದರ ಏರಿಕೆ

    ಜೈನ ಸಮುದಾಯಕ್ಕೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಿರುವ ವಿಚಾರ ತಿಳಿದು ಇಡೀ ಸಮಾಜಕ್ಕೆ ಸಂತೋಷವಾಗಿದೆ. ಹೀಗಾಗಿ ಎಲ್ಲರ ಪರವಾಗಿ ಅಭಿನಂದನೆಗಳು. ಅವಕಾಶ ಇದ್ದಾಗ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗುವಂತೆ ಹೆಗ್ಡೆಯವರು ಪತ್ರದಲ್ಲಿ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (Dr.D Veerendra Heggade) ಯವರು ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯ ವಿಚಾರಿಸಿದರು.

    ಇಂದು ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಉಪಾಧ್ಯಕ್ಷ ಡಾ. ಸುರೇಂದ್ರ ಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ವೀರೇಂದ್ರ ಹೆಗ್ಗಡೆಯವರು ದೇವೇಗೌಡ (H.D Devegowda) ರ ಯೋಗಕ್ಷೇಮ ವಿಚಾರಿಸಿ ಶುಭ ಹಾರೈಸಿದರು. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್

    ಈ ಹಿಂದೆ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತಿತರರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾಧ್ಯಮ ಬಿಡುಗಡೆ ಮಾಡಿದ್ದ ಹೆಚ್‍ಡಿಡಿ, ಸ್ವಲ್ಪ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದ್ದರು. ಆದಕಾರಣ ಕೆಲ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಇನ್ನು ಕೆಲ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದರು.

    ಮನೆಯಿಂದಲೇ ನನ್ನೆಲ್ಲಾ ರಾಜಕೀಯ, ಸಂಸದೀಯ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲವು ದಿನಗಳ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದರು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ

    Live Tv
    [brid partner=56869869 player=32851 video=960834 autoplay=true]

  • ದೇವರು ಒಂದು ಅವಕಾಶ ಕೊಟ್ಟಿದ್ದಾನೆ- ರಾಜ್ಯಸಭೆ ನಾಮನಿರ್ದೇಶನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಸಂತಸ

    ದೇವರು ಒಂದು ಅವಕಾಶ ಕೊಟ್ಟಿದ್ದಾನೆ- ರಾಜ್ಯಸಭೆ ನಾಮನಿರ್ದೇಶನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಸಂತಸ

    ಬೆಂಗಳೂರು/ಮಂಗಳೂರು: ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿದೇರ್ಶನ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಜೊತೆ ಮಾತನಾಡಿದ ಖಾವಂದರು, ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ನಮ್ಮ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಹುಶಃ ಇದು ವಿಸ್ತಾರವಾಗಿ ಇಡೀ ದೇಶಕ್ಕೆ ತಲುಪುವ ಸಾಧ್ಯತೆ ಇದೆ ಎಂದರು.

    ಕಸ್ಟಮರ್ಸ್ ಸರ್ವಿಸ್ ಸೆಂಟರ್ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಏಜೆನ್ಸಿ ಇದೆ. ಈಗಾಗಲೇ ನಾವು 6 ಸಾವಿರ ಸೆಂಟರ್ ಮಾಡಿದ್ದೇವೆ. ಸರ್ಕಾರದ ಯೋಜನೆಯಲ್ಲಿ 600 ಕಾರ್ಯಕ್ರಮ ಇದೆ. ಅದು ಈ ಜನತೆಗೆ ಗೊತ್ತೇ ಇಲ್ಲ ಎಂದು ಹೇಳಿದರು.

