Tag: ದೋಸ್ತಿ

  • ಚಡ್ಡಿ ದೋಸ್ತ್ ಪ್ರಾಣ ತೆಗೆದ ಸ್ನೇಹಿತ

    ಚಡ್ಡಿ ದೋಸ್ತ್ ಪ್ರಾಣ ತೆಗೆದ ಸ್ನೇಹಿತ

    ಬೆಂಗಳೂರು: ಚಡ್ಡಿ ದೋಸ್ತಿಗಳಿಬ್ಬರ ಬಡಿದಾಟ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

    ಕೊಲೆಯಾದವನನ್ನು ಸದಾನಂದ ಎಂದು ಗುರುತಿಸಲಾಗಿದೆ. ಈತನನ್ನು ಬಾಲ್ಯ ಸ್ನೇಹಿತ ಯೋಗಿಶ್ ಅಲಿಯಾಸ್ ಹಂದಿ ಯೋಗಿ ಕೊಲೆ ಮಾಡಿದ್ದಾನೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.

    ನಿನ್ನೆ ರಾತ್ರಿ ಬಾಲಾಜಿ ಬಾರ್ ಬಳಿ ಸದಾನಂದನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಇತರ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ರಂತೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಶಾಸಕ ಗೋಪಾಲಯ್ಯ ಪರ ಸದಾನಂದ ಗುರ್ತಿಸಿಕೊಂಡು ಪ್ರಚಾರ ಮಾಡಿದ್ದನು. ಈ ಬಗ್ಗೆ ಸದಾನಂದ ಹಾಗೂ ಯೋಗಿಶ್ ಕಿತ್ತಾಡಿಕೊಂಡಿದ್ದರು ಎನ್ನಲಾಗಿದೆ.

    ಇದೇ ವಿಚಾರವಾಗಿ ಕ್ಯಾತೆ ತೆಗೆದು ಕೊಲೆ ಮಾಡಲಾಗಿದೆ. ಇದಲ್ಲದೇ ಹಣಕಾಸಿನ ವಿಚಾರವಾಗಿಯೂ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

    ಸದ್ಯ ಯೋಗಿಯನ್ನ ವಶಕ್ಕೆ ಪಡೆದಿರುವ ಬಸವೇಶ್ವರ ನಗರ ಪೊಲೀಸರು ಕೊಲೆ ಹಿಂದಿನ ಕಾರಣ ಹುಡುಕಾಡುತ್ತಿದ್ದಾರೆ.

  • ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲಾನ್ – 7 ಕಡೆ ಮೋದಿ ಭಾಷಣ

    ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲಾನ್ – 7 ಕಡೆ ಮೋದಿ ಭಾಷಣ

    ಬೆಂಗಳೂರು: ದೋಸ್ತಿ ಸರ್ಕಾರದ ಅಭ್ಯರ್ಥಿಗಳನ್ನು ಸೋಲಿಸಲು ಕರ್ನಾಟಕ ಬಿಜೆಪಿ ಪ್ಲಾನ್ ಮಾಡಿದ್ದು ಪ್ರಧಾನಿ ಮೋದಿ ರಾಜ್ಯದ 7 ಕಡೆ ಪ್ರಚಾರ ಭಾಷಣ ಮಾಡುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ಪ್ರಧಾನಿಯಿಂದ 7 ರ‍್ಯಾಲಿ ನಡೆಸಲು ಬಿಜೆಪಿ ಮುಂದಾಗಿದೆ. ದಕ್ಷಿಣದಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರಿನಲ್ಲಿ ಕಾರ್ಯಕ್ರಮ ಮಾಡಿದರೆ ಉತ್ತರದಲ್ಲಿ ಬೆಳಗಾವಿ, ದಾವಣಗೆರೆ, ರಾಯಚೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.

    ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯಕ್ರಮದ ದಿನಾಂಕ, ಸ್ಥಳ ಅಂತಿಮವಾಗಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‍ಗೆ ನೀಡಿದ ಬಳಿಕ ತುಮಕೂರಿನಿಂದ ಸ್ಪರ್ಧಿಸುತ್ತಿರುವ  ದೇವೇಗೌಡರನ್ನು ಸೋಲಿಸಲು ತುಮಕೂರಿಗೂ ಮೋದಿಯನ್ನು ಕರೆತರಲು ಸಿದ್ಧತೆ ನಡೆದಿದೆ.

    36 ಮಂದಿಯ ಪಟ್ಟಿ ರೆಡಿ : ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಬಿಜೆಪಿ 36 ಜನರ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಯೋಗಿ ಆದಿತ್ಯನಾಥ್, ಮುರಳೀಧರ್ ರಾವ್, ಪುರಂದರೇಶ್ವರಿ, ಕಿರಣ್ ಮಹೇಶ್ವರಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯ ನಾಯಕರು ಸ್ಥಾನ ಪಡೆದಿದ್ದಾರೆ.

     

  • ದೋಸ್ತಿ ಬಗ್ಗೆ ಮಾಸ್ತಿ ಮಾತು!

    ದೋಸ್ತಿ ಬಗ್ಗೆ ಮಾಸ್ತಿ ಮಾತು!

    ಬೆಂಗಳೂರು: ಬೆಳೆದು ದೊಡ್ಡವರಾದಮೇಲೆ ಯಾರು ಏನೇ ಆಗಲಿ, ಆದರೆ ಬಾಲ್ಯವನ್ನು ನೆನಪಿಸಿಕೊಂಡರೂ ಕೆಲವರು ಮಗುವಾಗಿಬಿಡುತ್ತಾರೆ. ಯಾವೂರ ರಾಜನಾಗಲಿ, ಮಂತ್ರಿ, ಮಹೋದಯರೇ ಆದರೂ ಎಲ್ಲರೂ ಬಾಲ್ವನ್ನು ದಾಟಿಯೇ ಬಂದಿಬೇಕು. ‘ಟಗರು’ ಚಿತ್ರದ ನಂತರ ಆ ಸಿನಿಮಾಕ್ಕೆ ಡೈಲಾಗು ಬರೆದಿದ್ದ ಮಂಜು ಮಾಸ್ತಿ ಸ್ಟಾರ್ ರೈಟರ್ ಆಗಿ ಕಂಗೊಳಿಸುತ್ತಿದ್ದಾರೆ. ಇಂತಾ ಮಾಸ್ತಿ ಮಂಜು ತಮ್ಮ ಬಾಲ್ಯದ ಕುರಿತು ಮೆಲುಕು ಹಾಕಿದ್ದಾರೆ. ಇದು ಗಣೇಶ ಹಬ್ಬದ ಸ್ಪೆಷಲ್ಲು. ಒಂದು ಸಲ ನೀವೂ ಓದಿಕೊಳ್ಳಿ; ಇದು ಮಾಸ್ತಿ ಮಾತು!

    ‘ಬಾಲ್ಯ …..ಎಷ್ಟು ಚೆನ್ನಾಗಿತ್ತು, ಮನೆಯಲ್ಲಿ ದೊಡ್ಡವರು, ನೆಂಟರಿಷ್ಟರು ಬಂದಾಗ ಯಾವ ಸ್ಕೂಲು? ಏನ್ ಓದ್ತಾ ಇದೀಯಾ? ನಿನಗೆ ಅಪ್ಪ ಇಷ್ಟಾನೊ ಅಮ್ಮ ಇಷ್ಟಾನೊ? ನಿನ್ನ ಬೆಸ್ಟ್ ಫ್ರೆಂಡ್ ಯಾರು ? ಮುಂದೆ ನೀನೇನಾಗ್ಬೇಕು ಅಂತಿದೀಯಾ ? ಈ ಥರ ನೂರಾರು ಪ್ರಶ್ನೆಗಳು ಅವುಗಳಿಗೆ ನಮ್ಮ ತೊದಲುತ್ತರಗಳು …..ನಮಗೆ ತುಂಬಾ ಜನ ಫ್ರೆಂಡ್ಸ್ ಇರ್ತಿದ್ರು ಅದರಲ್ಲೊಬ್ಬ ಬೆಸ್ಟ್ ಫ್ರೆಂಡ್, ಅವನ ಜೊತೇನೆ ಕೂತ್ಕೋಬೇಕು, ಅವನ ಜೊತೇನೆ ಊಟ ಮಾಡಬೇಕು, ಬರ್ಕೊಬೇಕು, ಹೋಂ ವರ್ಕ್ ಮಾಡ್ಬೇಕು, ಟೀಚರ್ ಎಷ್ಟು ಮಾತಾಡ್ತಿರೋ ನೀವಿಬ್ಬರು? ಅನ್ನೋ ಅಷ್ಟು ಮಾತು, ರಜೆ ಇದ್ದಾಗ ಅವನನ್ನ ಮನೆಗೆ ಕರೀಬೇಕು ನಾವು ಅವರ ಮನೇಗೊಗ್ಬೇಕು, ಆಟ ಆಡಬೇಕು, ಸೈಕಲ್ ಹೊಡೀಬೇಕು, ಕೋಪ ಬಂದಾಗ ‘ಟೂ’ ಬಿಡೊದು ಸರಿಹೋದಾಗ ‘ಸೇ’ ಬಿಡೋದು, ಒಮ್ಮೊಮ್ಮೆ ವಾರಗಟ್ಟಲೆ ತಿಂಗಳುಗಟ್ಟಲೆ ಮಾತು ಬಿಟ್ಟುಬಿಡೋದು ….. ಸ್ಪೋರ್ಟ್ಸ್ ಪೀರಿಯಡ್ ನಲ್ಲಿ ಸ್ಕೂಲ್ ಗ್ರೌಂಡಲ್ಲಿ ನನ್ನನ್ನೊಂದಿಷ್ಟ್ ಹುಡುಗರು ಅವನನ್ನೊಂದಿಷ್ಟು ಹುಡುಗರು ಹಿಡಿದುಕೊಂಡು ‘ಸೇ’ ಬಿಡಿಸುವುದು ಕಾಂಪ್ರಮೈಜ್ ಮಾಡಿಸುವುದು, ಸ್ನೇಹ ಪುನರ್ ನಿರ್ಮಾಣವಾಗೋದು, ಎಲ್ಲಾ ಹಿತವಾದ ನೆನಪುಗಳು …… ಈಗ fb friend requestಗಳು ಬರೋದು ಅವುಗಳನ್ನ ನಾವು accept ಮಾಡೋದು, now u r friends ಅಂತ ನೊಟಿಫಿಕೇಷನ್ ಬರೋದು , ಇವನ್ನೆಲ್ಲ ನೋಡಿ ನಮ್ಮ ಬಾಲ್ಯದ ಸ್ನೇಹ ಮತ್ತು ಸ್ನೇಹಿತರು ನೆನಪಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv