Tag: ಧನರಾಜ್

  • ದೋಸ್ತ ನನ್ನ ಪಾಲಿನ ದೇವರು: ಧನರಾಜ್‌ ಬಗ್ಗೆ ಹನುಮಂತನ ಮನದಾಳ

    ದೋಸ್ತ ನನ್ನ ಪಾಲಿನ ದೇವರು: ಧನರಾಜ್‌ ಬಗ್ಗೆ ಹನುಮಂತನ ಮನದಾಳ

    – ನಾನು ಬಿಗ್‌ ಬಾಸ್‌ ಮನೆಯಲ್ಲಿರೋಕೆ ದೋಸ್ತನೇ ಕಾರಣ
    – ಇದು ನನ್ನ ಗೆಲುವಲ್ಲ, ಕರ್ನಾಟಕ ಜನತೆಯ ಗೆಲುವು

    ಬಿಗ್‌ ಬಾಸ್‌ ಕನ್ನಡ 11ರ (Bigg Boss Kannada 11) ವಿನ್ನರ್‌ ಹನುಮಂತ (Hanumantha) ದೊಡ್ಮನೆಯ ತನ್ನ ದೋಸ್ತನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ದೋಸ್ತ ಧನರಾಜ್‌ ನನ್ನ ಪಾಲಿನ ದೇವರು ಎಂದು ಬಣ್ಣಿಸಿದ್ದಾರೆ.

    ಬಿಗ್‌ ಬಾಸ್‌ನಲ್ಲಿದ್ದ ಎಲ್ಲಾ ಸ್ಪರ್ಧಿಗಳು ಒಳ್ಳೆಯವರು. ಆಟ ಅಂತ ಬಂದಾಗ ಸ್ವಲ್ಪ ಮನಸ್ತಾಪಗಳಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಬಿಗ್‌ ಬಾಸ್‌ನಲ್ಲಿ ನನ್ನ ದೋಸ್ತರೆಲ್ಲ ಬಹಳ ಸಪೋರ್ಟ್‌ ಮಾಡಿದ್ರು ಎಂದು ಸ್ಪರ್ಧಿಗಳ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಬಿಗ್‌ ಬಾಸ್‌ ಶೋ ಕಪ್‌ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್‌ ಹನುಮಂತ

    ಧನರಾಜ್‌ ಬಗ್ಗೆ ಮಾತನಾಡಿ, ದೋಸ್ತನ ಬಗ್ಗೆ ಹೇಳಬೇಕಂದ್ರೆ, ಆತ ದೇವರು. ನನ್ನ ಪಾಲಿನ ದೇವರು. ಒಳ್ಳೆ ಮನಸ್ಸಿರುವ ವ್ಯಕ್ತಿ. ನನ್ನ ಮತ್ತು ಅವನ ಸ್ವಭಾವ ಒಂದೇ. ಹಾಗಾಗಿ, ನನಗೆ ಆತ ಬಹಳ ಹತ್ತಿರ. ಬಿಗ್‌ ಬಾಸ್‌ ಮನೆಯೊಳಗೆ ನಾನು ಇರಬೇಕೆಂದರೆ ಆತನೇ ಕಾರಣ. ನನ್ನ ಜೊತೆ ಅಷ್ಟು ಹತ್ತಿರ ಇದ್ದು, ಬೇಜಾರಾದಾಗ ಸಮಾಧಾನ ಮಾಡುತ್ತಿದ್ದ. ಈಗ ಹೊರಗಡೆ ಬಂದ ಮೇಲೆ ಬೇಜಾರಾಗ್ತಿದೆ ಎಂದು ತಮ್ಮಿಬ್ಬರ ದೋಸ್ತಿ ಬಗ್ಗೆ ಹೇಳಿದರು.

