Tag: ಧನಶ್ರೀ

  • 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್‌, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?

    4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಚಹಲ್‌, ಧನಶ್ರೀ – ಮುಂಬೈ ಕೋರ್ಟ್‌ನಲ್ಲಿ ಏನಾಯ್ತು?

    ಮುಂಬೈ: ಟೀಂ ಇಂಡಿಯಾದ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ.

    ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ಅಂತಿಮ ವಿಚ್ಛೇದನ (Divorce) ವಿಚಾರಣೆ ನಡೆಯಿತು. ಚಹಲ್ ಮತ್ತು ಧನಶ್ರೀ ಇಬ್ಬರೂ ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯವು ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯ ಮೂಲಕ ಡಿವೋರ್ಸ್‌ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ತಮ್ಮ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಪ್ರಶ್ನಿಸಿದಾಗ, ಚಹಲ್ ಮತ್ತು ಧನಶ್ರೀ ‘ಹೊಂದಾಣಿಕೆಯ ಸಮಸ್ಯೆ’ ಕಾರಣವನ್ನು ನೀಡಿದ್ದಾರೆ. ಪ್ರಕರಣವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ನ್ಯಾಯಾಧೀಶರು ಸಂಜೆ 4:30ಕ್ಕೆ ಅಧಿಕೃತವಾಗಿ ಅವರ ವಿಚ್ಛೇದನ ತೀರ್ಪು ಪ್ರಕಟಿಸಿದರು.

    ಕೆಲ ದಿನಗಳಿಂದ ಇಬ್ಬರೂ ಡಿವೋರ್ಸ್ ಪಡೆಯಲಿದ್ದಾರೆ ಎಂದ ಸುದ್ದಿಯಾಗುತ್ತಿತ್ತು. ಆದರೆ ಅಧಿಕೃತವಾಗಿ ಇಬ್ಬರೂ ತಿಳಿಸಿರಲಿಲ್ಲ. ಡಿವೋರ್ಸ್‌ ಪಡೆದ ನಂತರ ಚಹಲ್‌ ಕೈಮಗಿಯುತ್ತಿರುವ ಹನುಮಂತನ ಚಿತ್ರ ಪ್ರಕಟಿಸಿದ್ದರೆ ಧನಶ್ರೀ ಇನ್‌ಸ್ಟಾದಲ್ಲಿ ಭಾವನಾತ್ಮಕ ಪೋಸ್ಟ್‌ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಚಹಲ್‌, ಧನಶ್ರೀ ಸಂಪತ್ತು ಎಷ್ಟಿದೆ? ಆದಾಯದ ಮೂಲ ಯಾವುದು?

    ಇನ್‌ಸ್ಟಾದಲ್ಲಿ ಚಹಲ್‌ ದೇವರು ನನ್ನನ್ನು ಎಷ್ಟೋ ಬಾರಿ ಕಾಪಾಡಿದ್ದಾನೆ. ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ತಿಳಿಯದೇ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಧನಶ್ರೀ ಅವರು ಒತ್ತಡದಿಂದ ಅದೃಷ್ಟಶಾಲಿಯಾಗುವವರೆಗೆ. ದೇವರು ನಮ್ಮ ಒತ್ತಡವನ್ನು ಸಂತೋಷವಾಗಿ ಪರಿವರ್ತಿಸುವ ರೀತಿ ಎಷ್ಟು ಅದ್ಭುತವಾಗಿದೆ? ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೆ ಒಳಗಾದರೆ ಹೆಚ್ಚು ಯೋಚಿಸುತ್ತಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ನೆನಪಿಡಿ. ನೀವು ಆ ಉದ್ವೇಗವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಎಲ್ಲಾ ಚಿಂತೆಗಳನ್ನು ದೇವರಿಗೆ ಅರ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಬಹುದು.ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಮಾಡಬಹುದು ಎಂದು ನಂಬುವುದರಲ್ಲಿ ಬೇರೆಯದೇ ರೀತಿಯ ಶಕ್ತಿಯಿದೆ ಎಂಬುದಾಗಿ ಬರೆದುಕೊಂಡಿದ್ದಾರೆ.

    ಕೆಲ ತಿಂಗಳ ಹಿಂದೆ ಇಬ್ಬರೂ ಇನ್‌ಸ್ಟಾದಲ್ಲಿ ಪರಸ್ಪರ ಅನ್‌ಫಾಲೋ ಆಗಿದ್ದರು. ಆಗಲೇ ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ವರದಿಯಾಗಿತ್ತು. ಇನ್‌ಸ್ಟಾದಲ್ಲಿ ಚಹಲ್‌ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್‌ ಮಾಡಿದ್ದರೆ ಧನಶ್ರೀ ಚಹಲ್‌ ಅವರೊಂದಿಗೆ ಫೋಟೋ ಡಿಲೀಟ್‌ ಮಾಡಿಲ್ಲ.

     

    View this post on Instagram

     

    A post shared by Dhanashree Verma (@dhanashree9)

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದ್ದಾರೆ ಎಂದು ಎರಡು ವರ್ಷದ ಹಿಂದೆ ಸುದ್ದಿ ಪ್ರಕಟವಾಗಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಧನಶ್ರೀ ಎಂದು ಹೇಳಿದ್ದರು.

    ಹಿಂದೆ ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು.

    ಸದ್ಯ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಚಹಲ್‌ ವಿಫಲರಾಗಿದ್ದು 2023ರ ಜನವರಿಯಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದರೆ, 2023ರ ಆಗಸ್ಟ್‌ನಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು.

    ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು. ಚಹಲ್‌ 160 ಐಪಿಎಲ್‌ ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

  • ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು –  ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

    ಚಹಲ್‌, ಧನಶ್ರೀ ದಾಂಪತ್ಯದಲ್ಲಿ ಬಿರುಕು – ಮದ್ವೆಯಾಗಿ 4 ವರ್ಷದ ಬಳಿಕ ಡಿವೋರ್ಸ್?

    ಮುಂಬೈ: ಟೀಂ ಇಂಡಿಯಾದ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಮತ್ತು ನಟಿ ಧನಶ್ರೀ (Dhanashree Verma) ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ದು, ಶೀಘ್ರವೇ ಡಿವೋರ್ಸ್‌ (Divorce) ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಆಪ್ತ ಮೂಲಗಳ ಪ್ರಕಾರ ಇಬ್ಬರು ಪ್ರತ್ಯೇಕವಾಗುವುದು ನಿಜ. ವಿಚ್ಛೇದನ ಪ್ರಕ್ರಿಯೆಗಳು ಇನ್ನೂ ಅಂತಿಮಗೊಂಡಿಲ್ಲ. ಎಲ್ಲಾ ಷರತ್ತುಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿಗಳ ಅಬ್ಬರಕ್ಕೆ ಆಸಿಸ್‌ ತತ್ತರ; 181 ರನ್‌ಗಳಿಗೆ ಆಲೌಟ್‌

    ಇಬ್ಬರು ಪ್ರತ್ಯೇಕವಾಗಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ದಂಪತಿ ಪ್ರತ್ಯೇಕವಾಗಿ ತಮ್ಮ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ವದಂತಿಗೆ ಪೂರಕ ಎಂಬಂತೆ ಇಬ್ಬರೂ ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಚಹಲ್‌ ಅವರು ಧನಶ್ರೀ ಜೊತೆಗಿನ ಫೋಟೋ ಡಿಲೀಟ್‌  ಮಾಡಿದ್ದರೆ ಧನಶ್ರೀ ಚಹಲ್‌ ಅವರೊಂದಿಗೆ ಫೋಟೋ ಡಿಲೀಟ್‌ ಮಾಡಿಲ್ಲ.

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದ್ದಾರೆ ಎಂದು ಎರಡು ವರ್ಷದ ಹಿಂದೆ ಸುದ್ದಿ ಪ್ರಕಟವಾಗಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು.  ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಧನಶ್ರೀ ಎಂದು ಹೇಳಿದ್ದರು.

    ಹಿಂದೆ ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್‌ ರೆಡ್ಡಿ ತಂದೆ!

    ಸದ್ಯ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಚಹಲ್‌ ವಿಫಲರಾಗಿದ್ದು 2023ರ ಜನವರಿಯಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದರೆ, 2023ರ ಆಗಸ್ಟ್‌ನಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು.

    ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂ. ನೀಡಿ ಚಹಲ್‌ ಅವರನ್ನು ಖರೀದಿಸಿತ್ತು. ಚಹಲ್‌ 160 ಐಪಿಎಲ್‌ ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.

     

  • ಕ್ರಿಕೆಟರ್ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ಟಾಲಿವುಡ್‌ಗೆ ಎಂಟ್ರಿ?

    ಕ್ರಿಕೆಟರ್ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ಟಾಲಿವುಡ್‌ಗೆ ಎಂಟ್ರಿ?

    ಭಾರತ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಾಹಲ್ (Yuzvendra Chahal) ಪತ್ನಿ ಧನಶ್ರೀ (Dhanashree Verma) ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಅತ್ಯುತ್ತಮ ಡ್ಯಾನ್ಸರ್ ಆಗಿರುವ ಧನಶ್ರೀ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಇದೀಗ ಯಜುವೇಂದ್ರ ಚಾಹಲ್ ಪತ್ನಿಗೆ ತೆಲುಗು ಸಿನಿಮಾರಂಗದಿಂದ ಬುಲಾವ್ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ:BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    ನೃತ್ಯ ಆಧರಿಸಿ ಕತೆಯುಳ್ಳ ‘ಆಕಾಶಂ ಧಾಟಿ ವಸ್ತಾವ’ (Akasham  Dati Vastava) ಎಂಬ ಸಿನಿಮಾದಲ್ಲಿ ಧನಶ್ರೀ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರಂತೆ. ಡ್ಯಾನ್ಸ್ ಮಾಸ್ಟರ್ ಯಶ್ ಈ ಚಿತ್ರದ ನಾಯಕನಾಗಿದ್ದಾರೆ. ಚಿತ್ರಕ್ಕೆ ಶಶಿಕುಮಾರ್ ಮುತ್ತುಲೂರಿ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಧನಶ್ರೀ ಭಾಗದ ಕೆಲವು ದೃಶ್ಯಗಳ ಶೂಟಿಂಗ್ ಕೂಡ ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಈ ವಿಚಾರ ನಿಜನಾ? ಚಿತ್ರತಂಡದಿಂದ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ‘ಲವ್ ಸೆಕ್ಸ್ ಔರ್ ದೋಖಾ 2’ ಚಿತ್ರದಲ್ಲಿ ಸೊಂಟ ಬಳುಕಿಸಿದ ಚಾಹಲ್ ಪತ್ನಿ

    ‘ಲವ್ ಸೆಕ್ಸ್ ಔರ್ ದೋಖಾ 2’ ಚಿತ್ರದಲ್ಲಿ ಸೊಂಟ ಬಳುಕಿಸಿದ ಚಾಹಲ್ ಪತ್ನಿ

    ಕ್ರಿಕೆಟಿಗ ಯಜುವೇಂದ್ರ ಚಾಹಲ್ (Yuzvendra Chahal) ಪತ್ನಿ ಧನಶ್ರೀ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಹೊಸ ಅವತಾರದಲ್ಲಿ ‘ಲವ್ ಸೆಕ್ಸ್ ಔರ್ ದೋಖಾ 2’ (Love Sex Aur Dhokha 2) ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿನ ಹಾಡಿಗೆ ನಟಿ ಸೊಂಟ ಬಳುಕಿಸಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆಯಾಗಿದೆ.

    ಕಮ್ಸನ್ ಕಾಲಿ ಹಾಡಿನಲ್ಲಿ ಟೋನಿ ಕಕ್ಕರ್ ಜೊತೆ ಧನಶ್ರೀ ವರ್ಮಾ (Dhanashree Verma) ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಧನಶ್ರೀ ವರ್ಮಾ ಮಿಂಚಿದ್ದು, ಟೋನಿ ಕಕ್ಕರ್ ಜೊತೆ ನಟಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡಿನಲ್ಲಿ ಸೊಂಟಕ್ಕೆ ಚಿವುಟುವ ದೃಶ್ಯವನ್ನು ಹಾಕಲಾಗಿದೆ. ಸಾಂಗ್‌ನಲ್ಲಿ ಧನಶ್ರೀ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಿಜೆಪಿ ಸೇರ್ಪಡೆ ವದಂತಿಗೆ ಪ್ರಕಾಶ್ ರಾಜ್ ಸ್ಪಷ್ಟನೆ 

     

    View this post on Instagram

     

    A post shared by Saregama India (@saregama_official)

    ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ದೋಖಾ 2’ ಸಿನಿಮಾ ಏ.19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಕೂಡ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

    ‘ಲವ್ ಸೆಕ್ಸ್ ಔರ್ ದೋಖಾ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ನಟಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆಯಲ್ಲಿ ಇಂಟರ್‌ನೆಟ್‌ನಿಂದ ಆಗುವ ತೊಂದರೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ.

  • ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಯಜುವೇಂದ್ರ ಚಾಹಲ್ ದಂಪತಿ

    ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ಸೆಲೆಬ್ರಿಟಿ ಜೋಡಿ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ಡಿವೋರ್ಸ್ ವದಂತಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೂ ಈ ಜೋಡಿ ಸ್ಪಷ್ಟನೆ ನೀಡಿದೆ.

    ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ಕಳೆದ ಎರಡು ವರ್ಷಗಳಿಂದ ಹಿಂದೆ ಹಸೆಮಣೆ ಏರಿದ್ದರು. ಖುಷಿಯಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಯ ಬಗ್ಗೆ ಡಿವೋರ್ಸ್ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡತ್ತು. ಇದಕ್ಕೆಲ್ಲ ಕಾರಣವು ಇದೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಧನಶ್ರೀ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಚಾಹಲ್ ಸರ್‌ನೇಮ್ ತೆಗೆದು ಹಾಕಿದ್ದರು. ಯಜುವೇಂದ್ರ ಕೂಡ ಹೊಸ ಜೀವನ ಆರಂಭ ಎಂದು ಬರೆದುಕೊಂಡಿದ್ದರು. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಡಿವೋರ್ಸ್ ವಿಚಾರ ಸಖತ್ ಸೌಂಡ್ ಮಾಡಿತ್ತು. ಜತೆಗೆ ಟ್ವೀಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ದಂಪತಿಗಳಿಬ್ಬರು ವೀಡಿಯೋ ಮೂಲಕ ಡಿವೋರ್ಸ್ ವದಂತಿಗೆ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

     

    View this post on Instagram

     

    A post shared by Dhanashree Verma (@dhanashree9)

    ವೀಡಿಯೋದಲ್ಲಿ ಧನಶ್ರೀ ಒಂದು ತಿಂಗಳು ನಾನು ಮನೆಗೆ ಹೋಗುತ್ತೇನೆ ಎಂದು ಚಾಹಲ್‌ಗೆ ಹೇಳುತ್ತಾರೆ. ಆಗ ಅವರು ಖುಷಿಯಿಂದ ಡ್ಯಾನ್ಸ್ ಮಾಡುತ್ತಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಇವರಿಬ್ಬರ ಖುಷಿ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಮೂಲಕ ಡಿವೋರ್ಸ್‌ ವದಂತಿಗೆ ಫುಲ್‌ ಸ್ಟಾಪ್‌ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಚಾಹಲ್‍ರನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಲು ಬಂದ ಧನಶ್ರೀ

    ಚಾಹಲ್‍ರನ್ನು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಲು ಬಂದ ಧನಶ್ರೀ

    ಮುಂಬೈ: ಏಷ್ಯಾಕಪ್‍ಗಾಗಿ ದುಬೈಗೆ ಪ್ರಯಾಣ ಬೆಳೆಸಲು ಮುಂಬೈ ಏರ್‌ಪೋರ್ಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಆಗಮಿಸುತ್ತಿದ್ದಂತೆ ಅವರೊಂದಿಗೆ ಪತ್ನಿ ಧನಶ್ರೀ ಕೂಡ ಕಾಣಿಸಿಕೊಂಡಿದ್ದಾರೆ.

    ಕೆಲದಿನಗಳಿಂದ ಚಹಲ್ ಮತ್ತು ಧನಶ್ರೀ ನಡುವೆ ಒಡಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಹಾಕಿದ್ದ ಪೋಸ್ಟ್‌ಗಳು ಅನುಮಾನ ಮೂಡಿಸಿತ್ತು. ಇದನ್ನೂ ಓದಿ: ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಇದೀಗ ಚಾಹಲ್ ಮತ್ತು ಧನಶ್ರೀ ಏರ್‌ಪೋರ್ಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಾಹಲ್ ಜೊತೆ ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಬಂದ ಧನಶ್ರೀ ಬಳಿಕ ಫೋಟೋಗೆ ಪೋಸ್ ನೀಡಿದ್ದಾರೆ. ಈ ಮೂಲಕ ಅವರಿಬ್ಬರ ದಾಂಪತ್ಯ ಜೀವನದ ಕುರಿತಾಗಿ ಎದ್ದಿದ್ದ ರೂಮರ್ಸ್‍ಗಳಿಗೆ ತೆರೆಎಳೆದಿದ್ದಾರೆ.

    ಚಹಲ್ ಕೆಲದಿನಗಳ ಹಿಂದೆ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ವದಂತಿ ಹರಿದಾಡಿತ್ತು. ಇದನ್ನೂ ಓದಿ: ರಾಹುಲ್ ದ್ರಾವಿಡ್‍ಗೆ ಕೊರೊನಾ- ಏಷ್ಯಾ ಕಪ್ ಟೂರ್ನಿಯಿಂದ ಹೊರಕ್ಕೆ

    ಈ ಬಗ್ಗೆ ಕೆಲದಿನಗಳ ಹಿಂದೆ ಇನ್‍ಸ್ಟಾಗ್ರಾಮ್‍ನಲ್ಲಿ ಧನಶ್ರೀ ಬರೆದುಕೊಂಡು ಸ್ಪಷ್ಟನೆ ನೀಡಿದ್ದರು. ಕಳೆದ 14 ದಿನಗಳಿಂದ ತುಂಬಾ ಕಷ್ಟದ ದಿನವನ್ನು ಅನುಭವಿಸುತ್ತಿದ್ದೆ. ಡ್ಯಾನ್ಸ್ ಮಾಡುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿತ್ತು. ಆ ಬಳಿಕ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಾಣುತ್ತಿದೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನನ್ನ ಕುಟುಂಬದವರು, ಮನೆಯವರು ಮತ್ತು ನನ್ನ ಗಂಡ ಧೈರ್ಯ ತುಂಬಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ನೃತ್ಯದತ್ತ ಗಮನ ಹರಿಸಲು ಮುಂದಾಗುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಚಹಲ್ ಕಾಮೆಂಟ್ ಮಾಡಿದ್ದು, ನನ್ನ ಮಹಿಳೆ ಎಂದು ಅಧಿಕೃತ ಖಾತೆಯಿಂದ ಕಾಮೆಂಟ್ ಹಾಕಿದ್ದರು. ಈ ಮೂಲಕ ಕೆಲದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಸುದ್ದಿಗೆ ಅಂತ್ಯ ಹಾಡಲು ಮುಂದಾಗಿದ್ದರು. ಇದೀಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ತರಿಸಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    Live Tv
    [brid partner=56869869 player=32851 video=960834 autoplay=true]

  • ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು ರೂಮರ್ಸ್‍ಗೆ ಟ್ವಿಸ್ಟ್

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಪ್ರಕರಣಕ್ಕೆ ಅಂತ್ಯ ಹಾಡಲು ಧನಶ್ರೀ ಮುಂದಾಗಿದ್ದಾರೆ.

    ಕೆಲದಿನಗಳಿಂದ ಚಹಲ್ ಮತ್ತು ಧನಶ್ರೀ ನಡುವೆ ಒಡಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಹಾಕಿದ್ದ ಪೋಸ್ಟ್‌ಗಳು ಅನುಮಾನ ಮೂಡಿಸಿತ್ತು. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಇದೀಗ ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಧನಶ್ರೀ, ಕಳೆದ 14 ದಿನಗಳಿಂದ ತುಂಬಾ ಕಷ್ಟದ ದಿನವನ್ನು ಅನುಭವಿಸುತ್ತಿದ್ದೆ. ಡ್ಯಾನ್ಸ್ ಮಾಡುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿತ್ತು. ಆ ಬಳಿಕ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಾಣುತ್ತಿದೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನನ್ನ ಕುಟುಂಬದವರು, ಮನೆಯವರು ಮತ್ತು ನನ್ನ ಗಂಡ ಧೈರ್ಯ ತುಂಬಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ನೃತ್ಯದತ್ತ ಗಮನ ಹರಿಸಲು ಮುಂದಾಗುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್‌ಗೆ ಚಹಲ್ ಕಾಮೆಂಟ್ ಮಾಡಿದ್ದು, ನನ್ನ ಮಹಿಳೆ ಎಂದು ಅಧಿಕೃತ ಖಾತೆಯಿಂದ ಕಾಮೆಂಟ್ ಹಾಕಲಾಗಿದೆ. ಈ ಮೂಲಕ ಕೆಲದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಸುದ್ದಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಧನಶ್ರೀ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಚಹಲ್ ಕೂಡ ಈ ರೂಮರ್ಸ್‍ಗಳು ಸುಳ್ಳು ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

     

    View this post on Instagram

     

    A post shared by Dhanashree Verma (@dhanashree9)

    ಚಹಲ್ ಕೆಲದಿನಗಳ ಹಿಂದೆ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ವದಂತಿ ಹರಿದಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದ್ಯಾ? ಹೀಗೊಂದು ಪ್ರಶ್ನೆಯನ್ನು ಇಟ್ಟುಕೊಂಡು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

    ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‍ಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪ್ರಮುಖ ಕಾರಣ ಇವರಿಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಪೋಸ್ಟ್. ಇದನ್ನೂ ಓದಿ: ನಾನು ರೊನಾಲ್ಡೊ ಆಡುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಖರೀದಿಸುತ್ತೇನೆ: ಎಲೋನ್ ಮಸ್ಕ್

    ಹೌದು. ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.

    ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಇತ್ತ ಚಹಲ್ ಏಷ್ಯಾ ಕಪ್ ಟೂರ್ನಿಗಾಗಿ ಸಿದ್ಧತೆಯಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗುತ್ತಿದ್ದು, ಆಗಸ್ಟ್ 28 ರಂದು ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾವಿ ಪತ್ನಿ ಜೊತೆಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ಚಹಲ್ – ಧನಶ್ರೀ ಕಮೆಂಟ್

    ಭಾವಿ ಪತ್ನಿ ಜೊತೆಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ಚಹಲ್ – ಧನಶ್ರೀ ಕಮೆಂಟ್

    ನವದೆಹಲಿ: ಕ್ರಿಕೆಟಿಗ ಯುಜುವೇಂದ್ರ ಚಹಲ್ ಭಾವಿ ಪತ್ನಿ ಧನಶ್ರೀ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಫೋಟೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಯುಜುವೇಂದ್ರ ಚಹಲ್ ಭಾವಿ ಬಾಳ ಸಂಗಾತಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಚಹಲ್, ಕ್ಯಾಪ್ಷನ್ ನೀಡಿಲ್ಲ. ಆದ್ರೆ ಧನಶ್ರೀ, ವಾಟ್ ಎ ಸೆಲ್ಫಿ, ಸಚ್ ಎ ಪ್ರೋ ಎಂದು ಬರೆದು ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಸೋತಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಆಸೀಸ್ ಬಳಗ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಎರಡೂ ಪಂದ್ಯಗಳಲ್ಲಿ ಆಡಿರುವ ಚಹಲ್ ಕೇವಲ ಒಂದು ವಿಕೆಟ್ ಪಡೆದಿದ್ದಾರೆ.

     

    View this post on Instagram

     

    A post shared by Yuzvendra Chahal (@yuzi_chahal23)