Tag: ಧಮಾಕ

  • ಫೇಮಸ್ ಜೋಡಿಯ ‘ಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್

    ಫೇಮಸ್ ಜೋಡಿಯ ‘ಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಟ್ರ್ಯಾಕ್

    ನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ತುಕಾಲಿ ಸಿಂಗಿಂಗ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ಕಿತ್ತು, ಇದೀಗ ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್ ಭರ್ಜರಿ ಸ್ಟೆಪ್ಸ್ ಹಾಕಿರುವ ನಾನು ಹೋಗೋಕು ಮೊದ್ಲು ಎಂಬ ಹಾಡು ಬಿಡುಗಡೆಯಾಗಿದೆ.

    ನಿರ್ದೇಶಕ ಲಕ್ಷ್ಮೀ ರಮೇಶ್ ಸಾಹಿತ್ಯದ ಮೆಲೋಡಿ ಹಾಡಿಗೆ ಕಂಚಿನ ಕಂಠದ ಗಾಯಕ ವಿಜಯ್ ಪ್ರಕಾಶ್ ಹಾಗೂ ಮಾನಸ ಹೊಳ್ಳ ಧ್ವನಿಯಾಗಿದ್ದು, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದ್ಭುತ ಸಾಹಿತ್ಯ, ಸಂಗೀತ, ಕೊರಿಯೋಗ್ರಾಫಿ ಇರುವ ಹಾಡಿಗೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್

    ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಕಾಮಿಡಿ ಕಿಲಾಡಿ ಶೋ ಮೂಲಕವೇ ಗುರುತಿಸಿಕೊಂಡಿರುವ ನಯನಾ ಶರತ್ ‘ಧಮಾಕ’ ಸಿನಿಮಾದಲ್ಲಿ ಶಿವರಾಜ್ ಕೆ.ಆರ್ ಪೇಟೆ ಜೊತೆ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಹಾಲೇಶ್ ಸಿನಿಮೆಟೊಗ್ರಫಿ, ವಿನಯ್ ಕೂರ್ಗ್ ಸಂಕಲನ ಧಮಾಕಾ ಸಿನಿಮಾದಲ್ಲಿದೆ.

     

    Live Tv
    [brid partner=56869869 player=32851 video=960834 autoplay=true]