Tag: ಧರ್ಮಸ್ಥಳ ಕೇಸ್‌

  • ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?

    ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?

    ಮಂಗಳೂರು: ರಾಜ್ಯವಷ್ಟೇ ಅಲ್ಲ ಇಡೀ ದೇಶದ ಕಣ್ಣು ಧರ್ಮಸ್ಥಳದತ್ತ (Dharmasthala) ನೆಟ್ಟಿತ್ತು. ವಿದೇಶಿ ಮಾಧ್ಯಮಗಳಲ್ಲೂ ಧರ್ಮಸ್ಥಳ ಕ್ಷೇತ್ರದ ಸುದ್ದಿ ಬಿತ್ತರವಾಗಿತ್ತು. ಧರ್ಮಸ್ಥಳದ ನೇತ್ರಾವತಿ ನದಿ ತೀರ, ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಕೈಯಲ್ಲಿ ಒಂದು ಬುರುಡೆ ಹಿಡ್ಕೊಂಡು ಪೊಲೀಸ್ ಠಾಣೆಗೆ ಬಂದ ಅಜಾನುಬಾಹು.. ಭೀಮ.. ಬುರುಡೆ ದಾಸ.. ಇದೀಗ ತಾನೇ ತೋಡಿದ ಗುಂಡಿಗೆ ಬಿದ್ದಿದ್ದಾನೆ.

    ಈ ಬುರುಡೆಯ ಹೆಣ ಹೂತಿದ್ದು ನಾನೇ.. ಧರ್ಮಸ್ಥಳದ ಸುತ್ತ ಮುತ್ತ ಇನ್ನೂ ನೂರಾರು ಹೆಣಗಳನ್ನು ಹೂತಿದ್ದೇನೆ ಅಂತ ಪೊಲೀಸರ ಮುಂದೆ‌ ಸ್ಕ್ರೀನ್‌ ಪ್ಲೇ ಮಾಡಿದ್ದ. ನಾನು ಶವಗಳನ್ನು ಹೂತಿಟ್ಟ ಜಾಗ ನನಗೆ ಗೊತ್ತು. ತೋರಿಸ್ತೀನಿ ಅಂತ ಕಲರ್ ಕಲರ್ ಕತೆ ಕಟ್ಟಿದ್ದ. ಸುಳ್ಳನ್ನು ತಲೆ ಮೇಲೆ ಹೊಡ್ದಂತೆ ಇಲ್ಲೇ ಹೂತಿಟ್ಟಿದ್ದೀನಿ ಅಂತ ಸ್ಥಳಗಳನ್ನು ಗುರುತಿಸಿದ್ದ. ಈಗ ಬುರೆಡೆ ಚಿನ್ನಯ್ಯನ ಬಂಡವಾಳವನ್ನ ಎಸ್‌ಐಟಿ ಪೊಲೀಸರು ಹೊರಗೆಳೆದಿದ್ದಾರೆ. ತೀವ್ರ ವಿಚಾರಣೆ ಬಳಿಕ ಆತನನ್ನ ಬಂಧಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರದ (Government Of Karnataka) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ರಚನೆ ಮಾಡಿದಾಗಿನಿಂದ ಈವರೆಗೆ ಏನೇನಾಯ್ತು ಅನ್ನೋದರ ಇಂಚಿಂಚೂ ಮಾಹಿತಿಯನ್ನ ತಿಳಿಯಬೇಕಿದ್ರೆ ಮುಂದೆ ಓದಿ…

