Tag: ದ್ವಿಚಕ್ರ ವಾಹನ

  • ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಬೆಂಗಳೂರು: ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ದ್ವಿಚಕ್ರ ವಾಹನಗಳನ್ನು ತಡೆಹಿಡಿಯುತ್ತಿದ್ದ ಹೆಚ್.ಎಸ್.ಆರ್ ಟ್ರಾಫಿಕ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್‌ ಅನ್ನು ಅಮಾನತು ಮಾಡಲಾಗಿದೆ.

    ಸಂಚಾರ ನಿಯಮ ಉಲ್ಲಂಘಿಸಿ ಬೆಳ್ಳಂದೂರು `eco space’ (ಇಕೋ ಸ್ಪೇಸ್) ಬಳಿ ಸುಖಾ ಸುಮ್ಮನೆ ದ್ವಿಚಕ್ರ ವಾಹನ ತಡೆಯುತ್ತಿದ್ದರು. ಈ ಕುರಿತು ಸಾರ್ವಜನಿಕರು ಟ್ವೀಟ್ ಮೂಲಕ ಡಿಜಿಪಿ ಪ್ರವಿಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಪೂರ್ವ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ತನಿಖೆ ವೇಳೆ ಕಾನ್ಸ್‌ಟೇಬಲ್‌ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಕರ್ತವ್ಯ ವೇಳೆ ಬಾಂಡಿ ವೋರ್ನ್ ಕ್ಯಾಮೆರಾ ಆನ್ ಮಾಡಿಕೊಂಡು ಕೆಲಸ ಮಾಡಬೇಕು. ಆದರೆ ಟ್ರಾಫಿಕ್ ಕಾನ್ಸ್‌ಟೇಬಲ್‌ ಬಾಂಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್‌ನ ಆನ್ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಬಗ್ಗೆ ತನಿಖಾ ವರದಿ ನೀಡಿದ ಬಳಿಕ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಕಾನ್ಸ್‌ಟೇಬಲ್‌ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ಅಲ್ಲದೆ ಡಿಜಿ-ಐಜಿಪಿ ಆದೇಶದ ಬಳಿಕವೂ ನಿಯಮ ಉಲ್ಲಂಘನೆ ಮಾಡಿದ ಕಾನ್ಸ್‌ಟೇಬಲ್‌ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು

    ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು

    ಹೈದರಾಬಾದ್: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ, ಬಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮುಖ್ಯವಾಗಿ ಮಹಿಳೆಯರು ಬುರ್ಖಾ ಅಥವಾ ಉದ್ದನೆಯ ಬಟ್ಟೆಗಳನ್ನು ಧರಿಸಿ ಜಾಗರೂಕರಾಗಿ ಇರಬೇಕೆಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ.

    ಬುರ್ಖಾ ಬೈಕ್ ಚಕ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಯಾಚರಂನಲ್ಲಿ ನಡೆದಿದೆ. ಭಾನುವಾರ ನಡೆದ ಘಟನೆಯಲ್ಲಿ ಯುವತಿಗೆ ಗಂಭೀರ ಗಾಯಗಳಾಗಿದ್ದು, ಮರುದಿನ ಸಾವನ್ನಪ್ಪಿದ್ದಳು. ಅಪಘಾತದಲ್ಲಿ ಆಕೆಯ ಸಹೋದರನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾನೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್‌ ರೇಪ್‌ – 7 ಮಂದಿಗೆ ಜೀವಾವಧಿ ಶಿಕ್ಷೆ

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇಂತಹ ದುರಂತಗಳನ್ನು ತಪ್ಪಿಸಲು ಮಹಿಳೆಯರಿಗೆ ದ್ವಿಚಕ್ರವಾಹನದಲ್ಲಿ ಜಾಗರೂಕರಾಗಿ ಪ್ರಯಾಣಿಸುವಂತೆ ಎಚ್ಚರಿಕೆ ನೀಡಿಲಾಗುತ್ತಿದೆ. ಇದನ್ನೂ ಓದಿ: ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್

     

  • ಬೆಲ್ಟ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ –  ಚೆಕ್‌ ಮಾಡೋದು ಹೇಗೆ?

