ಬೆಂಗಳೂರು: ಟೆಂಪೋ-ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ (Hosakote) ತಾಲೂಕಿನ ಚಿಕ್ಕಹುಲ್ಲೂರು ಬಳಿ ತಡರಾತ್ರಿ ನಡೆದಿದೆ.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಚಿಕ್ಕಹುಲ್ಲೂರು ಘಟನೆ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಲಾರಿಗೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಇನ್ನೋವಾ – ಮೂವರು ಸ್ಥಳದಲ್ಲೇ ಸಾವು
ಬೆಂಗಳೂರು: ಮಾಲೀಕನೊಬ್ಬ ದ್ವಿಚಕ್ರ ವಾಹನದಲ್ಲಿ ನಾಯಿಯನ್ನು (Dog) ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಆರಂಭದಲ್ಲಿ ನಾಯಿಯ ಕತ್ತಿಗೆ ಸರಪಳಿ ಹಾಕಿ ದ್ವಿಚಕ್ರ ವಾಹನದಲ್ಲಿ ಕರೆತಂದಿದ್ದಾನೆ. ನಂತರ ರಸ್ತೆಯಲ್ಲಿ ನಾಯಿಯನ್ನ ಓಡಲು ಬಿಟ್ಟು ತಾನು ದ್ವಿಚಕ್ರವನ್ನು ಓಡಿಸಿದ್ದಾನೆ.
ಒಂದು ಕೈಯಲ್ಲಿ ನಾಯಿಯ ಚೈನ್, ಮತ್ತೊಂದು ಕೈಯಲ್ಲಿ ರೈಡಿಂಗ್ ಮಾಡಿ ಹುಚ್ಚಾಟ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಹೆಲ್ಮೆಟ್ ಹಾಕದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನೂ ಓದಿ: ಬಫರ್ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್
ಹೆಣ್ಣೂರು ರೈಲ್ವೇ ಸ್ಟೇಷನ್ ಬಳಿ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಬೆಂಗಳೂರು ಪೊಲೀಸರ ಗಮನಕ್ಕೆ ವಿಡಿಯೋ ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ (Uttar Pradesh) ವಾರಣಾಸಿಯ (Varanasi) ಕ್ಯಾಂಟ್ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಆಕಸ್ಮಿಕಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ 200 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿದೆ.
ಶನಿವಾರ ಮುಂಜಾನೆ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಮಾರು 12 ಅಗ್ನಿಶಾಮಕ ದಳ ವಾಹನಗಳು, ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸ್ ತಂಡ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 2 ತಾಸುಗಳ ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು ಸಂಸದನಾಗಲು, ಶಾಸಕನಾಗಲು ಎಂದೂ ಹಪಹಪಿಸಿಲ್ಲ: ನಿಖಿಲ್
ಘಟನೆಯ ಕುರಿತು ಸಿಒ ಜಿಆರ್‌ಪಿ ಕುನ್ವರ್ ಬಹದ್ದೂರ್ ಸಿಂಗ್ ಮಾತನಾಡಿ, ಹಲವಾರು ದ್ವಿಚಕ್ರ ವಾಹನಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಸುಟ್ಟು ಕರಕಲಾದ ಬಹುತೇಕ ದ್ವಿಚಕ್ರ ವಾಹನಗಳು ರೈಲ್ವೆ ನೌಕರರಿಗೆ ಸೇರಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡ್ಬೇಕು ಅಂದಿದ್ದ ಚಂದ್ರಶೇಖರ ಸ್ವಾಮೀಜಿಗೆ ನೋಟಿಸ್
ಬೆಂಗಳೂರು: ಆ ದ್ವಿಚಕ್ರ ವಾಹನದ (Two Wheeler) ಬೆಲೆ 35-30 ಸಾವಿರ ಇರಬಹುದು. ಆದರೆ ಆ ವಾಹನದ ಮೇಲೆ ಬರೋಬ್ಬರಿ 225 ಕೇಸ್ ದಾಖಲಾಗಿರುವಂತಹ ಘಟನೆ ನಡೆದಿದೆ.
ಹೌದು, ಜಯನಗರದ ಏಳುಮಲೈ ಅವರ ಟೂ ವೀಲರ್‌ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಮೂಲಕ ಕೇವಲ 25 ಸಾವಿರ ರೂ.ಯ ದ್ವಿಚಕ್ರ ವಾಹನಕ್ಕೆ ಬರೋಬ್ಬರಿ 1,34,000 ರೂ. ದಂಡ ಬಿದ್ದಿದೆ.
ನಗರದಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರೋ ಪ್ರಕರಣ ಹೆಚ್ಚುತ್ತಾ ಇದ್ದಾಗ ಈ ಟೂ ವೀಲರ್ ಪತ್ತೆಯಾಗಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ (Traffic Fine)ಮೊತ್ತವನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ
ಪಾಟ್ನಾ: ದ್ವಿಚಕ್ರ ವಾಹನ (2-Wheeler) ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ನಿಯಮವನ್ನು (Traffic Violation) ಪಾಲಿಸದ್ದಕ್ಕೆ ಪೊಲೀಸರು ಚಲನ್‍ನನ್ನು ಕಳುಹಿಸಿದ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ (Challan) ಬರುವುದು ಸಾಮಾನ್ಯ. ಆದರೆ ಬಿಹಾರದ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ. ಕೃಷ್ಣಕುಮಾರ್ ಝಾ ಎಂಬಾತ ಸ್ಕೂಟಿಯಲ್ಲಿ ಬನಾರಸ್‌ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್‍ಗೆ 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎನ್ನುವುದರ ಕುರಿತು ಚಲನ್ ಬಂದಿದೆ. ಆ ಚಲನ್‍ನಲ್ಲಿ 2020ರ ಅಕ್ಟೋಬರ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.
ಇದನ್ನು ನೋಡಿದ ಕೃಷ್ಣಕುಮಾರ್ ಒಮ್ಮೆಲೇ ಶಾಕ್ ಆಗಿದ್ದಾರೆ. ಬೈಕ್‍ನಲ್ಲಿ ಹೋಗಿರುವುದಕ್ಕೆ ಸೀಟ್ ಬೇಲ್ಟ್ ಯಾಕೆ ಧರಿಸಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರು ತಾಂತ್ರಿಕ ದೋಷದಿಂದಾಗಿ ಕೆಲವೊಮ್ಮೆ ಈ ರೀತಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವಭಕ್ತ – ಡಿಕೆಶಿ
ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್‌ನಿಂದ ನೀಡಲಾಗಿದೆ. ಈಗ, ನಾವು ಇವೆಲ್ಲವನ್ನೂ ಇ-ಚಲನ್‍ಗಳಾಗಿ ಮುಚ್ಚಿಡುವ ಪ್ರಕ್ರಿಯೆಯಲ್ಲಿದ್ದೇವೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ
ನವದೆಹಲಿ: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ (Delhi-Mumbai Expressway) ದ್ವಿಚಕ್ರ ವಾಹನ ಸವಾರರು ( Two-Wheelers) ಸಿಕ್ಕಿಬಿದ್ದರೆ 5 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ.
ಪ್ರಧಾನಿ ಮೋದಿ (PM Modi) ಫೆ.15 ಎಂದು ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವಾದ 246 ಕಿ.ಮೀ ಉದ್ದದ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆಯಾದ ಬಳಿಕ ಬೈಕ್ ಸವಾರರು ಮತ್ತು ಸೈಕಲ್ ಸವಾರರು ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಸ್ತೆ ಪಿಕ್ನಿಕ್ ಸ್ಥಳವಾಗಿ ಬದಲಾಗಿದ್ದು ಗ್ರಾಮಸ್ಥರು ಬೇಲಿಯನ್ನು ಹಾರಿ ಎಕ್ಸ್‌ಪ್ರೆಸ್‌ವೇಗೆ ಇಳಿಯುತ್ತಿದ್ದಾರೆ.
ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ಸಂಚಾರಕ್ಕೆ ಅನುಮತಿ ನೀಡಿದ್ದರೂ ವಾಹನಗಳು ಇದಕ್ಕಿಂತಲೂ ವೇಗದಲ್ಲಿ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಗರಿಷ್ಠ ಮಿತಿಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಿದ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.
ಈ ದಂಡದ ಜೊತೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸಿದ ದ್ವಿಚಕ್ರ ವಾಹನಗಳಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಬುಧವಾರದಿಂದ ದಂಡ ವಿಧಿಸುವ ಪ್ರಕ್ರಿಯೆ ಆರಂಭಗೊಂಡಿದ್ದು ಅತಿ ವೇಗದ ಚಾಲನೆ ಸಂಬಂಧ 2 ಚಲನ್, ಲೇನ್ ಉಲ್ಲಂಘನೆ ಮಾಡಿದ್ದಕ್ಕೆ 2 ಚಲನ್ ನೀಡಲಾಗಿದೆ. ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1,386 ಕಿಲೋಮೀಟರ್‌ಗಳ ಎಕ್ಸ್‌ಪ್ರೆಸ್ ಹೈವೇಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲು ಮುಂದಾಗುತ್ತಿದೆ. ಇದರ ಮೊದಲ ಹಂತವಾಗಿ ಸಾಹ್ನಾ – ದೌಸಾ ಮಧ್ಯೆ ನಿರ್ಮಿಸಲಾದ ಹೆದ್ದಾರಿಯನ್ನು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇದರಿಂದಾಗಿ ದೆಹಲಿ-ಜೈಪುರ (Delhi-Jaipur) ನಡುವಿನ ಅಂತರ ಎರಡು ಗಂಟೆಗೆ ಇಳಿದಿದೆ. ಸದ್ಯ ದೆಹಲಿಯಿಂದ ಜೈಪುರಕ್ಕೆ ತೆರಳಲು ನಾಲ್ಕರಿಂದ ಐದು ಗಂಟೆ ಹಿಡಿಯುತ್ತಿದೆ. ಈ ಎಂಟು ಲೇನ್‍ಗಳ ಸಾಹ್ನಾ -ದೌಸಾ 246 ಕಿಲೋಮೀಟರ್ ಹೆದ್ದಾರಿಯನ್ನು 10,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ರಾಜಸ್ಥಾನ-ಹರಿಯಾಣ-ಮಧ್ಯಪ್ರದೇಶ-ಗುಜರಾತ್-ಮಹಾರಾಷ್ಟ್ರ ರಾಜ್ಯಗಳನ್ನು ಈ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸುತ್ತದೆ. 2019ರ ಮಾರ್ಚ್ 9ರಂದು ಕಾಮಗಾರಿ ಆರಂಭಗೊಂಡಿದ್ದು ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಈ ಯೋಜನೆಗೆ 5 ಸಾವಿರ ಹೆಕ್ಟೇರ್ ಭೂ ಸ್ವಾಧೀನ ಮಾಡಲಾಗಿದ್ದು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಪ್ರಯಾಣದ ಅವಧಿ 24 ಗಂಟೆಯಿಂದ 12 ಗಂಟೆಗೆ ಇಳಿಕೆಯಾಗಲಿದ್ದು ಈಗ ಇರುವುದಕ್ಕಿಂತ 180 ಕಿ.ಮೀ ಕಡಿಮೆಯಾಗಲಿದೆ.
LIVE TV
[brid partner=56869869 player=32851 video=960834 autoplay=true]
ಬೆಂಗಳೂರು: ಗುಂಡಿ(Pothole) ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಉಮಾದೇವಿ ಸಾವನ್ನಪ್ಪಿದ್ದು, ಮಗಳು ಉಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೆಎಸ್‍ಆರ್‌ಟಿಸಿ ಬಸ್(KSRTC) ಚಾಲಕ ಮಾರುತಿಯನ್ನು ಬಂಧಿಸಿದ್ದಾರೆ.
ಶವಾಗಾರದಲ್ಲಿ ಉಮಾದೇವಿ ಮೃತದೇಹವಿದ್ದು ಬೆಳಗ್ಗೆ 10 ಗಂಟೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ಸನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: 3ರ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಗೆ 20 ವರ್ಷ ಜೈಲು, 1 ಲಕ್ಷ ದಂಡ
ನಡೆದಿದ್ದು ಏನು?
ಉಮಾ ಅವರು ಭಾನುವಾರ ಶ್ರೀನಗರದಲ್ಲಿರುವ ಪುತ್ರಿ ವನಿತಾ ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ವನಿತಾ ಜತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಬೆಳಗ್ಗೆ 9:30ರ ಸುಮಾರಿಗೆ ವಾಟಾಳ್ ನಾಗರಾಜ್ ರಸ್ತೆಯ ಸುಜಾತ ಥಿಯೇಟರ್ ಬಳಿ ಹೋಗುವಾಗ ರಸ್ತೆ ಗುಂಡಿ ಎದುರಾಗಿದೆ.
ಗುಂಡಿ ನೋಡಿದ ವನಿತಾ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಉಮಾ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದ್ವಿಚಕ್ರವಾಹನ (Two Wheeler) ಸವಾರರಲ್ಲಿ ಹೆಲ್ಮೆಟ್ (Helmet) ಕುರಿತು ಅರಿವು ಮೂಡಿಸಲು ಒಂದಿಲ್ಲೊಂದು ವಿಧಾನಗಳನ್ನು ಅನುಸರಿಸುತ್ತಿರುವ ಪೊಲೀಸರು (Police) ಇದೀಗ, ಮಂತ್ರೋಪಚಾರದ ಮಾರ್ಗವನ್ನು ಅನುಸರಿಸುತ್ತಿದ್ದಾರೆ.
ನಡುರಸ್ತೆಯಲ್ಲಿ ನಿಂತು ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರುವ ಪೊಲೀಸ್ (Police) `ಈತ ತನ್ನ ಮದುವೆಯಲ್ಲಿಯೂ ಇಷ್ಟೊಂದು ಗೌರವಯುತವಾಗಿ ಬಾಸಿಂಗ ಧರಿಸಿರಲಿಲ್ಲವೇನೋ’ ಎಂದು ಶೀರ್ಷಿಕೆ ಕೊಟ್ಟು ವೀಡಿಯೋ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ರಜೆ ತೆಗೆದುಕೊಂಡು ಆನಂದಿಸಿ- ಮೋದಿಗೆ ಶಾರುಖ್ ಖಾನ್ ಸಲಹೆ
ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ತಡೆದ ಪೊಲೀಸ್ ಅಧಿಕಾರಿ, ಆತನ ತಲೆಗೆ ಹೆಲ್ಮೆಟ್ ಹಾಕುತ್ತಾ ಮಂತ್ರವನ್ನು ಪಠಿಸಲು ಶುರುಮಾಡಿದ್ದಾರೆ. ಮಂತ್ರದಲ್ಲಿ ಸಂಚಾರ ನಿಯಮಗಳ (Traffic Rule) ವಿವರಣೆ ಮತ್ತು ನಿಯಮ ಮುರಿದರೆ ಆಗುವ ಪರಿಣಾಮವನ್ನು ಶ್ರುತಿಬದ್ಧವಾಗಿ, ಲಯಬದ್ಧವಾಗಿ ಹಾಗೂ ಅತ್ಯಂತ ಮಾರ್ಮಿಕವಾಗಿಯೂ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ
ಹಲವು ಮಂತ್ರ ಸ್ತೋತ್ರಗಳನ್ನು ಪಠಿಸಿದ ಪೊಲೀಸ್ ಕೊನೆಗೆ ಹೆಲ್ಮೆಟ್ ಧರಿಸದೇ ಇದ್ರೆ ಅದರ ಐದು ಪಟ್ಟು ದಂಡ ಬೀಳುತ್ತೆ ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಹೆಲ್ಮೆಟ್ ವಿಶೇಷ ಜಾಗೃತಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಲಕ್ಷಾಂತರ ಮಂದಿ ನೋಡಿ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಹೊಸ ನಿಯಮ ಜಾರಿಯಾಗಲಿದೆ. ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. 18 ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಓಡಾಡಬಹುದು. ಇಬ್ಬರು ಪುರುಷ ಸವಾರರಿಗೆ ಈ ರೂಲ್ಸ್ ಇದ್ದು, ಕೆಲವು ಬಾರಿ ಹಿಂಬದಿ ಸವಾರರು ದುಷ್ಕೃತ್ಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಿದರು.
ಪ್ರಕರಣ ಪತ್ತೆ ಹಚ್ಚಲಾಗಿದೆ ಯಾರು ಮಾಡಿದ್ದಾರೆ ಗೊತ್ತಾಗಿದೆ. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಮೂರು ಜನರ ವಿಚಾರಣೆ ನಡೆಸಲಾಗುತ್ತಿದೆ. ಯಾರು ಹೊಡೆದಿದ್ದಾರೆ ಗೊತ್ತಿದೆ ಅವರು ಸಿಗಬೇಕು. ಪ್ರಮುಖ ಆರೋಪಿ ಬಂಧಿಸುವ ಈಗಲೂ ಪ್ರಯತ್ನ ನಡೆಯುತ್ತಿದೆ. ಎನ್‍ಐಎ ಕೇಸ್ ಹಸ್ತಾಂತರದ ಬಗ್ಗೆ ಚರ್ಚೆ ನಡೆಯುತ್ತದೆ. ಆರೋಪಿಗಳ ಹಿಡಿಯುವ ಕೆಲಸ ಬಿಡಲ್ಲ. ಮೈನ್ ಆರೋಪಿಯನ್ನು ಶೀಘ್ರ ಹಿಡಿಯುತ್ತೇವೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]