Tag: ಧರ್ಮದೇಟು

  • 300 ಹೆಣ ಬೀಳಿಸಿದ್ದೀವಿ ಎಂದ್ರಿ, ಈಗ ನೋಡಿದ್ರೆ 1 ಪಾಕಿಸ್ತಾನಿ ಹೆಣವೂ ಇಲ್ಲ- ಯುವಕನ ಪೋಸ್ಟ್

    300 ಹೆಣ ಬೀಳಿಸಿದ್ದೀವಿ ಎಂದ್ರಿ, ಈಗ ನೋಡಿದ್ರೆ 1 ಪಾಕಿಸ್ತಾನಿ ಹೆಣವೂ ಇಲ್ಲ- ಯುವಕನ ಪೋಸ್ಟ್

    ಚಾಮರಾಜನಗರ: ಸೈನಿಕರ ದಾಳಿ ಬಗ್ಗೆ ಪ್ರಶ್ನೆ ಮಾಡಿದ ಯುವಕನಿಗೆ ಧರ್ಮದೇಟು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಪ್ರಕಾಶ್ ಗೌಡ ಪೋಸ್ಟ್ ಹಾಕಿದ ವ್ಯಕ್ತಿ. ಪ್ರಕಾಶ್ ತನ್ನ ಫೇಸ್‍ಬುಕ್ ಖಾತೆಯಲ್ಲಿ, ಎಲ್ರೋ 300 ಹೆಣ ಬೀಳಿಸಿದ್ದೀವಿ ಎಂದು ಟಾಂಟಾಂ ಹೋಡ್ಕೋತಾ ಇದ್ರಲ್ಲ. ಈಗ ನೋಡಿದ್ರೆ ಒಂದು ಪಾಕಿಸ್ತಾನಿ ಹೆಣವೂ ಇಲ್ಲ. ಅಲ್ಲಿನ ಸಂತ್ರಸ್ತರು ಯಾರು ಚಚ್ಚಿಕೊಂಡು ಅಳುತ್ತನೂ ಇಲ್ವಲ್ರೋ ಎಂದು ಬರೆದುಕೊಂಡಿದ್ದಾನೆ.

    ಪ್ರಕಾಶ್ ಗೌಡನ ಪೋಸ್ಟ್ ನೋಡಿ ಯುವಕರು ರೊಚ್ಚಿಗೆದ್ದು ಆತನಿಗೆ ಧರ್ಮದೇಟು ನೀಡಿದ್ದಾರೆ. ನಂತರ ಯುವಕರು, ಪ್ರಕಾಶ್‍ನನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಈ ಪೋಸ್ಟ್ ನಲ್ಲಿ ದೇಶದ್ರೋಹಿ ಹೇಳಿಕೆ ಕಾಣಿಸುತ್ತಿಲ್ಲ. ಹೀಗಾಗಿ ಎಫ್‍ಐಆರ್ ಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಳತನ ಎಸಗಿದ್ದಕ್ಕೆ ಪ್ಯಾಂಟ್ ಕಳಚಿ, ಚಡ್ಡಿಯಲ್ಲಿ ನಿಲ್ಲಿಸಿ ಧರ್ಮದೇಟು!

    ಕಳ್ಳತನ ಎಸಗಿದ್ದಕ್ಕೆ ಪ್ಯಾಂಟ್ ಕಳಚಿ, ಚಡ್ಡಿಯಲ್ಲಿ ನಿಲ್ಲಿಸಿ ಧರ್ಮದೇಟು!

    ಉಡುಪಿ: ಕಳ್ಳತನ ಮಾಡಿದ್ದಕ್ಕೆ ಇಬ್ಬರು ಯುವಕರ ಪ್ಯಾಂಟ್ ಕಳಚಿ, ಚಡ್ಡಿಯಲ್ಲಿ ನಿಲ್ಲಿಸಿ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗುರುವಾರ ನಡೆದಿದೆ.

    ಇಂಡಸ್ಟ್ರಿಯಲ್ ಏರಿಯಾದ ಗ್ಯಾರೇಜ್‍ನಲ್ಲಿ ರಿಪೇರಿಗೆ ಬಂದಿದ್ದ ಕಾರಿನ ಮ್ಯೂಸಿಕ್ ಸಿಸ್ಟಂ, ಬೆಲೆಬಾಳುವ ಪಾರ್ಟ್‍ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಇತ್ತೀಚೆಗೆ ಉಡುಪಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನಲ್ಲಿರುವ ಬೆಲೆ ಬಾಳುವ ವಸ್ತುಗಳ ಕಳ್ಳತನ ಹೆಚ್ಚಾಗಿತ್ತು. ಮ್ಯೂಸಿಕ್ ಸಿಸ್ಟಂ, ಕಾರಿನ ಕ್ಯಾಮೆರಾಗಳು, ಸ್ಪೀಕರ್, ಪೆಟ್ರೋಲ್, ಕಾರಿನಲ್ಲಿದ್ದ ಹಣ, ಪರ್ಸ್ ಹೀಗೆ ಸಿಕ್ಕಿದ್ದೆಲ್ಲವನ್ನು ಕಳ್ಳರು ದೋಚಿ ಪರಾರಿಯಾಗುತ್ತಿದ್ದರು.

    ಕಳೆದ ಎರಡು ದಿನದ ಹಿಂದೆ ಮಣಿಪಾಲದಲ್ಲಿ ಇಬ್ಬರು ಯುವಕರು ಕಳ್ಳತನ ಮಾಡುವಾಗ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಳ್ಳರ ಕಾಟಕ್ಕೆ ಬೇಸತ್ತಿದ್ದ ಗ್ಯಾರೇಜ್ ಮಾಲೀಕರು ಹಾಗೂ ಸ್ಥಳೀಯರು ಸೇರಿ ಕಳ್ಳರಿಗೆ ಗೂಸಾ ಕೊಟ್ಟಿದ್ದಾರೆ. ನಂತರ ಕಳ್ಳರು ನಾವು ಕಾಲೇಜು ವಿದ್ಯಾರ್ಥಿಗಳು ಖರ್ಚಿಗೆ ಹಣ ಇಲ್ಲ ಅಂತ ಕಳ್ಳತನ ಮಾಡುತ್ತಿದ್ದೆವು ಎಂದು ಹೇಳಿದಾಗ, ಜನರು ಯುವಕರನ್ನು ಪೊಲೀಸರಿಗೆ ಒಪ್ಪಿಸದೆ ಬುದ್ದಿ ಹೇಳಿ ಬಿಟ್ಟು ಕಳುಹಿಸಿದ್ದಾರೆ.

    ಹಲ್ಲೆ ನಡೆಸುತ್ತಿರುವ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ಸಾಮೂಹಿಕ ಹಲ್ಲೆ ಈಗ ಪೊಲೀಸರ ನಿದ್ದೆ ಕೆಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಡುಗಿಯರನ್ನ ಚುಡಾಯಿಸ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಸಖತ್ ಗೂಸಾ!

    ಹುಡುಗಿಯರನ್ನ ಚುಡಾಯಿಸ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರಿಂದ ಸಖತ್ ಗೂಸಾ!

    ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಮಾಧವಪುರ ಬಡಾವಣೆಯಲ್ಲಿ ನಡೆದಿದೆ.

    ದಿನ ಸಂಜೆ ಸಮಯದಲ್ಲಿ ಮಾಧವಪುರ ಓಣಿಯಲ್ಲಿ ಓಡಾಡುವ ಮಹಿಳೆಯರು ಹಾಗೂ ಯುವತಿಯರಿಗೆ ಈತ ಚುಡಾಯಿಸುತ್ತಿದ್ದ. ಈತನ ಬಗ್ಗೆ ಕೆಲ ಯುವತಿಯರು ತಮ್ಮ ಪೋಷಕರಿಗೆ ತಿಳಿಸಿದ್ದರು. ಶುಕ್ರವಾರ ಸಂಜೆ ಮತ್ತೆ ಯುವತಿಯರನ್ನು ಚುಡಾಯಿಸುವಾಗ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರು ಹಿಡಿದಿದ್ದಾರೆ.

    ಕಾಮುಕನನ್ನು ಹಿಡಿದ ಮಾಧವಪುರ ಬಡವಾಣೆಯ ನಿವಾಸಿಗಳು ಹಾಗೂ ಯುವತಿಯರ ಪೋಷಕರು, ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾರೆ. ಆದರೆ ಹಲ್ಲೆಗೊಳಗಾದ ಯುವಕನ ಹೆಸರು ತಿಳಿದುಬಂದಿಲ್ಲ. ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಮುಂದೆ ಈ ಕಡೆ ಸುಳಿಯದಂಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಈ ಘಟನೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

     

  • ಉಚಿತವಾಗಿ ಟೈಲರಿಂಗ್ ಕಲಿಸ್ತೀನಿ ಎಂದು ಹೇಳಿ ಹುಡುಗಿಯರ ಮೈ, ಕೈ ಮುಟ್ಟುತ್ತಿದ್ದವನಿಗೆ ಬಿತ್ತು ಗೂಸಾ

    ಉಚಿತವಾಗಿ ಟೈಲರಿಂಗ್ ಕಲಿಸ್ತೀನಿ ಎಂದು ಹೇಳಿ ಹುಡುಗಿಯರ ಮೈ, ಕೈ ಮುಟ್ಟುತ್ತಿದ್ದವನಿಗೆ ಬಿತ್ತು ಗೂಸಾ

    ಚಿಕ್ಕಮಗಳೂರು: ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಜನರು ಧರ್ಮದೇಟು ಕೊಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದಲ್ಲಿ ನಡೆದಿದೆ.

