Tag: ಧರ್ಮಸ್ಥಳ ಕೇಸ್‌

  • ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಮಂಗಳೂರು: ಧರ್ಮಸ್ಥಳದ ಬುರುಡೆ ಕೇಸ್‌ನಲ್ಲಿ (Dharmasthala Case) ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ (Banglegudde) ರಾಶಿರಾಶಿ ಕಳೇಬರ ಸಿಗುತ್ತವೆ ಎಂಬ ವೀಡಿಯೋ ಹೇಳಿಕೆ ಬೆನ್ನಲ್ಲೇ ಎಸ್‌ಐಟಿ (SIT) ತನಿಖೆಗೆ ಟ್ವಿಸ್ಟ್ ಸಿಕ್ಕಿದೆ.

    ನೇತ್ರಾವತಿ ನದಿ (Nethravathi River) ದಡದ ಬಂಗ್ಲೆಗುಡ್ಡಕ್ಕೆ ಎಸ್‌ಐಟಿ ಎಂಟ್ರಿ ಕೊಟ್ಟಿದೆ. ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ. ಇದನ್ನೂ ಓದಿ: ತಿಮರೋಡಿ ವಿರುದ್ಧ ಎಸ್‌ಐಟಿಯಿಂದ ಆರ್ಮ್ಸ್ ಆಕ್ಟ್ ಅಡಿ ಕೇಸ್‌ ದಾಖಲು

    ಪಾಯಿಂಟ್ 11ರ ಆಸುಪಾಸಿನಲ್ಲಿ ಭೂಮಿಯ ಮೇಲ್ಭಾಗದಲ್ಲೇ ಮಾನವನ ಮೂಳೆಗಳು ಪತ್ತೆಯಾಗಿವೆ. ಮೂಳೆ ಪತ್ತೆಯಾದ ಸ್ಥಳದಲ್ಲೇ ಬಟ್ಟೆಯ ತುಂಡುಗಳೂ ಪತ್ತೆಯಾಗಿವೆ. ಮೂಳೆಗಳನ್ನು ಪೈಪ್‌ಗಳಲ್ಲಿ ಸಂಗ್ರಹಿಸಿ, ಮಣ್ಣಿನ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಅಟ್ರಾಸಿಟಿ ಕೇಸ್‌| ಯತ್ನಾಳ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

  • ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಮಂಗಳೂರು: ಧರ್ಮಸ್ಥಳದ ಶವ ಹೂತಿಟ್ಟ (Dharmasthala Mass Burials) ಪ್ರಕರಣದ ತನಿಖೆ ಮುಂದುವರಿದಿದೆ. ಒಂದೆಡೆ ವಿಠಲ್ ಗೌಡ ಹತ್ತಾರು ಶವ ನೋಡಿದ್ದೇನೆ ಎಂದಿದ್ದು, ಇನ್ನೊಂದೆಡೆ ಇಬ್ಬರು ಹೈಕೋರ್ಟ್‌ಗೆ ರಿಟ್ ಅರ್ಜಿ (Writ Petition) ಹಾಕಿ ಬಂಗ್ಲೆಗುಡ್ಡೆಯಲ್ಲಿ (Banglegudde) ಉತ್ಖನನ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬಂಗ್ಲೆಗುಡ್ಡೆಯ ವಿಚಾರದಲ್ಲಿ ಗೊಂದಲದಲ್ಲಿರುವ ಎಸ್‌ಐಟಿ (SIT) ರಹಸ್ಯ ಭೇದಿಸಲು ಮುಂದಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತನಿಖೆಗೆ ಪ್ಲಾನ್ ಮಾಡಿದೆ.

    ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ಮುಂದುವರಿದಿದೆ. ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಲವಾರು ಗೊಂದಲದಲ್ಲಿದೆ. ಒಂದೆಡೆ ತಲೆ ಬುರುಡೆಯ ಮಹಜರು ನಡೆಸಲು ಬಂಗ್ಲೆಗುಡ್ಡೆಗೆ ತೆರಳಿದ ವೇಳೆ ರಾಶಿ ರಾಶಿ ಅಸ್ಥಿಪಂಜರ ನೋಡಿದ್ದೇನೆ ಎಂದು ಸೌಜನ್ಯಳ ಓರ್ವ ಮಾವ ವಿಠಲಗೌಡ ಹೇಳಿದ್ದ. ಇನ್ನೊಂದೆಡೆ ಸೌಜನ್ಯಳ ಇನ್ನೋರ್ವ ಮಾವ ವಿಠಲ ಗೌಡರ ತಮ್ಮ ಪುರಂದರ ಗೌಡ ಹಾಗೂ ಸಂಬಂಧಿ ತುಕರಾಮ ಗೌಡ ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿ ಬಂಗ್ಲೆಗುಡ್ಡೆಯಲ್ಲಿ ಶವ ಹೂತಿಟ್ಟಿರೋದನ್ನ ನಾವು ತೋರಿಸುತ್ತೇವೆ, ಅದನ್ನ ಉತ್ಖನನ ಮಾಡಲು ಎಸ್‌ಐಟಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಉತ್ತರಿಸಲು ಎಸ್‌ಐಟಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

    ತಲೆ ಬುರುಡೆಯ ಮಹಜರು ನಡೆಸುತ್ತಿದ್ದ ಎಸ್‌ಐಟಿಗೆ ಇದೀಗ ಈ ವಿಚಾರ ಗೊಂದಲವನ್ನ ಸೃಷ್ಟಿಸಿದೆ. ಅರಣ್ಯ ಪ್ರದೇಶದೊಳಗೆ ಮತ್ತೆ ಉತ್ಖನನ ಮಾಡಬೇಕಾದರೆ ಸಾಕಷ್ಟು ಸವಾಲುಗಳು ಎದುರಾಗೋ ಹಿನ್ನಲೆಯಲ್ಲಿ ಸದ್ಯ ಅರಣ್ಯ ಇಲಾಖೆಯಿಂದ ಬಂಗ್ಲೆಗುಡ್ಡೆಯ ಸರ್ವೆ ದಾಖಲೆಗಳನ್ನ ಪಡೆದುಕೊಂಡಿದೆ. ಈ ಹಿಂದೆ ಅರಣ್ಯದ ಅಂಚಿನಲ್ಲಿ ಉತ್ಖನನ ನಡೆದಿರುವುದರಿಂದ ಯಾವುದೇ ಸವಾಲು ಇರಲಿಲ್ಲ. ಇದೀಗ ಅರಣ್ಯದೊಳಗಿನ ಉತ್ಖನನ ಆಗಬೇಕಾಗಿರುವುದರಿಂದ, ಕಾನೂನು ಅಡ್ಡಿಯಾಗುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಎಸ್‌ಐಟಿ ತೀರ್ಮಾನಿಸಿದೆ. ಅರಣ್ಯದ ಸಮಗ್ರ ವರದಿ ಪಡೆದು ಅನುಮತಿ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ

    ಬಂಗ್ಲೆಗುಡ್ಡೆಯ ಮಹಜರು ಅಥವಾ ಉತ್ಖನನ ಮಾಡೋ ಬಗ್ಗೆ ಎಸ್‌ಐಟಿ ಇನ್ನೂ ಸರಿಯಾದ ನಿರ್ಧಾರ ಮಾಡಿಲ್ಲ. ಬಂಗ್ಲೆಗುಡ್ಡೆಯಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡವರ ಅಸ್ಥಿಪಂಜರಗಳು ಇರುವ ಸಾಧ್ಯತೆ ಇದ್ದು, ಅದನ್ನ ಸ್ಥಳೀಯ ಪೊಲೀಸರು ಮಹಜರು ಮಾಡಬೇಕ, ಎಸ್‌ಐಟಿ ಮಾಡಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡಲು ಎಸ್‌ಐಟಿ ನಿರ್ಧರಿಸಿದೆ. ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

  • ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಮೊಹಾಂತಿ ಪ್ರಗತಿ ಪರಿಶೀಲನೆ ಸಭೆ – ತನಿಖೆಯ ವೇಗ ಹೆಚ್ಚಿಸುವಂತೆ ಸೂಚನೆ

    ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಮೊಹಾಂತಿ ಪ್ರಗತಿ ಪರಿಶೀಲನೆ ಸಭೆ – ತನಿಖೆಯ ವೇಗ ಹೆಚ್ಚಿಸುವಂತೆ ಸೂಚನೆ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಸಂಬಂಧ ಎಸ್‌ಐಟಿ (SIT) ತನಿಖೆ ಚುರುಕುಗೊಂಡಿದೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ (Pranav Mohanty) ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ.

    ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ ತನಿಖೆಯ ಎಸ್‌ಐಟಿ ತಂಡ ಬ್ಲೂಪ್ರಿಂಟ್ ರೆಡಿ ಮಾಡಲಿದ್ದಾರೆ. ಈಗಾಗಲೇ ಎಸ್‌ಐಟಿ ತನಿಖೆ ಕುತೂಹಲ ಘಟ್ಟಕ್ಕೆ ತಲುಪಿದೆ. ಬುರುಡೆ ಹಿಂದೆ ಬಿದ್ದು ಎಸ್‌ಐಟಿ ಪೊಲೀಸರು ಕಳೆದ 55 ದಿನಗಳಿಂದ ಹೇಳಿಕೆಗಳ ದಾಖಲು, ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದಿದ್ದ ವಿಠಲಗೌಡ, ಬುರುಡೆ ಬಂದ ನಂತರ ಗಿರೀಶ್ ಮಟ್ಟಣ್ಣ ಮಾಸ್ಟರ್ ಪ್ಲಾನ್, ಜಯಂತ್, ಯೂಟ್ಯೂಬರ್‌ಗಳಾದ ಅಭಿಷೇಕ್, ಕೇರಳದ ಮನಾಫ್ ವಿಚಾರಣೆ ಹೀಗೆ ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಿರುವ ಎಸ್‌ಐಟಿ ತಂಡ ಎಲ್ಲರ ಹೇಳಿಕೆಗಳು ತಾಳೆಹಾಕಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳು ಬಲಿ; ತಂದೆ ನೇಣಿಗೆ ಶರಣು, ಪ್ರಾಣಪಾಯದಿಂದ ತಾಯಿ ಪಾರು

    ತನಿಖೆಯ ಅಂತಿಮ ವರದಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದು, ತನಿಖೆಯ ವೇಗ ಹೆಚ್ಚಿಸಿ, ಎಲ್ಲಾ ಆಯಾಮದ ತನಿಖೆಯನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮೊಹಾಂತಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

  • ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ: ಸಮೀರ್‌ನಿಂದ ವೀಡಿಯೋ ರಿಲೀಸ್

    ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ: ಸಮೀರ್‌ನಿಂದ ವೀಡಿಯೋ ರಿಲೀಸ್

    – ನನ್ನ ಮನಸಾಕ್ಷಿಗೆ ಗೊತ್ತು, ನಾನೇನು ತಪ್ಪು ಮಾಡಿಲ್ಲ ಎಂದ ಯೂಟ್ಯೂಬರ್

    ಬೆಂಗಳೂರು: ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ. ನನ್ನ ಎಲ್ಲಾ ವಿವರ, ದಾಖಲೆಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ಸಮೀರ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.

    ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಸಮೀರ್ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಶೀಘ್ರದಲ್ಲೇ ಆರೋಪಗಳಿಗೆ ಸ್ಪಷ್ಟನೆ ಕೊಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಅದರಂತೆ ಈಗ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.

    ಫಂಡಿಂಗ್ ಆರೋಪದ ಬಗ್ಗೆ ಸಮೀರ್ ವಿಡಿಯೋದಲ್ಲಿ ಮಾತನಾಡಿದ್ದು, ನನಗೆ ಯಾವ ಫಂಡಿಂಗ್ ಕೂಡ ಬಂದಿಲ್ಲ. ನನ್ನ ಆಧಾರ್, ಪ್ಯಾನ್ ಕಾರ್ಡ್, ಮನೆ ಲೀಸ್ ಅಗ್ರಿಮೆಂಟ್ ಎಲ್ಲವೂ ಪೊಲೀಸರ ಬಳಿ ಇದೆ. ಎರಡು ಬ್ಯಾಂಕ್ ವಿವರ ಕೂಡ ಪೊಲೀಸರ ಬಳಿ ಇದೆ ಎಂದು ತಿಳಿಸಿದ್ದಾರೆ.

    ನನಗೆ ಯಾವುದೇ ರೀತಿ ಫಂಡ್ ಬಂದಿಲ್ಲ. ನಾನು ದುಡ್ಡು ಪಡೆದು ವಿಡಿಯೋ ಮಾಡಿದ್ರೆ ತನಿಖೆ ವೇಳೆ ಹೊರಬರುತ್ತಿತ್ತು. ಪೊಲೀಸರ ಬಳಿ ನನ್ನ ಆಧಾರ್ ಕಾರ್ಡ್ನಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ನಾನು ಓದಿರುವಂತಹ ಶಾಲೆ ಮಾಹಿತಿ, ನನ್ನ ಕಾರು ನಂಬರ್, ಆರ್‌ಸಿ ಮಾಹಿತಿ, ಮನೆ ಲೀಸ್ ಅಗ್ರಿಮೆಂಟ್, ಪಾಸ್‌ಬುಕ್ ಪ್ರತಿಯೊಂದು ಕಾಪಿ ಕೊಟ್ಟಿದ್ದೇನೆ. ನನ್ನ ಬಳಿ 2 ಬ್ಯಾಂಕ್ ಅಕೌಂಟ್‌ಗಳಿವೆ. 1 ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನ ಸಂಧಪಟ್ಟ ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ನನ್ನ ಮನಸಾಕ್ಷಿಗೆ ಗೊತ್ತು. ನಾನೇನು ತಪ್ಪು ಮಾಡಿಲ್ಲ ಅಂತಾ ಎಂದು ವೀಡಿಯೋದಲ್ಲಿ ಸಮರ್ಥಿಸಿಕೊಂಡಿದ್ದಾರೆ.

  • 4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಪ್ರಕರಣಗಳಲ್ಲಿ (Dharmasthala Case) ಏನೇ ದೂರು, ಆರೋಪ ಇದ್ದರೂ ಎಸ್‌ಐಟಿ (SIT) ಅಧಿಕಾರಿಗಳೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದರು.

    ಧರ್ಮಸ್ಥಳದ 3 ಲಾರ್ಡ್ಜ್‌ಗಳಲ್ಲಿ ನಾಲ್ಕು ಅನುಮಾನಸ್ಪದ ಸಾವುಗಳಾಗಿವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ದೂರು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದರು. ದೂರು ತೆಗೆದುಕೊಳ್ಳಬೇಕೇ, ಬೇಡವೇ ಅಂತ ಎಸ್‌ಐಟಿಯವರು ಪರಿಶೀಲಿಸುತ್ತಾರೆ. ಪ್ರಕರಣ ಬೇರೆ ಬೇರೆ ದಿಕ್ಕಿಗೆ ಹೋಗುವಂತಹ ಪ್ರಯತ್ನ ನಡೆದರೆ, ಎಸ್‌ಐಟಿಯವರು ಬೇರೆ ತರಹ ತನಿಖೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ಮದ್ದೂರು ಗಲಭೆ | ಪ್ರಚೋದನಕಾರಿ ಭಾಷಣಕ್ಕಾಗಿ ಯತ್ನಾಳ್, ಸಿ.ಟಿ ರವಿ ವಿರುದ್ಧ FIR: ಪರಮೇಶ್ವರ್

    ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಬಗ್ಗೆ ವಿಠಲಗೌಡ (Vittal Gowda) ಆರೋಪದ ಬಗ್ಗೆ ಮಾತಾಡಿದ ಅವರು, ಯಾರೋ ಕೊಟ್ಟ ಹೇಳಿಕೆ ಮೇಲೆ ನಾವು ತೀರ್ಮಾನ ಮಾಡುವುದಿಲ್ಲ. ಎಸ್‌ಐಟಿ ಮುಂದೆ ಏನು ದೂರು ಕೊಟ್ಟಿರುತ್ತಾರೆ. ಅದಕ್ಕೆ ಸಾಕ್ಷ್ಯ ಕೊಟ್ಟಿರುತ್ತಾರೆ. ಅದೆಲ್ಲವನ್ನು ನೋಡಿ ಎಸ್‌ಐಟಿಯವರು ತೀರ್ಮಾನ ಮಾಡುತ್ತಾರೆ. ಸರ್ಕಾರದ ಅನುಮತಿ ಬೇಕೆಂದರೆ ಕೇಳುತ್ತಾರೆ. ಸದ್ಯಕ್ಕೆ ಯಾವುದೇ ಅನುಮತಿ ಕೇಳುವುದಕ್ಕೆ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ

    ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‌ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್‌ಐಟಿ ವೇಗ ಕಳೆದುಕೊಂಡು ಬಿಟ್ಟಿದೆ, ತನಿಖೆ ನಡೆಯುತ್ತಿಲ್ಲ ಅಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್‌ಐಟಿಯವರು ನಮಗೂ ಹೇಳುವುದಿಲ್ಲ ಎಂದರು.

    ಧರ್ಮಸ್ಥಳ ಆರೋಪ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲವಾಗಿ ನಿಂತವರನ್ನು ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರನ್ನು ಬಂಧಿಸಬೇಕು, ಯಾವಾಗ ಬಂಧಿಸಬೇಕು ಎಂಬುದನ್ನು ನಾವು ಎಸ್‌ಐಟಿಯವರಿಗೆ ಹೇಳಲಾಗುತ್ತದೆಯೇ? ಮಾಧ್ಯಮದವರು ಹೇಳಿದ್ದನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಬಂಧಿಸಲು ಆಗುವುದಿಲ್ಲ. ಅವರಿಗೆ ಏನು ಮಾಹಿತಿ ಇದೆಯೋ ಅದಕ್ಕೆ ಅಗತ್ಯವಾದ ಪುರಾವೆ, ಸಾಕ್ಷ್ಯ ಸಿಗಬೇಕಲ್ಲ. ಅದನ್ನು ನೋಡಿಕೊಂಡು ಆನಂತರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

  • ಯೂಟ್ಯೂಬರ್ ಸುಮಂತ್ ವಿರುದ್ಧ ದೂರು; ಹಣ ಪಡೆದಿದ್ದರೆ ಸಾಬೀತು ಮಾಡಲಿ – ಯೂಟ್ಯೂಬರ್ ಅಭಿಷೇಕ್ ಸವಾಲು

    ಯೂಟ್ಯೂಬರ್ ಸುಮಂತ್ ವಿರುದ್ಧ ದೂರು; ಹಣ ಪಡೆದಿದ್ದರೆ ಸಾಬೀತು ಮಾಡಲಿ – ಯೂಟ್ಯೂಬರ್ ಅಭಿಷೇಕ್ ಸವಾಲು

    ಹಾಸನ: ಹಣ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ ಎಂಬ ಯೂಟ್ಯೂಬರ್ ಸುಮಂತ್ ವಿರುದ್ಧ ಮತ್ತೋರ್ವ ಯೂಟ್ಯೂಬರ್ ಅಭಿಷೇಕ್ (Youtuber Abhishek) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

    ಸುಮಂತ್ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ನಾನು ಹಣ ಪಡೆದಿರುವುದನ್ನು ಸುಮಂತ್ ಸಾಬೀತುಪಡಿಸುವಂತೆ ಅಭಿಷೇಕ್ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗ ದೋಷಮುಕ್ತನಾಗಿ ಬರುತ್ತಾನೆಂಬ ನಂಬಿಕೆ ಇದೆ: ಯೂಟ್ಯೂಬರ್ ಅಭಿಷೇಕ್ ತಾಯಿ ಮಾತು

    ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಹಾಗೂ ಅಪಪ್ರಚಾರದ ವಿಚಾರದಲ್ಲಿ ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಅಭಿಷೇಕ್‌ ಈಗಾಗಲೇ ಎಸ್‌ಐಟಿ ತನಿಖೆಗೆ ಒಳಪಟ್ಟಿದ್ದಾರೆ. ಇದೇ ವೇಳೆ ಯೂಟ್ಯೂಬರ್ ಸುಮಂತ್, ಕೆಲವರಿಂದ ಹಣ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ ಎಂದು ಅಭಿಷೇಕ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಎಸ್‌ಐಟಿ ತನಿಖೆ ಎದುರಿಸಿ ಬಂದಿರುವ ಅಭಿಷೇಕ್ ನಾಲ್ಕು ಆರೋಪಗಳನ್ನು ಪಟ್ಟಿ ಮಾಡಿ ತನ್ನ ತಂದೆ ಜೊತೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಆದರೆ, ಇದು ಮಾನನಷ್ಟ ಮೊಕದ್ದಮೆ ಆಗಿರುವುದರಿಂದ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಇದೇ ವೇಳೆ ಅಭಿಷೇಕ್ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸ್ಥಳದಲ್ಲಿದ್ದ ಕೆಲವರು, ಇವನು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದಾನೆ. ಇಂತಹವನ ಹಿಂದೆ ನಿಲ್ಲಬೇಡಿ. ಅವನಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತನ್ನ ವಿರುದ್ಧ ಸುಮಂತ್ ಸುಳ್ಳು ಆರೋಪ ಮಾಡಿದ್ದು, ನನ್ನ ಗೌರವಕ್ಕೆ ಧಕ್ಕೆ ಆಗಿದೆ.‌ ನಾನು ಯಾರಿಂದಲೂ ಹಣ ಪಡೆದಿಲ್ಲ. ನಾನು ಹಣ ಪಡೆದಿದ್ದರೆ ನನ್ನ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ವಿಡಿಯೋ ಮಾಡಲು ಹೋಗಿದ್ದೆ ಹೊರತು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಹೋಗಿರಲಿಲ್ಲ. ಕಳೆದ ಮಾರ್ಚ್ ತಿಂಗಳಿನಿಂದಲೇ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾರೆ ಎಂಬ ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದೆ.‌ ನನಗೆ ಯಾರು ಕ್ಯಾಮೆರಾ ಕೊಡಿಸಿಲ್ಲ. ಧರ್ಮಸ್ಥಳಕ್ಕೆ ಹೋದಾಗ ಮಹೇಶ್ ತಿಮರೋಡಿ ಪರಿಚಯ ಆಯ್ತು.‌ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಎಂದು ಕೇಳಿದ್ದಕ್ಕೆ ಅವರ ಸಂಬಂಧಿಕರ ಮನೆಯಲ್ಲಿಯೇ ಉಳಿದುಕೊಳ್ಳಲು ಸಹಾಯ ಮಾಡಿದ್ದರು. ಎಸ್‌ಐಟಿ ತನಿಖೆ ಎದುರಿಸಿದ್ದೇನೆ. ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಬಳಸಿದ್ದ ವಸ್ತುಗಳನ್ನು ಎಸ್‌ಐಟಿ ಅವರು ವಶಕ್ಕೆ ಪಡೆದಿದ್ದಾರೆ. ಧರ್ಮಸ್ಥಳದಲ್ಲಿ ಏನು ಸಿಕ್ಕೇ‌ ಇಲ್ಲಾ ಅಂತಿದ್ದಾರೆ. ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಬರುತ್ತೆ. ಎಸ್‌ಐಟಿ ಮತ್ತೆ ತನಿಖೆಗೆ ಕರೆದರೆ ಹೋಗುತ್ತೇನೆ ಎಂದು ತನ್ನ ವಿರುದ್ಧದ ಆರೋಪಕ್ಕೆ ಅಭಿಷೇಕ್ ತಿರುಗೇಟು ನೀಡಿದ್ದಾರೆ‌. ಇದನ್ನೂ ಓದಿ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಯಾರೂ ಹಣದ ಆಮಿಷ ಒಡ್ಡಿಲ್ಲ: ಯೂಟ್ಯೂಬರ್ ಅಭಿಷೇಕ್ ತಂದೆ

  • ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

    ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

    – ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ

    ಮಂಗಳೂರು: ಕಾನೂನು ಅರಿವಿಲ್ಲದೇ ತಪ್ಪು ಮಾಡಿದ್ರೆ ಅದಕ್ಕೆ ತಕ್ಕದಾದ ಶಿಕ್ಷೆ ತೆಗೆದುಕೊಳ್ಳಲೇಬೇಕು. ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು ಎಂದು ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಎರಡನೇ ದೂರುದಾರ ಜಯಂತ್  (Jayanth T) ಹೇಳಿದ್ದಾರೆ.

    ಎಸ್‌ಐಟಿ (SIT) ವಿಚಾರಣೆಗೆ ತೆರಳುವ ಮುನ್ನ ಪ್ರತಿಕ್ರಿಯೆ ನೀಡಿದ ಅವರು, ನಾನು ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಹೊಡೆದಿದ್ದಾರಾ ಎಂದು ಕೇಳುತ್ತಿದ್ದಾರೆ. ಆದರೆ ಎಸ್‌ಐಟಿ ಅಧಿಕಾರಿಗಳು ನಿಯಮ ಪ್ರಕಾರ ತನಿಖೆ ಮಾಡುತ್ತಿದ್ದಾರೆ. ನನಗೆ ಎಸ್‌ಐಟಿಯವರು ಹೊಡೆದಿಲ್ಲ, ದಾಖಲೆ ಇಟ್ಟುಕೊಂಡು ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    ಎಸ್‌ಐಟಿಯವರ ಮುಂದೆ ಯಾವುದೇ ಸುಳ್ಳು ಹೇಳಲು ಆಗಲ್ಲ. ಯಾರು ತನಿಖೆಗೆ ಬಂದರೂ ಸಹ ಸತ್ಯವನ್ನೇ ಹೇಳಿ. ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ. ಎಫ್‌ಎಸ್‌ಎಲ್‌ಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

  • ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ- ಅಮಿತ್‌ ಶಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗ

    ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ- ಅಮಿತ್‌ ಶಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರ ನಿಯೋಗ

    ನವದೆಹಲಿ: ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರ ನಿಯೋಗ ಭೇಟಿಯಾಗಿದೆ.

    ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿ ಅಮಿತ್‌ ಶಾರನ್ನು ಭೇಟಿಯಾಗಿದೆ. ಈ ವೇಳೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಆರಂಭದಿಂದ ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಅಸ್ಥಿಪಂಜರ ಸಿಗದಿರುವ ವಿಚಾರ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಿದೆ.

    ಘಟನೆಯ ಹಿಂದೆ ಹೊರ ರಾಜ್ಯದ ಜನರ ಕೈವಾಡ ಶಂಕೆ ಇದೆ. ಈ ಹಿನ್ನಲೆ ಸೂಕ್ತ ತನಿಖೆಯ ಅಗತ್ಯವಿದೆ ಎಂದು ನಿಯೋಗ ಪ್ರಸ್ತಾಪಿಸಿದೆ. ಆ ಮೂಲಕ ಕೇಂದ್ರದ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದೆ.

    ಇಡಿ ಅಥವಾ ಎನ್‌ಐಎ ತನಿಖೆ ನಡೆಸುವ ಬಗ್ಗೆ ನಾಯಕರು ನೇರವಾಗಿ ವಿಚಾರ ಪ್ರಸ್ತಾಪಿಸಿಲ್ಲ. ಹೊರ ರಾಜ್ಯದ ಜನರು ಹಾಗೂ ಫಡಿಂಗ್ ಮೂಲಕ ವ್ಯವಸ್ಥಿತವಾಗಿ ಕಾರ್ಯತಂತ್ರ ನಡೆದಿದೆ. ಎಸ್‌ಐಟಿ ರಾಜ್ಯ ಸರ್ಕಾರದ ಒತ್ತಡದಲ್ಲಿ ಈ ಕಾರ್ಯ ಮಾಡದು. ಈ ಹಿನ್ನೆಲೆ ಉತ್ತಮ ತನಿಖೆಯಿಂದ ತಾರ್ಕಿಕ ಅಂತ್ಯ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

    ನಿಯೋಗದಿಂದ ಘಟನೆ ಮತ್ತು ಬಿಜೆಪಿ ಮಾಡಿದ ಹೋರಾಟಗಳ ಮಾಹಿತಿ ಪಡೆದಿದ್ದಷ್ಟೆ, ಯಾವುದೇ ಭರವಸೆ ನೀಡದೆ ಅಮಿತ್‌ ಶಾ ಅವರು ಕಳುಹಿಸಿದ್ದಾರೆ ಎನ್ನಲಾಗಿದೆ.

  • ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ: ‘ಕೈ’ ಯಾತ್ರೆಗೆ ಯತ್ನಾಳ್ ಲೇವಡಿ

    ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ: ‘ಕೈ’ ಯಾತ್ರೆಗೆ ಯತ್ನಾಳ್ ಲೇವಡಿ

    – ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದ್ರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕೈಬಿಡಲಿ ಎಂದ ಶಾಸಕ

    ಬೆಂಗಳೂರು: ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಧರ್ಮಸ್ಥಳಕ್ಕೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಧರ್ಮಸ್ಥಳ ಯಾತ್ರೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಲೇವಡಿ ಮಾಡಿದರು.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಧರ್ಮಸ್ಥಳ ಚಲೋ ಮಾಡುವ ಬುದ್ಧಿ ಬಂದಿರೋದು ಒಳ್ಳೆಯದು. ಇದುವರೆಗೆ ಮಸೀದಿ, ದರ್ಗಾಗೆ ಹೋಗ್ತಿದ್ರು. ಈಗ ಧರ್ಮಸ್ಥಳಕ್ಕೆ ಹೋಗ್ತಿರೋದು ಸ್ವಾಗತ. ಸಿದ್ದರಾಮಯ್ಯ ಕೂಡಾ ಹೋಗಲಿ, ಡಿಕೆಶಿ ಸಹ ಹೋಗಲಿ. ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ತಿಳಿಸಿದರು. ಇದನ್ನೂ ಓದಿ: ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ

    ಸೌಜನ್ಯ ಪ್ರಕರಣ ಬಗ್ಗೆ ಹೈಕೋರ್ಟ್ ವರೆಗೆ ಏನಾಗಿದೆ ಅಂತ ಚಿಂತನೆ ಆಗಲಿ. ರಾಜ್ಯ ಸರ್ಕಾರವೇ ಪ್ರಕರಣ ಎನ್‌ಐಎಗೆ ಕೊಡಲಿ. ಸೌಜನ್ಯ ಪ್ರಕರಣ ಮೂಲಕ ಅವರಿಗೆ ಯಾರನ್ನೋ ಟಾರ್ಗೆಟ್ ಮಾಡೋದಿದೆ ಅನ್ಸುತ್ತೆ. ಹಾಗಾಗಿ, ಅದನ್ನ ಜೀವಂತ ಇಟ್ಟಿದ್ದಾರೆ. ಸರ್ಕಾರವೇ ಎನ್‌ಐಎಗೆ ಕೊಡಲಿ. ವಿಜಯೇಂದ್ರ ಸುಪ್ರೀಂ ಕೋರ್ಟ್ ವರೆಗೆ ಹೋಗುವ ಅಗತ್ಯ ಇಲ್ಲ. ವಚನಾನಂದ ಸ್ವಾಮೀಜಿ, ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ವಚನಾನಂದ ಸ್ವಾಮೀಜಿ, ವಿಜಯೇಂದ್ರ ಕ್ಯಾಂಪ್‌ನವ್ರು ಎಂದು ಹೇಳಿದರು.

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರವಾಗಿ ಮಾತನಾಡಿ, ಆ ಹೆಣ್ಣುಮಗಳಿಗೂ ಏನಾದರೂ ಮಾನ-ಮರ್ಯಾದೆ ಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದರು. ಇದನ್ನೂ ಓದಿ: ಧರ್ಮಸ್ಥಳ ಕೇಸನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ನಿರ್ಧಾರ: ಅಮಿತ್ ಶಾ ಪ್ರತಿಕ್ರಿಯೆ

    ವಿಜಯೇಂದ್ರ ಸೌಜನ್ಯ ಪರ ಸುಪ್ರೀಂ ಕೋರ್ಟ್‌ಗೆ ಹೋಗೋದು ಬೇಕಿಲ್ಲ. ಧರ್ಮಸ್ಥಳಕ್ಕೆ ಹೋಗಿ ಭ್ರಷ್ಟಾಚಾರ ನಡೆಸದ ಬುದ್ದಿ ಕೊಡು ಎಂದು ಕೇಳಿಕೊಳ್ಳಲಿ. ನಮ್ಮ ಅಪ್ಪ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಉಳಿದವರಿಗೆ ಅವಕಾಶ ನೀಡಲಿ ಎಂದು ಧರ್ಮಸ್ಥಳದಲ್ಲಿ ಪ್ರಾರ್ಥನೆ ಮಾಡಲಿ ಎಂದು ಕಾಲೆಳೆದರು.

  • ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್

    ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ಬಗ್ಗೆ ಎಸ್‌ಐಟಿ (SIT) ತನಿಖೆ ನಡೆಯುತ್ತಿದ್ದು, ಎನ್‌ಐಎ (NIA) ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಪುನರುಚ್ಚರಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಎನ್‌ಐಎ ತನಿಖೆಗೆ ಪ್ರಕರಣ ಕೊಡೋದಿಲ್ಲ, ಅದರ ಅಗತ್ಯವೂ ಇಲ್ಲ. ಎಸ್‌ಐಟಿ ತನಿಖೆ ಮುಗಿದು ವರದಿ ಬರೋವರೆಗೂ ಬೇರೆ ಯಾವುದೇ ತನಿಖೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಎಸ್‌ಐಟಿ ತನಿಖೆಯಲ್ಲಿ ತಪ್ಪೇನಾದ್ರೂ ಆಗಿದೆಯಾ? ತಪ್ಪಾಗಿದ್ರೆ ಬೇರೆ ಏಜೆನ್ಸಿಗೆ ಪ್ರಕರಣ ಕೊಡಬಹುದು. ಆದ್ರೆ ಎಸ್‌ಐಟಿ ತನಿಖೆಯಲ್ಲಿ ತಪ್ಪೇನೂ ಆಗಿಲ್ಲ, ತನಿಖೆ ಚೆನ್ನಾಗಿಯೇ ನಡೀತಿದೆ. ಬಿಜೆಪಿಯವರು ಎಸ್‌ಐಟಿ ತನಿಖೆಗೆ ತೊಂದರೆ ಮಾಡಬೇಕು ಅಂತ ಇದ್ದಾರಾ? ಬಿಜೆಪಿಯವರ ಉದ್ದೇಶ ಏನು ಅಂತ ಅವರು ಮೊದಲು ಸ್ಪಷ್ಟಪಡಿಸಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಇಸ್ಕಾನ್‌ನ ರುಚಿಕರ, ಪೌಷ್ಟಿಕ ಆಹಾರ

    ಇನ್ನು, ಎನ್‌ಜಿಒಗಳಿಗೆ ವಿದೇಶಿ ಹಣ ಬಂದಿರುವ ಆರೋಪ ವಿಚಾರದಲ್ಲಿ ಇಡಿ ಎಂಟ್ರಿಯಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಇ.ಡಿಯವರು ತನಿಖೆ ಮಾಡೋದಾದ್ರೆ ಮಾಡಿಕೊಳ್ಳಲಿ. ಇಡಿ ತನಿಖೆಗೆ ನಾವು ಬೇಡ ಅನ್ನಲ್ಲ. ಇಡಿಯವರು ಎಂಟ್ರಿಯಾಗಿದ್ದರೆ ಅದು ಹಣಕಾಸು ವಿಚಾರಕ್ಕೆ ಇರುತ್ತದೆ. ಅವರ ತನಿಖೆಗೂ ನಮ್ಮ ತನಿಖೆಗೂ ಸಂಬಂಧ ಇಲ್ಲ ಎಂದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ಎಸ್‌ಐಟಿಗೆ ಮಂಡ್ಯದ ಮಹಿಳೆ ದೂರು ವಿಚಾರ ಬಗ್ಗೆ ಮಾತನಾಡಿ, ಅದೆಲ್ಲ ಎಸ್‌ಐಟಿ ನೋಡಿಕೊಳ್ಳುತ್ತಾರೆ ಎಂದರು. ಪ್ರಣವ್ ಮೊಹಾಂತಿ ಭೇಟಿ ವಿಚಾರ ಬಗ್ಗೆ ಮಾತಾಡಿ, ಮೊಹಾಂತಿಯವರು ಬೇರೆ ವಿಚಾರಕ್ಕೆ ಬಂದಿದ್ದರು. ಅವರು ಧರ್ಮಸ್ಥಳ ವಿಚಾರಕ್ಕೆ ಮಾತ್ರ ಬರ್ತಾರಾ? ಬೇರೆ ವಿಚಾರಕ್ಕೆ ಬಂದು ಭೇಟಿ ಆಗಿದ್ದರು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನನ್ನಮ್ಮನಿಗೆ ಮಾತ್ರ ಅಲ್ಲ, ಭಾರತೀಯ ತಾಯಂದಿರಿಗೆ ಮಾಡಿದ ಅವಮಾನ – ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು