Tag: ಧರಣಿ

  • ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಂದ ಅಹೋರಾತ್ರಿ ಮುಷ್ಕರ

    ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಂದ ಅಹೋರಾತ್ರಿ ಮುಷ್ಕರ

    ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಅಹೋರಾತ್ರಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.

    ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹೆಚ್‍ಎಸ್ ಮಂಜುನಾಥ್, ಮೂವತ್ತು ದಿನಗಳ ಒಳಗಾಗಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ನಮ್ಮ ಹಿಂದಿನ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಆದರೆ ಈವರೆಗೂ ಯಾವುದೇ ರೀತಿಯ ಬೇಡಿಕೆಗಳನ್ನು ಈಡೇರಿಸಿಲ್ಲ. ಶೇ.12.5 ವೇತನ ಹೆಚ್ಚಳ ಮಾಡಲಾಗಿತ್ತು. ಇದರ ಹೊರತು ಬೇರಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಹೇಳಿದ್ರು.

    ನಾವು ಒಟ್ಟು 52 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಹೂಡಿದ್ದೆವು. ಒಟ್ಟು 1600 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ 2016ರ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ಪುತ್ತೂರು ವಿಭಾಗದಿಂದ 250 ಜನರನ್ನು ಎಲ್ಲಿಗೆ ವರ್ಗಾವಣೆಯಾಗಿದೆಯೋ ಅಲ್ಲಿಗೆ ಕಳುಹಿಸಿಕೊಟ್ಟಿಲ್ಲ. ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ನೌಕರರಿಗೆ 2014-15ರ ಸಾಲಿನ ಎರಡು ವರ್ಷದ ಬೋನಸ್ ಹಣವನ್ನು ಕೊಟ್ಟಿಲ್ಲ. ಇನ್ನೂ 2016-17ನೇ ಸಾಲಿನ ಬೋನಸ್ ಹಣವನ್ನು ಘೋಷಣೆ ಮಾಡಿಲ್ಲ. ಏಪ್ರಿಲ್ ನಲ್ಲೇ ಘೋಷಣೆ ಮಾಡಬೇಕಿತ್ತು, ಆದರೆ ಮಾಡಿಲ್ಲ ಎಂದರು.

    ಸರ್ಕಾರದ ಸಚಿವರ ಪ್ರಾಮಾಣಿಕ ಪ್ರಯತ್ನಕ್ಕೂ ಸಾರಿಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಪೋಗಳಲ್ಲಿ ವಿಪರೀತ ಕಿರುಕುಳ ನೀಡಲಾಗುತ್ತಿದ್ದು, ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ನೌಕರರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ. ಮಂತ್ರಿಗಳು ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸಲಿದ್ದೇವೆ ಎಂದು ಹೇಳಿದರು.

  • ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ- ಜಾರಕಿಹೊಳಿ ಸಹೋದರರಿಗೆ ಖಡಕ್ ಎಚ್ಚರಿಕೆ ನೀಡಿದ ವೇಣುಗೋಪಾಲ್

    ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ- ಜಾರಕಿಹೊಳಿ ಸಹೋದರರಿಗೆ ಖಡಕ್ ಎಚ್ಚರಿಕೆ ನೀಡಿದ ವೇಣುಗೋಪಾಲ್

    ಬೆಳಗಾವಿ : ಕಾಂಗ್ರೆಸ್‍ನಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ತಾವು ಯಾವುದೇ ಹುದ್ದೆಯಲ್ಲಿದ್ದರು, ಪಕ್ಷದಿಂದ ಪಡೆದಿರುವ ಸೌಲಭ್ಯಗಳನ್ನು ಮರೆಯಬಾರದು. ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಬಿಟ್ಟು ಪಕ್ಷಕ್ಕಾಗಿ ಒಗ್ಗೂಡಿ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜಾರಕಿಹೊಳಿ ಸಹೋದರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

    ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆದ ಜಿಲ್ಲಾ ಗ್ರಾಮೀಣ ಮತ್ತು ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಅವರು ಕಾಂಗ್ರೆಸ್ ಪಕ್ಷ ದೊಡ್ಡ ಕುಟುಂಬದಂತೆ ಪ್ರತಿ ಕುಟುಂಬದಲ್ಲೂ ಸಣ್ಣ ಸಣ್ಣ ಸಮಸ್ಯೆ, ಭಿನ್ನಭಿಪ್ರಾಯಗಳು ವ್ಯಕ್ತವಾಗುತ್ತವೆ ಅದನ್ನು ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ವೇಣುಗೋಪಲ್, ಅಚ್ಚೇದಿನ್ ಎಲ್ಲಿ ಬಂದಿದೆ. ಯುವಕರಿಗೆ ಉದ್ಯೋಗವಕಾಶಗಳು ಇಲ್ಲ. ಜಿಎಸ್‍ಟಿಯನ್ನು ಅಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಅಲ್ಲದೇ ನೋಟು ನಿಷೇಧದಿಂದ ಆರ್ಥಿಕ ಕ್ಷೇತ್ರದ ಪ್ರಗತಿ ಕುಸಿತಗೊಂಡಿದೆ. ಅಲ್ಲದೆ ಬಿಜೆಪಿ ಪಕ್ಷವು ಒಂದು ಧರ್ಮಕ್ಕೆ ಸೀಮಿತವಾಗಿದೆ ಎಂದು ಹೇಳಿದರು.

    ಪಕ್ಷದ ಉಸ್ತುವಾರಿ ಎದುರೇ ಖುರ್ಚಿಗಾಗಿ ಗಲಾಟೆ : ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ್ ನವಲಗಟ್ಟಿಯ ಜೊತೆಗೆ ಶಾಸಕ ಅಶೋಕ ಪಟ್ಟಣ ಖುರ್ಚಿಗಾಗಿ ವಾಗ್ವಾದ ನಡೆಸಿದ ಘಟನೆ ನಡೆಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ತಮಗೆ ಜಿಲ್ಲಾ ಕಾಂಗ್ರೆಸ್ ನಿಂದ ಯಾವುದೇ ಕಾರ್ಯಕ್ರಮಗಳ ಮಾಹಿತಿ ಸಿಗೋದಿಲ್ಲ ಎಂದು ವೇಣುಗೋಪಾಲ್ ಮುಂದೆ ಅಳಲು ತೋಡಿಕೊಂಡರು.

    ಇನ್ನೂ ಧರ್ಮನಾಥ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾರೆ, ಇತ್ತ ಬಿಜೆಪಿ ಕಾರ್ಯಕರ್ತರು ಭವನದ ಹೊರಗಡೆ ಧರಣಿ ನಡೆಸುತ್ತಿದ್ದರು. ವೇಣುಗೋಪಾಲ್ ಕಾರ್ಯಕ್ರಮದ ಆಗಮಿಸುವ ವೇಳೆ ಕಪ್ಪು ಬಾವುಟ ತೋರಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಇದರ ನಡುವೆ ಮಧ್ಯ ಪ್ರವೇಶಿಸಿದ ಮಾಳಮಾರುತಿ ಪೊಲೀಸರು ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದರು.

     

  • ಪತಿಗಾಗಿ ಮೊದಲ ಪತ್ನಿಯಿಂದ ಎರಡನೇ ಪತ್ನಿಯ ಮನೆ ಮುಂದೆ ಧರಣಿ

    ಪತಿಗಾಗಿ ಮೊದಲ ಪತ್ನಿಯಿಂದ ಎರಡನೇ ಪತ್ನಿಯ ಮನೆ ಮುಂದೆ ಧರಣಿ

    ಕೊಪ್ಪಳ: ಇಬ್ಬರು ಹೆಂಡತಿಯರಿಗೆ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನು ಹೊಂದಿದ್ದ. ಆದರೆ ಈಗ ಮೊದಲ ಪತ್ನಿ, ಪತಿಯ ವಿರುದ್ಧವೇ ತಿರುಗಿಬಿದ್ದು ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.

    ಎರಡನೇ ಮದುವೆಯಾಗಿರುವ ಮಂಜುನಾಥ್ ಮೂಲತಃ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ನಿವಾಸಿಯಾಗಿದ್ದು, ಕೊಪ್ಪಳದ ತನ್ನ ಸ್ವಂತ ಅಕ್ಕನ ಮನೆಯಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿ, ತಾನೇ ಸ್ವತಃ ಇಷ್ಟ ಪಟ್ಟು ತನ್ನ ಅಕ್ಕನ ಮಗಳು ವಿಜಯಶ್ರೀಯನ್ನು 2013ರಲ್ಲಿ ಮದುವೆಯಾಗಿದ್ದ

    ಮೊದಲಿನಿಂದಲೂ ಪರಿಚಯವಿದ್ದ ತನ್ನ ಪತ್ನಿಯ ಎದುರು ಮನೆಯ ಶಿಲ್ಪಾಳೊಂದಿಗೆ ಲವ್ವಿ-ಡವ್ವಿ ಅಂತಾ ತಿರುಗಾಡಿ, ಮೊದಲ ಪತ್ನಿ ಮತ್ತು ಕುಟುಂಬಕ್ಕೆ ಸಣ್ಣ ಸುಳಿವೂ ನೀಡದಂತೆ ಅಕ್ಟೋಬರ್ 2016 ರಂದು ರಿಜಿಸ್ಟರ್ ಮದುವೆಯಾಗಿದ್ದಾನೆ.

    ಮಂಜುನಾಥ್ ಕಳೆದ ನಾಲ್ಕು ದಿನದ ಹಿಂದೆ ಶಿಲ್ಪಾರನ್ನು ಮನೆಗೆ ಕರೆದೊಯ್ದು, 2016 ರಲ್ಲಿ ಶಿಲ್ಪಾರ ಕೊರಳಿಗೂ ತಾಳಿಕಟ್ಟಿದೇನೆ. ಇಬ್ಬರೂ ಒಂದೇ ಮನೆಯಲ್ಲಿ ಇರುವಂತೆ ಹೇಳಿದ್ದಾನೆ. ಇದರಿಂದ ಮೊದಲ ಪತ್ನಿ ಆಕ್ಷೇಪ ವ್ಯಕ್ತ ಪಡಿಸಿದ್ದಕ್ಕೆ ಹಲ್ಲೆಮಾಡಿ ಮನೆಯಿಂದ ಹೊರಹಾಕಿದ್ದಾನೆ.

    ನೊಂದ ವಿಜಯಶ್ರೀ ಎರಡನೇ ಮದುವೆಯನ್ನು ಖಂಡಿಸಿ ತನ್ನ ತಾಯಿ ಗೀತಾರೊಂದಿಗೆ, ತನ್ನ ಪತಿ ಮಂಜುನಾಥನ ಫೋಟೋ ಹಿಡಿದು ಶಿಲ್ಪಾ ಮನೆ ಮುಂದೆ ಕಣ್ಣೀರು ಹಾಕುತ್ತಾ ಧರಣಿ ಕುಳಿತಿದ್ದಾರೆ. ಇದರಿಂದ ಕೆರಳಿದ ಶಿಲ್ಪಾ ಮತ್ತು ಅವರ ಕುಟುಂಬ, ವಿಜಯಶ್ರೀ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ವಿಜಯಶ್ರೀ ತನ್ನ ಗಂಡ ಎರಡನೇ ಮದುವೆಯಾಗಿ ನನಗೆ ಮೋಸಮಾಡಿದ್ದಾನೆ. ಆಕ್ಷೇಪಿಸಿದ್ದಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿ ಮನೆಯಿಂದ ಹೊರಹಾಕಿದ್ದಾನೆ. ನಂತರ ಶಿಲ್ಪಾ ಮನೆಗೆ ಹೋಗಿ ನ್ಯಾಯಕೇಳಿದಕ್ಕೆ, ಅವರ ಕುಟುಂಬವು ನನ್ನ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಅಹೋರಾತ್ರಿ ಧರಣಿ

    ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಅಹೋರಾತ್ರಿ ಧರಣಿ

    ಮಂಡ್ಯ: ಅನುದಾನ ಹಂಚಿಕೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

    ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತವಿದೆ. ಅನುದಾನ ಹಂಚಿಕೆ ವಿಷಯ ಬಂದಾಗ ಜೆಡಿಎಸ್ ಪಕ್ಷದವರು ನಾವು ಬಹುಮತವಿದ್ದೇವೆ ಎಂದು ಹೆಚ್ಚಿನ ಅನುದಾನ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಕಡಿಮೆ ಅನುದಾನ ನೀಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಇಬ್ಬರಿಂದ ಸೇರಿ ಸುಮಾರು ಒಂದು ಕೋಟಿ ಅನುದಾನ ಇಟ್ಟುಕೊಂಡಿದ್ದಾರೆ. ಆದರೆ ನಮಗೆ ಮಾತ್ರ ತಲಾ 3-5 ಲಕ್ಷ ಅನುದಾನ ನೀಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೆಸ್‍ನ 12 ಜನ ಜಿಲ್ಲಾಪಂಚಾಯಿತಿ ಸದಸ್ಯರು, ಮಂಡ್ಯ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿರುವ ಕಾವೇರಿ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

