Tag: ಧನ ಸಹಾಯ

  • ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

    ಜೈಪುರ: ಶಿಕ್ಷಕ ವೃತ್ತಿಯನ್ನು ಬಿಟ್ಟು ಝೊಮ್ಯಾಟೊ ಬಾಯ್ ಆದ ವ್ಯಕ್ತಿಯೊಬ್ಬರ ಜೀವನ ಕಥೆಯನ್ನು ವೀಡಿಯೋ ಮಾಡಿ ಟ್ವಿಟ್ಟರ್ ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಶಿಕ್ಷಕನೊಬ್ಬ ಝೊಮ್ಯಾಟೊ ಬಾಯ್ ಆದ ಕಥೆಯೇ ರೋಚಕ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕ ತನ್ನ ವೃತ್ತಿಗೆ ರಾಜೀನಾಮೆ ನೀಡಿ ಝೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುತ್ತಾರೆ. ಬೈಕ್ ತೆಗೆದುಕೊಳ್ಳಲು ಹಣವಿಲ್ಲದೇ ಸೈಕಲ್‍ನಲ್ಲೇ ಫುಡ್ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿಕೊಂಡಿರುತ್ತಾರೆ. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    ಝೊಮ್ಯಾಟೊ ಡೆಲಿವರಿ ಬಾಯ್ ದುರ್ಗ ಮೀನಾಳ್ ಸಂಕಷ್ಟ ಹಾಗೂ ಕಾಯಕ ನಿಷ್ಠೆಯನ್ನು ಕಂಡ ಟ್ವಿಟ್ಟರ್ ಬಳಕೆದಾರ ಆದಿತ್ಯ ಶರ್ಮಾ ಅವರು ಒಂದು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕೆಲವರು ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕರಿಂದ ಸ್ಫೂರ್ತಿ ಪಡೆದರೆ, ಕೆಲವರು ಸಹಾಯ ಹಸ್ತ ಚಾಚಿದ್ದಾರೆ. ಡೆಲಿವರಿ ಬಾಯ್‍ಗಾಗಿ ಕ್ರೌಡ್ ಫಂಡಿಂಗ್ ಪ್ರಾರಂಭವಾಯಿತು. ಇಂಟರ್‍ನೆಟ್ ಬಳಕೆದಾರರು ಆ ವ್ಯಕ್ತಿಯ ಕಠಿಣ ಪರಿಶ್ರಮಕ್ಕಾಗಿ ಅಪಾರ ಪ್ರೀತಿ ಮತ್ತು ಧನ ಸಹಾಯ ಮಾಡಿದ್ದಾರೆ. ಸಾರ್ವಜನಿಕರ ನೆರವಿನಿಂದ ವ್ಯಕ್ತಿಯು ಈಗ ಬೈಕ್ ಖರೀದಿಸಲು ಸಾಧ್ಯವಾಯಿತು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    ಈ ಕಥೆ ರಾಜಸ್ಥಾನದ ದುರ್ಗಾ ಮೀನಾಳ್ ಅವರದ್ದು. ದುರ್ಗ ಕಳೆದ 4 ತಿಂಗಳಿಂದ ಝೊಮ್ಯಾಟೊದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹೊಡೆತದಿಂದ ಅವರು ಶಿಕ್ಷಕ ವೃತ್ತಿ ಕಳೆದುಕೊಳ್ಳುತ್ತಾರೆ. ನಂತರ ಅವರು ಝೊಮ್ಯಾಟೊನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಭಾನುವಾರ ಟ್ವಿಟರ್ ಬಳಕೆದಾರರಾದ ಆದಿತ್ಯ ಶರ್ಮಾ ಅವರು ದುರ್ಗರವರ ಕುರಿತು ವೀಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ.

    ರಾಜಸ್ಥಾನದ ಸುಡುವ ಬಿಸಿಲಿನಲ್ಲೂ ಸೈಕಲ್ ತುಳಿದು ಸಮಯಕ್ಕೆ ಸರಿಯಾಗಿ ಆರ್ಡರ್‍ಗಳನ್ನು ತಲುಪಿಸುವ ಅವರ ಪರಿಶ್ರಮವನ್ನು ವೀಡಿಯೋದಲ್ಲಿ ಚಿತ್ರಿಸಿದ್ದಾರೆ. ಇದರೊಂದಿಗೆ ದುರ್ಗ ಅವರ ಅಧ್ಯಯನ ಮತ್ತು ಕೊರೊನಾ ಅವರ ಮೇಲೆ ಬೀರಿದ ಪರಿಣಾಮದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

    ಆದಿತ್ಯ ಅವರ ಈ ಟ್ವೀಟ್, ಟ್ವಿಟ್ಟರ್‍ನಲ್ಲಿ ಬಹು ಬೇಗನೇ ವೈರಲ್ ಆಗಿದೆ. ದುರ್ಗ ಅವರ ಸಹಾಯಕ್ಕೆ ಜನ ಮುಂದೆ ಬರತೊಡಗಿದ್ದು, ಕ್ರೌಡ್ ಫಂಡಿಂಗ್ ಮೂಲಕ ಸುಮಾರು 1.90 ಲಕ್ಷ ರೂ. ಧನ ಸಹಾಯ ಹರಿದುಬಂದಿದೆ.

    ಈ ಹಣದಲ್ಲಿ ಮೊದಲು ಬೈಕ್ ಖರೀದಿಸುತ್ತೇನೆ. ಉಳಿದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತೇನೆ ಎಂದು ದುರ್ಗ ಅವರು ತಿಳಿಸಿದ್ದಾರೆ. ಅಂತರ್ಜಾಲದ ಬಳಕೆದಾರರಿಂದ ಪಡೆದ ಧನ ಸಹಾಯದಿಂದ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

  • ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ಮಗಳ ನಿಶ್ಚಿತಾರ್ಥ ನಿಲ್ಲಿಸಿ ಪ್ರವಾಹ ಪೀಡಿತರಿಗೆ ಹಣ ನೀಡಿದ ಪತ್ರಕರ್ತ

    ತಿರುವನಂತಪುರ: ಕಳೆದ 15 ದಿನಗಳಿಂದ ಕೇರಳದಲ್ಲಿ ಅತಿವೃಷ್ಟಿಯಿಂದಾಗಿ ಜನಜೀವನ ನರಕದಂತಾಗಿದ್ದು, ದೇಶಾದ್ಯಂತ ಕೇರಳದ ಸಹಾಯಕಕ್ಕೆ ಮುಂದಾಗುತ್ತಿದ್ದಾರೆ. ಕೇರಳದಲ್ಲಿ ಖಾಸಗಿ ಪತ್ರಿಕೆಯ ಪತ್ರಕರ್ತರೊಬ್ಬರು ತಮ್ಮ ಮಗಳ ನಿಶ್ಚಿತಾರ್ಥವನ್ನು ನಿಲ್ಲಿಸಿ, ಕಾರ್ಯಕ್ರಮಕ್ಕೆ ಖರ್ಚು ಮಾಡಲು ಇರಿಸಿದ್ದ ಎಲ್ಲ ಹಣವನ್ನು ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮನೋಜ್ ಎಂಬವರೇ ಮಗಳ ನಿಶ್ಚಿತಾರ್ಥ ನಿಲ್ಲಿಸಿದ ಪತ್ರಕರ್ತ. ಇದೇ ಭಾನುವಾರ ಕನ್ನೂರಿನಲ್ಲಿ ಮಗಳು ದೇವಿ ಮತ್ತು ಗೋಕುಲ್ ಜೊತೆ ನಿಶ್ಚಿ ತಾರ್ಥವನ್ನು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಯಿಸಲಾಗಿತ್ತು. ಹಲವು ದಿನಗಳಿಂದ ನಮ್ಮ ರಾಜ್ಯದಲ್ಲಿಯೇ ಪ್ರವಾಹ ಉಂಟಾಗಿ ಜನರು ತೊಂದರೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ನಾವು ಸಂತೋಷದಿಂದ ಕಾರ್ಯಕ್ರಮ ಮಾಡೋದು ಸರಿ ಅಲ್ಲ. ಹಾಗಾಗಿ ಅಳಿಯನ ಕುಟುಂಬಸ್ಥರ ಜೊತೆ ಮಾತನಾಡಿ ಅದ್ಧೂರಿ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿದ್ದೇವೆ. ಭಾನುವಾರ ಕೇವಲ ಉಂಗುರವನ್ನು ಬದಲಾಯಿಸಲಾಗುವುದು ಎಂದು ಮನೋಜ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಎರಡು ಕುಟುಂಬಸ್ಥರು ಚರ್ಚಿಸಿ ಈ ನಿರ್ಣಯ ತೆಗೆದುಕೊಂಡಿದ್ದು, ನಿಶ್ಚಿತಾರ್ಥಕ್ಕೆ ಮೀಸಲಿರಿಸಿದ್ದ ಹಣವನ್ನ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದ್ದೇವೆ ಎಂದು ಮಂಜು ಸ್ಪಷ್ಟಪಡಿಸಿದ್ದಾರೆ.

    ಕೇರಳ ದುರಂತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈಗಾಗಲೇ ಮೃತಪಟ್ಟವರ ಸಂಖ್ಯೆ 167 ಕ್ಕೆ ಏರಿಕೆಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಲು ಭಾರತೀಯ ಕೋಸ್ಟ್ ಗಾರ್ಡ್ ನ ನಾಲ್ಕು ಹಡಗುಗಳನ್ನು ಕೊಚ್ಚಿನ್ ಗೆ ಕಳುಹಿಸಲಾಗಿದ್ದು, ಈಗಾಗಲೇ ಪ್ರವಾಹ ಪೀಡಿತ ಹಳ್ಳಿಗಳಿಗೆ 24 ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಐಸಿಜಿ 1,764 ಜನರನ್ನು ರಕ್ಷಿಸಿದ್ದು, 4,688 ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ.

    ಶನಿವಾರ ಕಾಸರಗೋಡು ಎರ್ನಾಕುಲಂ ಮತ್ತು ಇಡುಕ್ಕಿ ಒಳಗೊಂಡಂತೆ ಇತರ 13 ಜಿಲ್ಲೆಗಳಿಗೂ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 5 ಘಟಕದ ರಾಷ್ಟ್ರೀಯ ವಿಪತ್ತು ಪಡೆ ತಿರುವನಂತಪುರಂ ತಲುಪಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಕೂಡ 35 ಸದಸ್ಯರ ತಂಡ ತಲುಪುವ ನೀರಿಕ್ಷೆ ಇದೆ. ಇದೀಗ ಐಸಿಜಿ ಪಡೆಯನ್ನು ವಂಡಿಪೆರಿಯರ್ ನಿಂದ ಮಂಜುಮಾಲಾ ಹಳ್ಳಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ 16 ಮಂದಿಯನ್ನು ರಕ್ಷಿಸಲಾಗಿದೆ. ಹಾಗೂ ಅವರಿಗೆ ಸೇವಿಸಲು ಆಹಾರ ಪದಾರ್ಥಗಳನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ

    ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಂಗಳೂರಿನ ಸುರಕ್ತಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ದೀಪಕ್ ರಾವ್ ಕುಟುಂಬಕ್ಕೆ ಜನ ದೇಣಿಗೆಯನ್ನು ನೀಡುತ್ತಿದ್ದಾರೆ.

    ರಾಜ್ಯ, ದೇಶ ವಿದೇಶದಿಂದ ನೆರವಿನ ಹಸ್ತ ಹರಿದುಬರುತ್ತಿದೆ. ವಿವಿಧ ಸಂಘಟನೆಗಳು, ವೈಯಕ್ತಿಕ ದೇಣಿಗೆ, ಆ್ಯಪ್ ಗಳ ಮೂಲಕ ಜನ ಧನ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ದೀಪಕ್ ರಾವ್ ಕುಟುಂಬಕ್ಕೆ ಹರಿದುಬಂತು 17,43,859 ರೂ.!

    ಕಳೆದ ಮೂರು ದಿನಗಳ ಹಿಂದೆ ದೀಪಕ್ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದು ಬಹಳ ಪರಿಣಾಮಕಾರಿಯಾಗಿದೆ. ಈವರೆಗೆ ದೀಪಕ್ ತಾಯಿ ಪ್ರೇಮ ಅಕೌಂಟ್ ಗೆ ಬಿದ್ದಿರುವುದು 32 ಲಕ್ಷ ರುಪಾಯಿಗಳು. ಶುಕ್ರವಾರ ರಾತ್ರಿಯಷ್ಟೊತ್ತಿಗೆ 17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಶನಿವಾರ ರಾತ್ರಿಯವರೆಗೆ 32 ಲಕ್ಷ ರೂಪಾಯಿ ಸಂಗ್ರಹವಾಗಿದೆ.

    ಘಟನೆ ಆಗುವ ಮೊದಲು ಎರಡೂವರೆ ಸಾವಿರ ರೂಪಾಯಿ ಪ್ರೇಮ ಅವರ ಖಾತೆಯಲ್ಲಿದ್ದ ಮೊತ್ತ. ಇದರ ಜೊತೆಗೆ ರಾಜ್ಯ ಸರ್ಕಾರ 5 ಲಕ್ಷ,ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 5 ಲಕ್ಷರುಪಾಯಿ ಕುಟುಂಬಕ್ಕೆ ಹಸ್ತಾಂತರವಾಗಿದೆ. ಚೆಕ್ಕನ್ನು ಇನ್ನೂ ಅಕೌಂಟಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿ ಬಿಜೆಪಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಒಟ್ಟು 52 ಲಕ್ಷ ರೂಪಾಯಿಯ ಆರ್ಥಿಕ ಸ್ಥೈರ್ಯ , ಧೈರ್ಯ ನೊಂದ ಕುಟುಂಬಕ್ಕೆ ಸಿಕ್ಕಿದೆ. ದೀಪಕ್‍ನ ನೂಂದ ಕುಟುಂಬಕ್ಕೆ ಎಲ್ಲಾ ಧರ್ಮದವರು ಸಹಾಯ ಹಸ್ತ ಚಾಚಿದ್ದಾರೆ. ಇಂದಿನವರೆಗೂ ಸಂದಾಯದ ಹಣ ಒಂದೂ ಕೋಟಿರೂಪಾಯಿಗೆ ತಲುಪಬಹುದು. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ

    ಪ್ರೇಮ
    ಸಿಂಡಿಕೇಟ್ ಬ್ಯಾಂಕ್ ಕಾಟಿಪಳ್ಳ- ಕೈಕಂಬ ಶಾಖೆ
    ದ.ಕ ಜಿಲೆ
    ಖಾತೆ ಸಂಖ್ಯೆ
    01672030000810

    ಕ್ಕೆ ಸಹಾಯಹಸ್ತ ನೀಡಬಹುದು. ಮನೆಯ ಸಾಲ, ಮೂಗ- ಕಿವುಡ ಸಹೋದರನ ಆರೋಗ್ಯದ ವೆಚ್ಚ, ತಾಯಿಯ ಜೀವನೋಪಾಯಕ್ಕೆ, ಈ ಮೊತ್ತ ವ್ಯಯಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    https://www.youtube.com/watch?v=h2ySxt7VrtE

    https://www.youtube.com/watch?v=0iJpHrCbDbc