    ಹಸನಬ್ಬ ಸಾರ್ವಜನಿಕರಿಂದ ನಡು ಬೀದಿಯಲ್ಲಿ ಸಖತ್ತಾಗಿ ಗೂಸಾ ತಿಂದ ವ್ಯಕ್ತಿ. ಮುತ್ತಿನಕೊಪ್ಪದಲ್ಲಿ ಟೈಲರಿಂಗ್ ಶಾಪ್ ಇಟ್ಟಿದ್ದ ಈತ ಕಲಿಸುವ ನೆಪದಲ್ಲಿ ದಲಿತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ನಾನು ನಿಮ್ಮೆಲ್ಲರಿಗೂ ಉಚಿತವಾಗಿ ಟೈಲರಿಂಗ್ ಕಲಿಸಿಕೊಡಿಸುತ್ತೇನೆ ಅಂತಾ ಸುತ್ತಮುತ್ತಲಿನ ದಲಿತ ಕಾಲೋನಿ ಯುವತಿಯರನ್ನು ಮರಳು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ.

    ಆದರೆ ಇವತ್ತು ಅವನ ನಸೀಬು ಕೈ ಕೊಟ್ಟಿತ್ತು ಅನ್ನಿಸುತ್ತದೆ. ಈತನ ಅಸಭ್ಯವ ವರ್ತನೆ ಬಗ್ಗೆ ತಿಳಿದ ಸ್ಥಳೀಯರು ಟೈಲರಪ್ಪನ ಮುಖಮೂತಿ ನೋಡದೆ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಇನ್ನು ಹಸನಬ್ಬನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಜೊತೆ ಸಂಸಾರ ಮಾಡೋದ ಬಿಟ್ಟು ಒಬ್ಬಂಟಿಯಾಗಿದನಂತೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಹಸನಬ್ಬ ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿಯರನ್ನು ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

  • ನಿತ್ಯ ಹೆಂಡತಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಅಕ್ಕನಿಂದಲೇ ಧರ್ಮದೇಟು

    ನಿತ್ಯ ಹೆಂಡತಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಅಕ್ಕನಿಂದಲೇ ಧರ್ಮದೇಟು

    ಕೊಪ್ಪಳ: ಭಾಗ್ಯಾನಗರದಲ್ಲಿ ನಿತ್ಯ ಹೆಂಡತಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನ ಸ್ವತಃ ಅಕ್ಕನೆ ಕೈಕಾಲು ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ.

    ಕಳಕಪ್ಪ ಡಾಣಾಪುರ ಎಂಬಾತ ಕೂದಲು ಉದ್ಯಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಬಂದ ಹಣವನ್ನೆಲ್ಲ ಕುಡಿದು, ಮನೆಗೆ ಬಂದು ಹೆಂಡತಿ ಮಕ್ಕಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದ.

    ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಕಳಕಪ್ಪ ಹೆಂಡತಿ ಮೇಲೆ ಹಲ್ಲೆ ಮಾಡಿದ್ದಾನೆ. ಹೆಂಡತಿಯನ್ನು ಮನೆಯಿಂದ ಹೊರಹಾಕಿ, ತನ್ನ ಮಗಳನ್ನು ತನ್ನ ತಂಗಿಯ ಮನೆಗೆ ತಂದು ಬಿಟ್ಟಿದ್ದಾನೆ. ಈತನ ವರ್ತನೆಯಿಂದ ಬೇಸತ್ತು, ಸ್ವತಃ ಅಕ್ಕನೇ ತನ್ನ ಮನೆಮುಂದೆ ಕೈ ಕಾಲುಗಳನ್ನ ಕಟ್ಟಿಹಾಕಿ ನಾಲ್ಕೈದು ಧರ್ಮದೇಟು ನೀಡಿ ಬುದ್ಧಿ ಹೇಳಿದರು. ನಿನ್ನ ಹೆಂಡತಿಯನ್ನು ಎಲ್ಲಿಗೆ ಕಳಿಸಿದ್ದಿಯಾ, ಅವಳು ಬರುವವರೆಗೆ ನಿನ್ನನ್ನೂ ಬಿಡುವುದಿಲ್ಲ ಎಂದು ತಮ್ಮನೆಂಬುದನ್ನು ಮರೆತು ಧರ್ಮದೇಟು ನೀಡಿದ್ದಾರೆ.

    ಗಂಡನ ಕಿರುಕುಳಕ್ಕೆ ಬೇಸತ್ತು ಮನೆಬಿಟ್ಟು ಹೋಗಿದ್ದ ಹೆಂಡತಿಯನ್ನು ಸ್ಥಳೀಯರು ಹುಡುಕಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ದುಡಿದ ಹಣವನ್ನ ಮನೆಗೆ ಕೊಡುವುದಿಲ್ಲ, ಬದಲಾಗಿ ನಿತ್ಯ ಕಿರುಕುಳ ನೀಡುತ್ತಾನೆ. ಈತನ ವರ್ತನೆಯಿಂದ ಬೇಸತ್ತು ಮನೆಯಿಂದ ಹೋಗಿದ್ದೆ ಎಂದು ಹೆಂಡತಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಸ್ಥಳೀಯರು ಕೊಪ್ಪಳ ನಗರ ಪೊಲೀಸರಿಗೆ ನೀಡಿದ ಮಾಹಿತಿಯಿಂದ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳಕಪ್ಪನ ನ್ನು ತಮ್ಮ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು.