Tag: ಧನರಾಜ್‌ ಆಚಾರ್‌

  • ಇಬ್ಬರೂ ಹಾಲು, ಸಕ್ಕರೆ ಇದ್ದಂಗೆ- ಹನು, ಧನು ಸ್ನೇಹಕ್ಕೆ ಐಶ್ವರ್ಯಾ ವಿಶ್

    ಇಬ್ಬರೂ ಹಾಲು, ಸಕ್ಕರೆ ಇದ್ದಂಗೆ- ಹನು, ಧನು ಸ್ನೇಹಕ್ಕೆ ಐಶ್ವರ್ಯಾ ವಿಶ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇತ್ತ ದೊಡ್ಮನೆ ಆಟ ಮುಗಿದ ಮೇಲೆಯೂ ‘ಬಿಗ್ ಬಾಸ್’ ಸ್ಪರ್ಧಿಗಳಾದ ಹನುಮಂತ, ಧನರಾಜ್ ಆಚಾರ್, ಐಶ್ವರ್ಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹನುಮಂತ, ಧನರಾಜ್ (Dhanraj Achar) ಸ್ನೇಹಕ್ಕೆ ಐಶ್ವರ್ಯಾ ಹಾರೈಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

    ಹನುಮಂತು (Hanumantha) ವ್ಯಕ್ತಿತ್ವ, ಧನರಾಜ್ ಮಾತು ಹಾಲು ಸಕ್ಕರೆ ಇದ್ದಂಗೆ. ಹೀಗೆ ಇರಲಿ ಇಬ್ಬರ ಸ್ನೇಹ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಫ್ಯಾನ್ಸ್ ದೃಷ್ಟಿ ತೆಗೆಯಿರಿ ಎಂದು ಕಾಮೆಂಟ್‌ಗಳ ಸುರಿಮಳೆ ಹರಿದು ಬರುತ್ತಿವೆ.

    ಅಂದಹಾಗೆ, ‘ಬಿಗ್ ಬಾಸ್’ ಮುಗಿದ ಮೇಲೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಹನುಮಂತು, ರಜತ್, ಶೋಭಾ ಶೆಟ್ಟಿ, ಐಶ್ವರ್ಯಾ ಶಿಂಧೋಗಿ, ಭವ್ಯಾ ಕಾಣಿಸಿಕೊಳ್ತಿದ್ದಾರೆ.

  • ‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್

    ‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ವಿನ್ನರ್ ಆಗಿ ಹನುಮಂತ (Hanumantha) ಗೆದ್ದು ಬೀಗಿದ್ದಾರೆ. ಬಿಗ್ ಬಾಸ್‌ನಲ್ಲಿದ್ದಾಗ ಅಲ್ಲಿ ಹನುಮಂತ ಮತ್ತು ಧನರಾಜ್ (Dhanraj Achar) ಸ್ನೇಹ ಹೈಲೆಟ್ ಆಗಿತ್ತು. ಈಗ ಶೋ ಮುಗಿದ ಬಳಿಕ ‘ದೋಸ್ತಾ ನೀ ಮಸ್ತಾ’ ಅಂತ ಖುಷಿಯಿಂದ ಹನುಮಂತನ ಗೆಲುವನ್ನು ಧನರಾಜ್ ಸಂಭ್ರಮಿಸಿದ್ದಾರೆ.

    ‘ಬಿಗ್ ಬಾಸ್ 11’ರ ಟ್ರೋಫಿ ಹಿಡಿದು ಹನುಮಂತ ಜೊತೆ ಧನರಾಜ್ ಪೋಸ್ ಕೊಟ್ಟಿದ್ದಾರೆ. ದೋಸ್ತಾ ನೀ ಮಸ್ತಾ, ಗೆಲವು ನಿನ್ನದು.. ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ ಎಂದಿದ್ದಾರೆ. ‘ಇರು ನೀ ಜೊತೆಗಿರು ಎಂದೆಂದಿಗೂ’ ಎಂದು ಧನರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by DHANRAJ S R (@dhanu__achar)

    ಒಟ್ನಲ್ಲಿ ಹನುಮಂತ ಗೆಲುವು ಧನರಾಜ್ ಸಖತ್ ಖುಷಿಯಾಗಿರೋದಂತೂ ಗ್ಯಾರಂಟಿ. ಶೋ ಮುಗಿದ ಮೇಲೆಯೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

  • ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ಹನುಮಂತ ಆ ಹುಡುಗಿಯ ಮನಸ್ಸನ್ನು ಗೆದ್ದಿದ್ದಾನೆ: ಗೆಳೆಯನ ಮದುವೆ ಬಗ್ಗೆ ಧನರಾಜ್ ಮಾತು

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು ಒಂದು ವಾರದಲ್ಲಿ ಅಂತ್ಯವಾಗಲಿದೆ. ಬಿಗ್ ಬಾಸ್ ಟ್ರೋಫಿಗಾಗಿ ಸ್ಪರ್ಧಿಗಳ ನಡುವೆ ಗುದ್ದಾಟ ನಡೆಯುತ್ತಿದೆ. ಹೀಗಿರುವಾಗ ಸದ್ಯ ಎಲಿಮಿನೇಟ್ ಆಗಿ ಬಂದಿರುವ ಸ್ಪರ್ಧಿ ಧನರಾಜ್ (Dhanraj Achar) ಅವರು ಗೆಳೆಯ ಹನುಮಂತನ ಮದುವೆ (Wedding) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್‌ ಭಾವುಕ ಪೋಸ್ಟ್‌

    ಸಣ್ಣ ವಯಸ್ಸು, ಎಲ್ಲವೂ ಈಸಿಯಾಗಿ ಆಗುತ್ತದೆ ಅಂದುಕೊಂಡಿದ್ದಾರೆ. ಕಪ್ ಗೆದ್ದು ಅತ್ತೆಯ ಹತ್ತಿರ ಹೋದರೆ ಮಗಳನ್ನು ಕೊಡುವವರು ಯಾರು ನನಗೆ ಗೊತ್ತಿಲ್ಲ. ಜನರ ಮನಸ್ಸನ್ನು ಹನುಮಂತ (Hanumantha) ಗೆದ್ದಿದ್ದಾರೆ. ಜೊತೆಗೆ ಹುಡುಗಿಯ ಅಪ್ಪ, ಅಮ್ಮನ ಮನಸ್ಸು ಗೆಲ್ಲಲಿ ನಮ್ಮಷ್ಟು ಖುಷಿಪಡುವವರು ಯಾರಿಲ್ಲ. ಈಗಾಗಲೇ ಹುಡುಗಿಯ ಮನಸ್ಸು ಗೆದ್ದಿದ್ದಾರೆ ಅನ್ನೋದು ಅವರ ಮಾತಲ್ಲಿ ಗೊತ್ತಾಗುತ್ತಿದೆ. ಆ ಜೀವ ಹುಡುಗಿಗಾಗಿ ಕಾಯುತ್ತಿದೆ. ಯಾವತ್ತು ನೋಡಿದರೂ ಮದುವೆ ಮದುವೆ ಅಂತ ಹೇಳುತ್ತಿರುತ್ತಾರೆ ದೋಸ್ತ್. ಆದರೆ ಹುಡುಗಿ ವಿಚಾರದ ಬಗ್ಗೆ ಹೇಳೋಕೆ ತುಂಬಾ ಭಯಪಡುತ್ತಾನೆ ಎಂದಿದ್ದಾರೆ ಧನರಾಜ್.

    ಅವರು ಯಾವ ರೀತಿ ಹನುಮಂತನನ್ನು ಹುಡುಗಿಯ ಮನೆಯವರು ಒಪ್ಪಿಕೊಳ್ತಾರೆ ಗೊತ್ತಿಲ್ಲ. ಒಂದು ವೇಳೆ, ಹನುಮಂತ ಬಿಗ್ ಬಾಸ್ ಗೆದ್ದರೆ ಒಂದಿಷ್ಟು ಪ್ರೇಮಿಗಳಿಗೆ ಇದು ಪಾಠವಾಗಬಹುದು ಅನಿಸುತ್ತದೆ. ಅವರಂತೆ ಬಿಗ್ ಬಾಸ್‌ಗೆ ಹೋಗಿ ಕಪ್ ಗೆದ್ದು ಅಥವಾ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಹುಡುಗಿಯನ್ನು ಕೇಳೋಕೆ ಹೋಗೋಣ ಅನ್ನುವಂತೆ ಒಂದು ಪಾಠವಾಗಬಹುದು ಎಂದು ಧನರಾಜ್ ಅವರು ಹನುಮಂತ ಬಗ್ಗೆ ಮಾತನಾಡಿದ್ದಾರೆ.

    ನನ್ನ ದೋಸ್ತ್ ಹನುಮಂತ ನಿಷ್ಕಲ್ಮಷ ಮನಸಿನವನು. ಒಳ್ಳೆಯ ವ್ಯಕ್ತಿ, ಅವನ ಮನಸ್ಸಿನಲ್ಲಿ ಏನಿದೆ ಅದನ್ನು ನೇರವಾಗಿ ಹೇಳ್ತಾನೆ. ಒಬ್ಬರು ಇಷ್ಟ ಆಗಿದ್ದಾರೆ ಅಂದರೆ ಆ ಮನಸ್ಸು ಕೂಡ ಅಷ್ಟೇ ಒಳ್ಳೆಯದಿರಬಹುದು. ಆ ಮನಸ್ಸುಗಳು ಎರಡು ಇಷ್ಟಪಟ್ಟಿವೆ. ನೀವು ಮನಸ್ಸು ಮಾಡಿದ್ರೆ, ಆ ಮನಸ್ಸುಗಳನ್ನು ಒಂದು ಮಾಡಿದ್ರೆ ನೋಡೋ ಕರ್ನಾಟಕದ ಜನತೆ ಕೂಡ ಖುಷಿಪಡುತ್ತಾರೆ ಎಂದು ಹನುಮಂತನ ಮನದರಸಿಯ ಪೋಷಕರಿಗೆ ಧನರಾಜ್ ಮನವಿ ಮಾಡಿದ್ದಾರೆ.

    ಇನ್ನೂ ಬಿಗ್ ಬಾಸ್ ಮನೆಯಲ್ಲಿ ಇಷ್ಟಪಟ್ಟ ಹುಡುಗಿ ಬಗ್ಗೆ ಹನುಮಂತ ಮಾತನಾಡಿದ್ದಾರೆ. ಆದರೆ ಅವರು ಯಾರು? ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಸುದೀಪ್ ಕೂಡ ವಾರಾಂತ್ಯದ ಎಪಿಸೋಡ್‌ನಲ್ಲಿ ಏನ್ರಿ ಕಪ್ ಗೆದ್ದರೆ ಮಗಳನ್ನು ಕೊಟ್ಟು ಅತ್ತೆ ಮದುವೆ ಮಾಡುತ್ತಾರಾ? ಎಂದು ಕಾಲೆಳೆದಿದ್ದಾರೆ. ಹನುಮಂತ ಆಗ ನಾಚಿ ನೀರಾಗಿದ್ದಾರೆ.

  • BBK 11: ಧನರಾಜ್‌ ಮೋಸದಾಟಕ್ಕೆ ಟ್ವಿಸ್ಟ್‌ ಕೊಟ್ಟ ‘ಬಿಗ್‌ ಬಾಸ್’-‌ ಸ್ಪರ್ಧಿಗಳು ಶಾಕ್

    BBK 11: ಧನರಾಜ್‌ ಮೋಸದಾಟಕ್ಕೆ ಟ್ವಿಸ್ಟ್‌ ಕೊಟ್ಟ ‘ಬಿಗ್‌ ಬಾಸ್’-‌ ಸ್ಪರ್ಧಿಗಳು ಶಾಕ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಹಿಂದೆ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ಎಚ್ಚರಿಕೆ ನೀಡಿದ್ದರು. ಈ ಬಾರಿ ಮಿಡ್‌ ವೀಕ್‌ ಎಲಿಮಿನೇಷನ್‌ನಿಂದ ಪಾರಾಗಲು ಧನರಾಜ್‌ (Dhanraj Achar) ಮೋಸದಾಟ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

    ಹನುಮಂತ ಫಿನಾಲೆ ಟಿಕೆಟ್‌ ಗಿಟ್ಟಿಸಿಕೊಂಡು ಸೇಫ್‌ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಜೊತೆಗೆ ವಾರದ ಕೊನೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೊಟ್ಟಿದ್ದರು. ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್‌ನಿಂದ ಬಚಾವ್‌ ಎಂದು ಘೋಷಿಸಿದ್ದರು. ಇದನ್ನೂ ಓದಿ:ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ- ಆಸ್ಪತ್ರೆಗೆ ದಾಖಲು

    ಈ ವಾರದ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಆಚಾರ್ಯ ಗೆದ್ದು ಬೀಗಿದ್ದರು. ಈ ವಾರದ ಮಿಡ್‌ ಎಲಿಮಿನೇಷನ್‌ನಿಂದ ಸೇಫ್‌ ಆಗಿದ್ದರು. ಆದರೆ ಇದೀಗ ಬಿಗ್ ಬಾಸ್ ಕೊಟ್ಟ ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದು, ರಿವೀಲ್‌ ಆಗಿದೆ.  ಹೀಗಾಗಿ ಬಿಗ್‌ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಅನ್ನು ಮುಂದೂಡಿಕೆ ಮಾಡಿದ್ದಾರೆ ಬಿಗ್‌ ಬಾಸ್.‌

    ಈ ಬಗ್ಗೆ ಖುದ್ದು ಬಿಗ್ ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ ಬಿಗ್ ಬಾಸ್. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೇ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಬೇಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಮನೆ ಮಂದಿ ಶಾಕ್‌ ಆಗಿದ್ದಾರೆ.

  • BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    ಮಾತೇ ಮುತ್ತು ಮಾತೇ ಮೃತ್ಯು ಎಂಬ ಮಾತು ಚೈತ್ರಾ ಕುಂದಾಪುರ (Chaithra Kundapura) ವಿಚಾರದಲ್ಲಿ ನಿಜವಾಗಿದೆ. ಮಾತಿನಿಂದಲೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ಚೈತ್ರಾ ಕುಂದಾಪುರ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ. ಎಲ್ಲರಿಗೂ ಭಾವುಕವಾಗಿ ವಿದಾಯ ಹೇಳಿದ ಚೈತ್ರಾ ಅವರು ದೊಡ್ಮನೆಯಿಂದ ಬಂದಿದ್ದಾರೆ.

    ಆದರೆ ಬಾರಿ ಎಲಿಮಿನೇಷನ್‌ ಪ್ರಕ್ರಿಯೆ ಮಾಡುವಾಗ ಸುದೀಪ್‌ ಟ್ವಿಸ್ಟ್‌ವೊಂದನ್ನು ಕೊಟ್ಟಿದ್ದಾರೆ. ಯಾರು ಔಟ್‌ ಆಗುತ್ತಾರೆ ಎಂಬುದನ್ನು ತಿಳಿಯಲು ಲಕೋಟೆ ಹುಡುಕುವ ಟಾಸ್ಕ್‌ ಅನ್ನು ಸುದೀಪ್‌ ನೀಡಿದ್ದಾರೆ.  ಅದರಲ್ಲಿ ಸೇಫ್ ಆದವರ ಹೆಸರು ಬರೆದಿರುತ್ತದೆ ಎಂದು ಸುದೀಪ್ ತಿಳಿಸಿದ್ದರು. ಮನೆ ಪೂರ್ತಿ ಸುತ್ತಾಡಿ ಧನರಾಜ್ (Dhanraj Achar) ಮತ್ತು ಚೈತ್ರಾ ಅವರು ಲಕೋಟೆ ಹುಡುಕಿದರು. ಹುಡುಕುವ ವೇಳೆ, ಧನರಾಜ್ ಅವರು ‘ಸ್ವಾಮಿ ಕೊರಗಜ್ಜ’ (Swami Koragajja) ಎಂದು ದೇವರನ್ನು ಸ್ಮರಿಸಿದರು. ಅಚ್ಚರಿ ಎಂದರೆ, ಧನರಾಜ್ ಅವರು ಸೇಫ್ ಆಗಿದ್ದಾರೆ.

    ಚೈತ್ರಾ ಕುಂದಾಪುರ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಹೋಗಿ ಬಂದಿದ್ದಾಗ ಹೊರ ಜಗತ್ತಿನ ವಿಷಯಗಳನ್ನೆಲ್ಲ ಅವರು  ಮನೆಯ ಒಳಗೆ ಹೇಳಿದ್ದರು. ಆಗ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಬುದ್ಧಿ ಹೇಳಿದ ಮೇಲೆ ಕೂಡ ಚೈತ್ರಾ ಅವರು ತಮ್ಮದೇ ಸರಿ ಎಂಬಂತೆ ವರ್ತಿಸಿದ್ದರು.

    2ಕ್ಕೂ ಹೆಚ್ಚು ಬಾರಿ ಕಳಪೆ ಪಟ್ಟ ತೆಗೆದುಕೊಂಡಿದ್ದ ಚೈತ್ರಾ ಕೊನೇ ವಾರದಲ್ಲಿ ಮಾತ್ರ ಅವರಿಗೆ ಎಲ್ಲರಿಂದ ಉತ್ತಮ ಪಟ್ಟ ಸಿಕ್ಕಿತ್ತು. ಕ್ಯಾಪ್ಟನ್ ಆಗಲು ಅವರಿಗೆ ಸಾಧ್ಯವಾಗಲಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಸಿಗಲಿಲ್ಲ. ಆ ಬೇಸರದಲ್ಲೇ ಅವರು ಬಿಗ್ ಬಾಸ್ ಆಟವನ್ನು ಅಂತ್ಯಗೊಳಿಸಿದ್ದಾರೆ. ಕಣ್ಣೀರಿಡುತ್ತಲೇ ಬಿಗ್‌ ಬಾಸ್‌ ಮನೆಗೆ ಚೈತ್ರಾ ಗುಡ್‌ ಬೈ ಹೇಳಿದ್ದಾರೆ.

  • BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

    ‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್‌, ಭವ್ಯಾ, ತ್ರಿವಿಕ್ರಮ್‌ ಮನೆಯವರೆಲ್ಲಾ ಬಿಗ್‌ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್‌ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಜನವರಿ 2ರ ಎಪಿಸೋಡ್‌ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್‌ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್‌ ಬಾಸ್‌ಗೆ ಆಗಮಿಸಿ ಧನರಾಜ್‌ ಜೊತೆ ಹುಲಿ ಡ್ಯಾನ್ಸ್‌ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ  ಆಲ್‌ ಬಿ ಬೆಸ್ಟ್‌ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ. ಇದನ್ನೂ ಓದಿ:ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌ ಭೇಟಿ

    ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್‌ ಹೊಡೀತಾ ಇದ್ರಿ ಅಂತ ಡೌಂಟ್‌ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆ ನಂತರ‌ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ‘ಬಿಗ್ ಬಾಸ್’ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ ಎಂದು ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಅದಕ್ಕೆ ಹೌದಾ, ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ ಎಂದು ಧನರಾಜ್‌ಗೆ ಪತ್ನಿ ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚು ಮರೆ ನೇರವಾಗಿ ಮಾತನಾಡಿದ್ದಾರೆ.

    ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು.

  • ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

    ದಾ ಕಿತ್ತಾಟದಿಂದಲೇ ಹೈಲೆಟ್‌ ಆಗುತ್ತಿದ್ದ ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ಸ್ಪೆಷಲ್‌ ಎಪಿಸೋಡ್‌ನಿಂದ ಪ್ರೇಕ್ಷಕರ ಮನ ಮುಟ್ಟುತ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗುತ್ತಿದೆ. ಇದನ್ನೂ ಓದಿ:ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ

    ಇದೀಗ ಧನರಾಜ್ ಆಚಾರ್‌ (Dhanraj Achar) ಅವರ ಕೂಡು ಕುಟುಂಬ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಇಡೀ ಕುಟುಂಬವನ್ನು ನೋಡಿ ಧನರಾಜ್ ಫುಲ್ ಹ್ಯಾಪಿ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಧನರಾಜ್‌ ಜೊತೆ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಮನೆ ಮಂದಿಯೆಲ್ಲಾ ಬಿಗ್‌ ಬಾಸ್‌ಗೆ ಬಂದಿರೋದು ಧನರಾಜ್‌ ಸಂತಸ ದುಪ್ಪಟ್ಟು ಮಾಡಿದೆ.

    ಧನರಾಜ್‌ಗೆ ಮತ್ತೊಂದು ಸರ್ಪ್ರೈಸ್ ಅವರ ಮುದ್ದಿನ ಮಗಳು ಕೂಡ ಬಿಗ್ ಬಾಸ್‌ಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಫೋಟೋವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ ಬಾಸ್‌ಗೆ ಧನರಾಜ್‌ ಮನವಿ ಮಾಡಿಕೊಂಡಿದ್ದಾರೆ. ಅವರು ಭಾವುಕರಾಗಿದ್ದನ್ನು ನೋಡಿದ ಬಿಗ್ ಬಾಸ್, ಕೊನೆಗೆ ಮಗುವಿನ ಜೊತೆ ಕಾಲ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ.

    ಬಳಿಕ ಪತ್ನಿ ಪ್ರಜ್ಞಾ ಧನರಾಜ್‌ಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶ್ವರ್ಯಾ ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶ್ವರ್ಯಾಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎನ್ನುತ್ತಾ ಕೆನ್ನೆಗೆ ಹೊಡೆದಿದ್ದಾರೆ. ಪತಿಯ ಕಾಲೆಳೆದಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.

  • BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ ಕನ್ನಡ 11’ರ ಕಾರ್ಯಕ್ರಮಕ್ಕೆ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧನರಾಜ್ ಅವರು ರಜತ್‌ರನ್ನು ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರೂ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಗೆ ಆಗಮಿಸಿ ನಾಮಿನೇಷನ್ ಪಾಸ್ ಟಾಸ್ಕ್ ಮಾಡಿಸಿದರು. ಇದೀಗ ಇಂದಿನ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಆಗಮಿಸಿದ್ದಾರೆ. ಈ ವೇಳೆ ನಾಮಿನೇಷನ್ ಪ್ರಕ್ರಿಯೆ ಜರುಗಿದ್ದು, ಧನರಾಜ್ ಈ ಹಿಂದಿನ ಟಾಸ್ಕ್‌ ಕಾರಣ ಕೊಟ್ಟು ನಾಮಿನೇಟ್ ಮಾಡಿರೋದು ಕೋಪ ತರಿಸಿದೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್‌ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ

    ನನ್ನ ಹತ್ರ ಹೀಗೆಲ್ಲಾ ಆಟ ಆಡಬೇಡ. ನಿನಗೆ ಮಗು ಅಂತ ಹೇಳೋದು ಇದೇ ಕಾರಣಕ್ಕೆ ಎಂದು ಧನರಾಜ್‌ಗೆ ರಜತ್ ಟೀಕಿಸಿದ್ದಾರೆ. ಏ ಪಾಪು ಎನ್ನುತ್ತಾರೆ. ಅದಕ್ಕೆ ಅಂಕಲ್ ಅಂಕಲ್ ಎನ್ನುತ್ತಾ ಧನರಾಜ್ ತಿರುಗೇಟು ನೀಡಿದ್ದಾರೆ. ಮೈ ಮುಟ್ಟಿ ರಜತ್‌ನ್ನು ಮಾತನಾಡಿಸುತ್ತಾರೆ. ಈ ವೇಳೆ, ಇಬ್ಬರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಜಗಳ ತಪ್ಪಿಸಲು ಉಗ್ರಂ ಮಂಜು ಮಧ್ಯೆಕ್ಕೆ ಹೋಗಿದ್ದಾರೆ. ಆ ನಂತರ ಎನ್ ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

    ಮನೆಗೆ ಗೆಸ್ಟ್ ಆಗಿ ಬಂದಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಯಾವ ಟಾಸ್ಕ್ ಮಾಡಿಸುತ್ತಾರೆ. ಎನೆಲ್ಲಾ ತಿರುವು ಸಿಗಲಿದೆ ಎಂಬುದು ಕಾದುನೋಡಬೇಕಿದೆ.

  • BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

    BBK 11: ಕಳಪೆ ಎಂದ ಮೋಕ್ಷಿತಾಗೆ ಅಸಲಿ ಆಟ ಈಗ ಶುರು ಎಂದು ಸವಾಲೆಸೆದ ಧನರಾಜ್

    ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಸೀಸನ್ 11’ (Bigg Boss Kannada 11) ಇದೀಗ 8ನೇ ವಾರಕ್ಕೆ ಕಾಲಿಡುವ ಹೊಸ್ತಿಲಲ್ಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಂಪಾಟ ನಡೆದಿದೆ. ವಾಹಿನಿಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋವೊಂದನ್ನು ಶೇರ್ ಮಾಡಿಕೊಂಡಿದೆ. ಮೋಕ್ಷಿತಾಗೆ (Mokshitha Pai) ಅಹಂಕಾರ ಇದೆ ಎಂದು ಧನರಾಜ್ ತಿವಿದಿದ್ದಾರೆ.‌ ಇದನ್ನೂ ಓದಿ:ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ಹೊಸ ಪ್ರೋಮೋದಲ್ಲಿ ಎಂದಿನಂತೆ ವಾರಾಂತ್ಯದಲ್ಲಿ ಈ ವಾರದ ಕಳಪೆ ಪ್ರದರ್ಶನ ಪ್ರಕ್ರಿಯೆ ನಡೆದಿದೆ. ಮನೆಯ ಸದಸ್ಯರು ಒಬ್ಬಬ್ಬರಾಗಿ ಬಂದು ಈ ವಾರದ ಕಳಪೆ ಪ್ರದರ್ಶನ ನೀಡಿದ್ದು, ಯಾರು ಅಂತ ಹೇಳಬೇಕು. ಆದರೆ ಈ ವಾರದ ಜೋಡಿ ಟಾಸ್ಕ್‌ನಲ್ಲಿ ತಮ್ಮ ಜೊತೆಯಾಗಿದ್ದ ಧನರಾಜ್ ಅವರನ್ನೇ ಮೋಕ್ಷಿತಾ ಕಳಪೆ ಎಂದಿದ್ದಾರೆ. ಇದು ಧನರಾಜ್ (Dhanraj Achar) ಕೋಪಕ್ಕೆ ಕಾರಣವಾಗಿದೆ.

    ಈ ವಾರದ ಕಳಪೆ ಪಟ್ಟವನ್ನು ಧನರಾಜ್‌ಗೆ ಮನೆಯ ಇತರೆ ನೀಡಿದ್ದಾರೆ. ಇದರ ಪೈಕಿ ಮೋಕ್ಷಿತಾ ಅವರು, ಟಾಸ್ಕ್ ವಿಚಾರ ಅಂತ ಬಂದಾಗ ಸ್ಮಾರ್ಟ್ ಆಗಿ ನೀವು ಯೋಚನೆ ಮಾಡ್ತಾ ಇರಲಿಲ್ಲ. ಜೋಡಿಯಾಗಿದ್ದಕ್ಕೆ ನೀವು ಎಷ್ಟು ಸಪೋರ್ಟಿವ್ ಆಗಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

