Tag: ಧರ್ಮಸ್ಥಳ ಕೇಸ್‌

  • ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಕೇಸ್‌ಲ್ಲಿ ಎಸ್‌ಐಟಿ (SIT) ತನಿಖೆ ಪೂರ್ಣ ಮಾಡಲು ಸಮಯ ನಿಗದಿ ಮಾಡಿಲ್ಲ. ಎಸ್‌ಐಟಿ ತನಿಖೆ ನಡೆಸುವಾಗಲೇ ಎನ್‌ಐಎ (NIA) ತನಿಖೆಯೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ನಾವು ಹೇಳೋ ಹಾಗೇ ಇಲ್ಲ. ತನಿಖೆ ತ್ವರಿತವಾಗಿ ಆಗಲಿ ಅಂತ ಹೇಳಬಹುದು. ಎಸ್‌ಐಟಿಗೆ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ ಅದನ್ನ ಮಾಡ್ತಾರೆ. ಅದರಲ್ಲಿ ಅವರಿಗೆ ಬೇರೆ ಬೇರೆ ಮಾಹಿತಿ ಸಿಗುವ ಹಾಗಿದ್ದರೆ ಅವರೇ ತನಿಖೆ ಮಾಡಿಕೊಳ್ತಾರೆ. ಅದಕ್ಕೆ ನಾವು ಯಾವುದೇ ಡೈರೆಕ್ಷನ್ಸ್ ಕೊಡೋದಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ

    ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ಎಸ್‌ಐಟಿ ಅವರು ಡಿಸೈಡ್ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ? ಇಲ್ಲವಾ? ಹಾಗೂ ತನಿಖೆ ಮಾಡಬೇಕಾ? ಬೇಡವಾ? ಅಂತ ಎಸ್‌ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳೋಕೆ ಸಾಧ್ಯವಿಲ್ಲ. ಧರ್ಮಸ್ಥಳ ಕೇಸ್ (Dharmasthala Case) ತನಿಖೆ ಇಷ್ಟೇ ದಿನದಲ್ಲಿ ಮಾಡಿ ಅಂತ ಹೇಳಿಲ್ಲ. ಆದಷ್ಟೂ ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ. ಸಮಯ ನಿಗದಿ ಮಾಡೋಕೆ ಆಗೋದೇ ಇಲ್ಲ. ತನಿಖೆ ಹೇಗೆ ಹೋಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬೇಗ ಮುಗಿದರೆ ಬೇಗ ವರದಿ ಕೊಡ್ತಾರೆ. ತನಿಖೆ ಪೂರ್ತಿ ಮುಗಿಯುವವರೆಗೂ ಅವರು ತನಿಖೆ ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.

    ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಹೀಗೆ ಆಗುತ್ತೆ, ಆಗಬೇಕು, ನಾಳೆ ತನಿಖೆ ಮುಗಿಸಿ ಕೊಡಿ ಎಂದು ಹೇಳೋಕೆ ಆಗಲ್ಲ. ಯಾವುದೇ ತನಿಖೆಯಾದರೂ ಕೂಡ ನಾವು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ರಾಜಕೀಯಕ್ಕೆ ತಿರುಗಿದರೂ ಕೂಡ ನಾವು ಎಸ್‌ಐಟಿ ಅವರಿಗೆ ಮುಂದಿನ ವಾರ ಮುಗಿಸಿ, ವರದಿ ಕೊಡಿ ಎಂದು ಹೇಳೋಕಾಗಲ್ಲ ಎಂದಿದ್ದಾರೆ.

    ಎನ್‌ಐಎ ತನಿಖೆಗೆ ಕೊಡಿ ಎಂಬ ವಿಪಕ್ಷಗಳ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ತನಿಖೆಗೆ ಕೊಡಬೇಕಾದರೂ ಈಗ ಇಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯೋ ಬಗ್ಗೆ ಯಾರದ್ದು ತಕರಾರಿಲ್ಲ. ಎಸ್‌ಐಟಿ ತನಿಖೆ ಎಲ್ಲರೂ ಸ್ವಾಗತ ಮಾಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಅವರು ತನಿಖೆ ಸ್ವಾಗತ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ ಈ ಸಮಯದಲ್ಲಿ ಬೇರೆ ಏಜೆನ್ಸಿಯಿಂದ ತನಿಖೆ ಆಗತ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಎನ್‌ಐಎ ತನಿಖೆಗೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

    ಈವರೆಗೂ ಪ್ರಕರಣದಲ್ಲಿ ಯಾರನ್ನು ಬಂಧಿಸದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಗಳು ನಾನು, ನೀವು, ಬೇರೆಯವರು ಹೇಳಿದ ಹಾಗೆ ನಡೆಯುವುದಿಲ್ಲ. ಎಸ್‌ಐಟಿ ಅವರಿಗೆ ಅವರದ್ದೇ ಆದ ತನಿಖೆಯ ಕ್ರಮಗಳಿವೆ. ಅದನ್ನ ಅವರು ಮಾಡಿಕೊಳ್ತಾರೆ. ಸ್ಯಾಂಪಲ್ ತಂದು ಎಫ್‌ಎಸ್‌ಎಲ್‌ಗೆ ಕೊಟ್ಟಿದ್ದಾರೆ. ಅದರ ಮಾಹಿತಿ ಪಡೆಯಬೇಕು. ಅದರ ರಿಪೋರ್ಟ್ ಬರಬೇಕು. ಅದರ ಮೇಲೆ ಏನೇನು ಇರುತ್ತದೆ ಗೊತ್ತಿಲ್ಲ ಎಂದರು. ಇನ್ನೂ ದ್ವಾರಕನಾಥ್ ಎನ್‌ಐಎ, ಸಿಬಿಐಗೆ ಕೊಟ್ಟರೆ ಕೇಸ್ ಮುಚ್ಚಿ ಹೋಗುತ್ತದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದಿದ್ದಾರೆ.ಇದನ್ನೂ ಓದಿ: ದೆಹಲಿಯ ಕಲ್ಕಾಜಿ ದೇಗುಲದಲ್ಲಿ ಪ್ರಸಾದ ವಿಚಾರಕ್ಕೆ ಗಲಾಟೆ – 15 ವರ್ಷಗಳಿಂದ ಸೇವಕನಾಗಿದ್ದ ವ್ಯಕ್ತಿಯ ಹತ್ಯೆ

