Tag: ಧರ್ಮಸೇನಾ

  • ದಲಿತರಲ್ಲಿ ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಬಿಜೆಪಿಯದ್ದು: ಧರ್ಮಸೇನಾ ಕಿಡಿ

    ದಲಿತರಲ್ಲಿ ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಬಿಜೆಪಿಯದ್ದು: ಧರ್ಮಸೇನಾ ಕಿಡಿ

    ಹಾವೇರಿ: ಬಿಜೆಪಿಯವರು (BJP) ಹತ್ತು ಹಲವಾರು ಭರವಸೆ ಕೊಟ್ಟಿದ್ದು ಬಿಟ್ಟರೆ ಯಾವುದೂ ಈಡೇರಿಲ್ಲ. ದಲಿತರಲ್ಲಿ (Dalits) ಒಗ್ಗಟ್ಟು ಮೂಡಬಾರದು ಅನ್ನೋ ಭಾವನೆ ಅವರದು. ಅಂಬೇಡ್ಕರ್ ಅವರ ಸಂವಿಧಾನದ ಅಡಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ದಲಿತರ ಏಳಿಗೆಗಾಗಿ ಕಾಂಗ್ರೆಸ್ (Congress) ಹೋರಾಟ ಮಾಡುತ್ತಿದೆ ಎಂದು ಎಸ್‌ಸಿ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಧರ್ಮಸೇನಾ (Dharmasena) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿಯಲ್ಲಿ (Haveri) ಮಾತನಾಡಿದ ಅವರು ಜನವರಿ 8 ರಂದು ಎಸ್‌ಸಿ, ಎಸ್‌ಟಿ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಮೂವರಲ್ಲಿ ಒಬ್ಬರು ಬರುವ ನಿರೀಕ್ಷೆ ಇದೆ. ಜೀತಮುಕ್ತ ವಿಮೋಚನೆ ಮಾಡಿದ್ದು, ಮಲ ಹೊರುವ ಪದ್ಧತಿ ತೆಗೆದಿದ್ದು ಕಾಂಗ್ರೆಸ್ ಎಂದರು. ಇದನ್ನೂ ಓದಿ: ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚರಿಸಲಿದೆ: BMRCL

    ಕೇಂದ್ರದಲ್ಲಿ ಶೇ.50 ಮೀರಲು ಆಗೋದಿಲ್ಲ ಅಂತಿದ್ದಾರೆ. ದಲಿತರಲ್ಲಿ ಗೊಂದಲ ಮೂಡಿಸುವ ಕೆಲಸವಾಗುತ್ತಿದೆ. ದಲಿತರ ಸ್ಕೀಂ ಗಳನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ದಲಿತರ ಹಣವನ್ನು ಬೇರೆಯದಕ್ಕೆ ಉಪಯೋಗಿಸಬಾರದು ಎಂದು ಹೇಳಿದರು.

    2019ರಲ್ಲಿ ಪ್ರವಾಹ ಬಂದಾಗ ಸಾಕಷ್ಟು ಹಾನಿಯಾಗಿದೆ. ಮನೆ ಕೊಡಿ ಎಂದರೆ 5 ಲಕ್ಷಕ್ಕೆ 1 ಲಕ್ಷ ಕೇಳುತ್ತಿದ್ದಾರೆ. ಇದು ಕೇವಲ 40 ಪರ್ಸೆಂಟ್ ಅಲ್ಲ, ಎಷ್ಟಾಗುತ್ತದೆ ನೀವೇ ನೋಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಶುಕ್ರವಾರದಂದು ಹಾಸನದಲ್ಲಿ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಇದೀಗ ಪರಿಷತ್ ಸದಸ್ಯ ಧರ್ಮಸೇನಾ ಅವರು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರಿಗಾಗಿ ತನ್ನ ಸ್ಥಾನವನ್ನು ಬಿಟ್ಟು ಕೊಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧ್ರುವನಾರಾಯಣ್ ಅವರು, ಅಲ್ಪ ಮತಗಳಿಂದ ಸೋಲನ್ನ ಅನುಭವಿಸಿದ್ದಾರೆ. ಇದು ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದರು. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನಾನು ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನು ಯಾರಿಗೂ ಹೇಳಿಲ್ಲ, ಆದರೆ ಈಗ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಿದರು.

    ನನ್ನ ಅವಶ್ಯಕತೆ ಇರಬಹುದು, ಆದರೆ ಅದಕ್ಕಿಂತ ಹೆಚ್ಚು ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ, ಮೈಸೂರು ಚಾಮರಾಜನಗರದ ಜನ ಆರಿಸುವಂತದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕೆಂದು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು 1,817 ಮತಗಳ ಅಂತರದಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಧ್ರುವನಾರಾಯಣ್ 5,66,720 ಮತಗಳನ್ನು ಗಳಿಸಿದ್ದರೆ, ಬಿಎಸ್‍ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,208 ಮತಗಳನ್ನು ಪಡೆದಿದ್ದಾರೆ.