Tag: ಧನಂಜಯ್

  • ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ಬೆಂಗಳೂರು: ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಹಾಗೇ ಗುಳಿಕೆನ್ನೆ ಬೆಡಗಿ ನಟಿ ರಚಿತಾ ರಾಮ್ ಜೊತೆ ಲಿಪ್‍ಲಾಕ್ ಮಾಡುತ್ತೀನಿ ಎಂದು ಸ್ಯಾಂಡಲ್ ವುಡ್ ನಟರೊಬ್ಬರು ಹೇಳಿದ್ದಾರೆ.

    ರಚಿತಾ ರಾಮ್ ಸ್ಯಾಂಡಲ್‍ ವುಡ್‍ನ ಟಾಪ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡು ಯಶಸ್ವಿಯಾಗಿದ್ದಾರೆ. ಈಗ ಇವರಿಗೆ ಥೇಟರ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ `ಟಗರು’ ಸಿನಿಮಾದ ಡಾಲಿ ಅಲಿಯಾಸ್ ಧನಂಜಯ್ ಅವರು ಲಿಪ್ ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ‘ನಂ 1 ಯಾರಿ’ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದ ಧನಂಜಯ್, ವಸಿಷ್ಠ ಮತ್ತು ಮಾನ್ವಿತಾ ಹರೀಶ್ ಬಂದಿದ್ದರು. ಈ ವೇಳೆ ಟಗರು ಶಿವ ಶಿವರಾಜ್ ಕುಮಾರ್ ಕೇಳಿರುವ ತರ್ಲೆ ಪ್ರಶ್ನೆಗಳಿಗೆ ಡಾಲಿ, ಚಿಟ್ಟೆ ಉತ್ತರ ನೀಡಿದ್ದಾರೆ. ಅದರಲ್ಲಿಯೂ ಲಿಪ್ ಲಾಕ್ ದೃಶ್ಯದ ಬಗ್ಗೆ ಧನಂಜಯ್ ಯಾವುದೇ ಮುಜುಗರ, ಸಂಕೋಚ ಇಲ್ಲದೆ ಮಾತನಾಡಿದ್ದಾರೆ.

    ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ `ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಗೆ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ?’ ಎಂದು ಧನಂಜಯ್ ಗೆ ಪ್ರಶ್ನೆ ಕೇಳಿದ್ದಾರೆ. ಆಗ ಧನಂಜಯ್ ದೀಪಿಕಾ ಪಡುಕೋಣೆ ಎಂದು ಹೇಳಿದ್ದರು. ಮತ್ತೆ ಶಿವಣ್ಣ ‘ಓಕೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಆದರೆ ಕನ್ನಡದಲ್ಲಿ ಯಾರು?” ಎಂದು ಕೇಳಿದರು. ಆಗ ಧನಂಜಯ್ ರಚಿತಾ ರಾಮ್ ಅವರ ಹೆಸರನ್ನು ಹೇಳಿದ್ದಾರೆ.

  • ರಾಮನಗರಕ್ಕೆ ಟಗರು ಟೀಂ ಭೇಟಿ – ಶಿವಣ್ಣನ ನೋಡಲು ಮುಗಿಬಿದ್ದ ಅಭಿಮಾನಿಗಳು

    ರಾಮನಗರಕ್ಕೆ ಟಗರು ಟೀಂ ಭೇಟಿ – ಶಿವಣ್ಣನ ನೋಡಲು ಮುಗಿಬಿದ್ದ ಅಭಿಮಾನಿಗಳು

    ರಾಮನಗರ: ಸ್ಯಾಂಡಲ್‍ವುಡ್‍ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರದ ಪ್ರಮೋಶನ್‍ಗೆ ನಟ ಶಿವರಾಜ್‍ಕುಮಾರ್ ಹಾಗೂ ಧನಂಜಯ್ ರಾಮನಗರಕ್ಕೆ ಭೇಟಿ ನೀಡಿದ್ದಾರೆ.

    ರಾಮನಗರ ಮಾತ್ರವಲ್ಲದೇ ಕನಕಪುರ ಹಾಗೂ ಚನ್ನಪಟ್ಟಣ ಚಿತ್ರಮಂದಿರಗಳಿಗೆ ಶಿವರಾಜ್‍ಕುಮಾರ್ ಹಾಗೂ ಧನಂಜಯ್ ಭೇಟಿ ನೀಡಿದರು. ಈ ವೇಳೆ ಅಭಿಮಾನಿಗಳು ನಟರನ್ನ ನೋಡಲು ಮುಗಿಬಿದ್ದರು. ರಾಮನಗರದ ಶಾನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಶಿವರಾಜ್‍ಕುಮಾರ್ ಗೆ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ರು.

    ಅಭಿಮಾನಿಗಳು ಶಿವಣ್ಣನ ಆಗಮನಕ್ಕೆ ಪಟಾಕಿ ಸಿಡಿಸಿ, ಹೂವಿನ ಹಾರವನ್ನು ಹಾಕಿ, ಕೇಕ್ ಕಟ್ ಮಾಡಿಸುವುದರ ಮೂಲಕ ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಮಾತನಾಡಿದ ಶಿವಣ್ಣ, ಟಗರು ಚಿತ್ರದ ಯಶಸ್ಸನ್ನ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದೇನೆ. ಎಲ್ಲೆಡೆ ಚಿತ್ರದ ಬಗ್ಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರ ಎಲ್ಲರಿಗೂ ಸಹ ಇಷ್ಟವಾಗುತ್ತದೆ ಎಂದು ಹೇಳಿದ್ರು.

    ಇದೇ ವೇಳೆ ಚಿತ್ರದ ಖಳನಟ ಧನಂಜಯ್ ಮಾತನಾಡಿ, ನಾನು ಎಲ್ಲೇ ಹೋದರೂ ಇದೀಗ ಡಾಲಿ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಭಿಮಾನಿಗಳ ರೆಸ್ಪಾನ್ಸ್ ಗೆ ಸಕತ್ ಖುಷಿಯಾಗುತ್ತಿದೆ. ಅಲ್ಲದೇ ಶಿವಣ್ಣನ ಜೊತೆ ನಟನೆ ಮಾಡಿರೋದು ತುಂಬಾ ಸಂತಸ ನೀಡಿದೆ ಎಂದು ಆನಂದವನ್ನು ಹಂಚಿಕೊಂಡ್ರು.

  • ಗುರುಪ್ರಸಾದ್-ಧನಂಜಯ್ ನಡುವಿನ ಗುದ್ದಾಟಕ್ಕೆ ಇದೇ ಕಾರಣ

    ಗುರುಪ್ರಸಾದ್-ಧನಂಜಯ್ ನಡುವಿನ ಗುದ್ದಾಟಕ್ಕೆ ಇದೇ ಕಾರಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ನಿರ್ದೇಶಕ ಗುರುಪ್ರಸಾದ್ ಅವರು ಸುಮ್ಮನೇ ಕೂರುವಂತೆ ಕಾಣುತ್ತಿಲ್ಲ. ಇತ್ತೀಚಿಗೆ ಗುರುಪ್ರಸಾದ್ ಚಿತ್ರದ ಪ್ರಮೋಷನ್ ನೆಪದಲ್ಲಿ ಫೇಸ್‍ಬುಕ್ ಲೈವ್ ಚಾಟ್‍ನಲ್ಲಿ ಎರಡನೇ ಸಲ ಚಿತ್ರದ ನಾಯಕ ಧನಂಜಯ್ ವಿರುದ್ಧ ಗುಡುಗಿದ್ದಾರೆ.

    ಇಷ್ಟುದಿನ `ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಮತ್ತು ನಿರ್ದೇಶಕ ಗುರುಪ್ರಸಾದ್ ನಡುವೆ ವೈಮನಸ್ಸು ಉಂಟಾಗಿತ್ತು. ಯೋಗೇಶ್‍ಗೌಡ ಅವರು ಗುರುಪ್ರಸಾದ್ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದರು. ಕೊನೆಗೆ ಫಿಲ್ಮ್ ಛೇಂಬರ್ ಇಬ್ಬರನ್ನು ಕರೆಸಿ ಬುದ್ದಿವಾದ ಹೇಳಿತ್ತು. ಗುರುಪ್ರಸಾದ್ ಚಿತ್ರದ ಪ್ರಮೋಷನ್‍ಗೆ ಬರುತ್ತೇನೆ ಎಂದು ಫಿಲ್ಮ್ ಛೇಂಬರ್‍ನಲ್ಲಿ ಒಪ್ಪಿಕೊಂಡಿದ್ದರು.

    ಫಿಲ್ಮ್ ಛೇಂಬರ್‍ನಲ್ಲಿ ಕೊಟ್ಟ ಮಾತಿನಂತೆ ಗುರುಪ್ರಸಾದ್ ಚಿತ್ರದ ಪ್ರಚಾರಕ್ಕಾಗಿ ಅಭಿಮಾನಿಗಳ ಜೊತೆ ಫೇಸ್‍ಬುಕ್ ನಲ್ಲಿ ಲೈವ್ ಚಾಟ್‍ಗೆ ಇಳಿದಿದ್ದರು. ಚಾಟ್‍ನಲ್ಲಿ ಯೋಗೇಶ್‍ಗೌಡರ ವಿರುದ್ಧ ಗುಡುಗಬಹುದು ಅಂದುಕೊಂಡಿದ್ದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದರು. ಗುರುಪ್ರಸಾದ್ ತಮ್ಮ ಶಿಷ್ಯ, ನಟ ಧನಂಜಯ್ ವಿರುದ್ಧ ಗುಡುಗಿದ್ದಾರೆ.

    ಧನಂಜಯ್ ನನಗೆ ಗುರು ದ್ರೋಹ ಮಾಡಿದ್ದಾನೆ. ಅವನಿಗೆ ಆಕ್ಟಿಂಗ್ ಹೇಳಿಕೊಟ್ಟಿದ್ದೇ ನಾನು. ಈಗ ನನ್ನನ್ನೇ ಏಕವಚದಲ್ಲಿ ಗುರು ಎಂದು ಕರೆಯುತ್ತಾನೆ. ಇವನನ್ನು ಗೊಡ್ಡ ಹಸು ಎನ್ನುತ್ತಾರೆ. ಇವನನ್ನು ಹಾಕ್ಕೊಂಡು ಸಿನಿಮಾ ಮಾಡಿರುವ ನಿರ್ಮಾಪಕರೆಲ್ಲ ಲಾಸ್ ಆಗಿದ್ದಾರೆ ಎಂದು ಗುರುಪ್ರಸಾದ್ ಆರೋಪ ಮಾಡಿದ್ದಾರೆ.

    ಗುರುಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯಿಸಿದ ಧನಂಜಯ್, ನಾನು ಎಂದಿಗೂ ಗುರುದ್ರೋಹ ಮಾಡಿಲ್ಲ. ತಾನು ಬೆಳೆದ ಸಂಸ್ಕøತಿ ಎಂತಹದ್ದು..! ನನಗೆ ನಟನೆ ಹೇಳಿಕೊಟ್ಟಿದ್ಯಾರು..? ಎಲ್ಲದ್ದಕ್ಕೂ ಉತ್ತರಿಸಿದ್ರು. ಜೊತೆಗೆ ನನ್ನ ಚಿತ್ರದ ಪ್ರೊಡ್ಯೂಸರ್‍ಗಳ ಬಗ್ಗೆ ಮಾತನಾಡುತ್ತಿದ್ದಿರಲ್ಲ. ಈಗ ನೀವು ಮಾಡಿದ ಮೂರು ಸಿನಿಮಾದ ಪ್ರೊಡ್ಯೂಸರಗಳನ್ನ ನಾ ಬಲ್ಲೆ ಎಂದು ಗುರುವಿಗೆ ತಿರುಗೇಟು ನೀಡಿದರು.

    `ಎರಡನೇ ಸಲ’ ಸಿನಿಮಾದ ಪ್ರಚಾರಕ್ಕೆ ಧನಂಜಯ್ ಹೋಗಿರುವುದೇ ಗುರುಪ್ರಸಾದ್ ಕೋಪ ತರಿಸಲು ಕಾರಣವಂತೆ. ಚಿತ್ರದ ಕಲಾವಿಧರಿಗೆ ನೀವ್ಯಾರೂ ಪ್ರಚಾರಕ್ಕೆ ಹೋಗಬೇಡಿ ಸಿನಿಮಾ ಹಾಳಾಗ್ ಹೋಗಲಿ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದರು ಎಂಬ ಗಾಳಿಸುದ್ದಿ ಗಾಂಧಿನಗರದಲ್ಲಿ ಈಗ ಹರಿದಾಡುತ್ತಿದೆ.