    ರಾಸ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ ಎಂಬ ಯಾವುದೇ ಸುಳಿವು ನನಗೆ ಇರಲಿಲ್ಲ. ಪ್ರಧಾನಿಯವರು ಘೋಷಣೆ ಮಾಡುವ ಮೊದಲು ಒಬ್ಬರು ಕರೆ ಮಾಡಿ ನಿಮಗೆ ಈ ತರ ಒಂದು ಮೆಸೇಜ್ ಬರಬಹುದು ಅಂತ ಹೇಳಿದ್ರು ಅಷ್ಟೇ ಅಂದರು. ಯಾವತ್ತೂ ನಾನು ಯಾವುದರ ಹಿಂದೆ ಹೋದವನಲ್ಲ. ಬಂದಾಗೆಲ್ಲ ನಮ್ಮ ಕಾರ್ಯಕರ್ತರ ಸಂತಸ ಇಮ್ಮಡಿಯಾಗುತ್ತಿದೆ ಎಂದರು. ಇದನ್ನೂ ಓದಿ: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ಇದೇ ಸಂದರ್ಭದಲ್ಲಿ ಧರ್ಮ, ನ್ಯಾಯ, ಸಮಾಜ ಸೇವೆ ಇವುಗಳು ಒಂದು ಕಡೆ ನಡೆಯುತ್ತಿದ್ದಾಗ ಜನರ ಗಮನ ಸೆಳೆದೇ ಸೆಳೆಯುತ್ತಿದೆ ಅನ್ನೋದಕ್ಕೆ ನೀವೇ ಸಾಕ್ಷಿ ಎಂದು ಹೆಚ್.ಆರ್ ರಂಗನಾಥ್ ಅವರು ಹೇಳಿದರು. ಆಗ ಹೆಗ್ಗಡೆಯವರು ಬಹಳ ಸಂತೋಷವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಸದ್ಯ ಧರ್ಮಾಧಿಕಾರಿಗಳಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಕೇಂದ್ರ ಸರ್ಕಾರವು ಸಮಾಜ ಸೇವೆ ಕ್ಷೇತ್ರದಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ಕ್ರೀಡಾ ಕ್ಷೇತ್ರದಿಂದ ಕೇರಳದ ಮಾಜಿ ಅಥ್ಲಿಟ್ ಪಿಟಿ ಉಷಾ, ಸಿನಿಮಾ ಕ್ಷೇತ್ರದಿಂದ ಆಂಧ್ರಪ್ರದೇಶದ ಕೆ.ವಿ.ವಿಜಯೇಂದ್ರ ಪ್ರಸಾದ್ ಹಾಗೂ ಸಂಗೀತ ಕ್ಷೇತ್ರದಿಂದ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಟಿಲಿಂಗೇಶ್ವರ ಕ್ಷೇತ್ರದ ಧರ್ಮಾಧಿಕಾರಿ ವಿಧಿವಶ

    ಕೋಟಿಲಿಂಗೇಶ್ವರ ಕ್ಷೇತ್ರದ ಧರ್ಮಾಧಿಕಾರಿ ವಿಧಿವಶ

    ಕೋಲಾರ: ವಿಶ್ವ ವಿಖ್ಯಾತಿ ಪಡೆದ ಜಿಲ್ಲೆಯ ಕೋಟಿಶಿವಲಿಂಗ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸಾಂಭ ಶಿವಮೂರ್ತಿ(74) ಸ್ವಾಮೀಜಿ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ನಿಶ್ಯಕ್ತಿಯಿಂದ ಬಳಲುತ್ತಿದ್ದ ಶ್ರೀಗಳಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋಲಾರ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ಇಂದು ಲಕ್ಷಾಂತರ ಭಕ್ತರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯ ಅಲ್ಲದೇ ಹೊರ ರಾಜ್ಯಗಳಿಂದಲೂ ಅಪಾರ ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

    ಬೆಮೆಲ್ ಉದ್ಯೋಗ ತೊರೆದು 1979 ರಲ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದ ಶ್ರೀಗಳು ಕೋಲಾರದಲ್ಲಿ ಕೋಟಿ ಶಿವಲಿಂಗಗಳ ಸ್ಥಾಪನೆಗೆ ಮುಂದಾಗಿ, ವಿಶ್ವದಲ್ಲೇ ಎತ್ತರದ 108 ಅಡಿ ಲಿಂಗ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂದಿನಿಂದ ಗೋಪಲಾಪ್ಪನವರ ಸಾಂಭಶಿವ ಮೂರ್ತಿಗಳಾಗಿ ಪ್ರಪಂಚ ಪ್ರಸಿದ್ಧಿ ಪಡೆದು ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರ ಆಕರ್ಷಣೀಯ ಆಧ್ಯಾತ್ಮ ಕ್ಷೇತ್ರವನ್ನಾಗಿ ಮಾಡಿದ್ದರು.

    ಸಾಮೀಜಿಯವರು 1947 ಆಗಸ್ಟ್ 23 ರಂದು ಜನಿಸಿದ್ದು, ಪತ್ನಿ ರುಕ್ಮಿಣಿ, ಮಗ ಶಿವ ಪ್ರಸಾದ್, ಮಗಳು ಅನುರಾಧರನ್ನ ಅಗಲಿದ್ದಾರೆ. ಕೋಟಿಶಿವಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬ ವರ್ಗ ನಿರ್ಧರಿಸಿದ್ದು, ಬಲಿಜ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಮಗ ಶಿವಪ್ರಸಾದ್ ನೆರವೇರಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಬರಿಮಲೆಗೆ ಮಹಿಳೆಯರ ಪ್ರವೇಶ- ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ

    ಶಬರಿಮಲೆಗೆ ಮಹಿಳೆಯರ ಪ್ರವೇಶ- ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ

    ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.

    ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ನಿಯಮ ಇದೆ. ಮನೋನಿಗ್ರಹ, ಸಂಯಮದ ಪಾಲನೆ ವ್ರತದ ಹಿನ್ನೆಲೆಯಲ್ಲಿರುತ್ತೆ. ವ್ರತ ನಿಷ್ಠರು ಬ್ರಹ್ಮಚರ್ಯ ಪಾಲಿಸಬೇಕೆಂಬ ನೆಲೆಯಲ್ಲಿ ಮಹಿಳೆಯರು ಮಾಡಿದ ಆಹಾರವನ್ನೂ ಸೇವಿಸುವುದಿಲ್ಲ ಅಂದ್ರು.

    ಮಹಿಳೆಯರು ಶಬರಿಮಲೆ ಪ್ರವೇಶವನ್ನು ನಿರ್ಬಂಧಿಸೋದು ಬೇರೆ ವಿಚಾರ. ಆದ್ರೆ ಈ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿಕೊಳ್ಳಬೇಕು. ಹಾಗಂತ, ಮಹಿಳೆಯರು ದೇಗುಲಕ್ಕೆ ಹೋಗಬಾರದು ಅಂತಲ್ಲ. ಹೋದ್ರೆ ಏನಾಗುತ್ತೆ ಅನ್ನೋ ಪ್ರಶ್ನೆ ಏಳಬಹುದು. ಹೋದ್ರೆ ಏನೂ ಆಗಲ್ಲ. ಆದ್ರೆ ಅದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕು. ಈಗ ಶಬರಿಮಲೆಗೆ ಹೋಗುವ 48 ದಿವಸವನ್ನು 4 ದಿನಕ್ಕೆ ಮಾಡಿದ್ರು. ಅದನ್ನೂ ಬರೀ ಎರಡೇ ದಿವಸಕ್ಕೆ ವೃತ ಹಾಕಿ ಹೋದ್ರೂ ಆಗುತ್ತೆ ಅನ್ನೋದನ್ನು ಯಾರು ಮಾಡಿದ್ರು ಅಂತ ಪ್ರಶ್ನಸಿದ ಅವರು, ಇವೆಲ್ಲವೂ ಪರಿವರ್ತನೆ. ಇದು ತಪ್ಪು. 48 ದಿವಸಗಳ ಕಾಲ ತಣ್ಣೀರಲ್ಲಿ ಸ್ನಾನ ಮಾಡಿ, ಅವನು ಮನೋನಿಗ್ರಹ ಮಾಡಿಕೊಂಡು, ಅವನ ಆಹಾರದಲ್ಲಿ ಪಥ್ಯ ಮಾಡಿಕೊಳ್ಳಬೇಕು. ಈ ಮೂಲಕ ಆತನ ವ್ಯಕ್ತಿತ್ವದಲ್ಲಿ ತೇಜಸ್ಸನ್ನು ಹೆಚ್ಚಿಸಿಕೊಳ್ಳಬೇಕು. ಯಾರೂ 48 ದಿವಸದ ವೃತವನ್ನು ಮಾಡುತ್ತಾರೋ ಅವರಿಗೆ ಅದ್ಭುತವಾದ ತೇಜಸ್ಸು, ಶಕ್ತಿ ಬರುತ್ತದೆ ಅಂತ ಹೇಳಿದ ಅವರು, ಮೂಲ ಉದ್ದೇಶ ಉಳಿಸಿಕೊಂಡರೆ ಒಳ್ಳೆಯದು ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಕ್ಷೇತ್ರದ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವಂತಾಗಬಾರದು. ಸಾಂಪ್ರದಾಯಿಕ ಆಚರಣೆ ಕ್ಷೇತ್ರಕ್ಕೊಂದು ಸೌಂದರ್ಯ. ಇಂಥ ನಿಷೇಧ ಪದ್ಧತಿ ವಿದೇಶಗಳಲ್ಲೂ ಇರುವುದನ್ನು ಕಂಡಿದ್ದೇನೆ. ಭಕ್ತಿಯಿದ್ದರೆ ಕ್ಷೇತ್ರಕ್ಕೇ ಹೋಗಬೇಕಾಗಿಲ್ಲ. ಮನೆಯಲ್ಲಿಯೂ ದೇವರ ಆರಾಧನೆ ಮಾಡಬಹುದು ಅಂತ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಶಬರಿಮಲೆ ಪ್ರವೇಶ ವಿಚಾರದಲ್ಲಿ ಚರ್ಚೆ ನಡೀತಿರುವ ಮಧ್ಯೆ ಹೆಗ್ಗಡೆಯವರು ನೀಡಿದ ಪರಂಪರೆ ಉಳಿಸಿಕೊಳ್ಳಬೇಕೆಂಬ ಹೇಳಿಕೆ ಮಹತ್ವ ಪಡೆದಿದೆ.

    ನೂತನ ಮ್ಯೂಸಿಯಂಗೆ ಸಿಎಂ ಚಾಲನೆ:
    ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬುಧವಾರ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಧರ್ಮಸ್ಥಳದಲ್ಲಿ ನೂತನ ವಸ್ತುಸಂಗ್ರಹಾಲಯಕ್ಕೆ ಚಾಲನೆ ನೀಡಲಿದ್ದಾರೆ. ಹೊಸ ಕಟ್ಟಡದಲ್ಲಿ ನವೀಕರಣಗೊಂಡ ಮಂಜೂಷಾ ಮ್ಯೂಸಿಯಂನಲ್ಲಿ ಇತಿಹಾಸಪೂರ್ವ ವಸ್ತುಗಳನ್ನು ಜೋಪಾನ ಮಾಡಲಾಗಿದೆ. ವಿದೇಶ ಪ್ರವಾಸದ ವೇಳೆ ಸಂಗ್ರಹಿಸಿದ ಸಾವಿರಾರು ವಸ್ತುಗಳಿವೆ. 200 ವರ್ಷಗಳ ಹಿಂದಿನ ವಸ್ತುಗಳು ಸಂಗ್ರಹಾಲಯದಲ್ಲಿದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಹಾಸನ: ಮಠಗಳನ್ನು ಸರ್ಕಾರದ ಸುರ್ಪದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಧರ್ಮ ಬೇರೆ. ರಾಜಕಾರಣ ಬೇರೆ. ಎರಡನ್ನು ಒಟ್ಟಿಗೆ ನೋಡಬಾರದು ಎಂದಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಹಾಗೇನಾದ್ರು ಆದ್ರೆ ಅದಕ್ಕೆ ಸ್ಪಷ್ಟವಾಗಿ ವಿರೋಧಿಸುವುದು ನನ್ನ ಅಭಿಪ್ರಾಯ ಅಂತ ಹೇಳಿದ್ದಾರೆ.

    ಧರ್ಮಕ್ಕೆ ರಾಜಕಾರಣದ ಸೊಂಕು ತಗಲಬಾರದು. ಇದು ತಪ್ಪು. ಎಲ್ಲವನ್ನೂ ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ. ಇದು ಒಪ್ಪತಕ್ಕುದ್ದಲ್ಲ. ಇದಕ್ಕೆ ವಿರೋಧಿಸುವ ಮತ್ತು ಪ್ರತಿಭಟನೆ ಮಾಡುವ ಕುರಿತು ಬೇರೆ ರೀತಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.


    ರಾಜ್ಯದ ಮಠ, ದೇವಸ್ಥಾನ, ಧಾರ್ಮಿಕ ಸಂಸ್ಥೆಗಳೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದು, ಸರ್ಕಾರಕ್ಕೆ ಇನ್ನು 3 ತಿಂಗಳ ಅವಧಿ ಇರುವಾಗಲೇ ಆಪರೇಷನ್‍ಗೆ ಕೈ ಹಾಕಿಬಿಟ್ರಾ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಠಗಳು, ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಇವುಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ತರಲು ಕರಡು ರಚನೆಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ ಎನ್ನಲಾಗಿದೆ.

    ಜ.29ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ, 15 ದಿನದೊಳಗಾಗಿ ಸಾರ್ವಜನಿಕ ಅಭಿಪ್ರಾಯ, ಸಲಹೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೆ ಒಳಪಡಿಸಬೇಕೆ? ಬೇಡವೇ.? ಒಳಪಡಿಸಬೇಕಿದ್ರೆ ಎಷ್ಟರಮಟ್ಟಿಗೆ ಒಳಪಡಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಅಭಿಪ್ರಾಯ ಕೇಳಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.