Tag: ಧರಣಿ

  • ರಾಜ್ಯದಲ್ಲಿ ಎಲ್ಲಾ ಕ್ರೀಡಾಕೂಟಗಳ ಬಹಿಷ್ಕಾರದ ಎಚ್ಚರಿಕೆ – ಬೇಡಿಕೆ ಈಡೇರಿಕೆಗಾಗಿ ದೈಹಿಕ ಶಿಕ್ಷಕರ ಪ್ರತಿಭಟನೆ

    ರಾಜ್ಯದಲ್ಲಿ ಎಲ್ಲಾ ಕ್ರೀಡಾಕೂಟಗಳ ಬಹಿಷ್ಕಾರದ ಎಚ್ಚರಿಕೆ – ಬೇಡಿಕೆ ಈಡೇರಿಕೆಗಾಗಿ ದೈಹಿಕ ಶಿಕ್ಷಕರ ಪ್ರತಿಭಟನೆ

    – ಶಿಕ್ಷಕರು, ದೈಹಿಕ ಶಿಕ್ಷಕರ ಮಧ್ಯೆ ತಾರತಮ್ಯ ಯಾಕೆ?
    – ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ

    ಬೆಂಗಳೂರು: ಸಮಾನ ವೇತನ, ಸಮಾನ ವಿದ್ಯಾರ್ಹತೆ ಹಾಗೂ ಒಂದೇ ನೇಮಕಾತಿ ವಿಧಾನವಿದ್ದರೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ (Physical Education Teachers) ಮಧ್ಯೆ ತಾರತಮ್ಯ ಧೋರಣೆ ಮಾಡಲಾಗುತ್ತಿದೆ ಎಂದು ರಾಜ್ಯ ಮಟ್ಟದ ದೈಹಿಕ ಶಿಕ್ಷಕರ ಸಂಘಟನೆ ಅಧ್ಯಕ್ಷ ಚೌಡಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಫ್ರೀಡಂ ಪಾರ್ಕ್‌ನಲ್ಲಿ ದೈಹಿಕ ಶಿಕ್ಷಕರ ಸಂಘದಿಂದ ರಾಜ್ಯ ಮಟ್ಟದ ಧರಣಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಜೊತೆಯಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಧೋರಣೆಯನ್ನು ಖಂಡಿಸಿ ಧರಣಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ದೈಹಿಕ ಶಿಕ್ಷಕರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಿಂಡಲಗಾ ಜೈಲಿನ ಅತಿ ಭದ್ರತಾ ವಿಭಾಗಕ್ಕೆ ಪ್ರದೂಷ್ ಶಿಫ್ಟ್: ವಿ.ಕೃಷ್ಣಮೂರ್ತಿ

    ಪ್ರೊ.ಎಲ್.ಆರ್ ವೈದ್ಯನಾಥ್ (Prof. L.R Vaidyanath) ವರದಿಯ ಅನ್ವಯ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರಾಗಿ ಪರಿಗಣಿಸಿದ್ದರೂ, ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳನ್ನು ಜಾರಿಗೊಳಿಸಲು ಇಲಾಖೆಯ ಅಧಿಕಾರಿಗಳು ವಿಳಂಬ ಧೋರಣೆ ಮಾಡಿರುವುದನ್ನು ಈ ಧರಣಿಯ ಮೂಲಕ ತೋರಿಸುತ್ತೇವೆ ಎಂದು ಆಗ್ರಹಿಸಿದ್ದಾರೆ.

    ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗದೆ ಇರಲಿ ಎನ್ನವ ಕಾರಣಕ್ಕೆ ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಲಿಲ್ಲ ಅಂದರೆ ರಾಜ್ಯದಲ್ಲಿ ಎಲ್ಲಾ ಕ್ರೀಡಾಕೂಟಗಳನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಂಜನಿ ರಾಘವನ್

    ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಶಾಸಕರು ಮತ್ತು ಹಲವು ಸಚಿವರು ಪ್ರತಿ ಬಾರಿ ಅಧಿವೇಶನಗಳಲ್ಲಿ ಚರ್ಚೆ ಮಾಡಿದ್ದಾರೆ. ಆದೇಶಗಳನ್ನು ನೀಡಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿಸಿದ್ದಾರೆ ಆದರೆ ಇದುವರೆಗೂ ಇಲಾಖೆಯಲ್ಲಿ ಸರ್ಕಾರದ ಆದೇಶಗಳನ್ನು ಜಾರಿಗೊಳಿಸಿಲ್ಲ. ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಚಂದ್ರಶೇಖರ್, ಖಜಾಂಚಿ ಡಿ.ವಿ ಬಾಲರಾಜ್, ಕಾರ್ಯಾಧ್ಯಕ್ಷ ಪಿ.ಡಿ ಕಾಗೋಡ್ ಎಚ್ಚರಿಕೆ ಗಂಟೆಯನ್ನು ಬಾರಿಸಿದ್ದಾರೆ.

  • ಗಂಡ ಬೇಕೆಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

    ಗಂಡ ಬೇಕೆಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ಗಂಡ ಬೇಕು ಎಂದು ಮಕ್ಕಳೊಂದಿಗೆ ಪತ್ನಿ ಧರಣಿ ಕುಳಿತ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ.

    ನಗರದ ರಾಮನಗರದ ಎಸ್‍ಓಜಿ ಕಾಲೋನಿ ಮನೆ ಮುಂದೆ ಪತ್ನಿ ಸೌಮ್ಯಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ರಾತ್ರಿಯಿಂದ ಗಂಡನಿಗಾಗಿ ಕಾಯುತ್ತಿದ್ದಾರೆ. ಕಾನ್ಸ್ ಟೇಬಲ್ ಆಗಿರುವ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ಸೌಮ್ಯಾ ಗಂಭೀರ ಆರೋಪ ಮಾಡಿದ್ದಾರೆ.

    ಗಂಡ ಗೋಣಿ ಬಸಪ್ಪ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನಮ್ಮ ಮನೆಗೆ ಬರುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಪತ್ನಿ ಸೌಮ್ಯ ಒಡವೆ ಅಡ ಇಟ್ಟಿದ್ದಾರೆ. ಸದ್ಯ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಮನೆ ಮುಂದೆ ರಾತ್ರಿ ಇಡೀ ಇಬ್ಬರು ಮಕ್ಕಳೊಂದಿಗೆ ಗಂಡನಿಗಾಗಿ ಹೆಂಡತಿ ಕಾದು ಕುಳಿತಿದ್ದಾರೆ.

    ಸೌಮ್ಯ ಗೋಣಿ ಬಸಪ್ಪ 2013 ರಲ್ಲಿ ವಿವಾಹವಾಗಿದ್ದರು. ಗಂಡ ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ಮನೆ ಖರೀದಿಸಿ ಕೊಟ್ಟಿದ್ದಾನೆ. ನಮ್ಮ ಮನೆಗೆ ಬರುತ್ತಿಲ್ಲ, ಎರಡು ಮಕ್ಕಳ ನಿರ್ವಹಣೆ ಕಷ್ಟ ಆಗಿದೆ. ಈ ಹಿಂದೆ ಕಂಪ್ಲೆಂಟ್ ಕೊಟ್ಟಿದ್ದೆ ಮನವೊಲಿಸಿ ಕೇಸ್ ವಾಪಸ್ ತೆಗೆಸಲಾಗಿತ್ತು. ಇದೀಗ ನನಗೆ ನನ್ನ ಗಂಡ ಬೇಕು ಎಂದು ಪತ್ನಿ ಸೌಮ್ಯ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಡಿಕೆಶಿ ಮುಖ್ಯಮಂತ್ರಿ ಆಗ್ಲೇಬೇಕು, ಆಗಿಯೇ ಆಗ್ತಾರೆ: ಶಾಸಕ ಶಿವಗಂಗಾ ಬಸವರಾಜ್ ವಿಶ್ವಾಸ

  • ನಟ ಮನೋಜ್ ಹುಟ್ಟು ಹಬ್ಬಕ್ಕೆ ‘ಧರಣಿ’ ಪೋಸ್ಟರ್ ರಿಲೀಸ್

    ನಟ ಮನೋಜ್ ಹುಟ್ಟು ಹಬ್ಬಕ್ಕೆ ‘ಧರಣಿ’ ಪೋಸ್ಟರ್ ರಿಲೀಸ್

    ನೆಲದ ಕಥೆಯನ್ನೇ ಪ್ರಧಾನವಾಗಿರಿಸಿಕೊಂಡು ರೂಪುಗೊಳ್ಳುತ್ತಿರುವ ಸಿನಿಮಾ ಧರಣಿ (Dharani). ಈ ಹಿಂದೆ ಅಪ್ಪಟ ಪ್ರೇಮಮಯ ಸಿನಿಮಾವನ್ನು ನಿರ್ದೇಶಿಸಿದ್ದ ಸುಧೀರ್ ಶ್ಯಾನುಭೋಗ್ ಈ ಸಲ ಪಕ್ಕಾ  ಕಮರ್ಷಿಯಲ್ ಮಾಸ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ʻಧರಣಿʼ ಬರೋಬ್ಬರಿ ಐದು ಫೈಟ್ಗಳನ್ನು ಹೊಂದಿದೆ. ಈ ಐದೂ ಸಾಹಸ ಸನ್ನಿವೇಶಗಳು ಒಂದಕ್ಕಿಂತಾ ಒಂದು ಭಿನ್ನವಾಗಿವೆ.

    ಮೇಲ್ನೋಟಕ್ಕೆ ಕೋಳಿ ಪಂದ್ಯದ ಸುತ್ತ ತೆರೆದುಕೊಳ್ಳುವ ಕಥೆ ಈ ಚಿತ್ರದಲ್ಲಿದ್ದರೂ, ಈ ವರೆಗೆ ಯಾರೂ ಹೇಳದ ಅನೇಕ ವಿಚಾರಗಳು ಅಡಕಗೊಂಡಿವೆ ಅನ್ನೋದು ನಿರ್ದೇಶಕ ಸುಧೀರ್ ಶ್ಯಾನುಭೋಗ್ ವಿವರಣೆ. ʻʻನನ್ನ ಮೊದಲ ಸಿನಿಮಾ ʻಅನಂತು ವರ್ಸಸ್ ನುಸ್ರತ್ʼ ಚಿತ್ರದಲ್ಲಿ ಒಂದು ಫೈಟ್ ಮಾತ್ರ ಇತ್ತು. ನನಗೆ ಅನವಶ್ಯಕವಾಗಿ ಫೈಟ್ ತುರುಕೋದರ ಬಗ್ಗೆ ನಂಬಿಕೆ ಇಲ್ಲ. ಧರಣಿ ಚಿತ್ರದಲ್ಲಿ ಐದು ಫೈಟ್ಗಳು ಇವೆ. ಆದರೆ ಇಲ್ಲಿ ಬರುವ ಪ್ರತಿಯೊಂದು ಸಾಹಸ ಸನ್ನಿವೇಶ ಕೂಡಾ ಕಥೆಗೆ ಪೂರಕವಾಗಿದೆ. ಮತ್ತು ಒಂದಕ್ಕಿಂತಾ ಒಂದು ಬೇರೆ ಫ್ಲೇವರಿನಲ್ಲಿವೆ. ಈ ಕುರಿತು ಪೂರ್ತಿ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆʼʼ ಎನ್ನುತ್ತಾರೆ ಸುಧೀರ್ ಶ್ಯಾನುಭೋಗ್.

    ಸದ್ಯ ನಾಯಕನಟ ಮನೋಜ್ (Manoj) ಅವರ ಹುಟ್ಟುಹಬ್ಬಕ್ಕೆ (Birthday) ʻಧರಣಿʼ  ಸಿನಿಮಾದ ಕಲಾತ್ಮಕ ಪೋಸ್ಟರ್ ಬಿಡುಗಡೆಗೊಂಡಿದೆ. ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಟಿ.ಎಫ್. ಹಾದಿಮನಿ ಈ ಪೋಸ್ಟರನ್ನು ರಚಿಸಿದ್ದಾರೆ. ಒಂದು ಕಡೆ ಹೀರೋ ಮನೋಜ್, ಮತ್ತೊಂದು ಬದಿಯಲ್ಲಿ ಕಾಳಗಕ್ಕೆ ಅಣಿಯಾದ ಕೋಳಿಯನ್ನು ಹೊಂದಿರುವ ಈ ಪೋಸ್ಟರ್ ವಿನ್ಯಾಸ ಎಲ್ಲರ ಗಮನ ಸೆಳೆದಿದೆ.

     

    ಎ ಕ್ಯೂಬ್ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ ʻಧರಣಿʼ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮನೋಜ್ ಗೆ  ನಾಯಕಿಯಾಗಿ ಹೊಸ ಪ್ರತಿಭೆ ರವೀಕ್ಷಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಸಂಪತ್ ಮೈತ್ರೇಯ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್, ಸ್ಪಂದನಾ ಪ್ರಸಾದ್, ಸತ್ಯರಾಜ್ ಮೊದಲಾದವರ ತಾರಾಗಣವಿದೆ. ಇನ್ನೂ ಅನೇಕ ಪಾತ್ರಗಳು ಈ ಚಿತ್ರದಲ್ಲಿದ್ದು, ಹೆಸರಾಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಹಂತಹಂತವಾಗಿ ವಿಚಾರಗಳನ್ನು ಅನಾವರಣಗೊಳಿಸುವ ಉದ್ದೇಶ ಚಿತ್ರತಂಡದ್ದು.

  • ಶಿವಮೊಗ್ಗ ಜೈಲಿನಲ್ಲಿ ಫೈಟ್ ಮಾಡಿದ ನಟ ಮನೋಜ್

    ಶಿವಮೊಗ್ಗ ಜೈಲಿನಲ್ಲಿ ಫೈಟ್ ಮಾಡಿದ ನಟ ಮನೋಜ್

    ಸುಧೀರ್‌ ಶಾನುಭೋಗ್‌ ನಿರ್ದೇಶಿಸುತ್ತಿರುವ ಚಿತ್ರ ಧರಣಿ (Dharani). ಅಪ್ಪಟ ದೇಸೀ ಕಥಾವಸ್ತು ಹೊಂದಿರುವ ಧರಣಿ ಚಿತ್ರದಲ್ಲಿ ಕೋಳಿ ಪಂದ್ಯ ಸೇರಿದಂತೆ ಅನೇಕ ಹೊಸ ವಿಚಾರಗಳು ಸೇರಿಕೊಂಡಿವೆ. ಈ ಹಿಂದೆ ಟಕ್ಕರ್‌ ಸಿನಿಮಾದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ಮನೋಜ್‌ ಕುಮಾರ್‌  (Manoj Kumar) ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶಿವಮೊಗ್ಗ ಜೈಲು (Jail), ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚನ್ನಪಟ್ಟಣ ಸೇರಿದಂತೆ ಅನೇಕ ಜಾಗಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ.

    ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲಿ ಬಾರೀ ಹೊಡೆದಾಟದ ದೃಶ್ಯಗಳ ಚಿತ್ರೀಕರಣ ನೆರವೇರಿದೆ. ಮುನ್ನೂರಕ್ಕೂ ಅಧಿಕ ಜ್ಯೂನಿಯರ್‌ ಕಲಾವಿದರು, ಹತ್ತಾರು ಜನ ಫೈಟರ್‌ಗಳು, ನಾಯಕ, ನಾಯಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದ ದೃಶ್ಯಗಳು ಅದ್ದೂರಿಯಾಗಿ ಸೆರೆಯಾಗಿದೆ. ಸಾಹಸ ದೃಶ್ಯಗಳ ಜೊತೆಗೆ ಒಂದು ಹಾಡನ್ನು ಕೂಡಾ ಇಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಧರಣಿ ಚಿತ್ರತಂಡ ಚನ್ನಪಟ್ಟಣದಲ್ಲಿ ಬೀಡುಬಿಟ್ಟಿದೆ. ರಾಘು ಮೈಸೂರು ನಿರ್ಮಿಸಿರುವ ವಿಶೇಷ ಸೆಟ್‌ ಮತ್ತು ಹಳ್ಳಿಯ ವಾತಾವರಣದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಾಗುತ್ತಿದೆ.

    ಕೋಳಿ ಪಂದ್ಯದ ಸುತ್ತ ಬೆಸೆದುಕೊಂಡಿರುವ ಈ ಧರಣಿ ಚಿತ್ರದಲ್ಲಿ ಈ ವರೆಗೆ ಎಲ್ಲೂ ಅನಾವರಣಗೊಳ್ಳದ ಸಾಮಾಜಿಕ ವ್ಯವಸ್ಥೆ, ಸಮುದಾಯದ ಸಮಸ್ಯೆಗಳೂ ದೃಶ್ಯ ರೂಪದಲ್ಲಿ ತೆರೆದುಕೊಳ್ಳಲಿದೆ ಅನ್ನೋದು ನಿರ್ದೇಶಕ ಸುಧೀರ್‌ ಶಾನುಭೋಗ್‌ ವಿವರಣೆ.

     

    ಶಶಾಂಕ್‌ ಶೇಷಗಿರಿ ಸಂಗೀತ, ಅರುಣ್‌ ಸುರೇಶ್‌ ಛಾಯಾಗ್ರಹಣವಿರುವ ಧರಣಿ ಚಿತ್ರದಲ್ಲಿ  ಸಂಪತ್‌ ಮೈತ್ರೇಯ, ಫ್ರೆಂಚ್‌ ಬಿರಿಯಾನಿ ಮಹಂತೇಶ್‌, ಸತ್ಯರಾಜ್‌, ಮೊದಲಾದವರ ತಾರಾಗಣವಿದೆ. ಇನ್ನೂ ಅನೇಕ ಹೆಸರಾಂತ ಸಿನಿಮಾ ಮತ್ತು ರಂಗಭೂಮಿ ಕಲಾವಿದರು ಈ ಚಿತ್ರದ ಭಾಗವಾಗಲಿದ್ದಾರೆ ಮನೋಜ್‌ ಅವರಿಗೆ ಜೋಡಿಯಾಗಿ ಹೊಸ ಪ್ರತಿಭೆ ರವೀಕ್ಷಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

  • Special- ನಟಿ ಶ್ರುತಿ ಕುಟುಂಬದ ಮೂರನೇ ತಲೆಮಾರು ಸಿನಿ ರಂಗಕ್ಕೆ ಎಂಟ್ರಿ

    Special- ನಟಿ ಶ್ರುತಿ ಕುಟುಂಬದ ಮೂರನೇ ತಲೆಮಾರು ಸಿನಿ ರಂಗಕ್ಕೆ ಎಂಟ್ರಿ

    ತ್ತೀಚೆಗೆ ನಟ ಶರಣ್ (Sharan) ಅವರ ಮಗ ‘ಗುರು ಶಿಷ್ಯರು’ ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ (Usha Krishna) ಅವರ ಮಗಳು  ಕೀರ್ತಿ ಕೃಷ್ಣ (Keerthi Krishna) ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದೊಡ್ಡಮ್ಮ ಶ್ರುತಿ (Shruti) ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಮಾವ ಶರಣ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಈ ನಡುವೆ ಕೀರ್ತಿ ಕೃಷ್ಣ ಯಾವ ಸಿನಿಮಾದೊಂದಿಗೆ ಚಿತ್ರರಂಗದಲ್ಲಿ ಲಾಂಚ್ ಆಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಚಿತ್ರರಂಗದಲ್ಲಿ ಸಾಕಷ್ಟು ಜನ ಕೀರ್ತಿ ಕೃಷ್ಣ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದರು. ಅಂತಿಮವಾಗಿ ಈಗ ಕೀರ್ತಿ ತಮ್ಮ ಮೊದಲ ಸಿನಿಮಾವನ್ನು ಒಪ್ಪಿದ್ದಾರೆ. ಅದು ಧರಣಿ (Dharani) ಮೂಲಕ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ.

    ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್  ಪೋಸ್ಟರ್  ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶ್ರುತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

    ಶ್ರುತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಕೃಷ್ಣ ಅವರ ತಾಯಿ ಕೂಡಾ ನಟಿಯಾಗಿದ್ದವರು. ನಂತರ ಶ್ರುತಿ ಮತ್ತು ಶರಣ್ ಕೂಡಾ ಬಣ್ಣದ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಈಗ ಮೂರನೇ ತಲೆಮಾರಿನ ಕೀರ್ತಿ ಕೃಷ್ಣ ಕೂಡಾ ಭರವಸೆ ಮೂಡಿಸಿದ್ದಾರೆ.

    ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು  ನಿರ್ಮಿಸುತ್ತಿದ್ದಾರೆ.  ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ , ಶ್ರೀನಿಧಿ ಡಿ ಎಸ್ ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬೇಕೆಂದು ಬಿಜೆಪಿ (BJP) ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಕಬ್ಜ ಮಾಡುವ ಉದ್ದೇಶದಿಂದ ಸ್ವತಃ ಬಿಜೆಪಿಯ ಮಾಸ್ಟರ್ ಮೈಂಡ್ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಖಾಡಕ್ಕೆ ಧುಮುಕಿದ್ದಾರೆ. ನಾಳೆ ಮಂಡ್ಯದಲ್ಲಿ (Mandya) ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಈ ಸಂಬಂಧ ಭರ್ಜರಿ ತಯಾರಿ ಮಾಡಿಕೊಂಡಿದೆ.

    ಸದ್ಯ ಬಿಜೆಪಿ ಕರ್ನಾಟದಲ್ಲಿ (Karnataka) ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಅಧಿಕ ಕ್ಷೇತ್ರಗಳಲ್ಲಿ ಗೆದ್ದು ಸಂಪೂರ್ಣ ಬಹುಮತಗಳ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಬೇಕೆಂದರೆ ಹಳೆ ಮೈಸೂರು ಭಾಗದಲ್ಲಿ‌ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಹೀಗಾಗಿ ಬಿಜೆಪಿ ಹಳೆ ಮೈಸೂರು ಭಾಗದ ಮೇಲೆ ಹೆಚ್ಚು ಗಮನವರಿಸುತ್ತಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೆ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕೆಂದರೆ ಬಿಜೆಪಿ ಹಲವು ಮಾಸ್ಟರ್ ಪ್ಲ್ಯಾನ್ ಮಾಡುವುದು ಅನಿವಾರ್ಯ ಆಗಿದೆ. ಇದೀಗ ಆ ಮಾಸ್ಟರ್ ಪ್ಲಾನ್ ಮಾಡಲು ಬಿಜೆಪಿಯ ಚಾಣಕ್ಯ ಎಂದು ಬಿರುದು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಖಾಡಕ್ಕೆ ಧುಮಿಕಿದ್ದಾರೆ. ನಾಳೆ ಮಂಡ್ಯದಲ್ಲಿ ಅಮಿತ್ ಶಾ ಅವರನ್ನು ಕರೆಸಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

    ನಾಳೆ ಮಂಡ್ಯ ನಗರಕ್ಕೆ ಕೇಂದ್ರ ಗೃಹ ಸಚಿವ ಆಗಮಿಸಲಿದ್ದು, ಬೆಳಗ್ಗೆ 11 ಗಂಟೆಗೆ ಮದ್ದೂರಿನ ಭೈರಾಪಟ್ಟಣದ ಹೆಲಿಪ್ಯಾಡ್‌ಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಬಳಿಕ 11.15ಕ್ಕೆ ಗೆಜ್ಜಲಗೆರೆಯಲ್ಲಿರುವ ಮನ್‌ಮುನ್‌ನ ಮೆಗಾ ಡೈರಿಯನ್ನು ಉದ್ಘಾಟಿಸಿ ಬಳಿಕ ಅಲ್ಲೇ ಊಟ ಮಾಡಲಿದ್ದಾರೆ. ಇದಾದ ಬಳಿಕ ಮತ್ತೆ ಭೈರಾಪಟ್ಟಣದ ಹೆಲಿಪ್ಯಾಡ್‌ನಿಂದ ಮಂಡ್ಯ ನಗರದ ಪಿಇಎಸ್ ಕಾಲೇಜಿನ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ‌ ಆಗಮಿಸಿ 1.30ಕ್ಕೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಪುಟದ ಹಲವು ಸಚಿವರು ಭಾಗಿಯಾಗಲಿದ್ದಾರೆ.

    ನಾಳೆ ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿಯ ಸಂಕಲ್ಪ ಯಾತ್ರೆಗೆ ಬೃಹತ್ ವೇದಿಯನ್ನು ಸಿದ್ಧಪಡಿಸಲಾಗಿದೆ. ಈ ಬೃಹತ್ ಸಮಾವೇಶದಲ್ಲಿ 1 ಲಕ್ಷ ಮಂದಿಯನ್ನು ಸೇರಿಸುವ ಗುರಿಯನ್ನು ಬಿಜೆಪಿ ಮುಖಂಡರು ಹೊಂದಿದ್ದು, ಈ ಸಂಬಂಧ ಮಂಡ್ಯ ವಿವಿ ಆವರಣದಲ್ಲಿ ಜರ್ಮನ್ ಟೆಂಟ್‌ನಿಂದ ಸುಸರ್ಜಿತ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸಮಾವೇಶಕ್ಕೆ ಬರುವ ಎಲ್ಲಾ ಜನರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವ ಹಿನ್ನೆಲೆ ಇಡೀ ಮಂಡ್ಯ‌ ನಗರ ಕೇಸರಿ ಮಯವಾಗಿ ಕಂಗೊಳಿಸುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬಿಜೆಪಿ ಬಾವುಟ, ಅಮಿತ್ ಶಾ ಸ್ವಾಗತ ಕೋರುವ ಬ್ಯಾನರ್‌ಗಳನ್ನು ಹಾಕಿ‌ ಶೃಂಗಾರ ಮಾಡಲಾಗಿದೆ. ಇನ್ನೂ ಸಂಸದೆ ಸುಮಲತಾ ಅಂಬರೀಶ್ ಅವರ ಭಾವಚಿತ್ರ ಅಮಿತ್ ಶಾ ಅವರ ಸ್ವಾಗತ ಬ್ಯಾನರ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಮಂಡ್ಯದ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಅಮಿತ್ ಶಾಗೆ Z+ ಸೆಕ್ಯೂರಿಟಿ ಇರುವ ಕಾರಣ ಎಸ್‌ಪಿಜಿ ಹಾಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆ ಮಾಡಿಕೊಂಡಿದೆ.

    ಒಂದು ಕಡೆ ಅಮಿತ್ ಶಾ ಮಂಡ್ಯಗೆ ಆಗಮಿಸುತ್ತಿರುವುದು ಬಿಜೆಪಿ ವಲಯದಲ್ಲಿ ಸಂತಸ ಮನೆ ಮಾಡಿದರೆ, ಇನ್ನೊಂದೆಡೆ ಅಮಿತ್ ಶಾಗೆ ರೈತರ ಪ್ರತಿಭಟನೆ ಬಿಸಿ ಮುಟ್ಟುವ ಸಾಧ್ಯತೆ ಇದೆ. 53 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಅಹೋರಾತ್ರಿ ಧರಣಿ‌ ಮಾಡುತ್ತಿದ್ದಾರೆ.‌ ಅಮಿತ್ ಶಾ ಮಂಡ್ಯಗೆ ಬರುತ್ತಿರುವ ಕಾರಣ ನಿನ್ನೆ ಏಕಾಏಕಿ ಪೊಲೀಸರು ಅಹೋರಾತ್ರಿ ಧರಣಿಯ ಟೆಂಟ್‌ ಅನ್ನು ಧ್ವಂಸ ಮಾಡಿದ ಕಾರಣ ರೈತರು ಪೊಲೀಸರ ವಿರುದ್ಧ ಆಕ್ರೋಶ ಪಡಿಸಿದ ಕಾರಣ ಮತ್ತೆ ಟೆಂಟ್‌ನ್ನು ಪೊಲೀಸರು‌ ನಿರ್ಮಾಣ ಮಾಡಿದರು. ಇದೀಗ ರೈತರು ನಮ್ಮ ಬೇಡಿಕೆಗಳನ್ನು ಅಮಿತ್ ಶಾ ಮುಂದೆ ಇಡಬೇಕು, ನಮಗೆ ಅಮಿತ್ ಶಾ ಭೇಟಿಗೆ ಅವಕಾಶ ನೀಡಬೇಕು. ಒಂದು ವೇಳೆ ಅವಕಾಶ ನೀಡದಿದ್ದರೆ ಅಮಿತ್ ಶಾ ಗೋ ಬ್ಯಾಕ್ ಚಳುವಳಿ ಮಾಡುವುದಾಗಿ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!

    ಒಟ್ಟಾರೆ ಮುಂದಿನ ವಿಧಾನಸಭಾ ಚುನಾವಣೆಯ ಲೆಕ್ಕಾಚಾರ ಇಟ್ಟುಕೊಂಡು ಮಂಡ್ಯಗೆ ಅಮಿತ್ ಶಾ ಬರುತ್ತಿರುವುದು ಬಿಜೆಪಿಗೆ ಶಕ್ತಿ ತುಂಬಿದ್ರೆ, ಇನ್ನೊಂದೆಡೆ ಪೊಲೀಸರು ಮಾಡಿರುವ ಯಡವಟ್ಟಿನಿಂದ ಅನ್ನದಾತರು ಅಮಿತ್ ಶಾಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಕಾಯುತ್ತಿದ್ದಾರೆ. ಆದ್ರೆ ಅಮಿತ್ ಶಾ ರೈತರ ಭೇಟಿಗೆ ಅವಕಾಶ ನೀಡಿ ತಮ್ಮ ರಾಜಕೀಯ ಚಾಣಾಕ್ಷತನದಿಂದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ‌ ಕಮಾಲ್‌ಗೆ ಕಾರಣರಾಗುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ರಾಜ್ಯಕ್ಕೆ ಚುನಾವಣಾ ಚಾಣಕ್ಯ – ಬಿಜೆಪಿಯಲ್ಲಿ ಮಂದಹಾಸ

    Live Tv
    [brid partner=56869869 player=32851 video=960834 autoplay=true]

  • ‘ಧರಣಿ’ಗೆ ಕೂತ ಟಕ್ಕರ್ ನಟ ಮನೋಜ್ ಕುಮಾರ್

    ‘ಧರಣಿ’ಗೆ ಕೂತ ಟಕ್ಕರ್ ನಟ ಮನೋಜ್ ಕುಮಾರ್

    ಅಂಬರೀಶ, ಚಕ್ರವರ್ತಿ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಕಾಣಿಸಿಕೊಂಡು ನಂತರ ಟಕ್ಕರ್ ಚಿತ್ರದ ಮೂಲಕ ನಾಯಕನಟನಾಗಿ ಲಾಂಚ್ ಆದವರು ಮನೋಜ್ ಕುಮಾರ್. ಟಕ್ಕರ್ ನಂತರ ಮನೋಜ್ ಏನು ಮಾಡುತ್ತಿದ್ದಾರೆ ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಈಗ ಇವರು ಮತ್ತೆ ಎರಡು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾಗಲಿದ್ದಾರೆ.

    ಮನೋಜ್ ನಟನೆಯ ಹೊಸ ಚಿತ್ರಕ್ಕೆ ʻಧರಣಿʼ ಎಂಬ ಶೀರ್ಷಿಕೆ ಇಡಲಾಗಿದೆ. ಕಳೆದ ಮಾರ್ನಾಲ್ಕು ತಿಂಗಳುಗಳ ಹಿಂದೆಯೇ ʻಧರಣಿʼಯ ಕೆಲಸಗಳು ಆರಂಭಗೊಂಡಿದ್ದು, ಕಥೆ ಕೂಡಾ ಸಿದ್ದಗೊಂಡಿದೆ. ಸದ್ಯ ಚಿತ್ರೀಕರಣಕ್ಕೆ ಬೇಕಾದ ತಯಾರಿ ನಡೆಸಲಾಗುತ್ತಿದೆ. ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು  ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ʻʻನನ್ನ ಹಿಂದಿನ ಚಿತ್ರಕ್ಕೂ ʻಧರಣಿʼಗೂ ಅಜಗಜಾಂತರ ವ್ಯತ್ಯಾಸವಿದೆ. ಅದು ಸೈಬರ್ ಕ್ರೈಂ ಕಥಾವಸ್ತು ಹೊಂದಿತ್ತು. ʻಧರಣಿʼಯಲ್ಲಿ ಸಿಟಿ ಲೈಫ್ ಕಾಣೋದೇ ಇಲ್ಲ. ಇದು ಪಕ್ಕಾ ದೇಸೀ ಸೊಗಡಿನ ಸಿನಿಮಾ. ತೀರಾ ಹೊಸದೆನ್ನುವ ಎಲಿಮೆಂಟುಗಳು ಇದರಲ್ಲಿವೆ. ಜೊತೆಗೆ ಕಾಡುವ ಕತೆಯೂ ಇರಲಿದೆ. ಈಗ ʻಕಂಟೆಂಟ್ ಓರಿಯೆಂಟೆಂಡ್ ಸಿನಿಮಾʼ ಅಂತಾರಲ್ಲಾ ಆ ತರಹದ್ದು. ನೈಜತೆಯ ಜೊತೆಗೇ ಕಮರ್ಷಿಯಲ್ ಅಂಶಗಳೂ ಇರುತ್ತವೆ. ಖಂಡಿತಾ ನನ್ನನ್ನು ಇಲ್ಲಿ ಕಂಪ್ಲೀಟ್ ಹೊಸ ಲುಕ್ನಲ್ಲಿ ನಿರೀಕ್ಷಿಸಬಹುದು. ಈ ಚಿತ್ರದ ಬಗ್ಗೆ ಹೇಳಿಕೊಳ್ಳುವುದು ಸಾಕಷ್ಟಿದೆ. ಹಂತಹಂತವಾಗಿ ಅವನ್ನೆಲ್ಲಾ ಹಂಚಿಕೊಳ್ಳುತ್ತೇನೆʼʼ ಅನ್ನೋದು ಮನೋಜ್ ಅವರ ಮಾತು.  ಇದನ್ನೂ ಓದಿ: ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

    ʻಧರಣಿʼ ಹೊಸ ವರ್ಷದ ಆರಂಭಕ್ಕೆ ಚಿತ್ರೀಕರಣ ಆರಂಭಿಸಲಿದೆ. ಚೇತನ್ ನಿರ್ದೇಶನ, ಶಶಾಂಕ್ ಶೇಷಗಿರಿ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸುರೇಶ್ ಬಾಬು ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ಭಾಸ್ಕರ್ ಆಚಾರ್ ನಿರ್ಮಾಣ ಮೇಲ್ವಿಚಾರಣೆ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾ ಸೋಲು: ನಿರ್ದೇಶಕರ ಮನೆ ಮುಂದೆ ಧರಣಿಗೆ ನಿರ್ಧಾರ

    ‘ಲೈಗರ್’ ಸಿನಿಮಾ ಸೋಲು: ನಿರ್ದೇಶಕರ ಮನೆ ಮುಂದೆ ಧರಣಿಗೆ ನಿರ್ಧಾರ

    ಪುರಿ ಜಗನ್ನಾಥ್ (Puri Jagannath) ನಿರ್ದೇಶನದಲ್ಲಿ ಮೂಡಿ ಬಂದ ಲೈಗರ್(Ligar) ಸಿನಿಮಾ ನಿರ್ಮಾಪಕರಿಗೆ ಮಾತ್ರವಲ್ಲ, ವಿತರಕರಿಗೂ ಭಾರೀ ನಷ್ಟವನ್ನುಂಟು ಮಾಡಿತ್ತು. ಭಾರೀ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾವನ್ನು ಬಿಡುಗಡೆ ಮುಂಚೆಯೇ ಕೆಲ ವಿತರಕರು ಭಾರೀ ಮೊತ್ತಕ್ಕೆ ವಿತರಣಾ ಹಕ್ಕುಗಳನ್ನು ಪಡೆದಿದ್ದರು. ಆದರೆ, ಸಿನಿಮಾ ಗೆಲ್ಲಲೇ ಇಲ್ಲ. ಹೀಗಾಗಿ ವಿತರಕರಿಗೆ ಸಾಕಷ್ಟು ನಷ್ಟವೇ ಆಯಿತು.

    ಇದೀಗ ನಷ್ಟ ಮಾಡಿಕೊಂಡ ವಿತರಕರು (Distributor) ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಮಾಡಿದರೆ, ಒಂದು ಪೈಸೆ ಕೂಡ ಸಿಗುವುದಿಲ್ಲ ಎಂದು ಪುರಿ ಖಡಕ್ ಸಂದೇಶವನ್ನೇ ರವಾನಿಸಿದ್ದಾರೆ. ‘ನನ್ನ ಬ್ಲ್ಯಾಕ್ ಮೇಲ್ ಮಾಡುವುದಾಗಲಿ, ಹೆದರಿಸುವುದಾಗಲಿ ಮಾಡಿದರೆ ಒಂದು ಪೈಸೆ ಕೂಡ ಸಿಗುವುದಿಲ್ಲ’ ಎಂದು ಪುರಿ ಹೇಳಿದ್ದಾರೆ ಎನ್ನಲಾದ ಆಡಿಯೋ ತೆಲುಗು ಸಿನಿಮಾ ರಂಗದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಮೊದಲ ವಾರವೇ ನೂರು ಕೋಟಿ ಕ್ಲಬ್ ಗೆ ಈ ಸಿನಿಮಾ ಸೇರಲಿದೆ ಎಂದು ಚಿತ್ರದ ನಾಯಕ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಇದೊಂದು ಸೂಪರ್ ಹಿಟ್ ಸಿನಿಮಾ ಆಗಲಿದೆ ಎಂದು ಎಲ್ಲ ಕಡೆಯೂ ಹೇಳಿಕೊಂಡು ಬಂದಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದೇ ಮಾಡಲಿಲ್ಲ. ಮೊದಲ ದಿನದಿಂದಲೇ ಮಕಾಡೆ ಮಲಗಿತು.

    ಲೈಗರ್ ಸಿನಿಮಾದ ಸೋಲು ಕೇವಲ ನಿರ್ಮಾಪಕರನ್ನು ಮಾತ್ರವಲ್ಲ, ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿದ್ದೆಗೆಡಿಸಿತ್ತು. ಸಹ ನಿರ್ಮಾಪಕಿ ಚಾರ್ಮಿ ಕೌರ್ ಕೂಡ ಸೋಲಿನ ನೋವಿನಲ್ಲಿ ಇದ್ದರು. ಇದೀಗ ವಿತರಕರು ಮತ್ತೆ ಚಿತ್ರತಂಡಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ. ತಮಗಾದ ಸೋಲನ್ನು ಕಟ್ಟಿಕೊಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರ್ಮಾಪಕರು ಸ್ಪಂದಿಸದೇ ಇದ್ದರೆ, ಧರಣಿ ಕೂರುವುದಾಗಿಯೂ ಹೇಳಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ರಾಜೀನಾಮೆ ಸಾಲಲ್ಲ, ಈಶ್ವರಪ್ಪ ಬಂಧನವಾಗ್ಬೇಕು- ಕಾಂಗ್ರೆಸ್‍ನಿಂದ ಅಹೋರಾತ್ರಿ ಧರಣಿ

    ರಾಜೀನಾಮೆ ಸಾಲಲ್ಲ, ಈಶ್ವರಪ್ಪ ಬಂಧನವಾಗ್ಬೇಕು- ಕಾಂಗ್ರೆಸ್‍ನಿಂದ ಅಹೋರಾತ್ರಿ ಧರಣಿ

    ಬೆಂಗಳೂರು: ರಾಜೀನಾಮೆ ವಿಳಂಬ ಖಂಡಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್, ಇದೀಗ ಈಶ್ವರಪ್ಪ ಬಂಧಿಸಬೇಕೆಂದು ಅಹೋರಾತ್ರಿ ಧರಣಿ ಕೈಗೊಂಡಿದೆ.

    24 ಗಂಟೆ ಪ್ರತಿಭಟನೆ ಘೋಷಣೆ ಮಾಡಿರೋದ್ರಿಂದ ಆಹೋರಾತ್ರಿ ಧರಣಿಯನ್ನು ಕೈಬಿಡಲ್ಲ. ಈಶ್ವರಪ್ಪ ವಿರುದ್ಧ ಹೊಸದಾಗಿ ಎಫ್‍ಐಆರ್ ಹಾಕಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇದನ್ನೂ ಓದಿ: ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

    ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವವರೆಗೆ ಹೋರಾಟ ಕೈಬಿಡಲ್ಲ. ರಾಜೀನಾಮೆ ಕೊಟ್ಟ ಕೂಡಲೇ ಹಿಂದೆ ಸರಿದರೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಲ್ಲ. ಆದ್ದರಿಂದ ಹೋರಾಟ ಮುಂದುವರಿಸಿವುದು ಕೈ ಪಾಳಯದ ಲೆಕ್ಕಾಚಾರವಾಗಿದೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

    ರಾಜ್ಯದ ಉದ್ದಗಲಕ್ಕೂ ಈ ಸಂಬಂಧ ಹೋರಾಟ ನಡೆಸಲು ಕೈ ಪಾಳಯದ ನಿರ್ಧಾರ ಮಾಡಿದೆ. ಈಶ್ವರಪ್ಪ ವಿರುದ್ಧ ಆರೋಪ ಬಂತು ಈಶ್ವರಪ್ಪ ರಾಜೀನಾಮೆ ಕೊಟ್ಟರು ಅಲ್ಲಿಗೆ ಎಲ್ಲವೂ ಮುಗಿದು ಹೋಯ್ತು ಎಂಬಂತಾಗುತ್ತದೆ. ಅದರ ಬದಲು ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ಕಾಯ್ದೆ ಅಡಿ ದೂರು ದಾಖಲಾಗಿ ಅವರ ಬಂಧನವಾದರೆ ಸರ್ಕಾರದ ವಿರುದ್ಧದ 40% ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗುತ್ತದೆ. ಅಲ್ಲದೆ ಇದೆನ್ನೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮತ್ತಷ್ಟು ಆರೋಪ ಮಾಡಬಹುದು ಹೋರಾಟ ರೂಪಿಸಬಹುದು. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ಈಶ್ವರಪ್ಪ ಬಂಧಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲು ತೀರ್ಮಾನಿಸಿದೆ.

  • ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ: ವಿಧಾನಸಭೆಯಲ್ಲಿ ಬಿಲ್ ಪಾಸ್

    ಡಬಲ್ ಆಯ್ತು ಮುಖ್ಯಮಂತ್ರಿ, ಸಚಿವರು, ಶಾಸಕರ ಸಂಬಳ: ವಿಧಾನಸಭೆಯಲ್ಲಿ ಬಿಲ್ ಪಾಸ್

    ಬೆಂಗಳೂರು: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. 5ದಿನ ಕಲಾಪ ವ್ಯರ್ಥ ಆಯಿತು. ಆದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಮಾತ್ರ ಹೆಚ್ಚಾಗಬೇಕು. ಇವತ್ತು ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಿಕೊಂಡಿದ್ದಾರೆ.

    ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಎರಡು ವಿಧೇಯಕಗಳು ಮಂಡನೆಯಾಗಿ ಅಂಗೀಕಾರವೂ ಆಯಿತು. ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ ಹೆಚ್ಚಳ ಆಗಿದೆ. ಬರೋಬ್ಬರಿ ಶೇಕಡಾ 50%ರಷ್ಟು ಸಂಬಳ, ಭತ್ಯೆ ಹೆಚ್ಚಳ ಆಗಿದೆ.

    ವೇತನ ಹೆಚ್ಚಳದ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಚಿವ ಮಾಧುಸ್ವಾಮಿ ಬಿಲ್ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ. 50%ರಷ್ಟು ಹೆಚ್ಚಳಕ್ಕೆ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ

    ಕೋವಿಡ್ ಕಾರಣಕ್ಕಾಗಿ ಹಲವು ಇಲಾಖೆಗಳಲ್ಲಿ ಹಣ ಕಡಿತ ಮಾಡಿದ್ದ ಸರ್ಕಾರ, ಕೆಲ ಯೋಜನೆಗಳ ಅನುದಾನವನ್ನೂ ಕೂಡ ಕಡಿತಗೊಳಿಸಿತ್ತು. ದುಂದು ವೆಚ್ಚ ಮಾಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಘೋಷಣೆ ಮಾಡಿದ್ದರು. ಆದರೆ ಈಗ ಸಚಿವರು, ಮುಖ್ಯಮಂತ್ರಿಗಳ ಸಂಬಳ ಹೆಚ್ಚಳಕ್ಕೆ ಬಿಲ್ ತಂದು ಅಂಗೀಕಾರ ಪಡೆದುಕೊಂಡ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಯಾವುದೇ ದೇಶದ್ರೋಹಿಯನ್ನು ಬಿಡೋದಿಲ್ಲ, ಮಟ್ಟ ಹಾಕ್ತೀವಿ: ಆರ್. ಅಶೋಕ್

    * ಮುಖ್ಯಮಂತ್ರಿ, ಸಚಿವರಿಗೆ ಸಂಬಳ ಹೆಚ್ಚಾಗಿದ್ದೆಷ್ಟು..?

    > ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50%ರಷ್ಟು ಹೆಚ್ಚಳ

    > ಸಿಎಂಗೆ ಪ್ರತಿ ತಿಂಗಳು ಇದ್ದ 50ಸಾವಿರ ಸಂಬಳ 75 ಸಾವಿರಕ್ಕೆ ಹೆಚ್ಚಳ

    > ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ 40ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ

    > ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ 3ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ

    >ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ

    > ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ

    > ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ಲೀಟರ್ ನಿಂದ 2ಸಾವಿರ ಲೀಟರ್ ಪೆಟ್ರೋಲ್ ಗೆ ಹೆಚ್ಚಳ

    * ಸಭಾಧ್ಯಕ್ಷರು/ ಸಭಾಪತಿ ವೇತನ, ಭತ್ಯೆ

    > ಸಂಬಳ: 50,000ರೂ. ದಿಂದ 75,000ರೂ.

    > ಆತಿಥ್ಯ ವೇತನ ವಾರ್ಷಿಕ: 3,00,000ರೂ. ದಿಂದ 4,00,000 ರೂ.

    > ಮನೆ ಬಾಡಿಗೆ: 80,000 ರೂ. ದಿಂದ 1,60,000ರೂ.

    > ಇಂಧನ: 1000 ಲೀಟರ್‍ರಿಂದ 2000 ಲೀಟರ್

    > ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿಂದ 40ರೂ.

    > ದಿನ ಭತ್ಯೆ(ಪ್ರಯಾಣ): ದಿನಕ್ಕೆ2000ರೂ. ದಿಂದ 3000ರೂ.

    > ಹೊರ ರಾಜ್ಯ ಪ್ರವಾಸ: ದಿನಕ್ಕೆ 2500ರೂ. +5000ರೂ. ದಿಂದ 3000ರೂ.+7000ರೂ.

    * ವಿಪಕ್ಷ ನಾಯಕರ ವೇತನ, ಭತ್ಯೆ

    > ಸಂಬಳ:40,000ರೂ. ದಿಂದ ? 60,000ರೂ.

    > ವಿಪಕ್ಷ ನಾಯಕರ ಆತಿಥ್ಯ ವೇತನ ವಾರ್ಷಿಕ: 2,00,000ರೂ. ದಿಂದ 2,50,000ರೂ.

    > ಇಂಧನ: 1000 ಲೀಟರ್ ರಿಂದ 2000 ಲೀಟರ್

    > ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ.

    > ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 3000ರೂ.

    > ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.

    * ಶಾಸಕರ ವೇತನ, ಭತ್ಯೆ

    > ಸಂಬಳ: 20,000ರೂ. ದಿಂದ 40,000ರೂ.

    > ಕ್ಷೇತ್ರ ಭತ್ಯೆ: 40,000ರೂ. ರಿಂದ 60000ರೂ.

    > ಆತಿಥ್ಯ ವೇತನ (ವಾರ್ಷಿಕ): 2,00,000ರೂ. ದಿಂದ 2,50,000ರೂ.

    > ಇಂಧನ: 1000 ಲೀಟರ್ ರಿಂದ 2000 ಲೀಟರ್

    > ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರೂ. ದಿಂದ 30ರೂ.

    > ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 2500ರೂ.

    > ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.

    > ದೂರವಾಣಿ ವೆಚ್ಚ: ಯಥಾಸ್ಥಿತಿ ತಿಂಗಳಿಗೆ 20,000ರೂ. ಕಾಯ್ದಿರಿಸಲಾಗಿದೆ

    > ಶಾಸಕರ ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000ರೂ. ರಿಂದ 20,000ರೂ. ಹೆಚ್ಚಳ