    ಫಿನಾಲೆಯಲ್ಲಿ ವಿನ್ನರ್‌ ಘೋಷಣೆ ಸಂದರ್ಭದ ಅನುಭವದ ಬಗ್ಗೆ ಮಾತನಾಡಿ, ವಿನ್ನರ್‌ ಘೋಷಣೆಗೆ ಸುದೀಪ್‌ ಸರ್‌ ಕೈ ಹಿಡಿದುಕೊಂಡಿದ್ದಾಗ ಉಚ್ಚೆಯೇ ಬಂದಿತ್ತು ನನಗೆ. ವೋಟ್‌ ಪ್ರಕಾರ ವಿನ್ನರ್‌ ಹೇಳ್ತಾರೆ ಅಂತ ನನಗೆ ಗೊತ್ತಿರಲಿಲ್ಲ. ಇಲ್ಲಿ ತನಕ ಬಂದಿರುವುದೇ ದೊಡ್ಡ ಕಥೆಯಾಗಿದೆ. ನನಗೆ ಕಪ್‌ ಕೊಡ್ತಾರಾ ಅಂದುಕೊಂಡಿದ್ದೆ. ರಜತ್‌ ಅಣ್ಣ ಔಟಾದಾಗ, ಅಯ್ಯೋ ನಾನಿನ್ನೂ ಉಳಿದುಕೊಂಡಿದ್ದೀನಾ ಅಂತ ಅನಿಸಿತ್ತು. ಇದನ್ನೂ ಓದಿ: ‌’ಬಿಗ್‌ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ

    ಇದು ನನ್ನ ಗೆಲುವಲ್ಲ. ಕರ್ನಾಟಕದ ಜನತೆಯ ಜಯ. ಜನ ಮನಸ್ಸಿಂದ ಮೆಚ್ಚಿ ಗೆಲ್ಲಿಸಿದ್ದಾರೆ. ಅವರ ಆಶೀರ್ವಾದದಿಂದ ಗೆದ್ದಿದ್ದೀನಿ. 5 ಕೋಟಿ ವೋಟ್‌ ಬರುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಕಪ್‌ ತೆಗೆದುಕೊಂಡು ಅಮ್ಮ-ಅಪ್ಪ, ಹನುಮಪ್ಪ ದೇವರು, ಸೇವಾಲಾಲ್‌ ದೇವರ ಮುಂದಿಟ್ಟು ಆಶೀರ್ವಾದ ಪಡೆಯುತ್ತೇನೆ.

  • BBK 11: ಧನರಾಜ್‌ ಚೀಟಿಂಗ್‌- ದಿಟ್ಟ ನಿರ್ಧಾರ ಕೈಗೊಂಡ ‘ಬಿಗ್ ಬಾಸ್‌’

    BBK 11: ಧನರಾಜ್‌ ಚೀಟಿಂಗ್‌- ದಿಟ್ಟ ನಿರ್ಧಾರ ಕೈಗೊಂಡ ‘ಬಿಗ್ ಬಾಸ್‌’

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು 10 ದಿನಗಳಲ್ಲಿ ಅಂತ್ಯವಾಗಲಿದೆ. ದೊಡ್ಮನೆ ಆಟ ಸಾಕಷ್ಟು ಟ್ವಿಸ್ಟ್ ಪಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ ಧನರಾಜ್ (Dhanraj Achar) ಮಾಡಿರುವ ಚೀಟಿಂಗ್‌ನಿಂದ ಸ್ಪರ್ಧಿಗಳು ಕಷ್ಟಪಟ್ಟಿದ್ದೆಲ್ಲ ನೀರಲ್ಲಿ ಹೋಮ ಮಾಡಿದಂತೆ ಆಗಿದೆ. ಹಾಗಾಗಿ ಬಿಗ್‌ ಬಾಸ್‌ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

    ಸಂಕ್ರಾಂತಿ ಹಬ್ಬ ಎಂಬ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್ ಅನ್ನು ಒಂದು ದಿನಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಏಕಾಏಕಿ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್ ಮಾಡಿದ ಒಂದು ತಪ್ಪು. ಟಾಸ್ಕ್ ವೇಳೆ ಧನರಾಜ್ ಅವರು ಮೋಸ ಮಾಡಿದ್ದಾರೆ ಎಂಬ ಕಾರಣದಿಂದ ಮಿಡ್‌ ವೀಕ್ ಎಲಿಮಿನೇಷನ್‌ ಪ್ರಕ್ರಿಯೆನೇ ರದ್ದಾಗಿದೆ. ಟಾಸ್ಕ್ ವೇಳೆ ಕನ್ನಡಿ ನೋಡಿಕೊಂಡು ಧನರಾಜ್‌ ಮೋಸ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಒಟ್ಟಿನಲ್ಲಿ ಆ ಕಾರಣವನ್ನು ನೀಡಿ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ.

    ಟಾಸ್ಕ್ ವೇಳೆ ತಪ್ಪಾಗಿದೆ ಎಂಬ ಕಾರಣವನ್ನು ಧನರಾಜ್ ಅವರು ಇಮ್ಯುನಿಟಿಯನ್ನು ಹಿಂಪಡೆಯಲಾಗಿದೆ. ಹಾಗಾಗಿ ಈ ವಾರ ನಾಮಿನೇಟ್ ಆಗಿದ್ದಾರೆ. ಒಟ್ಟು 7 ಮಂದಿ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಅವರಲ್ಲಿ ಇಬ್ಬರು ಈ ವಾರ ನಾಮಿನೇಟ್ ಆಗುವುದು ಖಚಿತ. ಆದರೆ ಯಾವಾಗ ಎಲಿಮಿನೇಷನ್ ನಡೆಯಲಿದೆ ಯಾವ ರೀತಿ ನಡೆಯಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

    ಇನ್ನೂ ಟಾಸ್ಕ್‌ನಲ್ಲಿ ಮೋಸ ಆಗಿದೆ ಎಂಬ ಆರೋಪ ಬಂದಿದ್ದರಿಂದ ಅವರು ಅಳಲು ಆರಂಭಿಸಿದರು. ತಮ್ಮನ್ನು ಕೂಡ ನಾಮಿನೇಟ್ ಮಾಡಿ ಎಂದು ‘ಬಿಗ್ ಬಾಸ್’ ಬಳಿ ಮನವಿ ಮಾಡಿಕೊಂಡರು. ಮತ್ತೆ ಹೊಸದಾಗಿ ನಾಮಿನೇಷನ್ ಪ್ರತಿಕ್ರಿಯೆ ಮಾಡಲಾಗಿದೆ. ಸದ್ಯ ಕ್ಯಾಪ್ಟನ್ ಆಗಿರುವ ಹನುಮಂತ ಮಾತ್ರ ಸೇಫ್ ಆಗಿದ್ದಾರೆ. ಮಿಡ್‌ ಎಲಿಮಿನೇಷನ್‌ ಕ್ಯಾನ್ಸಲ್‌ ಆಗಿರುವ ಹಿನ್ನೆಲೆ ಈ ವಾರಾಂತ್ಯದಲ್ಲಿ ಡಬಲ್‌ ಎಲಿಮಿನೇಷನ್‌ ನಡೆಯಲಿದೆ. ಯಾವ ಇಬ್ಬರೂ ಸ್ಪರ್ಧಿಗಳಿಗೆ ಗೇಟ್‌ ಪಾಸ್‌ ಸಿಗಲಿದೆ ಎಂದು ಕಾಯಬೇಕಿದೆ.

  • BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇದೀಗ ಭಾನುವಾರ ಎಪಿಸೋಡ್‌ನಲ್ಲಿ ಹನುಮಂತ (Hanumantha) ಮತ್ತು ಧನರಾಜ್ (Dhanraj) ಫುಲ್ ಟ್ರೋಲ್ ಆಗಿರೋದನ್ನು ತೋರಿಸಿ ಸುದೀಪ್ (Sudeep) ಕಾಲೆಳೆದಿದ್ದಾರೆ. ಪತಿ ಜೊತೆ ಗೌತಮಿ ಇರುವಾಗ ಕದ್ದು ನೋಡಿದ್ದರ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ. ಈ ಕುರಿತು ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

    ಗೌತಮಿ ದಂಪತಿಯನ್ನು ಹನುಮಂತ ಮತ್ತು ಧನರಾಜ್ ನೋಡುತ್ತಿದ್ದ ರೀತಿಗೆ ಸುದೀಪ್ ಸಖತ್ ಆಗಿ ಕಾಲೆಳೆದಿದ್ದಾರೆ. ಅವರ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಅವರ ವಿಡಿಯೋಗಳನ್ನು ಬಿಗ್ ಬಾಸ್‌ನಲ್ಲಿ ಪ್ಲೇ ಮಾಡಿಸಿದ್ದಾರೆ.

    ಫ್ಯಾಮಿಲಿ ರೌಂಡ್ ವೇಳೆ, ಗೌತಮಿ ದಂಪತಿ ‘ಬಿಗ್ ಬಾಸ್’ನಲ್ಲಿ ಮದುವೆ ಆ್ಯನಿವರ್ಸರಿ ಆಚರಿಸುವ ಅವಕಾಶ ಸಿಕ್ಕಿತ್ತು. ಈ ವೇಳೆ, ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಆಗ ರೂಮ್‌ನಿಂದ ಹೊರಗೆ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕುತೂಹಲ ಇತ್ತು ಎಂದು ಕೇಳಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

    ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ನಿರೀಕ್ಷೆ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್ ಎನ್ನುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಒಂದು ವೇಳೆ, ನೀವಿಬ್ಬರು ನೋಡುವಾಗ ಏನಾದರೂ ಕಂಟೆಂಟ್ ಸಿಕ್ಕಿದ್ದರೇ ಆಗಿದ್ದಲ್ಲಿ ಏನ್ ಮಾಡುತ್ತಿದ್ದೀರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದನ್ನೇ ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ. ಧನರಾಜ್ ಮಾತಿಗೆ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ.

  • ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಬೆಂಗಳೂರು: ಬಿಗ್‌ ಬಾಸ್‌ (Bigg Boss) ಸ್ಪರ್ಧಿ ಧನರಾಜ್‌ (Dhanraj Acharya) ಅವರ ಪುತ್ರಿ ಪ್ರಸಿದ್ಧಿಗೆ ಗೋಲ್ಡ್‌ ಸುರೇಶ್‌ (Gold Suresh) ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಧನರಾಜ್‌ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

    ಧನರಾಜ್‌ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಸುರೇಶ್‌ ಅವರು ತೊಟ್ಟಿಲನ್ನು ಹಸ್ತಾಂತರ ಮಾಡಿದ್ದಾರೆ.

    ಬಿಗ್‌ ಬಾಸ್‌ನಲ್ಲಿಯಲ್ಲಿದ್ದಾಗ ಗೋಲ್ಡ್‌ ಸುರೇಶ್‌, ಧನರಾಜ್‌, ಹನುಮಂತ ಜೊತೆಯಾಗಿ ಹೆಚ್ಚು ಸಮಯ ಬೆರೆಯುತ್ತಿದ್ದರು. ಹನುಮಂತ (Hanumanthu) ಮತ್ತು ಧನರಾಜ್‌ ಅವರು ಸುರೇಶ್‌ ಅವರನ್ನು “ಮಾವ ಮಾವ” ಎಂದೇ ಕರೆಯುತ್ತಿದ್ದರು. ಇದನ್ನೂ ಓದಿ: BBK 11: ಸೊಸೆ ಹೇಗಿರಬೇಕು ಅಂತ ಸುಳಿವು ಕೊಟ್ಟ ಹನುಮಂತನ ತಾಯಿ

    ಧನರಾಜ್‌ ಮತ್ತು ಸುರೇಶ್‌ ಮಾತುಕತೆಯ ಸಮಯದಲ್ಲಿ ಮಾವನಾಗಿ ನಾನು ನಿನ್ನ ಮಗಳಿಗೆ ತೊಟ್ಟಿಲು ನೀಡುತ್ತೇನೆ ಎಂದು ಹೇಳಿದ್ದರು. ಈ ಮಾತಿನಂತೆ ಗೋಲ್ಡ್‌ ಸುರೇಶ್‌ ಧನರಾಜ್‌ ನಿವಾಸಕ್ಕೆ ಆಗಮಿಸಿ ತೊಟ್ಟಿಲನ್ನು ನೀಡಿದ್ದಾರೆ.‌

    ಬಿಗ್‌ ಬಾಸ್‌ ಮನೆಯಿಂದ ಸುರೇಶ್‌ ಅವರು ದಿಢೀರ್‌ ನಿರ್ಗಮಿಸಿದ್ದರು. 12ನೇ ವಾರದಲ್ಲಿ ನಿರ್ಗಮಿಸಿದ ಸಮಯದಲ್ಲಿ ಹಲವಾರು ಅಂತೆ ಕಂತೆ ಸುದ್ದಿಗಳು ಪ್ರಕಟವಾಗಿತ್ತು. ಈ ಅಂತೆ ಕಂತೆ ಸುದ್ದಿಗಳಿಗೆ ಸುರೇಶ್‌ ಅವರು ಸ್ಪಷ್ಟನೆ ನೀಡಿ ನಾನು ಬಿಗ್‌ ಬಾಸ್‌ ಮನೆಯಿಂದ ನಿರ್ಗಮಿಸಿದ್ದು ಯಾಕೆ ಎಂದು ತಿಳಿಸಿದ್ದರು.

    ನಾನು ಬಿಗ್‌ ಬಾಸ್‌ ಮನೆಗೆ ಹೋದರೆ ನನ್ನ ಬಿಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಎಂಬ ಯೋಚನೆ ನನಗೆ ಮೊದಲೇ ಬಂದಿತ್ತು. ಈ ಸಂದರ್ಭದಲ್ಲಿ ನನ್ನ ವ್ಯವಹಾರವನ್ನು ಪತ್ನಿಗೆ ಬಿಟ್ಟು ಹೋಗಿದ್ದೆ. ಆದರೆ ಆಕೆಗೆ ಬಿಸಿನೆಸ್ ಅನ್ನು ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ವ್ಯವಹಾರದ ಬಗ್ಗೆ ಜ್ಞಾನನೇ ಇಲ್ಲದಿರುವ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಬಿಗ್‌ ಬಾಸ್‌ ಮನೆಯಿಂದ ಹೊರ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದು ತಿಳಿಸಿದ್ದರು.

     

  • ಚಿರತೆ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ

    ಚಿರತೆ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ

    ಬೆಂಗಳೂರು: ಮಗನ ಬರ್ತ ಡೇ ಅಂಗವಾಗಿ ಬಿಗ್‍ಬಾಸ್‍ನ ಮಾಜಿ ಸ್ಪರ್ಧಿ ಧನರಾಜ್ ಚಿರತೆಯನ್ನು ದತ್ತು ಪಡೆದಿದ್ದಾರೆ.

    ಸೀಸನ್ 6ರ ಸ್ಪರ್ಧಿ ಧನರಾಜ್ ಬಿಗ್‍ಬಾಸ್ ಟ್ರೋಫಿಯನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ವೀಕ್ಷಕರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನುಗಳಿಸಿಕೊಂಡಿದ್ದರು. ಇದೀಗ ಅವರು ಮಾಡಿರುವ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧನರಾಜ್ ದಂಪತಿ ಮಗ ಅಗಸ್ತ್ಯನಿಗೆ ಒಂದು ವರ್ಷವಾಗಿರುವ ಸಂತೋಷದಲ್ಲಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.

     

    View this post on Instagram

     

    A post shared by Dhanraj CM (@dhanrajcm_official)

    ನನ್ನ ಮಗನ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ ಒಂದು ಒಳ್ಳೆ ಅರ್ಥ ಸಿಗಲೆಂದು ಹಾಗೂ ಅವನ ಜೀವನದುದ್ದಕ್ಕೂ ನೆನಪಲ್ಲಿ ಇರಲೆಂದು ಚಿರತೆಯನ್ನು ದತ್ತು ಪಡೆದಿದ್ದೇವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ನನ್ನ ಮಗನ ಹೆಸರಲ್ಲಿ ಇಂಡಿಯನ್ ಲೆಫರ್ಡ್ ಅನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದೇವೆ. ನಿಮ್ಮ ಆಶೀರ್ವಾದ ದೇವರ ಆಶೀರ್ವಾದ ಸದಾ ನನ್ನ ಮಗ ಅಗಸ್ತ್ಯನ ಮೇಲಿರಲಿ ಎಂದು ಬರೆದುಕೊಂಡು ಧನರಾಜ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Dhanraj CM (@dhanrajcm_official)

    ಹುಟ್ಟುಹಬ್ಬದ ಪಾರ್ಟಿ ಮಾಡಿ ಏಂಜಾಯ್ ಮಾಡುತ್ತಾ ಹಣ ವ್ಯಯ ಮಾಡುವ ಬದಲಾಗಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿವ ಕೆಲಸವನ್ನು ಧನರಾಜ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ನಟ ದರ್ಶನ್ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಿರಿ ಎಂದು ಮನವಿ ಮಾಡಿದ್ದರು. ಅನೇಕ ಸಲೆಬ್ರಿಟಿಗಳು, ಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಪಡೆದಿದ್ದರು. ಇದೀಗ ಮಹತ್ಕಾರ್ಯಕ್ಕೆ ಧನರಾಜ್ ಕೈ ಜೋಡಿಸುವ ಮೂಲಕವಾಗಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.

  • ತಂದೆಯಾಗೋ ಖುಷಿಯಲ್ಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ತಂದೆಯಾಗೋ ಖುಷಿಯಲ್ಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ಬೆಂಗಳೂರು: ‘ಬಿಗ್‍ಬಾಸ್ ಕನ್ನಡ ಸೀಸನ್ 6’ ಸ್ಪರ್ಧಿ ಧನರಾಜ್ ತಂದೆಯಾಗುವ ಸಂತಸದಲ್ಲಿದ್ದಾರೆ. ಇತ್ತೀಚೆಗೆ ಧನರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಪತ್ನಿ ಶಾಲಿನಿಗೆ ಸೀಮಂತ ಕಾರ್ಯ ನಡೆದಿದೆ.

    ಧನರಾಜ್ ತಾವು ತಂದೆಯಾಗುತ್ತಿರುವ ವಿಚಾರವನ್ನು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ನಟಿ ಕವಿತಾ ಗೌಡ ಧನರಾಜ್ ಪತ್ನಿಯ ಸೀಮಂತ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಧನರಾಜ್ ತಂದೆಯಾಗುವ ಖುಷಿಯಲ್ಲಿದ್ದಾರೆ.

    ಬೆಂಗಳೂರಿನಲ್ಲಿಯೇ ಸೀಮಂತ ಕಾರ್ಯಕ್ರಮ ನಡೆದಿದ್ದು, ಧನರಾಜ್ ಕುಟುಂಬಸ್ಥರು, ಸ್ನೇಹಿತರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕವಿತಾ ಮತ್ತು ಅವರ ತಾಯಿ, ತಂಗಿ  ಸೀಮಂತದಲ್ಲಿ ಭಾಗಿಯಾಗಿ ಶಾಲಿನಿಗೆ ಶುಭಹಾರೈಸಿದ್ದಾರೆ.

    ಧನರಾಜ್ ಮತ್ತು ಶಾಲಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಧನರಾಜ್ ತುಂಬಾ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಯಾಗಿ ಧನರಾಜ್ ‘ಬಿಗ್‍ಬಾಸ್ ಕನ್ನಡ ಸೀಸನ್ 6’ ರಲ್ಲಿ ಬಿಗ್ ಮನೆಯೊಳಗೆ ಎಂಟ್ರಿ ನೀಡಿದ್ದು, ಖ್ಯಾತಿ ಪಡೆದುಕೊಂಡಿದ್ದರು. ಈ ವೇಳೆ ಕವಿತಾ ಗೌಡ ಮತ್ತು ಶಶಿ, ಧನರಾಜ್ ಉತ್ತಮ ಸ್ನೇಹಿತರಾಗಿದ್ದರು.

    ಧನರಾಜ್ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾದಲ್ಲಿ ಧನರಾಜ್ ಅಭಿನಯಿಸಿದ್ದಾರೆ.