Tag: ಧರ್ಮ

  • ಧರ್ಮಂ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಕಬ್ಜ ನಿರ್ದೇಶಕ ಆರ್ ಚಂದ್ರು

    ಧರ್ಮಂ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಕಬ್ಜ ನಿರ್ದೇಶಕ ಆರ್ ಚಂದ್ರು

    ಧರ್ಮಂ (Dharmam) ಅನ್ನೋ ವಿಭಿನ್ನ ಕಥಾಹಂದರದ ಸಿನಿಮಾವನ್ನ ನಿರ್ದೇಶಕ ಆರ್.ಚಂದ್ರು (R Chandru) ಮೆಚ್ಚಿ ಶುಭ ಹಾರೈಸಿದ್ದಾರೆ. ಸಿನಿಮಾದ ನೀನೇ ತಂದ ಒಲವಾ ಒಡವೆ ಹಾಡನ್ನ ರಿಲೀಸ್ ಮಾಡಿ ತಮ್ಮ ತಾಜ್ ಮಹಲ್ ಸಿನಿಮಾವನ್ನು ಮೆಲುಕು ಹಾಕಿದ್ದಾರೆ. ಧರ್ಮಂ ಸಿನಿಮಾಗೆ ನಾಗಮುಖ ಆ್ಯಕ್ಷನ್‌ಕಟ್ ಹೇಳಿದ್ದು, ಸಿನಿಮಾದಲ್ಲಿ ಸಾಯಿಶಶಿ ನಾಯಕನಾಗಿ ಕಾಣಿಸಿಕೊಂಡಿದ್ರೆ ನಟಿ ವರ್ಣಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    ಮೇಲೂ ಕೀಳು ಅನ್ನೋ ಭಾವಲೋಕದ ಹೊಸ ಪ್ರಪಂಚದಲ್ಲಿ ಹೋರಾಟ ಮಾಡ್ತಿರೋ ನಾಯಕನ ಜೊತೆ ತನ್ನ ಮನದಾಳದ ಭಾವನೆಗಳನ್ನ ಹೇಳಿಕೊಳ್ಳೋ ತೊಳಲಾಟದಲ್ಲಿನ ಸನ್ನಿವೇಶಗಳು ಹಾಡಿನಲ್ಲಿ ಮೂಡಿಬಂದಿವೆ. ಧರ್ಮಂ ಸಿನಿಮಾ ತಂಡ ಮಲೆಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದು ಸಿನಿಮಾದ ಸಾಂಗ್ ರಿಲೀಸ್ ಮಾಡಿದೆ.ಇದನ್ನೂ ಓದಿ: ನಟ ಸಾಯಿ ದುರ್ಗಾ ತೇಜ್ ಭರ್ಜರಿ ಆಕ್ಷನ್ : ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್

    ಹಲವು ವಿಭಿನ್ನ ಲೋಕೇಶನ್‌ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ಖ್ಯಾತ ನಿರ್ದೆಶಕ ಆರ್ ಚಂದ್ರು ಚಿತ್ರತಂಡದ ಪ್ರಯತ್ನ ಮೆಚ್ಚಿ ಶುಭ ಹಾರೈಸಿದ್ದಾರೆ. ನಾಗಮುಖ ನಿರ್ದೇಶನ ಮಾಡಿದ್ರೆ, ನಾಗಶೆಟ್ಟಿ ಕ್ಯಾಮರಾ ಕೈಚಳಕ, ಸರವಣ ಸಂಗೀತ ಕೇಳುಗರನ್ನ ಮೋಡಿ ಮಾಡಿದ್ದಾರೆ. ಪ್ರಕೃತಿ ಮಡಿಲಿನ ದೃಶ್ಯ ವೈಭವ ಹೊಸ ಭಾವಲೋಕಕ್ಕೆ ಪಯಣ ಬೆಳೆಸುವಂತೆ ಮಾಡಿದೆ. ಸದ್ಯ ಹಾಡು ಕೂಡಾ ಅಪಾರ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ.

  • ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ: ಸಿದ್ದರಾಮಯ್ಯ

    ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ: ಸಿದ್ದರಾಮಯ್ಯ

    – ಬೇರೆ ಧರ್ಮವನ್ನು ಸಹಿಸೋ ಸಹಿಷ್ಣುತೆ ಇರಬೇಕು

    ಬಳ್ಳಾರಿ: ಒಬ್ಬರು ಮತ್ತೊಬ್ಬರನ್ನು ದಯೇ ಕರುಣೆ ವಾತ್ಸಲ್ಯದಿಂದ ನೋಡಬೇಕು. ದ್ವೇಷ ಅಸೂಯೆ ಇದ್ದರೆ ಸಮಾಜದಲ್ಲಿ ಒಡುಕು ಉಂಟಾಗಿ ವಿಭಜನೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    ಕ್ರೈಸ್ತ ಧರ್ಮಕ್ಷೇತ್ರ ಅಮೃತೋತ್ಸವ ಹಿನ್ನೆಲೆಯಲ್ಲಿ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನದಲ್ಲಿ ನಿಮ್ಮ ಧರ್ಮ ಪಾಲನೆ ಮಾಡಿ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದಿದ್ದಾರೆ. ಬೇರೆ ಧರ್ಮವನ್ನು ಸಹಿಸುವ ಸಹಿಷ್ಣುತೆ ಇರಬೇಕು. ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ. ಎಲ್ಲರನ್ನೂ ಗೌರವಿಸಿದರೆ ಅಂಬೇಡ್ಕರ್, ಸಂವಿಧಾನ ಮತ್ತು ಧರ್ಮ ಗುರುಗಳಿಗೆ ಗೌರವ ನೀಡಿದಂತೆ ಎಂದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂದುವರಿದ ಸರಣಿ ಸಾವು – ಬಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು

    ಸಿಎಂ ಸಿದ್ದರಾಮಯ್ಯ ಕುವೆಂಪು ಅವರ ನಾಡ ಗೀತೆ ಸಾಲು ಹಾಡುವ ಮೂಲಕ ಧರ್ಮದ ಬಗ್ಗೆ ಸಮಗ್ರವಾಗಿ ಮಾತನಾಡಿದರು. ಸಿದ್ದರಾಮಯ್ಯ ಮುಸ್ಲಿಂ ಒಲೈಸುತ್ತಾರೆ ಎಂದು ಹೇಳುತ್ತಾರೆ ಹಿಂದೂಗಳನ್ನು ವಿರೋಧಿ ಮಾಡುತ್ತಾರೆ ಎನ್ನುತ್ತಾರೆ. ಆದರೆ ನಾನು ಹಿಂದೂ ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಪ್ರೀತಿಸುತ್ತೇನೆ ಎಂದು ತಿಳಿಸಿದರು.

    ಭಾರತ ದೇಶ ಬಹುತ್ವದ ದೇಶವಾಗಿದೆ. ಎಲ್ಲಾ ಧರ್ಮ ಜಾತಿ ಧರ್ಮ, ಭಾಷೆಯವರು ಇದ್ದಾರೆ. ಮೂಲತಃ ನಾವೆಲ್ಲ ಮಾನವರು. ಸರ್ವಧರ್ಮ ಸಮನ್ವಯ ದೇಶದಲ್ಲಿ ಮಾತ್ರ ಇದೆ ಇದು ನಮ್ಮ ಪರಂಪರೆ ಇದನ್ನು ಉಳಿಸುವ ಬೆಳೆಸಬೇಕಿದೆ. ಹುಟ್ಟುವಾಗ ವಿಶ್ವ ಮಾನವರಾಗಿ ಹುಟ್ಟುತ್ತೇವೆ. ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆಂದು ಕುವೆಂಪು ಹೇಳಿದ್ದಾರೆ. ವಿಶ್ವಮಾನವರಾಗಬೇಕು ಅಲ್ಪ ಮಾನವರಾಗಬಾರದು. ಪರಸ್ಪರ ಪ್ರೀತಿಯಿಂದ ಇರಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಲ್ಲ. ಹಿಂದೂ, ಕೈಸ್ತ, ಮುಸ್ಲಿಂ ಯಾವ ಧರ್ಮ ದ್ವೇಷ ಬಿತ್ತಲ್ಲ ಬೋಧನೆ ಮಾಡಲ್ಲ. ಹೀಗಾಗಿ ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಎಂದು ಹೇಳಿದರು.

