Tag: ಧನುಷ್

  • ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಖ್ಯಾತ ನಟ ನಟ ಧನುಷ್ (Dhanush) ಮತ್ತು ನಟಿ ಮೃಣಾಲ್ ಠಾಕೂರ್ (Mrunal Thakur) ನಡುವೆ ಲವ್ ಇದೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗೆ ಖುದ್ದು ಮೃಣಾಲ್‌ ತೆರೆ ಎಳೆದಿದ್ದಾರೆ.

    ಕೆಲ ದಿನಗಳಿಂದ ಮೃಣಾಲ್‌ ಜೊತೆಗೆ ಧನುಷ್‌ ಡೇಟಿಂಗ್‌ (Dating Rumours) ನಡೆಸುತ್ತಿದ್ದಾರೆ ಅನ್ನೋ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು. ಆದ್ರೆ ಈ ಬಗ್ಗೆ ಧನುಷ್‌ ಆಗಲಿ, ನಟಿ ಆಗಲಿ ಯಾವುದೇ ರಿಯಾಕ್ಷನ್‌ ಕೊಟ್ಟಿರಲಿಲ್ಲ. ಆದರೀಗ ಮೃಣಾಲ್ ಠಾಕೂರ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

    ನಾನು ಮತ್ತು ಧನುಷ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ ಅನ್ನೋದು ಗಮನಕ್ಕೆ ಬಂದಿದೆ. ಮೊದಲು ನೋಡಿದಾಗ ತಮಾಷೆಗೆ ಅಂದುಕೊಂಡಿದ್ದೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್‌ಗೆ ಧನುಷ್ ಹಾಜರಾಗಿದ್ದರು. ಹಾಗಂದ ಮಾತ್ರಕ್ಕೆ ಯಾರೂ ಅದನ್ನ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಂದಹಾಗೆ, ಧನುಷ್ ಅವರನ್ನು ಅಜಯ್ ದೇವಗನ್ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಡೇಟಿಂಗ್‌ ವದಂತಿ ಹಬ್ಬಿದ್ದೇಕೆ?
    ಈಚೆಗೆ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬವಿತ್ತು. ಅಲ್ಲಿಗೆ ಧನುಷ್ ಆಗಮಿಸಿದ್ದರು. ಅದಕ್ಕೂ ಮುನ್ನ ಅಜಯ್ ದೇವ್‌ಗನ್ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋಗೂ ಧನುಷ್ ಆಗಮಿಸಿದ್ದರು. ಈ ವೇಳೆ ಪ್ರೀಮಿಯರ್ ರೆಡ್ ಕಾರ್ಪೆಟ್ ಬಳಿ ಧನುಷ್ ಬಂದಾಗ, ಸ್ವತಃ ಮೃಣಾಲ್ ಹೋಗಿ ಕರೆದುಕೊಂಡು ಬಂದಿದ್ದರು. ಆ ಕ್ಷಣದ ಅವರಿಬ್ಬರ ನಡುವಿನ ಆಪ್ತತೆ ಹಲವರ ಕಣ್ಣು ಕುಕ್ಕಿತ್ತು. ಹೀಗಾಗಿ ಇಬ್ಬರ ನಡುವೆ ಸಂಥಿಗ್‌, ಸಂಥಿಕ್‌ ನಡೀತಿದೆ ಎಂದೇ ಹೇಳಲಾಗಿತ್ತು.

    ಐಶ್ವರ್ಯಾರಿಂದ ದೂರವಾಗಿರುವ ಧನುಷ್
    ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ ಪ್ರೀತಿಸಿ ಮದುವೆ ಆಗಿದ್ದರು. ಆದರೆ 2022ರಲ್ಲಿ ಇವರು ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ 2024ರ ನವೆಂಬರ್‌ನಲ್ಲಿ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿತ್ತು. ಇದನ್ನೂ ಓದಿ: ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ

  • ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?

    ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?

    ಕಾಲಿವುಡ್ ನಟ ಧನುಷ್ (Dhanush) ಹಾಗೂ ಮೃಣಾಲ್ ಠಾಕೂರ್ (Mrunal Thakur) ಡೇಟಿಂಗ್ ವಿಚಾರ ಜಗಜ್ಜಾಹೀರಾಗುತ್ತಿದೆ. ಇಬ್ಬರೂ ಒಟ್ಟೊಟ್ಟಿಗೆ ಇರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಹೀಗೆ ವೈರಲ್ ಆಗ್ತಿರುವ ಇವರು ಮದುವೆ ಕೂಡಾ ಆಗಲಿದ್ದಾರೆ ಅನ್ನೋ ಗಾಳಿ ಸುದ್ದಿ ಸಿನಿದುನಿಯಾದಲ್ಲಿ ಗಿರ್ಕಿ ಹೊಡೆಯುತ್ತಿದೆ. ಮದುವೆ ಅಂತಾದರೆ ಈ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟಿದೆ ಅಂತನ್ನೋ ಚರ್ಚೆಗಳು ಕೂಡಾ ಶುರುವಾಗಿವೆ.

    `ಸೀತಾ ರಾಮಂ’ ಬೆಡಗಿ ಮೃಣಾಲ್ ಠಾಕೂರ್ ಆಗಸ್ಟ್ 1, 1992ರಲ್ಲಿ ಜನಿಸಿದ್ದಾರೆ, ಅಲ್ಲಿಗೆ ಮೃಣಾಲ್‌ಗೆ 33 ವರ್ಷ. ಇನ್ನು ನಟ ಧನುಷ್ ಜುಲೈ 28, 1983ರಲ್ಲಿ ಜನಿಸಿದ್ದಾರೆ, ಅಲ್ಲಿಗೆ ನಟ ಧನುಷ್‌ಗೆ 42 ವರ್ಷ. ನಟ ಧನುಷ್ ಹಾಗೂ ನಟಿ ಮೃಣಾಲ್ ನಡುವೆ 9 ವರ್ಷಗಳ ಅಂತರವಿದೆ. ಈಗಾಗಲೇ ನಟ ಧನುಷ್ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಜೊತೆ ಮದುವೆಯಾಗಿ 18 ವರ್ಷಗಳ ಬಳಿಕ ವಿಚ್ಚೇಧನವನ್ನ ಕೂಡಾ ನೀಡಿದ್ದಾರೆ.

    2022ರಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯ ಜೊತೆ ಸಪರೇಷನ್ ಬಗ್ಗೆ ಘೋಷಣೆ ಮಾಡಿದ್ದರು ನಟ ಧನುಷ್. ನಂತರ 2024ರಲ್ಲಿ ವಿಚ್ಚೇಧನ ಪಡೆದುಕೊಂಡಿದ್ದಾರೆ. ಇದೀಗ ನಟ ಧನುಷ್ ಹಾಗೂ ಮೃಣಾಲ್ ನಡುವೆ ಇಲ್ಲ ಸಲ್ಲದ ಸುದ್ದಿಗಳು ಮುನ್ನೆಲೆಗೆ ಬರುತ್ತಿವೆ. ಸನ್ ಆಫ್ ಸರ್ಧಾರ್-2 ಸಿನಿಮಾದ ಪ್ರೀಮಿಯರ್‌ನಲ್ಲಿ ನಟ ಧನುಷ್ ಭಾಗಿಯಾಗಿದ್ದಾರೆ. ಅಲ್ಲದೇ ಆಗಸ್ಟ್ 1ರಂದು ಮೃಣಾಲ್ ಬರ್ತ್ಡೇ ಪಾರ್ಟಿಯಲ್ಲೂ ಧನುಷ್ ಪ್ರತ್ಯಕ್ಷರಾಗಿದ್ದಾರೆ ಎನ್ನಲಾಗ್ತಿದೆ. ಈ ಜೋಡಿ ಒಂದಾದರೆ ಚೆಂದ ಎಂದು ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

  • ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಮಿಳು ನಟ ಧನುಶ್ (Dhanush) ಹಾಗೂ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಇದಕ್ಕೆ ಸಾಕ್ಷಿ ಇಬ್ಬರ ನಡುವಿನ ಭಾರೀ ಅನ್ಯೋನ್ಯತೆ.

    ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸದಿದ್ದರೂ ಈ ಮಟ್ಟಿಗೆ ಸ್ನೇಹ ಹೇಗೆ ಉಂಟಾಯಿತು ಎಂದು ಪ್ರಶ್ನೆ ಹುಟ್ಟುಹಾಕಿದೆ. ಮೃಣಾಲ್ ಕೈ ಹಿಡಿದಿರುವ ಧನುಶ್ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಇದು ನಡೆದಿದ್ದು ತೇರೆ ಇಷ್ಕ್ ಮೆ ಚಿತ್ರದ ಶೂಟಿಂಗ್ ರ‍್ಯಾಪ್ ಅಪ್ ಪಾರ್ಟಿಯಲ್ಲಿ ಎಂದು ಹೇಳಲಾಗುತ್ತಿದೆ.

    ಈ ಚಿತ್ರಕ್ಕೂ ಮೃಣಾಲ್‌ಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೃಣಾಲ್ ಈ ಪಾರ್ಟಿಯಲ್ಲಿದ್ದರು ಎನ್ನಲಾಗುವ ಫೋಟೋ ವೈರಲ್‌ ಆಗಿದೆ. ಇಬ್ಬರ ನಡುವಿನ ಆಪ್ತತೆ ನೋಡುಗರಲ್ಲಿ ಪ್ರೇಮ ಸಂಬಂಧವನ್ನೇ ಕಲ್ಪಿಸುತ್ತಿದೆ.

    ಈ ಹಿಂದೆ ಮೃಣಾಲ್ ಅಭಿನಯದ ಸನ್ ಆಫ್ ಸರ್ದಾರ್ 2 ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಮುಂಬೈಗೆ ಧನುಶ್‌ ಬಂದಿದ್ದರು. ಈ ಎರಡು ಘಟನೆಗಳು ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: `ಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

    ಇಬ್ಬರ ಮೊದಲ ಭೇಟಿ ಸೀತಾರಾಮಂ ಸಕ್ಸಸ್ ಇವೆಂಟ್‌ನಲ್ಲಿ ನಡೆದಿತ್ತು. ಅಲ್ಲಿಂದ ಸ್ನೇಹ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಧನುಶ್ ಈಗಾಗಲೇ ರಜನಿಕಾಂತ್ ಪುತ್ರಿ ಐಶ್ವರ್ಯರನ್ನು (Aishwarya Rajinikanth) ವಿವಾಹವಾಗಿ ವಿಚ್ಛೇದನವನ್ನು (Divorce) ನೀಡಿದ್ದರು.

    ಇಬ್ಬರು ಪರಸ್ಪರ ಬೇರೆಯಾಗುವು ಬಗ್ಗೆ ಧನುಶ್ 2022ರಲ್ಲೇ ಘೋಷಿಸಿದ್ದರು. ಇದೀಗ ಅಧಿಕೃತ ವಿಚ್ಛೇದನವೂ ಆಗಿದೆ. ವಿಚ್ಛೇದನಕ್ಕೆ ಅಸಲಿ ಕಾರಣ ತಿಳಿದುಬಂದಿರಲಿಲ್ಲ. ಇದೀಗ ಮೃಣಾಲ್ ಜೊತೆ ಧನುಶ್ ಇನ್ನಿಲ್ಲದ ಸ್ನೇಹ ಇನ್ನೇನೇನೋ ಗಾಸಿಪ್‌ಗೆ ದಾರಿಮಾಡಿಕೊಟ್ಟಿದೆ.

  • ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ

    ಮಿಳು ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಕುಬೇರ’ (Kubera) ಚಿತ್ರದ ಟೀಸರ್ ರಿಲೀಸ್ ಆಗಿದೆ. ಹಣ ಮತ್ತು ಶ್ರೀಮಂತ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಟೀಸರ್ ಮೂಲಕನೇ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

    ಧನುಷ್ (Dhanush) ಭಿಕ್ಷುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ, ರಶ್ಮಿಕಾ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಗಡ್ಡ ಹರಿದ ಬಟ್ಟೆಯಲ್ಲಿ ಧನುಷ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ದುಡ್ಡಿನ ಸುತ್ತ ಹೆಣೆಯಲಾದ ಕಥೆ ಎಂಬುದನ್ನು ಟೀಸರ್‌ನಲ್ಲಿ ಹಿಂಟ್ ಬಿಟ್ಟು ಕೊಡಲಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ಕುಬೇರ ಟೀಸರ್‌ನಲ್ಲಿ ಒಬ್ಬ ಮನುಷ್ಯನಿಗೆ ಹಣದ ದುರಾಸೆ ಎಷ್ಟಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ದುಡ್ಡೇ ಹೈಲೆಟ್ ಆಗಿದ್ದು, ಟೀಸರ್ ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಕನ್ನಡ ಟೀಸರ್‌ನಲ್ಲಿ ‘ನಂದು ನಂದು ನನ್ನದೇ ಈ ಲೋಕವಯ್ಯ’ ಎಂಬ ಹಾಡಿನ ಸಾಲು ಪ್ರೇಕ್ಷಕರ ಗಮನ ಸೆಳೆದಿದೆ.

    ನಾಗರ್ಜುನ ಅಕ್ಕಿನೇನಿ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ತಯಾರಾಗಿದೆ. ಇದೇ ಜೂನ್ 20ರಂದು ಚಿತ್ರ ರಿಲೀಸ್ ಆಗಲಿದೆ. ಫಿದಾ, ಲವ್ ಸ್ಟೋರಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಶೇಖರ್ ಕಮ್ಮುಲಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನುಷ್ ಹಾಗೂ ರಶ್ಮಿಕಾ ನಟಿಸಿರುವ ಈ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್

    ಎಪಿಜೆ ಅಬ್ದುಲ್ ಕಲಾಂ ಬಯೋಪಿಕ್‌ನಲ್ಲಿ ಧನುಷ್

    ಟ ಧನುಷ್ (Dhanush) ಅವರು ಇತ್ತೀಚೆಗೆ ಇಳಯರಾಜ ಅವರ ಬಯೋಪಿಕ್‌ನಲ್ಲಿ ನಟಿಸುವ ಬಗ್ಗೆ ಅನೌನ್ಸ್ ಆಗಿತ್ತು. ಈ ಬೆನ್ನಲ್ಲೇ ಎಪಿಜೆ ಅಬ್ದುಲ್ ಕಲಾಂ ಜೀವನ ಚರಿತ್ರೆಯಲ್ಲೂ ಧನುಷ್ ನಟಿಸುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದನ್ನೂ ಓದಿ:ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ 2ನೇ ಪ್ರಾಜೆಕ್ಟ್ ಬಗ್ಗೆ ಯಶ್ ತಾಯಿ ಗುಡ್ ನ್ಯೂಸ್

    ಕಾಲಿವುಡ್ ಸ್ಟಾರ್ ಧನುಷ್ ಅವರು ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಪಾತ್ರವನ್ನು ಮಾಡಲಿದ್ದಾರೆ. ಅವರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತರಲು ಪ್ಲ್ಯಾನ್ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರಕ್ಕೆ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಅಂತ ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ‘ಆದಿಪುರುಷ್’ ಡೈರೆಕ್ಟರ್ ಓಂ ರಾವುತ್ ನಿರ್ದೇಶನ ಮಾಡಲಿದ್ದಾರೆ.

     

    View this post on Instagram

     

    A post shared by Dhanush (@dhanushkraja)

    ಈ ಸಿನಿಮಾ ಬಗ್ಗೆ ಧನುಷ್ ರಿಯಾಕ್ಟ್ ಮಾಡಿ, ನಮ್ಮ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತಹ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ತೆರೆಮೇಲೆ ತರಲು ನಾನು ನಿಜವಾಗಿಯೂ ಧನ್ಯ ಮತ್ತು ಅತ್ಯಂತ ವಿನಮ್ರನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ರಶ್ಮಿಕಾ ಮಂದಣ್ಣ ಜೊತೆಗಿನ ಕುಬೇರ, ಇಳಯರಾಜ ಬಯೋಪಿಕ್ ಸೇರಿದಂತೆ ಹಲವು ಸಿನಿಮಾಗಳು ಧನುಷ್ ಕೈಯಲ್ಲಿವೆ.

  • ಧನುಷ್ ನಟನೆಯ ‘ಕುಬೇರ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಧನುಷ್ ನಟನೆಯ ‘ಕುಬೇರ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಕಾಲಿವುಡ್ ನಟ ಧನುಷ್ (Dhanush) ಅಭಿನಯದ ಮೋಸ್ಟ್ ಅವೈಟೆಡ್ ‘ಕುಬೇರ’ (Kubera) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ‘ಪೋಯಿವಾ ಪೋಯಿವಾ ನನ್ಬ’ ಹಾಡು ರಿಲೀಸ್ ಆಗಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದನ್ನೂ ಓದಿ:ಉಡುಪಿ| ಹೊಸ ಮಾರಿಗುಡಿಗೆ ಬಾಲಿವುಡ್‌ ಖ್ಯಾತ ನಟ ಸುನೀಲ್‌ ಶೆಟ್ಟಿ ಭೇಟಿ

     

    View this post on Instagram

     

    A post shared by KuberaaMovie (@kuberaathemovie)

    ‘ಪೋಯಿವಾ ಪೋಯಿವಾ ನನ್ಬ’ ಸಾಹಿತ್ಯದಿಂದ ಶುರುವಾಗುವ ಹಾಡು ಸಖತ್ ಅಟ್ರ್ಯಾಕ್ಟೀವ್ ಆಗಿದೆ. ಈ ಹಾಡಿಗೆ ಸಖತ್ ಆಗಿ ಧನುಷ್ ಕುಣಿದು ಕುಪ್ಪಳಿಸಿದ್ದಾರೆ. ಹಾಡಿನ ಲಿರಿಕ್ಸ್ ಕೂಡ ಕ್ಯಾಚಿ ಆಗಿದೆ. ‘ಪುಷ್ಪ’ ಖ್ಯಾತಿಯ ದೇವಿಶ್ರೀ ಪ್ರಸಾದ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಬಂದ್ರು ಕುಡ್ಲದ ಬೆಡಗಿ- ಸುದೀಪ್‌ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ‘ಕುಬೇರ’ ಸಿನಿಮಾದಲ್ಲಿ ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ನಿಜಕ್ಕೂ ಧನುಷ್ ಭಿಕ್ಷುಕನ ಅಥವಾ ಟೈಟಲ್‌ಗೆ ತಕ್ಕಂತೆ ಕುಬೇರನಾ? ಎಂದು ಚಿತ್ರ ರಿಲೀಸ್ ಆಗುವವರೆಗೂ ಕಾಯಬೇಕಿದೆ. ಧನುಷ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna), ನಾಗಾರ್ಜುನ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ವರ್ಷ ಜೂನ್  20ರಂದು ಸಿನಿಮಾ ರಿಲೀಸ್ ಆಗಲಿದೆ.

  • ‘ಕುಬೇರ’ ಚಿತ್ರದ ಪೋಸ್ಟರ್ ಔಟ್- ಧನುಷ್ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್

    ‘ಕುಬೇರ’ ಚಿತ್ರದ ಪೋಸ್ಟರ್ ಔಟ್- ಧನುಷ್ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್

    ಮಿಳಿನ ನಟ ಧನುಷ್ (Dhanush) ‘ಕುಬೇರ’ (Kubera) ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದೆ. ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಬಗ್ಗೆ ಚಿತ್ರತಂಡ ಬಿಗ್ ಅಪ್‌ಡೇಟ್‌ವೊಂದು ಕೊಟ್ಟಿದೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅಕ್ಕಿನೇನಿ ನಟನೆಯ ‘ಕುಬೇರ’ ಸಿನಿಮಾದ ಮೊದಲ ಹಾಡನ್ನು ಏ.20ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಧನುಷ್ ನಟನೆಯ ಜೊತೆ ಡ್ಯಾನ್ಸ್‌ನಲ್ಲಿಯೂ ಮುಂದು. ಹಾಗಾಗಿ ಅವರು ಸಖತ್ ಮಾಸ್ ಮತ್ತು ಕ್ಲಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಎಂಬುದು ಪೋಸ್ಟರ್ ಲುಕ್‌ನಿಂದ ಸುಳಿವು ಸಿಕ್ಕಿದೆ. ಸಾಂಗ್ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:ಶಿವಕಾರ್ತಿಕೇಯನ್ ಜೊತೆ ಅದೃಷ್ಟ ಪರೀಕ್ಷೆಗಿಳಿದ ಕನ್ನಡತಿ ರುಕ್ಮಿಣಿ ವಸಂತ್‌

    ಈಗಾಗಲೇ ಧನುಷ್ ಭಿಕ್ಷುಕನ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿತ್ತು. ನಿಜಕ್ಕೂ ಸಿನಿಮಾದಲ್ಲಿ ಧನುಷ್ ಭಿಕ್ಷಕನಾ ಅಥವಾ ಚಿತ್ರದ ಟೈಟಲ್ ತಕ್ಕಂತೆ ‘ಕುಬೇರ’ನಾ ಎಂಬುದನ್ನು ಸಿನಿಮಾ ರಿಲೀಸ್ ಆಗುವವರೆಗೂ ಕಾಯಬೇಕಿದೆ.

    ‘ಪುಷ್ಪ 2’ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ‘ಕುಬೇರ’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಜೂನ್ 20ರಂದು ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಸಿಕ್ತು ಬಿಗ್ ನ್ಯೂಸ್

    ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಸಿಕ್ತು ಬಿಗ್ ನ್ಯೂಸ್

    ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹೀರೋಗಳ ಪಾಲಿಗೆ ಅದೃಷ್ಟದ ನಟಿಯಾಗಿದ್ದಾರೆ. ‘ಪುಷ್ಪ 2’, ‘ಛಾವಾ’ (Chhavva) ಸಿನಿಮಾಗಳ ಬಳಿಕ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ನಟಿ ಅಬ್ಬರಿಸಲು ರೆಡಿಯಾಗಿದ್ದಾರೆ. ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ಬಿಗ್‌ ನ್ಯೂಸ್‌ವೊಂದು ಸಿಕ್ಕಿದೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ಐತಿಹಾಸಿಕ ಸಿನಿಮಾ ‘ಛಾವಾ’ ರಿಲೀಸ್ ಆಗಿರೋ ಬೆನ್ನಲ್ಲೇ ಧನುಷ್ (Dhanush) ಮತ್ತು ರಶ್ಮಿಕಾ ನಟನೆಯ ‘ಕುಬೇರ’ (Kubera) ಸಿನಿಮಾದ ರಿಲೀಸ್ ಡೇಟ್ ರಿವೀಲ್ ಆಗಿದೆ. ಇದೇ ಜೂನ್ 20ರಂದು ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

    ಇನ್ನೂ ಈ ಚಿತ್ರದಲ್ಲಿ ಧನುಷ್ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

    ‘ಪುಷ್ಪ 2’ ಚಿತ್ರದ ಬಿಗ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

  • 27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    ಮಿಳು ನಟ ಧನುಷ್ (Dhanush) ಸದಾ ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಲೇ ಇರುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಬಹುಭಾಷೆಗಳಲ್ಲಿ ಕಮಾಲ್ ಮಾಡಿರುವ ಧನುಷ್ ಇದೀಗ ಮತ್ತೊಮ್ಮೆ ಹಾಲಿವುಡ್‌ಗೆ (Hollywood) ಹಾರಲು ಮುಂದಾಗಿದ್ದಾರೆ. 27 ವರ್ಷದ ಹಾಲಿವುಡ್ ಬೆಡಗಿ ಸಿಡ್ನಿ ಸ್ವೀನಿ ಜೊತೆ ನಟ ರೊಮ್ಯಾನ್ಸ್ ಮಾಡಲಿದ್ದಾರೆ.

    ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್, ದಿ ಗ್ರೇ ಮ್ಯಾನ್ ಎಂಬ ಇಂಗ್ಲಿಷ್ ಸಿನಿಮಾಗಳಲ್ಲಿ ನಟ ಅಭಿನಯಿಸಿದ್ದಾರೆ. ಇದೀಗ ‌’ಸ್ಟ್ರೀಟ್‌ ಫೈಟರ್’ (Street Fighter) ಎಂಬ ಹಾಲಿವುಡ್ ಸಿನಿಮಾದಲ್ಲಿ ಧನುಷ್ ನಟಿಸಲು ರೆಡಿಯಾಗಿದ್ದಾರೆ. ಅವರಿಗೆ ಸಿಡ್ನಿ ಸ್ವೀನಿ (Sydney Sweeney) ನಾಯಕಿಯಾಗಲಿದ್ದಾರೆ. ಇಬ್ಬರಿಗೂ ನಟನೆಗೆ ಸ್ಕೋಪ್ ಇರುವಂತಹ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ಇನ್ನೂ ಧನುಷ್ ಕೈಯಲ್ಲಿ ‘ಕುಬೇರ’ ಎಂಬ ಸಿನಿಮಾವಿದೆ. ಇವರೊಂದಿಗೆ ರಶ್ಮಿಕಾ ಮಂದಣ್ಣ (Rashmika Mandanna), ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಇಡ್ಲಿ ಕಡೈ’ ಎಂಬ ಚಿತ್ರವನ್ನು ಧನುಷ್ ನಿರ್ದೇಶನ ಮಾಡಲಿದ್ದಾರೆ. ಇಳಯರಾಜ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

  • ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ಧನುಷ್, ಐಶ್ವರ್ಯಾಗೆ ಡಿವೋರ್ಸ್ ಮಂಜೂರು ಮಾಡಿದ ಕೋರ್ಟ್- 18 ವರ್ಷಗಳ ದಾಂಪತ್ಯ ಅಂತ್ಯ

    ಕಾಲಿವುಡ್ ನಟ ಧನುಷ್ (Dhanush) ಮತ್ತು ಐಶ್ವರ್ಯಾ ರಜನಿಕಾಂತ್‌ಗೆ (Aishwarya Rajanikanth) ಚೆನ್ನೈನ ಕೌಟುಂಬಿಕ ನ್ಯಾಯಾಲಯ ಡಿವೋರ್ಸ್ (Divorce) ಮಂಜೂರು ಮಾಡಿದೆ. ಈ ಮೂಲಕ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

    2004ರ ನ.18ರಂದು ಧನುಷ್ ಮತ್ತು ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ಮನಸ್ತಾಪಗಳಿಂದ 2022ರಲ್ಲಿ ಇಬ್ಬರೂ ದಾಂಪತ್ಯ ಜೀವನ ಅಂತ್ಯಗೊಳಿಸೋದಾಗಿ ಘೋಷಿಸಿದ್ದರು. ಬಳಿಕ ಕಾನೂನಾತ್ಮಕವಾಗಿ ಬೇರೆ ಆಗಲು ಕೋರ್ಟ್ ಮೊರೆ ಹೋಗಿದ್ದರು. ಈ ನ.21ರಂದು ಧನುಷ್ ಮತ್ತು ಐಶ್ವರ್ಯಾ ಕೌಟುಂಬಿಕ ನ್ಯಾಯಾಲಯದ ನ್ಯಾ.ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ, ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಡಿವೋರ್ಸ್ ಕುರಿತು ನಿರ್ಧಾರ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಧನುಷ್, ಐಶ್ವರ್ಯಾಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ಡಿವೋರ್ಸ್ ಮಂಜೂರು ಮಾಡಿದೆ.

    ರಜನಿಕಾಂತ್ ಪುತ್ರಿ ಮತ್ತು ಧನುಷ್ ಒಂದಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್‌ಗೆ ಈ ವಿಚಾರ ಬೇಸರವುಂಟು ಮಾಡಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ಅಂದಹಾಗೆ, 2004ರಲ್ಲಿ ಧನುಷ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರೂ ಮಕ್ಕಳಿದ್ದಾರೆ.