  • ಧರ್ಮಸ್ಥಳ ಬುರುಡೆ ಕೇಸ್ ಬೆಂಗಳೂರಿಗೆ ಲಿಂಕ್; ಬೆಂಗಳೂರಿನತ್ತ ಮಾಸ್ಕ್ ಮ್ಯಾನ್ ಚಿನ್ನಯ್ಯ

    ಧರ್ಮಸ್ಥಳ ಬುರುಡೆ ಕೇಸ್ ಬೆಂಗಳೂರಿಗೆ ಲಿಂಕ್; ಬೆಂಗಳೂರಿನತ್ತ ಮಾಸ್ಕ್ ಮ್ಯಾನ್ ಚಿನ್ನಯ್ಯ

    ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳ (Dharmasthala Case) ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು (Chinnayya) ಬೆಳ್ತಂಗಡಿಯಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

    ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮನೆಯೊಂದರಲ್ಲಿ ಸ್ಥಳ ಮಹಜರಿಗಾಗಿ ಆರೋಪಿಯನ್ನು ನಗರಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಭದ್ರತೆಗೆ ಮನವಿ ಮಾಡಲಾಗಿದೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    ಬೆಳ್ಳಂಬೆಳಗ್ಗೆ ಚಿನ್ನಯ್ಯನನ್ನು ಮಹಜರು ಟ್ರಾವೆಲ್‌ಗೆ ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಬಿಗಿಭದ್ರತೆಯಲ್ಲಿ ಚಿನ್ನಯ್ಯನನ್ನು ಕರೆದುಕೊಂಡು ಹೋಗಲಾಗಿದೆ.

    ಚಿನ್ನಯ್ಯ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವ ಕೆಲವು ಸ್ಥಳಗಳ ಮಹಜರಿಗೆ ಕರೆತರಲಾಗಿದೆ. ಎರಡು ಪೊಲೀಸ್ ವಾಹನದಲ್ಲಿ ಚಿನ್ನಯ್ಯನನ್ನು ಕರೆದುಕೊಂಡು ತಮಿಳುನಾಡು, ಮಂಡ್ಯ ಕಡೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈಗ ಧರ್ಮಸ್ಥಳ ಕೇಸ್‌ಗೆ ಬೆಂಗಳೂರು ಲಿಂಗ್ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಬೆಳ್ತಂಗಡಿಯಿಂದ ಬೆಂಗಳೂರಿನತ್ತ ಚಿನ್ನಯ್ಯನನ್ನು ಕರೆತರಲಾಗುತ್ತಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

  • ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    – SIT ವರದಿ ಬರೋವರೆಗೆ ಧರ್ಮಸ್ಥಳ ಕೇಸ್ ಬಗ್ಗೆ ಯಾರು ಮಾತಾಡಬಾರದು; ಸ್ಪೀಕರ್‌ ವಾರ್ನಿಂಗ್‌

    ಬೆಂಗಳೂರು: ಸಂವಿಧಾನ ಪ್ರಕಾರವಾಗಿ ದಸರಾ ಉದ್ಘಾಟನೆ ಬಗ್ಗೆ ಸರ್ಕಾರ ನಿರ್ಧಾರ ಸ್ವಾಗತ ಮಾಡಿದ್ರೆ ನಾವು ಅದನ್ನ ಒಪ್ಪಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷಗಳು ಮಾತಾಡಲಿ. ಸಂವಿಧಾನ ಬದ್ಧವಾಗಿ ಇದ್ಯಾ, ಇಲ್ವಾ ಅಂತ ಮಾತ್ರ ನಾವು ನೋಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಸಂವಿಧಾನದ ಪ್ರಕಾರ ಇದ್ದರೆ ಎಲ್ಲವನ್ನು ನಾವು ಒಪ್ಪಬೇಕು. ಸಂವಿಧಾನ ಪ್ರಕಾರ ಎಲ್ಲವೂ ಇದ್ದರೆ ಯಾವುದು ತಪ್ಪು ಅಲ್ಲ. ಸಂವಿಧಾಬ ಬದ್ಧವಾಗಿದ್ದರೆ ಯಾರೂ ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಧರ್ಮಸ್ಥಳ ಕೇಸ್‌ ಬಗ್ಗೆ ಯಾರೂ ಮಾತನಾಡಬಾರದು: ಸ್ಪೀಕರ್‌ ವಾರ್ನಿಂಗ್‌
    ಇದೇ ವೇಲೆ ಧರ್ಮಸ್ಥಳ ಕೇಸ್ ವಿಚಾರದ ಬಗ್ಗೆ ಮಾತನಾಡಿ, ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) SIT ತನಿಖಾ ವರದಿ ಬರೋವರೆಗೂ ಯಾರು ಕೂಡಾ ನ್ಯಾಯಾಧೀಶರು ಆಗಬಾರದು. ಸರ್ಕಾರ SIT ತನಿಖೆ ರಚನೆ ಮಾಡಿದೆ. ತನಿಖೆ ಆಗ್ತಿದೆ.SIT ತನಿಖೆ ಆಗೋವರೆಗೂ ನಾವು ನ್ಯಾಯಾಧೀಶರು ಆಗೋದು ಬೇಡ.ಕ್ಷೇತ್ರದ ಪಾವಿತ್ರ್ಯತೆ ನಮಗೆ ಮುಖ್ಯ ಎಂದರು.

    ಒಂದು ಶಿಕ್ಷಣ ಸಂಸ್ಥೆಯ ಗೌರವ ಉಳಿಯೋದು ಮುಖ್ಯ. ಒಂದು ಸಂಸ್ಥೆಯನ್ನ ಕಟ್ಟೋದು ತುಂಬಾ ಕಷ್ಟ. ಕಪ್ಪು ಚುಕ್ಕೆ ಮಾಡೋದು ಸುಲಭ.SIT ತನಿಖೆ ವರದಿ ಬರಲಿ. ಅಲ್ಲಿಯವರೆಗೆ ಎಲ್ಲರು ಕಾಯಬೇಕು.ತನಿಖೆ ವರದಿ ಬರಲಿ ಅಮೇಲೆ ಎಲ್ಲರು‌ ಮಾತಾಡಿ ಅಂತ ತಿಳಿಸಿದರು.

  • ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ (Manjunath Swamy) ಶಿಕ್ಷೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಭವಿಷ್ಯ ನುಡಿದಿದ್ದಾರೆ.

    ಜೆಪಿ ನಗರ ನಿವಾಸದಲ್ಲಿ ಧರ್ಮಸ್ಥಳ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳ ಕೇಸ್‌ನಲ್ಲಿ ಈ ಸರ್ಕಾರ ನಡೆದುಕೊಂಡು ರೀತಿಗೆ ನಿಜಕ್ಕೂ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಈ ಸರ್ಕಾರಕ್ಕೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ. ಈ ಕೇಸ್‌ನಲ್ಲಿ ಸರ್ಕಾರದ ನಡೆವಳಿಕೆ ಸರಿಯಿಲ್ಲ. ಪ್ರಾರಂಭಿಕ ಹಂತದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ. ನಾನು ಧರ್ಮವನ್ನು ಬೆರೆಸಲು ಹೋಗಲ್ಲ. ಆದರೆ ಸರ್ಕಾರ ನಡೆದುಕೊಂಡ ರೀತಿ ಕ್ಷೇತ್ರಕ್ಕೆ ಅವಮಾನ, ಅನುಮಾನ ಆಗೋ ರೀತಿಯಲ್ಲಿ ಸರ್ಕಾರ ಎಸ್‌ಐಟಿ ತನಿಖೆ ನಾಟಕ ಆಡಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ನಾನು ಮಾತನಾಡದಿರುವುದೇ ಉತ್ತಮ: ಡಿಕೆಶಿ

    ಈ ಕೇಸ್‌ಲ್ಲಿ ಪ್ರಾರಂಭಿಕ ಹಂತದಲ್ಲಿ ಸರ್ಕಾರಕ್ಕೆ ದೂರು ಕೊಟ್ಟಿದ್ದು ದ್ವಾರಕನಾಥ್. ಸಿಎಂಗೆ ಅವರೇ ದೂರು ಕೊಟ್ಟರು. ಆಗ ಸಿಎಂ ದೂರು ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದರು. ಇದರಲ್ಲಿ ಎಡಪಂಥೀಯ ಶಕ್ತಿಗಳು ಇದೆ ಎಂದು ಹೇಳ್ತಾರೆ. ಯಾರಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

  • ಬುರುಡೆ ಕೇಸ್ – ಎಸ್‌ಐಟಿಯಿಂದ ಸತತ 12 ಗಂಟೆ ತಿಮರೋಡಿ ಮನೆ ಶೋಧ

    ಬುರುಡೆ ಕೇಸ್ – ಎಸ್‌ಐಟಿಯಿಂದ ಸತತ 12 ಗಂಟೆ ತಿಮರೋಡಿ ಮನೆ ಶೋಧ

    – ಎಸ್‌ಐಟಿಗೆ ಸಿಗದೆ ತಿಮರೋಡಿ ಎಸ್ಕೇಪ್

    ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ (Dharmasthala Mass Burials) ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಹೇಶ್ ತಿಮರೋಡಿ (Mahesh Shetty Thimarody) ಮನೆಗೆ ಪೊಲೀಸರು ರೇಡ್ ಮಾಡಿದ್ದಾರೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆಯಾಗಿದ್ದು, ಬಂಧನ ಭೀತಿ ಎದುರಾಗಿದೆ.

    ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನು ಎಸ್‌ಐಟಿ (SIT) ಮುಂದುವರಿಸಿದೆ. ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಯನ್ನು ಎಸ್‌ಐಟಿ ಜಾಲಾಡಿದೆ. ಪ್ರಕರಣದ ಆರಂಭದ ದಿನದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸ್ತವ್ಯವಿದ್ದ ಚಿನ್ನಯ್ಯನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಮುಖ ಆರೋಪಿಗೆ ಆಶ್ರಯ ಕೊಟ್ಟ ಆರೋಪದಡಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದೆ. ಇದನ್ನೂ ಓದಿ: ಎಸ್‌ಐಟಿ ಕಚೇರಿ ಕದ ತಟ್ಟಿದ ಸುಜಾತ ಭಟ್ – ಅನನ್ಯಾ ಸೃಷ್ಟಿಕರ್ತೆಗೆ 6 ಗಂಟೆ ಗ್ರಿಲ್

    ಮಂಗಳವಾರ ಉಜಿರೆಯ ತಿಮರೋಡಿ ಮನೆಗೆ ದಿಢೀರ್ ರೇಡ್ ಮಾಡಿ ಬೆಳ್ತಂಗಡಿ ಎಸ್‌ಐಟಿ ತಂಡ ಶೋಧ ನಡೆಸಿತ್ತು. ಎಸ್‌ಐಟಿ ಬರುವ ಸುದ್ದಿ ತಿಳಿದು ಮಹೇಶ್ ತಿಮರೋಡಿ ಮನೆಯಿಂದ ಪರಾರಿಯಾಗಿದ್ದಾರೆ. ಮಹೇಶ್ ತಿಮರೋಡಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲೂ ಎಸ್‌ಐಟಿ ಶೋಧ ಮಾಡಿದೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ತಿಮರೋಡಿ ಮನೆ ಮೇಲೆ ರೇಡ್‌ಗೆ ಕಾರಣಗಳೇನು?
    * ತಿಮರೋಡಿ ಹೆಸರು ಬಾಯ್ಬಿಟ್ಟಿರುವ ಚಿನ್ನಯ್ಯ
    * ಚಿನ್ನಯ್ಯಗೆ ಆಶ್ರಯ ಕೊಟ್ಟಿದ್ದ ಮಹೇಶ್ ತಿಮರೋಡಿ
    * ತಿಮರೋಡಿ ಮನೆಯಲ್ಲೇ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ
    * 5ಕ್ಕೂ ಅಧಿಕ ಯೂಟ್ಯೂಬರ್‌ಗಳ ತಂಡ ತಿಮರೋಡಿ ಮನೆಯಲ್ಲೇ ವಾಸ್ತವ್ಯ
    * ಎಸ್‌ಐಟಿ ವಿಚಾರಣೆ ವೇಳೆ ತಿಮರೋಡಿ ಮನೆಗೆ ಹೋಗ್ತಿದ್ದ ಚಿನ್ನಯ್ಯ
    * ತಿಮರೋಡಿ ತನ್ನ ಮೊಬೈಲ್ ಕಸಿದುಕೊಂಡಿದ್ದಾಗಿ ಹೇಳಿದ್ದ ಚಿನ್ನಯ್ಯ

    ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ವಾಸ್ತವ್ಯವಿದ್ದ ಕೋಣೆಯಲ್ಲಿ ಆತ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ. ಎಸ್‌ಐಟಿ ಅಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಚಿನ್ನಯ್ಯ ಬಳಸುತ್ತಿದ್ದ ವಸ್ತ್ರ, ಆತ ಊರಿಂದ ತಂದಿದ್ದ ಬ್ಯಾಗ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ನಿರಂತರವಾದ ತನಿಖೆ ವೇಳೆ ಹಲವು ಮಹತ್ವದ ವಿಚಾರಗಳು ಎಸ್‌ಐಟಿಗೆ ಲಭ್ಯವಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸಿಸಿ ಕ್ಯಾಮೆರಾ ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ತಿಮರೋಡಿ ಸಿಗದೇ ಇರೋದ್ರಿಂದ ನೋಟೀಸ್ ನೀಡಿ ಬಳಿಕ ಸುಳ್ಳು ಬುರುಡೆ ಕೇಸ್‌ನಲ್ಲಿ ಬಂಧನ ಮಾಡೋ ಸಾಧ್ಯತೆಯೂ ಇದೆ. ಇದನ್ನೂ ಓದಿ: ಭಾರತದ ಈ ಹಳ್ಳಿಯ ಮನೆಗಳಲ್ಲಿ ಅಡುಗೆ ಮನೆಯೇ ಇಲ್ಲ – ಕಾರಣ ಏನು? ಆಹಾರ ಸೇವನೆ ಹೇಗೆ?

    ಇಷ್ಟೆಲ್ಲಾ ಬೆಳವಣಿಗೆಯ ನಡುವೆ ಎಸ್‌ಐಟಿ ತನಿಖೆ ಮಾತ್ರ ನಿಗೂಢವಾಗಿಯೇ ನಡೆಯುತ್ತಿದೆ. ಒಟ್ಟಿನಲ್ಲಿ ಎಸ್‌ಐಟಿ ತನಿಖೆ ಕ್ಷಿಪ್ರ ಗತಿಯಲ್ಲಿ ನಡೆಸಲಾಗುತ್ತಿದೆ. ತನಿಖೆ ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದು, ಸತ್ಯ ಏನಿದೆ ಅನ್ನೋದೇ ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಗಣೇಶನಿಗೆ ಮೊದಲ ಪೂಜೆ ಯಾಕೆ?

  • ಧರ್ಮಸ್ಥಳ ಕೇಸ್ 90% ತನಿಖೆ ಮುಗಿದಿದೆ, ಎನ್‌ಐಎ, ಸಿಬಿಐ ಅಗತ್ಯವಿಲ್ಲ: ರಾಮಲಿಂಗಾ ರೆಡ್ಡಿ

    ಧರ್ಮಸ್ಥಳ ಕೇಸ್ 90% ತನಿಖೆ ಮುಗಿದಿದೆ, ಎನ್‌ಐಎ, ಸಿಬಿಐ ಅಗತ್ಯವಿಲ್ಲ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಧರ್ಮಸ್ಥಳ ಕೇಸ್ (Dharmasthala Case) ಎಲ್ಲಾ ಮುಗಿಯುವ ಹಂತಕ್ಕೆ ಬಂದಿದೆ. ನಮ್ಮ ಅಭಿಪ್ರಾಯದಲ್ಲಿ 90% ಕೇಸ್ ತನಿಖೆ ಮುಗಿದಿದೆ. ಎನ್‌ಐಎ (NIA), ಸಿಬಿಐ (CBI) ತನಿಖೆ ಬೇಕಾಗಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ಧರ್ಮಸ್ಥಳ ಪ್ರಕರಣದ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆಗೆ ನೆಲಮಂಗಲದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಕ್ಲಾರಿಟಿ ಕೊಡಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದರಿಂದ ಒಂದು ಹಂತಕ್ಕೆ ಬಂದಿದೆ. ಎನ್‌ಐಎ, ಸಿಬಿಐ ಬೇಕಾಗಿಲ್ಲ, ನಮ್ಮ ಪೊಲೀಸರೇ ಸಮರ್ಥವಾಗಿದ್ದಾರೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವ್ಯಾಪಕವಾಗಿ ಯೂಟ್ಯೂಬರ್ಸ್ ಪರ ಹಾಗೂ ವಿರೋಧ ಇದ್ದರೂ ಎಲ್ಲವೂ ಅಂತ್ಯವಾಗತ್ತದೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿಚಾರದ ಕುರಿತು ಮಾತನಾಡಿ, ಅಬ್ದುಲ್ ಕಲಾಂ ರಾಷ್ಟ್ರಪತಿಯವರಾಗಿರಲಿಲ್ವಾ? ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾರೆ ಅಂದ್ರೆ ಬಾನು ಮುಷ್ತಾಕ್ ಉದ್ಘಾಟನೆ ಮಾಡೋದ್ರಲ್ಲಿ ತಪ್ಪೇನಿದೆ? ಅವರು ಇದೇ ಮಣ್ಣಿನಲ್ಲಿ ಹುಟ್ಟಿ ಅಭಿಮಾನ ಇರುವಂಥವರು. ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವಂಥವರು. ಬೂಕರ್ ಪ್ರಶಸ್ತಿ ವಿಜೇತರು ಅವರು, ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

    ಆರ್‌ಎಸ್‌ಎಸ್ ಗೀತೆ ವಿಚಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ನಮ್ಮ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿಲ್ಲ. ಅವರ ಪಾತ್ರ ಏನೂ ಇಲ್ಲ, 52 ವರ್ಷಗಳ ಕಾಲ ನಮ್ಮ ತ್ರಿವರ್ಣ ಧ್ವಜ ಹಾರಿಸಲಿಲ್ಲ. ದೇಶದ ಸ್ವಾತಂತ್ರ‍್ಯಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಮನೆ ಮನೆ ಕಸ ಸಂಗ್ರಹದ ಆಟೋಗಳ ಸಮಯ ಬದಲಾವಣೆ

  • ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    – `ದೂತ’ ಯೂಟ್ಯೂಬ್ ಬ್ಯಾನ್‌ಗೆ ಆಗ್ರಹ

    ಮಂಗಳೂರು: ಶ್ರೀಕ್ಷೇತ್ರದ ಧರ್ಮಸ್ಥಳದಲ್ಲಿ (Dharmasthala) ಶಿವ ತಾಂಡವ ಶುರುವಾಗಿದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಅಪಪ್ರಚಾರ ಮಾಡಿದವರು ಒಬ್ಬೊಬ್ಬರೇ ಕಂಬಿ ಹಿಂದೆ ಸೇರುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಎಪಿಸೋಡ್‌ಗಳ ಮೇಲೆ ಎಪಿಸೋಡ್ ಮಾಡಿಕೊಂಡು ನಾನೇ ಸತ್ಯವಂತ ಅಂತಿದ್ದ ಸಮೀರ್‌ಗೆ (Sameer MD) ಭಾನುವಾರ ಧರ್ಮಸ್ಥಳದ ಪೊಲೀಸರು ಡ್ರಿಲ್ ಮಾಡಿದ್ದು, ಇಂದು ವಿಚಾರಣೆಗೆ ಕರೆದಿದ್ದಾರೆ. ಇತ್ತ ಈ ದೂತನ ವಿರುದ್ಧ ಐಟಿಗೆ (IT) ದೂರು ನೀಡಲು ಹಿಂದೂ ಪರ ಹೋರಾಟಗಾರರು ಸಜ್ಜಾಗಿದ್ದಾರೆ.

    ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರ ಕಂತೆ ಕಂತೆ ಸುಳ್ಳುಗಳು ಒಂದೊಂದೇ ಹೊರಬರುತ್ತಿದೆ. ಈ ಕಟ್ಟು ಕತೆಗಳಲ್ಲಿ ದೂತ ಸಮೀರ್‌ನ ಪಾತ್ರ ಬಹಳ ದೊಡ್ಡದು. ಸಮೀರ್ ಮಾಡಿದ ವಿಡಿಯೋ, ಅವನ ಐಎ ತಂತ್ರಜ್ಞಾನದ ಬಳಕೆಯಿಂದ ಜನ ಅರೇ ಹೀಗೆಲ್ಲಾ ಆಗಿದ್ಯಾ ಅನ್ನೋ ಮಟ್ಟಕ್ಕೆ ನಂಬಿಸೋ ಯತ್ನ ಆಗಿತ್ತು. ಇವನ ಮಾತುಗಾರಿಕೆ, ತಾನೇ ಕದ್ದು ನೋಡಿದ್ದೇನೆ ಅನ್ನೋ ರೀತಿಯ ವಿವರಣೆಗೆ ಜನ ಮಾರುಹೋಗಿದ್ರು. ಈಗ ಈತನ ಧಾರ್ಮಿಕ ಅಂಧತ್ವ ನಮ್ಮ ಧರ್ಮವನ್ನ ಹೊಡೆಯೋ ನೀಚತನ ಹೊರಬರುತ್ತಿದೆ. ಇದನ್ನೂ ಓದಿ: ಕಾಂತಾರ ಮಾತು ನಿಜ, . ಕೋರ್ಟ್ ಮೆಟ್ಟಿಲ ಮೇಲೆ ಅಣ್ಣಪ್ಪ ತೀರ್ಮಾನ: ಸೂಲಿಬೆಲೆ

    ಸಮೀರ್ ವಿರುದ್ಧ ಈಗಾಗಲೇ ಜುಲೈನಲ್ಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ ಹಿಂದೂ ಪರ ಹೋರಾಟಗಾರ ತೇಜಸ್‌ಗೌಡ, ಇಂದು ಹಿಂದೂ ಮುಖಂಡರೊಂದಿಗೆ ಆದಾಯ ಇಲಾಖೆಗೆ ದೂರು ನೀಡಲು ಮುಂದಾಗುತ್ತಿದ್ದಾರೆ. ಹೌದು, ಸಮೀರ್ ಸೇರಿದಂತೆ ಧರ್ಮಸ್ಥಳದ ಹಿಂದೆ ಪಿತೂರಿ ಮಾಡಿದವರಿಗೆ ಬೇರೆ ಬೇರೆ ಕಡೆಯಿಂದ ಹಣ ಬಂದಿದೆ. ಇವನ ವೀಡಿಯೋಗೆ ಯಾರು ಫಂಡ್ ಮಾಡುತ್ತಾರೆ, ಇದರ ಹಿಂದೆ ದೊಡ್ಡ ದೊಡ್ಡವರು ಎಡಪಂಥೀಯರು, ನಿಷೇಧಿತ ಸಂಘಟನೆಗಳು ಇದೆ. ಸಮೀರ್‌ನ ಆರ್ಥಿಕ ವಹಿವಾಟನ್ನು ತನಿಖೆ ಮಾಡಬೇಕು ಅಂತಾ ಐಟಿಗೆ ದೂರು ನೀಡೋದಾಗಿ ತೇಜಸ್ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್: ಡಿ.ಕೆ.ಶಿವಕುಮಾರ್

    ಸಮೀರ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡಗಳಿಂದ ತನಿಖೆಯಾಗಬೇಕು. ಆಗ ಇದರ ಮೂಲ ಯಾರು? ಇದಕ್ಕೆ ಕಾರಣಕರ್ತರು ಯಾರೆಲ್ಲ ಇದ್ದಾರೆ ಅನ್ನೋದು ಬಹಿರಂಗವಾಗಲಿದೆ. ಹಾಗೆಯೇ ಸರ್ಕಾರ ಕೂಡ ಈ ಸುಳ್ಳುಸುದ್ದಿ ಹರಿಡಿಸಿದವರ ಯೂಟ್ಯೂಬ್ ಚಾನಲ್ ಬ್ಯಾನ್ ಮಾಡಬೇಕು ಅಂತಾ ತೇಜಸ್ ಗೌಡ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

  • ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನು ಸ್ವಾಗತಿಸುತ್ತೇವೆ: ಅಶ್ವಥ್ ನಾರಾಯಣ್

    ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನು ಸ್ವಾಗತಿಸುತ್ತೇವೆ: ಅಶ್ವಥ್ ನಾರಾಯಣ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದನ್ನ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.

    ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್‌ನ (RSS) ಅಧಿಕೃತ ಪ್ರಾರ್ಥನಾ ಗೀತೆಯನ್ನು ಹಾಡಿರುವುದು, ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸಾವಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಡಿಕೆಶಿಗೆ ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಭಾವನೆ ಇದೆ. ಆರ್‌ಎಸ್‌ಎಸ್ ಗೀತೆ `ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಹಾಡಿರುವುದನ್ನ ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಆರ್‌ಎಸ್‍ಎಸ್ ಗೀತೆನೂ ಹಾಡಬಹುದು, ನಾವು ಮಾತ್ರ ಏನು ಮಾಡೋ ಹಾಗಿಲ್ಲ: ರಾಜಣ್ಣ

    ಡಿ.ಕೆ ಶಿವಕುಮಾರ್ ಯಾವ ಮನಸ್ಥಿತಿ ಇಟ್ಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಯಾರೇ ಆದ್ರೂ ಸರಿ ಆರ್‌ಎಸ್‌ಎಸ್ ಮೇಲೆ ಗೌರವ ಇಡಬಹುದು. ಆದ್ರೆ ಕಾಂಗ್ರೆಸ್ (Congress) ಪಕ್ಷದ ಹಲವು ನಾಯಕರು ಆರ್‌ಎಸ್‌ಎಸ್‌ನ ವಿರೋಧಿಸುತ್ತಾರೆ. ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ರೆ ಜನರು ಅವ್ರನ್ನ ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್‌ನವರು ತುಷ್ಟೀಕರಣ ರಾಜಕಾರಣದಿಂದ ಹೊರಗೆ ಬರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ

    ಧರ್ಮಸ್ಥಳ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ರಚನೆ ಆದಾಗ ಸಾಕಷ್ಟು ಅನುಮಾನ ಸೃಷ್ಟಿ ಆಗಿತ್ತು. ಎಸ್‌ಐಟಿಯನ್ನು ಎಲ್ಲರೂ ಸ್ವಾಗತ ಮಾಡಿದ್ರು, ನಾವೂ ಸ್ವಾಗತ ಮಾಡಿದ್ವಿ. ತನಿಖೆ ಕಾಲಮಿತಿಯಲ್ಲಿ ಆಗಲಿ ಅನ್ನೋ ಒತ್ತಾಯ ಇತ್ತು. ಸರ್ಕಾರದವರೇ ಒಂದೊಂದು ರೀತಿ ಮಾತಾಡ್ತಿದ್ರು. ಬಿಜೆಪಿಯವ್ರು ಮೊದಲು ಮಾತಾಡ್ಲಿಲ್ಲ. ಈಗ ಮಾತಾಡ್ತಿದ್ದಾರೆ ಅನ್ನೋದು ಸರಿಯಲ್ಲ. ನಾವು ಪ್ರಾರಂಭದಿಂದಲೂ ಸ್ಪಷ್ಟವಾಗಿಯೇ ಮಾತಾಡ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಭಗವಾನ್‌ ಹನುಮಂತ ಮೊದಲ ಬಾಹ್ಯಾಕಾಶ ಯಾನಿ: ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ

    ತನಿಖೆ ಮುಗಿದು ಸತ್ಯ ಹೊರಗೆ ಬರಲಿ, ಅಲ್ಲಿಯವರೆಗೂ ನಾವು ಕಾಯ್ತೇವೆ. ಧರ್ಮಸ್ಥಳ ವಿರುದ್ಧ ಅಪಪ್ರಚಾರ ಹಿಂದೆ ಯಾರ ಕೈವಾಡ ಇದೆ ಅನ್ನೋದು ಬಯಲಾಗಬೇಕು. ಇದಕ್ಕಾಗಿ ಎಸ್‌ಐಟಿ ತನಿಖೆ ಆಗಬೇಕು ಅಂತ ನಮ್ಮ ಪಕ್ಷ ಆಗ್ರಹಿಸಿದೆ. ತನಿಖೆ ಸಂದರ್ಭದಲ್ಲಿ ಇನ್ನೂ ಗೊಂದಲ ಮೂಡಿಸೋದು ಬೇಡ. ಅನಾಮಿಕ ವ್ಯಕ್ತಿ ಮೇಲೆ ಅನುಮಾನ, ಎಲ್ಲ ರೀತಿಯ ಪ್ರಶ್ನೆಗಳು ಇವೆ. ಅನಾಮಿಕನ ಬಂಧನವನ್ನು ಸ್ವಾಗತ ಮಾಡುತ್ತೇವೆ. ಆತನ ವಿಚಾರಣೆ ನಡೆಸಲಿ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದು ಸತ್ಯ ಹೊರಗೆ ಬರಲಿ ಎಂದು ಹೇಳಿದ್ದಾರೆ.

    ಹಿಂದೂ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಲಾಗಿದೆ. ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಈ ಪಿತೂರಿಗಳನ್ನು ಬಯಲಿಗೆಳೆಯುವ ಕೆಲಸಗಳು ಆಗಬೇಕು. ಎಸ್‌ಐಟಿ ತನಿಖೆ ತೀವ್ರ ವೇಗದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ರಾಜಕೀಯ ಬೇಡ. ರಾಜಕೀಯವನ್ನು ದೂರ ಇಡೋಣ. ಕಾಂಗ್ರೆಸ್ ಇದರಲ್ಲೂ ರಾಜಕೀಯ ಮಾಡ್ತಿದೆ. ನಮಗೆ ಯಾವುದೇ ರಾಜಕೀಯ ಬೇಡ. ಸತ್ಯ ಹೊರಗೆ ಬರುವುದು ಮುಖ್ಯ. ಯಾರ ಷಡ್ಯಂತ್ರ ಅನ್ನೋದು ಆಚೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

  • ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ

    ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವರ್ಗಾಯಿಸಬೇಕು: ಪ್ರತಾಪ್ ಸಿಂಹ ಆಗ್ರಹ

    – ಧಾರ್ಮಿಕ ಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ?

    ಮೈಸೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ತಮಿಳುನಾಡು, ಕೇರಳ, ಹೈದರಾಬಾದ್‌ಗೂ ಲಿಂಕ್ ಇದೆ. ಆದ್ದರಿಂದ ಈ ಕೇಸ್‌ನ್ನು ಎನ್‌ಐಎಗೆ ರಾಜ್ಯ ಸರ್ಕಾರ ವರ್ಗಾಯಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಆಗ್ರಹಿಸಿದ್ದಾರೆ.

    ಧರ್ಮಸ್ಥಳ ಪ್ರಕರಣದ ಬಗ್ಗೆ ಮೈಸೂರಿನಲ್ಲಿ (Mysuru) ಮಾತನಾಡಿದ ಅವರು, ಧರ್ಮಸ್ಥಳ ವಿರುದ್ಧ ಅಪಪ್ರಚಾರವು ವ್ಯವಸ್ಥಿತ ಪಿತೂರಿಯಾಗಿದೆ. ಇವೆಲ್ಲವೂ ಧರ್ಮಸ್ಥಳಕ್ಕೆ ಕಳಂಕವನ್ನು ಅಂಟಿಸುವ ಕೆಲಸವಾಗಿದೆ ಎಂಬುದು ಸ್ಟಷ್ಟವಾಗಿದೆ. ಈ ಪ್ರಕರಣದಲ್ಲಿ ಕೇರಳದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ, ಎಸ್‌ಡಿಪಿಐ ಪ್ರಕರಣದಲ್ಲಿ ಧ್ವನಿ ಎತ್ತಿವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಗವಾನ್‌ ಹನುಮಂತ ಮೊದಲ ಬಾಹ್ಯಾಕಾಶ ಯಾನಿ: ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ

    ಎಸ್‌ಐಟಿ (SIT) ತನಿಖೆಯಿಂದ ಇದರ ಸತ್ಯ ಬಯಲಾಗಲ್ಲ. ಇದಕ್ಕೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆಗಬೇಕು. ಮಾಸ್ಕ್ ಮ್ಯಾನ್, ಸುಜಾತ ಭಟ್ ಇವರೆಲ್ಲರ ನಿಜ ಬಣ್ಣವು ಸಮಾಜದ ಎದುರು ಬಯಲಾಗಿದೆ. ಈ ಪ್ರಕಣದಲ್ಲಿ ಎಸ್‌ಡಿಪಿಐ ಅವರ ಕೈವಾಡ ಇರುವುದರಿಂದ ಎಸ್‌ಡಿಪಿಐಗೂ ಧರ್ಮಸ್ಥಳಕ್ಕೂ ಏನೂ ಸಂಬಂಧ ಎಂದು ಬಯಲಾಗಬೇಕಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳಕ್ಕೆ ಈ ಕೇಸ್‌ನ್ನು ಸರ್ಕಾರ ವರ್ಗಾಯಿಸಲಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಶಾಸಕ ಯತ್ನಾಳ್ ಆಕ್ಷೇಪ

    ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ (Banu Mushtaq) ನಿಯೋಜನೆ ವಿಚಾರವಾಗಿ, ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಮುಸ್ಲಿಮರು ಎನ್ನುವ ಕಾರಣಕ್ಕೆ ನಾನು ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆಯೂ ನನಗೆ ಗೌರವವಿದೆ. ದಸರಾವು ಜಾತ್ಯಾತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆಯಾಗಿದೆ ಎಂದು ಹೇಳಿದ್ದಾರೆ.

    ಬಾನು ಮುಷ್ತಾಕ್‌ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದ್ಯಾ?
    ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ. ಇದು ಯದುವಂಶ ಆರಂಭಿಸಿದ ಧಾರ್ಮಿಕ ಹಬ್ಬ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತದೆ. ಬಾನು ಮುಷ್ತಾಕ್, ಚಾಮುಂಡಿ ಭಕ್ತೆ ಎಂದು ಹೇಳಿದ್ದಾರಾ? ಭಕ್ತಿ ಭಾವದಿಂದ ಮಾಡುವ ಆಚರಣೆ ದಸರಾ. ತಾಯಿ ಚಾಮುಂಡಿ ಮೇಲೆ ಭಕ್ತಿ ತೋರ್ಪಡಿಸುವ ಹಬ್ಬ ಇದು. ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ ಎಂಬುದು ನನ್ನ ಪ್ರಶ್ನೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮಹಾರಾಜರ ಮೇಲಿನ ದ್ವೇಷವನ್ನು ಸಿದ್ದರಾಮಯ್ಯ ತೀರಿಸಿಕೊಳ್ತಿದ್ದಾರೆ
    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ರನ್ನು ಘೋಷಿಸಿ. ಯಾರ ತಕಾರರು ಇಲ್ಲ. ಬರಗೂರು ರಾಮಚಂದ್ರಪ್ಪ ದಸರಾ ಉದ್ಘಾಟನೆಗೆ ಬಂದು ನಾನು ದೀಪ ಹಚ್ಚಲ್ಲ, ದೇವಸ್ಥಾನಕ್ಕೆ ಹೋಗಲ್ಲ ಅಂದರು. ಇದು ದಸರಾಗೆ ಮಾಡಿದ ಅಪಮಾನ ಅಲ್ವಾ? ಹಿಂದೂ ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಯಾಕೆ ಸಿದ್ದರಾಮಯ್ಯ ಕರೆಯುತ್ತಾರೆ? ಮಹಾರಾಜರ ಮೇಲಿನ ದ್ವೇಷವನ್ನು ಸಿದ್ದರಾಮಯ್ಯ ಬಗೆ ಬಗೆಯಾಗಿ ತೀರಿಸಿ ಕೊಳ್ಳುತ್ತಿದ್ದಾರೆ. ಮಹಾರಾಜರ ಪರಂಪರೆಯನ್ನು ಸಿದ್ದರಾಮಯ್ಯ ಹೀಗೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

     

    ಅಲ್ಲಾ ಬಿಟ್ಟರೆ ಬೇರೆ ಯಾರು ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಮುಷ್ತಾಕ್ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆ. ಅವರ ಧರ್ಮ, ಅವರ ಮಾತನ್ನು ಒಪ್ಪುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ

    ಎಸ್.ಎಲ್.ಭೈರಪ್ಪ ಸರಸ್ವತಿ ಪುತ್ರ, ಅವರನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾಂತಾರದ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಕಾಂತಾರ ಹಿಂದೂ ಧರ್ಮಕ್ಕೆ ಪೂರಕವಾದ ಸಿನಿಮಾ. ಆ ಸಿನಿಮಾದ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರನ್ನು ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ವೇಶ್ಯಾವಾಟಿಕೆಯನ್ನು ಪ್ರಿಯಾಂಕ ಖರ್ಗೆ ಕಾನೂನು ಬದ್ಧ ಮಾಡಲಿ:
    ಆನ್‌ಲೈನ್ ಗೇಮ್‌ನ್ನು ಸಂಪೂರ್ಣ ಬ್ಯಾನ್ ಮಾಡುವುದರಿಂದ ರಾಜ್ಯದ ಆದಾಯಕ್ಕೆ ನಷ್ಟ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯಾರ ಮಕ್ಕಳ ಹಾಳಾದರೇನೂ ಅವರಿಗೇನು? ಅವರಿಗೆ ಆದಾಯ ಬೇಕು ಅಷ್ಟೆ. ಡ್ರೀಮ್ ಇಲೆವನ್ ರೂಪದ ಎಲ್ಲಾ ಗೇಮ್ ಬ್ಯಾನ್ ಮಾಡಬೇಕು. ಪ್ರಿಯಾಂಕ ಖರ್ಗೆ ಬಾಯಲ್ಲಿ ದಲಿತ ಎಂದು ಹೇಳುತ್ತ ಬೆಂಗಳೂರಿನ ಸದಾಶಿವ ನಗರದಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ. ಅವರಿಗೆ ಬಡ ಕುಟುಂಬದ ಸ್ಥಿತಿ ಏನೂ ಗೊತ್ತು? ಆದಾಯ ಹೆಚ್ಚು ಬೇಕಾದರೆ ವೇಶ್ಯಾವಾಟಿಕೆಯನ್ನು ಪ್ರಿಯಾಂಕ ಖರ್ಗೆ ಕಾನೂನು ಬದ್ಧ ಮಾಡಲಿ ಬಿಡಿ. ಅದರಿಂದಲೂ ಹೆಚ್ಚು ಆದಾಯ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ.

  • ವೀರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ: ಬೋಸರಾಜು

    ವೀರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ: ಬೋಸರಾಜು

    ರಾಯಚೂರು: ವೀರೇಂದ್ರ ಪಪ್ಪಿ ಇರಲಿ, ಯಾರೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

    ರಾಯಚೂರಿನಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಇಡಿ ಬಂಧನ ವಿಚಾರವಾಗಿ ಮಾತನಾಡಿದ ಅವರು, ಗ್ಯಾಂಬ್ಲಿಂಗ್ ಮಾಡ್ತಾರೋ ಅಥವಾ ಮತ್ತೊಂದೋ. ಯಾರೇ ಏನೇ ಮಾಡಿರಲಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಸರ್ಕಾರ ಎಂದೂ ಅವಕಾಶ ಕೊಡುವುದಿಲ್ಲ. ಅವರು ಯಾರೇ ಇರಲಿ ಅವರ ಮೇಲೆ ಕ್ರಮ ತಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳನ್ನು ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಿ: ನಿಕ್ಕಿ ತಂದೆ ಕಣ್ಣೀರು

    ಇನ್ನೂ ಧರ್ಮಸ್ಥಳದ ಪ್ರಕರಣವು ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಎಸ್‌ಐಟಿ ರಚನೆ ಮಾಡಿ ತನಿಖೆ ನಡೆದಿರುವುಕ್ಕೆ ಹೆಗ್ಗಡೆಯವರು ಸ್ವಾಗತ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿ, ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ ಅಂತ ಹೆಗ್ಗಡೆಯವರು ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಈಗಾಗಲೇ ಎಫ್‌ಐಆರ್ ಮಾಡಿ, ಬಂಧನವೂ ಆಗಿದೆ. ಯಾವುದೇ ಸರ್ಕಾರ ಇರಲಿ ದೂರು ಬಂದರೆ ತನಿಖೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ. ಈಗ ಸತ್ಯ ಹೊರ ಬರುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ – ವೋಟರ್‌ ಲಿಸ್ಟ್‌ನಲ್ಲಿ ಇಬ್ಬರು ಪಾಕಿಸ್ತಾನಿ ಮಹಿಳೆಯರು ಪತ್ತೆ!

    ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಎಸ್‌ಐಟಿ ಮಾಡಿ ಒಂದುವರೆ ತಿಂಗಳ ಬಳಿಕ ಎಲ್ಲಿಯೂ ಏನೂ ಸಿಕ್ಕಿಲ್ಲ ಅಂತ ಈಗ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ಮುಖ್ಯ. ಶಾಂತಿ ನೆಮ್ಮದಿ ಅವರಿಗೆ ಬೇಕಿಲ್ಲ. ಧರ್ಮದ ಆಧಾರದ ಮೇಲೆ ಗಲಾಟೆ ಮಾಡಿಸುವುದು ಮೊದಲಿನಿಂದ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಂಗಳೂರು, ಉಡುಪಿಯಲ್ಲಿ ಗಲಭೆಗಳಾಗಿವೆ ಎಂದು ಟಾಂಗ್ ಕೊಟ್ಟಿದ್ದಾರೆ.