Tag: ದ್ಯಾನಿಶ್‌ ಅಜಾದ್‌ ಅನ್ಸಾರಿ

  • ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಲಕ್ನೋ: ಮುಸ್ಲಿಂ ಸಮುದಾಯದವರು ಬಿಜೆಪಿ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಅವರನ್ನು ಪ್ರೀತಿಸುತ್ತಾರೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಸಚಿವ ದ್ಯಾನಿಶ್‌ ಅಜಾದ್‌ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

    ಆ ಅಭಿಪ್ರಾಯ (ಸುನ್ನಿ ಮುಸ್ಲಿಮರ) ಬದಲಾಗಿದೆ. ಯೋಗಿ ಸರ್ಕಾರವು ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳ ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಪಡಿತರ, ಮನೆ, ಆಯುಷ್ಮಾನ್ ಕಾರ್ಡ್ ಯೋಜನೆಗಳಿಂದ ಎಲ್ಲ ವರ್ಗದವರಿಗೂ ಲಾಭವಾಗಿದೆ. ಮುಸ್ಲಿಮರೂ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ಬಿಜೆಪಿ, ಯೋಗಿ ಮತ್ತು ಮೋದಿಯನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಹಬೂಬಾ ಮುಫ್ತಿ ಏನೇ ಹೇಳುತ್ತಿದ್ದರೂ ಅದಕ್ಕೆಲ್ಲಾ ಬಿಜೆಪಿಯೇ ಹೊಣೆ: ಸಂಜಯ್ ರಾವತ್

    ಈಚೆಗೆ ನಡೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 10 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯು ಬಿಜೆಪಿಗೆ ಮತ ಹಾಕಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದ ಸಾಮಾನ್ಯರು ನನ್ನನ್ನು ವಿರೋಧಿಸುವುದಿಲ್ಲ. ಬೇರೆ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರುವವರು, ಎಸ್‌ಪಿ ಮತ್ತು ಬಿಎಸ್‌ಪಿ ಮನಸ್ಥಿತಿ ಹೊಂದಿರುವವರು ಮಾತ್ರ ನನ್ನನ್ನು ವಿರೋಧಿಸುತ್ತಾರೆ. ಸಾಮಾನ್ಯ ಮುಸ್ಲಿಮರು ಬಿಜೆಪಿಯ ಕೆಲಸವನ್ನು ಇಷ್ಟಪಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಸಚಿವ ದ್ಯಾನಿಶ್ ಆಜಾದ್ ಅನ್ಸಾರಿ.

    ಬಲ್ಲಿಯಾ ಕ್ಷೇತ್ರದವರಾದ ಅನ್ಸಾರಿ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಸದನಗಳ ಸದಸ್ಯರಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ 52 ಸಚಿವರಲ್ಲಿ ಅವರೂ ಸೇರಿದ್ದಾರೆ.