Tag: ಧರ್ಮಗುರುಗಳು

  • ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ

    ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ

    ಗುವಾಹಟಿ: ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ಇಬ್ಬರು ಧರ್ಮಗುರುಗಳ ಬಂಧನದ ಬೆನ್ನಲ್ಲೇ ಅಸ್ಸಾಂನಲ್ಲಿ ಹೊರ ರಾಜ್ಯಗಳಿಂದ ಬರುವ ಧರ್ಮಗುರುಗಳು ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

    ಅಸ್ಸಾಂ ಮಸೀದಿಗಳು ಮತ್ತು ಮದರಸಾಗಳಲ್ಲಿನ ಧರ್ಮಗುರುಗಳು ರಾಜ್ಯದ ಹೊರಗಿನಿಂದ ಬಂದರೆ ಸರ್ಕಾರಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಸಿಎಂ ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    Idgah
    ಸಾಂದರ್ಭಿಕ ಚಿತ್ರ

    ಬಂಧಿತರಲ್ಲಿ ಒಬ್ಬ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡುತ್ತಿದ್ದ. ಹಲವು ಗ್ರಾಮಗಳಲ್ಲಿ ಜಿಹಾದಿ ಜಾಲವನ್ನು ವಿಸ್ತರಿಸಿದ್ದ. ಜಿಹಾದಿ ಜಾಲವನ್ನು ವಿಸ್ತರಿಸುವುದಕ್ಕಾಗಿ ಆರು ಬಾಂಗ್ಲಾದೇಶಿ ಪ್ರಜೆಗಳು ಅಸ್ಸಾಂ ಪ್ರವೇಶಿಸಿದ್ದರು. ಆರು ಬಾಂಗ್ಲಾದೇಶಿ ಪ್ರಜೆಗಳ ಪೈಕಿ ಒಬ್ಬರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದು, ಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅಸ್ಸಾಂ ಪೊಲೀಸರು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

    ನಾವು ಈಗ ಕೆಲವು ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP)ಗಳನ್ನು ಮಾಡಿದ್ದೇವೆ. ಯಾವುದೇ ಇಮಾಮ್ ಗ್ರಾಮಕ್ಕೆ ಬಂದರೆ, ನೀವು ಪರಿಶೀಲನೆಗಾಗಿ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ಪೊಲೀಸರು ಪರಿಶೀಲಿಸಿದ ನಂತರ, ಜನರು ಅವರನ್ನು ಇಮಾಮ್ ಆಗಿ ನೇಮಿಸಿಕೊಳ್ಳಬಹುದು. ಅಸ್ಸಾಂನ ಮುಸ್ಲಿಂ ಸಮಾಜವು ಈ ಕುರಿತು ನಮಗೆ ತಮ್ಮ ಬೆಂಬಲವನ್ನು ನೀಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ರೈಲ್ವೆ ಹಳಿಗೆ ತಳ್ಳಿ, ಮಕ್ಕಳೊಂದಿಗೆ ವ್ಯಕ್ತಿ ಎಸ್ಕೇಪ್

    ASSAM MADARASA MADRASA

    ಈ ನಿಯಮಗಳು ಅಸ್ಸಾಂ ನಿವಾಸಿಗಳಿಗೆ ಅನ್ವಯಿಸುವುದಿಲ್ಲ. ಅಸ್ಸಾಂ ನಿವಾಸಿಗಳಿಗೆ ತಮ್ಮ ವಿವರಗಳನ್ನು ನೋಂದಾಯಿಸುವ ಅಗತ್ಯವಿಲ್ಲ. ಆದರೆ ಹೊರ ರಾಜ್ಯದಿಂದ ಬರುವವರು ತಮ್ಮ ವಿವರಗಳನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

    ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಶರ್ಮಾ ಇತ್ತೀಚೆಗೆ ಹೇಳಿದ್ದರು. ಈ ವರ್ಷದ ಮಾರ್ಚ್‌ನಿಂದ ಇಲ್ಲಿಯವರೆಗೆ 40 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

    ಎರಡು ದಿನಗಳ ಹಿಂದೆ ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಧರ್ಮಗುರುಗಳು (ಅಬ್ದುಸ್ ಸೊಬಹಾನ್, ಜಲಾಲುದ್ದೀನ್) ರಾಜ್ಯದಲ್ಲಿ ಮುಸ್ಲಿಂ ಯುವಕರನ್ನು ತೀವ್ರಗಾಮಿಗೊಳಿಸುತ್ತಿದ್ದಾರೆ. ಭಯೋತ್ಪಾದಕ ಸಂಘಟನೆ ಅಲ್‌ಖೈದಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಪಾಟ್ನಾ: ಭಾರತೀಯ ಸಶಸ್ತ್ರ ಪಡೆಗಳಿಗೆ ಮುಸ್ಲಿಂ ಯುವಕರು ಸೇರುವಂತೆ ಉತ್ತೇಜಿಸಲು ಮುಸ್ಲಿಂ ಸಂಘಟನೆಗಳಿಂದ ಶುಕ್ರವಾರದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.

    ಪ್ರಮುಖ ಮುಸ್ಲಿಂ ಸಂಘಟನೆಗಳು, ವೃತ್ತಿಪರರು ಹಾಗೂ ಇಮಾಮ್‌ಗಳ ಸಂಘಗಳು ಅಗ್ನಿಪಥ್ ಯೋಜನೆ ಮೂಲಕ ಮುಸ್ಲಿಂ ಯುವಕರೂ ಭಾರತೀಯ ಸೇನೆ ಸೇರುವಂತೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ವ್ಯಾಪಕ ಪ್ರತಿಭಟನೆಗಳ ನಡುವೆ ಕಾನ್ಪುರದಲ್ಲಿ ಬದಲಾವಣೆ ತರಲಾಗುತ್ತಿದ್ದು, ಶುಕ್ರವಾರ ಜೂನ್ (24) ಕಾನ್ಪುರದ ಧರ್ಮಗುರುಗಳು ಅಗ್ನಿಪಥ್ ಯೋಜನೆಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಯುವಕರನ್ನು ಒತ್ತಾಯಿಸಲಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಶುಕ್ರವಾರ ಕಾನ್ಪುರದಲ್ಲಿ ಮುಸ್ಲಿಮರು ಪ್ರಾರ್ಥಗೂ ಮುನ್ನ ಎಲ್ಲ ಮಸೀದಿಗಳಲ್ಲಿ ಮನವಿ ಮಾಡಲಿದ್ದಾರೆ. ಮುಸ್ಲಿಮರಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿರುವ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ (AMP) ಸಂಸ್ಥೆಯು ಈ ಅಭಿಯಾನವನ್ನು ಮುನ್ನಡೆಸಲಿದೆ. ಜೊತೆಗೆ ಉಪಕ್ರಮಕ್ಕಾಗಿ ಮುಸ್ಲಿಂ ಧರ್ಮಗುರುಗಳನ್ನೂ ತೊಡಗಿಸಿಕೊಳ್ಳಲಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಂ ಮುಖಂಡ ಶಾಹಿದ್ ಕಮ್ರಾನ್ ಖಾನ್ ಹೇಳಿದ್ದಾರೆ.

    10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು ಎಂದು ಧರ್ಮಗುರುಗಳು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    Live Tv

  • ಕೋರ್ಟ್ ಆದೇಶವನ್ನು ಪಾಲಿಸೋಣ : ಧರ್ಮ ಗುರುಗಳಿಂದ ಮನವಿ

    ಕೋರ್ಟ್ ಆದೇಶವನ್ನು ಪಾಲಿಸೋಣ : ಧರ್ಮ ಗುರುಗಳಿಂದ ಮನವಿ

    ಬೆಂಗಳೂರು: ಹಿಜಬ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು.

    ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಶರಣರು, ಮುಸ್ಲಿಂ ಧರ್ಮಗುರು ಮೌಲಾನ್ ಮಕ್ಸೂದ್ ಸಾಹೇಬ್ ಸೇರಿದಂತೆ 10 ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಡಾ ಶಿವಮೂರ್ತಿ ಮುರುಘಾ ಶರಣರು, ಅನೇಕ ಸಂದರ್ಭಗಳಲ್ಲಿ ಹಲವು ಸಮಸ್ಯೆಗಳನ್ನು ಕಂಡಿದ್ದೇವೆ. ಕೊರೊನಾ ಬಂದಾಗಲೂ ಆಹಾರ, ಔಷಧ ಕಿಟ್ ವಿತರಣೆ ಮಾಡಿದ್ದೇವೆ. ನೈಸರ್ಗಿಕ ಸಮಸ್ಯೆ ಬಂದಾಗಲೂ ಸಮಸ್ಯೆಗೆ ಸ್ಪಂದಿಸಿದ್ದೇವೆ. ಸಮಾಜದಲ್ಲಿ ಉದ್ಬವವಾಗಿರುವ ಸಂದ್ಗಿತ ಸಮಸ್ಯೆ ಎದುರಾಗಿದೆ. ಇದು ಮಾನವ ನಿರ್ಮಿತ ಸಂದರ್ಭ ಇದಾಗಿದೆ. ಎಲ್ಲ ಧರ್ಮದಲ್ಲೂ ಧಾರ್ಮಿಕ ಮುಖಂಡರಿದ್ದಾರೆ. ನಾವು ಸಮಾಜಕ್ಕೆ ಶಾಂತಿ ರವಾನೆ ಸಾರಬೇಕಾಗಿದೆ. ಇವತ್ತು ಸಾಮಾಜಿಕ ಸಾಮರಸ್ಯ ಎಲ್ಲರಿಗೂ ಬೇಕಾಗಿದೆ. ಸಾಮಾಜಿಕ ಶಾಂತಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ. ಸಮವಸ್ತ್ರ, ವಸ್ತ್ರ ಸಂಹಿತೆ ಎಲ್ಲರ ನೆಮ್ಮದಿ ಕೆಡಿಸಿದೆ. ಈ ವಸ್ತ್ರಸಂಹಿತೆಯಲ್ಲಿ ಶಾಂತಿ ಬೇಕಾದಾಗ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾವೆಲ್ಲ ಶಾಂತಿ, ಸಾಮರಸ್ಯದ ಪರವಾಗಿದ್ದೇವೆ. ಈಗ ಎದ್ದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸದ್ಯ ಕೋರ್ಟ್‍ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್ ಹೇಳಿದಂತೆ ನಾವೆಲ್ಲ ಕೇಳಬೇಕಾಗಿದೆ. ಅದಕ್ಕೂ ಮುನ್ನ ಶಾಂತಿ ನೆಮ್ಮದಿ ಬೇಕಾದರೆ ಸದ್ಯಕ್ಕೆ ಸಾಮರಸ್ಯ ಕಾಯಬೇಕಾಗಿದೆ. ನಾವೆಲ್ಲ ಶಾಂತಿ ಮಂತ್ರ ಜಪಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದರು ರಾಜೇಶ್: ಕೆ.ಗೋಪಾಲಯ್ಯ ಕಂಬನಿ

    Religious-leaders

    ಸದ್ಯ ಕೋರ್ಟ್ ಯಾವುದೇ ತೀರ್ಪು ಕೊಟ್ಟರೂ ಅದನ್ನು ಪಾಲಿಸಬೇಕಾಗುತ್ತದೆ. ಅಡುಗೆ, ಮನಸ್ಸು ಎಲ್ಲವೂ ಕೆಟ್ಟರು ಕ್ಷಣಿಕ ಮಾತ್ರ. ಅದೇ ನಿಮಗೆ ಶಿಕ್ಷಣ ಕೆಟ್ಟರೆ ವಾತವಾರಣವೇ ಹದಗೆಡಲಿದೆ. ಕೇಸರಿ ಹಾಕಿಕೊಂಡು ಬರುವವರ ಸಂಖ್ಯೆ ಇಳಿಕೆಯಾಗಿದೆ. ಸದ್ಯ ಕೇಸ್ ಕೋರ್ಟ್ ಬಳಿ ಇದೆ. ಇದರ ತೀರ್ಪಿನಂತೆ ಎಲ್ಲರೂ ನಡೆಯಬೇಕಾಗಿದೆ. ಎಲ್ಲರೂ ಸೇರಿ ಸಾಮರಸ್ಯ ಕಾಪಾಡಬೇಕಾಗಿದೆ. ವ್ಯವಸ್ಥೆ ಹೀಗೆ ಇರಲಿ ಎಂದು ನಾವು ಹೇಳಲು ಆಗಲ್ಲ. ಸರ್ಕಾರ, ಕೋರ್ಟ್ ವ್ಯವಸ್ಥೆ ಹೇಳಲಿ. ಹೀಗಿರುವಾಗ ನಾವು ಯಾರಿಗೂ ಹೀಗೆ ಇರಿ ಎಂದು ಹೇಳಲು ಆಗಲ್ಲ. ಕೋರ್ಟ್ ಆದೇಶದ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದೇವೆ.

