Tag: ಧರಂಸಿಂಗ್

  • ಖರ್ಗೆಯನ್ನು ಸೋಲಿಸಲು ಮುಂದಾದ ಕುಚುಕು ಗೆಳೆಯ ಧರಂಸಿಂಗ್ ಪುತ್ರ?

    ಖರ್ಗೆಯನ್ನು ಸೋಲಿಸಲು ಮುಂದಾದ ಕುಚುಕು ಗೆಳೆಯ ಧರಂಸಿಂಗ್ ಪುತ್ರ?

    ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ರಾಷ್ಟ್ರವ್ಯಾಪಿ ಚರ್ಚೆಗೆ ಒಳಗಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಈ ಬಾರಿಯ ಕಮಲದ ಅಭ್ಯರ್ಥಿ ಎಂದು ಬಿಂಬಿತರಾಗಿದ್ದಾರೆ. ಇದೀಗ ತಂದೆಯ ಕುಚುಕು ಗೆಳೆಯ ಮಲ್ಲಿಕಾರ್ಜುನ ಖರ್ಗೆಯರನ್ನು ಸೋಲಿಸಲು ಮಾಜಿ ಸಿಎಂ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಮುಂದಾದ್ರಾ ಎಂದು ಕೈ ವಲಯದಲ್ಲಿ ಚರ್ಚೆ ಶುರುವಾಗಿದೆ.

    ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬಳಿಕ ನನ್ನ ಬಳಿಯೂ ಅಸ್ತ್ರಗಳಿವೆ. ಸಮಯ ಬಂದಾಗ ಪ್ರಯೋಗಿಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದರು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ವೈಬ್‍ಸೈಟ್ ಪ್ರಕಟಿಸಿತ್ತು. ಈ ಸುದ್ದಿಗೆ ಫೇಸ್‍ಬುಕ್ ನಲ್ಲಿ ಶಾಸಕ ಅಜಯ್ ಸಿಂಗ್ ಖಾತೆಯಿಂದ ‘ಗ್ರೇಟ್ ಜಾಧವ್ ಜೀ’ ಎಂದು ಕಮೆಂಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಬೆಂಬಲಕ್ಕೆ ನಿಂತ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

    ಅಜಯ್ ಸಿಂಗ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರನ್ನು ಬೆಂಬಲಿಸುತ್ತಾರಾ ಎಂಬುದರ ಬಗ್ಗೆ ತೀವ್ರ ಚರ್ಚೆಗಳು ಆರಂಭಗೊಂಡಿವೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಇಬ್ಬರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಚುನಾವಣಾ ತಂತ್ರಗಳನ್ನು ರಚಿಸುತ್ತಿದ್ದಾರೆ.

    ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಜಯ್ ಸಿಂಗ್, ಕಮೆಂಟ್ ಬಂದಿರುವ ಫೇಸ್ ಬುಕ್ ಖಾತೆ ನನ್ನದಲ್ಲ ಎಂದು  ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧರಂಸಿಂಗ್ ವಿಚಾರಕ್ಕೆ ಕಲಾಪದಲ್ಲಿ ಕೋಲಾಹಲ

    ಧರಂಸಿಂಗ್ ವಿಚಾರಕ್ಕೆ ಕಲಾಪದಲ್ಲಿ ಕೋಲಾಹಲ

    ಬೆಂಗಳೂರು: ಇಂದು ನಡೆದ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೆಲಕಾಲ ನಾಯಕರ ನಡುವೆಯೇ ಕೋಲಾಹಲ ನಡೆಯಿತು.

    ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡುವಾಗ, ಕುಮಾರಸ್ವಾಮಿಯವರು ಅಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್‍ವರ ಬೆನ್ನಿಗೆ ಚೂರಿ ಹಾಕಿ ದ್ರೋಹ ಮಾಡಿ ನೀವು ಅವರ ಸಾವಿಗೆ ಕಾರಣವಾಗಿದ್ದೀರಿ. ಕಾಂಗ್ರೆಸ್‍ಗೆ ಕೈ ಕೊಟ್ಟು ನಮ್ಮ ಜೊತೆ ಬಂದು ಸಿಎಂ ಆದವರು ನೀವು ಎಂದು ವಾಗ್ದಾಳಿ ನಡೆಸಿದರು.

     

    ಯಡಿಯೂರಪ್ಪರ ಮಾತಿಗೆ ಆಕ್ಷೇಪ ವ್ಯಕ್ತಡಿಸಿದ ಸಿಎಂ ಮತ್ತು ಇತರೆ ಕಾಂಗ್ರೆಸ್ ನಾಯಕರು, ಸಾವಿಗೆ ಕಾರಣ ಎಂಬ ಪದ ಅಸಂವಿಧಾನಿಕ. ಬಿಜೆಪಿಯವರು ಸಾವಿನ ರಾಜಕಾರಣ ಮಾಡುತ್ತಿದ್ದಾರೆ ತಿರುಗೇಟು ನೀಡಲು ಆರಂಭಿಸಿದರು. ಈ ವೇಳೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಕೆಲಕಾಲ ಮಾತಿನ ಚಕಮಕಿ ಏರ್ಪಟ್ಟಿತ್ತು. ಇತ್ತ ಕಲಾಪದಲ್ಲಿದ್ದ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಯಡಿಯೂರಪ್ಪರ ಮಾತಿಗೆ ಕಿಡಿಕಾರಿದ್ರು.

    ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಧರಂಸಿಂಗ್ ಅವರ ವಿಚಾರ ಇಲ್ಲಿ ಅಪ್ರಸ್ತುತ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆಯಾದ 11 ವರ್ಷಗಳ ನಂತರ ಸ್ವರ್ಗವಾಸಿಗಳಾಗಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಒಂದೆರೆಡು ತಿಂಗಳಿಗೆ ದಿವಂಗತರಾಗಿದ್ದರೆ ಯಡಿಯೂರಪ್ಪರ ಮಾತು ಪೂರಕ ಅಂತಾ ಹೇಳಬಹುದು ಎಂದು ಹೇಳಿ ಚರ್ಚೆಯನ್ನು ನಿಯಂತ್ರಣಗೊಳಿಸಿ ಕಲಾಪ ಸುಗಮವಾಗಿ ಸಾಗುವವಂತೆ ನೋಡಿಕೊಂಡರು.

    https://youtu.be/3-xpV9vWtNo

  • ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಧರಂ ಸಿಂಗ್ ಜೇವರ್ಗಿ ಕ್ಷೇತ್ರದ ಮತ ಪ್ರಭುಗಳಿಗೆ ಕೊನೇ ಬಾರಿ ನಮನ ಸಲ್ಲಿಸಿದ್ದು ಹೀಗೆ

    ಕಲಬುರಗಿ: 2014ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರದಿಂದ 37 ಸಾವಿರ ಮತಗಳಿಂದ ಜಯಗಳಿಸಿದ್ದರು. ಪುತ್ರನ ಗೆಲುವಿನ ಬಳಿಕ ಮಾತನಾಡಿದ್ದ ಧರಂ ಸಿಂಗ್ ಇದು ನನ್ನ ಕೊನೆಯ ಭಾಷಣ ಎಂದು ಕಣ್ಣೀರು ಹಾಕಿದ್ದರು.

    2014ರ ಚುನಾವಣೆಯಲ್ಲಿ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ 37 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ನಂತರ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಧರಂಸಿಂಗ್ ಇದು ನನ್ನ ಕೊನೆಯ ಭಾಷಣ, ಇನ್ನು ಮುಂದೆ ಕ್ಷೇತ್ರದ ಜನ ನನ್ನ ಪುತ್ರ ಅಜಯ್ ಸಿಂಗ್ ಅವರಿಗೆ ಆರ್ಶಿರ್ವಾದ ಮಾಡಬೇಕು ಅಂತಾ ಕಣ್ಣೀರು ಹಾಕಿದ್ದರು.

    ಧರಂಸಿಂಗ್ ಅವರ ಮಾತು ಕೇಳಿದ ಅವರ ಪುತ್ರ ಅಜಯ್ ಸಿಂಗ್ ಹಾಗು ಕ್ಷೇತ್ರದ ಜನರಲ್ಲಿ ಸಹ ಕಣ್ಣಿರು ತುಂಬಿ ಬಂದಿತ್ತು. ಧರಂಸಿಂಗ್ ನಂತರ ಅವರ ಪುತ್ರ ಅಜಯ್ ಸಿಂಗ್ ತಂದೆಯ ಮಾತಿಗೇ ಕಣ್ಣಿರಿನಲ್ಲಿಯೇ ಉತ್ತರ ಕೊಟ್ಟಿದ್ದರು.

     

  • ಆಪ್ತಮಿತ್ರನ ನಿಧನಕ್ಕೆ ಕಣ್ಣೀರು ಹಾಕಿದ ಮಲ್ಲಿಕಾರ್ಜುನ ಖರ್ಗೆ:ವಿಡಿಯೋ

    ಆಪ್ತಮಿತ್ರನ ನಿಧನಕ್ಕೆ ಕಣ್ಣೀರು ಹಾಕಿದ ಮಲ್ಲಿಕಾರ್ಜುನ ಖರ್ಗೆ:ವಿಡಿಯೋ

    ಬೆಂಗಳೂರು: ನನಗೆ ಅಣ್ಣನನ್ನು ಕಳೆದುಕೊಂಡಷ್ಟು ನೋವಾಗಿದೆ. ನಾನೇ ಎಷ್ಟೋ ಸಾರಿ ಅವರ ಜೊತೆ ಜಗಳ ಮಾಡಿಕೊಂಡ್ರೂ, ಮರುದಿನ ಅವರೇ ನನಗೆ ಫೋನ್ ಮಾಡಿ ಸಮಾಧಾನ ಮಾಡುತ್ತಿದ್ದರು ಎಂದು ಗೆಳಯನನ್ನ ನೆನೆದು ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಣ್ಣೀರು ಹಾಕಿದ್ದಾರೆ.

    ನಮ್ಮದು ಸುದೀರ್ಘ 50 ವರ್ಷಗಳ ಸ್ನೇಹ. ರಾಜಕಾರಣದ ಹೊರತಾಗಿಯೂ ವೈಯಕ್ತಿಕವಾಗಿ ನಾವಿಬ್ಬರೂ ಒಳ್ಳೆಯ ಗೆಳೆಯರು. ಇತ್ತೀಚಿಗೆ ನನ್ನ ಹುಟ್ಟು ಹಬ್ಬದ ದಿನ ಶುಭಾಶಯ ಕೋರಲು ಮನೆಗೆ ಬರ್ತೀನಿ ಅಂದಿದ್ರು. ನಿಮ್ಮ ಆರೋಗ್ಯ ಸರಿಯಿಲ್ಲ, ಬರಬೇಡಿ ಎಂದು ಹೇಳಿದ್ರೂ ಮನೆಗೆ ಬಂದು ಶುಭಾಶಯ ಹೇಳೀದ್ದರು. ಈಗ ನಾನೇ ಮನೆಗೆ ಬಾ ಅಂದ್ರೂ ಅವರು ಬರಲ್ಲ ಎಂದು ದುಃಖ ಭರಿತರಾಗಿ ಹೇಳಿದರು.

    ಧರಂಸಿಂಗ್ ಅವರು ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ನಾವಿಬ್ಬರೂ ದೆಹಲಿಗೆ ಹೋದರೂ ಒಟ್ಟಾಗಿ ಹೋಗುತ್ತಿದ್ವಿ. ನಾವಿಬ್ಬರೂ ಒಟ್ಟಾಗಿ ಇರೋದನ್ನು ನೋಡಿದ ಉಳಿದ ನಾಯಕರು ನಮ್ಮನ್ನ ಚೇಡಿಸುತ್ತಿದ್ದರು ಎಂದು ತಮ್ಮ ರಾಜಕೀಯ ಜೀವನವನ್ನು ಖರ್ಗೆ ನೆನಪು ಮಾಡಿಕೊಂಡರು.

  • ಉಸಿರಾಟದ ಸಮಸ್ಯೆ: ಮಾಜಿ ಸಿಎಂ ಧರಂಸಿಂಗ್ ಆಸ್ಪತ್ರೆಗೆ ದಾಖಲು

    ಉಸಿರಾಟದ ಸಮಸ್ಯೆ: ಮಾಜಿ ಸಿಎಂ ಧರಂಸಿಂಗ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಧರಂಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಎನ್ ಧರಂಸಿಂಗ್, ಬುಧವಾರ ರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ತಜ್ಞ ವೈದ್ಯರಿಂದ ಮಾಜಿ ಸಿಎಂ ಧರಂಸಿಂಗ್‍ಗೆ ಚಿಕಿತ್ಸೆ ಮುಂದುವರೆದಿದೆ.

    ಧರಂ ಸಿಂಗ್ ಅವರಿಗೆ ಈ ಹಿಂದೆಯೂ ಉಸಿರಾಟದ ತೊಂದರೆಯಿದ್ದು, 2013ರ ಮೇ ತಿಂಗಳಲ್ಲಿ ಮಿಲ್ಲರ್ ರಸ್ತೆಯಲ್ಲಿರೋ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಫೆಬ್ರವರಿಯಲ್ಲಿಯೂ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.