Tag: ಧನಂಜಯ ಆನೆ

  • ದುಬಾರೆ ಸಾಕಾನೆ ಶಿಬಿರದಲ್ಲಿ ಮತ್ತೆ ಧನಂಜಯ – ಕಂಜನ್‌ ಫೈಟ್‌

    ದುಬಾರೆ ಸಾಕಾನೆ ಶಿಬಿರದಲ್ಲಿ ಮತ್ತೆ ಧನಂಜಯ – ಕಂಜನ್‌ ಫೈಟ್‌

    ಮಡಿಕೇರಿ: ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಕಂಜನ್‌ (Kanjan Elephant) ಮತ್ತು ಧನಂಜಯ ಆನೆಗಳು ಮತ್ತೆ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಕಾದಾಟ ನಡೆಸಿವೆ.

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಯ ಭಾಗವಾಗಿದ್ದ ಧನಂಜಯ ಆನೆ (Dhananjaya Elephant), ಕಂಜನ್‌ ಆನೆಯನ್ನು ಅಟ್ಟಾಡಿಸಿತ್ತು. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ್ದರು. ಈ ಘಟನೆ ಮಾಸುವ ಮುನ್ನವೇ ಧನಂಜಯ ಹಾಗೂ ಕಂಜನ್ ಮತ್ತೆ ಕಾದಾಟ ನಡೆಸಿವೆ. ಇದನ್ನೂ ಓದಿ: ಸಂಸದ ಸುಧಾಕರ್ ಬಾಗಿನ ಅರ್ಪಣೆಗೆ ಆಗಮಿಸುವಷ್ಟರಲ್ಲಿ ಹೆಜ್ಜೇನು ದಾಳಿ – ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲು

    ಹೌದು. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿಂದು ಧನಂಜಯ ಆನೆ ಮತ್ತು ಕಂಜನ್ ಅನೆಗಳು ಮತ್ತೆ ಶಿಬಿರದಲ್ಲಿ ಫೈಟ್ ಮಾಡಿಕೊಂಡಿವೆ. ಬೆಳಗ್ಗೆ ಧನಂಜಯ ಆನೆ ಮತ್ತು ಕಂಜನ್ ಆನೆ ಶಿಬಿರದ ಒಳಗೆ ಹೋಗುವ ಸಂದರ್ಭ ಎರಡು ಅನೆಗಳು ಮುಖಾಮುಖಿಯಾಗಿವೆ. ದಿಢೀಋನೆ ಧನಂಜಯ ಆನೆ ಕಂಜನ್, ಆನೆ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ಶಿಬಿರದ ಕಾಂಪೌಂಡ್ ಬಳಿ ತಳಿಕೊಂಡು ಹೋಗಿ ಸೊಂಡಿಲಿನಲ್ಲಿ ಕಂಜನ್ ಆನೆಗೆ ಹೋಡೆದು ನಂತರ ತನ್ನ ದಂತದಿಂದ ಬಾಲದ ಬಳಿ ತಿವಿದು ನಂತರ ಕಾಲಿಗೂ ತಿವಿದಿದೆ. ಹೀಗಾಗಿ ಕಂಜನ್ ಆನೆಗೆ ಕಾಲಿಗೆ ಗಂಭೀರ ಗಾಯವಾಗಿದೆ.

    ಬೆಳಗ್ಗೆಯಿಂದಲ್ಲೂ ಮದದಲ್ಲಿ ಇದ್ದ ಧನಂಜಯನನ್ನು ನಿಯಂತ್ರಣ ಮಾಡಲು ಮಾವುತರು ಕಾವಾಡಿಗಳು ಪ್ರಯತ್ನ ಮಾಡಿದರು. ಅಲ್ಲದೇ ಶಿಬಿರದಲ್ಲಿ ನೂರಾರು ಪ್ರವಾಸಿಗರು ಇರುವ ಸಂದರ್ಭದಲ್ಲೇ ಸಾಕಾನೆಗಳ ಕಾದಾಟ ಆಗಿರುವುದರಿಂದ ಪ್ರವಾಸಿಗರು ಕೆಲ ನಿಮಿಷಗಳ ಕಾಲ ಆತಂಕಕ್ಕೆ ಒಳಗಾಗಿದ್ರು. ನಂತರ ಧನಂಜಯ ಆನೆಯನ್ನು ಮಾವುತರು ಕಾವೇರಿ ನದಿಯ ಬಳಿ ಕರೆದುಕೊಂಡು ಸರಪಳಿಯಿಂದ ಕಟ್ಟಿದ ನಂತರ ವಾತಾವರಣ ತಿಳಿಯಾಗಿದೆ ಎಂದು ಅರಣ್ಯ ಇಲಾಖೆಯ ಆದಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌ 

  • Mysuru Dasara | ಮೊದಲಿಂದಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    Mysuru Dasara | ಮೊದಲಿಂದಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೇ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ. ಘಟನೆ ಕುರಿತು ಪಬ್ಲಿಕ್‌ ಟಿವಿ ಜೊತೆಗೆ ಡಿಸಿಎಫ್‌ ಪ್ರಭುಗೌಡ (DCF Prabhugowda) ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.