     

  • BBK 11: ಲವ್ ಬರ್ಡ್ಸ್ ಆಗಿದ್ದ ಧರ್ಮ, ಅನುಷಾ ನಡುವೆ ವಾರ್

    BBK 11: ಲವ್ ಬರ್ಡ್ಸ್ ಆಗಿದ್ದ ಧರ್ಮ, ಅನುಷಾ ನಡುವೆ ವಾರ್

    ‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಲವ್ ಬರ್ಡ್ಸ್ ಆಗಿದ್ದ ಧರ್ಮ ಮತ್ತು ಅನುಷಾ ನಡುವೆ ಕಿರಿಕ್ ಆಗಿದೆ. ಇದೀಗ ದೊಡ್ಮನೆಯಲ್ಲಿ ಕೊಟ್ಟ ಜೋಡಿ ಟಾಸ್ಕ್‌ನಿಂದಲೇ ಇಬ್ಬರ ಸಂಬಂಧಕ್ಕೆ ಹುಳಿ ಹಿಂಡಿದಂತೆ ಆಗಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಧರ್ಮನ (Dharma) ವಿರುದ್ಧ ಅನುಷಾ (Anusha Rai) ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ತಾಯಿಯಾಗುವ ಹಂಬಲದಲ್ಲಿ ಸ್ಯಾಮ್- 2ನೇ ಮದುವೆ ಬಗ್ಗೆ ಸುಳಿವು ನೀಡಿದ್ರಾ ನಟಿ?

    ಬಿಗ್ ಬಾಸ್ ನೀಡಿದ ಟಾಸ್ಕ್‌ನಂತೆ ಮನೆಯಲ್ಲಿ ನೇರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಐಶ್ವರ್ಯಾ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಮತ್ತು ಸುರೇಶ್‌ರನ್ನು ನಾಮಿನೇಟ್ ಮಾಡುತ್ತಾರೆ.

    ಇದಕ್ಕೆ ಅನುಷಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳುತ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಮನರಂಜನೆ ನೀಡಿದ್ದೀರಾ ಎಂದು ತರಾಟೆಗೆ ತೆಗೆದುಕೊಳ್ತಾರೆ. ನಂತರ ಧರ್ಮ ವಿಚಾರಕ್ಕೆ ಬರುತ್ತಾರೆ. ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಆಟದಲ್ಲಿ ಎಷ್ಟು ಇನ್ವಾಲ್ ಆಗಿದ್ದೀರಾ ಎಂದು ತೀವ್ರವಾಗಿ ವಾದ ಮಂಡಿಸುತ್ತಾರೆ. ಈ ವೇಳೆ, ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ ಅವರು ನಾನೇ ಹೇಳ್ತಿದ್ದೀನಲ್ಲ, ಕಳೆದ ಎಪಿಸೋಡ್‌ನಲ್ಲಿ ಎಲ್ಲರೂ ನಾಲಾಯಕ್ ಎಂದು ಕ್ಯಾಕರಿಸಿ ಉಗಿದಿದ್ದಾರಲ್ಲ ಎಂದು ಮಾತನಾಡುತ್ತಾರೆ.

    ಅನುಷಾ ಮತ್ತು ಧರ್ಮ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಚೆನ್ನಾಗಿಯೇ ಇದ್ದರು. ನಾಮಿನೇಷನ್‌ನಲ್ಲಿ ಧರ್ಮ ಆಡಿದ ಮಾತು ಅನುಷಾಗೆ ನೋವಾಗಿದೆ. ಅವರ ಮುನಿಸಿಗೆ ಕಾರಣವಾಗಿದೆ. ಹಾಗಾಗಿ ಧರ್ಮನ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ. ಚೆನ್ನಾಗಿದ್ದ ಅನುಷಾ- ಧರ್ಮ ಜಗಳ ಅಕ್ಷರಶಃ ಮನೆ ಮಂದಿಗೂ ಶಾಕ್ ಕೊಟ್ಟಿದೆ.

    ಇನ್ನೂ ಅಂತಿಮವಾಗಿ ಸ್ಪರ್ಧಿಗಳ ಬಹುಮತದ ಮೇರೆಗೆ ಈ ವಾರ ಮನೆಯಿಂದ ಹೊರ ಹೋಗಲು ಅನುಷಾ ಮತ್ತು ಗೋಲ್ಡ್ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ.

  • ‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್

    ‘ನೈಸ್ ರೋಡ್’ ಸಿನಿಮಾಗೆ ಕಂಟಕ- ಚಿತ್ರತಂಡಕ್ಕೆ ಬಂತು ನೋಟಿಸ್

    ಟ ಧರ್ಮ ಮತ್ತು ಜ್ಯೋತಿ ರೈ ನಟನೆಯ ‘ನೈಸ್ ರೋಡ್’ (Nice Road Film) ಕನ್ನಡ ಚಿತ್ರಕ್ಕೆ ನೈಸ್ ರೋಡ್ ಕಂಪನಿಯವರಿಂದಲೆ ಕಂಟಕ ಎದುರಾಗಿದೆ. ‘ನೈಸ್ ರೋಡ್’ ಎಂಬ ಹೆಸರನ್ನು ಬದಲಾಯಿಸದೆ ಇದ್ದರೆ ಕಂಪ್ಲೆಂಟ್ ಕೊಡುವುದಾಗಿ ಈ ಸಿನಿಮಾದ ನಿರ್ಮಾಪಕರಾದ ಗೋಪಾಲ್ ಹಳೆಪಾಳ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

    ಸಿನಿಮಾ ಈಗ ರಿಲೀಸ್‌ಗೆ ಸಿದ್ಧವಾಗಿದ್ದು, ಏಲ್ಲಾ ಕಡೆ ‘ನೈಸ್ ರೋಡ್’ ಎಂಬ ಹೆಸರಿನಿಂದಲೇ ಪ್ರಚಾರವಾಗಿದೆ. ಈ ಹಂತದಲ್ಲಿ ಹೆಸರು ಬದಲಾಯಿಸಲು ತುಂಬಾ ಖರ್ಚು ವೆಚ್ಚಗಳಾಗುವುದು ಅಲ್ಲದೆ, ತುಂಬಾ ಸಮಯವು ಬೇಕಾಗುತ್ತದೆ. ಇದನ್ನೂ ಓದಿ:ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೈಸ್ ರೋಡ್ ಎಂಬ ಟೈಟಲ್ ರಿಜಿಸ್ಟರ್ ಆಗಿದ್ದು ಸಿನಿಮಾ ಚಿತ್ರೀಕರಣ ಮುಗಿಸಿ ಈಗಾಗಲೇ ಸಿನಿಮಾ ಸೆನ್ಸಾರ್ ಆಗಿದ್ದು ಸೆನ್ಸಾರ್ ಮಂಡಳಿಯು ಕೂಡ ಸಿನಿಮಾ ನೋಡಿ ನೈಸ್ ರೋಡಿಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಧರಿಸಿ U/A ಪ್ರಮಾಣ ಪತ್ರ ಕೊಟ್ಟಿದಾರೆ.

    ಆದರೆ ಈಗ ನೈಸ್ ರೋಡ್ ಕಂಪನಿಯವರು ಏಕಏಕಿ ಬಂದು ಹೆಸರು ಬದಲಾಯಿಸಬೇಕೆಂದು ನೋಟೀಸ್ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ಗೋಪಾಲ್ ಹಳೆಪಾಳ್ಯ ಮತ್ತು ಈ ಚಿತ್ರಕ್ಕೆ ಫೈನಾನ್ಸ್ ಮಾಡಿರುವ ಏನ್ ರಾಜೂಗೌಡ ಮತ್ತು ಈ ಸಿನಿಮಾದ ನಟರಾದ ಧರ್ಮ ಅವರ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಮುಂದೆ ಸಿನಿಮಾ ತಂಡದವರು ಹೆಸರು ಬದಲಾಯಿಸುತ್ತಾರೋ ಇಲ್ಲ ಇದೆ ಹೆಸರಿನಲ್ಲೆ ಸಿನಿಮಾ ಬಿಡುಗಡೆ ಮಾಡೊತರೋ ಕಾದುನೋಡಬೇಕಿದೆ.

  • ‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ  ನೈಸ್ ರೋಡ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಳೆದ ಜನ್ಮದಲ್ಲಿ ಮಾಡಿದ ತಪ್ಪಗೆ ಈ  ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ  ಎನ್ನುವ  ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ (Dharma)  ಮೇಲೆ ‘ನೈಸ್ ರೋಡ್’ (Nice Road) ಚಿತ್ರದ  ಕಥೆ ಹೆಣೆಯಲಾಗಿದೆ.  ನಿರ್ದೇಶನದ ಜೊತೆಗೆ ಪುನರ್ ಗೀತಾ ಸಿನಿಮಾಸ್  ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌

    ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲ್  ಮಾತನಾಡುತ್ತ ಈ ಹಿಂದೆ ನಾನು  ತಾಂಡವ ಎಂಬ  ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು  ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್  ಇಟ್ಟುಕೊಂಡು ಮಾಡಿದ ಚಿತ್ರ.  ಈ  ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ  ಧರ್ಮ ಅವರನ್ನು ಆಯ್ಕೆ  ಮಾಡಿಕೊಂಡಿದ್ದೆ,  ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈ ಕಾಣಿಸಿಕೊಂಡಿದ್ದಾರೆ.‌ ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು,  ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ  ಪ್ಲ್ಯಾನ್ ಇದೆ, ನೈಸ್ ರೋಡ್ ಗೂ  ನಮ್ಮ ಸಿನಿಮಾಗೂ  ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆ ಎಂದು ಹೇಳಿದರು.

    ನಟ ಧರ್ಮ ಮಾತನಾಡಿ ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ.  ಇಲ್ಲೂ ಪೊಲೀಸ್ ಆಫೀಸರ್  ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು,  ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು  ಎಂದು ಹೇಳಿದರು. ರಾಜುಗೌಡ ಮಾತನಾಡುತ್ತ ಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆ ಎಂದರು.

     

    ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ  ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದರು.ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ರಾಜ್ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

  • ಬರಗಾಲ ಬಂದಿದೆ, ನಿಮ್ಮ ದೇವ್ರು ಏನೂ ಮಾಡಲ್ಲ – ನಮ್ಮ ಧರ್ಮಕ್ಕೆ ಬನ್ನಿ ಎಂದ ಮೂವರು ಅರೆಸ್ಟ್‌

    ಬರಗಾಲ ಬಂದಿದೆ, ನಿಮ್ಮ ದೇವ್ರು ಏನೂ ಮಾಡಲ್ಲ – ನಮ್ಮ ಧರ್ಮಕ್ಕೆ ಬನ್ನಿ ಎಂದ ಮೂವರು ಅರೆಸ್ಟ್‌

    ಚಿಕ್ಕಮಗಳೂರು: ನಿಮ್ಮ ದೇವರು ಏನು ಮಾಡುವುದಿಲ್ಲ. ತೀವ್ರ ಬರಗಾಲ ಬಂದಿದೆ. ಮಳೆ-ಬೆಳೆ ಇಲ್ಲ. ಜನ ಸಂಕಷ್ಟದಲ್ಲಿ ಇದ್ದಾರೆ. ನೀವು ಕಷ್ಟದಲ್ಲಿ ಇದ್ದೀರಾ. ನೀವು ನಮ್ಮ ಧರ್ಮಕ್ಕೆ (Religion) ಬಂದರೆ ಯೇಸು (Jesus)ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ (Conversion) ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆಗಳು ತಾಲೂಕಿನ ಎರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬರುವ ಮೊದಲು ಕಂಪನಿಗಳು ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದೆ ಹೇಳಬಹುದೇ – ಮೋದಿ ಪ್ರಶ್ನೆ

     

    ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಹೇಳಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಸೆಳೆಯಲು ಮುಂದಾಗಿದ್ದರು. ಈ ವೇಳೆ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್‌ ಎಂಬುವವರ ಮನೆಗೂ ಹೋಗಿದ್ದರು. ಇದನ್ನೂ ಓದಿ: 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ – 100+ ಯೂನಿಟ್‌ ಬಳಸುವವರಿಗೆ ಲಾಭ

    ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ. ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ. ನಿಮ್ಮ ಕಷ್ಟಗಳಿಗೆ ಪರಿಹಾರ ಒದಗಿಸುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಎರೇಹಳ್ಳಿಯ ಹಲವು ಮನೆಗಳಿಗೆ ಹೋಗಿ ಮತಾಂತರ ಮಾಡಲು ಮುಂದಾಗಿದ್ದರು.

    ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಮೂವರನ್ನು ಬಂಧಿಸಿದ್ದಾರೆ. ಮತಾಂತರ ಮಾಡಲು ಬಂದವರ ಮಾತುಗಳನ್ನ ಗಮನಿಸಿದ ಪ್ರಸನ್ನ ಆಕ್ರೋಶಗೊಂಡು ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಮತಾಂತರ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

    ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

    ಕೋಲಾರ: ಧರ್ಮ (Religion) ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು, ಆ ಧರ್ಮ, ಈ ಧರ್ಮ ಅಂತ ಹೇಳುವವರನ್ನ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kotturu Manjunath) ವಾಗ್ದಾಳಿ ನಡೆಸಿದ್ದಾರೆ.

    ಗಾಂಧಿ ಜಯಂತಿ ಪ್ರಯುಕ್ತ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು. ಉದಯನಿಧಿ (Udhayanidhi Stalin) ಅವರಿಗೆ ದುಡ್ಡು ಜಾಸ್ತಿಯಾಗಿ ಮೆಂಟಲ್ ಆಗಿದ್ದಾರೆ. ಅವನಿಗೆ ಎರಡೂ ಮೂರು ಹುಚ್ಚು ನಾಯಿ ಕಚ್ಚಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ನಾವು ಇರೋದು ಭಾರತ ದೇಶದಲ್ಲಿ ಯಾರು ಯಾವ ಧರ್ಮವನ್ನ ಯಾರು ಬೇಕಾದ್ರು ಪಾಲನೆ ಮಾಡಲಿ, ನಿನ್ನ ಧರ್ಮವನ್ನ ನೀನು ಪಾಲನೆ ಮಾಡು. ನನ್ನ ಧರ್ಮವನ್ನ ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕಿಲ್ಲ ನನ್ನ ಧರ್ಮವನ್ನ ಇಲ್ಲ ಎಂದು ಹೇಳುವುದಕ್ಕೆ ನೀನ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

    ಇದೇ ವೇಳೆ ತಮಿಳು ನಟ ರಜಿನಿಕಾಂತ್‌ ಅವರನ್ನ ಉದಾಹರಣೆ ನೀಡಿ ನಾನೇನಾದ್ರು ಮೋರಿಯಲ್ಲಿ ಬಿದ್ದು ಎದ್ದರೇ ಅದು ಬೇರೆ ಅರ್ಥ ಬರುತ್ತೆ. ಇವನಿಗೆ ನಾಯಿ ಕಚ್ಚಿದೆ ಅಂತಾರೆ. ಅದೇ ಕೆಲಸ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ರೆ ಸೂಪರ್ ಅಂತಾರೆ. ಹಾಗೆಯೇ ಧರ್ಮದ ವಿಚಾರವಾಗಿ ಮೋರಿಯಲ್ಲಿ ಬಿದ್ದಂತ್ತಾಗಿದೆ ಎಂದು ತಮಿಳುನಾಡು ಸಚಿವರ ವಿರುದ್ಧ ಹರಿಹಾಯ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್

    ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್

    ಮಂಗಳೂರು: ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ (U.T Khader) ಪ್ರತಿಕ್ರಿಯಿಸಿದ್ದಾರೆ.

    ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ, ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ತಿಳಿಸುತ್ತದೆ. ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ ನೀಡಲ್ಲ ಎಂದರು.

    ಮಾನವೀಯತೆ, ಕರುಣೆ, ಪ್ರೀತಿ ವಿಶ್ವಾಸ, ಸಹೋದರತೆ, ಕ್ಷಮೆ ಇದಕ್ಕೆ ಸೀಮಿತವಾಗಿರಬೇಕು. ನೆಮ್ಮದಿಯ ಜೀವನ ನಡೆಸುವ ಅವಕಾಶ ಎಲ್ಲಾ ಧರ್ಮ ಕೊಡುತ್ತೆ. ಯಾರು ಏನು ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ ಇನ್ನಿತರ ಧರ್ಮವನ್ನು ಗೌರವಿಸಬೇಕು ಎಂದು ಖಾದರ್ ತಿಳಿಸಿದರು. ಇದನ್ನೂ ಓದಿ: ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ಸರ್ವ ಜನರ ಪ್ರೀತಿಗೆ ಪಾತ್ರರಾಗಿ ದೇವರ ಪ್ರೀತಿಗೆ ಪಾತ್ರರಾಗಬೇಕು. ಒಂದಿಬ್ಬರು ಹೇಳುವ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಒಗ್ಗಟ್ಟಿನ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮು ಸಂಘರ್ಷದ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ – ಬಿಜೆಪಿ ನಾಯಕನಿಗೆ ಸುಪ್ರೀಂ ಚಾಟಿ

    ಕೋಮು ಸಂಘರ್ಷದ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ – ಬಿಜೆಪಿ ನಾಯಕನಿಗೆ ಸುಪ್ರೀಂ ಚಾಟಿ

    ನವದೆಹಲಿ: ಐತಿಹಾಸಿಕ ಸ್ಥಳಗಳು ಮತ್ತು ನಗರಗಳಿಗೆ ಮರುನಾಮಕರಣ ಮಾಡಲು ಮರು ನಾಮಕರಣ ಆಯೋಗ ರಚನೆ ಮಾಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದ್ದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯರನ್ನು (Ashwini Kumar Upadhyay) ತರಾಟೆಗೆ ತೆಗೆದುಕೊಂಡಿದೆ.

    ನ್ಯಾ. ಕೆ.ಎಂ.ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರ ಪೀಠ ಪ್ರಕರಣ ವಿಚಾರಣೆ ನಡೆಸಿ, ಸಂವಿಧಾನದಲ್ಲಿ (Constitution) ಕಲ್ಪಿಸಿರುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ಅರ್ಜಿ ಎಂದು ಪರಿಗಣಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. ನಾವು ಜಾತ್ಯತೀತರು ಮತ್ತು ಸಂವಿಧಾನವನ್ನು ರಕ್ಷಿಸಬೇಕಾಗಿದೆ. ನೀವು ಗತಕಾಲದ ಬಗ್ಗೆ ಕಾಳಜಿ ಹೊಂದಿದ್ದೀರಿ ಮತ್ತು ಪ್ರಸ್ತುತ ಪೀಳಿಗೆಯ ಮೇಲೆ ಅದರ ಹೊರೆಹಾಕುವ ಪ್ರಯತ್ನ ಮಾಡಬೇಡಿ ಎಂದು ಪೀಠವು ಚಾಟಿ ಬೀಸಿತು.

    ನೀವು ಭೂತಕಾಲವನ್ನು ಆಯ್ದುಕೊಂಡು ಪರಿಶೀಲಿಸುತ್ತಿದ್ದೀರಿ, ಭಾರತ ಇಂದು ಜಾತ್ಯತೀತ ದೇಶವಾಗಿದೆ. ಆದರೆ ನೀವು ನಿರ್ದಿಷ್ಟ ಸಮುದಾಯದತ್ತ ತೋರಿಸುತ್ತಿದ್ದೀರಿ, ಇದು ಅನಾಗರಿಕತೆ ಕರೆಯಲಾಗುತ್ತಿದೆ. ದೇಶ ಕೋಮು ಸಂಘರ್ಷದಲ್ಲಿ ಕುದಿಯುವುದು ನೋಡಲು ಬಯಸುತ್ತೀರಾ ಎಂದು ನ್ಯಾಯಮೂರ್ತಿ ಜೋಸೆಫ್ ಟೀಕಿಸಿದರು. ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ ಮತ್ತು ಅದು ಧಮಾರ್ಂಧತೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

    ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಆ ಗೌರವ ಕಡಿಮೆ ಮಾಡಬೇಡಿ. ಜಗತ್ತು ಇಂದಿಗೂ ನಮ್ಮತ್ತ ನೋಡುತ್ತದೆ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದೆ. ಅದರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಿ. ನಿರ್ದಿಷ್ಟ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ ಎಂದು ನ್ಯಾಯಮೂರ್ತಿ ಜೋಸೆಫ್ ಗರಂ ಆದರು.

    ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದನ್ನು ಮೊದಲು ಪರಿಹರಿಸಬೇಕು. ಭಾರತೀಯರು ತಮ್ಮ ನಡುವೆಯೇ ಹೋರಾಡುವುದನ್ನು ಖಚಿತಪಡಿಸಿಕೊಳ್ಳಲು ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯನ್ನು ಎತ್ತಿ ತೋರಿಸಿದ ನ್ಯಾ. ಬಿ.ವಿ ನಾಗರತ್ನ, ನಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದೆ. ಅದಕ್ಕಾಗಿಯೇ ಭಾರತವು ಎಲ್ಲರನ್ನು ಒಟ್ಟುಗೂಡಿಸಿದೆ. ಇದರಿಂದಾಗಿ ನಾವು ಒಟ್ಟಿಗೆ ಬದುಕಲು ಸಾಧ್ಯವಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯು ನಮ್ಮ ಸಮಾಜದಲ್ಲಿ ಒಡಕು ತಂದಿದೆ. ನಾವು ಅದನ್ನು ಮರಳಿ ತರಬಾರದು. ಇದರಲ್ಲಿ ಧರ್ಮವನ್ನು ಎಳೆದು ತರಬಾರದು ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಒಂದು ರಾಷ್ಟ್ರವು ತನ್ನ ಗತಕಾಲದ ಕೈದಿಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಇತ್ಯರ್ಥಪಡಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ- ಅಣ್ಣಾಮಲೈ ವಾಗ್ದಾಳಿ

    ‘ಅನಾಗರಿಕ ವಿದೇಶಿ ಆಕ್ರಮಣಕಾರರು’ ಮರುನಾಮಕರಣ ಮಾಡಿದ ಸ್ಥಳಗಳ ಐತಿಹಾಸಿಕ ಹೆಸರುಗಳನ್ನು ಕಂಡುಹಿಡಿಯಲು ಮತ್ತು ಮರುನಾಮಕರಣ ಆಯೋಗವನ್ನು ರಚಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿ ವಕೀಲ ಅಶ್ವಿನಿ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ:  ಯಡಿಯೂರಪ್ಪರ ಭಾಷಣ, ಜೀವನ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

  • ಪ್ರೀತಿಸಿ ಮದುವೆಯಾದವಳು ಮತಾಂತರವಾಗಲಿಲ್ಲ – ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ

    ಪ್ರೀತಿಸಿ ಮದುವೆಯಾದವಳು ಮತಾಂತರವಾಗಲಿಲ್ಲ – ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ

    ಚಿತ್ರದುರ್ಗ: ಎಲ್ಲೆಡೆ ಧರ್ಮಸಂಘರ್ಷ ತಾರಕಕ್ಕೇರಿದೆ. ಇಂತಹ ವೇಳೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಮತಾಂತರವಾಗಲಿಲ್ಲ ಎಂಬ ಕಾರಣಕ್ಕೆ ಗಂಡನೇ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.

    ಆರೋಪಿ ಖಾದರ್ ಶಿವಮೊಗ್ಗ (Shivamogga) ಮೂಲದ ಉಮಾರನ್ನು ಮೊದಲೇ ವಿವಾಹವಾಗಿದ್ದ. ಚಿತ್ರದುರ್ಗದ (Chitradurga) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾ ಅವರಿಗೆ ಖಾದರ್ ಪರಿಚಯವಾಗಿದೆ. ಆ ಪರಿಚಯ ಪ್ರೀತಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ಆತನ ವರಸೆ ಬದಲಾಗಿದ್ದು, ಹೆಂಡತಿಯನ್ನು ಮತಾಂತರವಾಗುವಂತೆ ಒತ್ತಾಯಿಸಿದ್ದನು. ಆಗ ಈ ಒತ್ತಡಕ್ಕೊಳಗಾದ ಉಮಾಳ ಆರೋಗ್ಯ ಹದಗೆಟ್ಟಿದ್ದು, ಎರಡು ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈ ವೇಳೆ ತನ್ನ ಪತ್ನಿಯ ಬಗ್ಗೆ ಕಾಳಜಿವಹಿಸಬೇಕಾದ ಖಾದರ್, ಉಮಾಗೆ ಚಿತ್ರಹಿಂಸೆ ನೀಡಿ, ಆಕೆಯ ಖಾಸಗಿ ಅಂಗಾಂಗಾಗಳ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ. ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯಾರು ಇಲ್ಲದ ವೇಳೆ ಉಮಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಖಾದರ್ ಯತ್ನಿಸಿದ್ದಾನೆ ಎಂದು ಉಮಾ ಆರೋಪಿಸಿದ್ದಾರೆ.

    ಸದ್ಯ ಖಾದರ್ ಮೋಸದ ಬಲೆಗೆ ಸಿಲುಕಿಕೊಂಡಿರುವ ಉಮಾ ಕಟ್ಟುಕೊಂಡ ಗಂಡನನ್ನು ಬಿಟ್ಟು ಬಂದು, ಮತಾಂತರದ ಕೂಪಕ್ಕೆ ಸಿಲುಕಿದ್ದಾರೆ. ಅತ್ತ ಸಂಸಾರವೂ ಇಲ್ಲ, ಇತ್ತ ಆರೋಗ್ಯವು ಹದಗೆಟ್ಟಿದೆ. ಹೀಗಾಗಿ ಕಂಗಾಲಾಗಿರುವ ಉಮಾ, ಅವರ ಸಂಬಂಧಿಯಾದ ವಿಶ್ವನಾಥ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನೂ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಪ್ರಕರಣ – ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಜಾಮೀನು

    ಒಟ್ಟಾರೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಮತಾಂತರಗೊಳಿಸಲು ಗಂಡ ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರೇ ಶಾಕ್ ಆಗಿದ್ದೂ, ಆರೋಪಿ ಅಬ್ದುಲ್ ಖಾದರ್‌ನನ್ನು ವಶಕ್ಕೆ ಪಡೆದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    Live Tv
    [brid partner=56869869 player=32851 video=960834 autoplay=true]