    ಬೆಲ್ಟ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

    ನವದೆಹಲಿ: ಬೆಲ್ಟ್‌ ಹಾಕದೇ ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌(ಐಎಸ್‌ಐ) ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿ  ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಇನ್ನು ಮುಂದೆ 2 ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

    ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಲ್ಮೆಟ್‌ ಧರಿಸದೇ ಇದ್ದಲ್ಲಿ 2 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ.

    ಯಾವುದಕ್ಕೆ ಎಷ್ಟು ದಂಡ?
    ನೀವು ಹೆಲ್ಮೆಟ್ ಧರಿಸಿದ್ದರೂ ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸುವಾಗ ಬ್ಯಾಂಡ್/ಬಕಲ್ ಬಿಚ್ಚಿದ್ದರೆ 1,000 ರೂ. ದಂಡ ತೆರಬೇಕಾಗುತ್ತದೆ.

    ನಿಮ್ಮ ಹೆಲ್ಮೆಟ್ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ ನಿಮಗೆ 1,000 ರೂ. ದಂಡ ವಿಧಿಸಬಹುದು.

    ನೀವು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಉದಾಹರಣೆಗೆ ಹೆಲ್ಮೆಟ್‌ ಧರಿಸಿಯೂ ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ 2,000 ರೂ. ದಂಡವನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ಚೆಕ್‌ ಮಾಡುವುದು ಹೇಗೆ?
    ನೀವು ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ್ದೀರೋ ಇಲ್ಲವೋ ಎನ್ನುವುದನ್ನು ಆನ್‌ಲೈನಿನಲ್ಲೇ ಪರಿಶೀಲನೆ ಮಾಡಬಹುದು.

    www.echallan.parivahan.gov.in ತೆರಳಿ ‘Get Challan Detailsʼ ಕ್ಲಿಕ್‌ ಮಾಡಬೇಕು. ಇಲ್ಲಿ ಚಲನ್‌ ನಂಬರ್‌/ ವಾಹನ ಸಂಖ್ಯೆ/ ಡಿಎಲ್‌ ನಂಬರ್‌ ಪೈಕಿ ಒಂದನ್ನು ಆರಿಸಿ ಕಾಣುತ್ತಿರುವ ಕ್ಯಾಪ್ಚವನ್ನು ಎಂಟರ್‌ ಮಾಡಿ ‘Get Detail‘ ಕ್ಲಿಕ್‌ ಮಾಡಬೇಕು. ಉಲ್ಲಂಘನೆ ಮಾಡದೇ ಇದ್ದರೆ ಚಲನ್‌ ನೀಡಿಲ್ಲ ಎಂಬ ಸ್ಟೇಟಸ್‌ ಕಾಣುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೆ ದಂಡದ ಮಾಹಿತಿ ಅಲ್ಲಿ ಸಿಗುತ್ತದೆ.  ಇದನ್ನೂ ಓದಿ: ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

  • ಸಣ್ಣ ರಸ್ತೆ ಅಪಘಾತದಿಂದ ಕೋಮು ಗಲಭೆ – ದೇವಾಲಯ ಧ್ವಂಸ, 22 ಮಂದಿ ಅರೆಸ್ಟ್

    ಸಣ್ಣ ರಸ್ತೆ ಅಪಘಾತದಿಂದ ಕೋಮು ಗಲಭೆ – ದೇವಾಲಯ ಧ್ವಂಸ, 22 ಮಂದಿ ಅರೆಸ್ಟ್

    ಗಾಂಧಿನಗರ: ಎರಡು ಸಮುದಾಯಗಳಿಗೆ ಸೇರಿದ ದ್ವಿಚಕ್ರ ವಾಹನಗಳ ಸಣ್ಣದೊಂದು ಅಪಘಾತದಿಂದಾಗಿ ಸಂಘರ್ಷ ನಡೆದಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಪೊಲೀಸರು ಸಂಘರ್ಷಕ್ಕೆ ಸಂಬಂಧಪಟ್ಟ 22 ಜನರನ್ನು ಬಂಧಿಸಿದ್ದಾರೆ.

    ಎರಡು ಪ್ರತ್ಯೇಕ ಧರ್ಮದವರಿದ್ದ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆ ವೇಳೆ ನಡೆದ ವಾಕ್ಸಮರದಿಂದ ಹಿಂಸಾಚಾರ ನಡೆದಿದೆ. ಗಲಭೆಕೋರರು ಕಲ್ಲು ತೂರಾಟ, ದೇವಾಲಯಗಳ ಧ್ವಂಸ ಹಾಗೂ ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೀ ಕೊಡುಗೆಗಳಿಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ತಜ್ಞರ ಎಚ್ಚರಿಕೆ

    ಭಾನುವಾರ ತಡರಾತ್ರಿ ನಡೆದ ರಸ್ತೆ ಅಪಘಾತ ಸಂಘರ್ಷಕ್ಕೆ ಕಾರಣವಾಗಿದ್ದು, 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆ ಅಪಘಾತದಿಂದಾಗಿ ಎರಡು ಸಮುದಾಯದ ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಮಸ್ಯೆ ಉಲ್ಪಣಗೊಂಡಿದೆ. ಬಳಿಕ ಕಲ್ಲುತೂರಾಟ, ಹಿಂಸಾಚಾರ ನಡೆದಿದೆ. ಗಲಭೆಕೋರರು ರಸ್ತೆ ಬದಿಯಲ್ಲಿದ್ದ ದೇವಾಲಯಕ್ಕೆ ನುಗ್ಗಿ, ಅಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ 2 ಆಟೋರಿಕ್ಷಾಗಳು ಹಾಗೂ ಹಲವು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಮತ್ತೆ 15 ಜನರ ಬಂಧನ

    POLICE JEEP

    ಅಪಘಾತ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾವ್ಪುರ ಮತ್ತು ಕರೇಲಿಬಾಗ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದುವರೆಗೆ ಒಟ್ಟು 22 ಜನರನ್ನು ಬಂಧಿಸಲಾಗಿದೆ. ಘಟನಾ ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಲಿಫ್ಟ್ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ – ಕೆಲವೇ ಗಂಟೆಗಳಲ್ಲಿ ಆರೋಪಿ ಅರೆಸ್ಟ್

    ನವದೆಹಲಿ: ಶನಿವಾರ ತಡರಾತ್ರಿಯಲ್ಲಿ ಲಿಫ್ಟ್ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ದೆಹಲಿಯ ದ್ವಾರಕಾ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

    ಶನಿವಾರ ತಡರಾತ್ರಿ, ದ್ವಾರಕಾ ಸೆಕ್ಟರ್ 23 ರಿಂದ ಪೊಲೀಸರಿಗೆ ಪಿಸಿಆರ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿಯೊಬ್ಬರು ಹುಡುಗಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಳು. ನಂತರ ಕರೆಯನ್ನು ಮಹಿಳಾ ಪೊಲೀಸ್ ಅಧಿಕಾರಿ ಬೀನಾಗೆ ವರ್ಗಾಯಿಸಲಾಯಿತು. ಅವರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಲಿಫ್ಟ್ ನೀಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    ಆರೋಪಿಯು ಹಸಿರು ಬಣ್ಣದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹೊಂದಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಕರೆ ಸ್ವೀಕರಿಸಿದ ಸಬ್ ಇನ್ಸ್‌ಪೆಕ್ಟರ್ ಬಾಲು ರಾಮ್, ಕರೆ ಮಾಡಿದ ವ್ಯಕ್ತಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ ತಕ್ಷಣವೇ ನಮ್ಮ ತಂಡ ಸ್ಥಳಕ್ಕೆ ಧಾವಿಸಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್ 

    ಪೊಲೀಸ್ ತಂಡವು ದೂರುದಾರರು ಲಿಫ್ಟ್ ತೆಗೆದುಕೊಂಡ ಸ್ಥಳದ ಬಳಿ ಅಳವಡಿಸಲಾದ ವಿವಿಧ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಇತರ ರಸ್ತೆಗಳಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿದ್ದಾರೆ. ಈ ವೇಳೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಹಸಿರು ಬಣ್ಣದ ಸ್ಕೂಟಿಯನ್ನು ಗುರುತಿಸಿದ ಕ್ಲಿಪ್ ಅನ್ನು ಕಂಡುಹಿಡಿದರು. ಅದರಲ್ಲಿ ದೂರುದಾರರು ಆರೋಪಿಯ ಹಿಂದೆಯೇ ನಿಂತಿದ್ದರು.

    ಪೊಲೀಸರು ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಹಸಿರು ಬಣ್ಣದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

  • ಹೀರೋ ಮೋಟೋಕಾರ್ಪ್ ಎಂಡಿ ಕಚೇರಿ, ನಿವಾಸದ ಮೇಲೆ ಐಟಿ ರೇಡ್!

    ಚಂಡೀಗಢ: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ಕಚೇರಿ ಮತ್ತು ನಿವಾಸದ ಮೇಲೆ ಆದಾಯ ತೆರಿಗೆ(ಐಟಿ) ಇಲಾಖೆ ದಾಳಿ ನಡೆಸಿದೆ.

    ಬುಧವಾರ ಮುಂಜಾನೆ ಐಟಿ ಇಲಾಖೆ ಪವನ್ ಮುಂಜಾಲ್ ಅವರ ಗುರುಗ್ರಾಮದಲ್ಲಿರುವ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದೆ. ಐಟಿ ಅಧಿಕಾರಿಗಳು ಕಂಪನಿಗೆ ಸಂಬಂಧಿಸಿದ ದಾಖಲೆಗಳ ಹುಡುಕಾಟ ನಡೆಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: `ಪುಷ್ಪಾ’ ಸಿನಿಮಾ ಸ್ಟೈಲ್‍ನಲ್ಲಿ ಸಾಗಣೆ – 2,200 ಕೆ.ಜಿ ರಕ್ತಚಂದನ ಜಪ್ತಿ

     

    ಪವನ್ ಮುಂಜಾಲ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್ನ ಅಧ್ಯಕ್ಷರಾಗಿದ್ದು ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ 40 ದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

     

  • ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ತುಮಕೂರು: ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರಣ್ಯಾಧಿಕಾರಿಗಳನ್ನು ಕಂಡು ಪರಾರಿಯಾಗುವಾಗ ಬಂಧನಕ್ಕೊಳಗಾದ ಘಟನೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

    ಬ್ರಹ್ಮದೇವರಹಳ್ಳಿಯ ಶಿವಕುಮಾರ್, ಚಿನ್ನೇನಹಳ್ಳಿಯ ಆದರ್ಶ ಬಂಧಿತ ಆರೋಪಿಗಳು. ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಜಿಂಕೆ ಮಾಂಸ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖದೀಮರು ತಿಪ್ಪಾಪುರ ಗ್ರಾಮದ ಬಳಿ ಗಂಡು ಜಿಂಕೆಯೊಂದನ್ನು ಬೇಟೆಯಾಡಿದ್ದರು. ಈ ವೇಳೆ 5 ಕೆ.ಜಿ. ಜಿಂಕೆ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಆರೋಪಿಗಳು ಬೇಟೆಯಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

  • ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ಬೆಂಗಳೂರು: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನೈಸ್ ಸಂಸ್ಥೆ ನಿರ್ಬಂಧ ಹೇರಲಾಗಿದೆ.

    ನೈಸ್ ಸಂಸ್ಥೆ ಈ ಕುರಿತು ಮಾಧ್ಯಮ ಪ್ರಕಟಣೆ ಮಾಡಿದ್ದು, ಸುರಕ್ಷತಾ ಕಾರಣಗಳಿಂದಾಗಿ ರಾತ್ರಿ ಸಮಯದಲ್ಲಿ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ನೈಸ್ ಆಡಳಿತ ಮಂಡಳಿಯು, ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ.

     

    ಜನವರಿ 16ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಪ್ರತಿನಿತ್ಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:  ಯುಪಿಯಲ್ಲಿ 50-100 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ- ಮೈತ್ರಿ ಮಾಡಲ್ಲ ಎಂದ ರಾವತ್

  • ಹಿಟ್ ಅಂಡ್ ರನ್‍ಗೆ ವ್ಯಕ್ತಿ ಸಾವು

    ಹಿಟ್ ಅಂಡ್ ರನ್‍ಗೆ ವ್ಯಕ್ತಿ ಸಾವು

    ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ತಂಬೇನಹಳ್ಳಿ ಬಳಿ ನಡೆದಿದೆ.

    ವೆಂಕಟೇಶ್ (35) ಸ್ಥಳದಲ್ಲಿಯೇ ಸಾವನಪ್ಪಿದ ಮೃತ ದುರ್ದೈವಿ. ವ್ಯಕ್ತಿಯು ತಂಬೇನಹಳ್ಳಿಯ ನಿವಾಸಿಯಾಗಿದ್ದು, ಪಟ್ಟಣಕ್ಕೆ ಹೋಗಿ ವಾಪಸ್ ಹಿಂದಿರುಗುತ್ತಿದ್ದ ವೇಳೆ ವಾಹನವೊಂದು ವ್ಯಕ್ತಿ ಮೇಲೆ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನ ಮೇಲೆ ವಾಹನ ಹರಿಸಿದ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಟ್ಟಪ್ಪ

    ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

  • ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್‌ ಪ್ಲೇಟಲ್ಲಿತ್ತು SEX – ನಂಬರ್ ಪ್ಲೇಟ್‍ನಿಂದ ಮುಜುಗರಕ್ಕೀಡಾದ ಯುವತಿ!

    ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್‌ ಪ್ಲೇಟಲ್ಲಿತ್ತು SEX – ನಂಬರ್ ಪ್ಲೇಟ್‍ನಿಂದ ಮುಜುಗರಕ್ಕೀಡಾದ ಯುವತಿ!

    ನವದೆಹಲಿ: ಅಪ್ಪ ತಂದಿರುವ ಸ್ಕೂಟಿ ನೋಡಿ ಖುಷಿಪಟ್ಟಿರುವ ಮಗಳು ನಂಬರ್ ಪ್ಲೇಟ್ ನೋಡಿ ಬೆಚ್ಚಿ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಮಗಳಿಗೆ ಸಹಾಯವಾಗುತ್ತದೆ ಎಂದು ತಂದೆ ಸ್ಕೂಟಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆದರೆ ಈ ಸ್ಕೂಟಿಯ ನಂಬರ್ ಪ್ಲೇಟ್‍ನಿಂದ ಪ್ರತಿದಿನ ಕಿರಿಕಿರಿ ಉಂಟಾಗುತ್ತದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ದೆಹಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ‘ಎಸ್’ ಆಂಗ್ಲ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ನಂತರ ವಾಹನ ಸೂಚಕವಾಗಿ ಕಾರಿಗೆ ಸಿ(C) ಬೈಕಿಗೆ ಎಸ್(S) ಎಂದು ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್(EX) ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್‍ಇಎಕ್ಸ್(SEX) ಎಂದು ನಂಬರ್ ನೀಡಲಾಗುತ್ತದೆ. ಇದನ್ನೂ ಓದಿ:   ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್

    ಹೀಗಾಗಿ ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ’ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವಿದೆ. (EX) ಅಂತಹ ಒಂದು ನಂಬರ್ ಪ್ಲೇಟ್ ಪಡೆದಿರುವ ವಾಹಾನ ಸವಾರರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಸ್ಕೂಟಿ ನಂಬರ್ ಪ್ಲೇಟ್‍ನಿಂದಾಗಿ ಜನರು ಪದೇ ಪದೇ ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದ ಸ್ಕೂಟಿ ತೆಗೆದುಕೊಂಡು ಮನೆಯಿಂದ ಹೊರಬರುವುದು ಕಷ್ಟವಾಗಿತ್ತು. ನನ್ನ ಪೋಷಕರು ಸ್ಕೂಟಿ ಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸಿದರು. ಆದರೆ ವಾಹನಕ್ಕೆ ಒಮ್ಮೆ ನಿಗದಿಪಡಿಸಿದ ಸಂಖ್ಯೆಯಲ್ಲಿ ಬದಲಾವಣೆಯನ್ನು ಮಾಡಲು ಅನುಮತಿ ಇಲ್ಲ ಎಂದು ತಿಳಿಯಿತ್ತು. ಹೀಗಾಗಿ ನಂಬರ್ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಯುವತಿಯೊಬ್ಬಳು ಸ್ಕೂಟಿ ನಂಬರ್ ಪ್ಲೇಟ್‍ನಿಂದ ತಾನು ಅನುಭವಿಸಿರುವ ಮುಜುಗರದ ಸಂಗತಿಯನ್ನು ಹೇಳಿಕೊಂಡಿದ್ದಾರೆ.