Tag: ಧರಣಿ

  • ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರು: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಪಾದಯಾತ್ರೆಗೆ ಹೋಗದಿರಲು ನಿರ್ಧರಿಸಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲೇ ಇದ್ದುಕೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

    ಎಲ್‍ಕೆಜಿ, ಯುಕೆಜಿ ತರಗತಿಗಳನ್ನ ಅಂಗನವಾಡಿ ಕೇಂದ್ರದಲ್ಲಿ ಮಾತ್ರ ನಡೆಸಲು ಸರ್ಕಾರ ಆದೇಶ ಹೊರಡಿಸಬೇಕು ಎಂಬ ಪ್ರಮುಖ ಬೇಡಿಕೆ ಇಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ಸಜ್ಜಾಗಿದ್ದರು. ಆದರೆ ಪೊಲೀಸರು ಕಾರ್ಯಕರ್ತೆಯರನ್ನ ತಡೆದಿದ್ದರಿಂದ ತುಮಕೂರಿನಲ್ಲೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಿ, ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಮಂಗಳವಾರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲಿ ಸೇರಿದ್ದರು. ಅಲ್ಲಿಂದಲೇ ಪಾದಯಾತ್ರೆ ಹೋಗಲು ಸಿದ್ದರಾಗಿದ್ದರು. ಪಾದಯಾತ್ರೆ ಕೈ ಬಿಟ್ಟು ಸಿಎಂ ಜೊತೆ ಮಾತುಕತೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆಕೊಟ್ಟಿದ್ದಾರೆ. ಆದರೆ ಸಿಎಂ ಜೊತೆಗಿನ ಮಾತುಕತೆ ತೃಪ್ತಿ ತಂದಿಲ್ಲವಾದರಿಂದ ಗಾಜಿನ ಮನೆಯಲ್ಲೇ ಧರಣಿಗೆ ಮುಂದಾಗಿದ್ದಾರೆ.

  • ಜಿಲ್ಲಾಧಿಕಾರಿ ಕಚೇರಿ ಮುಂದೆ ಭಜನೆ ಮಾಡಿ ಧರಣಿ ನಡೆಸಿದ ಶ್ರೀರಾಮಸೇನೆ

    ಜಿಲ್ಲಾಧಿಕಾರಿ ಕಚೇರಿ ಮುಂದೆ ಭಜನೆ ಮಾಡಿ ಧರಣಿ ನಡೆಸಿದ ಶ್ರೀರಾಮಸೇನೆ

    – ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡುವಂತೆ ಆಗ್ರಹ
    – ದಲಿತ ಬಾಲಕಿ ಅತ್ಯಾಚಾರಿಗಳನ್ನು ಬಂಧಿಸಿ

    ಗದಗ: ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಭಜನೆ ಮಾಡುವ ಮೂಲಕ ವಿನೂತನವಾಗಿ ಧರಣಿ ಮಾಡಿದ್ದಾರೆ. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು, ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಅತ್ಯಾಚಾರಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂತ ಕಾರ್ಯಕರ್ತರಿಗೆ ದತ್ತ ಮಾಲಾಧಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಭಜನೆ ಮಾಡುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪವಿತ್ರ ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡಬೇಕು, ಅಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಅಡೆ-ತಡೆ ಇಲ್ಲದೆ ಹಿಂದೂಗಳಿಗೆ ಪ್ರವೇಶ ನೀಡಬೇಕು ಜೊತೆಗೆ ನಿರಂತರ ಪೂಜಾ ಪುರಸ್ಕಾರ ನಡೆಯಬೇಕು ಎಂದು ಆಗ್ರಹಿಸಿದರು.

     

    ಕಾಮುಕರಿಂದ ಕಗ್ಗೊಲೆಯಾಗಿರುವ ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಸಾವಿಗೆ ನ್ಯಾಯಾ ಕೊಡಿಸಿ, ಅತ್ಯಾಚಾರ ಮಾಡಿ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಭಜನೆ ಮಾಡುವ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ದತ್ತ ಮಾಲಾಧಾರಿಗಳು ಮನವಿ ಸಲ್ಲಿಸಿದರು.

  • ಮತ್ತೆ ಬೀದಿಗಿಳಿದ ಪೌರಕಾರ್ಮಿಕರು – ನೇಮಕಾತಿ ಷರತ್ತುಗಳ ಸಡಿಲಿಕೆಗೆ ಒತ್ತಾಯ

    ಮತ್ತೆ ಬೀದಿಗಿಳಿದ ಪೌರಕಾರ್ಮಿಕರು – ನೇಮಕಾತಿ ಷರತ್ತುಗಳ ಸಡಿಲಿಕೆಗೆ ಒತ್ತಾಯ

    ಬೆಂಗಳೂರು: ಪೌರಕಾರ್ಮಿಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ವತಿಯಿಂದ ಧರಣಿ ನಡೆಯಿತು.

    ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 18 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಎಂದು ಧರಣಿ ನಡೆಸಿದರು. ಸದ್ಯ ಪಾಲಿಕೆಯಲ್ಲಿ 4 ಸಾವಿರ ಪೌರಕಾರ್ಮಿಕರ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಇದರಿಂದ ಶೇ.50 ರಷ್ಟು ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಕೆಲಸವೇ ಸಿಗದಂತೆ ಆಗಲಿದೆ. ಹೀಗಾಗಿ ನೇಮಕಾತಿ ಷರತ್ತುಗಳನ್ನ ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ;

    1. ಗುತ್ತಿಗೆ ಆಧಾರದ ಎಲ್ಲ ಪೌರಕಾರ್ಮಿಕರ ಖಾಯಂಗೊಳಿಸಬೇಕು
    2. ಕನ್ನಡ ಓದಲು ಬರೆಯಲು ಬರಬೇಕು ಎಂಬ ನಿಯಮ ತೆಗೆಯಬೇಕು
    3. 45 ವರ್ಷಗಳ ವಯೋಮೀತಿಗೆ ನೇಮಕಾತಿ ಹೊರಡಿಸಿರೊದನ್ನು 55 ವರ್ಷಕ್ಕೆ ಏರಿಕೆ ಮಾಡಬೇಕು
    4. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಹೆಲ್ಪ್ ಲೈನ್ ಸಹಾಯ ಕೊಡಬೇಕು
    5. ಪೌರಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಶಿಕ್ಷಣ ಕೊಡಿಸಲು ಸಹಾಯ ಮಾಡಬೇಕು

    ಈ ಎಲ್ಲ ಬೇಡಿಕೆಗಳ ಆಧರಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಖುದ್ದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ವಿಶೇಷ ಆಯುಕ್ತ ಸಂದೀಪ್ ಭೇಟಿ ನೀಡಿ ಬೇಡಿಕೆಗಳ ಪರಿಶೀಲಿಸುವಯದಾಗಿ ಭರವಸೆ ನೀಡಿದರು.

  • ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಲಕ್ನೋ: ಪ್ರತಿಭಟನಾ ನಿರತ ಶಿಕ್ಷಕರೊಬ್ಬರು ತಮ್ಮ ಒಳಉಡುಪನ್ನು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಒಣಗಿಸಲು ನೇತುಹಾಕಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮಾಜಿ ಶಾಸಕರೊಬ್ಬರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಬಳಿ 23ಕ್ಕೂ ಹೆಚ್ಚು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆಯೇ ತಮ್ಮ ಒಳ ಉಡುಪನ್ನು ನೇತುಹಾಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 509(ಮಹಿಳೆಯ ಗೌರವಕ್ಕೆ ಧಕ್ಕೆ) ಅಡಿ ಶಿಕ್ಷಕ ವಿಜಯ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಉಸ್ತುವಾರಿ ನಜರತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಸಮೀಪಾಲ್ ಅತ್ರಿ ತಿಳಿಸಿದ್ದಾರೆ.

    ಪ್ರತಿಭಟನೆಯನ್ನು ಹಿಂಪಡೆಯುವಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ದೂರ ಹೋಗುವಂತೆ ಅಧಿಕಾರಿಗಳು ಹೇಳಿದ ನಂತರ ಸಿಂಗ್ ತಮ್ಮ ಧರಣಿಯ ಸ್ಥಳವನ್ನು ಬದಲಾಯಿಸಿದ್ದಾರೆ ಎಂದು ಸಹ ವರದಿಯಾಗಿದೆ. ಮಾಜಿ ಶಾಸಕರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಇವರು ಫೆಬ್ರವರಿ 26, 1996ರಂದು ಈ ಸ್ಥಳದಲ್ಲಿ ಧರಣಿ ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

  • ಮಳೆಗಾಗಿ ದೇವರ ಮುಂದೆ ಧರಣಿ ಕುಳಿತ ಗ್ರಾಮಸ್ಥರು

    ಮಳೆಗಾಗಿ ದೇವರ ಮುಂದೆ ಧರಣಿ ಕುಳಿತ ಗ್ರಾಮಸ್ಥರು

    ಕೊಪ್ಪಳ: ಮೊಹರಂ ಕೊನೆ ದಿನವಾದ ಮಂಗಳವಾರ ಕೊಪ್ಪಳದ ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ.

    ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮೊಹರಂ ಕೊನೆ ದಿನದ ನಿಮಿತ್ತ ದೇವರನ್ನು ವಿಸರ್ಜನೆ ಮಾಡಲು ಹೋಗುವ ವೇಳೆ ಗ್ರಾಮಸ್ಥರು ಅಡ್ಡಗಟ್ಟಿ ಧರಣಿ ಕೂತಿದ್ದರು. ನೀರು ತುಂಬಿದ ಐದು ಕೊಡವನ್ನು ದೇವರ ಮುಂದೆ ಇಟ್ಟು ಗ್ರಾಮಸ್ಥರು ವರ ಕೇಳಿದ್ದರು. ಮಳೆ ಬರುವುದಾದರೆ ತಲೆ ಮೇಲೆ ನೀರು ಹಾಕು, ಬರುವುದಿಲ್ಲ ಎಂದಾದರೆ ನಮ್ಮನ್ನು ದಾಟಿಕೊಂಡು ಹಾಗೆ ಹೋಗು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಮಳೆ ಬರುತ್ತಾ ಇಲ್ವಾ ಎಂದು ಹೇಳಿ ಹೋಗು ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಧರಣಿ ಕುಳಿತಿದ್ದರು.

    ಈ ವೇಳೆ ಮೊಲಾಲಿ ದೇವರನ್ನು ಹೊತ್ತಿದ್ದವರು ಕೊಡದಲ್ಲಿದ್ದ ನೀರನ್ನು ಎತ್ತಿ ಸುರಿದುಕೊಂಡು ಮಳೆಯ ಮುನ್ಸೂಚನೆ ಕೊಟ್ಟು ಮುಂದೆ ಸಾಗಿದರು. ಈ ಮೂಲಕ ಗ್ರಾಮಸ್ಥರು ಬೇಡಿಕೆಗೆ ಮೊಲಾಲಿ ದೇವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗ್ರಾಮದಲ್ಲಿ ಮಳೆಯಾಗದೆ ಭತ್ತ, ನಾಟಿ ಕಾರ್ಯ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಈಗ ದೇವರ ಮಳೆಯ ಮುನ್ಸೂಚನೆ ನೀಡುರುವ ಪರಿಣಾಮ ಗುಂಡೂರು ಗ್ರಾಮಸ್ಥರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

  • ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ – ಆಯೋಗ ರಚನೆ

    ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ – ಆಯೋಗ ರಚನೆ

    ಬೆಂಗಳೂರು: ವಾಲ್ಮೀಕಿ ಸಮುದಾದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರಕ್ಕಾಗಿ ಆಯೋಗವೊಂದನ್ನು ರಚನೆ ಮಾಡಲಾಗಿದೆ.

    ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ನೀಡುವುದರ ಬಗ್ಗೆ ಪರಿಶೀಲನೆಗಾಗಿ ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

    ಕಳೆದ ಜೂನ್ 25 ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಸಿದ್ದ ವಾಲ್ಮೀಕಿ ಸಮುದಾಯ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಅಧ್ಯಕ್ಷ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆದಿತ್ತು.

  • ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ಧಾರವಾಡ: ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಹಿತಿಗಳು ಮತ್ತು ಹೋರಾಟಗಾರರು ಧರಣಿ ನಡೆಸಿ ಆಕ್ರೋಶ ಹೋರಹಾಕಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು, ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಹರಿಹಾಯ್ದರು.

    ಕನ್ನಡ ಬೇಕು ಎನ್ನುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಕನ್ನಡ ಬೇಡ ಎನ್ನುವವರಿಗೆ ಇಲ್ಲಿ ಸ್ಥಳ ಇಲ್ಲ. ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರುತ್ತಾರೆ. ಯಾರಿಗೆ ಬೇಡವಾಗಿದೆಯೋ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡಿಗೆ ಹೋಗಲಿ. ಇನ್ನು ಕನ್ನಡ ತಾಯಿ ಬಗ್ಗೆ ನಾವು ಘೋಷಣೆ ಕೂಗುತ್ತೇವೆ. ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ ಸರ್ಕಾರದ ಇಂಗ್ಲೀಷ್ ಮಾಧ್ಯಮ ನೀತಿ ವಿರೋಧ ಮಾಡುತ್ತೇವೆ ಎಂದು ಕಿಡಿಕಾರಿದರು.

    ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಮಾತನಾಡಿ, ಇವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಈಗ ನಡೆದಿರುವುದನ್ನು ಬಿಟ್ಟು ಬಿಡಬೇಕು. ಕನ್ನಡ ಹಾಗೂ ಕರ್ನಾಟಕಕ್ಕಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಜನರ ಬಗ್ಗೆ ಕನಿಕರ ಇಲ್ಲ ಅನಿಸುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

  • ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ನಂತರ ನಂಜನಗೂಡಿನ ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

    ಸೋಮವಾರದಿಂದ ನಂಜನಗೂಡು ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಧರಣಿ ಮಾಡಲು ನಿರ್ಧರಿಸಿದ್ದು, ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಧರಣಿಯಲ್ಲಿ ದೇವಾಲಯದ 180 ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಆರಂಭಿಸಿದ್ದಾರೆ. ಚಾಮುಂಡಿ ಬೆಟ್ಟದ ನೌಕರರಂತೆ ಇವರು ಪ್ರಮುಖ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

    ಪ್ರತಿಭಟನಾಕಾರರ ಬೇಡಿಕೆಗಳು:
    1. ಕಾರ್ಯಾರ್ಥ ನೇಮಕ ಮಾಡಿರುವ ನೌಕರರನ್ನು ಖಾಯಂಗೊಳಿಸಬೇಕು.
    2. ವೇತನ ಶ್ರೇಣಿ ಪಡೆಯುತ್ತಿರುವ ನೌಕರರಿಗೆ 6ನೇ ವೇತನ ಮಂಜೂರು ಮಾಡಿ ಕಾಲ ಕಾಲಕ್ಕೆ ಬರುವ ಭತ್ಯೆಯನ್ನು ಕೊಡಲು ಖಾಯಂ ಆದೇಶ ಮಾಡುವುದು.
    3. ಪ್ರತಿವರ್ಷ ಬೋನಸ್ ರೂಪದಲ್ಲಿ ಎಲ್ಲ ನೌಕರರಿಗೆ ಇಡೀ ತಿಂಗಳ ಪೂರ್ಣ ವೇತನ ಪಾವತಿಸಬೇಕು.
    4. ಸೇವಾವಧಿಗೂ ಮುನ್ನಾ ಅಕಾಲಿಕ ಮರಣ ಹೊಂದುವ ನೌಕರರ ಕುಟುಂಬದವರಿಗೆ ಅನುಕಂಪದ ಮೇಲೆ ಕೆಲಸ ನೀಡಬೇಕು.
    5. ನಿವೃತ್ತಿ ಬಳಿಕ ನೌಕರರಿಗೆ ಕೊಡುವ 35 ಸಾವಿರ ರೂ. ಹಣವನ್ನು 5 ಲಕ್ಷ ರೂ.ಗೆ ಏರಿಸಬೇಕು
    6. ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು.
    7. ದೇವಾಲಯದ ಕಾರ್ಯನಿರ್ವಹಿಸುತ್ತಿರುವ ಅನುವಂಶೀಯ ನೌಕರರು ಮರಣ ಹೊಂದಿದಲ್ಲಿ ಧಾರ್ಮಿಕ ಕೈಂಕಾರ್ಯಗಳಿಗೆ ಅಡೆ ತಡೆ ಉಂಟಾಗದಂತೆ ಸದರಿ ಹುದ್ದೆಗೆ ತುರ್ತಾಗಿ ನೌಕರರನ್ನು ನಿಗದಿ ಪಡಿಸಬೇಕು.

    ಇಂದು ಬೆಳಗ್ಗೆ ದೇವಾಲಯದಲ್ಲಿ ನಂಜುಡೇಶ್ವರನಿಗೆ ಪೂಜಾ ವಿಧಿ ವಿಧಾನ ನಡೆದ ಬಳಿಕ ನೌಕರರು ಧರಣಿ ಆರಂಭಿಸಿದ್ದಾರೆ. ಅರ್ಚಕರು, ಸೇವಾ ಕೌಂಟರ್ ಸಿಬ್ಬಂದಿ, ಪ್ರಸಾದ ವಿತರಣಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಿಂದ ಭಕ್ತರಿಗೆ ಸೇವೆಗಳಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ. ವಿಶೇಷ ಪೂಜೆ, ಅರ್ಚನೆ ಹಾಗೂ ಇತರೆ ಸೇವೆಗಳು ಪ್ರತಿಭಟನೆ ಆರಂಭವಾದ ಬಳಿಕ ಭಕ್ತರಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಒಟ್ಟು 242 ಮಂದಿ ನೌಕರರಿರುವ ನಂಜನಗೂಡು ದೇವಾಲಯದಲ್ಲಿ ಸುಮಾರು 62 ಹುದ್ದೆಗಳು ಖಾಲಿಯಿದ್ದು, ಇನ್ನುಳಿದ 180 ಮಂದಿ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ಶೌಚಾಲಯ ಕಟ್ಟಿಸಿಕೊಳ್ಳದ ಮನೆ ಮುಂದೆ ಪುರಸಭೆ ಅಧಿಕಾರಿಗಳ ಧರಣಿ

    ದಾವಣಗೆರೆ: ಶೌಚಾಲಯ ಕಟ್ಟಿಸಿಕೊಳ್ಳದ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಮನೆ ಮುಂದೆ ಪುರಸಭೆ ಅಧಿಕಾರಿಗಳು ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಮಲೆಬೆನ್ನೂರು ಗ್ರಾಮದ ಪುರಸಭೆ ವ್ಯಾಪ್ತಿಯ 4ನೇ ವಾರ್ಡ್ ನ ಕಾಲಭೈರವ ರಸ್ತೆಯಲ್ಲಿರುವ ರುದ್ರಗೌಡರ ಮನೆ ಮುಂದೆ ಅಧಿಕಾರಿಗಳು ಧರಣಿ ನಡೆಸಿದರು. ರುದ್ರಗೌಡರಿಗೆ ಈಗಾಗಲೇ ಮೂರು ತಿಂಗಳ ಹಿಂದೆಯೇ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ಮಂಜೂರಾಗಿತ್ತು. ಆದರೆ ಮನೆಯಲ್ಲಿ ಮೂರು ತಿಂಗಳ ಬಾಣಂತಿ ಇರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಮನೆಯಲ್ಲಿ ಬಾಣಂತಿ ಇದ್ದರೆ ಗುಂಡಿ ಅಗೆಯಬಾರದು ಎನ್ನುವ ಮೌಢ್ಯಕ್ಕೆ ಜೋತು ಬಿದ್ದ ರುದ್ರಗೋಡ ಶೌಚಾಲಯ ನಿರ್ಮಾಣ ಮಾಡಿಸಿಲ್ಲ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಎನ್. ನಾಗರತ್ನ, ಕಂದಾಯ ಅಧಿಕಾರಿ ರಾಜು ಬಣಕಾರ್, ಆರೋಗ್ಯ ಅಧಿಕಾರಿ ಗುರುಪ್ರಸಾದ್ ಮತ್ತು ಪುರಸಭೆ ಸದಸ್ಯರು ರುದ್ರಗೌಡ ಮನೆ ಮುಂದೆ ಕುಳಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

    ಅಧಿಕಾರಿಗಳು ಮತ್ತು ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳಿದ್ದು, ವಾರ್ಡ್‍ವಾರು ಬಯಲು ಮುಕ್ತ ಶೌಚಾಲಯ ಮಾಡಲು ಸಂಕಲ್ಪ ಮಾಡಿದ್ದಾರೆ. ಈಗಾಗಲೇ 14ನೇ ವಾರ್ಡ್ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದೆ. ಆದರೆ 4ನೇ ವಾರ್ಡ್ ನಲ್ಲಿ ರುದ್ರಗೌಡ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ವಾರ್ಡ್ ಬಯಲು ಮುಕ್ತ ಶೌಚಾಲವಾಗಲಿದೆ. ( ಇದನ್ನೂ ಓದಿ: ಎಳೇ ವಯಸ್ಸಿನಲ್ಲೇ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ ಬಸವನಬಾಗೇವಾಡಿಯ ಪೃಥ್ವಿ )

    ಕಳೆದ ಮೂರು ತಿಂಗಳಿನಿಂದ ರುದ್ರಗೌಡರ ಮನವೊಲಿಸಲು ಅಧಿಕಾರಿಗಳು ಮತ್ತು ಸದಸ್ಯರು ಯತ್ನಿಸಿ ವಿಫಲರಾಗಿದ್ದರು. ಆದ್ದರಿಂದ ಸತತ ಮೂರು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ. ಪರಿಣಾಮ ರುದ್ರಗೌಡ ಮುಜುಗರಕ್ಕೆ ಒಳಗಾಗಿದ್ದಾರೆ. ಸಂಜೆ ವೇಳೆಗೆ ಮನೆಯಿಂದ ಹೊರಬಂದ ರುದ್ರಗೌಡ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ. ಭರವಸೆ ದೊರೆತ ಬಳಿಕ ಅಧಿಕಾರಿಗಳು ಸಂಜೆ ಧರಣಿ ವಾಪಸ್ ಪಡೆದಿದ್ದಾರೆ. ( ಇದನ್ನೂ ಓದಿ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ )

  • ಲೈಫ್ ಕೊಡ್ತೀನಿ ಅಂತಾ ಹಣ, ಮಾನ ದೋಚಿ ಮೋಸ ಮಾಡಿದ್ದ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಸಂತ್ರಸ್ತೆ

    ಲೈಫ್ ಕೊಡ್ತೀನಿ ಅಂತಾ ಹಣ, ಮಾನ ದೋಚಿ ಮೋಸ ಮಾಡಿದ್ದ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಸಂತ್ರಸ್ತೆ

    ರಾಮನಗರ: ಮದುವೆ ಮಾಡಿಕೊಳ್ತೇನೆ ಎಂದು ಗೃಹಿಣಿಯೋರ್ವಳನ್ನು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ ಯುವಕನ ಮನೆಯ ಮುಂದೆ ಗೃಹಿಣಿ ಧರಣಿ ಕುಳಿತಿರುವ ಘಟನೆ ಜಿಲ್ಲೆಯ ಬಸವನಪುರದಲ್ಲಿ ನಡೆದಿದೆ.

    ನಿರ್ಮಲಾ ಮೋಸಕ್ಕೊಳಗಾದ ಗೃಹಿಣಿ. ನಿರ್ಮಲಾ ಬಸವನಪುರದ ಮಧುರ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಭರತ್ ಎಂಬ ಯುವಕನ ಪರಿಚಯವಾಗಿದೆ. ಮುಂದೆ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಸತಿ-ಪತಿಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಭರತ್ ಗೆ ಸರ್ಕಾರಿ ಕೆಲಸ ಸಿಕ್ಕಿತೆಂದು ಜಾತಿಯ ನೆಪವೊಡ್ಡಿ ಮದುವೆ ಆಗಲ್ಲ ಎಂದು ನಿರ್ಮಲಾರಿಂದ ದೂರವಾಗಿದ್ದಾನೆ.

    ನಿರ್ಮಲಾ ಹೇಳೋದು ಹೀಗೆ: ನನಗೆ ಮೊದಲೇ ಮದುವೆಯಾಗಿ ಒಂದು ಮಗುವಿದೆ. ಆದರೆ ಕಾರಣಾಂತರಗಳಿಂದ ಪತಿಯಿಂದ ದೂರವಾಗಿ ಕಳೆದ ಐದು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದೆ. ಈ ನಡುವೆ ಒಂದೂವರೆ ವರ್ಷದ ಹಿಂದೆ ಕೆಲಸದ ಸ್ಥಳದಲ್ಲಿ ಭರತ್ ಎಂಬಾತನೊಂದಿಗೆ ಪರಿಚಯವಾಯಿತು. ನನಗೆ ಮೊದಲೇ ಒಂದು ಮಗುವಿದ್ದರೂ ಲೈಫ್ ಕೊಡ್ತಿನಿ ಅಂತಾ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇಷ್ಟಲ್ಲದೇ ನನ್ನಲ್ಲಿದ್ದ ಹಣವನ್ನು ಮೋಸದಿಂದ ಲಪಟಾಯಿಸಿದ್ದಾನೆ. ಒಂದೂವರೆ ವರ್ಷಗಳಿಂದ ನಾವಿಬ್ಬರೂ ಸಂಬಂಧದಲ್ಲಿದ್ದೇನೆ. ಈಗ ಸರ್ಕಾರಿ ಕೆಲಸ ಸಿಕ್ಕಿತು ಎಂದು ಹೇಳಿ ನಮ್ಮಿಬ್ಬರ ಜಾತಿ ಬೇರೆ ಎಂದು ನೆಪವೊಡ್ಡಿ ನನ್ನಿಂದ ದೂರವಾಗಿದ್ದಾನೆ ಎಂದು ನಿರ್ಮಲಾ ಹೇಳುತ್ತಾರೆ .

    ಮೋಸಕ್ಕೊಳಗಾದ ನಿರ್ಮಲಾ ಮಹಿಳಾ ಸಂಘಟನೆಯ ಕಾರ್ಯಕರ್ತರ ಸಹಾಯದೊಂದಿಗೆ ಭರತ್ ಮನೆಯ ಮುಂದೆ ಧರಣಿ ಕುಳಿತಿದ್ದಾರೆ. ಮದುವೆಯಾಗಿದ್ರೂ ಸಹ ಗಂಡನಿಲ್ಲದಿದ್ದರಿಂದ ಮರುಮದುವೆಯಾಗ್ತೇನೆ ಎಂದು ನಂಬಿಸಿ ಹಣವನ್ನು ಕಿತ್ತುಕೊಂಡು, ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗಲ್ಲ ಎಂದು ಮೋಸ ಮಾಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಯುವಕನ ಮನೆಯ ಮುಂದೆ ಧರಣಿ ಕೂತಿದ್ದಾರೆ.