     

     

    ಆಲ್ ಇಂಡಿಯಾ ಮುಲ್ಲಿ ಕೌನ್ಸಿಲ್ ಮೌಲಾನ ಸುಲೇಮಾನ್ ಖಾನ್: ಈಗಾಗಲೇ ಶಾಂತಿಯೇ ಮುಖ್ಯ ಎಂಬ ವಿಚಾರ ತಲುಪಿಸಲಾಗಿದೆ. ಭಾರತ, ಕರ್ನಾಟಕ ವಿವಿಧತೆಯ ಏಕತೆಯನ್ನು ಸಾರುವ ದೇಶ ಎಂಬುದು ತಿಳಿದಿದೆ. ಒಂದೇ ಸತ್ಯವನ್ನು ನೂರಾರು ರೀತಿ ಎಲ್ಲವನ್ನು ವಿವರಿಸಲಾಗುತ್ತದೆ. ಶಾಂತಿಗಿಂತ ಯಾವುದು ದೊಡ್ಡದಲ್ಲ ನಿಮಗೆ ಗೊತ್ತಿರಲಿ. ವಿವಿಧತೆ, ಐಕ್ಯತೆ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ. ಚಿತ್ರದುರ್ಗದ ಮುರುಘಾ ಮಠ ಎಲ್ಲ ಧರ್ಮದ ಪ್ರತೀಕವಾಗಿದೆ. ಧಾರ್ಮಿಕ ಆಚರಣೆಗಳನ್ನು ಒಬ್ಬರ ಮೇಲೆ ಒಬ್ಬರು ಅವಲಂಬಿಸುತ್ತೇವೆ. ಬೆಂಗಳೂರು ಕರಗ ಹಿಂದು – ಮುಸ್ಲಿಂ ಪ್ರತೀಕವಾಗಿದೆ. ಎಲ್ಲ ಧರ್ಮದವರು ಸೌರ್ಹಾದತೆಯಿಂದ ನಡೆದುಕೊಳ್ಳುತ್ತೇವೆ. ದರ್ಗಾಕ್ಕೆ ಹಿಂದೂಗಳು ಹೋಗಿ ಪ್ರದಕ್ಷಿಣೆ ಹಾಕುತ್ತಾರೆ. ಹಾಗೇ ಬೆಂಗಳೂರು ಕರಗ ಬಗ್ಗೆ ಮುಸ್ಮಿಮರು ಸಂಪ್ರದಾಯ ಆಚರಿಸುತ್ತಾರೆ. ರಾಜ್ಯದ ಜನರಿಗೆ ಒಂದೆ ಸಂದೇಶ ನೀಡುತ್ತೇನೆ. ಕೋರ್ಟ್ ತೀರ್ಪು ಬರುವವರೆಗೂ ಎಲ್ಲರೂ ಸೌಹರ್ದತೆಯಿಂದ ನಡೆದುಕೊಳ್ಳಬೇಕಾಗಿದೆ. ರಾಜಕೀಯ ವ್ಯಕ್ತಿಗಳು ಇದು ದೊಡ್ಡ ಸಮಸ್ಯೆಯಾಗಿ ಬೆಳೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ. ಹಿಜಬ್ ಸಂಬಂಧ ಅಂತಿಮವಾದ ತೀರ್ಪು ಬಂದಿಲ್ಲ. ಮಧ್ಯಂತರ ತೀರ್ಪು ಮಾತ್ರ ಬಂದಿದೆ. ಕೋರ್ಟ್ ಮಧ್ಯಂತರ ತೀರ್ಪು ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ಪೋಷಕರು, ಶಿಕ್ಷಕರು, ಮಕ್ಕಳು, ಉಪನ್ಯಾಸಕರು ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕಾಗಿದೆ. ತರಗತಿ ಒಳಗೆ ಮಾತ್ರ ಹಿಜಬ್ ಧರಿಸಬಾರದೆಂದು ಕೋರ್ಟ್ ಹೇಳಿದೆ. ಸರ್ಕಾರ ಒಂದು ಹೆಜ್ಜೆ ತೆಗೆದುಕೊಳ್ಳಬೇಕಾಗಿದೆ. ಕೊರೊನಾ ರೀತಿಯೇ ಆನ್ ಲೈನ್ ಕ್ಲಾಸ್ ನಡೆಸಿ. ಧಾರ್ಮಿಕ ಭಾವನೆ ಪಾಲನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಶಿಕ್ಷಣ ಮುಖ್ಯ ಹಾಗಂತ ಗಲಾಟೆ ಬೇಡ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಹಲವರು ತಡೆಯುತ್ತಿದ್ದಾರೆ. ಇದು ಭವಿಷ್ಯವನ್ನ ತಡೆದಂತೆ ಆಗಿದೆ. ವಿದ್ಯಾರ್ಥಿಗಳಿಗೆ ನಾನು ಯಾವುದೇ ಸಲಹೆ ಕೊಡಲ್ಲ. ಸರ್ಕಾರ ತಮ್ಮ ಆದೇಶ ವಾಪಸ್ ಪಡೆಯಿರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಂಗಭೂಮಿಯಲ್ಲಿ ‘ವಿದ್ಯಾಸಾಗರ್’ ಎಂದು ಗುರುತಿಸಿಕೊಂಡಿದ್ದರು ನಟ ರಾಜೇಶ್

    Religious-leaders

    ಫಾದರ್ ಜಾನ್ ಆರ್ಚ್ ಬಿಷಪ್: ಸಮುದಾಯ, ಸಮಾಜವನ್ನು ನೋವು ಮಾಡದಂತೆ ಸದ್ಯ ನಿರ್ಧಾರ ಆಗಬೇಕಾಗಿದೆ. ದೇವಾಲಯ ಕೆಡುವುದು ಎಲ್ಲವೂ ನೋವು ತಂದಿದೆ. ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

    ಬಸವಗುರು ಮಾದಾರ ಚೆನ್ನಾರ ಸ್ವಾಮೀಜಿ: ಇಂದಿನ ಪ್ರಸ್ತುತ ಸಂದರ್ಭದಲ್ಲಿ ಶಾಲೆಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿಯನ್ನು ಕಾಪಾಡಬೇಕಿದೆ. ತೀರ್ಪು ಬರುವವರೆಗೂ ಧರ್ಮಗುರುಗಳು ಶಾಂತಿಯನ್ನು ಕಾಪಾಡಲು ಶ್ರಮಿಸಬೇಕಿದೆ. ತಮ್ಮ ಧರ್ಮದವರಿಗೆ ಎಲ್ಲರೂ ಸೂಚನೆಯನ್ನು ನೀಡಬೇಕಿದೆ ಎಂದು ತಿಳಿಸಿದ್ದಾರೆ.

    ಇಮ್ಮಡಿ ಸಿದ್ದರಾಮೇಶ್ವರ ಗುರುಗಳು: ಭಾರತ ಜಾತ್ಯಾತೀತ ರಾಷ್ಟ್ರ, ವಿಶ್ವ ಧರ್ಮಿ ನೆಲ ನಮ್ಮದು, ಧಾರ್ಮಿಕ ವಿಚಾರಕ್ಕೆ ಗಲಾಟೆ ಆಗುತ್ತಿರುವುದು ಈ ಸಂದರ್ಭಕ್ಕೆ ಮಾತ್ರವಲ್ಲ. ಇತಿಹಾಸದಲ್ಲೇ ತಿಳಿದಂತೆ ಎಲ್ಲ ಕಾಲ ಮಟ್ಟದಲ್ಲೂ ಗದ್ದಲಗಳು ನಡೆದಿದೆ. ರಾಜ್ಯಕ್ಕೆ ಬಂದಾಗ ಕನ್ನಡಿಗ, ದೇಶ ಬಂದಾಗ ಭಾರತ. ಎಲ್ಲ ಧರ್ಮದವರು ಸಹಿಷ್ಣುತೆ ಕಾಪಾಡಲು ಮೊದಲಿಗೆ ಸಂವಿಧಾನ ಜಾರಿಯಲ್ಲಿದೆ. ಈಗಲೂ ಈ ಸಮಸ್ಯೆಗೆ ಪರಿಹಾರ ಸಂವಿಧಾನದಿಂದ ಸಿಗಲಿದೆ ಎಂಬ ನಂಬಿಕೆಯಿದೆ. ಕೋರ್ಟ್ ತೀರ್ಪಿನವರೆಗೂ ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಿ. ನ್ಯಾಯಾಲಯ ಕಾಲ, ಕಾಲಕ್ಕೆ ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳಬೇಕು, ಪಾಲಿಸಬೇಕು. ಸರ್ಕಾರಕ್ಕೆ ಈಗ ಸಂಘರ್ಷ ಹೆಚ್ಚಲಿದೆ ಎಂಬ ಸುಳಿವಿದ್ದರೆ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ಕೊಡಿ ಎಂದು ತಿಳಿಸಿದ್ದಾರೆ.