    ಈ ಎರಡು ಆನೆಗಳು ಒಂದೇ ಶಿಬಿರದ ಆನೆಗಳು. ಅಲ್ಲೂ ಕೂಡ ಆಗಾಗ ಇವು ಜಗಳ ಆಡುತ್ತವೆ. ಅದೇ ಜಗಳ ಇಲ್ಲೂ ಮುಂದುವರಿದಿದೆ. ಊಟಕ್ಕೆ ಬಂದ ವೇಳೆ ಧನಂಜಯ, ಕಂಜನ್‌ ಮೇಲೆ ಗಲಾಟೆ ಶುರು ಮಾಡಿದ, ಆಗ ಕಂಜನ್ ಆನೆ ಮಾವುತ ಕೆಳಗೆ ಬಿದ್ದ. ನಂತರ ಧನಂಜಯ ಆನೆ ಆರ್ಭಟ ಹೆಚ್ಚಾಯ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಧನಂಜಯ ಮತ್ತು ಕಂಜನ್ ದುಬಾರೆ ಶಿಬಿರದ ಆನೆಗಳು. ಆನೆಗಳ ನಡುವಿನ ಫೈಟ್ ಇದೇ ಮೊದಲಲ್ಲ, ಕೊನೆಯೂ ಅಲ್ಲ. ಈ ಎರಡು ಆನೆಗಳು ದುಬಾರೆ ಆನೆ ಶಿಬಿರದಲ್ಲೂ ಇದೇ ರೀತಿ ಪದೇ ಪದೇ ಜಗಳವಾಡುತ್ತವೆ. ಒಂದು ಬಾರಿ ಕಂಜನ್ ಆನೆ ಧನಂಜಯ ಆನೆ ಮೇಲೆ ಅಟ್ಯಾಕ್ ಮಾಡಿದರೆ ಮತ್ತೊಂದು ಬಾರಿ ಧನಂಜಯ, ಕಂಜನ್ ಮೇಲೆ ಅಟ್ಯಾಕ್ ಮಾಡ್ತಾನೆ. ಅಲ್ಲದೇ ಗಂಡಾನೆಗಳು ಆಗಾಗ್ಗೆ ಶೌರ್ಯ ಪ್ರದರ್ಶನ ಮಾಡೋದು, ತುಂಟಾಟ ಆಡೋದು ಕಾಮನ್‌, ಅವರಲ್ಲವನ್ನೂ ಕಂಟ್ರೋಲ್‌ ಮಾಡುವ ಸಾಮರ್ಥ್ಯ ನಮ್ಮ ಮಾವುರಿಗೆ ಇದೆ ಎಂದು ಹೇಳಿದ್ದಾರೆ.

    ನಿನ್ನೆ ಬ್ಯಾರಿಕೇಡ್‌ ಓಪನ್‌ ಇದ್ದ ಕಾರಣ ಕಂಜನ್‌ ಅದನ್ನ ತಳ್ಳಿಕೊಂಡು ಹೋಗಿದ್ದಾನೆ. ಹೊರಗೆ ಜನಸಮೂಹ ನೋಡಿದ ಕೂಡಲೇ ತಣ್ಣಗಾಗಿದ್ದಾನೆ. ಅಷ್ಟರಲ್ಲಿ ನಮ್ಮ ಮಾವುತರು ಕಂಟ್ರೋಲ್‌ ಮಾಡಿದ್ದಾರೆ. ಕಂಜನ್‌ ಆನೆ ಓಡುವ ಸ್ಪೀಡ್‌ಗೆ ಮಾವುತ ಜಿಗಿದೇ ಬಿಟ್ಟ. ಆದ್ರೆ ಧನಂಜಯ ಆನೆ ಮಾವುತನ ಧೈರ್ಯ ಮೆಚ್ಚಲೇಬೇಕು. ಆನೆ ಓಡಿದರೂ ಅದರ ಮೇಲೆ ಕುಳಿತು ಕಂಟ್ರೋಲ್‌ ಮಾಡುವ ಕೆಲಸ ಮಾಡಿಲ್ಲ. ದೇವರ ದಯೆಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

    ಏನಾಗಿತ್ತು?
    ವಿಶ್ವವಿಖ್ಯಾತ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ. ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.

    ದಸರಾದಲ್ಲಿ 18 ಆನೆಗಳು ಭಾಗಿ:
    ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

  • Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

    Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

    ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್‌ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ.

    ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.

    ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯು ರಾತ್ರಿ 8ರ ಸುಮಾರು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌- ಹಿಜ್ಬುಲ್ಲಾ ಟಾಪ್‌ ಕಮಾಂಡರ್‌ ಹತ್ಯೆ

    ವೀಡಿಯೋ ಮಾಡಿದ ಪ್ರತ್ಯಕ್ಷದರ್ಶಿ ಏನಂತಾರೆ?
    ಅರಮನೆ ಆವರಣದ ಒಳಗೆ ಇದ್ದ ದಸರಾ ಆನೆ ಧನಂಜಯ ಏಕಾಏಕಿ ಮತ್ತೊಂದು ಆನೆ ಕಂಜನ್‌ ಮೇಲೆ ದಾಳಿ ಮಾಡಿ ಅಟ್ಟಾಡಿಸುವ ವೀಡಿಯೋ ತೆಗೆದಿದ್ದು ಅರಮನೆಯ ಗೈಡ್ ಯೋಗೇಶ್. ಇನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ದಸರಾದಲ್ಲಿ 18 ಆನೆಗಳು ಭಾಗಿ:
    ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇನ್ನೂ ಓದಿ: 6 ರನ್‌ ಹೊಡೆದು ಭಾರತದ ಪರ ವಿಶಿಷ್ಟ ಸಾಧನೆ ನಿರ್ಮಿಸಿ ಸಚಿನ್‌, ಪಾಂಟಿಂಗ್‌ ಕ್ಲಬ್‌ ಸೇರಿದ ಕೊಹ್ಲಿ