    ಆಗ ಧನರಾಜ್ ಅಹಂಕಾರ ಇದೆ ನಿಮಗೆ ಅಂತ ಹೇಳಿ ಆ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ. ಮೋಕ್ಷಿತಾ ಅಹಂಕಾರಿ ಎಂದು ಧನರಾಜ್ ತಿವಿದಿದ್ದಾರೆ. ಮೋಕ್ಷಿತಾಗೆ ಇನ್ಮೇಲೆ ಅಸಲಿ ಆಟ ತೋರಿಸುತ್ತೇನೆ ಎಂದು ಧನರಾಜ್ ಸವಾಲು ಹಾಕುತ್ತಾ ಬಿಗ್ ಬಾಸ್‌ನಲ್ಲಿರುವ ಜೈಲಿಗೆ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಳಿವು ಮತ್ತು ಉಳಿವಿಗಾಗಿ ಇಬ್ಬರ ನಡುವಿನ ಫ್ರೆಂಡ್‌ಶಿಪ್ ಕಟ್ ಆಯ್ತಾ? ಎಂಬು ಅನುಮಾನ ನೋಡುಗರಲ್ಲಿ ಮೂಡಿದೆ.

  • ‘ಬಿಗ್ ಬಾಸ್’ನೇ ಟ್ರೋಲ್ ಮಾಡಿದ್ದ ಧನರಾಜ್ ದೊಡ್ಮನೆ ಸ್ವರ್ಗಕ್ಕೆ ಎಂಟ್ರಿ

    ‘ಬಿಗ್ ಬಾಸ್’ನೇ ಟ್ರೋಲ್ ಮಾಡಿದ್ದ ಧನರಾಜ್ ದೊಡ್ಮನೆ ಸ್ವರ್ಗಕ್ಕೆ ಎಂಟ್ರಿ

    ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಧನರಾಜ್ ಆಚಾರ್ (Dhanraj Achar)  ಬಿಗ್ ಬಾಸ್ ಮನೆಗೆ (Bigg Boss Kannada 11) 3ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಬಿಗ್ ಬಾಸ್‌ನೇ ಟ್ರೋಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹೈಲೆಟ್ ಆಗಿದ್ದ ಧನರಾಜ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್ ಬಾಸ್ ಅನ್ನೇ ಅನುಕರಣೆ ಮಾಡುವಂತ ಕಾಮಿಡಿ ವಿಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಧನರಾಜ್ ಹಂಚಿಕೊಂಡಿದ್ದರು. ಈ ವಿಡಿಯೋ ಭಾರೀ ಲೈಕ್ಸ್ ಮತ್ತು ವಿವ್ಸ್ ಗಿಟ್ಟಿಸಿಕೊಂಡಿತ್ತು. ಇದನ್ನೇ ದೊಡ್ಮನೆಗೆ ನಟ ಕಾಲಿಟ್ಟ ವೇಳೆ, ಸುದೀಪ್ ತೋರಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ರೋಲ್ ಮಾಡಿದ ನಟನಿಗೆ ಪ್ರಶ್ನಿಸಿ ಮಾತನಾಡಿದ ಸುದೀಪ್, ಆ ನಂತರ ಇದು ತಮಾಷೆಗಾಗಿ ಎಂದು ಧನರಾಜ್ ಕಾಲೆಳೆದಿದ್ದಾರೆ.

    ನೀವು ಬಿಗ್ ಬಾಸ್‌ನ ಟ್ರೋಲ್ ಮಾಡಬೋದಾ ನಾನು ಚಮಕ್ ಕೊಡ್ತೀನಿ ಎಂದು ಸುದೀಪ್ ಸ್ಪರ್ಧಿಗೆ ತಮಾಷೆ ಮಾಡಿದ್ದಾರೆ. ಆ ನಂತರ ವಿಶೇಷ ಅಧಿಕಾರ ಪಡೆದಿದ್ದ ಭವ್ಯಾ ಮತ್ತು ಯಮುನಾ ನಿರ್ಧಾರ ಮೇರೆಗೆ ಧನರಾಜ್ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.

    ಅಂದಹಾಗೆ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಐಶ್ವರ್ಯಾ ಸಿಂದೋಗಿ, ತ್ರಿವಿಕ್ರಮ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ.