Tag: ದ್ವೀಪ

  • ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲಿ 5.9 ತೀವ್ರತೆ ಭೂಕಂಪನ

    ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲಿ 5.9 ತೀವ್ರತೆ ಭೂಕಂಪನ

    ಪೋರ್ಟ್‌ಬ್ಲೇರ್‌: ಅಂಡಮಾನ್‌ ಮತ್ತು ನಿಕೋಬಾರ್‌ (Andaman And Nicobar) ದ್ವೀಪಗಳ ಪೋರ್ಟ್‌ ಬ್ಲೇರ್‌ ಬಳಿ 5.9 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ (National Center For Seismology) ತಿಳಿಸಿದೆ.

    ರಾಜಧಾನಿ ಪೋರ್ಟ್ ಬ್ಲೇರ್‌ನ (Port Blair) ಆಗ್ನೇಯಕ್ಕೆ 126 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ಭೂಕಂಪನದ ತೀವ್ರತೆ ಕಂಡುಬಂದಿದೆ. ಇದನ್ನೂ ಓದಿ: ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ಭೂಕಂಪನವು ಮಧ್ಯರಾತ್ರಿ 12:53ಕ್ಕೆ ಐಎಸ್‌ಟಿ ಮೇಲ್ಮೈಯಿಂದ 69 ಕಿಮೀ ಆಳದಲ್ಲಿ, 10.75 ಅಕ್ಷಾಂಶ ಮತ್ತು 93.47 ರೇಖಾಂಶದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಟಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬೆತ್ತಲೆ ವಿಡಿಯೋ ಶೇರ್ ಮಾಡಿದ ನಟ ರಯಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮರ್ಪಣೆಗೊಂಡ ಜಲಾಂತರ್ಗಾಮಿ ನಿರೋಧಕ ಹಡಗಿಗೆ ಕಾರವಾರದ ದ್ವೀಪದ ಹೆಸರಿಟ್ಟ ಭಾರತೀಯ ನೌಕಾಪಡೆ – ಏನಿದರ ವಿಶೇಷತೆ?

    ಸಮರ್ಪಣೆಗೊಂಡ ಜಲಾಂತರ್ಗಾಮಿ ನಿರೋಧಕ ಹಡಗಿಗೆ ಕಾರವಾರದ ದ್ವೀಪದ ಹೆಸರಿಟ್ಟ ಭಾರತೀಯ ನೌಕಾಪಡೆ – ಏನಿದರ ವಿಶೇಷತೆ?

    ಕಾರವಾರ: ಭಾರತೀಯ ನೌಕಾ ಪಡೆಗೆ (Indian Navy) ಸೇರ್ಪಡೆಯಾಗಿರುವ ಜಲಾಂತರ್ಗಾಮಿ ನಿರೋಧಕ ಶೆಲ್ಲೋ ವಾಟರ್ ಕ್ರಾಫ್ಟ್ (SWC) ನೌಕೆಗೆ ಕಾರವಾರದ ಅಂಜುದೀವ್ (Anjediva) ಎಂಬ ಐತಿಹಾಸಿಕ ದ್ವೀಪದ ಹೆಸರಿಡಲಾಗಿದೆ.

    ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಆ್ಯಂಡ್ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಿನ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನೌಕೆಯನ್ನು ನಿರ್ಮಾಣ ಮಾಡಲಾದ ಹಡಗಿಗೆ, ಬುಧವಾರ ಚೆನ್ನೈನ ಕಟ್ಟುಪಲ್ಲಿಯಲ್ಲಿ ನೌಕೆಯನ್ನು ನೀರಿಗಿಳಿಸಿ ಲೋಕಾರ್ಪಣೆ ಮಾಡಲಾಗಿದೆ. 2019 ರಲ್ಲಿ ಈ ಸಂಬಂಧ ರಕ್ಷಣಾ ಇಲಾಖೆ ಹಾಗೂ ಕಂಪನಿಯ ಜತೆ ಒಪ್ಪಂದವಾಗಿತ್ತು. ಇದುವರೆಗೆ ಇದೇ ಮಾದರಿಯ 2 ಹಡಗುಗಳನ್ನು ನೌಕಾಪಡೆಗೆ ಸೇರಿಸಲಾಗಿದ್ದು, ಇದು 3ನೇ ಹಡಗಾಗಿದೆ. 77ಮೀಟರ್ ಉದ್ದವಿರುವ ಈ ಹಡಗು ಅತ್ಯಾಧುನಿಕ ಯುದ್ಧ ತಂತ್ರಜ್ಞಾನ, ಶಸ್ತ್ರಗಳನ್ನು ಹೊಂದಿದೆ. ಇದು ಗಂಟೆಗೆ 25 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು.

    ಕರ್ನಾಟಕದ ಊರುಗಳ ಹೆಸರುಗಳಲ್ಲಿವೆ ನೌಕೆಗಳು: ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಐಎನ್‌ಎಸ್ ಕಾರವಾರ, ಐಎನ್‌ಎಸ್ ಮೈಸೂರು ಹೀಗೆ ಕರ್ನಾಟಕದ ಊರುಗಳ ಹೆಸರಿನ ಹಲವು ನೌಕೆಗಳು ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿವೆ.

    ಎಲ್ಲಿದೆ ಅಂಜುದೀವ್?: ಕಾರವಾರ ನಗರದ ಬಿಣಗಾದಿಂದ ಸಮುದ್ರದಲ್ಲಿ ಸುಮಾರು 3 ಕಿ.ಮೀ ದೂರದಲ್ಲಿರುವುದು ಅಂಜುದೀವ್ ಎಂಬ ಪುಟ್ಟ ದ್ವೀಪ ಕೇವಲ 150 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಕಾರವಾರದ (Karwar) ಕಣ್ಣಳತೆಯಲ್ಲೇ ಇದ್ದರೂ ಈ ದ್ವೀಪ ತೀರ ಇತ್ತೀಚಿನವರೆಗೆ ಗೋವಾ ರಾಜ್ಯಕ್ಕೆ ಸೇರಿತ್ತು. 2005 ರಿಂದ ಈ ದ್ವೀಪ ಕದಂಬ ನೌಕಾನೆಲೆಯ ವ್ಯಾಪ್ತಿಗೆ ಸೇರಿತು. ದ್ವೀಪಕ್ಕೆ ನೌಕಾಸೇನೆಯು ದಡದಿಂದ ಅಲೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ವಾಹನ ಓಡಾಟದ ವ್ಯವಸ್ಥೆ ಮಾಡಲಾಗಿದೆ. ವಾಸ್ಕೋಡಿಗಾಮ ಸಹ ಈ ದ್ವೀಪದಲ್ಲಿ ತಂಗಿದ್ದ ಇತಿಹಾಸ ಇದೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

    ಅಂಜುದೀವ್ ರೋಚಕ ಇತಿಹಾಸ: ಇದು ತನ್ನ ಒಡಲಲ್ಲಿ ರೋಚಕವಾದ ಇತಿಹಾಸವನ್ನು ಇಟ್ಟುಕೊಂಡಿದೆ. ಕಾರವಾರವಾದ ಜೊತೆ ಅಂಜುದೀವ್ ದ್ವೀಪ ಅವಿನಾಭಾವ ಸಂಬಂಧ ಹೊಂದಿತ್ತು. ಕಾರವಾರಕ್ಕೆ 1,400 ವರ್ಷಗಳ ಇತಿಹಾಸವಿರುವ ದಾಖಲೆಗಳು ಸಿಗುತ್ತವೆ ಎನ್ನುತ್ತಾರೆ ಇತಿಹಾಸಕಾರರು.

    1498 ಕ್ಕೂ ಪೂರ್ವ ಇಲ್ಲಿ ಪೋರ್ಚುಗೀಸರು ನೆಲೆ ಸ್ಥಾಪಿಸಿದರು ಎನ್ನಲಾಗುತ್ತದೆ. ಹಿಂದೂ ಹಾಗೂ ಕ್ಯಾಥೋಲಿಕ್ ಧರ್ಮೀಯರ ಆಸ್ತೆಯ ಐತಿಹಾಸಿಕ ಕೇಂದ್ರಕ್ಕೆ ಈಗ ಭಾರತೀಯ ನೌಕಾಸೇನೆ ಗೌರವ ನೀಡಿದೆ. ಇಲ್ಲಿ ಅಂಜನಾದೇವಿಯ ಮಂದಿರವಿತ್ತು ಎನ್ನಲಾಗುತ್ತದೆ. ಈ ದ್ವೀಪದಲ್ಲಿ ಲೇಡೀಸ್ ಆಫ್ ಸ್ಪಂಗ್ ಚರ್ಚ್ ಹಾಗೂ ಹಲವು ಸ್ಮಾರಕಗಳು ಈಗಲೂ ಇವೆ. ಈ ಹಿಂದೆ ವರ್ಷಕ್ಕೊಮ್ಮೆ ಪೇಸ್ತು (ಕ್ರಿಶ್ವಿಯನ್ ಧಾರ್ಮಿಕ ಹಬ್ಬ) ಆಗುತ್ತಿತ್ತು. ಅದಕ್ಕೆ ಪ್ರವೇಶ ನೀಡುವಂತೆ ಗೋವಾದ ಕೆಲವು ಕ್ಯಾಥೋಲಿಕ್ ಮುಖಂಡರು ನಿರಂತರವಾಗಿ ಒತ್ತಾಯಿಸುತ್ತ ಬಂದಿದ್ದಾರೆ. ಮಾತ್ರವಲ್ಲ ಆ ಸಂಬಂಧ ಗೋವಾದ ನಾಗರಿಕರೊಬ್ಬರು ಪೋರ್ಚುಗಲ್ ಪ್ರಧಾನಿಗೆ ಪತ್ರ ಬರೆದಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಭದ್ರತೆಯ ದೃಷ್ಟಿಯಿಂದ ಇಲ್ಲಿ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ ಏಳೂವರೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ!

  • 21 ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರು – ಬೋಸ್ ರಾಷ್ಟ್ರೀಯ ಸ್ಮಾರಕದ ಮಾದರಿ ಅನಾವರಣಗೊಳಿಸಿದ ಮೋದಿ

    21 ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರು – ಬೋಸ್ ರಾಷ್ಟ್ರೀಯ ಸ್ಮಾರಕದ ಮಾದರಿ ಅನಾವರಣಗೊಳಿಸಿದ ಮೋದಿ

    ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (Andaman and Nicobar Islands) 21 ದೊಡ್ಡ ಹೆಸರಿಸದ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಮವೀರ ಚಕ್ರ (Param Vir Chakra) ಪಡೆದ ಸೈನಿಕರ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಪರಾಕ್ರಮ ದಿವಸ್ (Parakram Diwas) ಭಾಗವಾಗಿ ಸೈನಿಕರಿಗೆ ಗೌರವ ಸಲ್ಲಿಸಲು ದ್ವೀಪಗಳಿಗೆ ಸೈನಿಕರ ಹೆಸರಿಡಲಾಗಿದೆ.

    ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ನರೇಂದ್ರ ಮೋದಿ, ರಾಸ್ ಐಲ್ಯಾಂಡ್ಸ್ ಎಂದು ಕರೆಯಲಾಗುತ್ತಿದ್ದ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರಬೋಸ್ (Netaji Subash Chandra Bose) ಎಂದು ಮರುನಾಮಕರಣ ಮಾಡಿದ್ದು ಅಲ್ಲಿ ಅವರ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಅನಾವರಣಗೊಳಿಸಿದರು. ಅಂಡಮಾನ್ ಭೂಮಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಭೂಮಿ. ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು. ಇಂದು ನೇತಾಜಿ ಸುಭಾಷ್ ಬೋಸ್ ಅವರ ಜನ್ಮದಿನ. ದೇಶವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುತ್ತದೆ ಇದೊಂದು ಐತಿಹಾಸಿಕ ದಿನ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

    ದ್ವೀಪಗಳಿಗೆ ಪರಮವೀರ ಚಕ್ರ ಪಡೆದ ಸೈನಿಕರ ಹೆಸರಿಡುವ ಬಗ್ಗೆ ಮಾತನಾಡಿ, ದೇಶದ ನಿಜ ಜೀವನದ ಹೀರೋಗಳಿಗೆ ಸರಿಯಾದ ಗೌರವವನ್ನು ನೀಡುವುದು ಯಾವಾಗಲೂ ಪ್ರಧಾನ ಮಂತ್ರಿಯಿಂದ ಹೆಚ್ಚಿನ ಆದ್ಯತೆಯನ್ನು ಪಡೆದಿದೆ. ಈ ಸ್ಫೂರ್ತಿಯೊಂದಿಗೆ ಮುಂದುವರಿಯುತ್ತಾ, ದ್ವೀಪ ಸಮೂಹದ 21 ದೊಡ್ಡ ಹೆಸರಿಸದ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    ಸುಭಾಷ್ ಚಂದ್ರ ಬೋಸ್ ರಾಷ್ಟ್ರೀಯ ಸ್ಮಾರಕ ಮ್ಯೂಸಿಯಂ, ಕೇಬಲ್ ಕಾರ್ ರೋಪ್‍ವೇ, ಲೇಸರ್ ಮತ್ತು ಸೌಂಡ್ ಶೋ, ಐತಿಹಾಸಿಕ ಕಟ್ಟಡಗಳ ಮೂಲಕ ಮಾರ್ಗದರ್ಶಿ ಹೆರಿಟೇಜ್ ಟ್ರಯಲ್ ಮತ್ತು ಥೀಮ್ ಆಧಾರಿತ ಮಕ್ಕಳ ಅಮ್ಯೂಸ್‍ಮೆಂಟ್ ಪಾರ್ಕ್ ಜೊತೆಗೆ ರೆಸ್ಟ್ರೋ ಲಾಂಜ್ ಅನ್ನು ಹೊಂದಿರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್

    ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್

    ಕೊಲಂಬೊ: ಈಗಾಗಲೇ ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾಕ್ಕೆ ಭಾರತ ಸಹಾಯಹಸ್ತ ನೀಡಿದ ಬಳಿಕವೂ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದೆ. ಹಾಗಾಗಿ ಮುಂದಿನ ವಾರದಿಂದ ಶಾಲೆಗಳನ್ನು ಬಂದ್‌ ಮಾಡುವುದಾಗಿ ಲಂಕಾ ಶಿಕ್ಷಣ ಸಚಿವಾಲಯ ಘೋಷಿಸಿದೆ.

    ಶಾಲಾ- ಕಾಲೇಜುಗಳೊಂದಿಗೆ ಸಾರ್ವಜನಿಕ ವಲಯ ಕಚೇರಿಗಳನ್ನೂ ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಶ್ರೀಲಂಕಾ ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಮುಂದಿನ ವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಶ್ರೀಲಂಕಾ ತನ್ನ ಆಮದುಗಳಿಗೆ ಪಾವತಿಸಲು, ವಿದೇಶಿ ವಿನಿಮಯ ಪಡೆಯಲು ತೀವ್ರ ಒತ್ತಡದಲ್ಲಿದೆ. ಇದು ದೇಶದ ಆರ್ಥಿಕತೆಯ ಹಲವಾರು ಕ್ಷೇತ್ರಗಳಿಗೂ ಹಿನ್ನಡೆ ಉಂಟುಮಾಡುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

    Live Tv

  • 33 ದಿನ ದ್ವೀಪದಲ್ಲಿ ಇಲಿ ತಿಂದು ಬದುಕಿದ ಪ್ರವಾಸಿಗರ ರಕ್ಷಣೆ

    33 ದಿನ ದ್ವೀಪದಲ್ಲಿ ಇಲಿ ತಿಂದು ಬದುಕಿದ ಪ್ರವಾಸಿಗರ ರಕ್ಷಣೆ

    ವಾಷಿಂಗ್ಟನ್: ಬಹಾಮಾಸ್ ದ್ವೀಪಕ್ಕೆ ಪ್ರವಾಸ ತೆರಳಿದ ದೋಣಿ ಅಪಘಾತವಾಗಿ ಅಪಾಯಕ್ಕೆ ಸಿಲುಕಿ, 33 ದಿನಗಳ ಕಾಲ ಇಲಿ ಮತ್ತು ತೆಂಗಿನಕಾಯಿ ತಿಂದು ಬದುಕಿದ ಮೂವರನ್ನು ರಕ್ಷಿಸಲಾಗಿದೆ.

    ಅಮೆರಿಕ ಕೋಸ್ಟ್ ಗಾರ್ಡ್ ಎಫ್ ಕಳೆದ 33 ದಿನಗಳಿಂದ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದ, ಮಹಿಳೆ ಮತ್ತು ಇಬ್ಬರು ಪುರುಷರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ. ಕೋಸ್ಟ್ ಲೆಫ್ಟಿನೆಂಟ್ ಜಸ್ಟಿನ್ ಡೌಘರ್ಟಿ ತಿಳಿಸಿರುವ ಪ್ರಕಾರ ಮೂರು ಬಣ್ಣದ ಬಾವುಟಗಳು ದ್ವೀಪದಲ್ಲಿ ಕಾಣಿಸುತ್ತಿತ್ತು. ಇದನ್ನು ಗಮನಿಸಿ ಪರಿಶೀಲಿಸಿದಾಗ ಬಾವುಟದಲ್ಲಿ ಮೂರು ಜನರು ಸಹಿ ಹಾಕಿ ಅಪಾಯದಲ್ಲಿರುವುದನ್ನು ತಿಳಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ರಕ್ಷಣಾ ತಂಡ ಅವರನ್ನು ಸುರಕ್ಷಿತವಾಗಿ ದ್ವೀಪದಿಂದ ಕರೆತರಲಾಗಿದೆ ಎಂದಿದ್ದಾರೆ.

    ರಕ್ಷಣಾ ಕಾರ್ಯಚರಣೆ ಮಾಡಿ ಮೂವರನ್ನು ಫ್ಲೋರಿಡಾದ ಕೀ ವೆಸ್ಟ್ ಲೋವರ್ ಕೀಸ್ ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅವರು ದೇಹದಲ್ಲಿ ಶಕ್ತಿಯ ಕೊರತೆ ಕಾಣುತ್ತಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ದ್ವೀಪದಲ್ಲಿದ್ದ ಇಲಿಗಳನ್ನು ಮತ್ತು ತೆಂಗಿನಕಾಯಿಯನ್ನು ತಿಂದು ಬದುಕಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

    ದೋಣಿ ಅಪಘಾತಕ್ಕೆ ಒಳಗಾದ ಮೂವರು ದ್ವೀಪದಿಂದ ಈಜಿಕೊಂಡು ಹಿಂದಿರುಗಿ ಬರಲು ಸಾಧ್ಯವಾಗದೇ ಅಲ್ಲೇ ಉಳಿದುಕೊಂಡು ಇಲಿಗಳನ್ನು ಮತ್ತು ತಿಂಗಿನಕಾಯಿ ತಿಂದು ಜೀವವನ್ನು ಉಳಿಸಿಕೊಂಡಿದ್ದರು.

  • 8 ಸಾವಿರ ವರ್ಷದ ಹಿಂದಿನ ಮುತ್ತು ಅಬುಧಾಬಿಯಲ್ಲಿ ಪತ್ತೆ

    8 ಸಾವಿರ ವರ್ಷದ ಹಿಂದಿನ ಮುತ್ತು ಅಬುಧಾಬಿಯಲ್ಲಿ ಪತ್ತೆ

    ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ 8 ಸಾವಿರ ಹಿಂದಿನ ಮುತ್ತು ಪತ್ತೆಯಾಗಿದೆ ಎಂದು ಅಬುಧಾಬಿಯ ಪುರಾತತ್ವ ಇಲಾಖೆ ಹೇಳಿದೆ.

    ಈ ಮುತ್ತು ಅಬುಧಾಬಿಯ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಸಿಕ್ಕಿದ ಕೋಣೆಯೊಂದರ ಒಳಗೆ ಈ ಮುತ್ತು ಕಂಡು ಬಂದಿದೆ. ಮುತ್ತನ್ನು ಪರಿಶೀಲನೆ ಮಾಡಿದ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ನವಶಿಲಾಯುಗ ಅಂದರೆ ಸುಮಾರು ಕ್ರಿ.ಪೂ 5800 – 5600 ಕಾಲದ್ದು ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಬುಧಾಬಿಯ ಇಲಾಖೆ ಅಧ್ಯಕ್ಷ ಮೊಹಮ್ಮದ್ ಆಲ್ ಮುಬಾರಕ್, ಅಬುಧಾಬಿಯಲ್ಲಿ ವಿಶ್ವದ ಅತ್ಯಂತ ಹಳೆಯ ಮುತ್ತುಗಳ ಆವಿಷ್ಕಾರ ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿದೆ. ಈ ಹಿಂದೆ ಮರಾವಾ ತಾಣದಲ್ಲಿ ಉತ್ಖನನ ಮಾಡುವಾಗ ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಿದ ಮಣಿಗಳು, ಬಾಣಗಳು ಸಿಕ್ಕಿದ್ದವು ಎಂದು ಹೇಳಿದರು.

    ಈ ಹಿಂದೆ ಈ ಪ್ರದೇಶದ ಮೂಲಕ ಪ್ರಯಾಣಿಸಿದ ವೆನೆಷಿಯನ್ ಆಭರಣ ವ್ಯಾಪಾರಿ ಗ್ಯಾಸ್ಪರೋ ಬಾಲ್ಬಿ, ಅಬುಧಾಬಿಯ ಕರಾವಳಿಯ ದ್ವೀಪಗಳನ್ನು ಮುತ್ತುಗಳ ಮೂಲವೆಂದು 16 ನೇ ಶತಮಾನದಲ್ಲಿ ಉಲ್ಲೇಖಿಸಿದ್ದಾರೆ. ಮುತ್ತು ಉದ್ಯಮವು ಒಮ್ಮೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಆರ್ಥಿಕತೆಗೆ ಆಧಾರವಾಗಿತ್ತು, ಆದರೆ 1930 ರ ದಶಕದಲ್ಲಿ ಜಪಾನಿನ ಸುಸಂಸ್ಕೃತ ಮುತ್ತುಗಳ ಆಗಮನದೊಂದಿಗೆ ವ್ಯಾಪಾರವು ಕುಸಿಯಿತು ಎಂದು ಅಬುಧಾಬಿ ಸಂಸ್ಕೃತ ಇಲಾಖೆ ಹೇಳಿದೆ.

    ಈಗ ಸಿಕ್ಕಿರುವ ಎಂಟು ಸಾವಿರ ವರ್ಷದ ಹಿಂದಿನ ಮುತ್ತನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಆಕ್ಟೋಬರ್ 30 ರಂದು ಅಬುಧಾಬಿಯ ಲೌವ್ರೆಯಲ್ಲಿರುವ ಪ್ಯಾರಿಸ್ ಮ್ಯೂಸಿಯಂನಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

  • ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು – ದ್ವೀಪಗಳಾದ ಹಳ್ಳಿಗಳು

    ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು – ದ್ವೀಪಗಳಾದ ಹಳ್ಳಿಗಳು

    ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವುದರಿಂದ ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಐದು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮ್ಯಾದರಗಡ್ಡಿ, ಕಡದರಗಡ್ಡಿ ನಡುಗಡ್ಡೆ ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗಿವೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗಲೆಲ್ಲಾ ಈ ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗುತ್ತವೆ.

    ನಡುಗಡ್ಡೆ ಗ್ರಾಮಸ್ಥರಿಗೆ ಸಮರ್ಪಕವಾದ ವಸತಿ ಹಾಗೂ ಭೂಮಿ ಸೌಲಭ್ಯ ಸಿಗದೇ ಸ್ಥಳಾಂತರ ಸಾಧ್ಯವಾಗಿಲ್ಲ. ಹೀಗಾಗಿ ನಡುಗಡ್ಡೆ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಲ್ಲಿನ ಯರಗೋಡಿ ಗ್ರಾಮದಿಂದ ಕಡದರಗಡ್ಡಿ ಗ್ರಾಮದ ಮಧ್ಯೆ ಸೇತುವೆ ನಿರ್ಮಿಸಲು 4 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಕಾಮಗಾರಿಗೆ 16 ಕೋಟಿ ರೂ. ಅವಶ್ಯಕತೆ ಇರುವುದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಲಿಂಗಸುಗೂರು ಶಾಸಕ ಡಿ.ಎಸ್ ಹೂಲಿಗೇರಿ ಹೇಳಿದ್ದಾರೆ.

    https://www.facebook.com/publictv/videos/374289933210694/

  • ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಮಂಗಳೂರು: ಅದು ಮಂಗಳೂರಿನ ಹೊರವಲಯದ ನೇತ್ರಾವತಿ ನದಿ ಮಧ್ಯದಲ್ಲಿರುವ ದ್ವೀಪ ಪ್ರದೇಶ. ಸುತ್ತ ನೀರಿನಿಂದ ಆವೃತವಾಗಿರುವ ಈ ದ್ವೀಪದಲ್ಲಿ ನೂರಾರು ಮಂದಿ ವಾಸವಿದ್ದಾರೆ. ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿರುವ ಈ ಕುಗ್ರಾಮ ಸ್ಮಾರ್ಟ್ ಸಿಟಿ ಮಂಗಳೂರಿನ ಆವರಣದಲ್ಲೇ ಇದ್ದರೂ, ಜನರ ಸಂಪರ್ಕಕ್ಕೆ ಸೇತುವೆಯೇ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಸೋತ ಅಲ್ಲಿನ ಜನರು ತಾವೇ ತಾತ್ಕಾಲಿಕ ಸೇತುವೆಯನ್ನು ರೆಡಿ ಮಾಡಿದ್ದಾರೆ. ಹಗ್ಗದ ಮೇಲಿನ ನಡಿಗೆಯಂತಿರೋ ಈ ಸೇತುವೆ ಸಂಚಾರ ಮಾತ್ರ ತುಂಬಾನೇ ಡೇಂಜರಸ್.

    ಸಚಿವ ಯುಟಿ ಖಾದರ್ ಸಿಂಪ್ಲಿಸಿಟಿಗೆ ಮತ್ತೊಂದು ಹೆಸರು. ಮಾನವೀಯತೆ ತೋರೋದರಲ್ಲಿ ಎತ್ತಿದ ಕೈ ಎಂಬ ಮಾತುಗಳನ್ನ ಸಾರ್ವಜನಿಕ ವಲಯದಲ್ಲಿ ಕೇಳಿರುತ್ತೇವೆ. ಆದರೆ ಅವರದ್ದೇ ಕ್ಷೇತ್ರದ ಊರೊಂದರ ಕಣ್ಣೀರ ಕಹಾನಿ ಇಲ್ಲಿದೆ. ಸ್ಮಾರ್ಟ್ ಸಿಟಿಯ ಗರಿ ಸಿಕ್ಕಿಸಿಕೊಂಡಿರುವ ಮಂಗಳೂರು ನಗರದ ಕೂಗಳತೆ ದೂರದಲ್ಲೇ ಇರೋ ಪಾವೂರಿಗೆ ಇನ್ನೂ ಮೂಲಸೌಲಭ್ಯಗಳೇ ಮರೀಚಿಕೆ. ದಿಪದ ಬುಡದಲ್ಲಿ ಕತ್ತಲೇ ಎಂಬಂತೆ ಪಾವೂರು ಇನ್ನು ಕುಗ್ರಾಮವಾಗಿ ಉಳಿದುಕೊಂಡಿದೆ. ನೇತ್ರಾವತಿ ನದಿ ಮಧ್ಯದಲ್ಲಿರುವ ಪಾವೂರು ಎಂಬ ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಬೇಕೆಂದು ನಡೆಸಿರುವ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.

    ಕಬ್ಬಿಣದ ಪೈಪ್ ಮತ್ತು ಹಲಗೆ ಬಳಸಿ ಗ್ರಾಮಸ್ಥರೇ ನಿರ್ಮಿಸಿರುವ ಈ ಸೇತುವೆಯ ಸಂಚಾರ ಹಗ್ಗದ ಮೇಲಿನ ನಡಿಗೆಯಂತಿದ್ದು, ವಿಸ್ತಾರವಾಗಿರುವ ನದಿಯನ್ನು ದಾಟುವುದೇ ಸಾಹಸವಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಇದೇ ಹಲಗೆಯಲ್ಲಿ ಸಂಚರಿಸುತ್ತಿದ್ದು, ದುರಂತಕ್ಕೆ ಆಹ್ವಾನ ನೀಡುವಂತಿದೆ. ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸತತ ಮೂರು ಬಾರಿ ಸಚಿವರಾದರೂ, ಸೇತುವೆಯ ಬೇಡಿಕೆ ಇನ್ನೂ ಅವರ ಅವರ ಕಿವಿ ಮುಟ್ಟಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ದೋಣಿಯಲ್ಲಿ ಸಂಚರಿಸುತ್ತಿದ್ದ ಜನರು ಸದ್ಯಕ್ಕೆ ಹಲಗೆಯ ಸೇತುವೆಯಲ್ಲಿ ಸಾಗುತ್ತಿದ್ದಾರೆ. ಆದರೆ, ಯಾವಾಗ ಬೀಳುತ್ತೋ ಅನ್ನುವ ಭಯದಲ್ಲೇ ಜನ ಓಡಾಡುತ್ತಿದ್ದಾರೆ. ಈ ಸೇತುವೆ ಬೇಸಿಗೆಗೆ ಸೀಮಿತವಾಗಿದ್ದು, ಜೂನ್ ವೇಳೆಗೆ ನದಿ ತುಂಬಿದಾಗ ಜನರು ಮತ್ತೆ ದೋಣಿಯನ್ನೇ ಅವಲಂಬಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ಸೈಂಟ್ ಮೇರೀಸ್ ಭೂಲೋಕದ ಮೇಲಿನ ಸ್ವರ್ಗ- ಸಮುದ್ರದ ಒಡಲಲ್ಲಿ ದಿನಪೂರ್ತಿ ಖುಷಿ

    ದು ಭೂಲೋಕದ ಮೇಲಿನ ಸ್ವರ್ಗ..! ಕಳೆದ ನಾಲ್ಕು ತಿಂಗಳಿಂದ ಆ ಸ್ವರ್ಗಕ್ಕೆ ಬಾಗಿಲು ಹಾಕಲಾಗಿತ್ತು. ಸ್ವರ್ಗಕ್ಕೆ ಹೋಗಲಾಗದೆ, ಜನರೆಲ್ಲಾ ಭೂಮಿ ಮೇಲೆಯೇ ಅಲೆದಾಡುತ್ತಿದ್ದರು. ಇದೀಗ ಸ್ವರ್ಗದ ಬಾಗಿಲು ತೆರೆದಿದ್ದು ಜನ ಹಾಡುತ್ತಾ.. ಕುಣಿಯುತ್ತಾ ಮಸ್ತ್ ಮಜಾ ಮಾಡುತ್ತಾ ಸುಂದರ ಸ್ವರ್ಗಕ್ಕೆ ಟ್ರಿಪ್ ಶುರು ಮಾಡಿದ್ದಾರೆ.

    ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ನೀರು.., ರಭಸವಾಗಿ ಬೀಸೋ ತಂಗಾಳಿ.., ಆಕಾಶದಲ್ಲಿ ಹಾರಾಡೋ ಅನುಭವ..
    ಈ ಖುಷಿ ಒಟ್ಟಿಗೆ ಒಂದೇ ಕಡೆ ಸಿಗಬೇಕಾದ್ರೆ ನೀವು ಉಡುಪಿಗೆ ಬರಬೇಕು. ಮಲ್ಪೆಗೆ ಬಂದು ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವ ಬೋಟ್ ಹತ್ತಬೇಕು. ಬೋಟ್ ಹತ್ತುತ್ತಿದ್ದಂತೆ ಕಿವಿಗೆ ಡೀಜೆ ಮ್ಯೂಸಿಕ್ ಅಪ್ಪಳಿಸುತ್ತದೆ. ಕೆಳಗೆ ಸಮುದ್ರ.. ಮೇಲೆ ಆಗಸ ಕಿವಿಗಪ್ಪಳಿಸೋ ಹಾಡು ಯಾರಿಗುಂಟು ಯಾರಿಗಿಲ್ಲ ಅಷ್ಟು ಎಂಜಾಯ್ ಮಾಡಬಹುದು.

    ಮಳೆಗಾಲದಲ್ಲಿ ಮೂರೂವರೆ ತಿಂಗಳು ಸಂಪೂರ್ಣ ಬಂದ್ ಆಗಿದ್ದ ಉಡುಪಿಯ ಸೈಂಟ್ ಮೇರೀಸ್ ಪ್ರವಾಸ ಇದೀಗ ಮತ್ತೆ ಆರಂಭವಾಗಿದೆ. ಬೆಳಗ್ಗೆ 10 ಗಂಟೆಯಿಂದ ಟ್ರಿಪ್ ಶುರುವಾಗುತ್ತದೆ. ಸಂಜೆಯ ತನಕ ನಾಲ್ಕು ಸುತ್ತ ನೀರು ನಡುವೆ ಇರುವ ಭೂಲೋಕದ ಸ್ವರ್ಗಕ್ಕೆ ಹೋಗಿ ಎಂಜಾಯ್ ಮಾಡಬಹುದು. ಮಲ್ಪೆ ಬೋಟ್ ಪಾಯಿಂಟ್ ನಿಂದ ಆರೂವರೆ ಕಿಲೋಮೀಟರ್ ದೂರವಿರುವ ಸೈಂಟ್ ಮೇರೀಸ್ ದ್ವೀಪದ ಕೂಗಳತೆ ದೂರದಲ್ಲಿ ದೊಡ್ಡ ಬೋಟನ್ನು ನಿಲ್ಲಿಸಲಾಗುತ್ತದೆ. ಸಮುದ್ರದ ಮಧ್ಯೆಯೇ ಮತ್ತೊಂದು ಚಿಕ್ಕ ಬೋಟ್‍ಗೆ ಎಲ್ಲಾ ಪ್ರವಾಸಿಗರನ್ನು ಶಿಫ್ಟ್ ಮಾಡಲಾಗುತ್ತದೆ. ಆ ಬೋಟ್ ದ್ವೀಪ ತಲುಪುತ್ತದೆ. ದೊಡ್ಡ ಬೋಟ್ ಮಲ್ಪೆಗೆ ವಾಪಾಸ್ಸಾಗುತ್ತದೆ

    ಫೋಟೋಗಳಲ್ಲಿ ಸೈಂಟ್ ಮೇರೀಸನ್ನು ಕಣ್ತುಂಬಿಕೊಂಡಿದ್ದ ಮೈಸೂರಿನ ಮಾಲಿನಿ ಮತ್ತು ಅವರ ಕುಟುಂಬ ಉಡುಪಿಗೆ ಬಂದಿತ್ತು. ಸೈಂಟ್ ಮೆರೀಸ್ ಗೂ ಭೇಟಿ ನೀಡಿದೆ. ಜೀವನದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಯಾನ ಮಾಡಿದ ಅನುಭವ ಈ ಕುಟುಂಬಕ್ಕೆ ಸಿಕ್ಕಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲಿನಿ, ನಾನು ಗಾಳಿಯಲ್ಲಿ ತೇಲಾಡುತ್ತಿರುವ ಅನುಭವವಾಗುತ್ತಿದೆ. ಅದ್ಭುತ ಅನ್ನೋದನ್ನು ನಾನಿಲ್ಲಿ ಕಂಡುಕೊಂಡೆ ಎಂದು ಹೇಳಿದರು. ಸುಮಾರು 15 ಕಿಲೋಮೀಟರ್ ಅರಬ್ಬಿ ಸಮುದ್ರದಲ್ಲಿ ಯಾನ ಮಾಡಿ ಬಹಳ ಖುಷಿಯಾಯ್ತು ಅಂತ ಹೇಳಿದರು.

    ಪ್ರವಾಸಿಗ ನಿರಂಜನ್ ಮಾತನಾಡಿ, ಎರಡನೆ ಬಾರಿಗೆ ಸೈಂಟ್ ಮೆರೀಸ್ ನೋಡ್ತಾಯಿದ್ದೇನೆ. ಮಕ್ಕಳೂ ಬಹಳ ಎಂಜಾಯ್ ಮಾಡಿದ್ದಾರೆ. ಮತ್ತೆ ಮತ್ತೆ ಸೈಂಟ್ ಮೇರೀಸ್‍ಗೆ ಬರಬೇಕೆಂದು ಡಿಸೈಡ್ ಮಾಡಿದ್ದೇವೆ ಎಂದರು.

    ಭಾರತವನ್ನು ಕಂಡು ಹಿಡಿದ ಕಲ್ಲಿಕೋಟೆಗೆ ಹೋಗುವ ಮೊದಲು ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ. ಇಲ್ಲಿನ ಸೌಂದರ್ಯವನ್ನು ಆತ ಬಹಳ ವರ್ಣಿಸಿದ್ದ. ಸೈಂಟ್ ಮೇರೀಸ್ ದ್ವೀಪದಲ್ಲಿ ಕಾಣಸಿಗುವ ವಿಭಿನ್ನಾಕಾರದ ಕಲ್ಲುಗಳು ಎಲ್ಲರನ್ನು ಸೆಳೆಯುತ್ತದೆ. ಕಲ್ಲಿನ ಮೇಲೆ ಅಪ್ಪಳಿಸೋ ತೆರೆಗಳನ್ನು ಅನುಭವಿಸೋದೆ ಚಂದ. ಸೂರ್ಯಾಸ್ತದ ಸಂದರ್ಭದಲ್ಲಿ ಇದ್ರಂತೂ ಇಡೀ ಸಮುದ್ರ ಬಂಗಾರದ ಬಣ್ಣದಲ್ಲಿ ಹೊಳೆಯುತ್ತದೆ. ಈ ಬಾರಿ ಸೇಫ್ಟಿ ದೃಷ್ಟಿಯಿಂದ ದೊಡ್ಡ ಬೋಟ್, ಅದರಲ್ಲೊಂದು ವಾಶ್ ರೂಮನ್ನೂ ನಿರ್ಮಾಣ ಮಾಡಲಾಗಿದೆ. ದೇಶ ವಿದೇಶದ ಪ್ರವಾಸಿಗರಿಗೆ ಇದು ಬಹಳ ಇಷ್ಟವಾಗಿದೆ.

    ಬೋಟ್ ಮಾಲೀಕ ಪ್ರಕಾಶ್ ಕೊಡವೂರು, ಮಾತನಾಡಿ ಬೋಟ್‍ನಲ್ಲಿ ಲೈಫ್ ಜಾಕೆಟ್- ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. 250 ರುಪಾಯಿ ಟಿಕೆಟ್‍ನಲ್ಲಿ ಸೈಂಟ್ ಮೇರೀಸ್ ಕಣ್ತುಂಬಿಕೊಳ್ಳಬಹುದು. ಮಕ್ಕಳಿಗೆ 150 ರುಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮಳೆಗಾಲ ಆರಂಭವಾಗುವವರೆಗೆ ಸೈಂಟ್ ಮೇರೀಸ್ ಎಂಬ ಭೂಲೋಕದ ಮೇಲಿನ ಸ್ವರ್ಗ ಓಪನ್ ಇರುತ್ತದೆ. ಅರ್ಧಗಂಟೆ ದೊಡ್ಡ ಬೋಟ್‍ನಲ್ಲಿ ಪಯಣ, ಅಲ್ಲಿಂದ ಸಣ್ಣ ಬೋಟ್ ಮೂಲಕ ದ್ವೀಪಕ್ಕೆ ಶಿಫ್ಟ್, ಅಲ್ಲಿ ಬೇಕಾದಷ್ಟು ಸುತ್ತಾಟ, ಮತ್ತೆ ಎರಡು ಬೋಟ್‍ಗಳಲ್ಲಿ ಮಲ್ಪೆಗೆ ವಾಪಾಸ್. ಇಷ್ಟಕ್ಕೆ ತಗಲುವ ವೆಚ್ಚ 250 ರೂಪಾಯಿ ಮಾತ್ರ. ತಮಗೆ ಬೇಕಾದ ತಿಂಡಿ- ಊಟ ಕೊಂಡೊಯ್ದು ಫ್ಯಾಮಿಲಿ.. ಫ್ರೆಂಡ್ಸ್ .., ಲವ್ವರ್ಸ್ ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv