Tag: ಧನ್ಯಾ ರಾಮ್‍ಕುಮಾರ್

  • ಚೌಕಿದಾರ್ ಸಿನಿಮಾದ `ಓ ಮೈ ಬ್ರೋ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ಚೌಕಿದಾರ್ ಸಿನಿಮಾದ `ಓ ಮೈ ಬ್ರೋ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ನಿರ್ದೇಶಕ ಚಂದ್ರಶೇಖರ್ ಸಾರಥ್ಯದ ಚೌಕಿದಾರ್ (Chowkidar) ಸಿನಿಮಾ ಈಗಾಗಲೇ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಹಾಡುಗಳು ಈಗಾಗಲೇ ಹಿಟ್ ಲೀಸ್ಟ್ ಸೇರಿವೆ. ಇತ್ತೀಚಿಗೆ ಬಿಡುಗಡೆಯಾಗಿದ್ದ `ಓ ಮೈ ಬ್ರೋ’ ಸಾಂಗ್‌ಗೆ (OH My Bro Song) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಎಂಆರ್‌ಟಿ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದ ಈ ಹಾಡು ಈಗ ಒಂದು ಮಿಲಿಯನ್ ಜನರನ್ನು ತಲುಪಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿದ್ದ `ಓ ಮೈ ಬ್ರೋ’ ಸಾಂಗ್ ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಇದನ್ನೂ ಓದಿ: ಕನ್ನಡದಲ್ಲಿ ಹೊಸ ಮೆಗಾ ಸೀರಿಯಲ್ – ಮಂಗಳವಾರ ʻಮಾಂಗಲ್ಯʼವಾರ

    ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ `ಓ ಮೈ ಬ್ರೋ’ ಗೀತೆಗೆ ಖ್ಯಾತ ಗಾಯಕ ಕೈಲಾಸ್ ಖೇರ್ ಧ್ವನಿಯಾಗಿದ್ದಾರೆ. ಸಚಿನ್ ಬಸ್ರೂರ್ ಮ್ಯೂಸಿಕ್ ಒಳಗೊಂಡಿರುವ ಈ ಹಾಡಿಗೆ ನಾಯಕ ಪೃಥ್ವಿ ಅಂಬರ್ (Pruthvi Ambar) ಹಾಗೂ ಹಿರಿಯ ನಟ ಸಾಯಿಕುಮಾರ್ ಬಿಂದಾಸ್ ಆಗಿ ಕುಣಿದಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಟಿ ಸಾಯಿ ಧನ್ಸಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

    ಕಲ್ಲಹಳ್ಳಿ ಚಂದ್ರಶೇಖರ್ `ಚೌಕಿದಾರ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಧನ್ಯಾ ರಾಮ್‌ಕುಮಾರ್ (Dhanya Ramkumar) ನಾಯಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಚೌಕಿದಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

    ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ಮುರುಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಜ್ಞಾನೇಶ್ ಮಾತಾಡ್ ಸಂಕಲನ, ಜೈ ಸುಬ್ರಹ್ಮಣ್ಯ ಸಾಹಸ ದೃಶ್ಯಗಳು ಚಿತ್ರಕ್ಕಿದೆ. `ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಇದುವರೆಗೆ ಲವರ್ ಬಾಯ್ ಆಗಿದ್ದ ಪೃಥ್ವಿ, ಈ ಚಿತ್ರದಲ್ಲಿ ಬೇರೆಯದ್ದೇ ಅವತಾರ ತಾಳಿದ್ದಾರೆ.

  • ತಲೈವಾ ಭೇಟಿಯಾದ ಧನ್ಯಾ ರಾಮ್‌ಕುಮಾರ್.. ಯಾಕೆ ಗೊತ್ತೇನು ?

    ತಲೈವಾ ಭೇಟಿಯಾದ ಧನ್ಯಾ ರಾಮ್‌ಕುಮಾರ್.. ಯಾಕೆ ಗೊತ್ತೇನು ?

    ಡಾ.ರಾಜ್‌ಕುಮಾರ್ ಹಾಗೂ ತಲೈವಾ ರಜನಿಕಾಂತ್ (Rajinikanth) ಅವರ ನಡುವೆ ಗಾಢವಾದ ಗೆಳೆತನವಿತ್ತು. ರಜನಿಕಾಂತ್ ಅವರಿಗೆ ಈಗಲೂ ರಾಜ್‌ಕುಮಾರ್ ಕುಟುಂಬದ ಜೊತೆಗಿನ ನಂಟು, ಕುಟುಂಬದ ಮೇಲಿನ ಪ್ರೀತಿ, ಗೌರವ ಚೆನ್ನಾಗಿಯೇ ಇದೆ. ಇದೀಗ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ (Dhanya Ramkumar) ತಾಯಿ ಪೂರ್ಣಿಮಾ ಅವರೊಂದಿಗೆ ರಜನಿಕಾಂತ್‌ರನ್ನ ಭೇಟಿಯಾಗಿದ್ದಾರೆ. ಈ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಧನ್ಯಾ ಶೇರ್ ಮಾಡಿದ್ದಾರೆ.

    ಡಾ.ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಕುರಿತು ರಜನಿಕಾಂತ್ ಅವರಿಗೆ ಪರಿಚಯ ಹಿಂದಿನಿಂದಲೂ ಇರುತ್ತೆ. ಆದರೆ ಧನ್ಯ ಈಗಿನ ಜನರೇಶನ್ ಆಗಿರೋದ್ರಿಂದ ಕಾಂಟ್ಯಾಕ್ಟ್ ಕಡಿಮೆ ಇರಬಹುದು. ಆದರೀಗ ದಿಢೀರ್ ಎಂದು ರಜನಿಕಾಂತ್ ಜೊತೆ ಧನ್ಯಾ ಪೋಸ್ಟ್ ಮಾಡಿರುವ ಫೋಟೋವನ್ನ ಥಟ್ ಅಂತ ನೋಡಿದ್ರೆ ಜೊತೆಯಲ್ಲಿ ಸಿನಿಮಾ ಮಾಡ್ತಿದ್ದಾರೆ ಅನ್ನೋ ಅನುಮಾನ ಬರುತ್ತೆ. ಆದ್ರೆ ಇದು ಚಿತ್ರಕ್ಕಾಗಿ ಆಗಿರುವ ಭೇಟಿಯಲ್ಲ. ಜಸ್ಟ್ ಕ್ಯಾಶುವಲ್ ಭೇಟಿ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಅಮ್ಮನ ಜೊತೆ ಧನ್ಯಾ ಮೈಸೂರಿಗೆ ಹೋಗಿದ್ದಾರೆ ಅಲ್ಲಿ ರಜನಿಕಾಂತ್ ಅವರ `ಜೈಲರ್-2′ ಚಿತ್ರೀಕರಣ ನಡೆಯುತ್ತಿರುವುದು ಇವರಿಗೆ ತಿಳಿದಿತ್ತು. ಬಳಿಕ ಭೇಟಿಯಾಗಿ ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಇದನ್ನೂ ಓದಿ: Ahmedabad Plane Crash | ಬ್ಲ್ಯಾಕ್‌ ಬಾಕ್ಸ್ ಡೌನ್‌ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ

    ಮೈಸೂರಲ್ಲಿ ಜೈಲರ್-2 ಚಿತ್ರೀಕರಣ ನಡೆಯುತ್ತಿತ್ತು. ಐದಾರು ದಿನ ಚಿತ್ರೀಕರಣವಾಗಿದೆ. ಈ ವೇಳೆ ರಜನಿಕಾಂತ್ ಮೈಸೂರಿನ ಹೋಟೇಲ್‌ನಲ್ಲೇ ತಂಗಿದ್ದಾರೆ. ಈ ವೇಳೆ ಶೂಟಿಂಗ್ ಸ್ಪಾಟ್‌ಗೆ ತೆರಳಿದ್ದ ಧನ್ಯ ಹಾಗೂ ಪೂರ್ಣಿಮಾ ರಾಮ್‌ಕುಮಾರ್ ರಜನಿಕಾಂತ್‌ರನ್ನ ಭೇಟಿಯಾಗಿದ್ದಾರೆ. ಆ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