    ಮೌಲಾನ ಮಕ್ಸೂರ್ ಇಮ್ರಾನ್ : ಶಾಲೆ ಒಳಗೆ ಕೇಸರಿ, ಹಿಜಬ್ ಬಗ್ಗೆ ಎಲ್ಲ ಬಿಟ್ಟು ಬಿಡಿ. ಮೊದಲು ಮುಸ್ಮೀಂ ಹುಡುಗಿಯರು ಒಂದಲ್ಲ ಅಂತಿದ್ರು. ಈಗ ಕೇಸರಿ, ಹಿಜಬ್ ಅಂತ ಗಲಾಟೆ ಬೇಡ. ಕೇಸರಿ ಹಾಕಿಕೊಳ್ಳುತ್ತೇವೆ ಎಂದರೆ ಹಾಕಿಕೊಳ್ಳಲಿ. ಹಿಜಬ್ ಮೊದಲಿನಿಂದಲೂ ಹಾಕಲಾಗುತ್ತಿದೆ. ಈಗ ವಿವಾದ ಮಾತ್ರ ಬೇಡ. ಪರೀಕ್ಷೆಗೆ ಎಲ್ಲರೂ ಪ್ರಾಮುಖ್ಯತೆ ಕೊಡಿ. ವಿದ್ಯಾರ್ಥಿಗಳಿಗೆ ಹಿಜಬ್ ಹಾಕಿ ಬಿಡಿ ಅಂತ ಹೇಳಲ್ಲ. ನಾವು ಗುರುಗಳು ಎಲ್ಲರಿಗೂ ಇದು ಸರಿ – ತಪ್ಪು ಅಂತ ತೋರಿಸುತ್ತೇವೆ. ಹಾಗೇ ಯಾವುದಕ್ಕೂ ನಾವು ವಸ್ತ್ರಗಳ ಬಗ್ಗೆ ಸಲಹೆ ಕೊಡಲ್ಲ. ಪೊಲೀಸ್ ಹಾಕುತ್ತೇವೆ. ಹಿಜಬ್ ತೆಗೆಸುತ್ತೇವೆ ಅಂತ ಹೇಳಿಲ್ಲ. ಹಾಕಿಕೊಂಡು ಹೋಗಿ, ಹಾಕಿಕೊಂಡು ಹೋಗಬೇಡಿ ಅಂತ ನಾವು ಹೇಳುವುದಿಲ್ಲ ಎಂದಿದ್ದಾರೆ. ಇದನ್ನು ಓದಿ: ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಮೇಘನಾ ರಾಜ್

    ಕೊನೆಯಲ್ಲಿ ಎಲ್ಲ ಹಿಂದೂ, ಮುಸ್ಮಿಂ ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇನೆ. ಶಾಂತಿಯಿಂದ ಇರಿ. ಗಲಾಟೆ ಬೇಡ. ಹಿಜಬ್, ಕೇಸರಿ ಬೇಡ ಬೇಕು ಅಂತ ನಾವು ಸಂದೇಶ ಕೊಡಲ್ಲ ಎಂದು ಹೇಳುತ್ತಾ, ಕೊನೆಯಲ್ಲಿ ಎಲ್ಲ ಧರ್ಮಗುರುಗಳು ಜೈ ಹಿಂದ್ ಜೈ ಕರ್ನಾಟಕ ಎಂದು ಕೈ ಹಿಡಿದು ತೋರಿಸಿದ್ದಾರೆ.