Tag: ದ್ರೋಣ

  • ತನ್ನ ಯಜಮಾನ ಚಿರುವನ್ನು ನೋಡಲು ಹಠ ಮಾಡುತ್ತಿರೋ ದ್ರೋಣ

    ತನ್ನ ಯಜಮಾನ ಚಿರುವನ್ನು ನೋಡಲು ಹಠ ಮಾಡುತ್ತಿರೋ ದ್ರೋಣ

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ.

    ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ.

    ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್‍ಗೆ ಚಿರು ಸರ್ಜಾ ಒಂದು ಮುದ್ದಾದ ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟಿದ್ರು.

    ಭಾನುವಾರ ಮಧ್ಯಾಹ್ನದವರೆಗೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿತ್ತು. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.

    ಇದೀಗ ಚಿರು ಕುಟುಂಬ, ಅಭಿಮಾನಿವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ಇಂದು ಮಧ್ಯಾಹ್ನದವರೆಗೆ ಚಿರು ನಿವಾಸದಲ್ಲಿ ಅಂತಿಮ ದರ್ಶನ ನಡೆಯಲಿದ್ದು, ಸಂಜೆ ವೇಳೆಗೆ ಸಹೋದರ ಧೃವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ದಸರಾ ಆನೆ ದ್ರೋಣ ಸಾವನ್ನಪ್ಪುತ್ತಿರೋ ಕೊನೆಯ ದೃಶ್ಯ ಸೆರೆ

    ದಸರಾ ಆನೆ ದ್ರೋಣ ಸಾವನ್ನಪ್ಪುತ್ತಿರೋ ಕೊನೆಯ ದೃಶ್ಯ ಸೆರೆ

    ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ದಸರಾ ಆನೆ ದ್ರೋಣ ಸಾವಿಗೆ ಅರಣ್ಯಾಧಿಕಾರಿಗಳು ಕಾರಣಾವಾದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ದ್ರೋಣನ ಕೊನೆಯ ಗಳಿಗೆಯ ದೃಶ್ಯ ಸೆರೆಯಾಗಿದೆ.

    ಹೌದು. ದ್ರೋಣ ಸಾವನ್ನಪ್ಪುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವಿಡಿಯೋದಲ್ಲೇನಿದೆ?:
    ದ್ರೋಣ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೇಲಾಧಿಕಾರಿಗಳು ವೈದ್ಯರನ್ನ ಕರೆಸಲಿಲ್ಲ. ಹೀಗಾಗಿ ಮಾವುತರು ಹಾಗೂ ಕಾವಾಡಿಗರು ದ್ರೋಣನ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೂ ಪರದಾಡಿದ್ದಾರೆ. ದ್ರೋಣನ ಮೈಮೇಲೆ ನೀರು ಹಾಕಿ ಪ್ರಾಣ ಉಳಿಸಲು ಪರದಾಡುತ್ತಿದ್ದಾರೆ. ತನ್ನ ಮೇಲೆ ನೀರು ಬೀಳುತ್ತಿದ್ದಂತೆಯೇ ದ್ರೋಣ ನಿಂತಲ್ಲೇ ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಒಟ್ಟಿನಲ್ಲಿ ಇದೀಗ ದ್ರೋಣ ಸಾಯೋ ವೇಳೆ ವೈದ್ಯರನ್ನ ಕರೆಸದ್ದಕ್ಕೆ ಮಾವುತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದ್ರೋಣ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಮೆರುಗು ನೀಡುತ್ತಿದ್ದನು.

    https://www.youtube.com/watch?v=yYgCJ2rsEic

     

  • ದ್ರೋಣ ಚಿತ್ರೀಕರಣ ವೇಳೆ ಪುಟಾಣಿ ಜೊತೆ ಕಾಲಕಳೆದ ಶಿವಣ್ಣ- ವಿಡಿಯೋ ವೈರಲ್

    ದ್ರೋಣ ಚಿತ್ರೀಕರಣ ವೇಳೆ ಪುಟಾಣಿ ಜೊತೆ ಕಾಲಕಳೆದ ಶಿವಣ್ಣ- ವಿಡಿಯೋ ವೈರಲ್

    ಬೆಂಗಳೂರು: ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ‘ದ್ರೋಣ’ ಸಿನಿಮಾದ ಚಿತ್ರೀಕರಣದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಶಿವಣ್ಣ ಅದೇ ಶಾಲೆಯಲ್ಲಿ ಓದುತ್ತಿರುವ ಪುಟಾಣಿ ಬಾಲಕಿ ಜೊತೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ.

    ಶಿವಣ್ಣ ಶೂಟಿಂಗ್ ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಬಾಲಕಿಯೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಬಾಲಕಿ ಹಾಡು ಸಹ ಹೇಳಿದ್ದು, ಪುಟಾಣಿಯ ಹಾಡಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಬಾಲಕಿಯ ಹೆಸರು ದೀಪ್ತಿಯಾಗಿದ್ದು, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಕಳೆದ ಒಂದು ವಾರದಿಂದ ಈ ಶಾಲಾ ಆವರಣದಲ್ಲಿ ದ್ರೋಣ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಬಾಲಕಿಯ ಸುಮಧುರ ಕಂಠಕ್ಕೆ ಮೆಚ್ಚುಗೆಯನ್ನು ನೀಡಿ ಬಾಲಕಿ ಕಟ್ಟಿದ ರಾಕಿಗೆ ಮನಸೋತಿದ್ದಾರೆ.

    ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ. ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್, ಶಂಕರ ರಾವ್, ವಿಜಯಕಿರಣ್, ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬಿ. ಮಹದೇವ, ಬಿ. ಸಂಗಮೇಶ್ ಹಾಗೂ ಶೇಶು ಚಕ್ರವರ್ತಿ ನಿರ್ಮಿಸುತ್ತಿದ್ದಾರೆ. ಪ್ರಮೋದ್ ಚಕ್ರವರ್ತಿ ಈ ಚಿತ್ರದ ಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದು, ರಾಮ್ ಕ್ರಿಶ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

    https://www.youtube.com/watch?v=qqLSQj-sTv8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಣ್ಣನ `ದ್ರೋಣ’ ಜೂ.22 ರಿಂದ ಪ್ರಾರಂಭ

    ಶಿವಣ್ಣನ `ದ್ರೋಣ’ ಜೂ.22 ರಿಂದ ಪ್ರಾರಂಭ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದ್ರೋಣ ಚಿತ್ರದ ಮುಹೂರ್ತ ಜೂನ್ 22ರಂದು ನಡೆಯಲಿದೆ. ಈಗಾಗಲೇ ಶಿವಣ್ಣ ರುಸ್ತುಂ, ಕವಚ, ದಿ ವಿಲನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ನಟ, ನಿರ್ದೇಶಕ ಪ್ರಮೋದ್ ಚಕ್ರವರ್ತಿ ಈ ಸಿನೆಮಾ ನಿರ್ದೇಶನ ಮಾಡಲಿದ್ದಾರೆ. ಜೂನ್ 22ಕ್ಕೆ ಚಿತ್ರದ ಮುಹೂರ್ತ ನಡೆದು, ಆಗಸ್ಟ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ದ್ರೋಣ ಸಿನೆಮಾದಲ್ಲಿ ಶಿವರಾಜ್ ಕುಮಾರ್ ಶಾಲಾ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೋಡು, ಆನಂದ್ ಮುಂತಾದವರು ಅಭಿನಯಿಸುತ್ತಿದ್ದಾರೆ.

    ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಜೊತೆಯಾಗಿ ‘ದ್ರೋಣ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ಪ್ರಮೋದ್ ಚಕ್ರವರ್ತಿ, ಛಾಯಾಗ್ರಹಣ – ಜೆ.ಎಸ್.ವಾಲಿ, ಸಂಗೀತ – ರಾಮ್‍ಕ್ರಿಶ್, ಸಂಕಲನ – ಬಸವರಾಜ ಅರಸ್, ಕಲೆ – ಮೋಹನ್ ಪಂಡಿತ್, ಸಹ ನಿರ್ದೇಶನ – ಭವಾನಿ ಶಂಕರ್, ಸಾಹಸ – ಡಿಫರೆಂಟ್ ಡ್ಯಾನಿ, ವಿಜಿ, ಸಾಹಿತ್ಯ-ವಿ ಮನೋಹರ್, ಡಾ. ನಾಗೇಂದ್ರ ಪ್ರಸಾದ್, ನಿರ್ವಹಣೆ – ವಜ್ರೇಶ್ವರಿ ಮಲ್ಲಿಕಾರ್ಜುನ ವಹಿಸಿದ್ದಾರೆ.