    ಅನುದಾನ ಹಂಚಿಕೆ ತಾರತಮ್ಯದಿಂದ ಕ್ಷೇತ್ರ ಅಭಿವೃದ್ಧಿ ಕಷ್ಟವಾಗಿದೆ. ಮತದಾರರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಧರಣಿಯಲ್ಲಿ ಪಾಲ್ಗೊಂಡ ಒಟ್ಟು 12 ಜನ ಸದಸ್ಯರಲ್ಲಿ 6 ಮಂದಿ ಮಹಿಳಾ ಸದಸ್ಯರಿದ್ದು ಎಲ್ಲರೂ ಕೂಡ ಮನೆಗೆ ಹೋಗದೇ ಕಾವೇರಿ ಸಭಾಂಗಣದಲ್ಲೇ ರಾತ್ರಿಯೆಲ್ಲ ಧರಣಿ ನಡೆಸಿ ಜೆಡಿಎಸ್ ಪಕ್ಷದ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

  • ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    ಸತತ 2ನೇ ದಿನವೂ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

    – ಹೋರಾಟಕ್ಕೆ ಕೈಜೋಡಿಸಿದ ಸಹಸ್ರಾರು ಮಂದಿ

    ಬೆಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ರಾತ್ರಿಯೂ ಮುಂದುವರೆದಿದೆ.

    ಪ್ರತಿಭಟನಾಕಾರರು ನಗರದ ಫ್ರೀಡಂಪಾರ್ಕ್‍ನ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ಸಹ ಮಲಗಿ ಪ್ರತಿಭಟಿಸಿದ್ರು. ವೇತನ ಹೆಚ್ಚಳವಾಗುವ ತನಕ ನಾವು ಇಲ್ಲಿಂದ ಕದಲೋದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಆಗಿ ತಿಳಿಸಿದ್ರು. ಗಾಳಿ ಚಳಿಯನ್ನ ಲೆಕ್ಕಿಸದೇ ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಬೀದಿಯಲ್ಲಿ ಮಲಗಿದ್ರು. ಈ ದೃಶ್ಯಗಳು ಎಲ್ಲರ ಮನಕಲುಕುವಂತಿದ್ದವು.

    ಇನ್ನು ಸರ್ಕಾರ ಬೀದಿಯಲ್ಲಿ ಮಲಗಿರೋರಿಗೆ ಅಂತಾ ನೂರಾರು ಜಮಾಖಾನಗಳನ್ನು ಕಳುಹಿಸಿಕೊಟ್ಟಿತ್ತು. ಆದ್ರೆ ಇವುಗಳನ್ನು ಸ್ವೀಕರಿಸಲು ಒಪ್ಪದ ಅಂಗನವಾಡಿ ಕಾರ್ಯಕರ್ತರು ನಾವು ರಸ್ತೆಯ ಮೇಲೆ ಮಲಗ್ತೀವಿ. ನಿಮ್ಮ ಜಮಖಾನ ಬೇಡ ಅಂತಾ ವಾಪಸ್ ಕಳುಹಿಸಿಕೊಟ್ಟರು. ಪೌರಕಾರ್ಮಿಕರು ರಸ್ತೆಯನ್ನ ಸ್ವಚ್ಛಗೊಳಿಸಿದ್ರು. ಆ ರಸ್ತೆಯ ಮೇಲೆಯೇ ಸಾವಿರಾರು ಜನ ಮಲಗಿ ರಾತ್ರಿ ಕಳೆದರು.

    ಮಂಗಳವಾರದಂದು ಶೌಚಾಲಯ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಫ್ರೀಡಂ ಪಾರ್ಕ್ ಬಳಿ 20ಕ್ಕೂ ಹೆಚ್ಚು ಇ ಟಾಯ್ಲೆಟ್‍ಗಳ ವ್ಯವಸ್ಥೆಯನ್ನ ಕಲ್ಪಿಸಿದೆ. ವಿಪರ್ಯಸ ಅಂದ್ರೆ ಇ ಟಾಯ್ಲೆಟ್‍ಗಳನ್ನು ಬಳಸೋದು ಹೇಗೆ ಅನ್ನೋದು ಪ್ರತಿಭಟನಾ ನಿರತರಾದ ಕೆಲವು ಹೆಣ್ಣುಮಕ್ಕಳಿಗೆ ಗೊತ್ತಿಲ್ಲದೆ ನಿತ್ಯ ಕರ್ಮಗಳನ್ನು ಪೂರೈಸಲು ನಾನಾ ಅವಸ್ಥೆ ಪಡ್ತಿದ್ದಾರೆ. ಅಹೋರಾತ್ರಿ ಧರಣಿಯಲ್ಲಿ ಇಲ್ಲಿಯತನಕ ಸುಮಾರು 12ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದವರಿಗೆ 108 ಅಂಬುಲೆನ್ಸ್‍ನಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗ್ತಿದೆ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ಕುಡಿಯೋ ನೀರನ್ನು ಪೂರೈಕೆ ಮಾಡಲಾಗ್ತಿದೆ.

    ಹೋರಾಟ ಮತ್ತಷ್ಟು ತೀವ್ರಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದು, ಇದೀಗ ರಾಜ್ಯದ ಮೂಲೆ ಮೂಲೆಗಳಿಂದ ಸರಿಸುಮಾರು 20 ಸಾವಿರ ನೌಕರರು ಬೆಂಗಳೂರಿಗೆ ಧಾವಿಸ್ತಿದ್ದಾರೆ. ರೈಲು, ಬಸ್‍ಗಳ ಮೂಲಕ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಇದ್ರಿಂದಾಗಿ ಇವತ್ತು ಮತ್ತಷ್ಟು ಟ್ರಾಫಿಕ್ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.

    ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೊಮ್ಮೆ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಮಾತನಾಡೋದಾಗಿ ಹೇಳಿದ್ದಾರೆ. ಆ ಮಾತುಕತೆಯಾದ್ರೂ ಸಫಲವಾಗುತ್ತಾ ಕಾದು ನೋಡಬೇಕಿದೆ.

  • ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    – ನಿತ್ಯ ಕರ್ಮ ಮುಗಿಸಲು ಸಾಲುಗಟ್ಟಿದ ಮಹಿಳೆಯರು

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹ್ರಹಿಸಿ ಅಂಗನವಾಡಿ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ಸಾವಿರಾರು ಮಂದಿ ಪ್ರತಿಭಟನೆ ಮಾಡ್ತಿರುವ ಜಾಗದಲ್ಲಿ ಮೂಲಭೂತ ಸೌಲಭ್ಯಗಳೇ ಸರಿಯಾಗಿಲ್ಲ.

    ಸಾವಿರಾರು ಮಂದಿಗೆ ಇರೋದು ಒಂದೇ ಶೌಚಾಲಯ. ರಾತ್ರಿಯಿಡೀ ರಸ್ತೆಯಲ್ಲಿ ಮಲಗಿದ್ದ ಸಾವಿರಾರು ಮಹಿಳೆಯರು ಬೆಳಗಿನ ಜಾವವೇ ನಿತ್ಯ ಕರ್ಮಗಳನ್ನು ಮುಗಿಸಲು ಮುಗಿಬಿದ್ದಿದ್ದಾರೆ. ಸಾಲುಗಟ್ಟಿ ನಿಂತಿದ್ದಾರೆ. ಈ ಸರತಿ ಸಾಲಿನ ಉದ್ದವೇ ಸರಿಸುಮಾರು ಅರ್ಧ ಕಿಲೋಮೀಟರ್‍ನಷ್ಟಿದೆ. ಮುಖ ತೊಳಿಯಲು ಸರಿಯಾಗಿ ನೀರು ಕೂಡ ಸಿಕ್ತಿಲ್ಲ.

    ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್‍ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು. ಫ್ರೀಡಂಪಾರ್ಕ್ ರಸ್ತೆ ಬಳಿ ಪ್ರತಿಭಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿದೆ.