ಟಿಕ್ ಟಾಕ್ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ (Dhanushree) ಅವರು ಸದ್ಯ ಕೇರಳಗೆ ಹಾರಿದ್ದಾರೆ. ಬಾತ್ ಟಬ್‌ನಲ್ಲಿರುವ ಹಾಟ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಅಯ್ಯೋ ದೇವರೇ, ಇಲ್ಲೂ ಮೇಕಪ್ ಅಂತಾ ಧನುಶ್ರೀಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಚೆಲುವೆ ಧನುಶ್ರೀ ಬಿಗ್ ಬಾಸ್ (Bigg Boss Kannada) ಮನೆಗೆ ಹೋಗುವ ಚಾನ್ಸ್ ಗಿಟ್ಟಿಸಿಕೊಂಡಿದ್ರು. ದೊಡ್ಮನೆಗೆ ಕಾಲಿಟ್ಟ 2 ವಾರಕ್ಕೆ ಹೊರಬಂದಿದ್ರು. ಅಷ್ಟೇ ಅಲ್ಲ, ಅತಿಯಾಗಿ ಮೇಕಪ್ ಬಳಸುತ್ತಾರೆ. ರಾತ್ರಿ ಮಲಗುವಾಗ್ಲೂ ಮೇಕಪ್ ಹಾಕ್ತಾರೆ ಅಂತಾ ನಟಿ ಟ್ರೋಲ್ ಆಗಿದ್ರು. ಈಗ ಮತ್ತೆ ವಿಚಾರ ಚಾಲ್ತಿಗೆ ಬಂದಿದೆ. ಇದನ್ನೂ ಓದಿ:ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಿ, ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗ್ಡೆ
ಬಿಗ್ ಬಾಸ್ ಧನುಶ್ರೀ ಅವರು ತಮ್ಮ ಕುಟುಂಬದ ಜೊತೆ ಕೇರಳಗೆ ಹೋಗಿದ್ದಾರೆ. ಅಲ್ಲಿ ಬಾತ್ ಟಬ್‌ನಲ್ಲಿ ಕುಳಿತಿರುವ ಹಾಟ್ ಫೋಟೋವನ್ನ ಧನುಶ್ರೀ ಶೇರ್ ಮಾಡಿದ್ದಾರೆ. ನಟಿಯ ಲುಕ್ ನೋಡಿ, ಈಗಲ್ಲೂ ಮೇಕಪ್ ಹಾಕಿದ್ದೀರಾ.? ಸ್ನಾನ ಮಾಡೋವಾಗ್ಲೂ ಮೇಕಪ್ ಬೇಕಾ.? ಎಂದು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿ ಮಿಂಚಿದ್ರು. ಈ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.















ಭಯಾ ಆಗುತ್ತಿದೆಯಾ.. ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಸಂದರ್ಭದಲ್ಲಿ ಕೊನೆಗೆ ನಿರ್ಮಲಾ ಎಸ್ ಎಂದ ಟೀಮ್‍ಗೆ ಯಾರನ್ನೋ ಮೆಚ್ಚಿಸಲು ಹೋಗಿಬಿಟ್ಟರು. ಇವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಅವರಿಂದ ತಾನು ಈ ಮನೆಯಲ್ಲಿ ಉಳಿಯಬಹುದು ಎಂದು ಹೀಗೆ ಮಾಡಿದ್ದಾರೆ ಅನ್ನಿಸುತ್ತದೆ ಅಂತ ಇಬ್ಬರೂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆ.
ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಾನು ಉಳಿಯಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಯಾರು ಅದನ್ನು ಬಾಯಿಬಿಟ್ಟು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಇವರೆಲ್ಲ ಕೀ ಕೊಟ್ಟ ಗೊಂಬೆಗಳಂತೆ. ಬಿಗ್ ಬಾಸ್ ಹೇಳಿದಂತೆ ಆಟವಾಡುವ ಗೊಂಬೆಗಳು ಮಾತ್ರ ಇವರು ಎನ್ನುವುದು ಅಷ್ಟೆ ಸತ್ಯವಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಸೇಫ್ ಆಗಿ ಉಳಿದು ತಮ್ಮ ಆಟ ಮುಂದುವರಿಸ್ತಾರೆ ಎಂದು ಕಾದುನೋಡಬೇಕಿದೆ.


ಆದರೆ ಬಿಗ್ ಬಾಸ್ ನೀಡಿದ ಟಾಸ್ಕ್ ಅನ್ವಯ ಪ್ರಶಾಂತ್ ಅವರಿಗೆ ಲೈಕ್ ಬರುವುದೆ ಇಲ್ಲ ಎಂದುಕೊಂಡಿದ್ದ ವೇಳೆ ಅವರಿಗೂ ಒಂದು ಲೈಕ್ ಬಂದಿದೆ. ಹೌದು ಧನುಶ್ರೀ ಅವರು ಪ್ರಶಾಂತ್ ಸಂಬರ್ಗಿ ಅವರನ್ನು ಮೆಚ್ಚಿ ಲೈಕ್ ಕೊಟ್ಟಿದ್ದಾರೆ. ಈ ವೇಳೆ ಮಂಜು ಪಾವಗಡ ಬದಲಾಗ್ಬೇಡ ಮಾವ ನೀನು ಎಂದು ಜೋರಾಗಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ನಕ್ಕು ಸಂತೋಷಪಟ್ಟಿದ್ದಾರೆ.
ತನಗೆ ಲೈಕ್ ನೀಡಿದ ಧನುಶ್ರೀಯನ್ನು ಪ್ರಶಾಂತ್ ಸಂಬರ್ಗಿ ಎತ್ತಿಕೊಂಡು ಸಂತೋಷಪಟ್ಟಿದ್ದಾರೆ. ಈ ಮನೆಯಲ್ಲಿ ಕೃತಜ್ಞತೆಗೆ ಅವಕಾಶ ಇಲ್ಲ ಎಂಬುದು ತಿಳಿಯಿತ್ತು ಎಂದು ಮನೆಯ ಸದಸ್ಯರೊಂದಿಗೆ ಪ್ರಶಾಂತ್ ಹೇಳಿಕೊಂಡಿದ್ದಾರೆ. ಯಾಕಂದ್ರೆ ಈ ಹಿಂದೆ ನಿರ್ಮಲಾ ಅವರಿಗೆ ಬ್ಯಾಗ್ ನೀಡುವ ಮೂಲಕ ಹೆಲ್ಪ್ ಮಾಡಿದ್ದರು. ಆದರೆ ಇದೀಗ ನಿರ್ಮಲಾ, ಪ್ರಶಾಂತ್ ಅವರಿಗೆ ಡಿಸ್‍ಲೈಕ್ ನೀಡಿರುವುದು ಬೇಸರ ತರಿಸಿದೆ.