  • ರಗಡ್ ಆದ ಪೃಥ್ವಿ ಅಂಬರ್- ‌’ಚೌಕಿದಾರ್’ ಮಾಸ್ ಟೀಸರ್ ಔಟ್

    ರಗಡ್ ಆದ ಪೃಥ್ವಿ ಅಂಬರ್- ‌’ಚೌಕಿದಾರ್’ ಮಾಸ್ ಟೀಸರ್ ಔಟ್

    ಕ್ಲಾಸ್ ಸಿನಿಮಾಗಳ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ಅಂಬರ್ (Pruthvi Ambaar) ಮೊದಲ ಬಾರಿಗೆ ರಗಡ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಸ್ ಹಿಡಿಯುತ್ತಿದ್ದ ಪೃಥ್ವಿ ಕೈಗೆ ಲಾಂಗ್ ಕೊಟ್ಟು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರಕ್ತಹರಿಸಿದ್ದಾರೆ. ಇದೀಗ ‘ಚೌಕಿದಾರ್’ (Chowkidhar) ಸಿನಿಮಾದ ಟೀಸರ್ ಅನಾವರಣಗೊಂಡಿದೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪೃಥ್ವಿ ಪ್ರತ್ಯಕ್ಷರಾಗಿದ್ದಾರೆ. ರಕ್ತಸಿಕ್ತ ಅವತಾರವೆತ್ತಿರುವ ಅವರ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದೆ.‌ ಇದನ್ನೂ ಓದಿ:ಇಂದು ಕೋರ್ಟ್‌ಗೆ ಹಾಜರಾಗಲಿದ್ದಾರೆ ರಮ್ಯಾ

    ಟೀಸರ್ ನಲ್ಲಿ ಎಲ್ಲಾ ಪಾತ್ರಗಳನ್ನು ತೋರಿಸಿರುವ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ ನಲ್ಲಿ ಸುಧಾರಾಣಿ‌ ಖದರ್ ತೋರಿಸಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪೃಥ್ವಿ ತಂದೆ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಧರ್ಮ, ಹಿರಿಯ ನಟಿ ಶ್ವೇತಾ ತಾರಾ ಬಳಗದಲ್ಲಿದ್ದಾರೆ.

    ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯಾ ರಾಮ್‌ಕುಮಾರ್ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಟೀಸರ್‌ನಲ್ಲಿ ಗಮನಸೆಳೆಯುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.

    ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ರವಿ ವರ್ಮಾ ಸಾಹಸ ನಿರ್ದೇಶನ ಸಿನಿಮಾಗಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಪೃಥ್ವಿರಾಜ್ ಧಘಾರಿ ಸಹ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಮೇ ತಿಂಗಳಲ್ಲಿ ‘ಚೌಕಿದಾರ್’ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಟೀಸರ್ ನೋಡುತ್ತಿದ್ದರೇ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವುದೋ ಹೊಸ ಕಥೆಯನ್ನು ಹರವಿಡಲು ಹೊರಟಿರುವುದು ಗೊತ್ತಾಗುತ್ತಿದೆ.

  • ಚಿಕಿತ್ಸೆಗಾಗಿ ಅಮೆರಿಕಗೆ ಹೊರಟಿರುವ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಚಿಕಿತ್ಸೆಗಾಗಿ ಅಮೆರಿಕಗೆ ಹೊರಟಿರುವ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ

    ಟ ಶಿವರಾಜ್‌ಕುಮಾರ್ (Shivarajkumar) ಇಂದು (ಡಿ.18) ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿದ್ದಾರೆ. ಈ ಹಿನ್ನೆಲೆ ಪೂರ್ಣಿಮಾ ರಾಮ್‌ಕುಮಾರ್ ಕುಟುಂಬವು ಸಹೋದರ ಶಿವಣ್ಣನ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಯನತಾರಾ ಐಟಂ ಡ್ಯಾನ್ಸ್?

    ಇದೇ ಡಿ.24ರಂದು ಶಿವಣ್ಣಗೆ ಅಮೆರಿಕದಲ್ಲಿ ಸರ್ಜರಿ ನಡೆಯಲಿದೆ. ಹಾಗಾಗಿ ಇಂದು ರಾತ್ರಿ ಪತ್ನಿ ಮತ್ತು ಮಗಳೊಂದಿಗೆ ಯುಎಸ್‌ಗೆ ತೆರಳಲಿದ್ದಾರೆ. ಈ ಹಿನ್ನೆಲೆ ಮಕ್ಕಳಾದ ಧನ್ಯಾ, ಧಿರೇನ್ ಜೊತೆ ಸಹೋದರಿ ಪೂರ್ಣಿಮಾ (Poornima Ramkumar) ಬೆಂಗಳೂರಿನ ನಾಗವಾರದಲ್ಲಿರುವ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಶಿವಣ್ಣನ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ, ನೆಟ್ಟನ ನಟನನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ.

    ಇನ್ನೂ ಈಗಾಗಲೇ ಶಿವಣ್ಣ ಮನೆಗೆ ಸುದೀಪ್, ಬಿ.ಸಿ ಪಾಟೀಲ್, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ ಭೇಟಿಯಾಗಿದ್ದಾರೆ. ಶಿವಣ್ಣರನ್ನು ಸುದೀಪ್ ತಬ್ಬಿಕೊಂಡು ಸರ್ಜರಿ ಮುಗಿಸಿ ಆರಾಮ ಆಗಿ ಬನ್ನಿ ಎಂದು ಧೈರ್ಯ ತುಂಬಿದ್ದಾರೆ.

  • ಕ್ವೀನ್ಸ್ ಪ್ರೀಮಿಯರ್ ಲೀಗ್ ಮುಡಿಗೇರಿಸಿಕೊಂಡ ಕೋಲಾರ ಕ್ವೀನ್ಸ್ ಟೀಂ

    ಕ್ವೀನ್ಸ್ ಪ್ರೀಮಿಯರ್ ಲೀಗ್ ಮುಡಿಗೇರಿಸಿಕೊಂಡ ಕೋಲಾರ ಕ್ವೀನ್ಸ್ ಟೀಂ

    ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆ ಮೊದಲ ಬಾರಿಗೆ ಆಯೋಜಿಸಿದ್ದ ಕ್ವೀನ್ಸ್ ಪ್ರೀಮಿಯರ್ ಲೀಗ್ (Queens Premiere League) ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದೆ. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿ ನಡೆಯಿತು.‌ ನಟಿ ಧನ್ಯಾ ರಾಮ್‌ಕುಮಾರ್ ನಾಯಕತ್ವದ ಕೋಲಾರ ಕ್ವೀನ್ಸ್ (Kolar Queens) ಟೀಮ್ QPL ಕಪ್ ನ್ನು ಮುಡಿಗೇರಿಸಿಕೊಂಡಿತು. ‘ಕ್ವೀನ್ಸ್ ಪ್ರೀಮಿಯರ್ ಲೀಗ್’ ನಲ್ಲಿ ಇಡೀ ತಂಡ ಕುಣಿದು ಕುಪ್ಪಳಿಸಿದೆ. ಇದನ್ನೂ ಓದಿ:ಜೈಲಿನಲ್ಲಿ ದರ್ಶನ್ ಸರ್ ನರಕ ಅನುಭವಿಸ್ತಿದ್ದಾರೆ: ಜೈಲಿನಲ್ಲಿದ್ಧ ಖೈದಿ ಸಿದ್ಧಾರೂಢ

    ಕೋಲಾರ ತಂಡವು 5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 88 ರನ್ ಗಳಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡವು ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 53 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಕೋಲಾರ ಕ್ಲೀನ್ಸ್ ತಂಡವು ಅಕರ್ಷಕ ಟ್ರೋಫಿಯೊಂದಿಗೆ 6 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್ ಬೆಂಗಳೂರು ಕ್ಲೀನ್ಸ್ ತಂಡವು 3 ಲಕ್ಷ ಬಹುಮಾನ ಪಡೆಯಿತು.

    ಕೋಲಾರ ಕ್ವೀನ್ಸ್ ತಂಡದ ಆಟಗಾರ್ತಿ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರೆ, ಬೆಂಗಳೂರು ಕ್ವೀನ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಬೆಳಗಾವಿ ಕ್ವೀನ್ಸ್ ನ ಕವಿತಾ ಗೌಡ ಅತ್ಯುತ್ತಮ ಬ್ಯಾಟ್ಸ್ ಮೆನ್ ಸ್ಥಾನ ಪಡೆದರೆ ಬೆಂಗಳೂರು ಕ್ವೀನ್ಸ್ ನ ಅನುಪಮಾ ಗೌಡ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಸರಣಿ ಆಟಗಾರ ಪ್ರಶಸ್ತಿಯನ್ನು ಕೋಲಾರ ಟೀಂನ ಹೇಮಾ ತಿಮ್ಮಯ್ಯ ಪಡೆದುಕೊಂಡರೆ, ಗ್ರೀಷ್ಮಾ ಗೌಡ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.

    ಈ ಟೂರ್ನಿಯನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ಬೇರೆ ಬೇರೆ ರಾಜ್ಯಗಳ ತಂಡಗಳನ್ನೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಐಪಿಎಲ್ ಮಟ್ಟಕ್ಕೆ ಬೆಳೆಸುವುದು ನಮ್ಮ ಗುರಿ ಎಂದು ಸಂಘಟಕರಾದ ಮಹೇಶ್ ಗೌಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮೋದ್ ಶೆಟ್ಟಿ, ಭವ್ಯಾ ಗೌಡ, ಪ್ರೇಮ್ ಮಾಲೂರ್, ಸ್ವಸ್ತಿಕ್ ಆರ್ಯಾ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ, ಸಚಿನ್ ಮಹಾದೇವ,ರೂಪಿಕಾ ಉಪಸ್ಥಿತರಿದ್ದರು.

    ಟೂರ್ನಿಯಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ನಿರೂಪಕಿಯರು, ರೂಪದರ್ಶಿಯರು ಭಾಗವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಿದವು. ಕ್ವೀನ್ ಪ್ರೀಮಿಯರ್ ಲೀಗ್ ನಿಂದ ಸಂಗ್ರವಾದ ಹಣವನ್ನು ರಂಗಸೌರಭ ನೀಡಲಾಗುತ್ತದೆ.

  • ಪ್ಯಾನ್ ಇಂಡಿಯಾ ಸಿನಿಮಾಗೆ ಧನ್ಯಾ ರಾಮ್‌ಕುಮಾರ್ ನಾಯಕಿ

    ಪ್ಯಾನ್ ಇಂಡಿಯಾ ಸಿನಿಮಾಗೆ ಧನ್ಯಾ ರಾಮ್‌ಕುಮಾರ್ ನಾಯಕಿ

    ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಕುಡಿ ಧನ್ಯಾ ರಾಮ್ ಕುಮಾರ್ (Dhanya Ramkumar) ಪೃಥ್ವಿ ಅಂಬಾರ್‌ಗೆ (Pruthvi Ambaar) ಜೋಡಿಯಾಗಿ ನಟಿಸುತ್ತಿದ್ದಾರೆ.

    ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ‘ಚೌಕಿದಾರ್’ (Chowkidar) ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಿತರಾಗಿದ್ದ ಧನ್ಯಾ ಇತ್ತೀಚೆಗಷ್ಟೇ ‘ದ ಜಡ್ಜಮೆಂಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ‘ಕಾಲಪತ್ತರ್’ ರಿಲೀಸ್‌ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ‘ಚೌಕಿದಾರ್’ ಬಳಗ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಕಿರುತೆರೆಯಲ್ಲಿ ಶುರುವಾಗಲಿದೆ ಪಾರ್ವತಿ ಜಗನ್ಮಾತೆಯಾದ ಕಥೆ ‘ಶ್ರೀ ದೇವಿ ಮಹಾತ್ಮೆ’

    ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್‌ಟೈನರ್.

    ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ 3ರಂದು ಬಂಡಿ ಮಹಾಕಾಳಿ ದೇಗುಲದಲ್ಲಿ ‘ಚೌಕಿದಾರ್’ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

  • ಅಣ್ಣಾವ್ರ ಹಾಡಿಗೆ ಧನ್ಯಾ ಜೊತೆ ಕಿಶನ್ ಡ್ಯುಯೇಟ್

    ಅಣ್ಣಾವ್ರ ಹಾಡಿಗೆ ಧನ್ಯಾ ಜೊತೆ ಕಿಶನ್ ಡ್ಯುಯೇಟ್

    ಸ್ಯಾಂಡಲ್‌ವುಡ್ ನಟಿ ಧನ್ಯಾ ರಾಮ್‌ಕುಮಾರ್ (Dhanya Ramkumar) ಜೊತೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಕಿಶನ್ (Kishen Bilagali) ಡ್ಯುಯೇಟ್ ಹಾಡಿದ್ದಾರೆ. ನಿನ್ನದೇ ನೆನಪು ದಿನವೂ ಮನದಲ್ಲಿ ಎಂದು ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಡಾ.ರಾಜ್‌ಕುಮಾರ್ (Rajkumar) ಹುಟ್ಟುಹಬ್ಬದಂದು (Birthday) ಅವರ ಮೊಮ್ಮಗಳು ಧನ್ಯಾ ಡ್ಯಾನ್ಸ್ ಮಾಡಿದ್ದಾರೆ. ರಾಜ ನನ್ನ ರಾಜ ಚಿತ್ರದ ಅಣ್ಣಾವ್ರು ನಟಿಸಿರುವ ಹಾಡಿಗೆ ಮಸ್ತ್ ಆಗಿ ಕಿಶನ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ತಾತನಿಗೆ ವಿಶೇಷವಾಗಿ ಟ್ರಿಬ್ಯೂಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ನೇಹಾ ಹಿರೇಮಠ ಮನೆಗೆ ಭೇಟಿ- ಪೋಷಕರಿಗೆ ಹರ್ಷಿಕಾ ದಂಪತಿ ಸಾಂತ್ವನ

     

    View this post on Instagram

     

    A post shared by Kishen Bilagali (@kishenbilagali)

    ರೆಟ್ರೋ ಹಾಡಿಗೆ ಸ್ಟೈಲೀಶ್ ಆಗಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಎಂದು ಡಾ.ರಾಜ್‌ಕುಮಾರ್ ಸರ್’ ಎಂದು ಅಡಿಬರಹ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಡಾ.ರಾಜ್‌ಕುಮಾರ್ ಮತ್ತು ಆರತಿ ನಟನೆಯ ರಾಜ ನನ್ನ ರಾಜ ಸಿನಿಮಾ 1976ರಲ್ಲಿ ತೆರೆಕಂಡಿತ್ತು. 25 ವಾರಗಳ ಪ್ರದರ್ಶನ ಕಂಡು ‘ರಾಜ ನನ್ನ ರಾಜ’ ಸಿನಿಮಾ ದಾಖಲೆ ಬರೆದಿತ್ತು.

  • ಆರೋಗ್ಯದಲ್ಲಿ ಚೇತರಿಕೆ, ಸದ್ಯದಲ್ಲೇ ಶ್ರೀಮುರಳಿ ಶೂಟಿಂಗ್‌ಗೆ ಹಾಜರ್

    ಆರೋಗ್ಯದಲ್ಲಿ ಚೇತರಿಕೆ, ಸದ್ಯದಲ್ಲೇ ಶ್ರೀಮುರಳಿ ಶೂಟಿಂಗ್‌ಗೆ ಹಾಜರ್

    ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಅವರು ಇತ್ತೀಚಿಗೆ ಧನ್ಯಾ ರಾಮ್‌ಕುಮಾರ್ (Dhanya Ramkumar) ಅವರ ಹೊಸ ಚಿತ್ರಕ್ಕೆ ಸಾಥ್ ನೀಡುವ ಮೂಲಕ ಸುದ್ದಿಯಲ್ಲಿದ್ದರು. ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹಾಗೆಯೇ ಫ್ಯಾನ್ಸ್‌ಗೆ ನಟ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಈ ವರ್ಷ ಜನವರಿಯಲ್ಲಿ ನಟ ಶ್ರೀಮುರಳಿ ಅವರಿಗೆ ‘ಬಘೀರ’ (Bhageera Film) ಸಿನಿಮಾದ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟಾಗಿತ್ತು. ರಾಕ್‌ಲೈನ್ ಸ್ಟುಡಿಯೋದಲ್ಲಿ ಸಿನಿಮಾಗಾಗಿ ಸ್ಟಂಟ್ಸ್ ಮಾಡುವ ವೇಳೆ ಶ್ರೀಮುರಳಿ ಅವರಿಗೆ ಗಾಯಗಳಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಇತ್ತೀಚಿಗೆ ಕಾಶಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಎಲ್ಲಾ ನಿನಗಾಗಿ’ (Ella Ninagagi) ಚಿತ್ರದ ಟೈಟಲ್ ರಿವೀಲ್ ಮಾಡಿಕೊಡುವ ಮೂಲಕ ಧನ್ಯಾ ರಾಮ್‌ಕುಮಾರ್ ಟೀಂ ಶುಭಕೋರಿದ್ದರು. ಈ ವೇಳೆ ಶ್ರೀಮುರಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಬಹಳ ಕಷ್ಟವಾದ ಸ್ಟಂಟ್ಸ್‌ಗಳನೆಲ್ಲಾ ಆರಾಮಾಗಿ ಮಾಡಿದ್ದೇನೆ. ಆದರೆ ಈ ಸಣ್ಣ ಸ್ಟಂಟ್ ಮಾಡಲು ಹೋಗಿ 3 ತಿಂಗಳು ರೆಸ್ಟ್ ತೆಗೆದುಕೊಳ್ಳುವಂತಾಯ್ತು. ಈಗ ಚೇತರಿಸಿಕೊಂಡಿದ್ದೇನೆ. ಮೇ ಮೊದಲ ವಾರದಲ್ಲಿ ಮತ್ತೆ ಬಘೀರ ಸಿನಿಮಾದ ಚಿತ್ರೀಕರಣಕ್ಕೆ ಹೋಗಲಿದ್ದೇನೆ ಎಂದು ಸಿಹಿಸುದ್ದಿ ನೀಡಿದ್ದಾರೆ.

    ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಬಘೀರ’ ಚಿತ್ರದಲ್ಲಿ ಶ್ರೀಮುರಳಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ರುಕ್ಮಿಣಿ ವಸಂತ್ (Rukmini Vasanth) ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಜಿಎಫ್ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಬರೆದ ಕಥೆಗೆ ಡಾ.ಸೂರಿ ನಿರ್ದೇಶನ ಮಾಡ್ತಿದ್ದಾರೆ.