    ಟೈಮ್‌ ಲೈನ್‌ ಹೇಗಿದೆ?
    ಜುಲೈ 11- ಬುರುಡೆ ಸಮೇತ ಪೊಲೀಸರ ಮುಂದೆ ಹಾಜರಾಗಿದ್ದ ಮುಸುಕುಧಾರಿ. ಇದಕ್ಕೂ ಮುನ್ನ ಜುಲೈ ಮೊದಲ ವಾರದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪತ್ರವೊಂದು ವೈರಲ್‌ ಆಗಿತ್ತು. ʻಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಗಳನ್ನು ಹೂತು ಹಾಕಿದ್ದ ವ್ಯಕ್ತಿ ಶರಣಾಗತಿಗೆ ಸಿದ್ಧನಾಗಿದ್ದಾನೆʼ ಎಂದು ಹೇಳುವ ಪತ್ರ ವೈರಲ್ ಆಗಿತ್ತು. ಆ ಬಳಿಕ ಪ್ರಕರಣದ ತೀವ್ರತೆ ಹೆಚ್ಚಾಯಿತು.
    ಜುಲೈ 18- ಎಸ್‌ಐಟಿ ರಚನೆಗೆ ಮನವಿ ಮಾಡಿದ್ದ ದೂರುದಾರ
    ಜುಲೈ 19- ಎಸ್‌ಐಟಿ ರಚನೆ ಮಾಡಿದ್ದ ಸರ್ಕಾರ
    ಜುಲೈ 25- ಮಂಗಳೂರಿಗೆ ಆಗಮಿಸಿದ್ದ ಎಸ್‌ಐಟಿ ತಂಡ
    ಜುಲೈ 26, 27ರಂದು ದೂರುದಾರನ ವಿಚಾರಣೆ
    ಜುಲೈ 27- ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ ಓಪನ್
    ಜುಲೈ 28- ದೂರುದಾರನ ಜೊತೆ ಸ್ಥಳ ಮಹಜರು ಪ್ರಕ್ರಿಯೆ ಆರಂಭ
    ಜುಲೈ 28- ನೇತ್ರಾವತಿ ಸ್ನಾನಘಟ್ಟದಲ್ಲಿ 13 ಸ್ಥಳಗಳನ್ನು ಗುರುತಿಸಿದ ದೂರುದಾರ
    ಜುಲೆ 29- ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ
    ಜುಲೈ 30- ಪಾಯಿಂಟ್ ನಂ.2, 3, 4ರಲ್ಲಿ ಕಾರ್ಯಾಚರಣೆ
    ಜುಲೈ 31- 6ನೇ ಪಾಯಿಂಟ್ ಉತ್ಖನನ ವೇಳೆ ಎಲುಬುಗಳು ಪತ್ತೆ
    ಆಗಸ್ಟ್ 1- 5ನೇ ದಿನದ ಕಾರ್ಯಾಚರಣೆ 7,8ನೇ ಸ್ಥಳದಲ್ಲಿ ಉತ್ಖನನ
    ಆಗಸ್ಟ್ 2- ದೂರುದಾರ ಗುರುತಿಸಿದ 9ನೇ ಸ್ಥಳದಲ್ಲಿ ಉತ್ಖನನ.
    ಆಗಸ್ಟ್ 4- ಕಾಡಿನ ಪ್ರದೇಶಕ್ಕೆ ಕರೆದೊಯ್ದ ದೂರುದಾರ
    ಆಗಸ್ಟ್ 5- 11ನೇ ಸ್ಥಳದಲ್ಲಿ ಅಗೆಯುವಿಕೆ ಸಿಗದ ಕುರುಹು
    ಆಗಸ್ಟ್ 6- ಧರ್ಮಸ್ಥಳದ ಗ್ರಾಮ ಪಂಚಾಯ್ತಿಯಿಂದ ದಾಖಲೆ ಪಡೆದುಕೊಂಡ ಎಸ್‌ಐಟಿ
    ಆಗಸ್ಟ್ 6- ಎಸ್‌ಐಟಿ ಮುಂದೆ ಬಂದ ಮೂರನೇ ದೂರುದಾರ
    ಆಗಸ್ಟ್ 6- ಮಾಸ್ಕ್‌ ಮ್ಯಾನ್ ‌ಹೂತುಹಾಕುತ್ತಿದ್ದ ಸ್ಥಳಗಳನ್ನು ನೋಡಿದ್ದೇನೆ ಎಂದಿದ್ದ
    ಆಗಸ್ಟ್ 8- ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದ ಎಸ್‌ಐಟಿ ತಂಡ
    ಆಗಸ್ಟ್ 9- ಎರಡನೇ ದೂರುದಾರ ಜಯಂತ್ ಟಿ. ಮಾಹಿತಿ ಕಲೆ ಹಾಕಿದ ಎಸ್‌ಐಟಿ
    ಆಗಸ್ಟ್ 9- ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಸಂಬಂಧ 6 ಮಂದಿ ಬಂಧನ
    ಆಗಸ್ಟ್ 11- ಜಿ.ಪಿ.ಆರ್ ಯಂತ್ರ ಬಳಸಲು ಮುಂದಾದ ಎಸ್‌ಐಟಿ.
    ಆಗಸ್ಟ್ 12- 13ನೇ ಸ್ಥಳದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ, ಸಿಗದ ಕುರುಹು
    ಆಗಸ್ಟ್ 14- ರಿಂದ ಮುಸುಕುಧಾರಿಯ ನಿರಂತರ ವಿಚಾರಣೆ
    ಆಗಸ್ಟ್‌ 23- ತೀವ್ರ ವಿಚಾರಣೆ ಬಳಿಕ ಮುಸುಕುಧಾರಿಯ ಬಂಧನ, 10 ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಕೋರ್ಟ್‌, ʻಧೂತʼ ಸಮೀರ್‌ ಬಳ್ಳಾರಿ ಮನೆಗೆ ಪೊಲೀಸ್‌ ನೋಟಿಸ್‌.

  • ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್

    ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್

    – ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿಜಯ ಸಂಭ್ರಮ

    ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ (Dharmasthala Mass Burials) ಎಂದು ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ (Mask Man) ಚಿನ್ನಪ್ಪ ಅಲಿಯಾಸ್ ಚೆನ್ನನನ್ನು ಎಸ್‌ಐಟಿ (SIT) ಬಂಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೀರೇಂದ್ರ ಹೆಗ್ಗಡೆಯವರು (Veerendra Heggade) ಈ ಮೊದಲು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗಿದೆ.

    ಹೌದು, ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಭಕ್ತರು ಧರ್ಮ ವಿಜಯ ಆಚರಿಸುತ್ತಿದ್ದಾರೆ. ಈ ಬೆನ್ನಲ್ಲೇ ವೀರೇಂದ್ರ ಹೆಗ್ಗಡೆಯವರು ಅಣ್ಣಪ್ಪ ಸ್ವಾಮಿಯ (Annappa Swamy) ಪವಾಡದ ಬಗ್ಗೆ ಈ ಮೊದಲು ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಎಂಬ ಹೆಗ್ಗಡೆಯವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    ಹೆಗ್ಗಡೆಯವರು ಹೇಳಿದ್ದೇನು?
    ಧರ್ಮಸ್ಥಳದಲ್ಲಿ ಮಂಜುನಾಥ ಅನುಗ್ರಹ ನೀಡುವ ದೇವರು. ಮಂಜುನಾಥನಿಗೆ ಕೋಪ ಬರಲ್ಲ, ಆದ್ರೆ ಅಣ್ಣಪ್ಪ ಸ್ವಾಮಿ ಕೋಪಿಷ್ಟ. ಅನ್ಯಾಯಿಗಳನ್ನು ಅಧರ್ಮಿಗಳನ್ನು ಶಿಕ್ಷಿಸದೇ ಅಣ್ಣಪ್ಪ ಬಿಡಲ್ಲ. ಧರ್ಮದೇವತೆಗಳ ಬಂಟ ಅಣ್ಣಪ್ಪ ಸ್ವಾಮಿಯ ಪವಾಡವಿದು. ಅಣ್ಣಪ್ಪ ಸ್ವಾಮಿ ಧರ್ಮಸ್ಥಳ ದೇಗುಲದ ಕಾವಲುಗಾರ ಅನ್ನೋ ನಂಬಿಕೆಯಿದೆ ಎಂದು ಈ ಹಿಂದೆ ಹೆಗ್ಗಡೆಯವರು ಹೇಳಿದ್ದರು. ಇದನ್ನೂ ಓದಿ: 10 ದಿನಗಳ ಎಸ್‌ಐಟಿ ಕಸ್ಟಡಿಗೆ ಬುರುಡೆ ಚಿನ್ನಯ್ಯ

  • ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    -ಹಿಂದೂಗಳನ್ನು ಟಾರ್ಗೆಟ್ ಮಾಡೋದು ಸಿಎಂ, ಸಿಎಂ ಸಂಪುಟದ ಕೆಲಸ
    -ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು

    ಬೆಂಗಳೂರು: ಮುಸುಕುಧಾರಿ (Mask Man) ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.

    ಎಸ್‌ಐಟಿಯಿಂದ (SIT) ಮಾಸ್ಕ್ ಮ್ಯಾನ್ ಬಂಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ ಆದಾಗಿನಿಂದ ಷಡ್ಯಂತ್ರ ಅಂತ ಹೇಳಿದ್ದೆವು. ಸರ್ಕಾರ ಆತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವಪರಿತೆ ನೋಡದೆ ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ ಎಸ್‌ಐಟಿ ಮಾಡಿದ್ರು. ಎಸ್‌ಐಟಿ ತನಿಖೆಯಿಂದ ಬುರುಡೆ ಬಂತು ಅಷ್ಟೇ. ಸಿಎಂ ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೊಡಲು ಆಗುತ್ತಾ? ಈ ಸರ್ಕಾರದ ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸುಕುಧಾರಿ ಬಂಧನ ಆಗಿರೋದು ನಿಜ, ಇದರ ಹಿಂದಿರುವ ಜಾಲವನ್ನ ಪತ್ತೆ ಮಾಡಲಾಗುವುದು: ಪರಮೇಶ್ವರ್‌

    ಅನನ್ಯ ಭಟ್‌ದು ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಇದರ ಸೂತ್ರಧಾರ. ಎಲ್ಲರನ್ನು ಜೊತೆಗಾರ ಮಾಡಿಕೊಳ್ಳುತ್ತಾನೆ, ಪ್ರಗತಿ ಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ, 25 ದಿನ ಮಾಸ್ಕ್ ಮ್ಯಾನ್‌ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು, ಯಾಕೆ ಕೊಟ್ರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ

    ಮಂಜುನಾಥ್‌ನನ್ನ ಅವಹೇಳನ ಮಾಡಬೇಕು, ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರುತ್ತಾರೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು? ಬೇಕಾದ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದರೂ ಮಸೀದಿ ಅಗೆದ್ರಾ? ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ ಬ್ಯಾಂಕ್‌ಗೆ ಮಾತಾಡ್ತಿದ್ದಾರೆ ಅಷ್ಟೇ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ಟರು. ತನಿಖೆಗೆ ಕೊಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರು ಕೊಡ್ತಾರೆ? ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು. ನಾನೇ ಮಾತಾಡಿದ್ದೇ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಂಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯಿದೆ – ರಕ್ಷಣೆ ಕೊಡಿ ಅಂತಾ ಪೊಲೀಸರಿಗೆ ಸುಜಾತ ಭಟ್ ಮನವಿ

    ಮಾಸ್ಕ್ ಮ್ಯಾನ್‌ಗೆ ಆಮಿಷವೊಡ್ಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ನೋಡಿದ್ರೆ ಪಾಪ ಅನ್ನಿಸುತ್ತೆ. ಇವರ ಹಿಂದೆ ಯಾರು ಇದ್ದಾರೆ ಅಂತ ತಿಳಿಯೋಕೆ ಎಸ್‌ಐಟಿ ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರೋ ಮನಸ್ಸು ಇದ್ದರೆ ಎಸ್‌ಐಟಿ ತನಿಖೆ ಮಾಡಿ, ಎನ್‌ಐಎಗೆ ತನಿಖೆ ಕೊಡಿ. ಇವರು ಎನ್‌ಐಎಗೆ ಕೊಡಲಿಲ್ಲ ಅಂದರೆ ಕಾಂಗ್ರೆಸ್ ಪಾತ್ರ ಇದೆ ಅಂತ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪರ ಧ್ವನಿ ಎತ್ತಿದವ್ರನ್ನ ಹೇಗೆ ಮಟ್ಟಹಾಕಬೇಕೆಂದು ಮಟ್ಟಣ್ಣನವರ್ ಪ್ಲ್ಯಾನ್ ಮಾಡ್ತಿದ್ರು: ಸೂಲಿಬೆಲೆ

    ಅನನ್ಯ ಭಟ್ ಕಳೆದು ಹೋಗಿದ್ದಾರೆ ಅಂತ ತನಿಖೆ ಮಾಡಿದ್ರೆ ಗೊತ್ತಾಗುತ್ತಿತ್ತು, ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ರು. ಕೇವಲ ಬುರುಡೆ ಹುಡುಕಿ ಅಂತ ಬಿಟ್ಟಿದ್ರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರೋರನ್ನು ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರೋನು ಮಾಡಿರೋದಾ? ಬೇರೆ ದೇಶದಲ್ಲಿ ಇರೋನು ಮಾಡಿರೋದಾ? ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. ಎಸ್‌ಐಟಿ ಆಗಲಿ ಇಲ್ಲ. ಎನ್‌ಐಎ ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ ಎನ್‌ಐಎಗೆ ಕೊಟ್ಟು ಬಿಡಲಿ ಎಂದರು. ಇದನ್ನೂ ಓದಿ: ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

    ಸಮೀರ್ ಏಕಾಏಕಿ ಹೇಗೆ ಬಂದ? ಧರ್ಮಸ್ಥಳದ ಬಗ್ಗೆ ಮಾತಾಡ್ತಾನೆ. ಕಾಂಗ್ರೆಸ್ ಸರ್ಕಾರ ತಾಳಮೇಳ ಹೊಡೆದುಕೊಂಡು ಬಂದ್ರು. ಈಗ ಸರ್ಕಾರಕ್ಕೆ ಮಂಗಳಾರತಿ ಆಯಿತು ಎಂದು ಟೀಕಿಸಿದರು. ಇದನ್ನೂ ಓದಿ: ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು

  • ಮುಸುಕುಧಾರಿ ಬಂಧನ ಆಗಿರೋದು ನಿಜ, ಇದರ ಹಿಂದಿರುವ ಜಾಲವನ್ನ ಪತ್ತೆ ಮಾಡಲಾಗುವುದು: ಪರಮೇಶ್ವರ್‌

    ಮುಸುಕುಧಾರಿ ಬಂಧನ ಆಗಿರೋದು ನಿಜ, ಇದರ ಹಿಂದಿರುವ ಜಾಲವನ್ನ ಪತ್ತೆ ಮಾಡಲಾಗುವುದು: ಪರಮೇಶ್ವರ್‌

    – ಎಸ್‌ಐಟಿ ಮುಖ್ಯಸ್ಥರಿಂದ ಪಿನ್‌ ಟು ಪಿನ್‌ ಡೀಟೇಲ್ಸ್ ಪಡೆದ ಗೃಹಸಚಿವರು

    ಮಂಗಳೂರು/ಉಡುಪಿ: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮುಸುಕುಧಾರಿ ಬಂಧನ ಆಗಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಖಚಿತಪಡಿಸಿದ್ದಾರೆ.

    ಮಾಸ್ಕ್ ಮ್ಯಾನ್ ಬಂಧನ ಆಗಿರುವುದು ನಿಜ. ಆತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಅಧಿಕಾರಿಗಳು ತನಿಖೆ (SIT Investigation) ಮುಂದುವರಿಸುತ್ತಾರೆ. ಹೆಚ್ಚಿನ ಮಾಹಿತಿ ಎಸ್‌ಐಟಿಯಿಂದ ಪಡೆಯುತ್ತೇನೆ. ಇದರ ಹಿಂದೆ ಯಾವ ಜಾಲ ಇದೆ ಅನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ

    ಮುಂದುವರಿದು.. ಎಸ್‌ಐಟಿ ತನಿಖೆಯ ಮುಕ್ತಾಯ ಆಗುತ್ತಾ ಅಂತ ಹೇಳಲು ಬರುವುದಿಲ್ಲ. ಜೊತೆಗೆ ಬಂಧಿತನಿಗೆ ಮಂಪರು ಪರೀಕ್ಷೆ ಮಾಡಬೇಕಾ? ಬೇಡವಾ ಅನ್ನೋದು ಎಸ್‌ಐಟಿ ನಿರ್ಧಾರ ಮಾಡುತ್ತೆ. ಅಲ್ಲದೇ ಸುಜಾತ ಭಟ್ ವಿಚಾರ ಕೂಡ ತನಿಖೆಯಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾವುದೇ ವಿಚಾರ ಬಹಿರಂಗಗೊಂಡರೆ ಎಸ್‌ಐಟಿ ಟಿತನಿಖೆಗೆ ಅಡ್ಡಿಯಾಗುತ್ತದೆ. ಯಾವುದನ್ನೂ ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ್ದ ಚಿನ್ನಯ್ಯ

    ಬಿಜೆಪಿಯವರು ಅನೇಕ ಆರೋಪಗಳನ್ನ ಮಾಡಬಹುದು. ಬೇರೆ ಬೇರೆ ರೀತಿಯ ಹೇಳಿಕೆಗಳು ಬರಬಹುದು. ಹೇಳಿಕೆಗಳ ಆಧಾರದಲ್ಲಿ ತನಿಖೆ ಮಾಡಲು ಆಗಲ್ಲ. ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸುವವರಿಗೆ ಏನು ಹೇಳಲು ಆಗಲ್ಲ. ಯಾವ ಸೆಕ್ಷನ್‌ನಲ್ಲಿ ಬಂಧಿಸಲಾಗಿದೆ ಅನ್ನುವುದು ಎಸ್‌ಐಟಿಯವರಿಗೆ ಗೊತ್ತು. ದೂರುದಾರನ ಹೇಳಿಕೆ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ್ದೆವು. ಆದ್ರೆ ಎಸ್‌ಐಟಿ ಹೇಳಿದ್ದೆಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಂಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯಿದೆ – ರಕ್ಷಣೆ ಕೊಡಿ ಅಂತಾ ಪೊಲೀಸರಿಗೆ ಸುಜಾತ ಭಟ್ ಮನವಿ

    ಇದಕ್ಕೂ ಮುನ್ನ ಮಂಗಳೂರು ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಅವರಿಂದ ಮಾಹಿತಿ ಪಡೆದರು. ಬುರುಡೆ ಚಿನ್ನಯ್ಯನ ವಿಚಾರಣೆ ಹಾಗೂ ನಾಲ್ಕು ದಿನದ ಬೆಳವಣಿಗೆ ಬಗ್ಗೆ ಪಿನ್‌ ಟು ಪಿನ್‌ ಡೀಟೇಲ್ಸ್ ಪಡೆದರು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕುಮಾರ್, ಎಸ್‌ಐಟಿ ಟೀಮ್‌ನ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಇದನ್ನೂ ಓದಿ: ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

  • ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ

    ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ

    ಮಂಗಳೂರು: ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂದು ಮಾಸ್ಕ್ ಮ್ಯಾನ್ (Mask Man) ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

    ಧರ್ಮಸ್ಥಳದಲ್ಲಿ ಉತ್ಖನನ (Dharmasthala Mass Burials Case) ನಿಲ್ಲಿಸಿ ಮಾಸ್ಕ್ ಮ್ಯಾನ್‌ನನ್ನೇ ವಿಚಾರಣೆ ನಡೆಸಿದ್ದ ಎಸ್‌ಐಟಿ (SIT) ಅಧಿಕಾರಿಗಳು, ಆತ ಹೇಳಿದ್ದೆಲ್ಲಾ ಬುರುಡೆ ಎಂದು ಕನ್ಫರ್ಮ್ ಆದ ಬಳಿಕ ಮಾಸ್ಕ್ ಮ್ಯಾನ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಸತ್ಯದ ಅನಾವರಣವಾಗಿದೆ. ನನಗೆ ಈ ರೀತಿ ಹೇಳಲು ಹೇಳಿದ್ರು, ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್‌ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಮಾಸ್ಕ್ ಮ್ಯಾನ್ ಚೆನ್ನ ಹೇಳಿದ್ದಾನೆ. ಇದನ್ನೂ ಓದಿ: ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಸಮೀರ್‌ಗೆ ಈಗ ಬಂಧನ ಭೀತಿ

    ಸದ್ಯ ಆರೋಪಿ ಚೆನ್ನನಿಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಯುತ್ತಿದ್ದು, ಬಳಿಕ ಆತನನ್ನು ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: Dharmasthala Case | ಎಸ್‌ಐಟಿಯಿಂದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಅರೆಸ್ಟ್‌

    ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮಾಸ್ಕ್ ಮ್ಯಾನ್ ವಿರುದ್ಧವೇ ರಿವರ್ಸ್ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು. ಇದನ್ನೂ ಓದಿ: ಭಾರತದ ರಾಯಭಾರಿಯಾಗಿ ಟ್ರಂಪ್ ಆಪ್ತ ಸಹಾಯಕ ಸೆರ್ಗಿಯೊ ಗೋರ್ ನೇಮಕ

    ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮಾಸ್ಕ್ ಮ್ಯಾನ್ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

  • ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಬೆಂಗಳೂರು/ಮಂಗಳೂರು: ಧರ್ಮಸ್ಥಳ ವಿಷಯದಲ್ಲಿ (Dharmasthala Case) ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ (YouTubers) ವಿದೇಶದಿಂದ ಹಣ (Foreign Fund) ಹರಿದುಬಂದಿದೆ ಅನ್ನೋ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿರೋ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಅಮಿತ್ ಶಾ (Amit Shah) ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬೆಂಗಳೂರಿನ ಇ.ಡಿ (ED) ಅಧಿಕಾರಿಗಳು ಈಗ ಯೂಟ್ಯೂಬರ್‌ಗಳ ಆದಾಯದ ಮೂಲ ಕೆದಕುತ್ತಿದ್ದಾರೆ.

    ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ದೇವಸ್ಥಾನದ ಪಾವಿತ್ರ್ಯತೆ ಉಳಿಸುವ ಸಲುವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಗತವಾಗಿ ನಾನು ಪತ್ರ ಬರೆದಿಲ್ಲ ಅಂದಿದ್ದಾರೆ. ಇನ್ನು, ಶಾಸಕ ಭರತ್ ಶೆಟ್ಟಿ ಮಾತಾಡಿ, ಎನ್‌ಐಎ ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿಗೆ ದೂರು ಕೊಟ್ಟಿದ್ದಾರೆ. ಇನ್ನೊಂದೆಡೆ ಭಜರಂಗದಳ ಕಾರ್ಯಕರ್ತ ತೇಜಸ್ ಗೌಡ ಕೂಡ ಡಿಜಿ ಕಚೇರಿಯಲ್ಲಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

  • ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?

    ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?

    ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ (Sujatha Bhat) ಆಕೆಯ ಫೋಟೋ ಬಿಡುಗಡೆ ಮಾಡಿದ್ದರು. ಆದ್ರೇ ಈ ಫೋಟೋದ ಮೂಲವನ್ನು ಬೆನ್ನತ್ತಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.

    ನನ್ನ ಮಗಳು ಅನನ್ಯಾ ಭಟ್ (Ananya Bhat) ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, 2003ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಣೆಯಾಗಿದ್ದಳು. ಈ ಬಗ್ಗೆ ದೂರು ನೀಡಲು ಹೋದಾಗ ಅಂದಿನ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು ಎಂದೆಲ್ಲ ಸುಜಾತ ಭಟ್ ಆರೋಪ ಮಾಡಿದ್ದರು. ಇದನ್ನೂ ಓದಿ: ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?

    ನಾಪತ್ತೆಯಾಗಿದ್ದ ಮಗಳು ಅನನ್ಯಾ ಭಟ್ ಫೋಟೋ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಸುಜಾತ ಭಟ್ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು. ಆದರೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಮೊನ್ನೆಯಷ್ಟೇ ವಕೀಲರ ಸಮ್ಮುಖದಲ್ಲಿ ಸುಜಾತ ಭಟ್ ಬಿಡುಗಡೆ ಮಾಡಿದ್ದರು.

    ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದ ಸುಜಾತಾ ಭಟ್ ಬೆಂಗಳೂರಿನ ರಂಗಪ್ರಸಾದ್ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದರು. ಈ ರಂಗಪ್ರಸಾದ್ ಎಂಬುವವರ ಸೊಸೆಯೇ ವಾಸಂತಿ ಅನ್ನೋ ಸುದ್ದಿ ಈಗ ಹರಿದಾಡುತ್ತಿದೆ. ರಂಗಪ್ರಸಾದ್ ಅವರ ಪುತ್ರ ಶ್ರೀವತ್ಸ ಎಂಬುವವರ ಪತ್ನಿಯಾಗಿದ್ದ ವಾಸಂತಿ 2007ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ರು ಎನ್ನಲಾಗಿದೆ. ಇದೀಗ ರಂಗಪ್ರಸಾದ್ ಹಾಗೂ ಮಗ, ಸೊಸೆ ಎಲ್ಲರೂ ಸಾವನ್ನಪ್ಪಿದ್ದು, ವಾಸಂತಿ ಕಾಲೇಜು ದಿನಗಳ ಫೋಟೋವನ್ನು ಇಟ್ಟುಕೊಂಡಿದ್ದ ಸುಜತಾ ತನ್ನ ಮಗಳು ಎಂದು ಬಿಂಬಿಸೋಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಾಕು ಪ್ರಾಣಿಗಳಿಗಾಗಿ ಬ್ಲಡ್‌ ಬ್ಯಾಂಕ್‌ ನೆಟ್‌ವರ್ಕ್ – ಏನಿದು ಕೇಂದ್ರದ ಹೊಸ ಯೋಜನೆ?


    ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ 1999ರಿಂದ 2007ವರೆಗೆ ಸುಜಾತಭಟ್, ಪ್ರಭಾಕರ್ ಬಾಳಿಗ ಎಂಬುವರ ಜೊತೆಗೆ ಇದ್ದರೆಂದು ಹೇಳಲಾಗಿದೆ. ಆದ್ರೆ, ಇವರನ್ನು ಕಂಡ ನೆರೆ ಹೊರೆಯವರು ಹೇಳೋ ಪ್ರಕಾರ, ಅವರಿಗೆ ಮಕ್ಕಳೇ ಇರಲಿಲ್ಲ. ನಾಯಿಗಳನ್ನೇ ಮಕ್ಕಳಂತೆ ಸಾಕುತ್ತಿದ್ದರು ಅಂತ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಪ್ರಭಾಕರ್ ಬಾಳಿಗ ಸ್ನೇಹಿತರೂ ಕೂಡ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರವೂ ಸುಜಾತ ಭಟ್‌ಗೆ ಮಕ್ಕಳೇ ಇರಲಿಲ್ಲ.

    ಇನ್ನು, ಈ ಎಲ್ಲಾ ಆರೋಪ ಸಂಬಂಧ ಪಬ್ಲಿಕ್ ಟಿವಿಗೆ ಸುಜಾತಾ ಭಟ್ ಎಕ್ಸ್ಕ್ಲೂಸಿವ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ಹೇಳಿರುವುದೆಲ್ಲವೂ ಸತ್ಯ. ಅನನ್ಯಾ ಭಟ್ ಫೋಟೋವನ್ನೇ ನಾನು ತೋರಿಸಿದ್ದೇನೆ. ನನಗೆ ಮಕ್ಕಳಿದ್ದಾರೆ. ಅನಿಲ್ ಭಟ್ ಎಂಬುವವರ ಜೊತೆ ನಾನು ವಿವಾಹವಾಗಿದ್ದೆ. ನಮ್ಮಿಬ್ಬರಿಗೆ ಜನಿಸಿದ ಮಗಳೇ ಈ ಅನನ್ಯಾ ಭಟ್. ಇನ್ನು ವಾಸಂತಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ಒಟ್ಟಾರೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಬೆನ್ನತ್ತಿರುವ ಎಸ್‌ಐಟಿಗೆ ದಾಖಲಾಗ್ತಿರುವ ಪ್ರಕರಣಗಳು ಗೊಂದಲವಾಗಿಯೇ ಇದೆ.

  • ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala) ಅನಾಮಿಕನ ಮಂಪರು ಪರೀಕ್ಷೆ ಮಾಡುವಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur) ಆಗ್ರಹಿಸಿದ್ದಾರೆ.

    ವಿಧಾನ ಪರಿಷತ್ತಿನ ಶೂನ್ಯವೇಳೆ ಈ ವಿಷಯ ಪ್ರಸ್ತಾಪ ಮಾಡಿದ ಅವರು, ಕೂಡಲೇ ಸರ್ಕಾರ ಅನಾಮಿಕನ ಮಂಪರು ಪರೀಕ್ಷೆ ನಡೆಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವ್ರು ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರು ಬಳಕೆ ಮಾಡ್ತಿದ್ದಾರೆ – ಡಿಕೆಶಿ

    ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಬಳಿ 13 ಸ್ಥಳಗಳಲ್ಲಿ ಶವ ಹೂತು ಹಾಕಿರುವ ಬಗ್ಗೆ ಅನಾಮಿಕ ದೂರು ನೀಡಿದ ಮೇರೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ. ದೂರುದಾರನು ಗುರುತಿಸಿದ 13 ಸ್ಥಳಗಳಲ್ಲಿ ಕಳೇಬರವನ್ನು ಪತ್ತೆ ಹಚ್ಚುವ ಸಲುವಾಗಿ ಅಗೆಯಲು ಗುರುತಿಸಿದ 6ನೇ ಸ್ಥಳದಲ್ಲಿ ಮಾತ್ರ ಪುರುಷನ ಕಳೇಬರ ದೊರಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಆಧುನಿಕ ತಂತ್ರಜಾನವನ್ನು (ಜಿಪಿಆರ್) ಪ್ರಯೋಗಿಸಿದರೂ ಕೂಡ ಮಿಕ್ಕಿದ ಯಾವ ಸ್ಥಳದಲ್ಲೂ ಕಳೇಬರದ ಕುರುಹು ಸಿಕ್ಕಿರುವುದಿಲ್ಲ. ಸದರಿ ಅನಾಮಿಕ ದೂರು ನೀಡಿದ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅನಾಮಿಕನಿಗೆ ಮಂಪರು ಪರೀಕ್ಷೆ ಮಾಡಿ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದರು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಅದೇ ಸಮಯದಲ್ಲಿ, ಸಿಎಂ ಅವರು ಯಾವುದೇ ಕಾರಣಕ್ಕೂ ಸದರಿ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ನೀಡಿದ ಮರುದಿನವೇ ತರಾತುರಿಯಲ್ಲಿ, ಎಸ್‌ಐಟಿ ರಚಿಸಿದ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಮುನಿಯಪ್ಪ

    ಇದರಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಸರ್ಕಾರ ಹಿಂದೂ ವಿರೋಧಿ ಎಡಪಂಥೀಯರ ಒತ್ತಡಕ್ಕೆ ಮಣಿದಿರುವುದು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರ ಮಾಧ್ಯಮ ಹೇಳಿಕೆಯೂ ಕೂಡ ದೃಢೀಕರಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ರಾಜ್ಯದ ಸರ್ವಧರ್ಮೀಯರಿಗೂ ಆರೋಗ್ಯ ಮತ್ತು ಗ್ರಾಮಿಣಾಭಿವೃದ್ಧಿಯಲ್ಲಿ ಉನ್ನತ ಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ರಾಜ್ಯದ ಅಸಂಖ್ಯ ಕುಟುಂಬಗಳನ್ನು ಸಧೃಡಗೊಳಿಸುವ ಸೇವೆ ನೀಡಿ ಮಾದರಿಯಾಗಿದೆ ಎಂದು ವಿವರಿಸಿದ್ದಾರೆ.

    ನಮ್ಮ ಶ್ರದ್ಧಾ ಕೇಂದ್ರವನ್ನು ರಕ್ಷಿಸಲು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ದೂರುದಾರನಿಗೆ ಮಂಪರು ಪರೀಕ್ಷೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

  • ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ

    ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ

    – ಎಸ್‌ಐಟಿಗೆ ಷಡ್ಯಂತ್ರ ಅಂತ ಡಿಕೆಶಿ ಹೇಳಿಲ್ಲ
    – ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗ್ಬೇಕು ಎಂದ ಸಚಿವ

    ಬೆಂಗಳೂರು: ಧರ್ಮಸ್ಥಳ ಬಗ್ಗೆಯಾಗಲಿ ಅಥವಾ ಧರ್ಮಾಧಿಕಾರಿಯವರ ವಿರುದ್ಧ ಆಗಲಿ ಯಾರೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

    ವಿಧಾನಸೌಧ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ (Dharamasthala Case) ಎಸ್‌ಐಟಿ 14 ರಿಂದ 15 ಕಡೆ ಅಗೆದರೂ ಸಾಕ್ಷ್ಯ ಸಿಕ್ಕಿಲ್ಲ. ಧರ್ಮಸ್ಥಳ ಬಗ್ಗೆಯಾಗಲೀ, ಧರ್ಮಾಧಿಕಾರಿಯವರ ವಿರುದ್ಧ ಆಗಲೀ ಯಾರೂ ಇಲ್ಲ. ಒಂದು ಕ್ಲಾರಿಟಿ ಸಿಗಬೇಕು ಅಂತ ಎಸ್‌ಐಟಿ ರಚಿಸಲಾಗಿದೆ. ಇವತ್ತು ಪರಮೇಶ್ವರ್ ಅವರು ಸದನದಲ್ಲಿ ಅದರ ಬಗ್ಗೆ ಮಾತಾಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಬಿಜೆಪಿಯವರಿಗಿಂತಲೂ ಕಾಂಗ್ರೆಸ್‌ನಲ್ಲಿ ಧರ್ಮಸ್ಥಳದ ಭಕ್ತರಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವ್ರು ರಾಜಕೀಯ ಮಾಡ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗಬೇಕು. ಯೂಟ್ಯೂಬರ್‌ಗಳು ಅಪಪ್ರಚಾರ ಮಾಡ್ತಿದ್ದಾರೆ. ಇವರ ವಿರುದ್ಧ ಕೇಸ್ ಹಾಕಿ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ

    ಡಿಕೆಶಿವರು ಎಸ್‌ಐಟಿಗೆ (SIT) ಷಡ್ಯಂತ್ರ ಮಾಡಿದ್ದಾರೆ ಅಂದಿಲ್ಲ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡಿ ಅಪಪ್ರಚಾರ ಮಾಡ್ತಿದ್ದಾರೆ ಅಂತ ಹೇಳಿದ್ದರು. ಅವರ ಹೇಳಿಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅನಾಮಿಕ ವ್ಯಕ್ತಿ ಮೊದಲು 13 ಸ್ಥಳಗಳನ್ನು ತೋರಿಸಿದ್ದ. ಎಸ್‌ಐಟಿ ಅವರು 13 ಸ್ಥಳಗಳಲ್ಲಿ ಮಾತ್ರವೇ ಅಗೆಯಬೇಕಿತ್ತು. 17 ಕಡೆ ಬೇಡವಾಗಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ – ವಿಧಾನಸೌಧಕ್ಕೆ ಪೋಸ್ಟರ್ ಹಿಡಿದು ಬಂದ ಜೆಡಿಎಸ್ ಶಾಸಕ

    ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ – ವಿಧಾನಸೌಧಕ್ಕೆ ಪೋಸ್ಟರ್ ಹಿಡಿದು ಬಂದ ಜೆಡಿಎಸ್ ಶಾಸಕ

    ಬೆಂಗಳೂರು: ಜೆಡಿಎಸ್ (JDS) ಶಾಸಕ ಶರಣುಗೌಡ ಕಂದಕೂರ್ (Sharanagouda Kandakur) ʻಧರ್ಮಸ್ಥಳದ ಮಂಜುನಾಥನನ್ನು ರಕ್ಷಿಸಿʼ ಎಂಬ ಪೋಸ್ಟರ್‌ ಹಿಡಿದು ಬಂದಿದ್ದಾರೆ.

    ಸ್ವಾಮಿ ಮಂಜುನಾಥನನ್ನು ರಕ್ಷಿಸಿ, ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯಮೇವ ಜಯತೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಈ ಬಗ್ಗೆ ʻಪಬ್ಲಿಕ್‌ ಟಿವಿಗೆʼ ಪ್ರತಿಕ್ರಿಯಿಸಿರುವ ಶಾಸಕ, ಅಪಪ್ರಚಾರ ಮಾಡುವವರನ್ನು ಸರ್ಕಾರ ಶಿಕ್ಷಿಸದೇ ಇದ್ದರೇ, ಮಂಜುನಾಥನೇ ಶಿಕ್ಷಿಸುವ ಕಾಲ ಬರಲಿದೆ. ಸರ್ಕಾ ತೊಟ್ಟಿಲು ತೂಗಿ ಮಕ್ಕಳನ್ನು ಚಿವುಟುವ ಕೆಲಸ ಮಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಎಸ್‌ಐಟಿ ತನಿಖೆ ಎಷ್ಟು ದಿನದಿಂದ ತನಿಖೆ ನಡೆಸುತ್ತಿದೆ. ಇದೆಲ್ಲ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಅಂತ್ಯಹಾಡಬೇಕು. ಪಿತೂರಿಯ ಪಿತಾಮಹರ ವಿರುದ್ಧ ಕ್ರಮ ಆಗ್ಬೇಕು. ಅಪಪ್ರಚಾರ ನಿಲ್ಲಿಸಬೇಕು. ಸೌಜನ್ಯ ಪರವಾಗಿ ನಮ್ಮ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ (Investigation) ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