Tag: ಧಮಾಕ ಸಿನಿಮಾ

  • ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಗಮನ ಸೆಳೆದಿದ್ದ ಶ್ರೀಲೀಲಾಗೆ ಇದೀಗ ಲಕ್ ಕೈ ಕೊಟ್ಟಂತಿದೆ. ವಿಜಯ್ ದೇವರಕೊಂಡ, ನಿತಿನ್ ಸಿನಿಮಾಗಳು ‘ಕಿಸ್’ ನಟಿಯ ಕೈ ತಪ್ಪಿ ಹೋದ್ಮೇಲೆ ತಮಿಳಿನತ್ತ ನಟಿ ಮುಖ ಮಾಡಿದ್ದಾರೆ.

    ತೆಲುಗಿನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ಶ್ರೀಲೀಲಾ ಮಿಂಚುತ್ತಿದ್ದರು. ಈಗ ಅದೃಷ್ಟ ಕೂಡ ಶ್ರೀಲೀಲಾ ಕಡೆ ತಿರುಗಿ ನೋಡ್ತಿಲ್ಲ. ಈ ಬೆನ್ನಲ್ಲೇ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ (Ajith Kumar) ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದ ವಿಶೇಷ ಪಾತ್ರದಲ್ಲಿ ಉಮಾಶ್ರೀ

    ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಅಜಿತ್ ಕುಮಾರ್ ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

    ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ಅಜಿತ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • 100 ಕೋಟಿ ಕೊಟ್ರೂ ಆ ಪಾತ್ರದಲ್ಲಿ ನಟಿಸಲ್ಲ ಎಂದು ಬಂಪರ್ ಆಫರ್ ರಿಜೆಕ್ಟ್ ಮಾಡಿದ ಶ್ರೀಲೀಲಾ

    100 ಕೋಟಿ ಕೊಟ್ರೂ ಆ ಪಾತ್ರದಲ್ಲಿ ನಟಿಸಲ್ಲ ಎಂದು ಬಂಪರ್ ಆಫರ್ ರಿಜೆಕ್ಟ್ ಮಾಡಿದ ಶ್ರೀಲೀಲಾ

    ‘ಕಿಸ್’ ಬ್ಯೂಟಿ ಶ್ರೀಲೀಲಾ (Sreeleela) ಅವರು ಟಾಲಿವುಡ್ ಅಂಗಳದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಕನ್ನಡತಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ (Krithi Shetty), ಪೂಜಾ ಹೆಗ್ಡೆ (Pooja hegde) ಸೇರಿದಂತೆ ತೆಲುಗಿನ ಸ್ಟಾರ್ ನಟಿಯರಿಗೆ ಶ್ರೀಲೀಲಾ ಸೆಡ್ಡು ಹೊಡೆಯುತ್ತಿದ್ದಾರೆ. ಡಜನ್‌ಗಟ್ಟಲ್ಲೇ ಸಿನಿಮಾ ಆಫರ್ ಇರುವ ಶ್ರೀಲೀಲಾ ಅವರು ಈಗ ಬಂಪರ್ ಆಫರ್‌ವೊಂದನ್ನ ರಿಜೆಕ್ಟ್ ಮಾಡಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈ ಟು ಲವ್ (By Two Love) ಸಿನಿಮಾಗಳ ಮೂಲಕ ಸಿನಿ ಜೀವನ ಶುರು ಮಾಡಿದ್ದ ಯುವ ನಟಿ ಶ್ರೀಲೀಲಾ ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ (Pelli Sandadi) ಸಿನಿಮಾ ಮೂಲಕ ಲಗ್ಗೆಯಿಟ್ಟರು. ಮೊದಲ ಚಿತ್ರ ತೆಲುಗಿನಲ್ಲಿ ಮಕಾಡೆ ಮಲಗಿದ್ರು. ಶ್ರೀಲೀಲಾ ನಟನೆ & ಡ್ಯಾನ್ಸ್ ತೆಲುಗು ಸಿನಿಪ್ರಿಯರು ಫಿದಾ ಆದರು. ಅಲ್ಲಿಂದ ಶುರುವಾದ ಜರ್ನಿ ಈಗ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್

    ರವಿತೇಜಾ ಜೊತೆ ‘ಧಮಾಕ’ (Dhamaka) ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ ಮೇಲೆ ಪುಷ್ಪ ಸ್ಟಾರ್ ಅಲ್ಲು ಅರ್ಜುನ್, ನಿತಿನ್, ವಿಜಯ್ ದೇವರಕೊಂಡ ಸೇರಿದಂತೆ ಹಲವು ನಟರಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ದಿನದಿಂದ ದಿನಕ್ಕೆ ಶ್ರೀಲೀಲಾ ಜನಪ್ರಿಯತೆ ಜಾಸ್ತಿಯಾಗ್ತಿದೆ. ಇದನ್ನ ನೋಡಿ ಸೌತ್‌ನ ಫೇಮಸ್ ಡೈರೆಕ್ಟರ್ ಒಬ್ಬರು ಕೋಟಿ ಕೋಟಿ ಹಣ ಕೊಡ್ತೀನಿ ಅಂದ್ರು ಲೀಲಾ ಚಿತ್ರದಲ್ಲಿ ನಟಿಸಲು ನೋ ಎಂದಿದ್ದಾರಂತೆ. ಯಾಕೆ ಹೀಗೆ ಅಂದ್ರು? ಏನಾಯ್ತು?

    ‘ಧಮಾಕ’ ಸುಂದರಿ ಶ್ರೀಲೀಲಾಗೆ ಕೋಟಿ ಕೋಟಿ ರೂಪಾಯಿಗೆ ಸಿನಿಮಾಕ್ಕೆ ಆಫರ್ ಬಂದಿತ್ತು. ಆದರೆ ಶ್ರೀಲೀಲಾ ಅದನ್ನು ರಿಜೆಕ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ, ಬೋಲ್ಡ್ ಕಂಟೆಂಟ್ ಇರುವ ಸಿನಿಮಾದಲ್ಲಿ ನಟಿಸುವ ಚಾನ್ಸ್ ಇದಾಗಿದ್ದು, ಪ್ರಖ್ಯಾತ ಸ್ಟಾರ್ ಡೈರೆಕ್ಟರ್ ಒಬ್ಬರು ಶ್ರೀಲೀಲಾ ಅವರಿಗೆ ಈ ಆಫರ್ ನೀಡಿದ್ದರು ಎನ್ನುವುದು ವರದಿಯಾಗಿದೆ. ಮೊದಲೇ ಬೋಲ್ಡ್ ಕಂಟೆಂಟ್ ಇರುವುದಾಗಿ ಹೇಳಿದ್ದರಂತೆ. ಇದನ್ನು ಒಪ್ಪಿಕೊಂಡರೆ 10 ಕೋಟಿ ರೂಪಾಯಿ ಸಂಭಾವನೆ ನೀಡುವುದಾಗಿ ಹೇಳಿದ್ದರಂತೆ. ಇದನ್ನ ಕೇಳಿ ಯಾವುದೇ ಕಾರಣಕ್ಕೂ ನಾನು ಮೈ ತೋರಿಸುವ ದೃಶ್ಯಗಳಲ್ಲಿ ಬೋಲ್ಡ್ ಸೀನ್‌ಗಳಲ್ಲಿ ನಟಿಸೋದಿಲ್ಲ. 100 ಕೋಟಿ ರೂಪಾಯಿ ಕೊಟ್ಟರೂ ನಾನು ಇಂತಹ ಅಶ್ಲೀಲ ಕಂಟೆಂಟ್ ಇರುವ ಸಿನಿಮಾ ಮಾಡುವುದಿಲ್ಲ. ಅಂತಹ ದೃಶ್ಯ ಮಾಡಬೇಕು ಅಂದ್ರೆ ಸಿನಿಮಾವನ್ನೇ ಬಿಟ್ಟು ಬಿಡುವುದಾಗಿ ಶ್ರೀಲೀಲಾ ಹೇಳಿದ್ದಾರೆ ಎನ್ನಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]